ವಿಷಯದ ವಿವರಗಳಿಗೆ ದಾಟಿರಿ

Archive for

14
ನವೆಂ

ಮುಂದಿದೆ ಮಾರಿ ಹಬ್ಬ : ಯಡಿಯೂರಪ್ಪ ಅವರ ಮುಂದಿನ ರಾಜಕೀಯ ನಡೆಯೇನು?

-”ಸಿದ್ಧಾರ್ಥ

೨೪ ದಿನಗಳ ಸೆರೆಮನೆ ವಾಸದ ನಂತರ ಅಂತೂ ಇಂತೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದಾರೆ. ಇದನ್ನೇ ಒಂದು ವಿಜಯೋತ್ಸವವೆಂಬಂತೆ ಅವರ ಬೆಂಬಲಿಗರು ಬಾಣ ಬಿರುಸು, ಪಟಾಕಿಗಳನ್ನು ಸಿಡಿಸಿ ಹರ್ಷಿಸಿದ್ದಾರೆ. ಯಡಿಯೂರಪ್ಪ ಅವರು ದೇಗುಲಗಳ, ಮಠಗಳ ದರ್ಶನ ಕಾರ್ಯದಲ್ಲಿ ಮುಳುಗಿದಂತೆ ನಟಿಸುತ್ತಿದ್ದರು, ಅವರ ಅಂತರ್ಯ್ಯದಲ್ಲಿ ಮುಕ್ಕಾಗಿ ಹೋದ ವೈಬವವನ್ನು, ಅಧಿಕಾರವನ್ನು ಮರಳಿ ಪಡೆಯುವುದು ಹೇಗೆ ಎಂಬ ಲೆಕ್ಕಾಚಾರದಲ್ಲಿ ನಿರತರಾಗಿದ್ದಾರೆ. ಅದಕ್ಕೆ ಪೂರಕವೆನ್ನುವಂತೆ ಅವರ ಆಪ್ತ ಮಂತ್ರಿಗಳನೇಕರು ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲು ಕಾರಣೀಭೂತರಾದ ಯಡಿಯೂರಪ್ಪನವರೇ ಪಕ್ಷದ ಪ್ರಶ್ನಾತೀತ ನಾಯಕರು ಆದ್ದರಿಂದ ಅವರನ್ನೇ ರಾಜ್ಯದ ಪಕ್ಷಾದ್ಯಕ್ಷರನ್ನಾಗಿ ಮಾಡಿ ಎಂಬ ಬೆದರಿಕೆ ರೂಪದ ಒತ್ತಡವನ್ನು ಹೈಕಮಾಂಡ್‌ಗೆ ರವಾನಿಸಿದ್ದಾರೆ.

ಸೆರಮನೆ ವಾಸ, ಅದೆಷ್ಟೇ ಅಲ್ಪಾವಧಿಯಾದಾಗಿರಲಿ ಅದಷ್ಟೇ ಸುಖ ವೈಬೋಗಗಳಿಂದ ಕೂಡಿರಲಿ, ಮಾನಸಿಕವಾಗಿ ಅದು ಸೆರಮನೆ ವಾಸವೇ. ಪರಿಸ್ಥಿತಿಯ ಶಿಶುವಾಗಿ ತಮ್ಮದಲ್ಲದ ತಪ್ಪಿಗೆ ಸೆರಮನೆ ವಾಸ ಕಂಡ ಯಡಿಯೂರಪ್ಪನವರಿಗೆ ಕಡ್ಡಾಯ ಬಂದನ ಒಂದು ರೀತಿಯಲ್ಲಿ ಪಾಠವಾಗಬೇಕಾಗಿತ್ತು. ಸಾಮಾನ್ಯವಾಗಿ ಸೆರೆಮನೆಯಲ್ಲಿ ಸಿಗುವ ಏಕಾಕಿತನದಲ್ಲಿ ವ್ಯಕ್ತಿಯೊಬ್ಬರ ಮನಸ್ಸು ಹಲವು ಬದಲಾವಣೆಗೆ ಒಳಪಡುತ್ತದೆ. ಸರಿ ತಪ್ಪುಗಳ ವಿಮರ್ಶೆಯ ಆತ್ಮಾವಲೋಕನಕ್ಕೆ ಅದು ಸಕಾಲವಾಗುತ್ತದೆ. ಕೆಲವೊಮ್ಮೆ ಏಕಾಂಗಿ ತನದಲ್ಲಿ ವ್ಯಕ್ತಿಯ ಮನಸ್ಸು, ಪ್ರತಿಭೆ ಅರಳುತ್ತದೆ. ಮತ್ತಷ್ಟು ಓದು »

14
ನವೆಂ

ನಾನೊಬ್ಬ ಹಿಂದೂ, ಆದ್ದರಿಂದ…..

– ಗೋವಿಂದ ರಾವ್ ವಿ ಅಡಮನೆ

ನಾನೊಬ್ಬ ಹಿಂದೂ, ಆದ್ದರಿಂದ

  • ನನಗೆ ಇಷ್ಟವಾದದ್ದನ್ನು ‘ದೇವರು’ ಎಂದು ಪೂಜಿಸುವ ಸ್ವಾತಂತ್ರ್ಯ ಇದೆ. ‘ದೇವರೇ ಇಲ್ಲ’ ಎಂದು ಸಾರ್ವಜನಿಕವಾಗಿ ಘೋಷಿಸುವ ಸ್ವಾತಂತ್ರ್ಯವೂ ಇದೆ.
  • ನಾನು ನಂಬಿರುವ ದೇವರನ್ನು ಓಲೈಸುವ ಸಲುವಾಗಿ ನನಗೆ ಇಷ್ಟವಾದ ವಿಧಿವಿಧಾನಗಳನ್ನು ನನಗೆ ಸರಿಕಂಡ ರೀತಿಯಲ್ಲಿ ಆಚರಿಸುವ ಸ್ವಾತಂತ್ರ್ಯ ನನಗೆ ಇದೆ.
  • ಸಾರ್ವಜನಿಕವಾಗಿ ದೇವರ ಅಸ್ತಿತ್ವವನ್ನು ಅಲ್ಲಗಳೆಯುತ್ತಾ ಖಾಸಗಿಯಾಗಿ ದೇವರಲ್ಲಿ ನಂಬಿಕೆ ಇಡುವ, ಖಾಸಗಿಯಾಗಿ ದೇವರನ್ನು ನಂಬದಿದ್ದರೂ ಸಾರ್ವಜನಿಕವಾಗಿ ಆಸ್ತಿಕನಂತೆ ನಟಿಸುವ ಸ್ವಾತಂತ್ರ್ಯ ನನಗೆ ಇದೆ.