ವಿಷಯದ ವಿವರಗಳಿಗೆ ದಾಟಿರಿ

Archive for

30
ನವೆಂ

ಮಡೆಸ್ನಾನದ ಮರ್ಮವೇನು ?

-ಸಂತೋಷ ಕುಮಾರ್

ಕುಕ್ಕೆ ಸುಬ್ರಮಣ್ಯದಲ್ಲಿ ಜರುಗ ಬೇಕಾಗಿದ್ದ ಮಡೆಸ್ನಾದ ಆಚರಣೆಯನ್ನು ರದ್ದುಗೊಳಿಸಬೇಕೇಂದು ಅಲ್ಲಿನ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು. ಆದರೆ ದಿಡೀರ್ ಬೆಳವಣಿಗೆ ಎಂಬಂತೆ ನಿಷೇಧದ ಆದೇಶದ ಮರುದಿನವೇ ನಿಷೇಧವನ್ನು ರದ್ದುಪಡಿಸುವ ಆದೇಶವನ್ನೂ ಸಹ ನೀಡಲಾಯಿತು. ಇದನ್ನು ರಾಜಕೀಯ ವ್ಯವಸ್ಥೆಯ ಲೋಪದೋಷ ಅಥವಾ ದೌರ್ಬಲ್ಯ ಹಾಗೂ ಆಚರಣೆಯ ಅಥವಾ ಅದನ್ನು ಆಚರಿಸುವವರ ಸಂಸ್ಕೃತಿಯ ವಿಶಿಷ್ಟತೆ ಎಂಬ ಎರಡೂ ವಿಭಿನ್ನ ಆಯಾಮಗಳಲ್ಲಿ ವಿಶ್ಲೇಷಿಸಬಹುದು. ಇಲ್ಲಿ ಎರಡನೇ ಆಯಾಮದಿಂದ ಈ ಘಟನೆಯನ್ನು ವಿಶ್ಲೇಷಿಸಲು ಪ್ರಯತ್ನಿಸಲಾಗುವುದು. ಕುಕ್ಕೆ ಸುಬ್ರಮಣ್ಯದ ಮಡೆಸ್ನಾನದ ಆಚರಣೆಯನ್ನು ನಿಷೇಧಿಸಬೇಕೆಂಬ ಆದೇಶ ಹೊರಡಿಸುತ್ತಿದ್ದಂತೆ ವಿಶೇಷವಾಗಿ ನಮಗೆ ಆ ಆಚರಣೆಯಲ್ಲಿ ಭಾಗವಹಿಸುವ ಭಕ್ತರು ಹೇಗೆ ಪ್ರತಿಸ್ಪಂದಿಸುತ್ತಾರೆ ಎಂಬ ಕುತೂಹಲವಿತ್ತು.

ಮತ್ತಷ್ಟು ಓದು »

30
ನವೆಂ

ಕಲಸೆ (ನಾಡಕಲಸಿ) ದೇವಸ್ಥಾನ

-ಪ್ರಹಸ್ತಿ ಪಿ 

ಸಾಗರ ತಾಲೂಕಿನ ಇತಿಹಾಸ ಪ್ರಸಿದ್ದ ದೇವಸ್ಥಾನಗಳಲ್ಲಿ ಕಲಸೆ, ನಾಡಕಲಸಿಯೂ ಒಂದು. ಸಾಗರದವನಾಗಿಯೂ ಅದನ್ನು ನೋಡಲಾಗಿರದ ಬಗ್ಗೆ ಸ್ವಲ್ಪ ಬೇಸರವಿತ್ತು. ಬೆಳಗ್ಗೆ ೮ಕ್ಕೆ, ಮಧ್ಯಾಹ್ನ ಒಂದಕ್ಕೆ ಮಾತ್ರ ಅಲ್ಲಿಗೆ ಬಸ್ಸಿನ ಸೌಕರ್ಯವಿದೆ ಎಂಬ ಗೆಳೆಯರ ಮಾತೂ ನೋಡದಿರುವುದಕ್ಕೊಂದು ಪಿಳ್ಳೆ ನೆವವಾಗಿತ್ತು. ಆದರೆ ಅಲ್ಲಿಗೆ ಹೋದ ಮೇಲೆಯೇ ತಿಳಿದಿದ್ದು. ಅದೆಷ್ಟು ಸುಂದರ ಎಂದು.

ಹೋಗುವ ಮಾರ್ಗ:
ಸಾಗರದಿಂದ ಸುಮಾರು ಎಂಟು ಕಿ.ಮೀ ದೂರವಷ್ಟೇ ನಾಡಕಲಸಿ ಅಥವಾ ಕಲಸಿಯ ದೇವಸ್ಥಾನ. ಸಾಗರದಿಂದ ಹೋಗುವುದಾದರೆ ಸೊರಬ ಮಾರ್ಗದಲ್ಲಿ ಸುಮಾರು ೫ ಕಿ.ಮೀ ಹೋದ ಕೂಡಲೇ ಕಲಸಿ ರಾಮೇಶ್ವರ ದೇವಸ್ಥಾನಕ್ಕೆ ದಾರಿ ಅಂತ ಬೋರ್ಡೊಂದು ಸಿಗುತ್ತದೆ. ಅಲ್ಲಿಂದ ಸುಮಾರು ಮೂರು ಕಿ.ಮೀ ಬಲಕ್ಕೆ ಹೋದರೆ ಸಿಗುವುದು ಕಲಸಿ ಊರು. ಅಲ್ಲಿಂದ ಸ್ವಲ್ಪ ಒಳಗಡೆ ಇದೆ ದೇವಸ್ಥಾನ. ಸೊರಬಕ್ಕೆ ತುಂಬಾ ಬಸ್ಸುಗಳಿವೆ. ಹಾಗಾಗಿ ಸೊರಬ ಬಸ್ಸಿನಲ್ಲಿ ಕಲಸಿ ಬೋರ್ಡಿನಲ್ಲಿ ಇಳಿದುಕೊಂಡರೆ ಮೂರು ಕಿ.ಮೀ ನಡೆದು ಕಲಸಿ ದೇವಸ್ಥಾನಕ್ಕೆ ಯಾವಾಗಲಾದರೂ ಹೋಗಬಹುದು. ಸ್ವಂತ ವಾಹನವಿದ್ದರೆ ಇನ್ನೂ ಉತ್ತಮ.

ಇತಿಹಾಸ:
ಇಲ್ಲಿ ಶ್ರೀ ಮಲ್ಲಿಕಾರ್ಜುನ ಮತ್ತು ರಾಮೇಶ್ವರ ದೇವಸ್ಥಾನಗಳಿವೆ. ಈ ಜೋಡಿ ದೇಗುಲಗಳನ್ನು ಹೊಯ್ಸಳ ರಾಜ ಬಳೆಯಣ್ಣ ಹೆಗ್ಗಡೆ ಕ್ರಿ.ಶ ೧೨೧೮ ರಲ್ಲಿ ಕಟ್ಟಿಸಿದನೆಂದು ಸಂಶೋಧನಕಾರರು ಹೇಳುತ್ತಾರೆ.

ಮೊದಲಿಗೆ ಹೋಗುತ್ತಿದ್ದಂತೆಯೇ ನಿಮ್ಮನ್ನು ಸ್ವಾಗತಿಸುವುದು ದೇಗುಲದ ಎದುರಿಗೆ ಅಥವಾ ಹೋಗುವವರ ಬಲಗಡೆಗೆ ಇರುವ ನಾಗರ ಬನ.ಅದಕ್ಕೆ ನಮಸ್ಕರಿಸಿ ಮೊದಲು ಶ್ರೀ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಹೋದೆವು.

ಮತ್ತಷ್ಟು ಓದು »