ಕತೆಯಾದಳು ಹುಡುಗಿ..! ( ನೈಜ ಘಟನೆ )
– ದಿವ್ಯಾಧರ ಶೆಟ್ಟಿ ಕೆರಾಡಿ
ಉಪನ್ಯಾಸಕ
ಆಳ್ವಾಸ್ ಕಾಲೇಜು ಮೂಡುಬಿದಿರೆ
ಅದೊಂದು ದಿನ ವಾಟ್ಸಾಪ್ ಗೆ ಅಪರಿಚಿತ ನಂಬರೊಂದರಿಂದ ಹಾಯ್ ಅಂತ ಮೆಸೇಜ್ ಒಂದು ಬಂದಾಗ ನಾನು ನೋಡಿಯೂ ನೋಡದ ಹಾಗೆ ಸುಮ್ಮನಿದ್ದೆ ಮತ್ತೊಂದೆರಡು ದಿನ ಪದೇ ಪದೇ ಮೆಸೇಜ್ ಬಂದಾಗ ಯಾರೂ ನೀವು ಅಂದಾಗ ನಿಮ್ಮ ಅಭಿಮಾನಿ ಎಂದು ಆ ಕಡೆಯಿಂದ ಉತ್ತರ ಬಂದಾಗ ನಗುವೇ ನನ್ನುತ್ತರವಾಗಿತ್ತು. ಯಾರೋ ಹುಡುಗರು ಬೇಕಂತಾನೆ ಆಟ ಆಡಿಸ್ತಾ ಇದ್ದಾರೆ ಅದ್ಕೊಂಡು ಸುಮ್ನಾದ್ರೆ ಇದು ಮುಗಿಯುವ ತರ ಕಾಣ್ಲಿಲ್ಲ.. ನೇರವಾಗಿ ಆ ನಂಬರ್ ಗೆ ಕಾಲ್ ಮಾಡಿದ್ರೆ ರಿಸೀವ್ ಮಾಡ್ಲಿಲ್ಲ ಇದ್ಯಾರೋ ಬೇಕಂತ ಮಾಡ್ತಿದ್ದಾರೆ ಅನ್ನಿಸಿ ಮಸೇಜ್ ಮಾಡಬೇಡಿ ಅಂತ ಗದರಿಸಿ ಇಟ್ರೆ ಮೊದಲಿಗಿಂತ ಜಾಸ್ತಿ ಮಸೇಜ್ ಬರ್ತಾ ಇತ್ತು..
ಯಾರು ಅಂತ ಹೇಳೊವರ್ಗೂ ಮೆಸೇಜ್ ಮಾಡ್ಬಾರ್ದ್ದು ಅಂತ ಡಿಸೈಡ್ ಮಾಡಿ ಬಿಟ್ಟಿದ್ದೆ. ನಂತರ ಒಂದೆರಡು ದಿನದ ನಂತರ ಅದು ಒಬ್ಬಳು ಹುಡುಗಿ ಅನ್ನೊದು ಕನ್ಪರ್ಮ್ ಆಯ್ತು.. ನನ್ನ ಕೆಲವೊಂದು ಚಿಕ್ಕಪುಟ್ಟ ಬದುಕಿನ ಕುರಿತ ಹನಿಗಳನ್ನು ಅದೆಲ್ಲೊ ಓದಿ ಪದೇ ಪದೇ ಬದುಕಿಗೆ ಭರವಸೆ ತುಂಬುವ ಮಾತಾಡಿ ಅನ್ನುತ್ತಿದ್ದಳು. ಇದ್ಯಾಕಪ್ಪ ಹೀಗೆ ಅಂದ್ಕೊಳ್ಳೊವಾಗ್ಲೆ ಒಂದು ಷಾಕಿಂಗ್ ನ್ಯೂಸ್ ಹೇಳಿದ್ದಳು. ಸರ್ ನಾನು ಹಾರ್ಟ್ ಪೇಷೇಂಟ್ ನನ್ನ ಹಾರ್ಟಲ್ಲಿ ದೊಡ್ಡ ಹೋಲ್ ಆಗಿದೆ. ಆಪರೇಷನ್ ಇದೆ ಸರ್ ಆದರೆ ಬದುಕೋದು ಡೌಟ್ ಸರ್ ನಿಮ್ಮ ಪ್ರೋತ್ಸಾಹ ದ ಮಾತುಗಳ ಮೇಲೆ ನಂಬಿಕೆ ಇಟ್ಟಿದ್ದೇನೆ ಬದುಕುತ್ತೇನಲ್ವ ಸರ್ ಅನ್ನುತ್ತಿದ್ದಳು. ಉತ್ತರಿಸಲಾಗದೆ ನಂಗೆ ಗೊತ್ತಿರುವ ದಾಟಿಯಲ್ಲಿ ಭರವಸೆ ತುಂಬುತ್ತಿದ್ದೆ. ಸರ್ ತುಂಬಾ ಭಯ ಆಗ್ತಿದೆ ನಂಗೆ ಸಾಯೋಕೆ ಇಷ್ಟ ಇಲ್ಲ ಅಂದಾಗಲೆಲ್ಲ ಇಲ್ಲಮ್ಮ ಖಂಡಿತ ಬದುಕ್ತಿ ನೀನು ವರಿ ಮಾಡ್ಬೇಡ ಅಂದ್ರೆ ಮೌನಿಯಾಗುತ್ತಿದ್ದಳು.
ಸರ್ ನಂಗೊಸ್ಕರ ಬದುಕಿನ ಬಗ್ಗೆ ಏನಾದ್ರೂ ಬರೀರಿ ಅಂದಾಗ ನನ್ನ ಮೊದಲ ಲೇಖನ *ಭಾರವಾಗದಿರಲಿ ಬದುಕು* ಬರ್ದಿದ್ದೆ ಓದಿ ತುಂಬಾ ಖುಷಿ ಪಟ್ಟಿದ್ಲು. ಕೆಲವು ದಿನದ ನಂತರ ಸರ್ ಮತ್ತೇನಾದ್ರೂ ಬರೀರಿ ಅಂದಾಗ *ಲೈಫ್ ಅಂದ್ರೆ ಕ್ರಿಕೆಟ್ ಬೀಳಲ್ಲ ವಿಕೆಟ್* ಬರ್ದಿದ್ದೆ ಓದಿ ಸರ್ ನಾನು ನಿಜವಾಗಲ್ಲೂ ಬದುಕ್ತಿನಾ ಅಂತ ಮತ್ತೊಮ್ಮೆ ಕೇಳಿದ್ಲೂ ಆಗ್ಲೂ ಹೂನಮ್ಮ ಖಂಡಿತ ಬದುಕ್ತಿ ಅಂದಿದ್ದೆ.
ನಾನು ಬ್ಯೂಸಿ ಇರ್ತಿನಂತ ಗೊತ್ತಾಗಿ ತುಂಬ ಕಡಿಮೆ ಮಾತಾಡಿಸ್ತಾ ಇದ್ಲು. ಆದರೆ ಅವಳ್ಯಾರು ಹೇಗಿದ್ದಾಳೆ ಗೊತ್ತಾಗಲೂ ಇಲ್ಲ, ಅವಳು ಹೇಳಲೂ ಇಲ್ಲ. ನಿಮ್ಮನ್ನು ಒಮ್ಮೆ ನೋಡಬೇಕು ಅದು ನನ್ನ ಕೊನೆ ಆಸೆ ಅಂದಾಗಲೆಲ್ಲ ಕರುಳು ಹಿಂಡಿದಂತಾಗುತ್ತಿತ್ತು.ಮೊನ್ನೆ ದಿನ ನಾನು ಕಾರ್ಯಕ್ರಮವೊಂದರಲ್ಲಿ ಇದ್ದಾಗ ದೂರದಿಂದಲೆ ನೋಡಿ ಹೋಗಿದ್ಲಂತೆ. ಹೋದವಳು ತುಂಬಾ ಸಂಭ್ರಮದಿಂದ ಮಾತಾಡಿದ್ದಳು. ಯಾಕಮ್ಮ ಮಾತಾಡ್ಸಿಲ್ಲ ಅಂದ್ರೆ ಸರ್ ನಂಗೆ ನೋಡಿನೇ ತುಂಬಾ ಖುಷಿಯಾಯ್ತು ಇನ್ನು ಮಾತಾಡ್ಸಿದ್ರೆ ಏನಾಗ್ತಿದ್ನನೊ ನಂಗೇ ಗೊತ್ತಿಲ್ಲ ಅಂದ್ಲು..(ಇನ್ನೊಂದು ವಿಷಯ ಹೇಳ್ಬೇಕು ಅವಳಿಗೆ ಅಮ್ಮ ಇಲ್ವಂತೆ ಚಿಕ್ಕಂದಿನಲ್ಲೆ ಹೆತ್ತಮ್ಮನ ಕಳ್ಕೊಂಡು ಚಿಕ್ಕಪುಟ್ಟ ತಪ್ಪಿಗೆಲ್ಲ ಹೊಡೆತ ತಿನ್ನುತ್ತಾ ನೋವಿನ ಬದುಕನ್ನೆ ಕಂಡವಳಂತೆ) ಇನ್ನೆರಡು ದಿನ ಬಿಟ್ಟು ಸರ್ ನಾಳೆ ನನ್ನ ಆಪರೇಷನ್ ಅಂದ್ಲು ನಂಗೆ ಅದರ ಹಿಂದಿನ ಸಿರಿಯಸ್ನೆಸ್ ಗೊತ್ತಿಲ್ಲ ಹೌದಾ ಗುಡ್ ಲಕ್ ಆರಾಮಾಗಿ ಬಾ ಅಂದ್ರೆ ಅವಳು ‘ಸರ್, ನೀವು ದೇವರನ್ನು ನಂಬ್ತಿರಾ’ ಅಂದ್ಲು ‘ಹಾ’ ಅಂದೆ. ದೇವರತ್ರ ಕೇಳಿ ಇವಳಿಗ್ಯಾಕೆ ಇಷ್ಟು ಕಷ್ಟ ಕೊಟ್ಟೆ ಅಂತ ನಂಗೆ ಸಾಯೋಕೆ ಮನ್ಸಿಲ್ಲ ಸರ್ ದಯವಿಟ್ಟು ನಿಮ್ಮ ದೇವರಿಗೆ ಹೇಳಿ ಅಂದಾಗ ಕಣ್ಣೀರು ಬಿಟ್ಟು ಬೇರೇನು ಉತ್ತರ ಇಲ್ಲ ನನ್ನ ಬಳಿ.
ಇನ್ನೊಮ್ಮೆ ಸರ್ ನಂಬಿಕೆ ನಂಬಿಕೆ ಅಂತಿರಲ್ಲ ನಾನು ಬದುಕ್ತಿನಿ ಅಂತ ನಂಬ್ತಿರಾ ಅಂದಾಗ ಹುನಮ್ಮಾ ಇದೆ ಅಂದ್ರೆ ನಂಗಿಲ್ಲ ಸರ್ ಬಟ್ ನಿಮ್ಮನ್ನೆಲ್ಲ ತುಂಬಾ ಮಿಸ್ ಮಾಡಿಕೊಳ್ತೇನೆ ಅಂತ ಬೇಜಾರಾಗ್ತಿದೆ ಅಂದ್ಲು. ಮರುದಿನ ಅವಳ ಆಪರೇಷನ್ ಪೋಸ್ಟ್ ಪೋನ್ ಆಯ್ತು ಅಂದಾಗ ಯಾಕೆ ಅಂತ ಕೇಳ್ದೆ ಪಾಪ ಅವಳೇ ಏನೋ ಕಾರಣಹೇಳಿ ಮುಂದುಡಿದ್ಲು ಅಂತ ಅವಳ ತಂಗಿ ಹೇಳಿದ್ಲು. ಯಾಕಂತ ಕೇಳಿದ್ರೆ ನಿಮ್ಮಜೊತೆ ಇನ್ನೊಂದಿನ ಮಾತಾಡೋ ಆಸೆ ಸರ್ ಅಂದ್ಲು.. ಹೃದಯ ಒಂದು ಕ್ಷಣ ಕಾಣದ ಆ ಮಗುವಿನಂತ ಹುಡುಗಿಯ ಬಗ್ಗೆ ಕಂಬನಿ ಮಿಡಿದಿತ್ತು. ಆಮೇಲೆರಡು ದಿನ ನಾನು ಬ್ಯೂಸಿಯಾದೆ ನಿನ್ನೆದಿನ ನನ್ನ ಸ್ನೇಹಿತನ ಮದುವೆಯಲ್ಲಿ ಸ್ನೇಹಿತರ ಜೊತೆ ಖುಷಿಯಿಂದ ಕಾಲ ಕಳೆದು ರಾತ್ರಿ ಬೆಂಗಳೂರಿನಿಂದ ಬಂದ ಸ್ನೇಹಿತರನ್ನು ಕಳುಹಿಸಿ ಮನೆಗೆ ಬಂದಾಗ ಅವಳ ನಂಬರಿಂದ ಒಂದು ಮೇಸೇಜ್ ಬಂದಿತ್ತು. ಅವಳ ತಂಗಿ ಮೇಸೇಜ್ ಮಾಡಿದ್ಲು.
ಸರ್ ಅಕ್ಕ ಹೋಗ್ಬಿಟ್ಲೂ…
ಒಂದು ಕ್ಷಣ ತಲ್ಲಣಿಸಿ ಹೋದೆ ನಂಬೊಕೆ ಆಗ್ಲಿಲ್ಲ ಸಾವು ಅವಳಿಗಿಷ್ಟು ಸಮೀಪ ಇದೆ ಅಂತ ಗೊತ್ತೆ ಆಗಲಿಲ್ಲ. ತಂಗಿ ಅಳ್ತಾ ಮಾತಾಡ್ತಾ ಇದ್ಲು ಕೊನೆಯವರೆಗೂ ನಿಮ್ಮ ಬಗ್ಗೆ ಹೇಳ್ತಿದ್ಲು ಸರ್. ಸರ್ ನಂಬಿಕೆನ ಉಳ್ಸ್ಕೊತಿನಿ ಬದುಕಿ ಬರ್ತಿನಿ ಅಂತ ಇದ್ಲು ಆದರೆ ಆಗ್ಲೆ ಇಲ್ಲ ಸರ್ ನಿಮ್ಮನ್ನು ತುಂಬಾ ನೆನಪಿಸಿಕೊಳ್ತಾನೇ ಹೊಗ್ಬಿಟ್ಲು ಸರ್ ಅಂದಾಗ ಏನು ಉತ್ತರ ಕೊಡಲಾಗದೆ ಕಂಗಾಲಾಗಿದ್ದೆ. ಸರ್ ನಿಮಗೊಂದು ಪತ್ರ ಬರೆದಿದ್ದಾಳೆ ಸರ್ ಆದಷ್ಟು ಬೇಗ ಕಳಸ್ತಿನಿ ಅಂದು ಮತ್ತೇನೊ ಹೇಳ್ತಿದ್ಲು..ಮುಂದೇನು ಹೇಳಿದ್ಲೊ ಗೊತ್ತಿಲ್ಲ ಕೈಯಲ್ಲಿರುವ ಮೊಬೈಲ್ ಕಣ್ಣೀರ ಜೊತೆ ಜಾರಿ ಹೋಗಿತ್ತು. ಬದುಕಿ ಬರ್ತೇನಂತ ಹೋದ ಮಗುವಿನಂತ ಹುಡುಗಿ ಬೂದಿಯಾಗಿ ಹೋದ ಸುದ್ದಿ ಬಂದಿದೆ..
ಮನಸ್ಸು ವಿಚಲಿತವಾಗಿದೆ ದೇವರ ಮೇಲಿನ ನಂಬಿಕೆ ಮತ್ತಷ್ಟು ಕುಸಿದಿದೆ. ನಂಗೆ ಗೊತ್ತಿದ್ದ ಹಾಗೆ ನಾನು ಕಣ್ಣೀರಾಗಿದ್ದು ಎರಡು ಬಾರಿ ಮಾತ್ರ ಒಮ್ಮೆ ನನ್ನಣ್ಣ ದೂರಾದಾಗ ಇನ್ನೊಮ್ಮೆ ನನ್ನ ಸ್ನೇಹಿತ ಅಪಘಾತ ದಲ್ಲಿ ದೂರಾದಾಗ ಇದೀಗ ಯಾರೂ ಅಂತ ಗೊತ್ತಿಲ್ಲದ ಅಪರಿಚಿತ ತಂಗಿ ಮಗುವಿನಂತ ಹುಡುಗಿ ಮರೆಯಾದಾಗ..
ಕಾಲ ಎಷ್ಟೊಂದು ಕ್ರೂರಿ, ನಿರ್ದಯಿ ಅಲ್ವಾ…
ಮನಮುಟ್ಟುವ ಘಟನೆ
ಆ ಜೀವಕ್ಕೆ ಸ್ವಲ್ಪ ದಿನವಾದರೂ ಆಸರೆ ನೀಡಿದ ಧನ್ಯತೆಯಷ್ಟೇ ನಿಮ್ಮದು.
ಆ ದೇವರು ಏನೇ ಕಷ್ಟ ಕೊಡಲಿ,ಅಸಹಾಯಕತೆಯನ್ನು ಮಾತ್ರ ಕೊಡಬಾರದು.
ಪತ್ರವನ್ನೂ,ಆದರೆ,ಹಂಚಿಕೊಳ್ಳಿ. ಆಕೆಗೆ ಸಾಯುಜ್ಯ ದೊರೆಯಲಿ.
ಮನುಷ್ಯ ಯಾವುದ್ಯಾವುದೋ ರೀತಿ ಖುಷಿಕಾಣಲು ಇಷ್ಟ ಪಡುತ್ತಾನೆ. ಆ ಹುಡುಗಿಯ ಬದುಕಿನಲ್ಲಿ ಚೈತನ್ಯ ಕಂಡುಕೊಳ್ಳಲು ಯತ್ನಿಸಿದರು, ಬದುಕಿನ ಕ್ರಿಕೆಟ್ ನ ಥರ್ಡ್ ಅಂಪಾಯರ್ ವಿಧಿ ಆಕೆಗೆ ಜೀವದಾನ ನೀಡಲೇಯಿಲ್ಲ.
This is da first article made me to cry… Still if I remembere last wording of that girl put me to sad….. Realizing power words and feelings
ಮನಸ್ಸು ಮುಟ್ಟಿದ ಘಟನೆ. ಆ ಹುಡಗಿಯ
ಆತ್ಮಕ್ಕೆ ಶಾಂತಿಸಿಗಲಿ….