ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 13, 2012

3

ಸ್ಮಾರ್ಟ್ ಫೋನ್ ಬಗ್ಗೆ ನಮಗೆಷ್ಟು ಗೊತ್ತು?

‍ನಿಲುಮೆ ಮೂಲಕ

– ಮುರಳಿಧರ್ ದೇವ್

ಇತ್ತೀಚಿಗೆ ಎಲ್ಲೆಡೆಯೂ ಸ್ಮಾರ್ಟ್ ಫೋನ್ ಗಳದ್ದೇ ಸುದ್ದಿ, ಬಹುತೇಕ ಎಲ್ಲ ದೊಡ್ಡ ದೊಡ್ಡ ಕಂಪನಿಗಳು ತಾವು ಸ್ಮಾರ್ಟ್ ಫೋನ್ ನಲ್ಲಿ ಇರಬೇಕೆಂದು ಬಯಸ್ತ ಇವೆ. ಅಲ್ಲದೆ ಗೂಗಲ್ ಎಂಬ ದೈತ್ಯ ಕಂಪನಿ android ಎನ್ನುವ ಆಪರಟಿಂಗ್ ಸಿಸ್ಟಮ್ ತಂದಮೆಲಂತೂ ಸ್ಮಾರ್ಟ್ ಫೋನ್ ಮಾರುಕಟ್ಟೆ ತುಂಬಾನೇ ವಿಸ್ತಾರವಾಗಿದೆ. ಗೂಗಲ್ ನ  android ಆಧಾರಿತ  ಹೊಸ ಸ್ಮಾರ್ಟ್ ಫೋನ್ ಗಳು  ಕೇವಲ ೪ ಸಾವಿರದಿಂದ  ಶುರುವಾಗಿ ೪೦ ಸಾವಿರದವರೆಗೂ ದೊರೆಯುತ್ತವೆ. ಹಣಕ್ಕೆ ತಕ್ಕಂತೆ ಮೊಬೈಲ್ ಪರದೆ, ವಿಶೇಷತೆಗಳು, ಕ್ಯಾಮರ ಸೌಲಭ್ಯ ಇರುತ್ತವೆ. ಈ ಸ್ಮಾರ್ಟ್ ಫೋನ್ ಗಳಲ್ಲಿನ ಮತ್ತೊಂದು ವಿಶೇಷ ಅಂದರೆ, ಬಳಕೆದಾರ ತನಗೆ ಬೇಕಾದ ಅಪ್ಲಿಕೇಶನ್ ಗಳನ್ನು ” android  ಮಾರ್ಕೆಟ್” ನಿಂದ  ತನ್ನ ಮೊಬೈಲ್ ನಲ್ಲಿ ಬಳಸಬಹುದು. ವಿವಿಧ ಆಟಗಳನ್ನು, ಸಾಮಾಜಿಕ ತಾಣಗಳ  ಅಪ್ಲಿಕೇಶನ್ ಗಳನ್ನು, ಬ್ಯಾಂಕಿಂಗ್  ಅಪ್ಲಿಕೇಶನ್ ಗಳನ್ನು ಮೊಬೈಲ್ ನಲ್ಲಿ ಬಳಸಬಹುದು. ಇದೆ ವಿಚಾರದಿಂದ  ಭಾರತದಲ್ಲೂ ಪ್ರತಿಯೊಬ್ಬರಿಗೂ ತಾವು ಒಂದು ಸ್ಮಾರ್ಟ್ ಫೋನ್ ತಗೊಂಡು ಸ್ಮಾರ್ಟ್ ಆಗಬೇಕೆಂಬ ಹಂಬಲ. ಅಲ್ಲದೆ  android  ಮಾರ್ಕೆಟ್ ನಲ್ಲಿ ಬಹಳಷ್ಟು ಉಚಿತವಾಗಿ ಬಳಸಬಹುದಾದ  ಅಪ್ಲಿಕೇಶನ್ ಗಳಿವೆ. ಫೋನ್ ಬೆಲೆಯೂ ಕೈಗೆಟಗುವ ದರದಲ್ಲೇ ಇದೆ, ಹೀಗಾಗಿ ಇತ್ತೀಚಿನ ದಿನಗಳಲ್ಲಿ ಬಹುತೇಕ ಜನರ ಕೈನಲ್ಲಿ ಇಂತಹ ಸ್ಮಾರ್ಟ್ ಫೋನ್ ಗಳನ್ನ ಕಾಣಬಹುದು.

ಬಹುತೇಕರಿಗೆ ಸ್ಮಾರ್ಟ್ ಫೋನ್ ನ ಉಪಯೋಗ ಏನು ಅಂತ ಗೊತ್ತಿಲ್ದೆ ಇದ್ರೂ ಸ್ಮಾರ್ಟ್ ಆಗಿರಬೇಕು ಅಂತ ಸ್ಮಾರ್ಟ್ ಫೋನ್ ತೊಗೋತ ಇದಾರೆ. ತಿಳಿದವರಿಗೂ ಸ್ಮಾರ್ಟ್ ಫೋನ್ ಗಳ ಬಗ್ಗೆ ಹಾಗು ಅದರಲ್ಲಿ ಉಪಯೋಗಿಸಬಹುದಾದ ಅಪ್ಪ್ಲಿಕೆಶನ್ ಗಳ ಗ್ಗೆ ಹೆಚ್ಚಾಗಿ ತಿಳುವಳಿಕೆ ಇರುವುದಿಲ್ಲ. ಇದರಿಂದಾಗಿಯೇ ಇತ್ತೀಚಿನ ದಿನಗಳಲ್ಲಿ ಹ್ಯಾಕರ್ ಗಳು ಈ ಅಪ್ಪ್ಲಿಕೆಶನ್ ಲೋಕಕ್ಕೆ ನಿಧಾನವಾಗಿ ಕಾಲಿಡ್ತಾ ಇದಾರೆ. ಬಳಕೆದಾರನಿಗೆ ಯಾಮಾರಿಸಿ ಅವನ ಅರಿವಿಗೆ ಬರದಂತೆ ಆತನ ಮಾಹಿತಿಗಳನ್ನು ಕದಿಯುವ ಜಾಲಗಳು ನ್ಧಾನವಾಗಿ ಹುಟ್ತ್ಕೊಳ್ತಾ ಇವೆ. ಹಾಗು ಇದಕ್ಕೆಲ್ಲ ಬಳಕೆದಾರನಿಗೆ ಸ್ಮಾರ್ಟ್ ಫೋನ್ ಗಳು & ಅದರಲ್ಲಿ ಬಳಸಬಹುದಾದ ಅಪ್ಪಿಕೆಶನ್ ಗಳ ಬಗ್ಗೆ ಇರುವ ಕಡಿಮೆ ಜ್ಞಾನದಿಂದ ಹ್ಯಾಕರ್ ಗಳು ಸುಲಭವಾಗಿ ಸ್ಮಾರ್ಟ್ ಫೋನ್ ನಲ್ಲಿರುವ ಸ್ಮಾರ್ಟ್ ಜನರ ಮಾಹಿತಿಗಳನ್ನು ಸುಲಭವಾಗಿ ಪಡೆದುಕೊಳ್ಳುತ್ತಾರೆ.

ಯಾವುದೇ ಅಪ್ಪ್ಲಿಕೆಶನ್ ಒಂದನ್ನು ಮೊಬೈಲ್ನಲ್ಲಿ ಇನ್ಸ್ಟಾಲ್ (ಸೇರಿಸೋಕೆ)  ಮುಂಚೆ ಆ ಅಪ್ಪ್ಲಿಕೆಶನ್ ಬಳಸಲ ನಿಮ್ಮ ಫೋನ್ ನಲ್ಲಿನ ಯಾವ್ಯಾವ ಮಾಹಿತಿಗಳನ್ನು ಉಪಯೋಗಿಸಬಹುದು ಅಂತ ಕೆಳಲಾಗುತ್ತೆ, ಆದರೆ ಬಹುತೇಕರು ಅದರೆಡೆ ಗಮನವನ್ನು ಕೊಡದೆ ಸುಮ್ಮನೆ ಬೇಕೋ ಬೇಡವೋ ಅಪ್ಪ್ಲಿಕೆಶನ್ ಗಳನ್ನೂ ಮೊಬೈಲ್ ಒಳಗೆ ಬಿಟ್ಟುಕೊಳ್ತಾರೆ, ಇದರಿಂದ ತಾವಾಗಿಯ ಆ ಅಪ್ಪ್ಲಿಕೆಶನಗಳಿಗೆ ಅವ್ಹಾನ ಕೊಟ್ಟು ಫೋನ್ ನಲ್ಲಿನ ಮಾಹಿತಿ ಕದಿಯೋಕೆ ಸುಲಭ ಹಾದಿ ಮಾಡಿ ಕೊಡ್ತಾರೆ. ಇನ್ಮುಂದೆ ಯಾವುದೇ ಅಪ್ಪ್ಲಿಕೆಶನಗಳನ್ನು ನಿಮ್ಮ ಫೋನ್ ನಲ್ಲಿ ಸೇರಿಸುವ ಮೊದಲು ಅದಕ್ಕೆ ಬೇಕಾದ ಪೆರ್ಮಿಶನ್ ಗಳು ಏನೇನೋ ಅಂತ ನೋಡಿ ಉಪಯೋಗೊಸಿದರೆ ನಿಜಕ್ಕೂ ಸ್ಮಾರ್ಟ್ ಆಗಿರ್ಬೋದು.

3 ಟಿಪ್ಪಣಿಗಳು Post a comment
  1. ಚೇತನ್ ಕೆ.ವಿ's avatar
    ಚೇತನ್ ಕೆ.ವಿ
    ಏಪ್ರಿಲ್ 13 2012

    good article

    ಉತ್ತರ
  2. elson's avatar
    elson
    ಏಪ್ರಿಲ್ 13 2012

    Article is informative for the beginners. Very well written. 🙂

    ಉತ್ತರ
  3. Muralidhar Dev's avatar
    Muralidhar Dev
    ಏಪ್ರಿಲ್ 13 2012

    Thanks elson

    ಉತ್ತರ

Leave a reply to elson ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments