ಪೆಟ್ರೋಲ್ ದರ ಹೆಚ್ಚಳ ಮತ್ತು ನಾವು
– ಪ್ರಶಸ್ತಿ.ಪಿ,ಸಾಗರ
ಇದೇ ಏಪ್ರಿಲ್ ಒಂದರಲ್ಲಿ ೭೩.೫ ಇದ್ದ ಪೆಟ್ರೋಲು ಈಗ ೮೧.೭ ಮುಟ್ಟಿದೆ.ಒಂದೇ ತಿಂಗಳಲ್ಲಿ ಅಂದಾಜು ೭ ರೂ ಹೆಚ್ಚಳ! ಪ್ರತೀ ಬಾರಿ ಹೆಚ್ಚಾದಾಗ್ಲೂ ಕೇಂದ್ರ ಸರ್ಕಾರ ಏನ್ಮಾಡ್ತಾ ಇದೆ? ರಾಜ್ಯ ಸರ್ಕಾರ ಏಕೆ ಸುಮ್ನಿದೆ ಅಂತ ಬೊಬ್ಬೆ ಹಾಕೋದು, ಸೈಕಲ್ ಸವಾರಿ ಮಾಡ್ಬೇಕು ಇನ್ಮುಂದೆ, ನಟರಾಜ ಸರ್ವೀಸು ಮಾಡೋಣ ಅಂತ ಸುಮ್ನೆ ಉಡಾಫೆ ಮಾಡೋದೆ ಆಯ್ತು. ಯಾರೆಷ್ಟೇ ಪ್ರತಿಭಟನೆ ಮಾಡಿದ್ರೂ ಇವ್ರು ಬಗ್ಗೊಲ್ಲ ಅಂತ ಅವ್ರಿಗೆ ಹಿಡಿಶಾಪ ಹಾಕಿದ್ರೆ ಪರಿಸ್ಥಿತಿ ಸರಿ ಆಗತ್ಯೆ? ನಮ್ಮ ಭೂಮಿಯಲ್ಲಿರೋ ನವೀಕರಿಸಲಾಗದ (ಪೆಟ್ರೋಲು, ಡೀಸೆಲು ಮುಂತಾದ)ಇಂಧನ ಮೂಲಗಳನ್ನ ಹೀಗೆ ಉಪಯೋಗಿಸ್ತಾ ಹೋದ್ರೆ ಇನ್ನು ಅಂದಾಜು ಮೂವತ್ತು ವರ್ಷಗಳಲ್ಲಿ ಅವುಗಳೆಲ್ಲಾ ಖಾಲಿ ಆಗುತ್ತೆ ಅಂತ ಹೈಸ್ಕೂಲಿನಲ್ಲೇ ಓದಿದ ನೆನಪು . ಆದರೂ ನಾವು ಎಚ್ಚೆತ್ತುಕೊಳ್ಳುತ್ತಿಲ್ಲ ಏಕೆ? ಸುಧಾರಣೆ ಆಗಲಿ, ಆದರೆ ಅದು ನಮ್ಮಿಂದ ಅಲ್ಲ, ಶಂಕರಾಚಾರ್ಯರು ಹುಟ್ಟಲಿ, ಆದರೆ ಪಕ್ಕದ ಮನೆಯಲ್ಲಿ ಎಂಬಂತ ಧೋರಣೆ ಏಕೆ?
ಕೆಲವೇ ವರ್ಷಗಳ ಹಿಂದೆ ಜತ್ರೋಪಾದಂತಹ ಗಿಡಗಳಿಂದ ಜೈವಿಕ ಇಂಧನ ತಯಾರಿಸೋ ಬಗ್ಗೆ ಚರ್ಚೆ ನಡೆದಿತ್ತು. ಅವುಗಳನ್ನು ಮರುಭೂಮಿಯಂತಹ ನೀರಿಲ್ಲದ ಕಡೆಯೂ ಬೆಳೆಸಬಹುದು ಎಂಬ ವದಂತಿಯೂ/ಸುದ್ದಿಯೂ ಹಬ್ಬಿತ್ತು. ನಮ್ಮ ಕಡೆಯೂ ಅದನ್ನ ಬೇಲಿ ಬದಿಯಲ್ಲಿ ಅದನ್ನು ಹಾಕಿದ್ದೆವು. ಆಮೇಲೆ ಅದರ ಬೀಜವನ್ನು ಖರೀದಿಸುವ ಬಗ್ಗೆಯಾಗಲಿ, ಎಣ್ಣೆ ಮಾಡುವ ಸುದ್ದಿಯಾಗಲಿ ಬರಲೇ ಇಲ್ಲ. ಇಂಥಹ ಪ್ರಯತ್ನಗಳೆಲ್ಲಾ ನಿರಂತರವಾಗಿರಬಾರದೇ? ಪೆಟ್ರೋಲ್ ದರ ಜಾಸ್ತಿ ಆದಾಗ ಮಾತ್ರ ಎಲ್ಲಿ ಜತ್ರೋಪಾದವರು ಎಂದು ಗುಟುರು ಹಾಕಬೇಕೇ ? ಮತ್ತಷ್ಟು ಓದು 




