ವಿಷಯದ ವಿವರಗಳಿಗೆ ದಾಟಿರಿ

Archive for

29
ಮೇ

ಸುಂದರ್ ರಾಜ್ ನೆನಪಿಸಿಕೊಂಡಂತೆ ಅಂಬರೀಷ್ !

– ಶ್ರೀಧರ್ ಜಿ ಸಿ ಬನವಾಸಿ

ಅಂಬರೀಷ್ ಜೊತೆಗಿನ ನನ್ನ ಸ್ನೇಹವನ್ನು ಈ ಮೂಲಕ ವರ್ಣಿಸೋದು ತುಂಬಾ ಕಷ್ಟ. ಅಂಬರೀಷ್ ಜೊತೆಗಿನ ನನ್ನ ಒಡನಾಟ, ಸ್ನೇಹ, ಓಡಾಟ, ಕೆಲಸಮಾಡಿದ್ದು ನನಗೆ ಬೆಟ್ಟದಷ್ಟು ಅಪಾರ ನೆನಪುಗಳು ನನ್ನ ಮನಸ್ಸಿನಲ್ಲಿವೆ. ಆತ ಹೀಗೆ ಅಂತ ಹೇಳೋದು ತುಂಬಾ ಕಷ್ಟ, ಆತನ ತರಹ ನೀವಾಗಬೇಕು ಅಂತಾನೂ ಹೇಳೋದು ತುಂಬಾ ಕಷ್ಟ. ಅಂಬರೀಷನಿಗೆ ಅಂಬರೀಷನೇ ಸಾಟಿ. ಅಂಬರೀಷ್  ಯಾಕೆ ಇಷ್ಟವಾಗ್ತಾರೆ ಅಂತ ಅವರನ್ನ ಇಷ್ಟಪಡೋ ಎಲ್ಲರನ್ನು ಕೇಳಿ ಒಬ್ಬೋಬ್ಬರು ಆತನನ್ನು ಒಂದೊಂದು ರೀತಿಯಲ್ಲಿ ವರ್ಣಿಸುತ್ತಾರೆ. ಹಾಗಾಗಿ ಅಂಬರೀಷ್ ಇಷ್ಟವಾಗಲು ಬಹಳಷ್ಟು ಕಾರಣಗಳಿವೆ. ಕನ್ನಡಚಿತ್ರರಂಗವೇಕೇ, ರಾಜಕೀಯ, ಬೇರೆ ಚಿತ್ರರಂಗ, ರಾಜ್ಯ ರಾಜಕೀಯ, ದೆಹಲಿ ರಾಜಕೀಯದ ವ್ಯಕ್ತಿಗಳು ಕೂಡ ಆತನನ್ನು ಇಷ್ಟಪಡುತ್ತಾರೆ. ಆತನ ವ್ಯಕ್ತಿತ್ವೇ ಅಂತಹದ್ದು. ಅಜಾತಶತ್ರು, ಹುಂಬತನ, ಎದೆಗಾರಿಕೆ, ಬೇರೆಯವರಿಗೆ ಮರುಗುವ ಮನಸ್ಸು ಆತನ ಗುಣಗಾನ ಮಾಡುವುದು ನಿಜವಾಗಿಯೂ ಕಷ್ಟ ಸಾಧ್ಯ. ಇಂತಹ ಅಂಬರೀಷ್ ನನ್ನ ಆತ್ಮೀಯ ಸ್ನೇಹಿತ ಅನ್ನುವುದೇ ನನ್ನ ಹೆಮ್ಮೆಗೆ ಕಾರಣ.

ಅಂಬಿ ‘ನಾನೊಬ್ಬ ಅದ್ಭುತ ನಟ’ ಅಂತ ಎಲ್ಲೂ, ಯಾರ ಹತ್ತಿರವೂ ಹೇಳಿಕೊಂಡವರಲ್ಲ. ಆದರೆ, ವ್ಯಕ್ತಿಯಾಗಿ, ಸಮಾಜದ ಶಕ್ತಿಯಾಗಿ, ಉತ್ತಮ ಮನುಷ್ಯನಾಗಿ ಅಂಬಿಗೆ ಅಂಬಿಯೇ ಸಾಟಿ. ಇಂಥ ವೈವಿಧ್ಯತೆಯ ಮನುಷ್ಯನನ್ನು ಎಲ್ಲಿ ಹುಡುಕಿದರೂ ಸಿಕ್ಕುವುದಿಲ್ಲ. ಆ ದಿನಗಳಲ್ಲಿ ನನಗೆ ಅಂಬಿ ಕಂಡರೆ  ಸಣ್ಣ ಒಳ್ಳೆಯ ಹೊಟ್ಟೆಕಿಚ್ಚಂತೂ ಇತ್ತು, ಏನಪ್ಪಾ ಈ ಮನುಷ್ಯ ಪುಟ್ಟಣ್ಣನಂತಹ ನಿರ್ದೇಶಕರ ಮನಸ್ಸನ ಹೇಗಂಪಾ ಗೆದ್ದು ಬಿಟ್ಟಿದ್ದಾನೆ. ನಾವೇನೋ ಬಾಲಚಂದರ್ ಸಿನಿಮಾಗಳಲ್ಲಿ  ಗುರುತಿಸಿಕೊಂಡುಬಿಟ್ಟಿದ್ವಿ. ಆದರೆ ಪುಟ್ಟಣ್ಣರ ಸಿನಿಮಾಗಳಲ್ಲಿ ನಮಗೆ ಅವಕಾಶ ಸಿಕ್ಕಿರಲಿಲ್ಲ. ಈತನ್ನ ನೋಡಿದ್ರೆ ಪುಟ್ಟಣ್ಣನವರ ಹೆಚ್ಚಿನ ಸಿನಿಮಾಗಳಲ್ಲಿ ಚಾನ್ಸ್ ತಗೋತಾ ಇದಾನೆ. ಪುಟ್ಟಣ್ಣ ಕಣಗಾಲ್ ಗುರುಕೃಪೆಗೆ ಹೆಚ್ಚು ಒಳಗಾದ ನಟ ಅಂಬರೀಶ್ನನ್ನು ಕಂಡಾಗ ಈ ರೀತಿಯ ಅವ್ಯಕ್ತ ಅಸೂಹೆಯ ಪ್ರೀತಿ ಆತನ ಮೇಲಿತ್ತು. ಆದರೆ ಅಂಬರೀಷ್ ತನ್ನ ನಿಷ್ಕಲ್ಮಶ ಪ್ರೀತಿಯಿಂದ ನನ್ನನ್ನು ಗೆದ್ದುಬಿಟ್ಟಿದ್ದ.

Read more »

29
ಮೇ

ರಾತ್ರಿಯ ಕತ್ತಲಿನ ಮೌನ ನನ್ನಲ್ಲಿನ ಪ್ರಶ್ನೆಗಳಿಗೆ ಸಿಕ್ಕ ಉತ್ತರವಾಗಿತ್ತು

– ಭಾಸ್ಕರ್ ಎಸ್.ಎನ್

ತನ್ನ ಕಂದಮ್ಮನನ್ನು ಕಂಕುಳಲ್ಲಿ ಹೊತ್ತ ಆಕೆಗೆ ಮುಂದಿನ ದಾರಿ ಕಾಣುತ್ತಿಲ್ಲ, ಕೊನೆಯ ಕಣ್ಣ ಹನಿಯೂ ಸಹಾ ಬತ್ತಿ ಹೋಗಿತ್ತು. ಕ್ಷಣದಿಂದ ಕ್ಷಣಕ್ಕೆ ಕಂಕುಳಲ್ಲಿದ್ದ ಮಗುವಿನ ಜ್ವರ ಏರುತ್ತಿತ್ತು.

“ಏನಮ್ಮಾ! ಇಲ್ಲಿ ಸುಮ್ನೆ ನಿಂತಿದ್ರೆ ಕೆಲ್ಷ ಆಗೋಲ್ಲ. ದುಡ್ಡಿದ್ರೆ ಮಾತ್ರ ಇಲ್ಗೆ ಬಾ…ಸುಮ್ನೆ ನಮ್ ತಲೆ ತಿನ್ಬೇಡಾ, ಹೋಗ್..ಹೋಗ್” ಹೀಗೆ ಬಂದ ದ್ವನಿಯಲ್ಲಿದ್ದ ನಿರ್ಭಾವುಕತೆ ಆಕೆಯನ್ನು ಮತ್ತಷ್ಟು ನಿಸ್ಸಹಾಯಕ್ಕೆ ದೂಡುತ್ತಿತ್ತು. ಈ ಮಾತುಗಳನ್ನಾಡಿದವರು ಮತ್ಯಾರೂ ಅಲ್ಲ, ಒಬ್ಬ ಸುಪ್ರಸಿದ್ದ ಡಾಕ್ಟರ್‍, ಡಾ.ಕಷ್ಯಪ್. “ಅನುಗ್ರಹ ನರ್ಸಿಂಗ್ ಹೋಂ” ನ ಒಡೆಯ.

ಇವೆಲ್ಲವನ್ನು ಗಮನಿಸುತ್ತಿದ್ದ ನನಗೆ ಆಕೆಯ ದಯನೀಯ ಸ್ಥಿತಿ ಕಂಡು ಮಾತು ಹೊರಡದಂತಾಗಿತ್ತು. ಒಂದು ರೀತಿಯ ನಿಸ್ಸಹಾಯತೆ ನನ್ನನ್ನು ಆವರಿಸ ತೊಡಗಿತ್ತು.

ಆಕೆಯ ಜೊತೆಯಲ್ಲಿದ್ದ ಮಹಿಳೆಯಿಂದ ತಿಳಿದು ಬಂದ ವಿಷಯವೆಂದರೆ, ಆಕೆಗೆ ಇಬ್ಬರು ಹೆಣ್ಣುಮಕ್ಕಳು, ಈಗ ಇರುವ ಮಗುವಿಗೆ ಒಂದು ವರ್ಷ, ಮತ್ತೊಂದು ಮಗು ಈಗ್ಗೆ ೪ ದಿನಗಳ ಹಿಂದೆ ಸಾವನ್ನಪ್ಪಿತ್ತು..! ಅದೂ ಸಹಾ ಜ್ವರದಿಂದ ಅದ್ಯಾವ ಜ್ವರವೆಂಬ ಕಲ್ಪನೆಯೂ ಅವರಿಗಿರಲಿಲ್ಲ. ಈಗ ಮಗುವಿಗೆ ಬಂದಿರುವುದೂ ಸಹಾ ಜ್ವರವೇ.

Read more »