ವಿಷಯದ ವಿವರಗಳಿಗೆ ದಾಟಿರಿ

Archive for

17
ನವೆಂ

ಸಂಸ್ಕೃತಿ ಸಂಕಥನ – ೧೧ -ಬ್ರಾಹ್ಮಣರಿಗೆ ಖಳನಾಯಕರ ಪಟ್ಟ ಕಟ್ಟಿದ ಇತಿಹಾಸ

– ರಮಾನಂದ ಐನಕೈ

ಬ್ರಾಹ್ಮಣರಿಗೆ ಖಳನಾಯಕರ ಪಟ್ಟ ಕಟ್ಟಿದ ಇತಿಹಾಸ

ಇತ್ತೀಚೆಗೆ ನಾಡಿನ ಪ್ರಸಿದ್ಧ ವ್ಯಕ್ತಿಯೊಬ್ಬರು ವೇದಿಕೆಯ ಮೇಲೆ ಮಾತನಾಡುತ್ತ ಈ ದೇಶ ಮುಸ್ಲಿಂ, ಕ್ರಿಶ್ಚಿಯನ್ ಹಾಗೂ ವೈದಿಕಶಾಹಿ ಆಡಳಿತ ಕಂಡಿದೆ. ಇವೆಲ್ಲವುಗಳಲ್ಲಿ ವೈದಿಕಶಾಹಿ ಆಡಳಿತ ಭಯಂಕರವಾಗಿತ್ತು ಎಂದಿದ್ದಾರೆ.  ನನ್ನ ಇತಿಹಾಸ ಜ್ಞಾನದ ಪ್ರಕಾರ ಮುಸ್ಲಿಂ,ಕ್ರಿಶ್ಚಿಯನ್ ಹಾಗೂ ಕೆಲವು ಕಾಲ ಮೌರ್ಯರು, ಗುಪ್ತರು ಮುಂತಾದ ರಾಜರುಗಳು ಆಳಿದ್ದನ್ನು ಓದಿದ್ದೇನೆ. ಈ ವೈದಿಕಶಾಹಿಗಳು ಯಾರು? ಇವರು ಎಷ್ಟನೇ ಇಸವಿಯಿಂದ ಎಷ್ಟನೇ ಇಸವಿಯವರೆಗೆ ಆಳಿದರು? ಇವರ ಆಡಳಿತದ ಹಾಗೂ ಯುದ್ಧದ ವಿವರಗಳೇನು? ಈ ಕುರಿತು ಗ್ರಂಥ, ಶಾಸನ, ನಾಣ್ಯ ಇತ್ಯಾದಿಗಳು ಇವೆಯೇ ಎಂಬ ಉತ್ತರ ಬೇಕು. ಸುಮ್ಮ ಸುಮ್ಮನೇ ವೇದಿಕೆಯ ಮೇಲೆ ಮಾತನಾಡುವುದು ಈ ದೇಶದ ವಾಕ್ ಸ್ವಾತಂತ್ರ್ಯದ ಫಲ. ಪ್ರಗತಿಪರರೆನಿಸಿಕೊಂಡವರು ವೇದಿಕೆ ಹತ್ತಿದಾಕ್ಷಣ ಪುರೋಹಿತಶಾಹಿ, ವೈದಿಕಶಾಹಿ ಮುಂತಾದ ಪದಪುಂಜಗಳೇ ಹೊರಗೆ ಬರುತ್ತವೆ. ಇದಕ್ಕೆ ಆಧಾರ ಇದೆಯೇ? ಇವೆಲ್ಲ ಪರೋಕ್ಷವಾಗಿ ಬ್ರಾಹ್ಮಣರನ್ನು ಪ್ರಹಾರ ಮಾಡಲು ಉಪಯೋಗಿಸುವ ಪ್ರತಿಮೆಗಳು. ಇದರಿಂದ ಕಂಡಿತ ತೆ ಸಾಧ್ಯವಿಲ್ಲ.

ಸೆಕ್ಯುಲರ್ ಬುದ್ಧಿಜೀವಿಗಳ ದೃಷ್ಟಿಯಲ್ಲಿ ಭಾರತದಲ್ಲಿ ಬ್ರಾಹ್ಮಣರು ಖಳನಾಯಕರು. ಇವರನ್ನು ಪುರೋಹಿತಶಾಹಿಗಳು, ವೈದಿಕಶಾಹಿ ಗಳು ಎಂಬಿತ್ಯಾದಿಯಾಗಿ ಚಿತ್ರಿಸುತ್ತಿದ್ದಾರೆ. ಬ್ರಾಹ್ಮಣರು ಪ್ರಾಚೀನ ಭಾರತವನ್ನು ಆಳಿದವರು, ದಬ್ಬಾಳಿಕೆ ಮಾಡಿದವರು, ತರತಮದ ಸಾಮಾಜಿಕ ವ್ಯವಸ್ಥೆಯ ಶಿಲ್ಪಿಗಳು ಇವೇ ಮುಂತಾಗಿ ಬಾಯಿಗೆ ಬಂದಂತೆ ಹಲುಬುತ್ತಿದ್ದಾರೆ. ನಿದು ನಿಜವೇ? ಇವರಿಗೆ ಈ ತಿಳುವಳಿಕೆ ಏಕೆ ಬಂತು? ಎಲ್ಲಿಂದ ಬಂತು? ಬ್ರಾಹ್ಮಣರು ನಿಜವಾಗಿಯೂ ಪುರೋ ಹಿತಶಾಹಿಗಳೇ?

ಮತ್ತಷ್ಟು ಓದು »

17
ನವೆಂ

ಈ ಪರಿಯ ಬದುಕು………….

– ಅರೆಹೊಳೆ ಸದಾಶಿವರಾವ್

ಮನುಷ್ಯ ಜೀವನದ ಬಹು ಚೋದ್ಯಗಳಲ್ಲೊಂದು ಮನುಷ್ಯ ಸಂಬಂಧಗಳು. ಇದನ್ನು ನಾನು ಚೋದ್ಯವೆಂದು ಕರೆದದ್ದು ನಿಮಗೆ ಪ್ರಶ್ನಾರ್ಥಕವಾಗಿ ಕಾಣಬಹುದು. ಏಕೆಂದರೆ ಮನುಷ್ಯ ಸಂಬಂಧಗಳಿಗೆ ಅದರದ್ದೇ ಆದ ಹಲವು ವ್ಯಾಖ್ಯೆಗಳಿರುವಾಗ ಮತ್ತು ಅದಕ್ಕೆ ಸಾಕಷ್ಟು ಉತ್ತರ, ಪುರಾವೆ ಅನುಭವಗಳೂ ಇರುವಾಗ ಅದನ್ನು ಚೋದ್ಯವೆಂದು ಗುರುತಿಸುವ ಔಚಿತ್ಯದ ಬಗ್ಗೆ ಪ್ರಶ್ನೆಗಳೇಳುವುದು ಸಹಜ.

ಇವತ್ತಿನ ಸಂಬಂಧ ಕೇವಲ ವ್ಯಾವಹಾರಿಕ ನೆಲಗಟ್ಟಿನ ಮೇಲೆ ಅಸ್ತಿತ್ವ ಕಂಡುಕೊಳ್ಳುತ್ತಿರುವುದರ ದುರಂತವೆಂದರೆ, ಯಾವ ಸಂಬಂಧಗಳಿಗೂ ಬೆಲೆ ಇಲ್ಲದ ದುಸ್ಥಿತಿ ತಲುಪಿದೆ. ಬಾಂಧವ್ಯ ಎಂಬುದು ಸಂಘಜೀವಿ ಮನುಷ್ಯನ ಬದುಕಿಗೆ ಅನಿವಾರ್ಯ ಎಂದಿದ್ದ ಕಾಲದಿಂದ, ಇಂದು ಅದಕ್ಕೂ ಮೊದಲು ವ್ಯವಾಹಾರ, ಅದರಿಂದ ನಮಗೆ ಸಿಗಬಹುದಾದ ಲಾಭ-ನಷ್ಟದ ಮಾತುಕತೆ ಮುಖ್ಯವಾಗುವ ತನಕ ಬದಲಾಗಿದೆ.

ದುರಂತ ನೋಡಿ, ಇತ್ತೀಚೆಗೆ ಮಾದ್ಯಮಗಳು ಮತ್ತು ದೂರಸಂಪರ್ಕ ಕ್ರಾಂತಿ ಪ್ರಪಂಚದ ಗಾತ್ರವನ್ನು ಕುಗ್ಗಿಸಿದೆ. ಬೆರಳ ತುದಿಯಲ್ಲಿಯೇ ಜಗತ್ತಿನ ಯಾವುದೋ ಮೂಲೆಂದ ಮತ್ತೆಲ್ಲಿಗೋ ಸಂಪರ್ಕ ಸಾಧ್ಯವಾಗಿಸಿ, ಭೌತಿಕ ದೂರವನ್ನು ಕಿರಿದುಗೊಳಿಸಿ, ನಿಜಾರ್ಥದಲ್ಲಿ ಪ್ರಪಂಚವನ್ನು ಒಂದು ಪುಟ್ಟ ಅಂಗಣವಾಗಿಸಿದೆ. ಆದರೆ ಇದನ್ನು ಹಿಂಬಾಲಿಸಿ ಸಂಬಂಧಗಳು ಮಾತ್ರ ಮೊದಲಿಗಿಂತಲೂ ಜಟಿಲವಾಗಿವೆ, ದೂರವಾಗಿವೆ, ವೈಮನಸ್ಸುಗಳು ಅಗಾಧವಾಗಿವೆ. ದಾರಿಯ ದೂರವನ್ನು ಕಿರಿದುಗೊಳ್ಳಿಸಿದ ಹೊರತಾಗಿಯೂ, ಮಾನಸಿಕವಾಗಿ ನಾವೆಲ್ಲರೂ ದೂರ, ಬಹುದೂರ ಸಾಗುತ್ತಿದ್ದೇವೆ. ಆಚೀಚೆ ಮನೆಯವರೇ ನಮಗೆ ಅಪರೂಪ-ಅಪರಿಚಿತರಾಗುತ್ತಿದ್ದರೆವಾಗುತ್ತಿದ್ದರೆ, ಟಿವಿ, ಮೋಬೈಲ್, ಇಂಟರ್ನೆಟ್‌ಗಳೇ ಪರಮಾಪ್ತವಾಗುತ್ತಿವೆ. ದುರಂತವೆಂದರೆ ಈ ಎಲ್ಲದರಿಂದ ನಾವು ಮಾನವಿ ಯತೆಂದ ಅಮಾನವಿಯತೆಗೆ, ಸಾಮಾಜಿಕ ಸ್ವಾಸ್ಥದಿಂದ ಸ್ವಹಿತದೆಡೆಗೆ, ಸ್ವಾಸ್ಥ್ಯದಿಂದ ಅಸ್ವಾಸ್ಥ್ತ್ಯದೆಡೆಗೆ ದಾಪುಗಾಲಿನಲ್ಲಿ ಪಯಣಿಸುತ್ತಿದ್ದೇವೆ.

ಮತ್ತಷ್ಟು ಓದು »