ಮಂಗಳಪ್ರಯಾಣಕ್ಕೆ ಸಿದ್ಧತೆ..
-ವಿಷ್ಣುಪ್ರಿಯ
ಮೂವರು ರಷ್ಯನ್ನರು, ಒಬ್ಬ ಫ್ರೆಂಚ್, ಒಬ್ಬ ಇಟಾಲಿಯನ್-ಕೊಲಂಬಿಯನ್ ಮತ್ತು ಒಬ್ಬ ಚೀನೀ ಬಾಹ್ಯಾಕಾಶ ವಿಜ್ಞಾನಿಗಳನ್ನು ಒಳಗೊಂಡಂಥ ತಂಡ ಮಾಸ್ಕೋದಲ್ಲಿನ ಈ ಮಂಗಳನ ತದ್ರೂಪಿನಲ್ಲಿ 520 ದಿನಗಳ ಕಾಲ ಇದ್ದು ಬಂದಿದ್ದಾರೆ. ಇಲ್ಲಿ ಮಂಗಳನಲ್ಲಿರಬಹುದಾದಂಥ ಎಲ್ಲ ರೀತಿಯ ವಾತಾವರಣವೂ ಇದೆ, ಆದರೆ ಗುರುತ್ವಾಕರ್ಷಣಶಕ್ತಿಯೊಂದನ್ನು ಹೊರತುಪಡಿಸಿ! ಹೀಗಾಗಿ ತೂಕವಿಲ್ಲದೇ ಇರುವ ಅನುಭವ ಮಾತ್ರ ಸಿಕ್ಕಿಲ್ಲ.
ಅದು ಒಂದು ಸಂಪೂರ್ಣ ಮುಚ್ಚಲ್ಪಟ್ಟ ಕೋಣೆ; ಗಾಳಿ ನುಸುಳುವುದಕ್ಕೆ ಒಂಚೂರೂ ಜಾಗವಿಲ್ಲ; ನೀರಂತೂ ಪ್ರವೇಶಿಸುವುದಕ್ಕೇ ಆಗದು; ಒಳಗಣ ಶಾಖಕ್ಕೆ ಸಾಮಾನ್ಯ ಜೀವ ಬೆಂದು ಹೋಗುವಂಥ ಪರಿಸ್ಥಿತಿ; ಆದರೂ ಆರು ಜನ ಅದರೊಳಗಿದ್ದರು; ಒಂದೆರಡು ದಿನವಲ್ಲ; ಬರೋಬ್ಬರಿ 520 ದಿನಗಳು! ಕೃತಕ ಆಮ್ಲಜನಕದ ಉಸಿರಾಟ, ಸಂಸ್ಕರಿತ ಆಹಾರ; ಇವಿಷ್ಟನ್ನೇ ಸೇವಿಸಿಕೊಂಡು ಅಷ್ಟೂ ದಿನ ಈ ಕೋಣೆಯೊಳಗಿದ್ದರು; ಕೆಲವು ದಿನಗಳ ಹಿಂದಷ್ಟೇ ಈ ಆರೂ ಜನರು ಈ ಕೋಣೆಯಿಂದ ಹೊರಬಂದಾಗ ಅವರು ಒಂದಷ್ಟು ಸೊರಗಿದ್ದಾರೆಯೋ ಎಂದೆನಿಸುತ್ತಿತ್ತು; ಆದರೂ ಸಹ ಅವರ ಮುಖದಲ್ಲಿ ಮಂದಹಾಸ ಮಿನುಗುತ್ತಿತ್ತು; ಹೊಸದೊಂದು ಸಾಹಸಕ್ಕೆ ಅಣಿಯಾದ, ಯುದ್ಧವನ್ನು ಜಯಿಸಬಲ್ಲೆ ಎಂಬ ದೃಢವಿಶ್ವಾಸ ಹೊಂದಿರುವ ರಣಕಲಿಯ ಕಳೆ ಅವರಲ್ಲಿತ್ತು.
ಅವರು ಬಾಹ್ಯಾಕಾಶ ವಿಜ್ಞಾನಿಗಳು. 2030ರಲ್ಲಿ ಮಂಗಳಗ್ರಹದ ಮೇಲೆ ಪಾದಾರ್ಪಣೆ ಮಾಡಲು ಸಿದ್ಧವಾಗುತ್ತಿರುವ ಅವರು ಇದ್ದದ್ದು, ಮಂಗಳನಲ್ಲಿ ಇರಬಹುದಾದಂಥ ವಾತಾವರಣವನ್ನು ಕೃತಕವಾಗಿ ಸೃಷ್ಟಿಸಲ್ಪಟ್ಟಂಥ ಕೋಣೆಯೊಳಗೆ. ಮೂವರು ರಷ್ಯನ್ನರು, ಒಬ್ಬ ಫ್ರೆಂಚ್, ಒಬ್ಬ ಇಟಾಲಿಯನ್-ಕೊಲಂಬಿಯನ್ ಮತ್ತು ಒಬ್ಬ ಚೀನೀ ಬಾಹ್ಯಾಕಾಶ ವಿಜ್ಞಾನಿಗಳನ್ನು ಒಳಗೊಂಡಂಥ ತಂಡ ಮಾಸ್ಕೋದಲ್ಲಿನ ಈ ಮಂಗಳನ ತದ್ರೂಪಿನಲ್ಲಿ 520 ದಿನಗಳ ಕಾಲ ಇದ್ದು ಬಂದಿದ್ದಾರೆ. ಇಲ್ಲಿ ಮಂಗಳನಲ್ಲಿರಬಹುದಾದಂಥ ಎಲ್ಲ ರೀತಿಯ ವಾತಾವರಣವೂ ಇದೆ, ಆದರೆ ಗುರುತ್ವಾಕರ್ಷಣಶಕ್ತಿಯೊಂದನ್ನು ಹೊರತುಪಡಿಸಿ! ಹೀಗಾಗಿ ತೂಕವಿಲ್ಲದೇ ಇರುವ ಅನುಭವ ಮಾತ್ರ ಸಿಕ್ಕಿಲ್ಲ. ಮತ್ತಷ್ಟು ಓದು
ಬೈಲೂರ ಬಸ್ಸು ಹತ್ತಿ
ಪ್ರಶಸ್ತಿ.ಪಿ, ಸಾಗರ
ಮನೇಲಿ ಕಾರ್ಯಕ್ರಮ ಇದೆ, ಬರಲೇ ಬೇಕು ಅಂತ ಕರೆದಿದ್ರು ಅನ್ಸತ್ತೆ. ಹನ್ನೊಂದೂಕಾಲಿಗೆ ಹಸಿರು ಬಣ್ಣದ ಬಸ್ಸು ಬರತ್ತೆ , ಅದ್ರಲ್ಲಿ ಬಾ ಅಂತ ಸೂಚನೆ. ಸರಿ, ವಿಶ್ವಾಸದ ಮೇಲೆ ಕರೆದ ಮೇಲೆ ಬಿಡೋಕಾಗತ್ತಾ? ಹೂಂ ಜೈ ಅಂತ ಹನ್ನೊಂದ್ಘಂಟೆಗೇ ಬಸ್ಟಾಂಡಲ್ಲಿ ಹಾಜರು.ಎಲ್ಲಿಳ್ಯದು, ಯಾವ ಬಸ್ಸು ಎಂತನೂ ಗೊತ್ತಿಲ್ಲ. ಫೋನಲ್ಲಿ ಕೇಳಿದ್ದಷ್ಟೆ. ಹೋಗ್ಬೇಕಾಗಿರೋ ಊರ ಹೆಸ್ರನ್ನೇಳಿ ಕಂಡಕ್ಟ್ರಣ್ಣಂಗೆ ಕೇಳ್ದಾಗ “ಬೇಲೂರು ಗಾಡಿ ಬರತ್ತೆ ಹನೊಂದು ಕಾಲಿಗೆ. ಅದ್ರಲ್ಲೋಗಿ” ಅಂದ. ನಾ ಹೋಗ್ಬೇಕಾಗಿದ್ದು ಸೈದೂರು ದಾರಿ. ಬೇಲೂರಿಗೂ ಸೈದೂರಿಗೂ ಎಲ್ಲಿಂದೆಲ್ಲಿ ಸಂಬಂಧ ಅಂತ ಅರ್ಥ ಆಗ್ಲಿಲ್ಲ.ಹಂಗಂತಾ? ಗಣೇಶ ಸ್ಟೈಲಲ್ಲಿ ತಲೆ ಕೆರ್ಕಳಕೆ ಆಗತ್ತಾ? ಅದೂ ಬಸ್ಟಾಂಡ್ ಬೇರೆ 🙂
ಹನ್ನೊಂದು ಕಾಲಾಯ್ತು. ಬಂದಿರ್ಲಿಲ್ಲ ಬಸ್ಸು. ಬಿಸಿಲು ಬೇರೆ ಏರ್ತಾ ಇತ್ತು. ಬಸ್ಟಾಂಡಲ್ಲೊಂದು ಅಂಗಡಿ ಎದ್ರಿದ್ದ ನೆರಳಲ್ಲಿ ಜಾಗ ಖಾಲಿ ಇತ್ತು. ನಂತರನೇ ನೆರಳನರಸಿ ಸುಮಾರು ಜನ್ರಿದ್ರು ಬಿಡ್ರಿ.. ಕಾದ ತಗಡ ಶೀಟು. ಕೆಳಗೆ ನಾನು. ಕೇಳಬೇಕೆ? ಸೆಖೆ ಹೊಡ್ತ. ಬೆವ್ರೊರ್ಸದು, ಗಡಿಯಾರ ನೋಡದು ಇದೇ ಕೆಲ್ಸ ಆಯ್ತು. ಹನ್ನೊಂದು ಇಪ್ಪತ್ತೈದು. ಅಲ್ಲಿದ್ದೋರಲ್ಲಿ ಅನ್ಸತ್ತೆ ಊರಿಗೋಗೋರೂ ಇದ್ರು ಹೇಳೋದು ಅವರ ಮಾತಿಂದ ಗೊತ್ತಾಯ್ತು. ಇದ್ದಿದ್ರಲ್ಲಿ ಅದೊಂದು ಸಮಾಧಾನ. ಅದೇ ಊರಿಗಂತೂ ಹೋಗ್ತಾರೆ. ಅವ್ರ ಮನೇಗೆ ಹೋಗ್ಬೋದು ಅಂತ ಮನ್ಸು ಹೇಳಕ್ಕಿಡೀತು. ಆದ್ರೂ ಕೇಳಕ್ಕೆ ಬಾಯಿ ಬರ್ಲಿಲ್ಲ. ಫಿಲ್ಮಲ್ಲಿ ಹೀರೋಗೆ ಹೀರೋಯಿನ್ ಎದ್ರು ಮಾತು ಬರಲ್ವಲ ಹಂಗೆ ಅಂದ್ಕಂಡ್ರಾ? ಥೋ..ಅವ್ರೆಲ್ಲಾ ವಯಸ್ಸಾದವ್ರು 🙂 ಮತ್ತಷ್ಟು ಓದು