ವಿಷಯದ ವಿವರಗಳಿಗೆ ದಾಟಿರಿ

Archive for

28
ನವೆಂ

ಜಾಬ್ಸ್ ಜಾತ್ರೆಯಲ್ಲಿ ಮರೆತೋದ ‘ರಿಚ್ಚಿ’

-ಪ್ರಶಸ್ತಿ ಪಿ

ಆಪಲ್ ಸ್ಥಾಪಕ ಸ್ಟೀವ್ ಜಾಬ್ಸನ ವಿಚಾರಗಳೆಲ್ಲಾ ಕದ್ದಿದ್ದು. ಅವನ ಸ್ವಂತದ್ದು ಏನೂ ಇಲ್ಲ. ಅವನ ಸಾವಿಗೆ ಅಷ್ಟು ಮನ್ನಣೆ. C, Unix ಗಳನ್ನು ಕಂಡು ಹಿಡಿದ ಡೆನ್ನಿಸ್ ರಿಚ್ಚಿಯ ಸಾವು ಯಾರೂ ಕಂಡೂ ಕೇಳದಂತೆ ಮರೆಯಾಗಿ ಹೋಯಿತಲ್ಲಾ ಎಂಬ ವೇದನೆಯ ಹಲರೂಪಾಂತರಗಳು ಅಂತರ್ಜಾಲದಲ್ಲೆಲ್ಲಾ ಸುತ್ತಾಡುತ್ತಿದ್ದವು ಕೆಲವಾರದ ಹಿಂದೆ. ಇನ್ನೂ ಅಲ್ಲೊಂದು , ಇಲ್ಲೊಂದು ಅಂತಹ ಫೋಟೋಗಳು, ಪೋಸ್ಟುಗಳು ಸುತ್ತಾಡುತ್ತಲೇ ಇವೆ. ಇಬ್ಬರಲ್ಲಿ ಯಾರು ಹೆಚ್ಚೆಂಬ ವಿಮರ್ಶೆಯನ್ನು ಮಾಡೋದು ಆ ದೈತ್ಯ ಪ್ರತಿಭೆಗಳೆದುರು ಪಾಮರನಾದ ನನ್ನಿಂದಂತೂ ಅಸಾಧ್ಯ. ಆದರೆ ಇಂದು ಮತ್ತೊಂದು ಅಂತಹದೇ ಪೋಸ್ಟನ್ನೋದಿದಾಗ ನನಗನಿಸಿದ ಭಾವಗಳನ್ನು ಹಂಚಿಕೊಳ್ಳುತ್ತಿದ್ದೇನೆ.

ಪಿಯುಸಿಯಲ್ಲಿ ಕಂಪ್ಯೂಟರ್ ಓದಿದವರಿಂದ ಹಿಡಿದು, BCA, BE, B.Com (Computers) , Diploma ಹೀಗೆ ಹಲವು ವಿಷಯಗಳನ್ನೋದಿದ ಜನರೆಲ್ಲಾ C ಎಂಬ Programming ಭಾಷೆಯನ್ನು ಓದೇ ಇರುತ್ತಾರೆ. ಬಲ್ಬು ಕಂಡುಹಿಡಿದವರು ಯಾರು ಎಂದರೆ ಎಂಥಾ ಟ್ಯೂಬ್ಲೈಟಾದರೂ ಥಾಮಸ್ ಅಲ್ವಾ ಎಡಿಸನ್ ಅಂತ ಹೇಳ್ತಾರಲ್ವಾ ಹಾಗೇನೆ ಇವರಿಗೆಲ್ಲಾ C ಯನ್ನು ಕಂಡುಹಿಡಿದವರು ಯಾರು ಅಂದರೆ ತಟ್ಟನೆ ಬರುವ ಉತ್ತರ ಡೆನ್ನಿಸ್ ರಿಚ್ಚಿ, ಕೆರಿಂಗ್ ಹ್ಯಾಮ್. ನಾನೂ ಓದಿ ಇಷ್ಟಪಟ್ಟ Programming ನ ಮೊದಲ ಪುಸ್ತಕ The C Programming Language . ಆಗ ರಿಚ್ಚಿಯ ಬಗ್ಗೆ ಅಷ್ಟು ತಿಳಿದಿರಲಿಲ್ಲ. ನಂತರ ಮೂರನೆಯ ಸೆಮಿಸ್ಟರಿನಲ್ಲಿ Unix ಅನ್ನೋ ವಿಷಯ ಇತ್ತು. ಅದರ ಬಗ್ಗೆ ಗೊತ್ತಿಲ್ದೇ ಇರೋರಿಗೆ ಹೇಳೋದಾದರೆ ನೀವು ಬಳಸ್ತಾ ಇರೋ Windows XP, Windows 7, Vista ಗಳಂತೆ ದುಡ್ಡು ಕೊಟ್ಟು Genuine ಅವತರಣಿಕೆ ಪಡೆಯಬೇಕೆಂಬ ರೇಜಿಗೆಯಿಲ್ಲದ್ದದು, ಯಾರು ಬೇಕಾದರೂ ಉಚಿತವಾಗಿ ಬಳಸಬಹುದಾದ ದತ್ತಾಂಶ Open Source ಗಳ ಪರಿಕಲ್ಪನೆಯನ್ನು ಹುಟ್ಟಿಹಾಕಿದ್ದೇ Unix ನ ಮತ್ತೊಂದು ರೂಪ Linux. ಇರಲಿ, ಆ Linux ಅನ್ನು ರೂಪಿಸುವಲ್ಲಿಯೂ ಕೆನ್ ಥಾಮ್ಸನ್ ಅನುವವರೊಂದಿಗೆ ಕೈ ಜೋಡಿಸಿದ್ದು ಇದೇ ರಿಚ್ಚಿ.

ಸರಿ, ಪ್ರೋರ್ಗಾಮಿಂಗ್ ಭಾಷೆಯನ್ನು , ಇನ್ನೊಂದು ಕಂಪ್ಯೂಟರ್ ಭಾಷೆಯನ್ನು ಕಂಡುಹಿಡಿದಾಕ್ಷಣ ಅದು ಮಹಾನ್ ಸಾಧನೆಯೇ ಎಂಬ ಸಂದೇಹ ಈಗಾಗಲೇ ಬಂದಿದ್ದರೆ ಅದನ್ನು ಪರಿಹರಿಸಲೋಸುಗ ಈ ಕೆಲವು ಸಾಲುಗಳು..ರಿಚ್ಚಿ ಸತ್ತ ದಿನ ಅವರ ದೀರ್ಘ ಕಾಲೀನ ಸಹೋದ್ಯೋಗಿ ರೋಬ್ ಪೈಕ್ ಸೂಚಿಸಿದ ಸಂತಾಪ ನುಡಿಗಳಿಂದ.

ಮತ್ತಷ್ಟು ಓದು »