ವಿಷಯದ ವಿವರಗಳಿಗೆ ದಾಟಿರಿ

Archive for

29
ನವೆಂ

ನಿರ್ವಾತದಲ್ಲಿ ಬೆಳಕಿನ ಸೃಷ್ಟಿ!

-ವಿಷ್ಣುಪ್ರಿಯ

ಕಾಂತವಲಯದ ದಿಕ್ಕನ್ನು ಪ್ರತಿ ಸೆಕೆಂಡಿಗೆ ಹಲವು ಬಿಲಿಯನ್ ಬಾರಿ ಬದಲಾಯಿಸುವ ಮೂಲಕ ವಿಜ್ಞಾನಿಗಳು ಈ ವಿಶೇಷ ಫಲಕವನ್ನು ಸೃಷ್ಟಿಸಿದ್ದಾರೆ. ಆದರೂ ಸಹ ಈ ಫಲಕವು ಬೆಳಕಿನ ವೇಗದ ಶೆಕಡಾ 25ರಷ್ಟು ವೇಗದಲ್ಲಷ್ಟೇ ಚಲಿಸುವುದಕ್ಕೆ ಸಾಧ್ಯವಾಯಿತು. ಆದಾಗ್ಯೂ ಇಷ್ಟು ವೇಗದಲ್ಲಿ ಫಲಕ ಚಲಿಸುತ್ತಿದ್ದ ಕಾರಣದಿಂದಾಗಿ ನಿರ್ವಾತದಲ್ಲಿ ಸೃಷ್ಟಿಯಾಗುತ್ತಿದ್ದ ಬೆಳಕಿನ ಕಣಗಳನ್ನು ಅರ್ಥಾತ್ ಜೊತೆ ಜೊತೆಯಾಗಿ (ಅವಳಿಗಳು) ಸೃಷ್ಟಿಯಾಗುತ್ತಿದ್ದ ಫೋಟಾನ್ಗಳನ್ನು ಗುರುತಿಸಿ ಅವುಗಳ ಗುಣಲಕ್ಷಣಗಳನ್ನು ಅಳೆಯುವುದಕ್ಕೆ ವಿಜ್ಞಾನಿಗಳಿಗೆ ಸಾಧ್ಯವಾಗಿದೆ.

ನಿರ್ವಾತ ಎಂದರೆ ಸಂಪೂರ್ಣ ಖಾಲಿ ಎಂದರ್ಥವಲ್ಲ. ಅಲ್ಲಿ ಮಿಂಚಿ ಮರೆಯಾಗುಂಥ ಫೋಟಾನ್ಗಳಿರುತ್ತವೆ. ಅಂದರೆ ವರ್ಚುವಲ್ ಅಥವಾ ಭ್ರಾಮಕ ಫೋಟಾನ್ಗಳಿರುತ್ತವೆ. ಈ ರೀತಿ ನಿರ್ವಾತದಲ್ಲಿ ಸೃಷ್ಟಿಯಾಗುವಂಥ ವರ್ಚುವಲ್ ಫೋಟಾನ್ಗಳು ಅಥವಾ ಭ್ರಾಮಕ ಫೋಟಾನ್ಗಳನ್ನು ಬಹುತೇಕ ಬೆಳಕಿನ ವೇಗದಲ್ಲಿ ಚಲಿಸುತ್ತಿರುವಂಥ ಫಲಕದಿಂದ ಪ್ರತಿಫಲಿಸುವಂತೆ ಮಾಡಿದರೆ ನೈಜ ಫೋಟಾನ್ಗಳ ಅರ್ಥಾತ್ ಬೆಳಕಿನ ಸೃಷ್ಟಿಯಾಗುತ್ತದೆ.
ಮತ್ತಷ್ಟು ಓದು »

29
ನವೆಂ

ಎಚ್ಚರ ಬ್ಲಾಗಿಗರೆ, ಕಳ್ಳರಿಹರು

-ಪ್ರಶಸ್ತಿ ಪಿ.

ಒಳ್ಳೆ ಸಾಹಿತ್ಯವನು ಸೃಷ್ಟಿಸಿಯೂ ಮುಂದೆ
ಕಳ್ಳನೆಂದೊಂದು ದಿನ ಬಿರುದು ಬೇಕೆ?
ನೀ ಮೊದಲು ಬರೆದದ್ದು ಎಂಬುದಕೆ ಏನುಂಟು
ಮಿಥ್ಯಾರೋಪಗಳ ಒಪ್ಪಬೇಕೆ?
ಪುಗಸಟ್ಟೆ ಮಾತುಗಳ ನುಂಗಬೇಕೆ?

ನೀವು ಕವಿಯೇ?ಸಾಹಿತಿಯೇ? ಬರೆದದ್ದ ನಿಮ್ಮ ಬ್ಲಾಗಲ್ಲಿ ಹಾಕುತ್ತಿದ್ದೀರಾ? ಜನ ಮೆಚ್ಚಲಿ , ಇಲ್ಲದಿರಲಿ ನಿಮಗೊಂದು ನಮನ ಮತ್ತು ಅಭಿನಂದನೆ. ನೀವು ಬರೆದಿದ್ದದು ಎಂಬುದಕ್ಕೆ ಅಲ್ಲಿರುವ ದಿನಾಂಕವೇ ಸಾಕ್ಷಿ. ಬೇರೆ ಯಾರಾದರೂ ಅದನ್ನು ಕದ್ದು ತನ್ನ ಹೆಸರಲ್ಲಿ ಪ್ರಕಟಿಸಿದರೆ ನೀವು ನಿಮ್ಮ ಬ್ಲಾಗಿನ ಪ್ರಕಟಗೊಂಡ ದಿನಾಂಕವನ್ನು ತೊರಿಸಿ ಅದನ್ನು ನೀವೇ ಬರೆದದ್ದೆಂದು ನಿರೂಪಿಸಬಹುದು.ಹಾಗಾಗಿ ಬ್ಲಾಗೆಂಬುದು ನಿಮ್ಮ ಕವನಕ್ಕೆ ಶ್ರೀ ರಕ್ಷೆ..ಹಾಂ.. ತಡೀರಿ, ಇಷ್ಟಿದ್ದೂ ನಿಮ್ಮ ಕವನವನ್ನು, ಲೇಖನವನ್ನು ಯಾರಾದರೂ ಕದೀಬಹುದು. ಅದನ್ನು ನಿಮಗಿಂತ ಮುಂಚಿನ ದಿನಾಂಕದಲ್ಲಿ ತನ್ನ ಬ್ಲಾಗಲ್ಲಿ ಹಾಕಿಕೊಳ್ಳಬಹುದು. ಅವಾಗೇನ್ಮಾಡ್ತೀರ? ಹೆಚ್ಚು ಕೇಳ ಹೋದರೆ ನೀವೇ ಕಳ್ಳರೆನ್ನುತ್ತಾರೆ.. ಅರೇ, ಇದು ಹೇಗೆ ಸಾಧ್ಯ? ಇದಕ್ಕೆ ಪರಿಹಾರವೇ ಇಲ್ಲವೇ ಅನಿಸುತ್ತಿದೆಯಾ? ಅದನ್ನು ತಿಳಿಸುವ ಒಂದು ಪುಟ್ಟ ಪ್ರಯತ್ನವೇ ಈ ಕಿರು ಲೇಖನ.

ಮತ್ತಷ್ಟು ಓದು »