ವಿಷಯದ ವಿವರಗಳಿಗೆ ದಾಟಿರಿ

Archive for

16
ನವೆಂ

ಪ್ರಧಾನಿಯೊಂದಿಗೆ ನಾವು..!

15037212_10154870173830649_2292180280785604817_nನವೆಂಬರ್ 8ನೇ ತಾರೀಖಿನ ರಾತ್ರಿ, ಪ್ರಧಾನಿ ನರೇಂದ್ರ ಮೋದಿಯವರು ಭಾರತದ ರಾಜಕೀಯ ಇತಿಹಾಸದಲ್ಲೇ ಅತ್ಯಂತ ಕಠಿಣ ನಿರ್ಧಾರ ಕೈಗೊಂಡು ಕಪ್ಪು ಹಣದ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ಮಾಡಿರುವುದು ನಿಮಗೆಲ್ಲ ತಿಳಿದಿದೆ.

ಕಪ್ಪು ಹಣದ ವಿರುದ್ಧ ದಾಳಿ ಶುರು ಮಾಡಿರುವ ಪ್ರಧಾನಮಂತ್ರಿಯವರ ವಿರುದ್ಧ ದುಷ್ಟಕೂಟಗಳೆಲ್ಲಾ ಒಂದಾಗುತ್ತಿವೆ. ಇಂತಹ ಸಮಯದಲ್ಲಿ ಪ್ರಧಾನಿಯವರಿಗೆ ನೈತಿಕ ಬೆಂಬಲ ನೀಡುವುದು ಪ್ರಜೆಗಳಾದ ನಮ್ಮೆಲ್ಲರ ಕರ್ತವ್ಯ. ಪ್ರಧಾನಿಗೆ ಬೆಂಬಲ ನೀಡಲು ನಿಲುಮೆ ಗುಂಪಿನಿಂದ ಪತ್ರವೊಂದನ್ನು ಬರೆದಿದ್ದೇವೆ. ಈ ಸಮಯದಲ್ಲಿ ಪ್ರಧಾನಿಯವರಿಗೆ ನಮ್ಮ ಬೆಂಬಲದ ಅಗತ್ಯವಿದೆ ಮತ್ತು ಜವಾಬ್ದಾರಿಯುತ ಭಾರತೀಯರಾಗಿ ಇದು ನಮ್ಮ ಕರ್ತವ್ಯವೂ ಹೌದು.ಇದಕ್ಕೆ ನಿಮ್ಮೆಲ್ಲರ ಬೆಂಬಲವನ್ನು ಬಯಸುತ್ತೇವೆ. Read more »

16
ನವೆಂ

ಸ್ತ್ರೀ ಸ್ವಾತಂತ್ರ್ಯ ಮತ್ತು ವರ್ತಮಾನದ ತಲ್ಲಣಗಳು

– ಶ್ರೀಶೈಲ್ ಮಗದುಮ್ಮ

alone-flowers-girls-hd-desktop-backgroundsಬಹುಷಃ ಹಲವಾರು ಶತಮಾನಗಳಿಂದ ಚರ್ಚಿವಾಗುತ್ತಿರುವ ವಿಷಯಗಳಲ್ಲಿ ಸ್ತ್ರೀ ಸ್ವಾತಂತ್ರ್ಯವೂ ಕೂಡ ಒಂದು. ಈಗ ಹಲವಾರೂ ವರ್ಷಗಳಿಂದ ಆಂತರಿಕ ಸ್ವಾತಂತ್ರ್ಯದಿಂದ ಬಾಹ್ಯ ಸ್ವಾತಂತ್ರ್ಯದ ಬಗ್ಗೆ ಹಲವಾರು ಚರ್ಚೆಗಳು ಶುರುವಾಗಿವೆ. ಅದರಲ್ಲಿ ನನ್ನ ಬಟ್ಟೆ ನನ್ನ ಆಯ್ಕೆ, ನಾವು ಯಾವಾಗ ಬೇಕಾದರೂ ಎಲ್ಲಿಗೆ ಬೇಕಾದರೂ ಹೋಗುತ್ತೇವೆ ಅದನ್ನು ಪ್ರಶ್ನಿಸುವ ಅಧಿಕಾರ ಯಾರಿಗೂ ಇಲ್ಲ ಅನ್ನುವ ಚರ್ಚೆಗಳು. ಇರಲಿ ಯಾರು ಯಾವ ಬಟ್ಟೆಯನ್ನಾದರೂ ಹಾಕಲಿ, ಯಾರು ಎಲ್ಲಿಗಾದರೂ ಹೋಗಲಿ ಅದು ಅವರ ಇಷ್ಟ, ಇದನ್ನು ಪ್ರಶ್ನಿಸುವುದು ಕೂಡ ಆಕ್ಷೇಪಾರ್ಹವಾದದ್ದು. ಆದರೆ ಈ ವಾದವನ್ನು ಇಟ್ಟುಕೊಂಡು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸಮಾಜವನ್ನು ಯಾವ ಕಡೆಗೆ ತಗೆದುಕೊಂಡು ಹೋಗುತ್ತಿದ್ದಾರೆ ಎನ್ನುವ ಕಡೆ ಗಮನಹರಿಸಬೇಕಾಗಿದೆ. Read more »