ನದಿ..!
ದ್ವಂದ್ವ (ಸಣ್ಣ ಕತೆ )
– ಹೆಚ್. ಎಸ್. ಅರುಣ್ ಕುಮಾರ್
ನಾನು ಅಪ್ಪಾಜಿ ಪಕ್ಕದಲ್ಲಿ ಕುಳಿತಿದ್ದೆ. ಸಾವಿರಾರು ಜನರ ಪ್ರಾಣ ಕಾಪಾಡಿದ ಆ ವ್ಯಕ್ತಿ ಮರಣಶಯ್ಯೇಯಲ್ಲಿ ಮಲಗಿರುವುದು ಹರಿಹರಪುರದ ನಿವಾಸಿಗಳಿಗೆ ಅತೀವ ದುಃಖದ ಸಂಗತಿ. ನಮ್ಮ ಮನೆಯಲ್ಲಿ ದೊಡ್ಡ ಗುಂಪೇ ಸೇರಿತ್ತು. ಆಯುರ್ವೇದದ ಪಂಡಿತ ರಾಮ ಜೋಯಿಸ್ ಎಂದರೆ ಸುತ್ತ ಮುತ್ತಲ ಸ್ಥಳಗಳಲ್ಲಿ ಪ್ರಖ್ಯಾತ. ಮನೆಯ ಪಕ್ಕದಲ್ಲಿ ಒಂದು ದೊಡ್ಡ ವೈದ್ಯಶಾಲೆ. ೮-೧೦ ಜನ ರೋಗಿಗಳಿಗೆ ತಂಗಲು ಕೊಠಡಿಗಳು. ಪಂಚಕರ್ಮ, ತರ್ಪಣ, ಶಿರೋಧಾರ, ಅಂಜನಾ ಚಿಕಿತ್ಸೆಗಳಲ್ಲಿ ಸಿದ್ದ ಹಸ್ತ. ಬೇರೆ ಬೇರೆ ದೇಶಗಳಿಂದ ಬಂದು “ಆರೋಗ್ಯಧಾಮ”ದಲ್ಲಿ ಚಿಕಿತ್ಸೆ ಪಡೆಯುತ್ತಾರೆ. ಜೊತೆಗೆ ಶಾರದಾಮಾತೆ ದೇವಾಲಯದ ಮುಖ್ಯ ಅರ್ಚಕ. ನನಗೂ ಆಯುರ್ವೇದದ ಚಿಕಿತ್ಸೆಯ ಜ್ಞಾನವಿದೆ. ಜೊತೆಗೆ ವೇದ ಉಪನಿಷತ್ ಭಾಗವತದ ಕುರಿತು ಆಳವಾದ ಅರಿವು ಬಂದಿದ್ದು ಅಪ್ಪಾಜಿಯವರ ಸಂಗದಿಂದಲೇ. ಶಾರದಾ ದೇವಿಯ ಪೂಜೆ ಪುನಸ್ಕಾರಗಳಲ್ಲಿ ನಾನೂ ಭಾಗಿಯಾಗುತ್ತಿದ್ದೆ. ಹಣೆಗೆ ಕುಂಕುಮ ಗಂಧ ಹಚ್ಚಿಕೊಂಡು ಬಿಳುಪಾದ ಪಂಜೆಯುಟ್ಟು ಅಪ್ಪಾಜಿಯ ಜೊತೆ ದೇವಾಲಯಕ್ಕೆ ಹೋಗುವಾಗ ಎಲ್ಲರ ಗಮನ ನನ್ನತ್ತ ಇರುತ್ತಿತ್ತು. ನನ್ನ ಹರೆಯದ ವಯಸಿನಲ್ಲಿ ಮುಖದ ಪ್ರಶಾಂತತೆಯನ್ನು ನೋಡಿ ನನಗೆ ಹಲವರು ನಮಸ್ಕಾರ ಮಾಡಿ ಮುಂದೆ ಹೋಗುತ್ತಿದ್ದರು. ನನಗೆ ತುಂಬಾ ನಾಚಿಕೆಯಾಗುತ್ತಿತ್ತು. ನನ್ನಂತ ಹರೆಯದ ಹುಡುಗನಿಗೆ ಇದು ಮುಜುಗರವಾಗುತ್ತಿತ್ತು. ಮತ್ತಷ್ಟು ಓದು 
ಕತ್ತೆಯನ್ನು ರಾಷ್ಟ್ರೀಯ ಪ್ರಾಣಿಯಾಗಿಸಬಹುದೇ?
– ಸುರೇಶ್ ಮುಗಬಾಳ್
ಭಾರತದ ರಾಷ್ಟ್ರೀಯ ಪ್ರಾಣಿ ಹುಲಿ, ಇದರ ಬಗ್ಗೆ ಅನೇಕರಿಗೆ ಹೆಮ್ಮೆ ಇದೆ, ದೇಶದ ಘನತೆಗೆ ತಕ್ಕಂತೆ ಹುಲಿಯು ರಾಷ್ಟ್ರ ಪ್ರಾಣಿಯಾಗಿರುವುದು ದೇಶಪ್ರೇಮಿಗಳಾದ ನಮಗೆ ಒಂದು ರೀತಿಯ ಗೌರವವೆಂದೇ ಭಾವಿಸಿದ್ದೇವೆ. 2006ರ ಹುಲಿಗಣತಿಯ ಪ್ರಕಾರ ಇಡೀ ಭಾರತದಲ್ಲಿ ಕೇವಲ 1411 ಹುಲಿಗಳು ಮಾತ್ರ ಬದುಕಿದ್ದವು. ಇನ್ನೇನು ನಮ್ಮ ರಾಷ್ಟ್ರ ಪ್ರಾಣಿ ನಮ್ಮ ದೇಶದಲ್ಲೇ ಇಲ್ಲವಾಗುವಂತಹ ಪರಿಸ್ಥಿತಿ ನಿರ್ಮಾಣವಾದಾಗ, ಹುಲಿಗಳ ರಕ್ಷಣೆಗಾಗಿ ಹಲವಾರು NGO ಗಳು ಸರ್ಕಾರಕ್ಕೆ ಈ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಈ ಬಗ್ಗೆ ಎಚ್ಚೆತ್ತುಕೊಂಡ ಭಾರತ ಸರ್ಕಾರ ಹುಲಿಗಳ ರಕ್ಷಣೆಗೆ ಮುಂದಾಯಿತಲ್ಲದೆ ಹುಲಿಗಳನ್ನು ಸಂರಕ್ಷಿಸಿ ಉಳಿಸುವ ಕಾರ್ಯಕ್ಕೆ ಮೊದಲಾಯಿತು. ಈ ಎಚ್ಚರಿಕೆ ಕ್ರಮದ ಫಲವಾಗಿ ಭಾರತದಲ್ಲಿ ಹುಲಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗತೊಡಗಿತು. 2011 ರ ಗಣತಿಯಲ್ಲಿ 1706 ರಷ್ಟಿದ್ದ ಹುಲಿಗಳ ಸಂಖ್ಯೆ 2014 ರಲ್ಲಿ 2226 ರಷ್ಟಾಯಿತು. ಭಾರತದ ಮಟ್ಟಿಗೆ ಇದೊಂದು ಧನಾತ್ಮಕ ಅಂಶವಾಗಿತ್ತು. ಇನ್ನು ಇತ್ತೀಚಿನ ಹುಲಿಗಣತಿಯ ಪ್ರಕಾರ ಗರಿಷ್ಠ 2500 ಹುಲಿಗಳಿವೆ ಎಂದು ಅಂದಾಜಿಸಲಾಗಿದೆ. ಸುಂದರ್ಬನ್ ಕಾಡುಗಳನ್ನು ಹುಲಿಗಳ ಸಂರಕ್ಷಿತಾರಣ್ಯ ಎಂದು ಗುರುತಿಸುವುದಕ್ಕೆ ಮೊದಲು ಈ ಅಂಶವನ್ನೊಮ್ಮೆ ನೋಡಿ. ಇಡೀ ಭಾರತದಲ್ಲಿ ಅತೀ ಹೆಚ್ಚು ಹುಲಿಗಳಿರುವುದು ನಮ್ಮ ಕರ್ನಾಟಕದಲ್ಲಿ. ಮತ್ತಷ್ಟು ಓದು 
ಭೈರಪ್ಪನವರ ಬದುಕು ನಮಗೇಕೆ ಮಾದರಿ
– ರಾಜಕುಮಾರ.ವ್ಹಿ.ಕುಲಕರ್ಣಿ
ಮುಖ್ಯ ಗ್ರಂಥಪಾಲಕರು
ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ
ಬಾಗಲಕೋಟ
ಎಸ್.ಎಲ್. ಭೈರಪ್ಪ ಕನ್ನಡದ ಪ್ರಮುಖ ಬರಹಗಾರರಲ್ಲೊಬ್ಬರು. ಇಪ್ಪತ್ತೈದು ಕಾದಂಬರಿಗಳು, ಆತ್ಮವೃತ್ತಾಂತ, ನಾಲ್ಕು ಸಾಹಿತ್ಯ ಚಿಂತನ ಗ್ರಂಥಗಳು ಮತ್ತು ಎರಡು ಸಂಪಾದಿತ ಕೃತಿಗಳ ಲೇಖಕರಾದ ಎಸ್.ಎಲ್.ಭೈರಪ್ಪನವರು ಕನ್ನಡ ಮಾತ್ರವಲ್ಲದೆ ಇತರ ಭಾಷೆಗಳಲ್ಲೂ ಓದುಗರ ದೊಡ್ಡ ಸಮೂಹವನ್ನು ಹೊಂದಿರುವ ವಿಶಿಷ್ಟ ಬರಹಗಾರ. ಭೈರಪ್ಪನವರ ಕಾದಂಬರಿಗಳು ತೆಲುಗು, ಮರಾಠಿ, ಹಿಂದಿ ಭಾಷೆಗಳೂ ಸೇರಿ ಭಾರತದ ಎಲ್ಲ 14 ಭಾಷೆಗಳಿಗೂ ಅನುವಾದಗೊಂಡಿವೆ. ಭೈರಪ್ಪನವರ ಬದುಕು ಮತ್ತು ಸಾಹಿತ್ಯ ಕುರಿತೇ ಇಪ್ಪತ್ತಕ್ಕೂ ಹೆಚ್ಚು ಕೃತಿಗಳು ಬೇರೆ ಬೇರೆ ಲೇಖಕರಿಂದ ರಚನೆಗೊಂಡಿರುವುದು ಇನ್ನೊಂದು ವಿಶೇಷ. ಕಾಲಕಾಲಕ್ಕೆ ತಮ್ಮ ಬರವಣಿಗೆಯಿಂದ ಭೈರಪ್ಪನವರು ಕನ್ನಡದ ಓದುಗರನ್ನು ಚಿಂತನೆಗೆ ಹಚ್ಚುತ್ತಲೇ ಬಂದಿರುವರು. ಅವರ ಕೃತಿಗಳು ಮನೋರಂಜನೆಗಾಗಿಯೋ ಇಲ್ಲವೇ ಸಮಯ ಕಳೆಯುವುದಕ್ಕಾಗಿಯೋ ಓದುವಂಥ ಪುಸ್ತಕಗಳ ಸಾಲಿನಲ್ಲಿ ನಿಲ್ಲುವ ಕೃತಿಗಳಲ್ಲ. ಭೈರಪ್ಪನವರ ಕಾದಂಬರಿಯೊಂದನ್ನು ಓದಿದ ನಂತರ ಅದು ಓದುಗನ ಮನಸ್ಸನ್ನು ಅನೇಕ ದಿನಗಳವರೆಗೆ ಕಾಡುತ್ತ ಹೊಸ ಚಿಂತನೆಯನ್ನು ಸೃಷ್ಟಿಸಿ ಬದುಕಿನ ಪರಿವರ್ತನೆಗೆ ಕಾರಣವಾಗುತ್ತದೆ. ಮತ್ತಷ್ಟು ಓದು 
ಸಾಹಿತ್ಯ ಪರಿಷತ್ ಯಾರೊಬ್ಬರ ಖಾಸಗಿ ಆಸ್ತಿಯಲ್ಲ..!
ಕಿರಣ್ ಕಿಜೋ
ಸಂಶೋಧನಾ ವಿದ್ಯಾರ್ಥಿ
ದ್ರಾವಿಡ ವಿಶ್ವವಿದ್ಯಾಲಯ, ಕುಪ್ಪಂ.
ಆಂಧ್ರ ಪ್ರದೇಶ.
ಮೊದಲಿಗೆ ಭೈರಪ್ಪನವರನ್ನು ಶಿವಮೊಗ್ಗದ ಸಾಹಿತ್ಯ ಸಮ್ಮೇಳನದಿಂದ ದೂರವಿಡುವಲ್ಲಿ ಯಶಸ್ವಿಯಾದ ರಾಜೇಂದ್ರ ಚೆನ್ನಿ ಹಾಗೂ ಅವರ ಪರಮ ಸಹಿಷ್ಣತೆಯ ಎಲ್ಲಾ ಸಂಗಡಿಗರಿಗೂ ಅಭಿನಂದನೆಗಳು! ಕೆಲ ದಿನಗಳ ಹಿಂದಷ್ಟೆ, ಸಾಹಿತ್ಯ ಸಂಭ್ರಮದ ಅಂಗಳದಲ್ಲಿ ಚಪ್ಪಲಿಯ ಮೂಲಕ ತಮ್ಮ ಶಕ್ತಿ ಪಾರಮ್ಯದೊಂದಿಗೆ ಗೆಲುವಿನ ನಗೆ ಬೀರಿದ್ದ ಎಡ ಪಡೆ, ಇದೀಗ ಶಿವಮೊಗ್ಗದಲ್ಲಿ ಮತ್ತೊಂದು ಸುತ್ತಿನ ಯಶಸ್ಸನ್ನು ಸಾಧಿಸಿ, ಗೆಲುವಿನ ಕೇಕೆ ಹಾಕಿದೆ. ಧಾರವಾಡದ ಮ್ಯಾನ್ ಆಫ್ ದಿ ಸೀರಿಸ್ ಚಪ್ಪಲಿ ಚಂದ್ರಶೇಖರ ಹಾಗೂ ಕುಂ.ವೀರಭದ್ರಪ್ಪನವರಾದರೆ, ಶಿವಮೊಗ್ಗೆಯಲ್ಲಿ ರಾಜೇಂದ್ರ ಚೆನ್ನಿ! ಈ ರೀತಿಯ ಗೆಲುವುಗಳು ಅವರಿಗೇನು ಹೊಸದಲ್ಲ ಬಿಡಿ. ದೊಡ್ಡ ದಾಖಲೆಯ ಇತಿಹಾಸವೇ ಅವರ ಬೆನ್ನ ಹಿಂದಿದೆ! ಮತ್ತಷ್ಟು ಓದು 
ನಾನೇ ಭಾರತ!
ಆಂಗ್ಲ ಮೂಲ: ರಾಜೀವ್ ಮಲ್ಹೋತ್ರಾ
ಅನುವಾದ : ಉದಯನ ಹೆಗಡೆ
ಭಾರತವು ಸೂಪರ್ ಪವರ್ ಆಗುವುದೆಂಬ ಕಲರವ ಎಲ್ಲೆಡೆ ಕೇಳಿಬರುತ್ತಿದೆ. ಆದರೆ ಸೂಪರ್ ಪವರ್‌ಗಳು ರಾಷ್ಟ್ರೀಯತೆಯ ಬಗೆಗೆ ಭ್ರಮೆಯನ್ನು ಹೊಂದಿವೆಯೇ? ಅಥವಾ ತಮ್ಮ ಹಿಂದುಳಿದ ನಾಗರೀಕತೆಯನ್ನು ಬದಲಾಯಿಸಲು ಬೇರೆಯವರಿಗೆ ಆಹ್ವಾನ ನೀಡುವುದು ಎಂದರ್ಥವೇ ? ಸೂಪರ್ ಪವರ್ ಆದ ಯಾವುದಾದರೂ ದೇಶವು ಯಾವತ್ತಾದರೂ ತನ್ನ ಪ್ರಜೆಗಳನ್ನು ವಿದೇಶೀ ಒಪ್ಪಂದದ ಏಜೆಂಟರಾಗಿ ಬಳಸಿಕೊಳ್ಳಲು ಅನವು ಮಾಡಿಕೊಡುತ್ತದೆಯೇ ? ಇಲ್ಲ. ಆದರೆ, ಭಾರತವು ಉದಾರವಾಗಿ ವಿದೇಶೀ ಒಪ್ಪಂದಗಳನ್ನು ಒಪ್ಪಿಕೊಳ್ಳುತ್ತಿದೆ. ಇದರಿಂದ ಭಾರತವವನ್ನು ಅವರು ವಿಭಕ್ತವಾಗೇ ಕಾಣುತ್ತಾರೆ. ಆದರೆ ಸೂಪರ್ ಪವರ್‌ಗಳು ಅಂದರೆ ತಪ್ಪು ತಿಳುವಳಿಕೆ ಎಂದರ್ಥವೇ ? ಮತ್ತಷ್ಟು ಓದು 
ಉತ್ತರಕಾಂಡದ ಓದು ಮತ್ತು ಜಿಜ್ಞಾಸೆ.
– ನವೀನ ಗಂಗೋತ್ರಿ
ರಾಮಾಯಣವನ್ನಾಗಲೀ ಮಹಾಭಾರತವನ್ನಾಗಲೀ ಅವಲೋಕಿಸುವ ಸಂದರ್ಭ ಆಗಾಗ ಬರುತ್ತಲೇ ಇರುತ್ತದೆ. ಅದೆಷ್ಟು ಬಾರಿಗೆ ಅವಲೋಕಿಸಿದರೂ ರಾಮನೆಂಬಾತ ಮಾತ್ರ ಎಟುಕಿಗೆ ನಿಲುಕದ, ಯಾವುದಕ್ಕೂ ಕಲಕದ, ಅರ್ಥವಾಗದ ಮತ್ತು ಅರ್ಥಮಾಡಿಸಿಕೊಳ್ಳುವ ಬಯಕೆಯೂ ಇಲ್ಲದ ಪಾತ್ರವಾಗಿಯೇ ನನಗೆ ತೋರುತ್ತಾನೆ. ಅವನ ಕೃತ್ಯಗಳ ಪರವಾಗಿ ಜಿಜ್ಞಾಸೆಗೆ ನಿಂತಾಗೆಲ್ಲ ಕೊನೆಯಲ್ಲಿ ಆತನ ನಿರ್ಧಾರಗಳೆಡೆಗೆ ಪ್ರಶ್ನೆಗಳೇ ಉಳಿಯುತ್ತವೆ. ಹಾಗಂತ ಅವನ ಕೃತ್ಯಗಳ ಪರವಲ್ಲದ ಕೋನ ಹಿಡಿದುಕೊಂಡೆನೋ, ಆತನ ‘ಧರ್ಮ’ವು ಎಲ್ಲೋ ಒಂದು ಸಣ್ಣ ಹೊಳಹಿನಲ್ಲಿ ಸುಳಿದು ವಿರೋಧವಾದದ ಬುಡವನ್ನೇ ಕಡಿಯುತ್ತದೆ. ರಾಮ ಇವತ್ತಿಗೂ ನನ್ನ ಅರಿವಿನ ಯಾವ ಅಂಚಿಗೂ ನಿಲುಕದವನು.
ಉತ್ತರಕಾಂಡವನ್ನು ಎತ್ತಿಕೊಂಡಾಗ ಕಾದಂಬರಿಕಾರನು ಕಥೆಯ ಹರಿವಿನಲ್ಲಿ ಒದಗಿಸಬಹುದಾದ ರಸಸೃಷ್ಟಿಯಲ್ಲಿ ಮಿಂದೇಳುವ ಬಯಕೆಯು ಹಿರಿದಾಗಿತ್ತಾದರೂ ರಾಮನನ್ನು ನನಗೆ ಹತ್ತಿರವಾಗಿಸಬಹುದೇನೋ ಅನ್ನುವ ಸಣ್ಣದೊಂದಾಸೆಯೂ ಮನಸಲ್ಲಿತ್ತು. ಮತ್ತಷ್ಟು ಓದು 
ರಾಹುಲ್ ಗಾಂಧಿಗೆ ಬಿ.ಪಿ.ಎಲ್ ಕಾರ್ಡ್ ನೀಡಲು ನಿರ್ಧಾರ: ಸಿಎಂ (ಸುಳ್ಸುದ್ದಿ)
– ಪ್ರವೀಣ್ ಕುಮಾರ್, ಮಾವಿನಕಾಡು
ರಾಹುಲ್ ಗಾಂಧಿ ಅವರಿಗೆ ರಾಜ್ಯ ಸರ್ಕಾರದ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಮೂಲಕ ಬಿ.ಪಿ.ಎಲ್ ಕಾರ್ಡ್ ನೀಡಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಅವರು ಇಂದು ಮೂರನೇ ಮಹಡಿಯಲ್ಲಿ ನಡೆದ ತುರ್ತು ಸಚಿವ ಸಂಪುಟದ ಸಭೆಯ ನಂತರ ಕರೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು.ಈ ಬಗ್ಗೆ ಸಚಿವ ಸಂಪುಟ ಒಮ್ಮತದ ನಿರ್ಧಾರ ಕೈಗೊಂಡಿದ್ದು ಮುಂದಿನ ಶುಕ್ರವಾರ ನವದೆಹಲಿಯಲ್ಲಿ ಅವರನ್ನು ಭೇಟಿಯಾಗಿ ಅವರಿಗೆ ಬಿ.ಪಿ.ಎಲ್ ಕಾರ್ಡ್ ನೀಡಲಾಗುವುದು ಎಂದು ತಿಳಿಸಿದರು. ಅದಕ್ಕಾಗಿ ಅಂದು ಅರ್ಧ ಗಂಟೆ ಭೇಟಿಯಾಗಲು ಅವರ ಬಳಿ ಸಮಯ ಕೇಳಿ ಪತ್ರ ಬರೆದಿದ್ದು ಪಕ್ಷಾಧ್ಯಕ್ಷರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಅವರ ಅನುಮತಿಯ ನಿರೀಕ್ಷೆಯಲ್ಲಿದ್ದೇವೆ ಎಂದು ತಿಳಿಸಿದರು. ಮತ್ತಷ್ಟು ಓದು 
ಬಿ.ಜಿ.ಎಲ್. ಸ್ವಾಮಿಯವರ ಕುರಿತಾದ ‘ಸ್ವಾಮಿಯಾನ’ ಪುಸ್ತಕ
– ಪ್ರಶಾಂತ್ ಭಟ್
ಬಿ.ಜಿ.ಎಲ್. ಸ್ವಾಮಿ ಕನ್ನಡಿಗರಿಗೆ ಪರಿಚಿತ ಹೆಸರು. ಅವರ ‘ಹಸುರು ಹೊನ್ನು’, ‘ಕಾಲೇಜು ರಂಗ’, ‘ಸಾಕ್ಷಾತ್ಕಾರದ ಹಾದಿಯಲ್ಲಿ’, ‘ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೇರಿಕ’ ಇತ್ಯಾದಿ ಪುಸ್ತಕಗಳು ಹಾಸ್ಯದ ಜೊತೆಗೆ ಸಸ್ಯಶಾಸ್ತ್ರದ ಕುರಿತಾದ ಅರಿವನ್ನೂ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸಿದೆ. ೧೯೮೦ರಲ್ಲೇ ಧೈವಾಧೀನರಾದ ಸ್ವಾಮಿಯವರು ಹೇಗಿದ್ದರು, ಅವರ ಹುಡುಕಾಟದ ಶೈಲಿ, ಜೀವನ ವಿಧಾನ ಇನ್ನಿತರ ವಿಷಯಗಳ ಬಗ್ಗೆ ತಿಳಿದುಕೊಳ್ಳುವ ಅಂತ ಹುಡುಕಾಡಿದರೆ ಸಿಗುವ ಮಾಹಿತಿ ತುಂಬಾ ಕಡಿಮೆ. ಹೀಗಾಗಿ ಅವರ ಪುಸ್ತಕಗಳ ಮೂಲಕ ಮತ್ತು ಅವರ ತಂದೆ ಡಿ.ವಿ.ಗುಂಡಪ್ಪನವರ ಕುರಿತಾದ ಚಿತ್ರಣಗಳಲ್ಲಿ ಅಲ್ಲೊಂದಿಷ್ಟು ಇಲ್ಲೊಂದಿಷ್ಟು ನುಸುಳುವ ( ಉದಾಹರಣೆಗೆ ಡಿ.ವಿ.ಜಿ.ಯವರ ಮಗಳು ತಂದೆಯ ಬಗ್ಗೆ ಬರೆಯುವಾಗ ‘ಸ್ವಾಮಿ ನಮ್ಮನ್ನು ತುಂಬಾ ಗೋಳು ಹೊಯ್ಕೊಳ್ಳುವವನು, ಆದರೆ ಯಾವಾಗ ಬರೆಯಲು ಶುರು ಮಾಡಿದನೋ ಆವಾಗಿನಿಂದ ಗಂಭೀರನಾದ. ಹಾಸಿಗೆಗೆ ಕಾಲು ಒರಗಿಸಿ ಬರೆಯುತ್ತಿದ್ದ’ ಇತ್ಯಾದಿ) ಪ್ರಸಕ್ತಿಗಳೇ ಅಧಿಕ. ಮತ್ತಷ್ಟು ಓದು 
ಸಾಗುವ ಹಾದಿ ದುರ್ಗಮವಾಗಿದ್ದರೇನು.. ಸಾಧಿಸುವ ಛಲವಿದ್ದಾಗ..!
– ಸುರೇಶ್ ಕುಮಾರ್ ಎಂ.ಆರ್
ಜಗತ್ತು ಕಂಡ ಶ್ರೇಷ್ಠ ಟೆನಿಸ್ ಆಟಗಾರ್ತಿ, ಟೆನಿಸ್ ಅಂಗಳಕ್ಕಿಳಿದರೆ ಸೋಲಿನ ಮುಖವನ್ನು ನೋಡಲೇಬಾರದು ಎಂಬಂತಹ ಆತ್ಮವಿಶ್ವಾಸ. ಎದುರಾಳಿ ಆಟಗಾರ್ತಿಯ ಬಿರುಸಿನ ಹೊಡೆತಗಳನ್ನು ಲೀಲಾಜಾಲವಾಗಿ ರಿಟರ್ನ್ ಮಾಡುವ ಈಕೆಯದು ಅಂತಿಂತಹ ಶೈಲಿಯಲ್ಲ. ಇವಳಿಗೆ ಇವಳೇ ಸಾಟಿ, ಇವಳ ಹೊಡೆತಗಳನ್ನು ಮಹಿಳಾ ಆಟಗಾರ್ತಿಯರ ಪೈಕಿ ಅತೀ ಬಲಿಷ್ಠ ಹೊಡೆತಗಳು ಎಂದು ಕರೆಯುವುದುಂಟು. ರಷ್ಯಾದ ಮಾರಿಯಾ ಶಾರಪೋವಳ ಹೊಡೆತಗಳಿಗೂ ಬಿರುಸಿನ ಹೊಡೆತಗಳಿವಳವು. ಇವಳ ಅಕ್ಕ ವೀನಸ್ ವಿಲಿಯಮ್ಸ್ ಕೂಡ ಅವಳ ಆಟಕ್ಕೆ ಸಾಟಿಯಲ್ಲ (ಸಾಂದರ್ಭಿಕ). ಅವಳೇ ಸೆರೆನಾ ಜಮೆಕಾ ವಿಲಿಯಮ್ಸ್. ಕೆಲವು ದಿನಗಳ ಹಿಂದೆ ಮುಕ್ತಾಯಗೊಂಡ ಆಸ್ಟ್ರೇಲಿಯನ್ ಓಪನ್ ಟೆನಿಸ್ ಗ್ರಾಂಡ್ ಸ್ಲ್ಯಾಮ್ ಟೂರ್ನಿಯ ಮಹಿಳಾ ವಿಭಾಗದ ಜಯಶಾಲಿ ಈಕೆ, ಅದೂ ತನ್ನ ಅಕ್ಕನನ್ನೇ ಅಂತಿಮ ಹಂತದ ಪೈಪೋಟಿಯಲ್ಲಿ ಅತೀ ಸಲೀಸಾಗಿ ಸೋಲಿಸಿ 23ನೇ ಗ್ರಾಂಡ್ ಸ್ಲ್ಯಾಮ್ (ಮಹಿಳಾ ಸಿಂಗಲ್ಸ್ ವಿಭಾಗ) ಎತ್ತಿಹಿಡಿದ ಛಲಗಾರ್ತಿ. ಮತ್ತಷ್ಟು ಓದು 





