ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 24, 2016

37

ದೇವನೂರು ಮಹಾದೇವ ಅವರಿಗೊಂದು ಪ್ರೀತಿಪೂರ್ವಕ ಪತ್ರ

‍ನಿಲುಮೆ ಮೂಲಕ

– ಪ್ರವೀಣ್ ಕುಮಾರ್, ಮಾವಿನಕಾಡು

sulsuddiಕನ್ನಡ ನಾಡಿನ ಸಾಕ್ಷಿಪ್ರಜ್ಞೆ ಎಂದೇ ಕರೆಯಲ್ಪಡುವ ಪ್ರೀತಿಯ ದೇವನೂರು ಮಹಾದೇವ ಅವರಿಗೆ ನಮಸ್ಕಾರಗಳು.

ಕನ್ನಡದ ಪ್ರಖ್ಯಾತ ಸಾಹಿತಿಗಳಲ್ಲಿ ಒಬ್ಬರಾದ ತಾವು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸ್ಥಾಪಕರಲ್ಲಿ ಒಬ್ಬರೂ ಹೌದು. ಆದರೆ ನಿಮ್ಮಲ್ಲಿ ಎಳ್ಳಷ್ಟೂ ಜಂಭವಿಲ್ಲ, ಅಹಂಕಾರವಿಲ್ಲ ಮತ್ತು ದೊಡ್ಡ ದೊಡ್ಡ ಸಾಹಿತಿಗಳು ತೋರುವ ಶೋಕಿಯಿಲ್ಲ. ಸರಳತೆಯೇ ನಿಮ್ಮ ಗುರುತು ಪತ್ರ ಎಂದರೂ ತಪ್ಪಾಗದು.

ಎಲ್ಲಕ್ಕಿಂತಲೂ ಮುಖ್ಯವಾದದ್ದೆಂದರೆ ಜಾತಿ ವ್ಯವಸ್ಥೆಯ ಬಗ್ಗೆ ನಿಮಗಿರುವ ಆಕ್ರೋಶ. ತಾವು ಎಲ್ಲೇ ಹೋಗಲೀ, ಎಲ್ಲೇ ಭಾಷಣ ಮಾಡಲಿ ಜಾತಿ ವ್ಯವಸ್ಥೆಯ ವಿರುದ್ಧ ಒಂದಾದರೂ ಆಕ್ರೋಶದ ಮಾತನ್ನು ಆಡದೇ ಹೊರಡುವವರಲ್ಲ. ನಿಮ್ಮ ಇದೇ ಗುಣ ಕರುನಾಡಿನ ಪ್ರಜ್ಞಾವಂತ ಸಮುದಾಯದ ಮನ ಗೆದ್ದಿರುವುದು ಎಂದರೆ ಅದು ಅತಿಶಯೋಕ್ತಿಯೇನೂ ಅಲ್ಲ. ಬೆಂಗಳೂರಿನ ಹತ್ತಿರ ನೂರಾರು ಎಕರೆಗಳಲ್ಲಿ ತಲೆ ಎತ್ತುತ್ತಿರುವ ‘ಬ್ರಾಹ್ಮಣ ಮತ್ತು ಲಿಂಗಾಯತ ಟೌನ್‌ಷಿಪ್‌ ಗಳಿಗೆ ಜೀವಾಪಾಯ ಆಗದಂತೆ ಬಾಂಬ್‌ ಹಾಕ­ಬೇಕಾಗಿದೆ’ ಎಂದು ನೀವು ರಾಷ್ಟ್ರೀಯ ವಿಚಾರ ಸಂಕಿರಣವೊಂದರಲ್ಲಿ ಆಡಿದ ಮಾತು ನಮಗಿನ್ನೂ ನೆನಪಿದೆ. ಜಾತಿ, ವರ್ಗ, ಧರ್ಮಗಳನ್ನು ದೇವರೇ ಸೃಷ್ಟಿಸಿದ್ದರೂ ಸರ್ವೋದಯಕ್ಕಾಗಿ ನಾವೇ ಅದನ್ನು ಧ್ವಂಸಗೊಳಿಸಬೇಕು ಎನ್ನುವ ಕುವೆಂಪು ಮಾತನ್ನು ಅನುಕರಿಸೋಣವೆಂದು ತಾವು ಕಳೆದ ವರ್ಷ ಮಂಗಳೂರಿನಲ್ಲಿ ನಡೆದ ಜನ ನುಡಿ ಕಾರ್ಯಕ್ರಮದಲ್ಲಿ ಕರೆ ಕೊಟ್ಟಿದ್ದು ಇನ್ನೂ ನಮ್ಮ ಕಣ್ಣಿಗೆ ಕಟ್ಟಿದಂತಿದೆ. ‘ಭಾರತ ಗಾಯಗೊಂಡು ಬಿದ್ದಿದೆ. ಅದರ ಗಾಯ ಅದಕ್ಕೆ ಗಾಯ ಅನಿಸುತ್ತಿಲ್ಲ. ಅಸ್ಪೃಶ್ಯತೆ ಜಾತಿ, ಮತೀಯತೆಯ ಗಾಯ ನಂಜಾಗಿ ಮಿದುಳಿಗೇರಿ ಭಾರತ ಹುಚ್ಚಾಗಿದೆ’ ಎಂದು ಜಾತಿ ವ್ಯವಸ್ಥೆಯ ವಿರುದ್ಧ ಸಿಡಿದು ಬಿದ್ದವರು ತಾವು.

ಹೌದು,ನಿಮ್ಮ ಮಾತೇ ಹಾಗೆ. ಬಹಳಾ ಖಾರ. ಆದರೆ ಆ ಮಾತುಗಳಲ್ಲಿ ಸಾಮಾಜಿಕ ಕಳಕಳಿ ತುಂಬಿ ತುಳುಕುತ್ತಿರುತ್ತದೆ. ದಲಿತ ಬಂಡಾಯ ಸಾಹಿತ್ಯದ ಪ್ರಮುಖ ಬರಹಗಾರರಲ್ಲಿ ತಾವೂ ಒಬ್ಬರು. ತಮ್ಮ ಅಪಾರ ಜೀವನಾನುಭವದೊಂದಿಗೆ ಬರೆದ ತಾವು ತಮ್ಮ ಸಾಹಿತ್ಯ ಕೃತಿಗಳಲ್ಲಿ ದಲಿತರ ಬದುಕಿನ ಸಮರ್ಥವಾದ ಅನಾವರಣ ಮಾಡಿರುತ್ತೀರಿ. ಆದ್ದರಿಂದ ನಿಮ್ಮ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಂಡು ಈ ಪತ್ರವನ್ನು ಬರೆಯುತ್ತಿದ್ದೇನೆ.

ತಮಗೇ ತಿಳಿದಂತೆ 1935ರಲ್ಲಿ ಕೇವಲ 57 ಜಾತಿಗಳಾಗಿದ್ದ ಪರಿಶಿಷ್ಟರ ಜಾತಿ ಪಟ್ಟಿಯು ಪ್ರಸ್ತುತ 101 ಜಾತಿಗಳಾಗಿವೆ! ಎಡಗೈ, ಬಲಗೈ, ಸ್ಪರ್ಶ್ಯ… ಎಂದು ಹಲವು ಪಂಗಡಗಳಾಗಿ ಹರಿದು ಹಂಚಿ ಹೋಗಿವೆ!! ಹೀಗೆ ತಮ್ಮ ತಮ್ಮೊಳಗೇ ಪ್ರತ್ಯೇಕ ಜಾತಿಗಳು ಸೃಷ್ಟಿಯಾಗಿರುವುದು ವೇದಕಾಲದಲ್ಲಾಗಲೀ, ಮನುಸ್ಮೃತಿಯ ಆಡಳಿತದಲ್ಲಾಗಲೀ ಅಲ್ಲ. ನಮ್ಮ ಹೆಮ್ಮೆಯ ಸಂವಿಧಾನದ ನೆರಳಿನಡಿಯಲ್ಲೇ ಪರಿಶಿಷ್ಟರಲ್ಲಿನ ಜಾತಿಗಳ ಸಂಖ್ಯೆ ಏರುತ್ತಿದೆ ಎನ್ನುವುದು ನಾವು ನೀವೆಲ್ಲರೂ ನಂಬಲೇಬೇಕಾದ ಸತ್ಯ. ಇದು ಹೀಗೆಯೇ ಮುಂದುವರಿದರೆ ಇನ್ನು ಕೆಲವೇ ವರ್ಷಗಳಲ್ಲಿ ಪಟ್ಟಿಯಲ್ಲಿರುವ ಜಾತಿಗಳ ಸಂಖ್ಯೆ 200 ತಲುಪಲಿದೆ. ಇದರ ಪರಿಣಾಮವೇನೋ ಎನ್ನುವಂತೆ ಪರಿಶಿಷ್ಟರಲ್ಲೂ ಸಹಾ ಮೇಲ್ವರ್ಗ, ಕೆಳವರ್ಗ ಎನ್ನುವ ಬೃಹತ್ ಅಂತರವೊಂದು ಸೃಷ್ಠಿಯಾಗಿದೆ. ಪರಿಶಿಷ್ಟರಿಗೆ ನೀಡಲಾದ ಮೀಸಲಾತಿಯನ್ನು ಕೆಲವೇ ಜಾತಿಗಳು ತಮ್ಮ ವರ್ಚಸ್ಸಿನಿಂದ ಕಬಳಿಸುತ್ತಿವೆ ಎನ್ನುವ ದೂರು ವ್ಯಾಪಕವಾಗಿ ಕೇಳಿಬರುತ್ತಿದೆ. ಕೆಲವೇ ಕೆಲವು ಬಲಾಢ್ಯ ಜಾತಿಗಳು ಮೀಸಲಾತಿಯ ಪ್ರಯೋಜನ ಪಡೆಯುತ್ತಾ ವಿದ್ಯೆ, ಉದ್ಯೋಗ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಮೆರೆಯುತ್ತಿದ್ದರೆ ಇನ್ನುಳಿದ ದುರ್ಬಲ ಜಾತಿಯ ಪರಿಶಿಷ್ಟರು ಶತ ಶತಮಾನಗಳ ಹಿಂದೆ ಹೇಗಿದ್ದರೋ ಹಾಗೆಯೇ ಎಲ್ಲದರಿಂದ ವಂಚಿತರಾಗಿ ಜೀವನ ಸಾಗಿಸುತ್ತಿದ್ದಾರೆ ಎನ್ನುವುದನ್ನು ಇಂದಿಗೂ ಅವರುಗಳಿರುವ ಸ್ಥಿತಿಯೇ ಸಾರಿ ಹೇಳುತ್ತಿದೆ.

ಈ ನಡುವೆ ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸಿ ಒಂದಷ್ಟು ವಂಚಿತ ಸಮುದಾಯದವರು ಹೋರಾಟ ತೀವ್ರಗೊಳಿಸಿದ್ದರೆ ವರದಿ ಜಾರಿ ಮಾಡದಂತೆ ಪ್ರಬಲ ಜಾತಿಯ ಮುಖಂಡರು ಸರಕಾರದ ಮೇಲೆ ಒತ್ತಡ ತರುತ್ತಿದ್ದಾರೆ. ಇದನ್ನೆಲ್ಲಾ ಗಮನಿಸಿದರೆ ಒಳ ಮೀಸಲಾತಿಯ ಬಡಿದಾಟದಲ್ಲಿ ಪರಿಶಿಷ್ಟರಲ್ಲೇ ಇನ್ನಷ್ಟು ಒಡಕುಂಟಾಗುವುದಂತೂ ಖಂಡಿತ ಎಂದು ಜನಸಾಮಾನ್ಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಕೆಲವು ಹೋರಾಟಗಾರರು ಮತ್ತು ಸಾಹಿತಿಗಳು ನಮ್ಮ ಕಣ್ಣಿಗೆ ಕಾಣಿಸದ ಮನುಸ್ಮೃತಿಯ ಗುಮ್ಮ ತೋರಿಸುತ್ತಾ ನಮ್ಮ ಸಮುದಾಯದ ಜನರ ಹಸಿದ ಹೊಟ್ಟೆಯೊಳಗೆ ಆಕ್ರೋಶ ತುಂಬಿಸುತ್ತಿದ್ದಾರೆಯೇ ಹೊರತೂ ನಮ್ಮ ಹೊಟ್ಟೆಗೆ ಅನ್ನ ನೀಡಲು ಯಾರೂ ಪ್ರಯತ್ನಿಸುತ್ತಿಲ್ಲ ಎನ್ನುವ ಅಭಿಪ್ರಾಯ ಕೂಡಾ ಶೋಷಿತರಿಂದಲೇ ಕೇಳಿಬರುತ್ತಿದೆ.

ಇದಕ್ಕೆಲ್ಲಾ ಒಂದೇ ಪರಿಹಾರವೆಂದರೆ ಪರಿಶಿಷ್ಟರಲ್ಲಿನ 101 ಜಾತಿಗಳನ್ನೂ ಒಂದುಗೂಡಿಸಿ ಎಲ್ಲರನ್ನೂ ಒಂದೇ ಜಾತಿಯನ್ನಾಗಿ ಪರಿಗಣಿಸುವಂತೆ ಸರ್ಕಾರವನ್ನು ಒತ್ತಾಯಿಸುವುದು. ಅಂದ ಹಾಗೇ ಈ ಜಾತಿಗಳೆಲ್ಲಾ ಆರ್ಥಿಕ, ಸಾಮಾಜಿಕ, ರಾಜಕೀಯ ಮತ್ತು ಸ್ಥಳೀಯ ಕಾರಣದಿಂದ ಹುಟ್ಟಿಕೊಂಡವುಗಳೇ ಹೊರತೂ ವೇದಕಾಲದಿಂದಲೂ ಬಂದವುಗಳಲ್ಲ. ಹಾಗೊಂದು ವೇಳೆ ಹಿಂದಿನಿಂದಲೂ ಬಂದಿದ್ದರೂ ಕೂಡಾ ಜಾತಿ, ಉಪಜಾತಿಗಳೆಂಬ ಪುರೋಹಿತಶಾಹೀ ಹುನ್ನಾರಗಳನ್ನೆಲ್ಲಾ ಪುಡಿಗಟ್ಟಿ ಎಲ್ಲರನ್ನೂ ಒಂದುಗೂಡಿಸಲು ಇದೇ ಸರಿಯಾದ ಸಮಯ. ಈ ಮಹತ್ಕಾರ್ಯವನ್ನು ಸಾಕಾರಗೊಳಿಸಲು ತಾವೇ ಸೂಕ್ತ ವ್ಯಕ್ತಿ ಮತ್ತು ತಮ್ಮಿಂದ ಮಾತ್ರ ಇದು ಸಾಧ್ಯ ಎನ್ನುವುದು ನಮ್ಮೆಲ್ಲರ ನಂಬಿಕೆ ಕೂಡಾ ಹೌದು.

ಈ ಒಂದುಗೂಡುವಿಕೆಯನ್ನು ಸಾಕಾರಗೊಳಿಸಲು ಇದೇ ಸರಿಯಾದ ಸಂದರ್ಭ. ಏಕೆಂದರೆ ರಾಜ್ಯದಲ್ಲಿ ತಮ್ಮನ್ನು ಬಹುವಾಗಿ ಗೌರವಿಸುವ ಸಮಾಜವಾದೀ ಚಿಂತನೆಯುಳ್ಳ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರ ಸರ್ಕಾರವಿದೆ. ಅತ್ಯಂತ ಕ್ರಿಯಾಶೀಲ ಹಾಗೂ ದಲಿತ ಸಮುದಾಯದವರೇ ಆದ ಸಮಾಜ ಕಲ್ಯಾಣ ಸಚಿವ ಶ್ರೀ ಆಂಜನೇಯರವರಿದ್ದಾರೆ. ಅಷ್ಟೇ ಅಲ್ಲದೇ ಆಡಳಿತ ಪಕ್ಷದ ಅಧ್ಯಕ್ಷರೂ ಆಗಿರುವ ರಾಜ್ಯದ ಗೃಹ ಮಂತ್ರಿಗಳು ಕೂಡಾ ಶೋಷಿತರೇ ಆಗಿದ್ದಾರೆ. ಆದ್ದರಿಂದ ಪರಿಶಿಷ್ಟರಲ್ಲಿನ 101 ಜಾತಿಗಳನ್ನೂ ಒಂದುಗೂಡಿಸಿ “ಪರಿಶಿಷ್ಟರೆಲ್ಲರೂ ಒಂದೇ ಜಾತಿ. ನಮ್ಮಲ್ಲಿ ಎಡ-ಬಲ ಎನ್ನುವುದಿಲ್ಲ, ಸ್ಪರ್ಶ್ಯ- ಇತರೆ ಎನ್ನುವುದಿಲ್ಲ. ಮಾದಿಗ-ಹೊಲೆಯ ಎನ್ನುವುದಿಲ್ಲ” ಎಂದು ಘೋಷಿಸಿಕೊಳ್ಳಲು ಇದಕ್ಕಿಂತಾ ಸುಸಂದರ್ಭ ಇನ್ನೊಂದಿಲ್ಲ.

ಒಂದು ವೇಳೆ ಈ ಅವಕಾಶವನ್ನು ತಪ್ಪಿಸಿಕೊಂಡರೆ ಮುಂದೆ ರಾಜ್ಯದಲ್ಲಿ ಇದೇ ಜಾತ್ಯತೀತ ಪಕ್ಷ ಅಧಿಕಾರಕ್ಕೆ ಬರುತ್ತದೆ ಎನ್ನುವ ನಂಬಿಕೆಯನ್ನೇನೂ ಇಟ್ಟುಕೊಳ್ಳುವಂತಿಲ್ಲ. ಏಕೆಂದರೆ ದೇಶದಾದ್ಯಂತ ಕಾಂಗ್ರೆಸ್ ಎನ್ನುವ ಜಾತ್ಯತೀತ ಪಕ್ಷ ತನ್ನ ನೆಲೆಯನ್ನು ಕಳೆದುಕೊಳ್ಳುತ್ತಿದೆ. ಅಲ್ಲದೇ ಅನನುಭವಿಯೊಬ್ಬನ ಕೈಗೆ ಸಿಕ್ಕಿ ಆ ಪಕ್ಷ ಇತ್ತೀಚಿನ ದಿನಗಳಲ್ಲಿ ಇನ್ನಷ್ಟು ಸಂಕಷ್ಟಗಳಿಗೆ ತುತ್ತಾಗುತ್ತಿರುವುದು ತಮಗೂ ತಿಳಿದಿರುವ ವಿಷಯವೇ ಆಗಿದೆ. ಹಾಗೊಂದು ವೇಳೆ ಇದೇ ಪಕ್ಷ ಗೆದ್ದರೂ ಕೂಡಾ ಮುಂದೆ ಬರಬಹುದಾದ ಮುಖ್ಯಮಂತ್ರಿಗಳಾಗಲೀ, ಇತರ ಸಚಿವರಾಗಲೀ ಈಗಿನವರಷ್ಟೇ ಸಾಮಾಜಿಕ ಕಳಕಳಿ ಹೊಂದಿರುತ್ತಾರೆಂದು ನಂಬಲಾಗದು. ಒಂದೊಮ್ಮೆ ಮನುವಾದೀ ಪಕ್ಷಗಳು ಅಧಿಕಾರದ ಗದ್ದುಗೆ ಹಿಡಿದದ್ದೇ ಆದರೆ ಏನಾಗಬಹುದು ಎನ್ನುವುದನ್ನು ಸ್ವತಃ ಪ್ರಗತಿಪರರಾದ ತಮಗೆ ಸಾಮಾನ್ಯರಲ್ಲಿ ಸಾಮಾನ್ಯರಾದ ನಾವು ವಿವರಿಸಬೇಕಾದ ಅಗತ್ಯವಿಲ್ಲ.

ಆದ್ದರಿಂದ ಜಾತೀಯತೆಯ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ತಾವು ಇದೇ ಸುಸಂದರ್ಭವನ್ನು ಬಳಸಿಕೊಂಡು ಪರಿಶಿಷ್ಟರಲ್ಲಿನ ಅಷ್ಟೂ ಜಾತಿಗಳನ್ನು ಒಂದುಗೂಡಿಸಿ ಸರ್ಕಾರದ ಎಲ್ಲಾ ಅಧಿಕೃತ ದಾಖಲೆಗಳಲ್ಲೂ ಅವರೆಲ್ಲರನ್ನೂ ಒಂದೇ ಜಾತಿಯೆಂದು ಉಲ್ಲೇಖವಾಗುವಂತೆ ನೋಡಿಕೊಂಡು ಇತ್ತೀಚಿನ ಜಾತಿ ಗಣತಿಯ ಅಂಕಿ ಅಂಶಗಳ ಪ್ರಕಾರ ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಿರುವ ಪರಿಶಿಷ್ಟ ಸಮುದಾಯದೊಳಗಿನ ಎಲ್ಲರನ್ನೂ ಸಮಾನರನ್ನಾಗಿಸುವ ಮೂಲಕ ಮೀಸಲಾತಿ-ಒಳಮೀಸಲಾತಿ ಎನ್ನುವ ಹೋರಾಟಗಳಿಗೆ ಮತ್ತು ತಮ್ಮ ತಮ್ಮಲ್ಲಿಯೇ ನಡೆಯುವ ವರ್ಗ ಸಂಘರ್ಷಕ್ಕೆ ಶಾಶ್ವತವಾಗಿ ತೆರೆ ಎಳೆಯಬೇಕೆಂದು ತಮ್ಮಲ್ಲಿ ಕೋರುತ್ತಿದ್ದೇನೆ.

ಹಾಗೊಂದು ವೇಳೆ ತಮ್ಮ ನಾಯಕತ್ವದಲ್ಲಿ ಪರಿಶಿಷ್ಟರೆಲ್ಲರೂ ಸಮಾನರಾದರೆ ಮುಂದೆ ಇತರ ಮುಂದುವರಿದ ಜಾತಿಗಳ ಹಿರಿಯರೂ ತಮ್ಮ ದಾರಿಯನ್ನೇ ಅನುಸರಿಸಿ ತಮ್ಮ ತಮ್ಮ ಜಾತಿಗಳಲ್ಲಿನ ಒಳಪಂಗಡಗಳನ್ನು ಒಂದಾಗಿಸಲಿದ್ದಾರೆ. ಅಂತಿಮವಾಗಿ ಇಡೀ ದೇಶ ಜಾತಿ ಧರ್ಮದ ಕಳಂಕದಿಂದ ಮುಕ್ತವಾಗಲಿದೆ. ಹಾಗಾದಾಗ ಆ ಮಹತ್ಕಾರ್ಯಕ್ಕೆ ಮುನ್ನುಡಿ ಬರೆದ ತಮ್ಮನ್ನು ಈ ದೇಶ ದೇವರಂತೆ ಪೂಜಿಸಲಿದೆ.

ಈ ಮಹತ್ತರ ಕಾರ್ಯದ ಪ್ರಾರಂಭ ತಮ್ಮಿಂದ ಮಾತ್ರ ಸಾಧ್ಯ ಎನ್ನುವ ನಂಬಿಕೆಯೊಂದಿಗೆ
ಮತ್ತೊಮ್ಮೆ ನಮಸ್ಕಾರಗಳು.

ಇಂತಿ
ತಮ್ಮ ಅಭಿಮಾನಿ

ಚಿತ್ರಕೃಪೆ: http://www.coastaldigest.com

37 ಟಿಪ್ಪಣಿಗಳು Post a comment
 1. ವಿಶ್ವನಾಥ ಮ ಬ
  ಡಿಸೆ 24 2016

  ಇ ತರಹದ ಸಲಹೆಗಳನ್ನು ಕೆಳುವ ಪರಿಸ್ಥಿತಿಯಲ್ಲಿ ಮಹದೆವರು ಇಲ್ಲಾ ಸರ್ಕಾರ ವಂತು ಮೊದಲೆ ಇಲ್ಲಾ. ಜಾತಿ ರಾಜಕಿಯ ಮಡಿಕೊಂಡೆ ಬಂದಿರುವ ಕಾಂಗ್ರೆಸ್ ಇಂತಹ ಒಂದು ದಿಟ್ಟ ನಿರ್ದಾವನ್ನು ತೆಗೆದುಕೊಳ್ಳುವ ಮಟ್ಟಕ್ಕೆ ಹೋಗುವುದಿಲ್ಲ. ಅಸಲಿಗೆ ಕಾಂಗ್ರೆಸ್ಸೆ ಮಹಾನ ಜಾತಿವಾದಿ ಪಕ್ಷ. ಮಹದೆವು ಅದರ ವಕಾರ ಅಷ್ಟೆ.

  ಉತ್ತರ
 2. ಡಿಸೆ 24 2016

  Superb sir

  ಉತ್ತರ
 3. ಡಿಸೆ 24 2016

  ಸರಿಯಾದ ಸಲಹೆ

  ಉತ್ತರ
 4. shripad bhat
  ಡಿಸೆ 24 2016

  ಅದ್ಭುತ ಲೇಖನ. ಇದು ಪುರೋಹಿತಶಾಹಿಯ ಬೇಡಿಕೆಯೂ ಹೌದು. ಏನು ಮಾಡೋದು ? ಮನು ಇದ್ದಿದ್ದರೆ ಇವೆಲ್ಲ ಒಂದಾಗುತ್ತಿದ್ದವೇನೋ !

  ಉತ್ತರ
 5. Padmanabha Rao
  ಡಿಸೆ 24 2016

  neevu heliddu nimma anisike. Adare Brahmana Jatiyannu tanna maneyalli matra ittukondiddare, bereyavaru adannu ellaa kade balasurttiruvudu nodiyoo nodada jana kurudu nimmadu.

  ಉತ್ತರ
 6. simha s n
  ಡಿಸೆ 24 2016

  nice irony !

  ಉತ್ತರ
 7. ಶೆಟ್ಟಿನಾಗ ಶೇ.
  ಡಿಸೆ 24 2016

  ಕೆಟ್ಟ ಬರಹ! ವಕ್ರ ಬ್ರಾಹ್ಮಣ ಗಿಂಡಿ ಮಾಣಿಯ ತಲೆ ಹೀಗೆಯೇ ಯೋಚಿಸುವುದು!

  ಉತ್ತರ
  • Praveen Kumar Mavinakadu
   ಡಿಸೆ 24 2016

   ನೀವು ಶೆಟ್ಟಿನಾಗ ಅನ್ನೋದು ನನಗೆ ಗೊತ್ತು.ನಾನು ಗಿಂಡಿ ಮಾಣಿ ಅನ್ನೋದು ನಿಮಗೆ ಹೇಗೆ ಗೊತ್ತು?
   ಜಾತಿ ಅಳಿದರೆ ನಿಮಗೆ ಗಂಜಿ ಗಿಟ್ಟಲ್ಲ ಅಲ್ವಾ? ಜಾತಿ ಹೆಸರಲ್ಲಿ ಗಂಜಿ ಸಂಪಾದಿಸೋ ವಕ್ರ ಬುದ್ಧಿಯವರೆಲ್ಲಾ ಹೀಗೆಯೇ ಯೋಚಿಸುವುದು!

   ಉತ್ತರ
   • ಶೆಟ್ಟಿನಾಗ ಶೇ.
    ಡಿಸೆ 25 2016

    ಪ್ರವೀಣ್, ನಿಮ್ಮ ಪ್ರತ್ರದಲ್ಲಿ ದಲಿತರ ಬಗ್ಗೆ ಪ್ರೀತಿ ಇಲ್ಲ, ಕೃತಕ ವಿನಯವಿದೆ, ದಲಿತ ಒಗ್ಗಟ್ಟನ್ನು ಮುರಿಯುವ ಕಪಟತನವಿದೆ. ದಲಿತರ ಬಗ್ಗೆ ನಿಮಗೆ ಅಸಲಿ ಕಾಳಜಿ ಇದ್ದರೆ ದಲಿತ ಕೇರಿಗಳಲ್ಲಿ ಓಡಾಡಿ demonetisation ನಿಂದ ಬಹಳ ತೊಂದರೆಗೊಳಗಾಗಿರುವವರಿಗೆ ಸಹಾಯ ಮಾಡಿ. ಹಾಗೂ ಜನವಿರೋಧಿ ಆಡಳಿತ ನೀಡುತ್ತಿರುವ ನಮೋ ಸರಕಾರವನ್ನು ವಿರೋಧಿಸಿ. ಮಹಾದೇವ ಅವರ ಮೇಲೆ ಅತಿ ಜಾಣತನದ ಪ್ರಹಾರ ಮಾಡುವುದನ್ನು ನಿಲ್ಲಿಸಿ.

    ಉತ್ತರ
    • Praveen Kumar Mavinakadu
     ಡಿಸೆ 25 2016

     ದಲಿತರ ಬಗ್ಗೆ ಪ್ರೀತಿ ಇಲ್ಲ, ಕೃತಕ ವಿನಯವಿದೆ, ದಲಿತ ಒಗ್ಗಟ್ಟನ್ನು ಮುರಿಯುವ ಕಪಟತನವಿದೆ ಎನ್ನುವ ತಮಗೆ ಯಾವ ಪತ್ರದಲ್ಲಿ ಪ್ರೀತಿಯಿದೆ,ವಿನಯವಿದೆ,ಪ್ರಾಮಾಣಿಕತೆಯಿದೆ ಎನ್ನುವುದನ್ನು ಪರಿಶೀಲಿಸಿ ಪ್ರಮಾಣ ಪತ್ರ ನೀಡುವ ಯಾವುದಾದರೂ ಸಂಸ್ಥೆಯ ಸಂಪರ್ಕವೇನಾದರೂ ಇದೆಯೇ?ಇದ್ದರೆ ನನಗೂ ಅದರ ವಿಳಾಸ ಕೊಡಿ.ಮುಂದಿನ ಪತ್ರವನ್ನು ಆ ಸಂಸ್ಥೆಯ ಪ್ರಮಾಣ ಪತ್ರ ಪಡೆದು ನಂತರ ಇಲ್ಲಿ ಹಾಕುತ್ತೇನೆ.

     ಅಷ್ಟಕ್ಕೂ ಜಾತಿಯನ್ನು ಒಂದು ಮಾಡಿ ಎಂದು ಅವರಲ್ಲಿ ಮನವಿ ಮಾಡಿದರೆ ಅದರಲ್ಲಿ ತಾವು ಕಪಟತನವನ್ನು ಹೇಗೆ ಹುಡುಕಿದಿರಿ?

     ಇನ್ನು ಜಾತಿ ವ್ಯವಸ್ಥೆಗೂ demonetisation ಥಳುಕು ಹಾಕುವ ತಾವು ಏನನ್ನು ಹೇಳಬಯಸುತ್ತಿದ್ದೀರಿ ಎನ್ನುವುದರ ಬಗ್ಗೆಯೇ ನನಗೆ ಗೊಂದಲವಿದೆ.ಜೊತೆಗೆ ಜಾತಿ ವ್ಯವಸ್ಥೆಯಲ್ಲೇ ದಲಿತರ ಒಗ್ಗಟ್ಟಿದೆ ಎನ್ನುವುದನ್ನು ತಮಗೆ ಹೇಳಿಕೊಟ್ಟವರಾರು ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲವೂ ನನಗಿದೆ.

     ಉತ್ತರ
     • ಶೆಟ್ಟಿನಾಗ ಶೇ.
      ಡಿಸೆ 25 2016

      ಪ್ರವೀಣ್, demonetisation ನಿಂದ ತಳವರ್ಗದ ಶೋಷಿತ ಜಾತಿಗಳ ಜನರಿಗೇ ಅತಿ ಹೆಚ್ಚು ಏಟು ಬಿದ್ದಿದೆ ಎಂಬುದು ಎಲ್ಲೆಲ್ಲೂ ಕಂಡುಬಂದಿದೆ. ಮೇಲ್ವರ್ಗದ ಸಬಲ ಜಾತಿಗಳ ಜನರು demonetisationನಿಂದ ಆದ ಆಘಾತದಿಂದ ಚೇತರಿಸಿಕೊಂಡಿದ್ದಾರೆ. ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ ಪತ್ರಕರ್ತ ಸಾಯಿನಾಥ್ ಅವರು ಹಳ್ಳಿಜನರಿಗೆ demonetisation ನಿಂದ ಆದ ಪೆಟ್ಟುಗಳ ಬಗ್ಗೆ ಬರೆದಿರುವ ಇನ್ವೆಸ್ಟಿಗೇಷನ್ ರಿಪೋರ್ಟ್ ಓದಿ. ಇವರೆಲ್ಲರೂ ತಳವರ್ಗದ ಶೋಷಿತ ಜಾತಿಗಳ ಬಡಜನರು.

      ಉತ್ತರ
     • ಶೆಟ್ಟಿನಾಗ ಶೇ.
      ಡಿಸೆ 25 2016

      “ಪ್ರೀತಿಯಿದೆ,ವಿನಯವಿದೆ,ಪ್ರಾಮಾಣಿಕತೆಯಿದೆ ಪರಿಶೀಲಿಸಿ ಯಾವುದಾದರೂ ಸಂಸ್ಥೆ”

      ಸಂಸ್ಥೆ ಏಕೆ? ನಿಮ್ಮ ಹತ್ತಿರದ ದಲಿತ ಕೇರಿಯ ಬಡ ಜನರ ಸೇವೆಯನ್ನು ಮಾಡಿ ಅವರ ಆಶೀರ್ವಚನವನ್ನು ಪಡೆಯಿರಿ, ಅದೇ ನೀವು ನಿಮ್ಮ ಮಾನವೀಯತೆಗೆ ಪಡೆಯಬಹುದಾದ ದೊಡ್ಡ ಸರ್ಟಿಫಿಕೇಟ್.

      ಉತ್ತರ
      • Praveen Kumar Mavinakadu
       ಡಿಸೆ 25 2016

       ಅಷ್ಟಕ್ಕೂ ತಾವು ಈ ಪತ್ರದಲ್ಲಿ ದಲಿತರ ಬಗ್ಗೆ ಪ್ರೀತಿ ಇಲ್ಲ, ಕೃತಕ ವಿನಯವಿದೆ, ದಲಿತ ಒಗ್ಗಟ್ಟನ್ನು ಮುರಿಯುವ ಕಪಟತನವಿದೆ ಎನ್ನುವುದನ್ನು ಕಂಡು ಹಿಡಿದಿದ್ದು ಹೇಗೆ?
       ಅದಕ್ಕೆ ಮಾನದಂಡ ಯಾವುದು?

       ನನ್ನನ್ನು ಗಿಂಡಿ ಮಾಣಿ ಎನ್ನಲು ತಮಗಿರುವ ಅರ್ಹತೆ ಏನು?ನನ್ನ ಅಂಗಿ ಕಳಚಿ ಜನಿವಾರ ಕಂಡಿದ್ದೀರಾ?

       ಜಾತಿ ವ್ಯವಸ್ಥೆ ನಂತರ ಬಂದದ್ದಲ್ಲ ಎನ್ನುವ ಅರಿವು ನನಗೂ ಇದೆ.ಹಾಗಾದರೆ ಬ್ಯಾಂಕ್ ಗಳಲ್ಲಿ ಹಣದ ಹರಿವು ಸಹಜ ಸ್ಥಿತಿಗೆ ಬಂದ ನಂತರ ಜಾತಿ ವ್ಯವಸ್ಥೆ ಕೂಡಾ ತೊಲಗಿ ಹೋಗುತ್ತಾ?

       ಉತ್ತರ
       • ಶೆಟ್ಟಿನಾಗ ಶೇ.
        ಡಿಸೆ 25 2016

        ದಲಿತರ ಬಗ್ಗೆ ಪ್ರೀತಿ ಕಾಳಜಿ ಬದ್ಧತೆ ಇದ್ದರೆ ದೇವನೂರ ಮಹಾದೇವ ಅವರಿಗೆ ಪತ್ರ ಬರೆದು ಅವರು ಏನು ಮಾಡತಕ್ಕದ್ದು ಎಂದು ಬೋಧಿಸುವ ಧಾರ್ಷ್ಟ್ಯ ತೋರಿಸಬೇಡಿ. ಬನ್ನಿ ದಲಿತ ಕೇರಿಗೆ; ದಲಿತರ ಸೇವೆ ಮಾಡಿ ಅವರ ಆಶೀರ್ವಚನವನ್ನು ಪಡೆಯಿರಿ. ಸಂಬಂಜ ಅನ್ನೋದು ದೊಡ್ಡದು ಕನಾ.

        ಉತ್ತರ
        • ಶೆಟ್ಟಿನಾಗ ಶೇ.
         ಡಿಸೆ 25 2016

         ದಲಿತರ ಬಗ್ಗೆ ಪ್ರೀತಿ ಕಾಳಜಿ ಬದ್ಧತೆ ಇದ್ದರೆ ಪೇಜಾವರ ಮಠಾಧೀಶರಿಗೆ ಪತ್ರ ಬರೆಯಿರಿ – ದಲಿತರನ್ನು ಕೃಷ್ಣ ಮಠದ ಉತ್ತರಾಧಿಕಾರಿಯಾಗಿ ನಿಯುಕ್ತಗೊಳಿಸಲು ಹೇಳಿ; ಪಂಕ್ತಿಭೇದವನ್ನು ನಿಷೇಧಿಸಲು ಆಗ್ರಹಪಡಿಸಿ; ಕೃಷ್ಣ ಮಠದ ಮೊಕ್ತೇಸರನನ್ನಾಗಿ ಕೋಶಾಧಿಕಾರಿಯನ್ನಾಗಿ ದಲಿತರನ್ನು ನೇಮಕಮಾಡಲು ಹೇಳಿ. ನೀವು ಮಾಡಬಹುದಾದ್ದು ಬಹಳ ಇದೆ ಪ್ರವೀಣ್ ಕ್ರಿಟಿಕಲ್ ಇನ್ಸೈಡರ್ ಆಗಿ.

         ಉತ್ತರ
         • SalamBava
          ಡಿಸೆ 25 2016

          “ಕ್ರಿಟಿಕಲ್ ಇನ್ಸೈಡರ್ ಆಗಿ.”

          Missing URA Sir. Undoubtedly the greatest critical insider of Brahmin community of India in his times. Something Bhyrappa never could be.

          ಉತ್ತರ
          • ಶೆಟ್ಟಿನಾಗ ಶೇ.
           ಡಿಸೆ 26 2016

           ಬಾವ ಭಾಯಿ! ಕರಾರುವಾಕ್ಕಾಗಿ ಹೇಳಿದ್ದೀರಿ ಎಂದಿನಂತೆ. ಈ ಗಿಂಡಿಮಾಣಿಯ ಅಸಲಿಯತ್ತು ಬಯಲಾಗಿದೆ, ಈತ ಕ್ರಿಟಿಕಲ್ ಇನ್ಸೈಡರ್ ಆಗಲು ಹೊರಟವನಲ್ಲ, ಈತ ನಮ್ಮ ನಡುವಿನ ಸಂತ ದೇವನೂರ ಮಹಾದೇವರ ಮೇಲೆ ಕತ್ತಿ ಮಸೆಯಲು ಹೊರಟಿರುವ ಸನಾತನಿ. ನೋಡಿ ಈತನ ಮಾತುಗಳೇ ಹುನ್ನಾರವನ್ನು ಬಯಲು ಮಾಡಿವೆ:
           “ತಮ್ಮಲ್ಲಿರುವ 101 ಜಾತಿಗಳನ್ನು 101 ಕಾರಣ ನೀಡಿ ಸಮರ್ಥಿಸಿಕೊಳ್ಳುತ್ತಾ ಉಳಿಸಿಕೊಂಡು ಪರಸ್ಪರ ಕಿತ್ತಾಡಿಸುತ್ತಲೇ “ಸಂಬಂಜ ಅನ್ನೋದು ದೊಡ್ಡದು ಕನಾ…” ಅಂದರೆ ”

           ಈತನಿಗೆ ಕುಮ್ಮಕ್ಕು ಕೊಟ್ಟು ಮಹಾದೇವರ ಮೇಲೆ ಛೂ ಬಿಟ್ಟ ಹೇಡಿಗಳು ಮುಂದೆ ಬರತಕ್ಕದ್ದು.

        • SalamBava
         ಡಿಸೆ 25 2016

         “ಸಂಬಂಜ ಅನ್ನೋದು ದೊಡ್ಡದು ಕನಾ.”

         This captures essence of humanism in one sentence! So powerful is Mahadeva’s writing so profound the meaning is!

         ಉತ್ತರ
        • Praveen Kumar Mavinakadu
         ಡಿಸೆ 26 2016

         ದೇವನೂರ ಮಹಾದೇವ ಅವರಿಗೆ ಪತ್ರ ಬರೆದು ಅವರು ಏನು ಮಾಡತಕ್ಕದ್ದು ಎಂದು ಬೋಧಿಸುವ ಧಾರ್ಷ್ಟ್ಯ ತೋರಿಸಬೇಡಿ ಎಂದಿದ್ದೀರಿ.ಇಲ್ಲಿ ಧಾರ್ಷ್ಟ್ಯ ಎಲ್ಲಿದೆ ಸ್ವಲ್ಪ ತೋರಿಸುತ್ತೀರಾ?

         ಅಷ್ಟಕ್ಕೂ ಜಾತಿ ವ್ಯವಸ್ಥೆಯಿಂದ ಹೆಚ್ಚು ಶೋಷಣೆಗೊಳಗಾದವರು ಪರಿಶಿಷ್ಟರೇ ಅಲ್ಲವೇ?ತಮ್ಮಲ್ಲಿರುವ ಜಾತಿಗಳನ್ನು ಒಂದುಗೂಡಿಸಲು ದಲಿತ ಸಾಹಿತಿಗಳಿಗೇ ಮನಸ್ಸಿಲ್ಲ ಎಂದ ಮೇಲೆ ಪೇಜಾವರರಿಗೆ ಹೇಳಿ ಏನು ಪ್ರಯೋಜನ?

         ತಮ್ಮಲ್ಲಿರುವ 101 ಜಾತಿಗಳನ್ನು 101 ಕಾರಣ ನೀಡಿ ಸಮರ್ಥಿಸಿಕೊಳ್ಳುತ್ತಾ ಉಳಿಸಿಕೊಂಡು ಪರಸ್ಪರ ಕಿತ್ತಾಡಿಸುತ್ತಲೇ “ಸಂಬಂಜ ಅನ್ನೋದು ದೊಡ್ಡದು ಕನಾ…” ಅಂದರೆ ಶೋಷಿತರಲ್ಲಿ ಶೋಷಿತರಿಗೆ ಏನು ಬಂತು ಭಾಗ್ಯ?

         ದೇವನೂರರಿಗೇ ಪತ್ರ ಬರೆಯಲು ಕಾರಣವೇನು ಎನ್ನುವುದನ್ನು ಪತ್ರದ ಒಕ್ಕಣೆಯಲ್ಲೇ ಸ್ಪಷ್ಟವಾಗಿ ತಿಳಿಸಿದ ಮೇಲೂ ಅವರಿಗೆ ಬರೆಯಬಾರದು,ಇವರಿಗೆ ಬರೆಯತಕ್ಕದ್ದು ಎಂದು ನನಗೆ ಬೋಧಿಸುವ ಧಾರ್ಷ್ಟ್ಯ ತೋರಿಸಬೇಡಿ.

         ಉತ್ತರ
         • ಶೆಟ್ಟಿನಾಗ ಶೇ.
          ಡಿಸೆ 26 2016

          “ತಮ್ಮಲ್ಲಿರುವ 101 ಜಾತಿಗಳನ್ನು 101 ಕಾರಣ ನೀಡಿ ಸಮರ್ಥಿಸಿಕೊಳ್ಳುತ್ತಾ ಉಳಿಸಿಕೊಂಡು ಪರಸ್ಪರ ಕಿತ್ತಾಡಿಸುತ್ತಲೇ ”

          ದೇವನೂರ ಮಹಾದೇವ ಹೀಗೆ ಮಾಡಿದ್ದಾರಾ? ಅವರನ್ನು ಹತ್ತಿರದಿಂದ ನೋಡದೆ ಸುಖಾಸುಮ್ಮನೆ ಸುಳ್ಳು ಹೇಳಬೇಡಿ ಪ್ರವೀಣ್.

          ಉತ್ತರ
 8. ರಂಜನಾ ರಾಮ್ ದುರ್ಗ
  ಡಿಸೆ 26 2016

  ಪ್ರವೀಣ್ ಬ್ರದರ್,

  ಸಹೋದರ ಶೆಟ್ಕರ್ ಜೊತೆ ಮಾತನಾಡಿ ನಿಮ್ಮ ಸಮಯವನ್ನು ವ್ಯರ್ಥ ಮಾಡಿಕೊಳ್ಳಬೇಡಿ.ನಿಮ್ಮ ಲೇಖನದಲ್ಲಿರುವ ವಿಷಯ ಬಿಟ್ಟು ವೈಚಾರಿಕ ರಾಜಕಾರಣಿಯಂತೆ ಮಾತನಾಡುವ ಸಹೋದರ ಶೆಟ್ಕರರಂತವರಿಂದಲೇ ಬಡವರು ನೋವು ಅನುಭವಿಸುತ್ತಿರುವುದಾಗಿದೆ

  ಉತ್ತರ
  • ಶೆಟ್ಟಿನಾಗ ಶೇ.
   ಡಿಸೆ 26 2016

   ಪ್ರಿಯ ಸಹೋದರಿ ರಂಜನಾ, ಗಿಂಡಿಮಾಣಿಯ ಉದ್ದೇಶ ದಲಿತರ ಶ್ರೇಯೋಭಿವೃದ್ಧಿಯಲ್ಲ ಬದಲಾಗಿ ದೇವನೂರ ಮಹಾದೇವರನ್ನು ಟಾರ್ಗೆಟ್ ಮಾಡಿಕೊಂಡು ದಲಿತ ಸಂಘರ್ಷವನ್ನು ಮುರಿಯುವುದು ಆಗಿದೆ. ಕೃಷ್ಣ ಮಠಕ್ಕೆ ದಲಿತರನ್ನು ಉತ್ತರಾಧಿಕಾರಿಯಾಗಿ ನೇಮಕ ಮಾಡುವವರೆಗೂ ದಲಿತ ಒಳಪಂಗಡಗಳ ಬಗ್ಗೆ ಬೆರಳು ತೋರಿಸುವ ಹಕ್ಕು ಗಿಂಡಿಮಾಣಿಗಳಿಗಿಲ್ಲ. ವೈದಿಕಶಾಹಿಯ ಹುನ್ನಾರ ಗಿಂಡಿಮಾಣಿಯ ಕಮೆಂಟುಗಳಲ್ಲೇ ಬಯಲಾಗಿದೆ. ಇದನ್ನು ವೈಚಾರಿಕವಾಗಿ ವಿರೋಧಿಸುವುದು ನಿಮ್ಮ ಕರ್ತವ್ಯವೂ ಆಗಿದೆ ತಂಗಿ!

   ಉತ್ತರ
   • Praveen Kumar Mavinakadu
    ಡಿಸೆ 26 2016

    ಕೃಷ್ಣ ಮಠಕ್ಕೆ ದಲಿತರನ್ನು ಉತ್ತರಾಧಿಕಾರಿಯಾಗಿ ಮಾಡಿ ಎಂದು ಪೇಜಾವರರಿಗೆ ಪತ್ರ ಬರೆಯಲು ನಾನು ಸಿದ್ಧನಿದ್ದೇನೆ.ಆದರೆ….

    ಬಲಗೈಯವರನ್ನು ಉತ್ತರಾಧಿಕಾರಿಯನ್ನಾಗಿ ಮಾಡಿದರೆ ಎಡಗೈಯವರ ವಿರೋಧ ಎದುರಿಸಬೇಕಾಗಬಹುದು.
    ಎಡಗೈಯವರನ್ನು ಉತ್ತರಾಧಿಕಾರಿಯನ್ನಾಗಿ ಮಾಡಿದರೆ ಬಲಗೈಯವರ ವಿರೋಧ ಎದುರಿಸಬೇಕಾಗಬಹುದು.
    ಸ್ಪರ್ಶ್ಯರನ್ನು ಮಾಡಿದರೆ ಇತರರು ತಗಾದೆ ತೆಗೆಯಬಹುದು.
    ಮಾದಿಗ ಜಾತಿಯವರನ್ನು ಉತ್ತರಾಧಿಕಾರಿಯಾಗಿಸಿದರೆ ಹೊಲೆಯರು ಸಿಡಿದೇಳಬಹುದು.
    ಲಂಬಾಣಿಗರನ್ನು ಉತ್ತರಾಧಿಕಾರಿಯನ್ನಾಗಿ ಮಾಡಿದರೆ ಕೊರಮ ಜನಾಂಗ ಕೋಪಗೊಳ್ಳಬಹುದು.

    ಆದ್ದರಿಂದ ಅದಕ್ಕೂ ಮೊದಲು 101 ಜಾತಿಗಳಲ್ಲಿ ಯಾವ ಜಾತಿಯವರು ಕೃಷ್ಣ ಮಠಕ್ಕೆ ಉತ್ತರಾಧಿಕಾರಿ ಆಗಬೇಕು ಎನ್ನುವುದನ್ನು ದೊಡ್ಡವರಾದ ತಾವುಗಳು ತೀರ್ಮಾನಿಸಿ ಹೇಳಿ.
    ಬಲಗೈ ಸಮೂಹದವರು ಎಡಗೈ ಸಮೂಹದವರನ್ನು ಅಸ್ಪಶ್ಯರೆಂದು ಪರಿಗಣಿಸುತ್ತಾರೆಂದು ಸದಾಶಿವ ಆಯೋಗದ ವರದಿಯಲ್ಲೇ ಉಲ್ಲೇಖಿಸಲಾಗಿದೆ.ಹೀಗಿದ್ದಾಗ ಸಮಸ್ತ 101 ಜಾತಿಗಳೂ ಒಂದಾಗದೇ ಇದ್ದರೆ ದಲಿತರನ್ನು ಸ್ವಾಮೀಜಿಯನ್ನಾಗಿ ಮಾಡಿದರೂ ಅಲ್ಲಿನ ಪಂಕ್ತಿ ಬೇಧ ನಿಲ್ಲುತ್ತದೆ ಎನ್ನುವ ಸ್ಪಷ್ಟ ಭರವಸೆ ಕೊಡಿ.

    ಅಲ್ಲಿಯವರೆಗೂ ಶೆಟ್ಟಿ ನಾಗರಿಗೆ ದೀರ್ಘದಂಡ ನಮಸ್ಕಾರಗಳು.

    ಉತ್ತರ
    • ಶೆಟ್ಟಿನಾಗ ಶೇ.
     ಡಿಸೆ 26 2016

     ಅತಿ ಜಾಣತನದ ವಾದವೇಕೆ ಗಿಂಡಿಮಾಣಿ? ದಲಿತರ ಬಗ್ಗೆ ಕಾಳಜಿ ನಿನಗೆ ಇದ್ದರೆ ಮೊದಲು ನೀನು ಏನು ಮಾಡಿದ್ದೀ ಎಂಬುದನ್ನು ತಿಳಿಸು ಆಮೇಲೆ ಮಹಾದೇವ ಏನು ಮಾಡತಕ್ಕದ್ದು ಎಂದು ಹೇಳುವಂತೆ. ಲೈಫಿನಲ್ಲಿ ಒಮ್ಮೆಯಾದರೂ ಬ್ರಾಹ್ಮಣ್ಯವನ್ನು ಖಂಡಿಸಿದ್ದೀಯಾ ವಿರೋಧಿಸಿದ್ದೀಯಾ? ನಿನ್ನೊಳಗಿರುವ ನಂಜನ್ನು ಮಹಾದೇವ ಮೇಲೆ ಕಾರುವ ಬದಲು ನಿನ್ನ ಸಮುದಾಯವನ್ನು ತಿದ್ದುವ ಕೆಲಸ ಮಾಡು.

     ಉತ್ತರ
     • Praveen Kumar Mavinakadu
      ಡಿಸೆ 26 2016

      ಹೆಸರಲ್ಲೇ ಜಾತಿ ಸಿಗಿಸಿಕೊಂಡ ನೀನೇನು ಮಾಡಿದ್ದಿ ಎಂದು ನೋಡಿಕೋ.ನಂತರ ನನಗೆ ಹೇಳು.

      ಉತ್ತರ
      • WITIAN
       ಡಿಸೆ 26 2016

       ಅವರಿವರನ್ನು ‘ಗಿಂಡಿಮಾಣಿ’ ಎಂದು ಕರೆಯುವ ‘ಸ್ವಾಸಂತ್ರ’ ಶಿಟ್ಟಿನಾಗನಿಗೆ ಇದ್ದರೆ ಈ ಕ್ರಿಮಿಯನ್ನು ಖೊಟ್ಟಿ ಶರಣ ಎಂದು ಕರೆಯುವ ಹಕ್ಕು ಮಿಕ್ಕವರಿಗೂ ಇದೆ. ಯಾವಾಗ ವಾದ ತನ್ನ ಬುಡಕ್ಕೆ ಬಂತೋ ಆಗ ಅಲ್ಲಿಯತನಕ ಇದ್ದ ಇರುವ ಇವನ ಕೃತಕ ವಿನಯ ಮತ್ತು ಗೌರವದ ಮುಖವಾಡ ಕಳಚಿ ಬೀಳುತ್ತದೆ. ಇವನ ಪ್ರತಿಕ್ರಿಯೆಯ ಪರಿಯನ್ನೇ ನೋಡಿ, ಪ್ರವೀಣ್ ಕುಮಾರರ ಜಾತಿ ವಿಂಗಡಿತ dilemma ಬರುತ್ತಿದ್ದಂತೆ ಏಕವಚನಕ್ಕೆ ಇಳಿದ. ಇದಕ್ಕೆ ಆಕ್ಷೇಪಿಸಿದರೆ, ಹರಕು ಹರಕಾದ ಇಂಗ್ಲಿಷಿನಲ್ಲಿ ಪ್ರತಿಕ್ರಿಯೆ ಬರೆಯುತ್ತಾನೆ. ಇವನ ಸಪೋರ್ಟಿಗೆ ‘ಹಾಗಲಕಾಯಿಗೆ ಬೇವಿನ ಕಾಯಿ ಸಾಕ್ಷಿ’ಯಾಗಿ ಇವನ ನಂಟ ಹರಾಮ್ ಬಾವಾ ಬರುತ್ತಾನೆ…

       ಉತ್ತರ
       • Praveen Kumar Mavinakadu
        ಡಿಸೆ 27 2016

        WITIANರವರೇ,ನಿಮ್ಮ ಮಾತು ಸರಿಯಾಗಿಯೇ ಇದೆ.ಜಾತಿ ವಿನಾಶವಾದರೆ ಹೊಡೆದು ತಿನ್ನುವ ತನ್ನ ವೃತ್ತಿಗೆ ಕಂಠಕ ಬರುತ್ತದೆ ಎನ್ನುವ ಭಯ ಅವನನ್ನು ಹಾಗೆ ಆಡಿಸುತ್ತಿದೆ ಅಷ್ಟೇ.

        ಪಾಪ,ಇವನನ್ನು ಇವನ ಗುರುಗಳನ್ನು ಮತ್ತು ಜಾತಿ ವಿನಾಶದ ಹೆಸರಿನಲ್ಲಿ ಜಾತಿಯನ್ನು ಪೋಷಿಸಿಕೊಂಡು ಬರುತ್ತಿರುವ ಪ್ರಗತಿಪರ ಸಾಹಿತಿಗಳ ಗಂಜಿಗೆ ನಾವುಗಳು ಕಲ್ಲು ಹಾಕುವುದು ಬೇಡ.ಇಂತಹಾ ಅನರ್ಹನೊಂದಿಗೆ ಚರ್ಚೆಯೂ ಬೇಡ ಎಂದು ತೀರ್ಮಾನಿಸಿ ಈ ಚರ್ಚೆಯಿಂದ ನಾನು ಹೊರ ಹೋಗುತ್ತಿದ್ದೇನೆ.

        ಉತ್ತರ
        • ಶೆಟ್ಟಿನಾಗ ಶೇ.
         ಡಿಸೆ 27 2016

         ಹಹಹಹ! ಗಿಂಡಿಮಾಣಿಯೇ ಹೌದು ನೀನು! ನಿನ್ನ ಸಮುದಾಯದ ಕ್ರಿಟಿಕಲ್ ಇನ್ಸೈಡರ್ ಆಗು ಎಂದದ್ದಕ್ಕೆ ಬೆನ್ನು ಹುರಿ ನಡುಕ ಬಂದು ವಿಟಿಯನ್ ಎಂಬ ಟ್ರಾಲ್ನನ್ನು ಬಿಗಿದಪ್ಪಿಕೊಂಡೆಯಲ್ಲ ಛೆ! ದಲಿತರ ಬಗ್ಗೆ ಖೊಟ್ಟಿ ಕಾಳಜಿ ವ್ಯಕ್ತಪಡಿಸುತ್ತಾ ಮಹಾದೇವನಂತಹ ಸಂತನ ಮೇಲೆ ಅಟಾಕ್ ಮಾಡುವ ದರಿದ್ರ ಬುದ್ಧಿಗೆ ಬೇರೆ ಏನು ತಾನೇ ಹೊಳೆದೀತು! ಹಹಹಹ!

         ಉತ್ತರ
      • ಶೆಟ್ಟಿನಾಗ ಶೇ.
       ಡಿಸೆ 27 2016

       ಅಯ್ಯೋ ಬೆಪ್ಪೆ! ಶೆಟ್ಟಿ ಎಂಬುದು ಜಾತಿ ಸೂಚಕವಲ್ಲ, ವೃತ್ತಿ ಸೂಚಕ. ಅರೆ ಬರೆ ಜ್ಞಾನವಿರುವ ನಿಮ್ಮಂತಹ ಗಿಂಡಿಮಾಣಿಗಳು ವೇದಾಧ್ಯಯನಕ್ಕೆ ಸರಿ ಹೊರತು ದೇವನೂರ ಮಹಾದೇವ ಅವರೊಡನೆ ಗಂಭೀರ ಚರ್ಚೆಗೆ ಅಲ್ಲ.

       ಉತ್ತರ
       • Praveen Kumar Mavinakadu
        ಡಿಸೆ 27 2016

        ಮೊದಲ ಪ್ರತಿಕ್ರಿಯೆಯಲ್ಲೇ ಆರೋಗ್ಯಕರ ಚರ್ಚೆಯ ಹೊರತಾಗಿ ಗಿಂಡಿಮಾಣಿ ಎನ್ನುವ ತಿಕ್ಕಲು ಭಾಷೆ ಬಳಸಿದ್ದು ಯಾರು ಎನ್ನುವುದನ್ನು ಹೇಳು.ಇಲ್ಲಿ ಮೊದಲು ಏಕವಚನ ಉಪಯೋಗಿಸಿದವರು ಯಾರು ಎನ್ನುವುದನ್ನು ನೋಡು.ಇಂಗ್ಲಿಷಿನಲ್ಲಿ ನಾನು ಎಲ್ಲಿ ಪ್ರತಿಕ್ರಿಯಿಸಿದ್ದೇನೆ ಎಂದು ತೋರಿಸು.

        ನಂತರ ನಿನ್ನ ಹೆಸರನ್ನು ಖೊಟ್ಟಿ ನಾಗ ಎಂದು ಬದಲಿಸಿಕೋ.ನಿನ್ನ ವೃತ್ತಿಗೆ ಅದೇ ಸರಿ ಹೊಂದುವ ಹೆಸರು.

        ಉತ್ತರ
        • ಶೆಟ್ಟಿನಾಗ ಶೇ.
         ಡಿಸೆ 27 2016

         ನಿನ್ನ ಈ ಲೇಖನವೇ ದೊಡ್ಡ ಫ್ರಾಡ್. ದಲಿತರ ಬಗ್ಗೆ ನಿನಗೆ ಎಳ್ಳಷ್ಟೂ ಪ್ರೀತಿಕಾಳಜಿ ಇಲ್ಲ. ನೀನು ಹೊರಟಿದ್ದು ಅತಿಯಾದ ಜಾಣತನದ ಮೂಲಕ ಸಂತ ಮಹಾದೇವನನ್ನು ಹಣಿಯಲು. ತಿರುಗೇಟು ಬಿದ್ದ ಮೇಲೆ ಕುಂಯೋ ಮರ್ರೋ ಎಂದು ಕೂಗಿ ಕೊಳ್ಳುತ್ತಿರುವೆ. ನಿನ್ನ ಆರ್ತನಾದ ಅಗ್ರಹಾರಕ್ಕೆ ಕೇಳಿಸುತ್ತಿದೆ.

         ಉತ್ತರ
         • WITIAN
          ಡಿಸೆ 27 2016

          ಹ ಹಾ.. ದೇ.ಮ. ಸಂತಾ ಆದರೆ ನಿನ್ನ ಡ್ರಗ್ಗಾ ಸರ್ ಬಂತಾ, ನೀನು ಸಂತಾ ಆದರೆ ನಿನ್ನ ಹರಾಮ್ ಬಾವಾ ಬಂತಾ.. ನೀವೆಲ್ಲ ದೊಡ್ಡ ಜೋಕರ್ ಗಳು!

          ಉತ್ತರ
          • SalamBava
           ಡಿಸೆ 27 2016

           And what are you? A privileged troll who has no concern about the exploited sections of the society in which he lives. You should be ashamed of your worthless existence. Get a life.

         • SalamBava
          ಡಿಸೆ 27 2016

          “ನಿನ್ನ ಆರ್ತನಾದ ಅಗ್ರಹಾರಕ್ಕೆ ಕೇಳಿಸುತ್ತಿದೆ.”

          Poetic and powerful use of language Shetkar!

          Coming to the subject of this article, there’s no doubt that the Dalit community is divided into 100 groups even in 21st century. This is precisely the reason why Dalits have been exploited for centuries and continue to be exploited. Vedikshahi has cleverly ensured that it remains unchallenged by Dalits by using Manuvad. It will take another or two Babasaheb Ambedkar to fight Vedikshahi and unite all Dalits.

          ಉತ್ತರ
          • ಶೆಟ್ಟಿನಾಗ ಶೇ.
           ಡಿಸೆ 28 2016

           ಕರಾರುವಾಕ್ಕಾಗಿ ಹೇಳಿದಿರಿ ಬಾವ ಭಾಯಿ. ನಮ್ಮ ಮಹದೇವಣ್ಣ ಕೂಡ ಅಂಬೇಡ್ಕರ್ ಮಾದರಿಯಲ್ಲೇ ವೈದಿಕಶಾಹಿ ವಿರುದ್ಧ ಹೋರಾಟ ನಡೆಸುತ್ತಾ ದಲಿತರನ್ನು ಒಗ್ಗೂಡಿಸುವ ಕಾಯಕದಲ್ಲಿ ತೊಡಗಿರುವ ಅನುಭಾವಿ. ದಲಿತರಿಗೆ ವಿಷ್ಣುದೀಕ್ಷೆ ಎಂಬ ಮಾಯಾ ವಿಭೂತಿ ಹಚ್ಚಲು ಹೊರಟಿರುವ ಪೇಜಾವರ್ ಅನ್ನೇ ಎದುರಿಸಿ ದಲಿತ ಪ್ರಜ್ಞೆಯನ್ನು ವಿಸ್ತರಿಸಿದ ಮಹಾನುಭಾವ. ಆದರೆ ಹಳ್ಳಿ ಹಳ್ಳಿಯಲ್ಲಿ ಅಂಬೇಡ್ಕರ್ ಹುಟ್ಟಿ ಗ್ರಾಸ್ ರೂಟ್ಸ್ ಕ್ರಾಂತಿ ನಡೆಸುವವರೆಗೆ ದಲಿತರನ್ನು ಒಗ್ಗೂಡಲು ಈ ಸನಾತನಿಗಳು ಬಿಡುವುದಿಲ್ಲ.

  • Praveen Kumar Mavinakadu
   ಡಿಸೆ 26 2016

   ರಂಜನಾ ಅವರೇ,

   ಅವರು ಉದ್ದೇಶಪೂರ್ವಕವಾಗಿಯೇ ಹಾಗೆ ಮಾತನಾಡುತ್ತಿದ್ದಾರೆ.ಶೋಷಿತ ಸಮುದಾಯದವರಿಗೆ ಸದಾ ಕಾಲ ಮನುವಾದದ ಗುಮ್ಮ ತೋರಿಸುತ್ತಾ ಅವರನ್ನು ಅದೇ ಸ್ಥಿತಿಯಲ್ಲಿಡುವುದರಲ್ಲಿ ಇಂಥವರಿಗೆ ಅಪಾರವಾದ ಲಾಭವಿದೆ.ಅದಕ್ಕಾಗಿ ಹಾಗೆ ಮಾತಾಡುತ್ತಾರೆ.ಇದೇನೂ ಹೊಸತಲ್ಲ.

   ಉತ್ತರ
 9. Ckvmurthy
  ಜನ 8 2017

  Even if we pass through 10000 years we will not become secularists.This situation prevails as it is for several centuries.When there is benefit why we should be secular.

  ಉತ್ತರ

ನಿಮ್ಮದೊಂದು ಉತ್ತರ SalamBava ಗಾಗಿ ಪ್ರತ್ಯುತ್ತರವನ್ನು ರದ್ದುಮಾಡಿ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments