ನೋಟುಗಳ ಅಮಾನ್ಯೀಕರಣ – ಭಾರತೀಯರ ಪ್ರತಿಸ್ಪಂದನೆ
– ವಿನಾಯಕ ಹಂಪಿಹೊಳಿ
ಪಾಶ್ಚಿಮಾತ್ಯರಿಂದ ಆಮದು ಮಾಡಿಕೊಂಡಿರುವ “ಸಿಸ್ಟಂ”ಗಳ ಜೊತೆ ನಾವು ಭಾರತೀಯರು ಮುಂಚಿನಿಂದಲೂ ಅಗತ್ಯವಿದ್ದರೆ ಮಾತ್ರ ಹೊಂದಿಸಿಕೊಳ್ಳುವ ಗುಣವನ್ನು ಹೊಂದಿದ್ದೇವೆ. ಇದು ವಾಸ್ತವವಾಗಿ ನಮ್ಮ ತಪ್ಪಲ್ಲ. ಸಿಸ್ಟಂನ ತಪ್ಪೂ ಅಲ್ಲ. ಭಾರತೀಯ ಸಮಾಜಗಳ ಸಂರಚನೆಗೆ ಪಾಶ್ಚಿಮಾತ್ಯರ “ಸಿಸ್ಟಂ” ಸಂಪೂರ್ಣ ಸಾಂಗತ್ಯವನ್ನು ಹೊಂದಿಲ್ಲ. ಯಾವುದೇ ಸಿಸ್ಟಂನ ಜೊತೆಗೆ ನಾವು ವರ್ತಿಸುವ ರೀತಿಯನ್ನು ಗಮನಿಸಿದರೆ ನಮಗಿದು ಅರ್ಥವಾಗುತ್ತದೆ.
ವಿದ್ಯಾರ್ಥಿ ಜೀವನವನ್ನೇ ತೆಗೆದುಕೊಳ್ಳಿ. ಎಜುಕೇಶನ್ ಸಿಸ್ಟಂ ನಡೆಸುವ ಪರೀಕ್ಷೆಗಳ ಜೊತೆಗೆ ನಾವು ಹೇಗೆ ವರ್ತಿಸಿದ್ದೇವೆ? ನೂರು ಜನ ವಿದ್ಯಾರ್ಥಿಗಳಲ್ಲಿ, ಅಂದಂದಿನ ಪಾಠವನ್ನು ಅಂದಂದಿಗೇ ಓದಿಕೊಂಡು, ಪರೀಕ್ಷೆಯ ಸಮಯದಲ್ಲಿ ಕೇವಲ ಕಣ್ಣಾಡಿಸಿಕೊಂಡಿರುವ ವಿದ್ಯಾರ್ಥಿಗಳು, ಕೇವಲ ಬೆರಳೆಣಿಕೆಯಷ್ಟು ಮಾತ್ರ. ಅದು ಬಿಟ್ಟರೆ ಉಳಿದೆಲ್ಲ ವಿದ್ಯಾರ್ಥಿಗಳು ಪರೀಕ್ಷೆ ಸಮೀಪಿಸುತ್ತಿದ್ದಂತೆ, ಅಭ್ಯಾಸದ ವೇಗವನ್ನು ಹೆಚ್ಚಿಸಿಕೊಳ್ಳುವವರೇ. ಶಿಕ್ಷಕರೂ ಹಾಗೆಯೇ. ಮೊದಲಿನ ಪಾಠಗಳನ್ನು ಎಳೆದೂ ಎಳೆದೂ ಕಲಿಸಿ, ಸೆಮಿಸ್ಟರ್ ಮುಗಿಯಲು ಬಂದಂತೆ, ಸ್ಪೆಷಲ್ ಕ್ಲಾಸುಗಳನ್ನು ಇರಿಸಿ, ಕೊನೆಯ ಪಾಠಗಳನ್ನೆಲ್ಲ ಮುಗಿಸುತ್ತಾರೆ. ಮತ್ತಷ್ಟು ಓದು