ಸಿದ್ರಾಮಣ್ಣನ ೧.ರೂ ಅಕ್ಕಿಯ ಸುತ್ತಮುತ್ತ
-ಪ್ರಸನ್ನ,ಬೆಂಗಳೂರು
೧ ರೂ ಅಕ್ಕಿ ಯೋಜನೆಯನ್ನು ಸಮರ್ಥಿಸುತ್ತಾ ಕೆಲವರು ಗ್ಯಾಸ್ ಮತ್ತು ಪೆಟ್ರೋಲ್ ಸಬ್ಸಿಡಿ ಬಗ್ಗೆ ಹೇಳುತ್ತಿದ್ದಾರೆ, ಪೆಟ್ರೋಲ್ ಮೇಲೆ ಶೇ ೪೦ ಕ್ಕೂ ಹೆಚ್ಚು ತೆರಿಗೆಯೂ ಇದೆ ಸಬ್ಸಿಡಿಯೂ ಇದೆ ಎನ್ನುವ ಸಣ್ಣ ಮಾಹಿತಿಯೂ ಇವರಲ್ಲಿ ಇಲ್ಲವೆ? ಬಹುತೇಕ ಮಧ್ಯಮ ವರ್ಗದ ಜನ ದುಡಿದು ಸಂಪಾದಿಸಿದ ಹಣದಲ್ಲಿ ಬದುಕುತ್ತಿದ್ದಾರೆ. ೧ ರೂ ಅಕ್ಕಿಯಂತಹ ಯೋಜನೆಗಳು ಅವನ ಮೇಲೆ ಹೊರೆ ಹೆಚ್ಚಿಗೆ ಮಾಡುತ್ತದೆ ಎನ್ನುವ ಕಾಳಜಿ ಅವನದು.
ಇನ್ನೂ ಕೆಲವರು ಐಟಿ ವಲಯಕ್ಕೆ ಕೊಡುವ ಸಬ್ಸಿಡಿ, ಭೂಮಿಯ ಬಗ್ಗೆ ಸೌಲಭ್ಯಗಳ ಬಗ್ಗೆ ಪ್ರಸ್ತಾಪಿಸುತ್ತಿದ್ದಾರೆ. ಈ ವಲಯಗಳು ಸೃಷ್ಠಿಸಿರುವ ಮತ್ತು ಅದರಿಂದ ಒದಗುವ ಉದ್ಯೋಗವಕಾಶ ಅದರಿಂದ ಲಕ್ಷಾಂತರ ಕುಟುಂಬಗಳು ಬದುಕು ಕಟ್ಟಿಕೊಂಡಿರುವುದನ್ನು ಮರೆಯುವುದು ಕೇವಲ ವೋಟ್ ಬ್ಯಾಂಕ್ ರಾಜಕಾರಣದ ಅಥವ ಅಂಧಾಭಿಮಾನದ ಪ್ರತೀಕ. ಸ್ವಂತವಾಗಿ ಉದ್ಯೋಗ ಸೃಷ್ಠಿಸಲಾಗದ ಅಸಹಾಯಕ ಸರ್ಕಾರಗಳು ಈ ವಲಯಕ್ಕೆ ಸೌಕರ್ಯ ಒದಗಿಸಿ ಉದ್ಯೋಗಿಗಳ ತೆರಿಗೆ
ಹಣದಿಂದ ಬೊಕ್ಕಸ ತುಂಬಿಸಿಕೊಳ್ಳುತ್ತಿಲ್ಲವೆ? ಆ ವಲಯದಿಂದ ಆದಾಯವಿಲ್ಲದೆ ಯಾವ ಸರ್ಕಾರವೂ ಕಣ್ಣುಮುಚ್ಚಿ ಸೌಕರ್ಯಗಳನ್ನು ಒದಗಿಸುತ್ತಿಲ್ಲ.
ಪೀಜಿ ಪುರಾಣ
– ಪ್ರಶಸ್ತಿ.ಪಿ, ಸಾಗರ
ಬ: ಬೆಂಗ್ಳೂರು
ಅ: ಓ. ಹೌದಾ.. ಬೆಂಗ್ಳೂರಲ್ಲೇನ್ ಮಾಡ್ಕೊಂಡಿದೀರಿ ?
ಬ:ಪೀಜಿ
ಅ:ಪೀಜಿ ಅಂದ್ರೆ ಪೋಸ್ಟ್ ಗ್ರಾಜುಯೇಷನ್ನಾ ?
ಬ:ಅಲ್ಲ ಮಾರ್ರೆ.ಪೇಯಿಂಗ್ ಗೆಸ್ಟು !:-)
ಈ ಬೆಂದಕಾಳೂರಿಗೆ ಬಂದು ಬಾಳ ಬೇಳೆ ಬೇಯಿಸ್ಕೊಳೋಕೆ ಶುರು ಮಾಡಿದಾಗಿನಿಂದ ಮೇಲಿನ ಪೀಜಿ PJ ಬೇಜಾರ್ ಬರೋವಷ್ಟು ಕಾಮನ್ನಾಗಿ ಹೋಗಿದೆ 😦
ಅಲ್ಲ, ಈ ಕಾಲ ಅನ್ನೋದು ನಮ್ಮ ಕಲ್ಪನೆ, ನಂಬಿಕೆಗಳನ್ನೆಲ್ಲಾ ಎಷ್ಟು ಬದಲಾಯಿಸತ್ತೆ ಅಲ್ವಾ ? ಕೆಲವೊಂದು ಸಲ ನಂಬಿಕೆಗಳನ್ನ ಬುಡಮೇಲೇ ಮಾಡ್ಬಿಡುತ್ತೆ. ನಾವು ಎಷ್ಟೇ ಅಂದ್ಕೊಂಡ್ರೂ ನಮ್ಮ ಮನೆ ಬಿಟ್ಟು ಗೊತ್ತಿರದ ಊರಿಗೆ ಹೋಗಬೇಕಾದ ಸಂದರ್ಭ ಬಂದೇ ಬರತ್ತೆ. ಆ ಊರಲ್ಲಿ ಹತ್ತಿರದ ನೆಂಟ್ರ ಮನೆಯೋ, ಗೆಳೆಯರ ರೂಮೋ ಇದ್ರೆ ಓಕೆ. ಇಲ್ದಿದ್ರೆ ? ! ಹುಡುಗರು ಹೇಗೋ ಒಂದೆರಡು ದಿನ ಏಗಬಹುದು. ಆದ್ರೆ ಹುಡುಗಿಯರು ? ಎಕ್ಸಾಮಿಗೋ, ಇಂಟರ್ವ್ಯೂಗೋ ಯಾವ್ದೋ ಹೊಸ ಊರಿಗೆ ಒಂದೆರಡು ದಿನಗಳ ಮಟಿಗೆ ಹೋದ ಅಕ್ಕಂದಿರು ಯಾವುದೋ ಗೃಹಸ್ಥರ ಮನೆಯಲ್ಲಿ ಉಳ್ಯೋದು. ನೆಂಟರಲ್ಲ, ಪರಿಚಯದವರೂ ಅಲ್ಲ. ಹಾಗಾಗಿ ದುಡ್ಡು ಕೊಟ್ಟು ಉಳ್ಯೋ ಅತಿಥಿ(paying guest) ಅನ್ನೋ ಕಲ್ಪನೆ ಇತ್ತು ಪೀಜಿ ಅಂದ್ರೆ. ಆಮೇಲೆ ಅಕ್ಕಂದಿರೆಲ್ಲಾ ಕೆಲ್ಸ ಅಂತ ಬೆಂಗ್ಳೂರಿಗೆ ಬಂದ ಮೇಲೆ ಪೀಜಿ ಪರಿಕಲ್ಪನೆ ಸ್ವಲ್ಪ ಬದಲಾಯ್ತು. ಒಂದು ಆಂಟಿ ಮನೇಲಿ ಅವ್ರಿಗೆ ಊಟದ, ಇನ್ನಿತರ ಖರ್ಚು ಅಂತ ಕೊಟ್ಟು ಮನೆ ಮಕ್ಕಳಂತೆ ಇರೋದೇ ಪೀಜಿ ಅನ್ನೊವಷ್ಟು ಅಕ್ಕಂದಿರ ಮಾತುಗಳಿಂದ ತಿಳಿದಿದ್ದೆ. ಪೀಜಿ ಅಂದರೆ ಕೆಲದಿನ ಅಂತಿದ್ದ ಪರಿಕಲ್ಪನೆ ಅದು ತಿಂಗಳು, ವರ್ಷಗಳಿಗೂ ಮುಂದುವರಿಯುವ ಮೆಗಾ ಸೀರಿಯಲ್ ಅಂತ ಬದಲಾಯ್ತು.. ಕೇಳೋದಕ್ಕೂ, ಸ್ವತಃ ಅನುಭವಿಸೋದಕ್ಕೂ ಇರೋ ವ್ಯತ್ಯಾಸ, ಬೆಂದಕಾಳೂರಿನ ಪೀಜಿಗಳ ನಿಜರೂಪದ ಝಲಕ್ಗಳು ಸಿಗೋಕೆ ಶುರು ಆದದ್ದು ನಾನು ಸ್ವತಃ ಬೆಂಗಳೂರಿಗೆ ಬಂದಾಗಲೇ.
ಉತ್ತರಾಖಂಡ ಜಲಪ್ರಳಯ ಸಂತ್ರಸ್ತರ ಪರಿಹಾರ ನಿಧಿಗಾಗಿ
ಧಾರವಾಡ: ಉತ್ತರಾಖಂಡ ಜಲಪ್ರಳಯ ಸಂತ್ರಸ್ತರ ಪರಿಹಾರ ನಿಧಿಗೆ ಸಹಾಯ ಧನ ನೀಡುವ ಉದ್ದೇಶದಿಂದ ಮಾಧ್ಯಮ ಛಾಯಾ ಗ್ರಾಹಕರು ಹಾಗೂ ಹವ್ಯಾಸಿ ಛಾಯಾಗ್ರಾಹಕರು ಮತ್ತು ಕಲಾವಿದರ ಸುಂದರವಾದ ಕಲಾಕೃತಿಗಳು ಮತ್ತು ಛಾಯಾಚಿತ್ರಗಳ ಪ್ರದರ್ಶನ ಮತ್ತು ಮಾರಾಟ ಹಮ್ಮಿಕೊಳ್ಳಲಾಗಿದೆ. ಸರಕಾರಿ ಚಿತ್ರಕಲಾ ಮಹಾವಿದ್ಯಾಲಯ, ಆರ್‍ಕೆ ಛಾಯಾ ಫೌಂಡೇಶನ್, ಬಾಲ ನಂದನ ಟ್ರಸ್ಟ್ ಹಾಗೂ ಮಾಸ್ ಮೀಡಿಯಾ ಕಮ್ಯುನಿಕೇಶನ್ಸ್ ಫಾರ್ ರೂರಲ್ ಆಂಡ್ ಅರ್ಬನ್ ಡೆವೆಲಪ್‍ಮೆಂಟ್ ಸೆಂಟರ್ ಕರ್ನಾಟಕ ಜಂಟಿಯಾಗಿ ಜುಲೈ 20ರಿಂದ 5 ದಿನಗಳ ಕಾಲ ಆರ್ಟ್ ಗ್ಯಾಲರಿಯಲ್ಲಿ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಈ ಹಿನ್ನಲೆಯಲ್ಲಿ ಆಸಕ್ತ ಕಲಾವಿದರು, ಹವ್ಯಾಸಿ ಛಾಯಾ ಗ್ರಾಹಕರು ಜುಲೈ 15ರ ಒಳಗಾಗಿ ತಮ್ಮ ಕಲಾಕೃತಿ ಹಾಗೂ ಛಾಯಾಚಿತ್ರಗಳನ್ನು ಸರಕಾರಿ ಚಿತ್ರಕಲಾ ಮಹಾವಿದ್ಯಾಲಯದ ಮುಖ್ಯಸ್ತರಾದ ಎನ್.ಎಂ.ದಾಟನಾಳ ಇವರಿಗೆ ತಲುಪಿಸಬೇಕಾಗಿ ವಿನಂತಿ. ಹೆಚ್ಚಿನ ಮಾಹಿತಿಗಾಗಿ ಮೊ:9341242401, ಪ್ರತಾಪ ಬಹುರೂಪಿ 8095932738 ಗೆ ಸಂಪರ್ಕಿಸಬೇಕೆಂದು ಮಾಸ್ ಮೀಡಿಯಾ ಕಮ್ಯುನಿಕೇಶನ್ಸ್ ಫಾರ್ ರೂರಲ್ ಆಂಡ್ ಅರ್ಬನ್ ಡೆವೆಲಪ್‍ಮೆಂಟ್ ಸೆಂಟರ್ ಕರ್ನಾಟಕ ಉಪಾಧ್ಯಕ್ಷ ಶಶಿಕಾಂತ್ ದೇವಾಡಿಗ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಕವ್ವನ ಸ್ವಾತಂತ್ರ್ಯ
– ಸಂತೆಬೆನ್ನೂರು ಫೈಜ್ನಟ್ರಾಜ್’
ಜೈಹಿಂದ್,
ಜೈ ಹಿಂದ್,
ಮಹಾತ್ಮಗಾಂಧಿ ಕಿ ಜೈ.
ಭಾರತ್ಮಾತಾಕಿ ಜೈ.
ಇಡೀ ಹಳ್ಳಿಗೆ ಹಳ್ಳಿಯೇ ಕಂಪಿಸುವಂತೆ ಘೋಷಣೆಗಳು ಅನುರಣಿಸುತ್ತಿದ್ದವು. ನಾಗೇನಹಳ್ಳಿ ಊರಗೌಡ್ರು ಸರ್ಜಾ ಸಂಕಣ್ಣ ನಾಯಕರ ಮನೆ ಮಾತ್ರ ಅಂದು ಸ್ಮಶಾನಕ್ಕಿಂತಲೂ ಮೌನ-ಮೌನವಾಗಿತ್ತು !ಹುರಿ-ಹುರಿ ಮೀಸೆಯ, ಕಚ್ಚೆ ಪಂಚೆಯ, ಇಟ್ಟಗಿ ಖಾದಿಯ ಜುಬ್ಬಾ ತಲೆ ಮೇಲೂ ಅಲ್ಲಿಯ ಚೌಕಾಕಾರದ ಗಾಂಧಿಟೋಪಿ ಧರಿಸಿ ಅದ್ಯಾವುದೋ ಶೂನ್ಯ ದಿಟ್ಟಿಸ್ತಾ ಗೌಡರು ಹಜಾರದ ಕಂಬವೊಂದನ್ನು ಬಲಗೈಲಿ ಹಿಡಿದು ನಿಂತಿದ್ದರು!
ಸುರಪುರದ ವೆಂಕಟಪ್ಪನಾಯಕನ ವಂಶಸ್ಥರಾದ ಈ ಸರ್ಜಾ ಸಂಕಣ್ಣನಾಯಕರ ಮನೆಯಲ್ಲೂ ಅಂದು ಸಣ್ಣ ಚಳವಳಿ ಪ್ರಾರಂಭಗೊಂಡಿತ್ತು. ಅಡಿಗೆ ಖೋಲಿಯ ಮೂಲೆಯಲ್ಲಿ ಗೌಡತಿ ಸಂಕವ್ವ ಸೆರಗು ಒದ್ದೆಯಾಗುವಂತೆ ಮುಸಿ-ಮುಸಿ ಅಳ್ತಾನೇ ಇದ್ದದ್ದು ಅದು ನಿನ್ನೆ ರಾತ್ರಿಯಿಂದ ಗೌಡರ ರಕ್ತ ಕೋಪವಾಗಿ ಬರಲು ಕಾರಣವಾಗಿತ್ತು!
ಉತ್ತರಕುಮಾರರ ‘ಚೋರ್’ದಾಮ್ ಯಾತ್ರೆ!
– ತುರುವೇಕೆರೆ ಪ್ರಸಾದ್
ಸುಂದ್ರಮ್ಮನ ವಠಾರದಲ್ಲಿ ಸ್ಮಶಾನ ಮೌನ ಆವರಿಸಿತ್ತು. ಕೈಲಾಸ್ ಟ್ರಾವೆಲ್ಸ್‍ನಲ್ಲಿ ಚಾರ್‍ದಾಮ್ ಯಾತ್ರೆಗೆ ಹೋದ ವಠಾರದ ಕಲಿಗಳಾದ ವೆಂಕ, ಸೀನ,ನಾಣಿ ವಾರವಾದರೂ ಪತ್ತೇನೇ ಆಗಿರಲಿಲ್ಲ. ಟಿವಿನಲ್ಲಿ ಅಲ್ಲಿನ ಪ್ರಚಂಡ ಜಲಪ್ರಳಯ ನೋಡಿದ ಮೇಲೆ, ಅಲ್ಲಿಂದ ಬಚಾವ್ ಆಗಿ ಬಂದೋರು ತಮ್ಮ ಥರಗುಟ್ಟುವ ಅನುಭವ ಹೇಳಿದ ಮೇಲೆ ಆ ಮಹಾ ಪ್ರಳಯದಲ್ಲಿ ಈ ಮೂವರೂ ಹರೋ ಹರ ಅಂದು ಕೇದಾರನಾಥನ ಪಾದ ಸೇರ್ಕಂಡಿದಾರೆ ಅಂತ ಗ್ಯಾರೆಂಟಿ ಆಗಿತ್ತು. ಸುಂದ್ರಿಗೆ ಒಳಗೊಳಗೇ ಖುಷಿನೇ ಆಗಿತ್ತು. ಮನೆಹಾಳು ಮುಂಡೇವು! ವಠಾರನೂ ಕಾಲಿ ಮಾಡದೆ,ಇಲ್ಲಿರೋರನ್ನ ನೆಮ್ಮದಿಯಾಗಿ ಇರೋಕೂ ಬಿಡದೆ ದಿನಬೆಳಗಾದರೆ ಪ್ರಾಣ ತಿಂತಿದ್ವು. ಈ ನೆವದಲ್ಲಾದರು ನೆಗದು ಬಿದ್ದು ಸತ್ತವಲ್ಲ!
ಪೀಡೆ ತೊಲಗ್ತು ಅಂತ ನಿರಾಳವಾದ್ಲು. ಮೊದ್ಲೇ ಆಸೆಬುರಕ ಮುಂಡೇವು! ಅರ್ಧದಲ್ಲೇ ಸತ್ತಿವೆ..ಇಷ್ಟು ದಿವಸ ಕಾಡಿದ್ದು ಸಾಲದೆ ಮತ್ತೆಲ್ಲಾದರೂ ಪೀಡೆಯಾಗಿ ಕಾಡಾವು ಎಂದು ಒಂದು ವಡೆ, ಪಾಯಸದ ಊಟ ಹಾಕಿಸಿ ಮೊಸಳೆ ಕಣ್ಣೀರು ಸುರಿಸಿ ಎಳ್ಳು ನೀರು ಬಿಟ್ಟು ಬಿಡಬೇಕು ಅಂತ ತೀರ್ಮಾನ ಮಾಡುದ್ಲು ಸುಂದ್ರಿ. ಅದರಂತೆ ಒಂದು ಸಂತಾಪ ಸೂಚಕ ಸಭೆನೂ ಏರ್ಪಾಡಾಯ್ತು. ಮೂರು ಜನರ ಎಲೆಕ್ಷನ್ ಐಡೆಂಟಿಟಿ ಕಾರ್ಡ್ ಇಟ್ಟು( ದೊಡ್ಡ ಫೋಟೊ ಮಾಡಿಸೋದು ದಂಡ ಅಂತ) ಒಂದೊಂದು ಕಣಗಲೆ, ಚೆಂಡು ಹೂವಿಟ್ಟು ವಠಾರದೋರು ಶೋಕ ಆಚರಿಸುದ್ರು. ಎಲ್ಲಾ ಮೂವರ ( ಇಲ್ಲದ) ಗುಣಗಳ ಗುಣಗಾನ ಮಾಡುದ್ರು.ಇನ್ನೇನು ವಡೆ ಕಡೀಬೇಕು ಅನ್ನುವಷ್ಟರಲ್ಲಿ ವಠಾರದ ಬಾಗಿಲಲ್ಲಿ ನೆರಳು ಕಾಣಿಸ್ಕೊಂತು. ಅತ್ತ ನೋಡುದ್ರೆ ಬಾಗಿಲಲ್ಲಿ ವೆಂಕ, ಸೀನ, ನಾಣಿ ತಟ್ಟಂತ ಪ್ರತ್ಯಕ್ಷ ಆದ್ರು. ಎಲ್ಲಾ ಶಾಕ್ ಆದ್ರು.ಸುಂದ್ರಿ ಅಂತೂ ಧರೆಗಿಳಿದು ಹೋದ್ಲು.ಕೆಲವರಂತೂ ದೆವ್ವ ಅಂತ ಹೆದರಿಕೊಂಡು ಊಟದ ಎಲೆನೂ ಬಿಟ್ಟು ಚಡ್ಡಿಲೇ ಒಂದು ಎರಡು ಮಾಡಿಕೊಂಡು ಓಡಿ ಹೋದ್ರು. ಉತ್ತರಖಂಡ ದುರಂತದಲ್ಲಿ ಮಾಂಸದ ಮುದ್ದೆಯಾಗಿ ಎಲ್ಲೋ ಕೊಚ್ಕಂಡು ಹೋಗಿದಾರೆ ಅಂದ್ಕೊಂಡಿದ್ದ ಈ ಪಾಕಡಾಗಳು ಧಿಡೀರಂತ ಪ್ರತ್ಯಕ್ಷ ಆದರೆ ಹೇಗಾಗಿರಬೇಡ? ಇದ್ದಿದ್ದರಲ್ಲಿ ಸ್ವಲ್ಪ ಧೈರ್ಯ ವಹಿಸಿ ಸುಂದ್ರಿ ಕೇಳುದ್ಲು.
’ಹರಶರಣ ದೆನಿಲೋನ ಹಾದಿಯಲ್ಲಿ’ ಶಿವಪ್ರಕಾಶರ ಲೇಖನಕ್ಕೊಂದು ಪ್ರತಿಕ್ರಿಯೆ
-ಬಾಲಚಂದ್ರ ಭಟ್
ಈ ಲೇಖನ ಪ್ರಜಾವಾಣಿಯಲ್ಲಿ ಪ್ರಕಟವಾದ ಎಚ್.ಎಸ್.ಶಿವಪ್ರಕಾಶರ ಜುಲೈ ೫ ರಂದು ಪ್ರಕಟವಾದ ’ಹರಶರಣ ದೆನಿಲೋನ ಹಾದಿಯಲ್ಲಿ’ ಬರಹಕ್ಕೆ ಪ್ರತಿಕ್ರಿಯೆ. ಬಹಳಷ್ಟು ವಿಷಯಗಳನ್ನು ಲೇಖನದಲ್ಲಿ ಉಲ್ಲೇಖಿಸಿದ್ದನ್ನು ಓದಿದ ನಂತರ ಸ್ವಲ್ಪ ಲೇಖನ ಏನು ಹೇಳಹೊರಟಿದೆಯೆಂಬುದರ ಬಗ್ಗೆ ಗೊಂದಲ ಮೂಡಿತು. ನಾನು ತಿಳಿದುಕೊಂಡಂತೆ ಲೇಖಕರು ಒಟ್ಟಾರೆಯಾಗಿ ಏನು ಹೇಳುತ್ತಾರೆಂದರೆ,
೧. ಆಲೆನ್ ದೆನಿಲೋ ನ ವಿಚಾರಗಳು, ಬಹುತೇಕ ಭಾರತೀಯ ಆಧ್ಯಾತ್ಮಿಕ ಪರಿಕಲ್ಪನೆಗಳಿಗಿಂತ(‘ಕನಿಕರ ಹುಟ್ಟಿಸುವ ಮುಖಮುದ್ರೆಯ ವೇದಾಂತ’) ಭಿನ್ನವಾಗಿತ್ತು, ಹಾಗೂ
೨. ಭಾರತದ ಆಧ್ಯಾತ್ಮಿಕ ವಿಷಯಗಳ ಬಗ್ಗೆ ’ಸ್ಟೀರಿಯೊಟೈಪಡ್ ಪೌರಾತ್ಯ’ ಚಿಂತನೆಗಳಿಂದ, ಹಾಗೂ ವಸಾಹತುಶಾಹಿ ಪರಿಕಲ್ಪನೆಗಳಿಂದ ಹೊರತಾಗಿದ್ದವು.
ಈ ಮೇಲಿನ ಎರಡು ಲೇಖಕರ ಅಭಿಪ್ರಾಯಗಳನ್ನು ಈ ಕೆಳಗಿನಂತೆ ವಿಮರ್ಶಿಸಿದ್ದೇನೆ.ಹಾಗೆಯೆ ಪ್ರಶ್ನೆಗಳ ಮೂಲಕ ನನ್ನಲ್ಲಿನ ಗೊಂದಲಗಳನ್ನ ಪ್ರಸ್ತಾಪಿಸಿದ್ದೇನೆ. ತಪ್ಪಿದ್ದಲ್ಲಿ ಸರಿಪಡಿಸಿ.
೧. ನಾನು ಹಾಗೆ ತಿಳಿದುಕೊಳ್ಳಲು ಕಾರಣ ಶಿವಪ್ರಕಾಶರು ಹೀಗೆ ಉಲ್ಲೇಖಿಸಿರುವದು: “ಕನಿಕರ ಹುಟ್ಟಿಸುವ ಮುಖಮುದ್ರೆಯ ವೇದಾಂತವನ್ನೇ ಭಾರತದ ಸಾರ ಸರ್ವಸ್ವವೆನ್ನುವರು ಆ ಕಾಲದ ಬಹಳ ಮಂದಿ ವಿದ್ವಾಂಸರು. ಅವರಲ್ಲಿ ಬಹುತೇಕ ಪ್ರಭೃತಿಗಳು ಭಾರತೀಯರೆಂದರೆ ಜೀವನೋತ್ಸಾಹ, ರಾಗರತಿಗಳಿಲ್ಲದ ಓಡುಗಾಲ ಯೋಗಿಗಳೆಂದು ಬಗೆದಿದ್ದರು. ಆದರೆ ವಿದ್ವತ್ತು, ರಸಗ್ರಾಹಿತ್ವ ಮತ್ತು ವ್ಯಕ್ತಿಗತ ಆಧ್ಯಾತ್ಮಿಕ ಸಾಧನೆಗಳ ತ್ರಿವೇಣಿಸಂಗಮವಾಗಿದ್ದ ದೆನಿಲೋ ಒತ್ತು ನೀಡಿದ್ದು ಭಾರತೀಯರ ರಸವಿಮುಖಿಯಾದ ಸಮಣಪಂಥೀಯ ಅಧ್ಯಾತ್ಮವಾದಕ್ಕಲ್ಲ, ಐಂದ್ರಿಕ ಜಗತ್ತಿಗೆ ತನ್ನನ್ನು ಪೂರ್ಣವಾಗಿ ತೆರೆದುಕೊಂಡು ಹಾಕುವ ಪ್ರತಿಯೊಂದು ತುತ್ತನ್ನೂ ಬಿಂದುವಾಗಿ ಮಾಡಿಕೊಂಡ ಶೈವ-ಶಾಕ್ತರ ಪೂರ್ಣಾದ್ವೈತಕ್ಕೆ.”
ಇದೇನಾ… ಹುಚ್ಚು ಪ್ರೀತಿ…?
– ಕೆ.ಎಂ.ವಿಶ್ವನಾಥ(ಮಂಕವಿ) ಮರತೂರ
ಬೀದಿ ಹೋಟೇಲವೊಂದರಲ್ಲಿ ಭಿಕ್ಷುಕನೊಬ್ಬ ಒಂದು ಪತ್ರಿಕೆ ಹಿಡಿದು ಹ್ಯಾಪಿ ಬರ್ತಡೇ ಟು ಯೂ ಹಾಡು ಹೇಳುತ್ತ ಘಾಡವಾಗಿ ಏನೊ ಓದುವಂತ ದೃಶ್ಯವಿತ್ತು . ಸಮೀಪ ಹೋಗಿ ನೋಡಿದರೆ ಆತ ಓದುತ್ತಿದ್ದದ್ದು ಐದನೆ ಪುಣ್ಯಸ್ಮರಣೆಯ ಭಾವಚಿತ್ರ . ನಾನು ಸ್ವಲ್ಪ ಹತ್ತಿರ ಹೋಗಿ ಪತ್ರಿಕೆ ಕಸಿದು ಕೊಳ್ಳಲು ಪ್ರಯತ್ನಿಸಿದರೆ , ಆತ ಕೋಪ ಬಂದವನಂತಾಗಿ ತನ್ನ ಒಡಲಾಳದ ವಿಷಯ ಯಾರ ಪರಿವೆಯಿಲ್ಲದೆ ಹೇಳಿಕೊಳ್ಳುತ್ತಾನೆ. ಆ ಭಾವಚಿತ್ರಕ್ಕು ತನಗೂ ಇರುವ ಸಂಬಂದವನ್ನು ಬಿಚ್ಚಿ ಹೇಳುತ್ತಾನೆ.ಈತನ ಹೆಸರು ಗೋಪಾಲ ಸುಂದರ ಮೈಕಟ್ಟು ನಿಲುವು ಬಾಹು ಸತತ ವ್ಯಾಯಾಮ ಮಾಡಿ ಮನೆಯ ಖಾರಪುಡಿ ರೊಟ್ಟಿ ತಿಂದು ಗಟ್ಟಿಮುಟ್ಟಾಗಿ ಇದ್ದ ಆತನ ದೇಹ ಆಕರ್ಶಕವಾಗಿತ್ತು ಕಾಲೇಜು ಕನ್ನೆಯರಿಗೆಲ್ಲ ಕನಸಿನ ರಾಜಕುಮಾರ ನಂತಿದ್ದ .
ಲೇ.. ಆ ಫಿಗರು ಭಾರಿ ಇತ್ತಲೆ… ಆದರೆ ಅವಳು ಸ್ವಲ್ಪನು ತಿರುಗಿ ನೋಡಲೇಯಿಲ್ಲ. ಈ ಬಾರಿ ಸಿಗಲಿ ಅವಳನ್ನು ಬಿಟ್ಟರೆ ಕೇಳು ಅವಳ ಆ ಮೈಮಾಟ ನೋಡಿ ನನಗೆ ನಿದ್ದೆನೆ ಬರತಿಲ್ಲ ಕಣ್ರೊ. ಹೀಗೆ ಗೆಳೆಯೆರೆಲ್ಲ ಕಾಲೇಜು ಕ್ಯಾಂಪಸ್ ಲ್ಲಿ ಕಾಲಹರಣ ಮಾಡುತ್ತಾ ಆ ಕಾಲೇಜಿನ ಸುಂದರಿ ಪಾರ್ವತಿ ಊರ್ಫ ಪಾರು ಹುಡುಗಿಯ ಬಗ್ಗೆ ಮಾತಾಡುತ್ತಿದ್ದರು .
ನಮ್ಮ ಗೋಪಾಲ ನೋಡಿರೊ ಅಷ್ಟು ಹ್ಯಾಂಡ್ಸಂ ಆದರೂ ಯಾವ ಹುಡುಗಿ ತಂಟೆಗೂ ಹೋಗದೆ ಹೇಗೆ ಇರತಾನೆ ಅಂದ ರಹೀಮ , ಲೇ.. ಹುಚ್ಚಾ ಅವನಿಗ್ಯಾಕೊ ಅದರ ಚಿಂತಿ ಅವನ ಕಂಡರೆ ನಮ್ಮ ಹುಡುಗಿರೆ ಮುಗಿಬೀಳತಾರೆ ರವಿ ಅಂದ ಹಾಸ್ಯದಲ್ಲಿ.ಲೆ… ನೀವೆಲ್ಲ ಉದ್ಧಾರ ಆಗಲ್ಲ ಕಣ್ರೊ ಮಂದಿ ಹೆಣ್ಣು ಮಕ್ಕಳ ಬಗ್ಗೆ ಅಸಯ್ಯವಾಗಿ ಮಾತಾಡಬಾರದು ತಮ್ಮಿಂದಿರಾ ನಡೆಯಿರಿ ಕ್ಲಾಸ್ ಶುರುವಾಯಿತು ಎಂದು ಎಲ್ಲರಿಗೂ ಬುದ್ದಿವಾದ ಹೇಳಿದ ಕರ್ಣ . ಎಲ್ಲರು ತರಗತಿಯಲ್ಲಿ ಕುಳಿತರು ಈಗ ತರಗತಿಯಲ್ಲಿ ಇಂಗ್ಲೀಷ ಮೇಡಂ ಕ್ಲಾಸ್ ಇದೆ ಎಲ್ಲರು ಪಾಠಕ್ಕಿಂತ ಮೇಡಂ ಇಷ್ಠಾಂತ ಇಡಿ ತರಗತಿ ಹೌಸ್ ಫುಲ್ ಆಗಿತ್ತು .
ದೇಹಾಂತರದ ಪಯಣ
– ರಾಜ್ ಕುಮಾರ್
ನನ್ನ ಬಾಲ್ಯದ ಒಂದು ಘಟನೆ. ನಮ್ಮ ಊರಿನ ದೊಡ್ಡ ಮನೆಯಲ್ಲಿ ಬಾವಿಯೊಂದನ್ನು ತೊಡುವ ಬಗ್ಗೆ ಹಿರಿಯರು ನಿರ್ಧರಿಸಿಬಿಟ್ಟರು. ಇನ್ನೇನು ನೀರು ತೋರಿಸುವುದಕ್ಕೊಸ್ಕರ ಒಬ್ಬರು ಬಂದೇ ಬಿಟ್ಟು ಕೈಯಲ್ಲಿ ಬೆತ್ತವೊಂದನ್ನು ಹಿಡಿದುಕೊಂಡು ಕೈ ಅತ್ತಿತ್ತ ತಿರುಗಿಸುತ್ತಾ ಗುಡ್ಡೆ ಎಲ್ಲ ತಿರುಗಿ ತಿರುಗಿ ಪಾದೆ ಕಲ್ಲಿನ ಮೇಲೆ ನಿಂತು ಅಲ್ಲೇ ಗುರುತು ಮಾಡಿಬಿಡುವಂತೆ ಹೇಳಿದರು. ಕರ್ರಗಿನ ಪಾದೆ ಆ ಬೇಸಿಗೆ ಕಾಲದ ಬಿಸಿಲಿಗೆ ಕಾದು ಬರಿ ಕಾಲಲ್ಲಿ ನಿಲ್ಲುವ ಹಾಗಿರಲಿಲ್ಲ. ಸುಡುತ್ತಿತ್ತು. ನಮಗೆಲ್ಲ ಅಶ್ಚರ್ಯ. ಇಲ್ಲಿ ಈ ಕಲ್ಲಿನಲ್ಲಿ ನೀರು ಸಿಗುವುದೇ? ಮಣ್ಣಿನ ಅಂಶ ಲವಲೇಶವೂ ಇಲ್ಲದ ಈ ಬರಡು ಜಾಗದಲ್ಲಿ ನೀರು ಸಿಗಬಹುದೇ? ಆಶ್ಚರ್ಯ. ನಮಗೆಲ್ಲಿ ಅರಿವಿತ್ತು. ಪ್ರಕೃತಿ ಇಂತಹ ಹಲವು ವಿಸ್ಮಯ ನಿಗೂಢತೆಗಳನ್ನು ಬಸಿರಲ್ಲಿರಿಸಿದೆ ಎಂದು.
ಬಾವಿ ತೋಡುವ ಕೆಲಸ ಆರಂಭವಾಯಿತು. ಅಲ್ಲಿ ನೆಲವನ್ನು ಸಾಕಷ್ಟು ಸಜ್ಜುಗೊಳಿಸಿ ವೃತ್ತಾಕಾರದಲ್ಲಿ ಆಕಾರವನ್ನು ಒಂದೆರಡು ಆಳುಗಳು ಅಗೆಯುವುದಕ್ಕೆ ಆರಂಭಿಸಿದರು.ನಾಲ್ಕು ಸಲ ಗುದ್ದಲಿ ಎತ್ತಿ ಅಗೆದಾಗ ಸಣ್ಣ ಚಿಪ್ಪು ಹಾರಿ ಬರುತ್ತಿತ್ತು. ಇಂತಹ ಕಠಿಣ ಸ್ಥಳದಲ್ಲಿ ನೀರು ಸಿಗಬಹುದೇ ನಮಗೆಲ್ಲ ಆಶ್ಚರ್ಯವಾಗುತ್ತಿತ್ತು. ಪ್ರಕೃತಿಯ ವಿಸ್ಮಯಕ್ಕೆ ಕುತೂಹಲವಾಗುತ್ತಿತ್ತು. ದಿನವಿಡೀ ಅಗೆದರೂ ಅರ್ಧ ಅಡಿಗಿಂತ ಹೆಚ್ಚು ಅಗೆಯಲು ಸಾಧ್ಯವಾಗದ ಸ್ಥಳದಲ್ಲಿ ನೀರಿದೆ ! ಎಂತಹ ವಿಸ್ಮಯ. ದಿನ ಕಳೆದಂತೆ ಕಲ್ಲಿನಂಶ ಕಡಿಮೆಯಾಗಿ ಕಲ್ಲು ಮೆತ್ತಗಾಗುವ ಭಾಸವಾಗುತ್ತಿತ್ತು.. ಕಲ್ಲು ಕರಗಿ ಮಣ್ಣಾದಂತೆ ನಿಧಾನವಾಗಿ ಭೂಗರ್ಭದೊಳಗೆ ನೀರಿನ ಗಮ್ಯದೆಡೆಗಿನ ಪಯಣ ಸಾಗುವಂತಿತ್ತು. ಆರಂಭದಲ್ಲಿ ಇರದಿದ್ದ ವಿಶ್ವಾಸ, ವಿಸ್ಮಯ ವಾಸ್ತವದಲ್ಲಿ ಸತ್ಯವಾಗುವ ಭಾವನೆಯನ್ನು ಮೂಡಿಸಿತು. ಕಲ್ಲು ಕರಗಿ ಮಣ್ಣಾಗಿ ಮುಂದೊಂದು ದಿನ ಅಂತರಂಗ ಗಂಗೆಯ ದರ್ಶನವಾದಾಗ ಸಂತಸಕ್ಕೆ ಪಾರವಿರಲಿಲ್ಲ
ಹನಿ ಹನಿ ಪ್ರೇಂ ಕಹಾನಿ
– ಮಧು ಚಂದ್ರ, ಭದ್ರಾವತಿ
ಅತಿಥಿಗಳಿಗೆ ಕುಡಿಯಲು ನೀರು ಕೊಟ್ಟು ಉಪಚರಿಸುತ್ತಿರಿ. ಇದು ಅನಾದಿ ಕಾಲದಿಂದಲೂ ನಡೆದು ಬಂದ ಭಾರತೀಯ ಸಂಸ್ಕೃತಿ. ಈ ಸಂಸ್ಕೃತಿಯನ್ನು ತಪ್ಪದೆ ಪಾಲಿಸುವವರನ್ನು ನಾವು ಭಾರತೀಯನೆನ್ನಬಹುದು.ನೀರನ್ನು ಕೊಟ್ಟು ಉಪಚರಿಸುವುದು ಭಾರತೀಯತೆ, ನೀರು ಇಲ್ಲದಿದ್ದರೆ ಮತ್ತೇನು ಮಾಡುವಿರಿ ಎಂದು ಎಂದಾದರೂ ಯೋಚಿಸಿದ್ದಿರ? ಬಹುಶ ಇರಲಿಕ್ಕಿಲ್ಲ. ಕಾರಣ ಇಷ್ಟೇ ನಮ್ಮಲ್ಲಿ ನೀರಿನ ಮೂಲ ಮತ್ತು ಅಂತರ್ಜಲಕ್ಕೆ ಕೊರತೆ ಇಲ್ಲ ಎನ್ನುವ ಹುಚ್ಚು ಪ್ರಮೇಯ ಇರಬಹುದು. ಈ ಹುಚ್ಚು ಪ್ರಮೇಯವೇ ಇಂದಿನ “ಹನಿ ಹನಿ ಪ್ರೇಂ ಕಹಾನಿ” ಲೇಖನ. ಹಿಂದೆ ನಾನೊಂದು ಓದಿದದ ಕಥೆಯನ್ನು ನಿಮಗೆ ಹೇಳಬಯಸುತ್ತೇನೆ. ಇದು ನೈಜ ಘಟನೆಯೋ ಇಲ್ಲವೋ ನನಗೆ ಅರಿವಿಲ್ಲ ಅದರೂ ಲೇಖನಕ್ಕೆ ಸೂಕ್ತ ಎಂದೆನಿಸುತು.
ವಿಶ್ವವನ್ನೇ ಗೆದ್ದ ಅಲೆಗ್ಸಾಂಡರ್ ಯಾರಿಗೆ ಗೊತ್ತಿಲ್ಲ ಹೇಳಿ.
ಹಲವು ದೇಶಗಳನ್ನುಅಲೆಗ್ಸಾಂಡರ್ ಗೆದ್ದು ಮರುಭೂಮಿಯ ದಾರಿಯಲ್ಲಿ ಸಾಗುತ್ತಿರುವ ಸಮಯದಲ್ಲಿ ಅವನ ಉಗ್ರಾಣದಲ್ಲಿ ಇದ್ದ ಆಹಾರ ಸಾಮಗ್ರಿಗಳು ಖಾಲಿಯಾಗುತ್ತ ಬಂದವು. ಇನ್ನೇನು ಮುಂದಿನ ಊರಿನಲ್ಲಿ ಸಂಗ್ರಹಿಸಬಹುದು ಎಂದು ಮುಂದೆ ಮುಂದೆ ನಡೆದನು. ಆದರೆ ಎತ್ತ ನೋಡಿದರು, ಬರಿ ಮರುಭೂಮಿ ಎಲ್ಲಿಯೋ ಊರಿರುವ ಲಕ್ಷಣಗಳು ಕಾಣಲಿಲ್ಲ. ಕಡೆಗೆ ಅವನ ಹತ್ತಿರವಿದ್ದ ಆಹಾರ ಸಾಮಗ್ರಿಗಳು ಖಾಲಿಯಾದವು. ವಿಶ್ವವನ್ನು ಗೆದ್ದ ವೀರನಿಗೆ ಹೊಟ್ಟೆ ಹಸಿವನ್ನು ಗೆಲ್ಲಲಾಗಲಿಲ್ಲ.
ತಾನು ನೀರು ಕುಡಿಯದೆ ಇದ್ದರೆ ಬದುಕುವುದಿಲ್ಲ ಅರಿತನು. ಅದೇ ಸಮಯದಲ್ಲಿ ದಾರಿಹೋಕನೋಬ್ಬನು ಸಿಕ್ಕನು. ಅವನ ಹತ್ತಿರ ಇದ್ದ ನೀರನ್ನು ಕಂಡು ” ನನಗೆ ನಿನ್ನ ಹತ್ತಿರ ಇರುವ ನೀರು ಬೇಕು, ನನಗೆ ಕೊಡು. ದಯವಿಟ್ಟು, ಏನು ಬೇಕು ಕೇಳು ನಾನು ಕೊಡುತ್ತೇನೆ ” ಎಂದು ಅಲೆಗ್ಸಾಂಡರ್ ಹೇಳಿದನು.
ಇರ್ಫಾನ್ ಹೇಳಿದ ಗುಜರಾತಿ ಮುಸ್ಲಿಮರ ಹೊಸ ಶಕೆ
-ಸಂತೋಷ್ ತಮ್ಮಯ್ಯ
೩೫ ವರ್ಷದ ಮೆಮನ್ ಮುಸಲ್ಮಾನ ಯುವಕ. ರಾಜ್‌ಕೋಟ್ ಜಿಲ್ಲೆಯವರು. ಪೋರ್ ಬಂದರ್ ನಿಂದ ೭೦ ಕಿ.ಮೀ ದೂರದ ಉಪ್ಲೇಟಾ ಎಂಬ ತಾಲೂಕು ಕೇಂದ್ರದವರು. ಉಪ್ಲೇಟಾದಲ್ಲೇ ಹುಟ್ಟಿ ಬೆಳೆದು ಕಳೆದ ೧೨ ವರ್ಷಗಳ ಹಿಂದೆ ಉದ್ಯೋಗ ನಿಮಿತ್ತ ಬೆಂಗಳೂರಿಗೆ ಬಂದವರು. ಓದಿದ್ದು ಇಂಗ್ಲೀಷ್ ಎಂ.ಎ. ಉದ್ಯೋಗ ಔಷಧ ಮಾರಾಟ ಕಂಪನಿಯೊಂದರಲ್ಲಿ ಸೇಲ್ಸ್ ಮತ್ತು ಮಾರ್ಕೇಟಿಂಗ್ ಅಧಿಕಾರಿ. ಟ್ವಿಟರ್ ನಲ್ಲಿ ಸಕ್ರೀಯರು. ಬ್ಲಾಗ್ ಬರಹಗಾರರು. ಈಗಾಗಲೇ FATAL ADMIRATION ಎಂಬ ಇಂಗ್ಲಿಷ್ ಕಾದಂಬರಿಯೊಂದನ್ನು ಕೂಡಾ ಬರೆದವರು.
ಅಚಾನಕ್ಕಾಗಿ ಮಾತಿಗೆ ಸಿಕ್ಕ ಇರ್ಫಾನ್ ಇಕ್ಬಾಲ್ ಘೆಟ್ಹಾ ತಾನೊಬ್ಬ ಸಾಮಾನ್ಯ ಮುಸಲ್ಮಾನ ಎಂದು ಪರಿಚಯ ಮಾಡಿಕೊಂಡರು. ಆದರೆ ಅವರು ಗುಜರಾತನ್ನು ಹೇಳುತ್ತಾ ಹೋದಂತೆ ಪತ್ರಿಕೆಗಳು ಬರೆಯದೇ ಇರುವ, ಟಿವಿಗಳು ತೋರಿಸದೇ ಇರುವ ಗುಜರಾತ್ ಇನ್ನೂ ಎಷ್ಟಿವೆ ಎಂದೆನಿಸುತ್ತಿತ್ತು. ಅವರು ಮಾತಾಡುತ್ತಿದ್ದರೆ “ಮೋದಿ ಮುಸಲ್ಮಾನರನ್ನು ಪ್ರತಿನಿಸುವುದಿಲ್ಲ” ಎಂದವರ ಮಾತುಗಳು ಸಮುದ್ರಪಾಲಾಗುತ್ತಿದ್ದವು.
ಇರ್ಫಾನ್ ಹೇಳುತ್ತಾ ಹೋದರು.
“ನಮ್ಮ ಗುಜರಾತಿನಲ್ಲಿ ಹುಟ್ಟಿ ವಿಶ್ವವಿಖ್ಯಾತರಾದವರಲ್ಲಿ ಗಾಂಧೀಜಿಯ ಅನಂತರದ ಹೆಸರು ಮೋದಿಯವರದ್ದೇ. ಪಟೇಲರೂ ಕೂಡಾ ಮಹಾವ್ಯಕ್ತಿಯೇ ಆದರೂ ವಿಶ್ವಮಟ್ಟದಲ್ಲಿ ಹೆಸರು ಮಾಡಿದವರು ನಮ್ಮ ನರೇಂದ್ರ ಭಾಯಿಯೇ. ಅವರ ಪ್ರಭಾವವೆಷ್ಟಿದೆಯೆಂದರೆ ನನ್ನಂಥ ಒರ್ವ ಸಾಮಾನ್ಯ ಗುಜರಾತಿಯನ್ನೂ ಜನ ನನ್ನ ನಾಯಕನ ಹೆಸರಿನಿಂದಲೇ ಗುರುತ್ತಿಸುತ್ತಾರೆ. ನಮ್ಮನ್ನು ಪರಿಚಯವಾದ ತಕ್ಷಣ ಜನ ನಮ್ಮನ್ನು ಮೋದಿಯವರ ಬಗ್ಗೆ ಪ್ರಶ್ನಿಸುತ್ತಾರೆ. ತನ್ನೂರಿನ ಬಗ್ಗೆ ಹೆಮ್ಮೆ ಪಡದವನೂ ಕೂಡ ಇಂಥ ಅನುಭವಗಳಿಂದ ಹೆಮ್ಮೆ ಪಡುತ್ತಾನೆ. ಇಂಥ ಹೆಮ್ಮೆ-ಪುಳಕ ಎಷ್ಟು ರಾಜ್ಯದ ಪ್ರಜೆಗಳಿಗೆ ಸಿಕ್ಕಿದೆ? ಅದೃಷ್ಟವಶಾತ್ ಮೋದಿ ಭಾಯಿ ಗುಜರಾತಿಗಳಿಗೆ ಅದನ್ನು ಒದಗಿಸಿದ್ದಾರೆ. ನನ್ನನ್ನು ನಾನು ಗುಜರಾತಿ ಎಂದು ಪರಿಚಯ ಮಾಡಿಕೊಂಡಾಗ, ಪೋರ್ ಬಂದರಿನ ಸಮೀಪದವನು ಎಂದಾಗ ಜನ ಗಾಂಧೀಜಿ ಬಗ್ಗೆ ಪ್ರಶ್ನಿಸುವುದಿಲ್ಲ. ಮೋದಿ ಬಗ್ಗೆ ಪ್ರಶ್ನಿಸುತ್ತಾರೆ. ಇದು ಆಧುನಿಕ ಗುಜರಾತಿಗೆ ಸಲ್ಲುವ ಗೌರವ. ನನ್ನ ನಾಯಕ ನನಗೆ ನೀಡಿರುವ ಅಪೂರ್ವ ಅವಕಾಶ” ಎಂದು ಅವರು ಹೇಳುತ್ತಿದ್ದರೆ “ಏನ್ ಸ್ವಾಮಿ, ನಿಮ್ಮ ಮುಖ್ಯಮಂತ್ರಿಗಳು ಯಾವುದೋ ರಾಜ್ಯದ ವೇದಿಕೆಯಲ್ಲಿ ಕುರಿ ಹಿಡ್ಕೊಂಡು ನಿಂತಿರುವ ಫೋಟೋ ಬಂದಿದೆ ” ಎಂದು ಕೇಳಬೇಕಾದ ಸಂಕಟದ ಮುಂದೆ ಗುಜರಾತಿಗಳ ಹಿತಾನುಭವ ಅರ್ಥವಾಗಿತ್ತು.








