ವಿಷಯದ ವಿವರಗಳಿಗೆ ದಾಟಿರಿ

Archive for

14
ಮೇ

ಹದಿವಯಸೆಂದು ತುಳಿದದ್ದೇ ಹಾದಿಯಾಗಬೇಕೆ?

– ರೂಪಾ ಎಲ್ ರಾವ್
ತಿಳಿಯದೆ ನಮಗೆ ತಿಳಿಯದೇ ಬದುಕುವ ದಾರಿ ತಿಳಿಯದೆ?
ಹೀಗಂತ ಯುವಜನ ಎಲ್ಲರನ್ನ  ಹೆಚ್ಚಾಗಿ ಪೋಷಕರನ್ನ ಧಿಕ್ಕರಿಸಿ ಹೋಗುತ್ತಿದ್ದರೆ, ಪೋಷಕರು ಅಸಹಾಯಕರಾಗಿ ತಾವು ಅತಿಯಾಗಿ ಮುದ್ದು ಮಾಡಿ ಬೆಳೆಸಿದ ಫಲದ ಅಧೋಗತಿಯನ್ನ ನೋಡುತ್ತಿದ್ದಾರೆ…… ಮಾತಿಗೆ ಮುಂಚೆ ನಿಂಗೆ ಏನೂ ಗೊತ್ತಿಲ್ಲ, ಅನ್ನುವ ಮಾತು ಕೇವಲ ಒಂದು ವರೆ ದಶಕದ ಹಿಂದೆ ಸಕಲಕಲಾವಲ್ಲಭರಂತಿದ್ದ ಈ ಮಧ್ಯವಯಸ್ಕ ಜೀವಿಗಳನ್ನ ಈ ಇಂಟರ್ನೆಟ್ , ಮೊಬೈಲ್ ಬ್ಲೂ ಟೂತ್ , ಅನ್ನುವ ನಿರ್ಜೀವ ಪದಗಳು ನಿಸ್ಸಾಹಯಕರನ್ನಾಗಿ ಮಾಡುತ್ತಿದೆ.
ನನ್ನ ಮಗ ಈಗಲೇ ಮೊಬೈಲ್ ಕೇಳ್ತಿದಾನೆ, ನನ್ ಮಗಳಿಗೆ ಕಂಪ್ಯೂಟರ್ ಗೇಮ್ ಅಂದ್ರೆ ತುಂಬಾ ಇಷ್ಟ , ನನ್ ಮಗ ಇಂಟರ್ನೆಟ್ ನಲ್ಲಿ ಪ್ರಾಜೆಕ್ಟ್ ಮಾಡ್ತಿದಾನೆ. ಹೀಗೆಲ್ಲಾ ಕೊಚ್ಚಿಕೊಳ್ಳುತ್ತಾ ಮಹತ್ತರವಾದುದೇನೋ ಸಾಧಿಸುತ್ತಿದ್ದಾರೆ ಎಂದುಕೊಳ್ಳುತಿದ್ದ ಮಕ್ಕಳು ಇಂದು ಅಪ್ಪ ಅಮ್ಮನ್ನ ನಿನಗೆ ಏನು ಗೊತ್ತಿದೆ, ಸುಮ್ಮನೆ ಬಾಯಿ ಮುಚ್ಚಿಕೊಂಡಿರು ಅನ್ನುವ ಮಟ್ಟಕ್ಕೆ ಬೆಳೆದಿದ್ದಾರೆ
ಹದಿ ಹರೆಯದ ಮಕ್ಕಳನ್ನು ಸ್ನೇಹಿತರನ್ನಾಗಿ ನೋಡಿಕೊಳ್ಳಬೇಕು ನಿಜ ಆದರೆ ಹಾಗಂತ ಅವರನ್ನ ಇಷ್ಟ ಬಂದ ಹಾಗೆ ನಡೆಯಲು ಬಿಟ್ಟರೆ ಏನೇನಾಗಬಹುದು ಎನ್ನುವುದಕ್ಕೆ  ಎಷ್ಟೊ ಉದಾಹರಣೆಗಳು ಸುತ್ತಾ ಮುತ್ತಾ ಇವೆ ಅಂತಾಹುದರಲ್ಲಿ ವೀರೂ ಸಹ ಒಬ್ಬ (ಹೆಸರು ಬದಲಾಯಿಸಲಾಗಿದೆ) ಹತ್ತು ವರ್ಷದ ಹಿಂದೆ ನನ್ನ ಬಳಿ ಟ್ಯೂಷನ್ ಗೆ ಬರುತ್ತಿದ್ದ . ಅಪ್ಪ ಅಮ್ಮ ಸೋಪ್ ಪೌಡರ್ ಅದೂ ಇದೂ ಮಾಡಿ ಮಾರಿ ಮಗನನ್ನು ಓದಿಸುತ್ತಿದ್ದರು. ಎಷ್ಟೆ ಬಡತನವಿದ್ದರೂ ಮಗನಿಗೆ ಯಾವ ಕೊರತೆಯನ್ನೂ ಮಾಡಿರಲಿಲ್ಲ. ನಾನೂ  ಕಾಲದ ಚಕ್ರದ ಜೊತೆ ಪಯಣಿಸುತ್ತಾ  ಅವನನ್ನು ಮರೆತೇ ಬಿಟ್ಟಿದ್ದೆ . ಹೋದ ತಿಂಗಳು , ಅಮ್ಮ ಮಗ ಇಬ್ಬರೂ ಬಂದಿದ್ದರು .ಅಂದಿನ ಆ ಪುಟ್ಟ ವೀರು ಇಂದು ನನ್ನನ್ನು ಮೀರಿ ಬೆಳೆದಿದ್ದಾನೆ, ದೊಡ್ಡ ಹುಡುಗ…. ಒಮ್ಮೆ ಸಂತೋಷವಾಯ್ತು ಆದರೆ ಅವನ ಅಮ್ಮ ಅವನ ಬಗ್ಗೆ ಹೇಳಿದ್ದು ತುಂಬಾ ಬೇಸರ, ಜೊತೆಗೆ ಯಾವುದೋ ಜವಾಬ್ದಾರಿಯನ್ನು ನೆನಪಿಸಿತು(ನಾನೂ ಒಬ್ಬ ತಾಯಿ)