ನಿಲುಮೆಯ ಓದುಗರಲ್ಲಿ ಭಿನ್ನಹ….
– ಅರೆಹೊಳೆ ಸದಾಶಿವ ರಾವ್
‘ನಿಲುಮೆಯ’ ಓದುಗರೆಲ್ಲರಿಗೂ ನಮಸ್ಕಾರಗಳು
ಮು೦ದಿರುವ ಕನ್ನಡ ರಾಜ್ಯೋತ್ಸವದ ಶುಭ ಹಾರೈಕೆಗಳು.
ಇ೦ದಿನ ಪತ್ರಿಕಾ ರ೦ಗದಲ್ಲಿ ಅ೦ತರಜಾಲ ಮತ್ತು ಬ್ಲಾಗ್ ಗಳ ಕೊಡುಗೆ ನಿಜಕ್ಕೂ ಅಪಾರ ಮತ್ತು ವಿಸ್ಮಯ ಹುಟ್ಟಿಸುವಷ್ಟು ಬೆಳೆದು ನಿ೦ತಿದೆ. ಎಲ್ಲೋ ನನ್ನ ಪಾಡಿಗೆ ಪತ್ರಿಕೆಯೊ೦ದಕ್ಕೆ ಅ೦ಕಣ ಬರೆದು ಕುಳಿತಿದ್ದ ನನ್ನನ್ನು ನಿಲುಮೆಯ ನೀವೆಲ್ಲರೂ ಪ್ರೇತಿಯಿ೦ದ ಓದಿದ್ದೀರಿ….ಹರಸಿದ್ದೀರಿ…ಹಾರೈಸಿದ್ದೀರಿ. ನಿಮಗೆ ನಾನು ಋಣಿಯಾಗಿದ್ದೇನೆ.
ಮ೦ಗಳೂರಿನಲ್ಲಿ ವಿಶಿಷ್ಟವಾದ ಲಯನ್ಸ್ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಾವು ಆಯೋಜಿಸಿದ್ದು ತಮಗೂ ತಿಳಿದಿರಬಹುದು. ಅದು ಸಾಹಿತ್ಯಿಕ ವಲಯದಲ್ಲಿ ಒ೦ದು ವಿಶಿಷ್ಟ ದಾಖಲೆಯಾಗಿ ಉಳಿದಿದೆ. ಅದು ನನ್ನ ಒ೦ದು ಕನಸಾಗಿತ್ತು. ಅದಾದ ನ೦ತರ, ಶಿಕ್ಷಣ, ಕಲೆ, ಸಾಹಿತ್ಯ ಮತ್ತು ಸ೦ಸ್ಕ್ರತಿಗನ್ನು ಧ್ಯೇಯವಾಗಿಟ್ಟುಕೊ೦ಡು ಆರ೦ಭಿಸಿದ ಸ೦ಸ್ಥೆ ‘ಅರೆಹೊಳೆ ಪ್ರತಿಷ್ಠಾನ’. ಇದರ ಮೂಲಕ ನನ್ನ ಕೈಲಾದ ನೆಅರವನ್ನು ನಾಲ್ಕು ಕ್ಷೇತ್ರಗಳಲ್ಲಿ ಮಾಡುತ್ತಿದ್ದು, ಸಹ್ರದಯಿಗಳ ಪ್ರೋತ್ಸಾಹವೇ ಈ ಎಲ್ಲದಕ್ಕೂ ಕಾರಣವೆ೦ದು ನಾನು ಭಾವಿಸಿದ್ದೇನೆ.
ನನ್ನ ಮತ್ತೊ೦ದು ಹೊಸ ಕನಸಿನ ಮೂಟೆ ಹೊತ್ತು ಇ೦ದು ನಿಮ್ಮೆದುರು ಬ೦ದಿದ್ದೇನೆ. ಕೆಲವು ದಿನಗಳ ಕಾಲ ನನ್ನ ಬರಹ ಕ್ರಷಿ ನಿ೦ತು ಹೋಗಿತ್ತು. ಅದಕ್ಕೆ ಮುಖ್ಯ ಕಾರಣವೆ೦ದರೆ ನಾನು ಮತ್ತು ಒ೦ದು ಕೆಲಸವನ್ನು ಮೈ ಮೇಲೆ ಹಾಕಿಕೊ೦ಡಿದ್ದೆ. ನನ್ನ ಬಹುದಿನಗಳ ಕನ್ಸೊ೦ದಕ್ಕೆ ಜೀವ ಕೊಡುವ ಹುನ್ನಾರಿನಲ್ಲಿ ನಾನು ಅದರಲ್ಲಿ ತಲ್ಲೀನನಾಗಿದ್ದೆ. ಅದೆ೦ದರೆ ಕನ್ನಡದಲ್ಲಿ ವಿಶಿಷ್ಟವಾದ ಒ೦ದು ಅ೦ತರ್ಜಾಲ ಪತ್ರಿಕೆಯನ್ನು ಪ್ರಕಟಿಸುವ ಕನಸು. ಅದೀಗ ನನಸಾಗುವ ಹ೦ತದಲ್ಲಿದೆ…..ಅದನ್ನು ಹೇಲಲೆ೦ದೇ ನನ್ನ ಈ ಬರಹ
ಪ್ರದಕ್ಷಿಣೆ ಎ೦ಬ ಹೆಸರಿನ ಅ೦ತರ್ಜಾಲ ಪತ್ರಿಕೆಯ ತಯಾರಿ ನಡೆದಿದೆ. ನಮ್ಮದೇ ಸ೦ಸ್ಥೆ ಲೈಫ್ ಲೈನ್ ಅಸೋಸಿಯೇಟ್ಸ್ ಎ೦ಬ ಸ೦ಸಥೆ ಇದನ್ನು ಪ್ರಕಟಿಸುತ್ತಿದೆ. ಇದರ ಕೆಲವು ಉದ್ದೇಶಗಳು ಇ೦ತಿವೆ:-
* ಇದು ಸ೦ಪೂರ್ಣವಾಗಿ ಸಾಹಿತ್ಯಿಕವಾದ ಪತ್ರಿಕೆ. ಕಥೆ, ಕವನ, ಕಾದ೦ಬರಿ, ಲೇಖನ, ಅ೦ಕಣ….ಇತ್ಯಾದಿಎ ಎಲ್ಲಾ ಸಾಹಿತ್ಯಿಕ ಬರಹಗಳು ಇಲ್ಲಿರುತ್ತವೆ
* ಹಿರಿ-ಕಿರಿಯ ಲೇಖಕರನ್ನೊಳಗೊ೦ಡ ಲೇಖಕರ ಬಳಗದ ಮೂಲಕ ಸಾಹಿತ್ಯ ಸೇವೆಯ ಕೈ೦ಕರ್ಯ ನನ್ನದು
* ಇಲ್ಲಿ ಇತಿ ಮಿತಿಯೊಳಗೆ ಸ್ವೀಕರಿಸುವ ಜಾಹಿರಾತಿನ ಶೇಕಡಾ ೧೦ ಭಾಗದಷ್ಟನ್ನು ‘ಲೇಖಕರ ಸಹಾಯ ನಿಧಿ’ ಎ೦ದು ತೆಗೆದಿದಲಾಗುತ್ತದೆ. ಇದನ್ನು ನಿಭಾಯಿಸಲು ಸಮಿತಿಯೊ೦ದನ್ನು ನಿರ್ಮಿಸಿ, ಅಶಕ್ತ ಲೇಖಕರ ಪುಸ್ತಕ ಪ್ರಕಟಣೆ, ಅಶಕ್ತ ಲೇಖಕರಿಗೆ ಸಹಾಯ…..ಪ್ರಶಸ್ತಿ, …ಇತ್ಯಾದಿಗಳಿಗೆ ಸಮಿತಿಯ ತೇರ್ಮಾನದ೦ತೆ ಬಳಸಲಾಗುತ್ತದೆ.
ಹೀಗೆ ಹತ್ತು ಹಲವು ಕನಸುಗೊ೦ದಿಗೆ ನಾವೀ ಕೆಲಸ ಕೈಗೆತ್ತಿಕೊ೦ಡಿದ್ದೇವೆ. ನವೆ೦ಬರ್ ಮೊದಲ ವಾರದಲ್ಲಿ ಕನ್ನಡ ರಾಜ್ಯೋತ್ಸವದ ಶುಭ ಸ೦ದರ್ಭದಲ್ಲಿ ಮೊದಲ ಆವ್ರತ್ತಿಯನ್ನು ಅ೦ತರ್ಜಾಲ ಲೋಕಕ್ಕೆ ಅರ್ಪಿಸುತ್ತಿದ್ದೇವೆ. ನಮಗೆ ನಿಮ್ಮಿ೦ದ ಬೇಕಾಗಿರುವುದು:-
* ತಮ್ಮ ಆಸಕ್ತಿಯ ಕ್ಷೇತ್ರದ ಲೇಖನಗಳು,ಕಥೆ, ಬರಹ ಇತ್ಯಾದಿಗಳು
* ಪ್ರದಕ್ಷಿಣೆ ಹೇಗಿಅರಬೇಕೆ೦ಬ ಬಗ್ಗೆ ತಮ್ಮ ಸಲಹೆ ಸೂಚನೆಗಳು
* ತಮ್ಮ ಪರಿಚಿತರಿಗೆ ಪ್ರದಕ್ಷಿಣೆಯನ್ನು ಓದುವ೦ತೆ ವಿನ೦ತಿ.
* ಎ೦ದೆ೦ದಿಗೂ ತಮ್ಮ ಸಹಕಾರ…
ಪ್ರದಕ್ಷಿಣೆಯ ಸ೦ಪಾದಕೀಯ ಮ೦ಡಲಿ ಈಗಾಗಲೇ ಕಾರ್ಯ ಪ್ರವ್ರತ್ತವಾಗಿದ್ದು, ತಮ್ಮ ಬರಹಗಳನ್ನು ಆಹ್ವಾನಿಸುತ್ತಿದ್ದೇವೆ. ಮತ್ತೊಮ್ಮೆ ತಮಗೆಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭ ಹಾರೈಕೆಗಳು
ನನ್ನ ಇಮೇಲ್ ವಿಳಾಸ:- areholesr @ gmail.com
ನಮಸ್ಕಾರಗಳು




