ಸದ್ಯದ ಸನ್ನಿವೇಶದಲ್ಲಿ ನಮ್ಮ ಮಾಧ್ಯಮಗಳ ನಡೆ ಸರಿಯಾಗಿದೆಯೇ..?
– ಮು ಅ ಶ್ರೀರಂಗ
ದಿನ ನಿತ್ಯ ಮಾಮೂಲಾಗಿ ಸಾಗುತ್ತಿದ್ದ ಜೀವನಕ್ಕೆ ಸ್ವಲ್ಪ ತಡೆ ಉಂಟಾದಾಗ ಮನಸ್ಸಿಗೆ ಕಸಿವಿಸಿ ಆಗುವುದು ಸಹಜ. ೫೦೦ ಮತ್ತು ೧೦೦೦ ನೋಟುಗಳ ಚಲಾವಣೆಯ ನಿಷೇಧದ ಪರಿಣಾಮದಿಂದಲೂ ಹೀಗಾಗಿದೆ. ಬಸ್ಸು, ರೈಲು, ವಿಮಾನ, ನೀರು, ವಿದ್ಯುತ್ತು ಇವುಗಳ ದರ ಇಷ್ಟನೇ ತಾರೀಖಿನಿಂದ ಹೆಚ್ಚಾಗುತ್ತದೆ ಎಂದು ಮುಂಚಿತವಾಗಿ ಘೋಷಣೆ ಮಾಡಿದಂತೆ ನೋಟಿನ ವಿಷಯದಲ್ಲಿ ಮಾಡಲು ಸಾಧ್ಯವಿಲ್ಲ. ಹಾಗೆ ಮಾಡಿದರೆ ಅದರ ಹಿಂದಿನ ಉದ್ದೇಶವೇ ನಿರರ್ಥಕವಾಗುತ್ತದೆ. ಇದು ಸಾಮಾನ್ಯ ಜ್ಞಾನ. ಆ ಎರಡು ನೋಟುಗಳ ಬದಲಾವಣೆಗಾಗಿ ೫೦ ದಿನಗಳ ಕಾಲಾವಕಾಶವಿದೆ. ಆದರೆ ಹೆಚ್ಚಿನ ಪತ್ರಿಕೆ ಮತ್ತು ಟಿ ವಿ ಸುದ್ದಿ ಮಾಧ್ಯಮಗಳು ನೆಗೆಟಿವ್ ಧೋರಣೆಗೆ ಕೊಟ್ಟಷ್ಟು ಮಹತ್ವವನ್ನು ಧನಾತ್ಮಕ ಸುದ್ದಿಗಳಿಗೆ ಕೊಡದೆ ಇರುವುದು ಸಮಸ್ಯೆಯು ಜಟಿಲವಾಗುತ್ತಿದೆ ಎಂಬ ಭಾವನೆಯನ್ನು ಜನರಲ್ಲಿ ಹರಡುತ್ತಿದೆ. ಮತ್ತಷ್ಟು ಓದು