ವಿಷಯದ ವಿವರಗಳಿಗೆ ದಾಟಿರಿ

Archive for

7
ನವೆಂ

“ನನ್ನೂರು ಕೊಳ್ಳೇಗಾಲ …!!! ಹೆದರಿಕೊಳ್ಳಬೇಡಿ… ಮಾಟ-ಮಂತ್ರಕ್ಕೆ ಪ್ರಸಿದ್ಧಿ ಅಲ್ಲ…!”

-ಮೋಹನ್‍ ವಿ.ಬಬ್ಲಿ, ಚಿಕ್ಕಮಗಳೂರು

ಕೊಳ್ಳೇಗಾಲ ಎಂಬ ಹೆಸರು ಕೇಳಿದರೆ ಸಾಕು ಇಡೀ ಕರ್ನಾಟಕವೇ ಬೆಚ್ಚಿಬೀಳುತ್ತದೆ. ‘ಕೊಳ್ಳೇಗಾಲದವರು ನಾವು’ ಎಂದುಬಿಟ್ಟರೆ ಸಾಕು ಸುತ್ತಲಿನವರ ಕಣ್ಣು ಕಿವಿ ಅರಳುತ್ತದೆ. ಕೊಳ್ಳೇಗಾಲದ ಒಂದು ರುಪಾಯಿಯ ಒಂದು ನಿಂಬೇಹಣ್ಣಿಗೆ ಬೇರೆಯ ಕಡೆ ಕಡಿಮೆ ಅಂದರು ಸಾವಿರ ರೂಗಳು! ಅಲ್ಲಿನ ಮಾಟಮಂತ್ರವೇ ಇದಕ್ಕೆಲ್ಲ ಕಾರಣ. ವಾಮಮಾರ್ಗಕ್ಕೆ ಕೊಳ್ಳೇಗಾಲ ಪ್ರಸಿದ್ಧಿ ಎಂಬುದು ಎಲ್ಲರ ಅಂಬೋಣ. ಎಷ್ಟೋ ಜನ ಇದನ್ನೇ ಬಂಡವಾಳ ಮಾಡಿಕೊಂಡಿದ್ದಾರೆ. 

ನಾನಿರುವ ಚಿಕ್ಕಮಗಳೂರಿನಲ್ಲಿ ಕೊಳ್ಳೆಗಾಲದ ಮಾಂತ್ರಿಕರು ಎಂದುದುರಿಕೊಂಡು ಎಷ್ಟೋ ಜನ ಜೊತಿಷ್ಯಾಲಯಗಳನ್ನು ತೆರೆದಿದ್ದಾರೆ. ಸಿನಿಮಾಗಳಲ್ಲಿಯೂ ಕೂಡ ಹಾಗೆ. ಮಾಟಮಂತ್ರದ ವಿಚಾರ ಬಂದರೆ ಕೊಳ್ಳೇಗಾಲದ ಹೆಸರನ್ನು ಬಿಂಬಿಸುತ್ತಾರೆ. ‘ನೀವು ಮಾಟಮಂತ್ರಕ್ಕೆ ಫೇಮಸ್ ಅಲ್ವಾ’ ಎಂದು ಸಾವಿರಾರು ಜನ ನನ್ನನ್ನು ಕೇಳಿದ್ದಾರೆ. ಮೈಸೂರಿನ ಮಾನಸಗಂಗೋತ್ರಿಯಲ್ಲಿ ಓದುತ್ತಿರುವಾಗ ಎಷ್ಟೋ ಉಪನ್ಯಾಸಕರೂ ಕೂಡ ನನ್ನನ್ನು ಮಾಟ ಮಾಡಿಸಿಕೊಡಿ ಎಂದು ಅಹವಾಲಿಸಿಕೊಂಡಿದ್ದಾರೆ.

ನಿಮ್ಮೆಲ್ಲರ ಪ್ರಶ್ನೆ… ಹಾಗಾದರೆ ಕೊಳ್ಳೇಗಾಲ ಮಾಟಮಂತ್ರಕ್ಕೆ ಫೇಮಸ್ ಅಲ್ವಾ? ಖಂಡತಿವಾಗಿಯೂ ಇಲ್ಲ. ಕೊಳ್ಳೇಗಾಲದಲ್ಲಿ ದೇವಾಂಗ ಬೀದಿ ಎಂಬ ಒಂದು ಬೀದಿ ಇದೆ. ಮಾಟಮಂತ್ರಕ್ಕೆ ಅವರೇ ಪ್ರಸಿದ್ಧಿ. ನಮ್ಮ ಮನೆ ಇರುವುದು ಅದೇ ಬೀದಿಯಲ್ಲಿ! ನಮ್ಮ ಪಕ್ಕದ ಮನೆಯವನೂ ಮಾಟಮಂತ್ರಕ್ಕೆ ಫೇಮಸ್! ( ನಾವು ಇನ್ನು ಫೇಮಸ್ ಆಗಿಲ್ಲ! ). ಇದೇನಿದು, ಮಾಟಮಂತ್ರವೇ ಇಲ್ಲ ಎಂದು ಅದರ ಬಗ್ಗೆಯೇ ಹೇಳುತ್ತಿರುವನಲ್ಲ ಎಂದುಕೊಂಡು ಹುಬ್ಬೇರಿಸಬೇಡಿ. ಹೌದು ಕೊಳ್ಳೇಗಾಲದಲ್ಲಿ ಸರಿಸುಮಾರು ೩೦ ವರ್ಷಗಳ ಹಿಂದೆ ವಾಮಾಚಾರ ಅವ್ಯಾಹತವಾಗಿ ನಡೆಯುತ್ತಿತ್ತು. ನಿಮ್ಮ ಶತ್ರುಗಳ ಪತನಕ್ಕೆ ಸೂತ್ರ ರೂಪಿಸಿಕೊಡುತ್ತಿದ್ದರು. ಮತ್ತಷ್ಟು ಓದು »

7
ನವೆಂ

ಹೈಟೆಕ್ ಬಹಿಷ್ಕಾರ…!

– ರಾಕೇಶ್ ಶೆಟ್ಟಿ

‘ಬೇರೆ ಬೇರೆ ವಿಷಯಗಳಲ್ಲಿ ಒಟ್ಟಿಗೆ ಸೇರಿ ಕೆಲಸ ಮಾಡಿದ ಗೆಳೆಯರು ಈಗ ಜನಲೋಕಪಾಲ ವಿಷಯವಾಗಿ ತಾತ್ವಿಕ ಭಿನ್ನಭಿಪ್ರಾಯಗಳನ್ನು ಇಟ್ಟುಕೊಂಡು ವಿರುದ್ಧವಾಗಿ ಮಾತನಾಡುತ್ತಿರುವುದು ಬೇಸರತರಿಸಿದೆ ‘ ಅಂತ ಆ ಗೆಳೆಯ ಕಳೆದ ಆಗಸ್ಟಿನಲ್ಲಿ ಫೆಸ್ಬುಕ್ಕಿನಲ್ಲಿ ಬರೆದುಕೊಂಡಿದ್ದರು.ಅದಕ್ಕೆ ನಾನು ‘ಸಾಮಾಜಿಕ ಕಳಕಳಿಯಿರುವ ಎಲ್ಲ ಮನಸ್ಸುಗಳು ಅಂತಿಮವಾಗಿ ಬಯಸುವುದು ಒಳ್ಳೆಯ ಸಮಾಜವನ್ನಷ್ಟೇ,ತಾತ್ವಿಕ ಭಿನ್ನಭಿಪ್ರಾಯ್ಗಳನ್ನ ವೈಯುಕ್ತಿಕವಾಗಿ ನೋಡಬೇಡಿ’ ಅನ್ನುವಂತೆ ಬರೆದಿದ್ದೆ.ಅವರೂ ಅದನ್ನ ಇಷ್ಟ ಪಟ್ಟಿದ್ದರು.

ಅದಾಗಿ ಬಹುಷಃ ೩-೪ ದಿನಗಳು ನಾನು ಊರಿನಲ್ಲಿ ಇರಲಿಲ್ಲ,ವಾಪಸ್ಸು ಬಂದವನು ಫೇಸ್ಬುಕ್ ತೆಗೆದಾಗ ಗೊತ್ತಾಗಿದ್ದು , ತಾತ್ವಿಕ ಭಿನ್ನಾಭಿಪ್ರಾಯಗಳನ್ನ ವೈಯುಕ್ತಿಕ ಮಟ್ಟಕ್ಕೆ ಆ ಗೆಳೆಯ ಮಾತ್ರವಲ್ಲದೆ ಅವನ ‘ಬಳಗ’ವೂ ತೆಗೆದುಕೊಂಡು ನನಗೆ ಅವರ ಗೂಗಲ್ ಗುಂಪಿನಿಂದ,ಫೆಸ್ಬುಕ್ಕ್ ಗೆಳೆತನದಿಂದ ‘ಹೈಟೆಕ್ -ಬಹಿಷ್ಕಾರ’ ಹಾಕಿದೆ ಅಂತ…! ಈ ಹೈಟೆಕ್ ಬಹಿಷ್ಕಾರ ಹಾಕಿಸಿಕೊಳ್ಳುವಂತೆ ನಡೆದಿದ್ದಾರೂ ಏನು ಅಂತ ನೋಡ ಹೊರಟರೆ….

ಅಣ್ಣಾ ಹಜ಼ಾರೆ ಜನಲೋಕಪಾಲ ಮಸೂದೆಗಾಗಿ ಜಂತರ್ ಮಂಥರ್ನಲ್ಲಿ ಉಪವಾಸ ಕುಳಿತ ದಿನಗಳಿವೆಯಲ್ಲ ಅವು ಈ ದೇಶದಲ್ಲಿ ಇನ್ನೇನು ಬದಲಾವಣೆ ಸಾಧ್ಯವೇ ಇಲ್ಲ ಅನ್ನುವಂತಿದ್ದ ಜನರ ಮನಸ್ಸಿಗೆ ಆಶಾಭಾವನೆ ಮೂಡಿಸಿದ ದಿನಗಳು.ಆಗ ’ಈ ಹೋರಾಟ ಗೆಲ್ಲಲೇ ಬೇಕು’ ಅಂದವರು ಅದ್ಯಾಕೋ ಮತ್ತೆ ಅಣ್ಣಾ ’ರಾಮ ಲೀಲಾ ಮೈದಾನ’ಕ್ಕೆ ಬಂದು ನಿಂತಾಗ ’ಪ್ರಜಾಪ್ರಭುತ್ವದ ಬುಡಕ್ಕೆ ಬೆಂಕಿ ತಗುಲಿದೆ’ ಅನ್ನಲಾರಂಭಿಸಿದರು.ಆಗಲೇ ಅಣ್ಣಾ ಹೋರಾಟವನ್ನು ಬೆಂಬಲಿಸುತಿದ್ದವರು-ವಿರೋಧಿಸುವ ಗೆಳೆಯರ ನಡುವೆ ತಾತ್ವಿಕ ಭಿನ್ನಾಭಿಪ್ರಾಯಗಳ ಚರ್ಚೆ ಫ಼ೇಸ್ಬುಕ್ಕಿನಲ್ಲಿ ಶುರುವಾಗಿದ್ದು.ಈ ಹೋರಾಟ ಸರಿಯಿಲ್ಲ ಅನ್ನಲು ಅವರುಗಳು ಏನೇನು ಅಂಶ ಮುಂದಿಡುತಿದ್ದರೋ, ಹೋರಾಟ ಹೇಗೆ ಸರಿ ಅಂತ ನಾವುಗಳು ನಮ್ಮ ವಾದ ಮುಂದಿಟ್ಟಿದ್ದೆವು. ಮತ್ತಷ್ಟು ಓದು »