ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 22, 2011

2

ಪುನರ್ಜನ್ಮ ಪರಿಕಲ್ಪನೆಯ ಕುರಿತು ಆಸಕ್ತಿ ಇರುವವರು ಓದಲೇ ಬೇಕಾದ ಪುಸ್ತಕ

‍ನಿಲುಮೆ ಮೂಲಕ

– ಗೋವಿಂದ ರಾವ್ ವಿ ಅಡಮನೆ

ನಾನೀಗ ಶಿಫಾರಸ್ಸು ಮಾಡುತ್ತಿರುವುದು ಒಂದು ಇಂಗ್ಲಿಷ್ ಪುಸ್ತಕ. ಈ ಪುಸ್ತಕ ೧೯೫೦ ರಲ್ಲಿ ಪ್ರಕಟವಾದ ಪುಸ್ತಕವಾದರೂ ಜನಪ್ರಿಯತೆ ಇನ್ನೂ ಕುಗ್ಗಿಲ್ಲ. ಅದರ ವಿಷಯವೇ ಅಂಥದ್ದು. ಪುನರ್ಜನ್ಮ ಕ್ಕೆ ಸಂಬಂಧಿಸಿದಂತೆ ನಿಮ್ಮದೇ ಆದ ಅಭಿಪ್ರಾಯ ರೂಪಿಸಿಕೊಳ್ಳಲು ನೆರವು ನೀಡಬಲ್ಲ ಪುಸ್ತಕ ಇದು. ನಾನು ಇದನ್ನು ಖರೀದಿಸಿದ್ದು ೧೯೮೨ ರಲ್ಲಿ. ನನ್ನ ಬ್ಲಾಗ್ : ‘ಮಾಡಿದ್ದುಣ್ಣೋ ಮಹಾರಾಯ’- ಒಂದು ವಿಶ್ಲೇಷಣೆ ಬರೆಯಲು ನೆರವು ನೀಡಿದ ಪುಸ್ತಕ ಇದು. ಯಾವುದೇ ವಿಷಯವನ್ನು ಮನೋಗತ ಮಾಡಿಕೊಳ್ಳ ಬೇಕಾದರೆ ಆ ವಿಷಯದ ಮೂಲ ಆಕರವನ್ನೇ ನೋಡು ಎಂಬುದು ನನ್ನ ಅಧ್ಯಾಪಕರು ನನಗೆ ಕಲಿಸಿದ ಅಮೂಲ್ಯ ಪಾಠಗಳಲ್ಲಿ ಒಂದು. ಪುನರ್ಜನ್ಮ ಕುರಿತಾದ ಕುತೂಹಲಜನಕ ಉದಾಹರಣೆಗಳು ಈ ಪುಸ್ತಕದಲ್ಲಿವೆ.  ಎಂದೇ, ಈ ವಿಷಯದಲ್ಲಿ ಆಸಕ್ತಿ ಇರುವವರು ನೀವಾಗಿದ್ದರೆ ಈ ಪುಸ್ತಕ ಓದುವುದು ಒಳಿತು ಎಂಬುದು ನನ್ನ ಸಲಹೆ.

ಪುಸ್ತಕದ ಹೆಸರು: Many Manisions – “The Edgar Cayce Story On Reincarnation”. ಬರೆದವರು: Gina Cerminaria [ಗಿನಾ ಸರ್ಮಿನಾರಾ (ಏಪ್ರಿಲ್ ೧೯೧೪ – ಏಪ್ರಿಲ್ ೧೯೮೪). ಮನೋವಿಜ್ಙಾನದಲ್ಲಿ Ph.D ಪದವೀಧರೆ. ವಿಷಯದ ಕುರಿತು ಸುದೀರ್ಘ ಕಾಲ ಸಂಶೋಧನೆ ಮಾಡಿದ ಬಳಿಕ ಪ್ರಕಟಿಸಿದ ಪುಸ್ತಕ ಇದು.] ಪ್ರಕಾಶನ: A Signet Bool from New American Library.

ಪೀಠಿಕೆಯನ್ನು ಹೊರತುಪಡಿಸಿ ೨೫ ಅಧ್ಯಾಯಗಳು ಇರುವ ೨೪೦ ಪುಟಗಳ ಈ ಪುಸ್ತಕದಲ್ಲಿ ಏನಿದೆ? – ಮೊದಲ ಅಧ್ಯಾಯ ‘The Magnificient Possibility’ ಮುಂದೆ ಪ್ರಸ್ತುತ ಪಡಿಸಲಿರುವ ವಿಷಯವನ್ನು ಸ್ವೀಕರಿಸಲು ಅಗತ್ಯವಾದ ಮನೋಭೂಮಿಕೆ ಸೃಷ್ಟಿಸುವ ಉದ್ದೇಶದ್ದಾಗಿದೆ. ಎರಡನೇ ಅಧ್ಯಾಯ ‘The Medical Clairvoyance of Edgar Caycee’ ನಲ್ಲಿ ಪುದ್ತಕದಲ್ಲಿ ಉಲ್ಲೇಖಿಸಿರುವ ಪುನರ್ಜನ್ಮದ ಉದಾಹರಣೆಗಳು ಹೇಗೆ ದೊರೆತವು ಎಂಬುದರ ವಿವರಣೆ ಇದೆ. ತದನಂತರದ  ಅಧ್ಯಾಯಗಳಲ್ಲಿ ಉದಾಹರಣೆಗಳನ್ನು ವರ್ಗೀಕರಿಸಿ ಪುನರ್ಜನ್ಮದ ನಿಯಂತ್ರಕ ನಿಯಮಗಳನ್ನು ಗುರುತಿಸುವ ಪ್ರಯತ್ನ ಮಾಡಲಾಗಿದೆ. ವ್ಯಕ್ತಿಯ ಜೀವನದಲ್ಲಿ ಘಟಿಸುವ ಎಲ್ಲ ಘಟನೆಗಳು ಪೂರ್ವನಿರ್ಧಾರಿತವಾಗಿರ ಬೇಕಿಲ್ಲ ಎಂಬುದನ್ನು ಸೂಚಿಸುವ ಉದಾಹರಣೆಗಳೂ ಇವೆ. ಈ ಪುಸ್ತಕದಲ್ಲಿ ಉಲ್ಲೇಖಿಸಿರುವ ಉದಾಹರಣೆಗಳ ವಿಶ್ವಾಸಾರ್ಹತೆಯ ಕುರಿತು ನೀವು ನಿಮ್ಮದೇ ಆದ ತೀರ್ಮಾನ ಕಯಗೊಳ್ಳುವುದು ಒಳಿತು. ಇದರ ಬಗ್ಗೆ ಇರುವ ಠೀಕೆಗಳನ್ನು ಪುನರ್ಜನ್ಮ – ಒಂದು ವಿವೇಚನೆ ಎಂಬ ಬ್ಲಾಗಿನಲ್ಲಿ ತಿಳಿಸಿದ್ದೇನೆ.

ಈ ಪುಸ್ತಕ ನನ್ನ ಗಮನ ಸೆಳೆಯಲು ಕಾರಣಗಳು ಇಂತಿವೆ: ಈ ಪುಸ್ತಕದಲ್ಲಿ ಉಲ್ಲೇಖಿಸಿರುವ ಉದಾಹರಣೆಗಳ ಆಕರ ‘ಧರ್ಮಗ್ರಂಥ’ಗಳಲ್ಲ, ಪುರಾತನ ದಾರ್ಶನಿಕರಲ್ಲ, ತಪಸ್ವಿಗಳೂ ಅಲ್ಲ, ೧೮೭೭-೧೯೪೫ ರ ಅವಧಿಯಲ್ಲಿ ಅಮೇರಿಕಾದಲ್ಲಿ ಜೀವಿಸಿದ್ದ ಎಡ್ಗರ್ ಕೇಸೀ ಎಂಬ ಒಬ್ಬ ಸಾಮಾನ್ಯ ಬಡ ಕ್ರಿಶ್ಚಿಯನ್. ೯ ನೇ ತರಗತಿಗೆ ತನ್ನ ಶಿಕ್ಷಣವನ್ನು ಮೊಟಕುಗೊಳಿಸಿ ಜೀವನೋಪಾಯಕ್ಕಾಗಿ ದುಡಿಯತೊಡಗಿದ್ದವ. ವಾಸಿಲಾಗುವುದಿಲ್ಲ ಎಂದು ವೈದ್ಯರು ಘೋಷಿಸಿದ್ದ ಗಂಟಲು ಬೇನೆಯಿಂದಾಗಿ ಮಾತನಾಡುವ ಶಕ್ತಿ ಕಳೆದುಕೊಂಡವ. ತತ್ಪರಿಣಾಮವಾಗಿ, ಮಾತು ಹೆಚ್ಚು ಆಡಬೇಕಾದ ಕಾಯಕದಲ್ಲಿ ತೊಡಗಿಸಿಕೊಂಡಿದ್ದವ. (ಇವನ ಸಂಕ್ಷಿಪ್ತ ಜೀವನ ಚರಿತ್ರೆ ತಿಳಿಯಲು ಭೇಟಿ ನೀಡಿ: http://en.wikipedia.org/wiki/Edgar_Cayce) ಇಂತಿದ್ದವನಿಗೆ ೨೪ ವರ್ಷ ವಯಸ್ಸಾಗಿದ್ದಾಗ ನಡೆದ ಒಂದು ಘಟನೆ ಇವನಲ್ಲಿ ಆ ತನಕ ಸುಪ್ತವಾಗಿದ್ದ ವಿಶಿಷ್ಟ ಸಾಮರ್ಥ್ಯವೊಂದು ಬಾಹ್ಯಜಗತ್ತಿನಲ್ಲಿ ಪ್ರಕಾಶಿಸುವಂತೆ ಮಾಡಿತು. ಸ್ವ ಸಮ್ಮೋಹಿತಾವಸ್ಥೆಯಲ್ಲಿ ವ್ಯಕ್ತಿಗಳ ಇಂದಿನ ಸ್ಥಿತಿಗತಿಗಳಿಗೆ ಕಾರಣ ಏನು ಎಂಬುದನ್ನು ಗುರುತಿಸಿ ಅದನ್ನು ಸುಧಾರಿಸುವ ವಿಧಾನಗಳನ್ನು ಸೂಚಿಸುವ ಸಾಮರ್ಥ್ಯ ಅದಾಗಿತ್ತು. ಆರಂಭದಲ್ಲಿ ರೋಗ ನಿದಾನ ಮತ್ತು ಚಿಕಿತ್ಸಾವಿಧಾನ ಕುರಿತಾಗಿ ಬಳಕೆಯಾಗುತ್ತಿದ್ದ ಸಾಮರ್ಥ್ಯವನ್ನು ಹಿಂದಿನ ಜನ್ಮದ ಮಾಹಿತಿ, ಇತಿಹಾಸದ ಘಟನಾವಳಿಗಳ ವಿಶ್ಲೇಷಣೆ ಇವೇ ಮೊದಲಾದ ವಿವಿಧ ಕ್ಷೇತ್ರಗಳಲ್ಲಿ ಬಳಕೆ ಆಯಿತು. ಈತ ಹೇಳಿದ್ದೆಲ್ಲವನ್ನೂ ದಾಖಲಿಸಿ ಸಂರಕ್ಷಿಸಿ ಇಡಲಾಗಿದೆ. ಆಸಕ್ತರು ಇಂದೂ ಮೂಲ ದಾಖಲೆಗಳನ್ನು ಪರಿಶೀಲಿಸಬಹುದು. ತಾನು ಈ ಮಾಹಿತಿಯನ್ನು ವ್ಯಕ್ತಿ ಜೀವಂತವಾಗಿದ್ದರೆ ಅವನ ಮನಸ್ಸಿನ ಅಜಾಗೃತ ಭಾಗದಿಂದ ಸಂಗ್ರಹಿಸುತ್ತಿರುವುದಾಗಿಯೂ ( ನಮ್ಮ ಹಿಂದಿನ ಜನ್ಮಗಳ ಮಾಹಿತಿ ನಮ್ಮ ಮನಸ್ಸಿನಾಳದಲ್ಲಿಯೇ ಹುದುಗಿದೆ ಎಂದು ಇದರ ಅರ್ಥ) ಜೀವಂತವಾಗಿಲ್ಲದಿದ್ದರೆ ‘Akashic Records’ ನಿಂದ ಪಡೆಯುತ್ತಿರುವುದಾಗಿಯೂ [ಆಕಾಶ ಅನ್ನುವ ಸಂಸ್ಕೃತ ಪದಕ್ಕೆ ವ್ಯಾಪಕ ಅರ್ಥ ಇದೆ] ತಿಳಿಸಿದ್ದ. ಅಷ್ಟೇ ಅಲ್ಲ ‘Karmic Reasons’ (ಅರ್ಥಾತ್, ಕರ್ಮಫಲ) ಎಂಬ ಪದಪುಂಜವನ್ನು ಸಮ್ಮೋಹಿತಾವಸ್ಥೆಯಲ್ಲಿ ಬಳಸುತ್ತಿದ್ದ. ಇವೆರಡೂ ಅವನು ಬೆಳೆದು ಬಂದಿದ್ದ ಸಂಸ್ಕೃತಿಯಲ್ಲಿ ಇಲ್ಲದೇ ಇದ್ದ ಪದಗಳು. ಆರಂಭದಲ್ಲಿ ಉಚಿತವಾಗಿಯೇ ಸೇವೆ ಸಲ್ಲಿಸುತ್ತಿದ್ದ. ಕ್ರಮೇಣ ಸಲಹೆ ಪಡೆಯಲು ಬರುತ್ತಿದ್ದವರ ಸಂಖ್ಯೆ ಅಧಿಕವಾದಾಗ ಜೀವನ ನಿರ್ವಹಣೆಗಾಗಿ ಅಲ್ಪಶುಲ್ಕ ವಸೂಲಿ ಮಾಡುತ್ತಿದ್ದ. ಪ್ರಚಾರಪ್ರಿಯನಾಗಿರಲಿಲ್ಲ. ಸಾಮರ್ಥ್ಯದ ದುರುಪಯೋಗ ಮಾಡಲಿಲ್ಲ. ಸಮ್ಮೋಹಿತಾವಸ್ಥೆಯಲ್ಲಿ ಏನು ಹೇಳಿದ್ದೆ ಎಂಬುದು ಅತನಿಗೆ ಜಾಗೃತಾವಸ್ಥೆಯಲ್ಲಿ ನೆನಪಿರುತ್ತಿರಲಿಲ್ಲ.

ಈ ಪುಸ್ತಕದಲ್ಲಿ ಉಲ್ಲೇಖಿಸಿರುವ ಎಲ್ಲ ಮಾಹಿತಿಯ ಸತ್ಯಾಸತ್ಯತೆಯನ್ನು ವೈಜ್ಞಾನಿಕವಾಗಿ ಪರೀಕ್ಷಿಸಲು ಸಾಧ್ಯವಿಲ್ಲವಾದರೂ ತರ್ಕಸಮ್ಮತವಾಗಿರುವುದರಿಂದ ನಿಮ್ಮನ್ನು ಹೆಚ್ಚು ಚಿಂತನೆ ನಡೆಸಲು ಪ್ರಚೋದಿಸಬಹುದು ಎಂಬ ಕಾರಣಕ್ಕಾಗಿ ಓದಲೇಬೇಕಾದ ಪುಸ್ತಕ ಎಂದು ಶಿಫಾರಸ್ಸು ಮಾಡುತ್ತಿದ್ದೇನೆ.

* * * * * * * * *

ಚಿತ್ರಕೃಪೆ : booksie.com

2 ಟಿಪ್ಪಣಿಗಳು Post a comment
  1. krish
    ಡಿಸೆ 22 2011

    PLz send pdf link for this book.

    ಉತ್ತರ
  2. ಡಿಸೆ 24 2011

    Hello
    The name of the book is Many MANSIONS and not MANISIONS..Correct it please

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments