ಒಂದು ಪ್ರೇಮ ಪಲ್ಲಕ್ಕಿಯ ಮೇಲೆ…!
– ಗುರುರಾಜ ಕೋಡ್ಕಣಿ. ಯಲ್ಲಾಪುರ
ಸಾಯಂಕಾಲದ ಆರು ಗಂಟೆಗೆ ಇನ್ನೇನು ಆರೇ ನಿಮಿಷಗಳಿವೆ ಎಂಬುದನ್ನು ಸೂಚಿಸುತ್ತಿತ್ತು, ನ್ಯೂಯಾರ್ಕಿನ ಗ್ರಾಂಡ್ ಸೆಂಟ್ರಲ್ ರೈಲ್ವೆ ನಿಲ್ದಾಣದ ಮಾಹಿತಿ ಕೇಂದ್ರದ ಹೊರಗೊಡೆಯ ಮೇಲೆ ತೂಗುತ್ತಿದ್ದ ಬೃಹತ್ ಗಡಿಯಾರ. ಬಿಸಿಲಿಗೆ ಕಪ್ಪಗಾಗಿದ್ದ ತನ್ನ ಮುಖವನ್ನೊಮ್ಮೆ ನಿಧಾನಕ್ಕೆ ಮೇಲಕ್ಕೆತ್ತಿದ್ದ ಆ ಸೈನ್ಯಾಧಿಕಾರಿ ನಿಖರವಾದ ಸಮಯವನ್ನು ಕಂಡುಕೊಳ್ಳಲು ತನ್ನ ಕಣ್ಣುಗಳನ್ನು ಕ್ಷಣಕಾಲ ಕಿರಿದಾಗಿಸಿ ಗಡಿಯಾರವನ್ನು ದಿಟ್ಟಿಸಿದ. ಉಸಿರುಗಟ್ಟಿಸುವಷ್ಟು ಜೋರಾಗಿದ್ದ ಹೃದಯಬಡಿತ ಅವನಿಗಿಂದು. ಕೇವಲ ಆರೇ ಅರು ನಿಮಿಷಗಳಲ್ಲಿ ಆತ ತನ್ನ ಬದುಕಿನ ಬೆಳದಿಂಗಳ ಬಾಲೆಯನ್ನು ಭೇಟಿಯಾಗಲಿದ್ದ. ಕಳೆದ ಹದಿನೆಂಟು ತಿಂಗಳಿನಿಂದ ಬಾಳಿಗೊಂದು ಸ್ಪೂರ್ತಿಯಾಗಿರುವ, ತಾನು ಇದುವರೆಗೂ ನೋಡಿರದಿದ್ದ ತನ್ನ ಪತ್ರ ಪ್ರೇಮಿಯನ್ನು ಆತ ಮೊದಲ ಬಾರಿಗೆ ಸಂಧಿಸಲಿದ್ದ. ನಿಲ್ದಾಣದ ಮುಖ್ಯ ದ್ವಾರದತ್ತಲೇ ತದೇಕಚಿತ್ತದಿಂದ ನೋಡುತ್ತ ನಿಂತಿದ್ದ ಅವನು, ಮಾಹಿತಿಗಾಗಿ ಅಲ್ಲಿದ್ದ ಗುಮಾಸ್ತನ ಸುತ್ತ ಗಜಿಬಿಜಿಯಿಂದ ನಿಂತಿದ್ದ ಜನಜಂಗುಳಿಯಿಂದ ಕೊಂಚ ದೂರ ಸರಿದು ಮಾಹಿತಿ ಕೇಂದ್ರದ ಪಕ್ಕದಲ್ಲಿಯೇ ನಿಂತಿದ್ದ. ಮತ್ತಷ್ಟು ಓದು