ವಿಷಯದ ವಿವರಗಳಿಗೆ ದಾಟಿರಿ

Archive for

2
ನವೆಂ

ಭಾರತದಲ್ಲೊಂದು ಸುಂಕದ ಬೇಲಿ

– ನವೀನ್ ನಾಯಕ್ ಕೊಪ್ಪ

ಸಾಮಾನ್ಯವಾಗಿ ಉಪ್ಪಿನ ಕುರಿತು ನಡೆದಿರುವ ಹೋರಾಟ ಎಂದರೆ ನಮಗೆ ನೆನಪಾಗುವುದು ಗಾಂಧಿಯವರ ನೇತೃತ್ವದಲ್ಲಿ ನಡೆದ ದಂಡಿ ಸತ್ಯಾಗ್ರಹ ಮಾತ್ರ. ಈ ಸತ್ಯಾಗ್ರಹವು ಸಬರಮತಿ ಆಶ್ರಮದಿಂದ ದಂಡಿಯವರೆಗೆ ಅಂದರೆ ಸರಿಸುಮಾರು ೨೪೦ ಮೈಲಿಗಳನ್ನು ಇಪ್ಪತೈದು ದಿನಗಳಲ್ಲಿ ಕಾಲ್ನಡಿಗೆ ಮುಖಾಂತರ ನಡೆಸಲಾಗಿತ್ತು. ‘ಉಪ್ಪಿನ ಮೇಲಿನ ಕರ’ ಎಂದು ಕೇಳಿದೊಡನೆ ನಮಗೆ ನೆನಪಾಗುವುದು ಇಷ್ಟೇ.

ಆದರೆ ‘ಭಾರತದಲ್ಲೊಂದು ಸುಂಕದ ಬೇಲಿ’ ಕೃತಿ ಓದುತ್ತಾ ಹೋದಂತೆ ಈ ಉಪ್ಪಿನ ಮೇಲೆ ಹೇರಿದ್ದ ತೆರಿಗೆಯ ಕಾರಣದಿಂದ ಬ್ರಿಟಿಷರು ನಡೆಸುತಿದ್ದ ಬರ್ಬರತೆ ಪ್ರಕಟವಾಗುತ್ತಾ ಹೋಗುತ್ತದೆ. ಉಪ್ಪಿನ ತೆರಿಗೆಗಾಗಿ  ನಡೆಯುತಿದ್ದ ಸುಲಿಗೆಯನ್ನು ತಿಳಿಸುವಂತಹ ಪುಸ್ತಕ ಇದೊಂದೇ ಏನೋ .  ರಾಯ್ ಮ್ಯಾಕ್ಸ್ ಹ್ಯಾಮ್ (ಮೂಲ ಲೇಖಕರು) 1992 ರಲ್ಲಿ ಮೊದಲ ಬಾರಿಗೆ ಪ್ರವಾಸಕ್ಕೆಂದು ಬಂದವರು ಇಲ್ಲಿಯ ಸಂಸ್ಕೃತಿಯನ್ನು ಕಂಡು ಮಾರುಹೋದರು. ಭಾರತದ ಬಗ್ಗೆ ಕುತೂಹಲ ಹೆಚ್ಚಿ ಇನ್ನಷ್ಟು ತಿಳಿಯಲು ಇಲ್ಲಿನ ಇತಿಹಾಸವನ್ನು ಅರಿಯುವ ಪ್ರಯತ್ನದೊಂದಿಗೆ, ಹಲವು ಗ್ರಂಥಾಲಯಗಳಿಗೆ ಭೇಟಿ ನೀಡಿ ಭಾರತದ ಕುರಿತಿದ್ದ ಪುಸ್ತಕಗಳನ್ನೆಲ್ಲಾ ರಾಶಿ ಹಾಕಿ ಅವನ್ನು ಓದತೊಡಗಿದಾಗ ಅವರ ಗಮನ ಸೆಳೆದದ್ದು ೧೮೯೩ ರಲ್ಲಿ ಪ್ರಕಟಗೊಂಡಿದ್ದ, ಭಾರತದಲ್ಲಿ ಮೇಜರ್ ಜನರಲ್ ಆಗಿ ಕಾರ್ಯ ನಿರ್ವಹಿಸುತಿದ್ದ ಸರ್ ಡಬ್ಲ್ಯು ಯು ಹೆಚ್ ಸ್ಲೀಮನ್ ರವರ Rambles and recollections  of an Indian official ಎಂಬ ಕೃತಿಯಲ್ಲಿನ ಒಂದು ಸಣ್ಣ ಟಿಪ್ಪಣಿ. ಆ ಟಿಪ್ಪಣಿ ಹೀಗಿತ್ತು.. ” ಉಪ್ಪಿನ ಮೇಲಿನ ಸುಂಕದ ಸಂಗ್ರಹಣೆಗಾಗಿ ಎರಡು ಸಾವಿರದ ಮುನ್ನೂರು ಮೈಲು, ಅಂದರೆ ಸಿಂಧು ನದಿಯಿಂದ ಮದ್ರಾಸಿನ ಮಹಾನದಿಯವರೆಗೆ ಬೇಲಿ ನಿರ್ಮಿಸಲಾಗಿತ್ತಲ್ಲದೇ ಕಾವಲಿಗಾಗಿ ಹನ್ನೆರಡು ಸಾವಿರ ಜನ ನಿಯುಕ್ತರಾಗಿದ್ದರು!! ಈ ಬೇಲಿ ಬೃಹತ್ ಮರಗಳಿಂದ, ಮುಳ್ಳು ಪೊದೆ, ಬಳ್ಳಿ ಗಳಿಂದ ಈ ಬೃಹತ್ ಬೇಲಿ ನಿರ್ಮಾಣವಾಗಿತ್ತು!!” ಈ ಟಿಪ್ಪಣಿಯ ಬೆನ್ನು ಹಿಡಿದು ಹೊರಟ ಹ್ಯಾಮ್ ಗೆ ಕಂಡದ್ದು ಬ್ರಿಟಿಶರ ಅಮಾನವೀಯತೆ. ಮತ್ತಷ್ಟು ಓದು »