ವಿಷಯದ ವಿವರಗಳಿಗೆ ದಾಟಿರಿ

ಜುಲೈ 22, 2013

6

ಕಾಂಗ್ರೆಸ್ಸಿನ ‘ನಮೋ’ನಿಯಾ ಮತ್ತು ಸೆಕ್ಯುಲರ್ ‘ನಾಯಿಮರಿ’

‍ನಿಲುಮೆ ಮೂಲಕ

–  ರಾಕೇಶ್ ಶೆಟ್ಟಿ

NaModiಭಾರತದಲ್ಲಿ ಭಾವುಕತೆಗೇನಾದರೂ ಬರವುಂಟೇ? ಹಾಗೇನಾದರೂ ಇದ್ದಿದ್ದರೆ ನಮ್ಮ ಸ್ಥಿತಿ ಸ್ವಲ್ಪಮಟ್ಟಿಗಾದರೂ ಸುಧಾರಿಸುತ್ತಿತ್ತೋ ಏನೋ? ಆದರೆ,ಭಾವುಕತೆ ಅನ್ನುವುದು ನಮ್ಮ ಅಸ್ಮಿತೆಯ ಭಾಗವಾಗಿರುವುದರಿಂದಲೇ ನಮ್ಮ ರಾಜಕಾರಣಿಗಳು,ರಾಜಕೀಯ ಪಕ್ಷಗಳು ಪದೇ ಪದೇ ಭಾವುಕತೆಯ ಬಿರುಗಾಳಿಯೆಬ್ಬಿಸಿ ತಮ್ಮ ಹಗರಣ,ವೈಫಲ್ಯಗಳನ್ನು ಮುಚ್ಚಿಕೊಳ್ಳುವುದು.ಅದರಲ್ಲೂ ಇಂತ ವಿಷಯದಲ್ಲಿ ಕಾಂಗ್ರೆಸ್ಸ್ ಪಕ್ಷದ್ದು ಉಳಿದೆಲ್ಲರಿಗಿಂತ ಒಂದು ‘ಕೈ’ ಮೇಲೆಯೇ ಹೌದು.

೨೪ ಗಂಟೆಯ ಮೀಡಿಯಾ ಯುಗದಲ್ಲಿ ದೊಡ್ಡ ದೊಡ್ಡ ಹಗರಣಗಳು ಸುದ್ದಿಯಾದಗಾಲೆಲ್ಲ ಕಾಂಗ್ರೆಸ್ಸ್ ಅದರಿಂದ ಹೊರಬರಲು ಒಂದು ಸಣ್ಣ ಎಳೆಯೇನಾದರೂ ಸಿಗುತ್ತದೆಯಾ ಅಂತ ನೋಡುತ್ತಿರುತ್ತದೆ.ಈ ಬಾರಿ ರೂಪಾಯಿ ಮೌಲ್ಯ ಕುಸಿದು,ಆಡಳಿತ ವ್ಯವಸ್ಥೆಯೇ ಹಳ್ಳ ಹಿಡಿದು ಕುಳಿತಿರುವಾಗ ಅದಕ್ಕೆ ಕಾಣಿಸಿದ ಬೆಳಕಿನ ಹಾದಿ “ನಾಯಿ ಮರಿ”…!

ಹೌದು. ಗುಜರಾತ್ ಮುಖ್ಯಮಂತ್ರಿ ರಾಯಿಟರ್ಸ್ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಬಳಸಿದ ನಾಯಿ ಮರಿ ಪದ.ರಾಯಿಟರ್ಸ್ ನೀಡಿದ ಸಂದರ್ಶನದಲ್ಲಿ ನಾಯಿ ಮರಿ ಬಂದಿದ್ದು ಹೇಗೆ ಅಂತ ನೋಡಿದರೆ,

ಸಂದರ್ಶಕ: “ಏನು (೨೦೦೨ ರ ಗಲಭೆ) ನಡೆಯಿತೋ ಆ ಬಗ್ಗೆ ನೀವು ಪಶ್ಚಾತ್ತಾಪ ಪಡುತ್ತಿರಾ?”

ಮೋದಿ : ಭಾರತದ ಸುಪ್ರೀಂ ಕೋರ್ಟು ಜಗತ್ತಿನ ಅತಿ ಉತ್ತಮ ಕೋರ್ಟುಗಳಲ್ಲಿ ಒಂದು ಎಂದು ಪರಿಗಣಿಸಲ್ಪಡುತ್ತದೆ.ಸುಪ್ರೀಂ ಕೋರ್ಟು ಸ್ಪೆಷಲ್ ಇನ್ವೆಸ್ಟಿಗೇಶನ್ ಟೀಮ್ (SIT) ಅನ್ನುವ ದಕ್ಷ,ಚಾಣಾಕ್ಷ ಅಧಿಕಾರಿಗಳ ತಂಡವನ್ನು ನೇಮಕಾತಿ ಮಾಡಿತ್ತು.ಅವರು ಕೊಟ್ಟ ವರದಿಯಲ್ಲಿ ನನಗೆ ಕ್ಲೀನ್ ಚಿಟ್ ಕೊಟ್ಟಿದ್ದಾರೆ.

ಇನ್ನೊಂದು ವಿಷಯ,ಕಾರಿನಲ್ಲಿ ಹೋಗುವಾಗ ನೀವು ಡ್ರೈವ್ ಮಾಡುತ್ತಿರಿ ಇಲ್ಲ ಹಿಂಬದಿಯಲ್ಲಿ ಕುಳಿತಿರಿ, ಆಗ “ನಾಯಿ ಮರಿ”ಯೊಂದು ಚಕ್ರದಡಿಗೆ ಬಂದರೆ ನಿಮಗೆ ನೋವಾಗುವುದಿಲ್ಲವೇ? ಆಗುತ್ತದೆ.ನಾನೊಬ್ಬ ಮುಖ್ಯಮಂತ್ರಿಯೋ ಅಲ್ಲವೋ ಆದರೆ ನಾನೂ ಒಬ್ಬ ಮನುಷ್ಯ ತಾನೇ? ಎಲ್ಲಾದರೂ ಕೆಟ್ಟದ್ದು ನಡೆದರೇ ನೋವಾಗಿಯೇ ಆಗುತ್ತದೆ.”

ಆದರೆ,ಮೋದಿಯ ಹೇಳಿಕೆಯನ್ನು ಈ  ಸೆಕ್ಯುಲರ್ ಮಂದಿ ಹೇಗೆಲ್ಲ ತಿರುಚಿ ತಮ್ಮ ಬೆಂಬಲಿಗರ ಮುಂದೆ ಇಟ್ಟರು ಅನ್ನಲು ಒಂದು ಸಣ್ಣ ಉದಾಹರಣೆ ಇಲ್ಲಿದೆ ನೋಡಿ.ಕರಾವಳಿ ಮೂಲದ ಕಮ್ಯುನಿಸ್ಟ್ ಪಕ್ಷದ ಮುಖಂಡರೊಬ್ಬರು ತಮ್ಮ ಫೇಸ್ಬುಕ್ಕಿನ ಗೋಡೆಯ ಮೇಲೆ ಹೀಗೆ ಬರೆಯುತ್ತಾರೆ, “ರಾಯಿಟರ್ಸ್ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹಿಂದುತ್ವವಾದಿಗಳ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ತನ್ನ ವ್ಯಕ್ತಿತ್ವವನ್ನು ಮತ್ತೊಮ್ಮೆ ಪ್ರಬಲವಾಗಿ ಪ್ರತಿಪಾದಿಸಿದ್ದಾರೆ. “ಗುಜರಾತ್ ನರಮೇದಕ್ಕೆ ತನಗೆ ಯಾವುದೇ ವಿಷಾದವಿಲ್ಲ. ನಾನು ಹಿಂದೂ ರಾಷ್ಟ್ರೀಯವಾದಿ, ನಾನು ಚಲಿಸುವ ಕಾರಿನ ಚಕ್ರದಡಿಗೆ ನಾಯಿ ಮರಿ ಬಿದ್ದಾಗ ನನಗೆ ಎಷ್ಟು ವಿಷಾದವಾಗುವುದೋ ಅಷ್ಟೇ ವಿಷಾದ ನರಮೇದದಿಂದಲೂ ಆಗಿದೆ” ಎಂದಿದ್ದಾರೆ.ಅಂತ ಬರೆದೂ ಮುಂದುವರೆಯುತ್ತಾ ಹೀಗೆ ಹೇಳುತ್ತಾರೆ “ಶೇಕಡಾ 15 ರಷ್ಟಿರುವ ಮುಸ್ಲಿಂ ಸಮುದಾಯದ ಮೇಲಿನ ಹತ್ಯಾಕಾಂಡಗಳನ್ನು ನಾಯಿ ಮರಿಯ ಸಾವಿಗೆ ಹೋಲಿಸುವಾತ ಹೇಗೆ ದೇಶದ ಆಡಳಿತವನ್ನು ಯಶಸ್ವಿಯಾಗಿ ನಿರ್ವಹಿಸಲು ಸಾಧ್ಯ ಎಂದು ಶಾಂತಿಪ್ರಿಯ ಜನತೆ ಆಲೋಚಿಸಬೇಕಿದೆ.”

ಈಗ ಹೇಳಿ. ನಿಜವಾಗಿಯೂ “ನಾಯಿ ಮರಿ”ಗೆ ಹೋಲಿಸಿದವರು ಯಾರು ಮೋದಿಯೋ? ಅಥವಾ ಸೆಕ್ಯುಲರ್ ಗಳೋ?

ಮೋದಿಯ ಮೇಲೆ ಈ ಮೊದಲು ಇವರು ಹಾರಿ ಬೀಳುತಿದ್ದಿದ್ದು ೨೦೦೨ರ ಗಲಭೆಯನ್ನಿಡಿದು ಆ ನಂತರ ಇವರಿಗೆ ಸಿಕ್ಕಿದ್ದು ನಾಯಿಮರಿ! ಇತ್ತೀಚೆಗೆ ಹೊಸ ಸೇರ್ಪಡೆ “ಕಾಂಗ್ರೆಸ್ಸ್ ತನ್ನ ತಪ್ಪನ್ನು ಮುಚ್ಚಿಕೊಳ್ಳಲು ಸೆಕ್ಯುಲರಿಸಂನ ಬುರ್ಖಾದೊಳಗೆ ಅವಿತುಕೊಳ್ಳುತ್ತದೆ” ಅನ್ನುವ ಭಾಷಣದ ನಡುವಿನ ಒಂದು ತುಣುಕು.

ಮೊನ್ನೆ ಪುಣೆಯ ಫರ್ಗ್ಯೂಸನ್ ಕಾಲೇಜಿನಲ್ಲಿ ಮಾಡಿದ ಭಾಷಣದಲ್ಲಿ ಮೋದಿ ನಮ್ಮ ಶಿಕ್ಷಣ ವ್ಯವಸ್ಥೆ ಸಾಗಬೇಕಾದ ಹಾದಿ,ರಾಷ್ಟ್ರ ನಿರ್ಮಾಣದ ಕನಸು,ಯುವ ಸಮೂಹದ ಬಳಕೆ,ಸಂಶೋಧನೆ,ವಿಜ್ನಾನ ಇವೆಲ್ಲದರ ಬಗ್ಗೆಯೂ ಮಾತನಾಡಿದರು ಅಷ್ಟೇ ಯಾಕೆ ಈ ಹತಾಶ ಸಮಯದ ಆರ್ಥಿಕ ಸ್ಥಿತಿಯನ್ನು ನೋಡಿ ಧೈರ್ಯ ಕಳೆದುಕೊಳ್ಳಬೇಕಿಲ್ಲ ಅನ್ನುತ್ತ ಪ್ರಧಾನಿ ಹೇಳಬೇಕಿದ್ದ ಮಾತನ್ನು ಹೇಳಿದರು.ಆದರೆ ಟಿ.ಆರ್.ಪಿ ಹಿಂದೆ ಬಿದ್ದ ಮೀಡಿಯಾಗಳಿಗೆ,ಕಾಂಗ್ರೆಸ್ಸಿನ ಸೆಕ್ಯುಲರ್ ಪತ್ರಕರ್ತರಿಗೆ,ಕಾಂಗ್ರೆಸ್ಸ್ ಮತ್ತು ಸೆಕ್ಯುಲರ್ ರಾಜಕಾರಣಿಗಳಿಗೆ ಆ ಬಗ್ಗೆ ಚರ್ಚೆ ಮಾಡಲೇಬೇಕು ಅನ್ನಿಸುತ್ತಿಲ್ಲ.ಅವರದೇನಿದ್ದರೂ ಅದೇ ಹಳೆಯ ಗ್ರಾಮಾಪೋನಿನಂತೆ ಒಂದೇ ಹಾಡು.

ಅಷ್ಟಕ್ಕೂ ಮೋದಿಯ ಸೆಕ್ಯುಲರ್ ಬುರ್ಖಾ ಹೇಳಿಕೆಯಲ್ಲಿ ಏನಾದರೂ ತಪ್ಪಿದೆಯಾ ಅಂತ ನೋಡೋಣ.ಪ್ರಸಕ್ತ ಕಾಲ ಭಾರತದ ಆರ್ಥಿಕ ಪರಿಸ್ಥಿತಿಯು ಮತ್ತೆ ೯೦ರ ದಶಕದೆಡೆಗೆ ಹೊರಳುತ್ತಿರುವ ಆತಂಕದ ಕಾಲ.ಯುಪಿಎ೨ ಬಂದ ಮೇಲೆ ಈ ದೇಶ ಕಂಡಿದ್ದು ಸಾಲು ಸಾಲು ಹಗರಣಗಳು,ಕೆಟ್ಟ ಆಡಳಿತ,ಕುಸಿದ ರೂಪಾಯಿ ಮೌಲ್ಯ ಇವಿಷ್ಟೇ ತಾನೆ.ಆದರೆ ಇವತ್ತು ಕಾಂಗ್ರೆಸ್ಸ್ ಆ ಬಗ್ಗೆ ಏನಾದರೂ ಮಾತನಾಡುತ್ತಿದೆಯೇ ಅಂತ ನೋಡಿದರೆ ಹೊರಟರೆ ನಮ್ಮ ಪ್ರಧಾನಿ ‘ಮೌನ’ ಮುರಿಯುತ್ತಲೇ ಇಲ್ಲ. ದೇಶದ ಜನರಿಗೆ ಧೈರ್ಯ ತುಂಬುವ ಒಂದು ಹೇಳಿಕೆಯನ್ನೂ ಕೊಡುತ್ತಿಲ್ಲ.  ಇನ್ನು ಸನ್ಮಾನ್ಯ ಅರ್ಥ ಸಚಿವರಿಗೂ ಏನೂ ಮಾಡುವುದು ಅನ್ನುವುದೇ ಅರ್ಥವಾಗುತ್ತಿಲ್ಲವೆನೋ…!  ಅವರು ಜನರಿಗೆ ಚಿನ್ನದ ಮೇಲೆ ಹಣ ಹೂಡಬೇಡಿ,ಚಿನ್ನವನ್ನು ಕೂಡಿಡಬೇಡಿ ಅನ್ನುತ್ತಾರೆಯೇ ಹೊರತು ದೇಶದ ಹೊರಗಿರುವ ಕಪ್ಪು-ಹಣವನ್ನು ವಾಪಸ್ ತರುವ ಬಗ್ಗೆಯೋ,ದೇಶದ ಹಣ ಲೂಟಿ ಹೊಡೆದು ಆದಾಯಕ್ಕೇ ಮೀರಿದ ಆಸ್ತಿ ಮಾಡಿಕೊಂಡ ರಾಜಕಾರಣಿಗಳು, ಅಧಿಕಾರಿಗಳು,ಬ್ಯುಸಿನೆಸ್ ಮಾಗ್ನೆಟ್ ಗಳ ಬಗ್ಗೆ ಚಕಾರವೆತ್ತುತ್ತಿಲ್ಲ.

ಸಂಸತ್ತಿನಲ್ಲಿ ಚರ್ಚಿಸದೆಯೇ ಆಹಾರ ಭದ್ರತಾ ಮಸೂದೆಯನ್ನು ಜಾರಿಗೆ ತರುವಲ್ಲಿ ತರಾತುರಿ ತೋರುವ ಕೇಂದ್ರ ಸರ್ಕಾರ ಸಶಕ್ತ ಲೋಕಪಾಲ ಮಸೂದೆ ಜಾರಿಗೆ ತರಲು ಇವತ್ತಿನವರೆಗೂ ಯಾಕೆ ಪ್ರಯತ್ನಿಸಿಲ್ಲ? ಭ್ರಷ್ಟಚಾರ ವಿರೋಧಿ ಆಂದೋಲನ,ದೆಹಲಿಯಲ್ಲಿ ಕಾನೂನು ಸುವ್ಯವಸ್ಥೆ ಕುಸಿದ ಬಗ್ಗೆ ಯುವಸಮೂಹ ತೋರಿದ ಅಭೂತಪೂರ್ವ ಪ್ರತಿಭಟನೆ ಇವೆಲ್ಲ ಯುವಸಮೂಹ ಯುಪಿಎ ಭ್ರಷ್ಟಚಾರ,ಜನವಿರೋಧಿ ಆಡಳಿತದ ವಿರುದ್ಧ ರೋಸಿ ಹೋದ ಘಟನೆಗಳು.ಇಷ್ಟೆಲ್ಲಾ ಆದರೂ ಅತ್ಯಾಚಾರವೂ ನಿಂತಿಲ್ಲ,ಭ್ರಷ್ಟಚಾರವೂ ನಿಂತಿಲ್ಲ.

ಇಂತ ಮುಖವಿಟ್ಟುಕೊಂಡು ಕಾಂಗ್ರೆಸ್ಸ್ ಸರ್ಕಾರ ಮುಂದಿನ ಚುನಾವಣೆಯಲ್ಲಿ ಮತ ಕೇಳಲು ‘ಅಭಿವೃದ್ದಿಯ ಮಂತ್ರ’ವನ್ನಂತೂ ಜಪಿಸಲಾಗದಲ್ಲ,ಹಾಗಾಗಿಯೇ ಅವರು ಜನರ ಭಾವನೆಗಳನ್ನು “ನಾಯಿಮರಿ” ಮಾಡಿಕೊಂಡು “ಸೆಕ್ಯುಲರಿಸಂ ಬುರ್ಖಾ”ದೊಳಗೆ ಅವಿತುಕೊಳ್ಳುತಿದ್ದಾರೆ.

ಕೆಟ್ಟ ಆಡಳಿತ,ಹಗರಣಗಳಿಂದ ಹೈರಾಣಾಗಿರುವ ಕಾಂಗ್ರೆಸ್ಸಿಗೆ ಮೋದಿಯನ್ನು ಅಭಿವೃದ್ಧಿಯ ಹೆಸರಿನಲ್ಲಿ ಎದುರಿಸಲಾಗುವುದಿಲ್ಲವಾದ್ದರಿಂದಲೇ ಅವರು “ನಾಯಿಮರಿ”ಗಾಗಿ ಕಾಯುತ್ತಿರುತ್ತಾರೆ.ಮೋದಿ ಆಗಾಗ ಕೊಡುವ ಹೇಳಿಕೆಯನ್ನು ತಮ್ಮ ಹಿಂಬಾಲಕ ಮೀಡಿಯಾಗಳಿಂದ ಕಾಂಟ್ರೋವರ್ಸಿಗಳನ್ನಾಗಿ ಮಾಡುತ್ತಾರೆ.ಕಾಂಗ್ರೆಸ್ಸ್ ತೋಡುತ್ತಿರುವ ಈ ಖೆಡ್ಡಾದೊಳಗೆ ಮೋದಿಯಂತವರು ಕಾಲಿಡುವುದಿಲ್ಲ ಅನ್ನಿಸಿದರೂ ಕಡೇ ಪಕ್ಷ ಬಿಜೆಪಿ ಮತ್ತೆ ತನ್ನ ಪುರಾತನ ಚುನಾವಣ ಕಾಲದ ಘೋಷಣೆಯಾದ ಮಂದಿರ ನಿರ್ಮಾಣದಂತ ವಿಷಯಗಳತ್ತ ಸುಳಿಯದಿರುವುದೇ ಒಳಿತು.

ಮೋದಿಯೇ ಮೊನ್ನೆಯ ಭಾಷಣದಲ್ಲಿ ಹೇಳಿದಂತೆ “ನಾವು, ಜಗತ್ತಿನ ಹೆಚ್ಚು ಯುವ ಸಮೂಹವುಳ್ಳ ದೇಶವಾಗಿರುವ ವರ ಪಡೆದಿದ್ದೇವೆ.ಇಂತ ದೇಶದ ಭವಿಷ್ಯ ಖಂಡಿತ ಕತ್ತಲ್ಲಲ್ಲಿರಲು ಸಾಧ್ಯವಿಲ್ಲ.ಭಾರತದ ಯುವ ಸಮೂಹ ಈ ದೇಶದ ಮತ್ತು ಜಗತ್ತಿನ ಸಮಸ್ಯೆಗಳನ್ನು ಪರಿಹರಿಸಬಲ್ಲಷ್ಟು ಶಕ್ತರಾಗಿದ್ದಾರೆ, ಅವರಿಗೆ ಹಾಗೆ ಮಾಡಲು ಸರಿಯಾದ ದಾರಿ ಮತ್ತು ಅವಕಾಶಗಳು ಬೇಕಾಗಿವೆ”

ಈಗಿನ ಪೀಳಿಗೆಗೆ ನಿಜವಾಗಿ ಎದುರು ನೋಡುತ್ತಿರುವುದು ಮೋದಿಯ ಮೇಲಿನ ಭಾಷಣದ ತುಣುಕುಗಳನ್ನು ಕಾರ್ಯರೂಪಕ್ಕೆ ತರಬಲ್ಲ ನಾಯಕನನ್ನೇ ಹೊರತು,ಮಂದಿರ-ಮಸೀದಿ-ಚರ್ಚುಗಳಂತ ಚುನಾವಣಾ ವಿಷಯಗಳನ್ನಲ್ಲ ಅಸಲಿಗೆ ಅವುಗಳು ಈಗ ಚುನಾವಣ ವಿಷಯಗಳಾಗಿಯೂ ಉಳಿದಿಲ್ಲ.

ಅಷ್ಟಕ್ಕೂ,೨೦೧೪ರ ಲೋಕಸಭಾ ಚುನಾವಣೆ ನಡೆಯಬೇಕಿರುವುದು ಮೋದಿಯ “ಅಭಿವೃದ್ಧಿ ಗರಿ”ಯ ಮೇಲೆಯೇ ಹೊರತು ಸೆಕ್ಯುಲರ್ ಗಳ “ನಾಯಿ ಮರಿ”ಯಿಂದಲ್ಲ.

6 ಟಿಪ್ಪಣಿಗಳು Post a comment
  1. Girish's avatar
    Girish
    ಜುಲೈ 22 2013

    High time atleast Modiji realises the importance of a nationalist media channel & starts it. Expecting everything from him is ridiculous but other Nationalist hindu groups are sleeping.

    ಉತ್ತರ
  2. vinanthi's avatar
    vinanthi
    ಜುಲೈ 26 2013

    Really very good article, when congress will stop looting country, and when our fraud politicians stops making illegal money, when black money return to india
    this should be addressed urgently else we hsave to 1$ = Rs 1000
    this day is not far
    every thing is people hand they should social responsible, they should know how to use the rights provided to them
    people should on keep on applying RTI against all govt work and govt official work and politician property then these people will be accountable to their act

    ಉತ್ತರ
  3. Ramakrishna Nadiga's avatar
    Ramakrishna Nadiga
    ಆಗಸ್ಟ್ 3 2013

    Modi is more dangerous than congress. If he comes to power whole India will start burning. Economy will crumble. Only few sections of society will prosper at the cost of other majority

    ಉತ್ತರ
    • Gopalakrishna Bhagwat's avatar
      Gopalakrishna Bhagwat
      ಆಗಸ್ಟ್ 3 2013

      Well said Mr. Nadiga you have really predicted the future in right way

      ಉತ್ತರ
      • Girish's avatar
        Girish
        ಆಗಸ್ಟ್ 14 2013

        hahaha. Very Well said . You predicted your bright future in right way with bright congress 🙂 .

        ಉತ್ತರ
    • Girish's avatar
      Girish
      ಆಗಸ್ಟ್ 14 2013

      Yes Modi is dangerous. if he comes to power, whole india will start burn other countries’economy.

      ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments