ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 3, 2011

ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ – ಒಂದು ಸಮೀಕ್ಷೆ

‍ನಿಲುಮೆ ಮೂಲಕ
-ಓಂಶಿವಪ್ರಕಾಶ್
ಕನ್ನಡಕ್ಕಾಗಿ ಏನನ್ನಾದರೂ ಮಾಡಬೇಕು ಎಂಬುದು ಎಲ್ಲ ಕನ್ನಡಿಗನ ಆಸೆ. ಮಾಹಿತಿ ತಂತ್ರಜ್ಞಾನದ ಸಿಲಿಕಾನ್ ನಗರಿ ಕೂಡ ಕನ್ನಡದ ಮಡಿಲಲ್ಲಿಯೇ ಇದೆ. ಕನ್ನಡದ ಕಂಪೆನಿಗಳು ಅದೆಷ್ಟೋ ದೇಶಗಳಿಗೆ ಮಾಹಿತಿ ತಂತ್ರಜ್ಞಾನ ಸೇವೆಯನ್ನು ಒದಗಿಸುತ್ತಿವೆ. ಆದರೆ ಕನ್ನಡದ ಭಾಷೆ ಮಾಹಿತಿ ತಂತ್ರಜ್ಞಾನದ ಜೊತೆಗೆ ಬೆಳವಣಿಗೆ ಹೊಂದಿದೆಯೇ ಎಂಬ ವಿಚಾರವನ್ನು ಎತ್ತಿದಲ್ಲಿ – ಉತ್ತರ ‘ಇಲ್ಲ’ ಎಂದು ಎಲ್ಲರೂ ಹೇಳಬಹುದು. ಭಾಷೆಯ ಬೆಳವಣಿಗೆ ಅದರ ಬಳಕೆದಾರರ ಕೈಯಲ್ಲಿಯೇ ಇದೆ. ಭಾಷೆಯ ತಂತ್ರಜ್ಞಾನದ ಬೆಳವಣಿಗೆ ಕೂಡಾ. ಮಾಹಿತಿ ತಂತ್ರಜ್ಞಾನದಲ್ಲಿ ಕೆಲಸ ಮಾಡುತ್ತಿರುವ, ಮಾಡಲಿಚ್ಚಿಸುವ ಅನೇಕರಿಗೆ ಕನ್ನಡದ ತಾಂತ್ರಿಕ ಬೆಳವಣಿಗೆ, ಅದರಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಬಗೆ, ಕನ್ನಡ ತಂತ್ರಜ್ಞಾನ, ತಂತ್ರಾಂಶಗಳು ನೆಡಯಬೇಕಿರುವ ಹಾದಿಯ ಕಿರು ಪರಿಚಯ, ಸಮುದಾಯ ಅಭಿವೃದ್ದಿಯ ಪರಿಕಲ್ಪನೆ, ಈಗಾಗಲೇ ಅನೇಕ ಆಸಕ್ತರು ಪ್ರಾರಂಭಿಸಿರುವ ಯೋಜನೆಗಳು ಇತ್ಯಾದಿ ಮಾಹಿತಿಗಳ ವಿನಿಮಯ, ಹಂಚಿಕೆ ಜೊತೆಗೆ ಕಾರ್ಯಾಗಾರಗಳನ್ನು ಕಾಲಕಾಲಕ್ಕೆ ಹಮ್ಮಿಕೊಳ್ಳುವ ಯೋಜನೆಯೊಂದಿದ್ದರೆ? ಅದರ ರೂಪರೇಷೆ, ನೀವು ಅದರಲ್ಲಿ ಹೇಗೆ ಭಾಗವಹಿಸಲಿಚ್ಚಿಸುವಿರಿ? ಎಂಬಿತ್ಯಾದಿ ಪ್ರಶ್ನೆಗಳಿಗೆ ಕಿರು ಉತ್ತರ ಕೊಡುವಿರಾ? ಭಾಷಾ ತಂತ್ರಜ್ಞಾನಕ್ಕೆ ಮತ್ತಷ್ಟು ಹೆಜ್ಜೆಗಳನ್ನಿಡಲು ಸಹಕರಿಸಿ ಎಂದು ಕೋರುತ್ತಾ…
ಸ್ಥಳ: ಬೆಂಗಳೂರು
ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ನಿಮಗೆ ಇಚ್ಚೆ ಇದೆಯೇ? *

  •  ಇದೆ
  •  ಇಲ್ಲ
ನಿಮ್ಮ ಅನುಭವಗಳನ್ನು ಹಂಚಿಕೊಳ್ಳಲು ಇಚ್ಚಿಸುವಿರಾ? *

  •  ಹೌದು
  •  ಇಲ್ಲ
ಅನುಭವಗಳನ್ನು ಹಂಚಿಕೊಳ್ಳುವುದಿದ್ದರೆ, ನೀವು ಆಯ್ದುಕೊಳ್ಳುವ ವಿಷಯ/ ತಂತ್ರಜ್ಞಾನಉದಾ:- ಕನ್ನಡದ ಬಳಕೆ, ಫಾಂಟ್ಸ್, ತಂತ್ರಜ್ಞಾನ ಅಳವಡಿಕೆ ಇತ್ಯಾದಿ.

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments