ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 2, 2013

17

ಇಷ್ಟಕ್ಕೂ ,ಚುನಾವಣೆಯೆನ್ನುವುದೂ ಕ್ರಿಕೆಟ್ ಆಟದ೦ತಲ್ಲ ಎನ್ನುವುದು ನೆನಪಿರಲಿ

‍ನಿಲುಮೆ ಮೂಲಕ

– ಗುರುರಾಜ ಕೊಡ್ಕಣಿ,ಯಲ್ಲಾಪುರ

Voteಇನ್ನೇನು ಕೆಲವೇ ತಿ೦ಗಳುಗಳಲ್ಲಿ ರಾಜಕೀಯದ ಇನ್ನೊ೦ದು ಅ೦ಕಕ್ಕೆ ತೆರೆಬೀಳಲಿದೆ.ಚುನಾವಣೆಯೆ೦ಬ ಮತ್ತೊ೦ದು ಮಹಾಪರ್ವಕ್ಕೆ ದೇಶ ಸಜ್ಜಾಗುತ್ತಿದೆ.ರಾಜಕೀಯ ಪಕ್ಷಗಳು ಈಗಾಗಲೇ ಪ್ರಚಾರಕ್ಕೆ ರಣತ೦ತ್ರಗಳನ್ನು ರೂಪಿಸಿವೆ,ಪ್ರಚಾರ ಆರ೦ಭಿಸಿವೆ.ಈ ಬಾರಿ ದೇಶದ ಜನತೆಯೂ ಅಷ್ಟೇ ಉತ್ಸಾಹದಿ೦ದ ಚುನಾವಣೆಯನ್ನು ಎದುರು ನೋಡುತ್ತಿದ್ದಾರೆ.ಸಾಮಾಜಿಕ ತಾಣಗಳಲ್ಲಿ ನೆಚ್ಚಿನ ನಾಯಕರ ಬಗ್ಗೆ ಬಿಸಿ ಬಿಸಿ ಚರ್ಚೆಗಳಾಗುತ್ತಿವೆ,ವಾಗ್ವಾದಗಳಾಗುತ್ತಿವೆ.ದಿನ ಪತ್ರಿಕೆಗಳಲ್ಲಿ ಪು೦ಖಾನುಪು೦ಖವಾಗಿ ಪ್ರತಿಯೊ೦ದು ರಾಜಕೀಯ ಪಕ್ಷದ ಪ್ರಧಾನಿ ಅಭ್ಯರ್ಥಿಯ ಬಗ್ಗೆ ಪರ ವಿರೋಧ ಲೇಖನಗಳು ಪ್ರಕಟವಾಗುತ್ತಿವೆ.ಇರಲಿ,ದೇಶದ ಮಹಾನಾಯಕನ ಆಯ್ಕೆಗಾಗಿ ನಡೆಯುವ ಚುನಾವಣೆಯೆ೦ದ ಮೇಲೆ ಈ ಬಿಸಿ,ಈ ರೋಚಕತೆ ಇರಬೇಕಾದದ್ದೇ. ಮತದಾನವೆನ್ನುವುದು ಪ್ರಜೆಗಳ ವೈಯಕ್ತಿಕ ವಿಷಯವೆ೦ಬುದು ಎಲ್ಲರಿಗೂ ಗೊತ್ತಿರುವ ವಿಷಯವೇ.ಗೋಪ್ಯತೆ ಕಾಪಾಡಿಕೊಳ್ಳುವ೦ತಹ ಮಹತ್ವದ ವಿಚಾರವೂ ಹೌದು.ಸುಮ್ಮನೆ ಮತದಾನದ ಗೌಪತ್ಯೆಯನ್ನು ಪಕ್ಕಕ್ಕಿಟ್ಟು ನಿಮ್ಮ ಸುತ್ತಮುತ್ತಲಿನವರನ್ನು ’ಈ ಬಾರಿ ಯಾರಿಗೆ ಮತದಾನ ಮಾಡಲಿದ್ದೀರಿ ಮತ್ತು ಆ ಪಕ್ಷ ಅಥವಾ ವ್ಯಕ್ತಿಗೆ ಮತ ಹಾಕಲು ಕಾರಣಗಳೇನು..’? ಎ೦ದು ಕೇಳಿ ನೋಡಿ.ನಿಮಗೆ ತರಹೇವಾರಿ ಉತ್ತರಗಳು ಸಿಗಬಹುದು.

ಕೆಲವರು ಮೋದಿಯನ್ನು ಬದಲಾವಣೆಯ ಹರಿಕಾರ,ಹಾಗಾಗಿ ಮೋದಿಗೆ ಜೈ ಎನ್ನಬಹುದು.ಇನ್ನು ಕೆಲವರು ಕಾ೦ಗ್ರೆಸ್ಸು ಜಾತ್ಯಾತೀತ ಪಕ್ಷ ಅದಕ್ಕೇ ನಮ್ಮ ಮತ ಎನ್ನಬಹುದು ಅಥವಾ ಕೆಲವು ಮೊದ್ದು ಹುಡುಗಿಯರಾಗಿದ್ದರೇ ’ರಾಹುಲ್ ಗಾ೦ಧಿ ನೋಡೋಕೆ ತು೦ಬಾ ಕೆ೦ಪಕೆ೦ಪಗೆ ಚೆನ್ನಾಗಿದ್ದಾನೆ,ಮೋಸ್ಟ್ ಎಲಿಜಿಬಲ್ ಬ್ಯಾಚುಲರ್,ಹಾಗಾಗಿ ನಮ್ಮ ಮತ ರಾಹುಲ್ ಗಾ೦ಧಿಗೇ’ ಎನ್ನಬಹುದು.ಉಳಿದ ಕೆಲವರು ಈ ಬಾರಿ ನಿರಾಕರಿಸುವ ಹಕ್ಕು ಸಿಕ್ಕಿದೆಯಲ್ಲ ಅದನ್ನು ಬಳಸುತ್ತೇವೆ ಎನ್ನಬಹುದು.ಈ ಮೇಲಿನ ಎಲ್ಲ ಆಯ್ಕೆಗಳಿಗೂ ಮತದಾರರಲ್ಲಿ ತಮ್ಮದೇ ಆದ ಕಾರಣವಿರುತ್ತದೆ.ಅದರೆ ಇದೆಲ್ಲವನ್ನೂ ಹೊರತು ಪಡಿಸಿ ಇನ್ನೂ ಒ೦ದು ಕಾರಣ ನಿಮ್ಮ ಗಮನಕ್ಕೆ ಬರಬಹುದು.ಅದು ’ನಮ್ಮ ತ೦ದೆ ತಾಯಿ ಆ ಪಕ್ಷಕ್ಕೆ ಮತ ಹಾಕುತ್ತಿದ್ದರು ,ಹಾಗಾಗಿ ನಾನೂ ಅದೇ ಪಕ್ಷಕ್ಕೆ ಮತ ಹಾಕುತ್ತೇನೆ’ ಎನ್ನುವ೦ತದ್ದು..!! ಇದೊ೦ದು ಕಾರಣವಿದೆಯಲ್ಲ ದೇಶದ ನಾಯಕನ ಆಯ್ಕೆಯಲ್ಲಿ ಅದು ಅತ್ಯ೦ತ ಅರ್ಥಹೀನ ಮತ್ತು ಅಷ್ಟೇ ಅಪಾಯಕಾರಿ ಕಾರಣವಾಗಿದೆ ಎ೦ಬುದು ನಿಸ್ಸ೦ಶಯ.

ಒಮ್ಮೆ ಸೂಕ್ಷ್ಮವಾಗಿ ಗಮನಿಸಿ ನೋಡಿ.ಸ್ವಾತ೦ತ್ರ್ಯಪೂರ್ವದಲ್ಲಿ ಸ್ವಾತ೦ತ್ರ್ಯ ಹೋರಾಟದಲ್ಲಿ ಮು೦ಚೂಣಿಯಲ್ಲಿದ್ದ ಕಾ೦ಗ್ರೆಸ್ ಪಕ್ಷ ದೇಶದ ಮಹಾನ ದೇಶಭಕ್ತ ಪಕ್ಷದ೦ತೇ ಜನತೆಯ ಕಣ್ಣಿಗೆ ಗೋಚರಿಸಿತು.ಹಾಗಾಗಿ ಸ್ವತ೦ತ್ರ ಭಾರತದ ಮೊದಲ ಸರಕಾರವನ್ನು ಕಾ೦ಗ್ರೆಸ್ ರಚಿಸಿತು.ಅ೦ದಿನ ಮಟ್ಟಿಗೆ ಅದು ಸ್ವಾಗತಾರ್ಹವೇ.ಆದರೇ ಮು೦ದೇನಾಯಿತು ನೋಡಿ. ಅಜ್ಜ ಹಾಕಿದ ಆಲದ ಮರಕ್ಕೆ ನೇಣು ಹಾಕಿಕೊ೦ಡರು ಎ೦ಬ೦ತೇ ತಮ್ಮ ಪೂರ್ವಿಕರು ಕಾ೦ಗ್ರೆಸ್ಸನ್ನು ಆಯ್ದುಕೊ೦ಡರು ಎ೦ಬ ಒ೦ದೇ ಕಾರಣಕ್ಕೆ ಜನ ಪುನ: ಪುನ: ಅದೇ ಪಕ್ಷವನ್ನು ಗೆಲ್ಲಿಸಿದರು.ಸ್ವಾತ೦ತ್ರ್ಯಾನ೦ತರದ ಆರವತ್ತೇಳು ವರ್ಷಗಳಲ್ಲಿ ಇದೇ ಪಕ್ಷ ಸುಮಾರು ಐವತ್ತು ಚಿಲ್ಲರೇ ವರ್ಷಗಳಷ್ಟು ಕಾಲ ದೇಶವನ್ನಾಳಿತು.ಹಾಗ೦ತ ದೇಶ ಅದ್ಭುತವಾದ ಪ್ರಗತಿಯೇನಾದರೂ ಸಾಧಿಸಿದೆಯಾ ಎ೦ದು ನೋಡಹೊರಟರೇ ನಿರಾಸೆಯ ಕಾರ್ಮೋಡ ಮನದೊಳಾವರಿಸುತ್ತದೆ.ಜಗತ್ತಿನ ಏಳನೇ ಅತೀ ದೊಡ್ಡ ದೇಶವಾದ ಭಾರತದ ಸಾಕ್ಷರತೆಯ ಪ್ರಮಾಣ ವಿಶ್ವದ ಸರಾಸರಿಗಿ೦ತ ಸಾಕಷ್ಟು ಕೆಳಗಿದೆ(ನೆರೆಯ ಪುಟ್ಟ ದ್ವೀಪ ರಾಷ್ಟ್ರ ಶ್ರೀಲ೦ಕಾಗಿ೦ತಲೂ ಕಡಿಮೆಯಿದೆ ಎನ್ನುವುದು ಗಮನಿಸಬೇಕಾದ ಸ೦ಗತಿ).ಬಡತನವನ್ನು ಗಣನೆಗೆ ತೆಗೆದುಕೊ೦ಡರೇ ಭಾರತೀಯನೊಬ್ಬನ ಸರಾಸರಿ ಆದಾಯದ ವಿಶ್ವದ ನೂರಕ್ಕೂ ಹೆಚ್ಚು ರಾಷ್ಟ್ರಗಳ ನಾಗರೀಕರಿಗಿ೦ತ ಕಡಿಮೆಯಿದೆ..!!! ಹೋಗಲಿ,ನಿರುದ್ಯೋಗ ಸಮಸ್ಯೆಯನ್ನು ನೋಡೋಣವೆ೦ದರೇ ಜನಸ೦ಖ್ಯೆಯಲ್ಲಿ ವಿಶ್ವದ ಎರಡನೇ ಸ್ಥಾನದಲ್ಲಿರುವ ಭಾರತದ ನಿರುದ್ಯೋಗಿಗಳ ಪ್ರಮಾಣ,ಪಕ್ಕದ ಅತೀ ಚಿಕ್ಕ ರಾಷ್ಟ್ರ ಭೂತಾನ್ ಮತ್ತು ವಿಶ್ವದ ನಕಾಶೆಯಲ್ಲಿ ಬರಿಗಣ್ಣಿಗೆ ಗೋಚರಿಸದಷ್ಟು ಚಿಕ್ಕದಾಗಿರುವ “ಅ೦ಡೋರ್ರ” ಎ೦ಬ ಕ೦ಡು ಕೇಳರಿಯದ ದೇಶದಲ್ಲಿನ ನಿರುದ್ಯೋಗಿಗಳಿಗಿ೦ತ ಹೆಚ್ಚಾಗಿದೆ. ಈಗಲೂ ಭಾರತ ಜಗತ್ತಿನ ಅತಿಹೆಚ್ಚು ಭ್ರಷ್ಟಾಚಾರವಿರುವ,ಅತಿ ಹೆಚ್ಚು ಲ೦ಚಕೊರರಿರುವ ರಾಷ್ಟ್ರಗಳಲ್ಲಿ ಒ೦ದಾಗಿದೆ.

ನಮಗಿ೦ತ ಎರಡು ವರ್ಷಗಳ ನ೦ತರ ಸ್ವಾತ೦ತ್ರ್ಯ ಪಡೆದುಕೊ೦ಡ ಚೀನಾ ಅಭಿವೃದ್ಧಿಯಲ್ಲಿ ಭಾರತದ ಎರಡರಷ್ಟು ಮು೦ದಿದೆ.ಹಾಗೆ೦ದು ಧನಾತ್ಮಕ ಬದಲಾವಣೆಗಳು ಇಲ್ಲವೇ ಇಲ್ಲ ಎ೦ದಲ್ಲ.ಆದರೇ ನೇತ್ಯಾತ್ಮಕ ಬದಲಾವಣೆಗಳ ಎದುರು ಇತ್ಯಾತ್ಮಕ ಬದಲಾವಣೆಗಳ ಸ೦ಖ್ಯೆ ಕ್ಷೀಣವಾಗಿದೆ. ಈ ದೇಶವನ್ನು ಕಾ೦ಗ್ರೆಸ್ಸ್ ಎ೦ಬ ಪಕ್ಷ ಅತೀ ಹೆಚ್ಚು ಬಾರಿ ಆಳಿದ್ದರಿ೦ದ ಕಾ೦ಗ್ರೆಸ್ಸಿನ ಉದಾಹರಣೆ ನೀಡಬೇಕಾಯಿತಷ್ಟೇ.ಕಾ೦ಗ್ರೆಸ್ಸಿನ ಹೊರತಾಗಿ ಬೇರೆ ಯಾವುದೇ ಪಕ್ಷಕ್ಕೆ ಇ೦ಥಹದ್ದೇ ಅನುಕೂಲಕರ ವಾತಾವರಣವಿದ್ದೀದ್ದರೂ ಇದೇ ಪುನರಾವರ್ತನೆಯಾಗುತ್ತಿತ್ತು.ಬೆಲೆಯೇರಿಕೆ,ಭ್ರಷ್ಟಾಚಾರ,ಹಗರಣಗಳಿ೦ದ ದೇಶ ಬಳಲಿ ಬೆ೦ಡಾಗಿ ಹೋಗಿದೆ.ಆದರೂ ಪುನ; ಪುನ: ಮತ್ತದೇ ಪಕ್ಷ ಅಧಿಕಾರಕ್ಕೆ ಬರುತ್ತದೆ.ತನ್ನ ಹಗರಣಗಳನ್ನು ,ಭ್ರಷ್ಟಾಚಾರವನ್ನು ಮು೦ದುವರೆಸುತ್ತದೆ. ವಿಪರ್ಯಾಸವಲ್ಲವೇ ಇದು.?ಪಕ್ಷವೊ೦ದನ್ನು ನನ್ನ ತ೦ದೆ ಬೆ೦ಬಲಿಸುತ್ತಿದ್ದರು,ತಾಯಿ ಬೆ೦ಬಲಿಸುತ್ತಿದ್ದರು ,ಪೂರ್ವಿಕರು ಬೆ೦ಬಲಿಸುತ್ತಿದ್ದರು ಎ೦ಬ ಒ೦ದೇ ಕಾರಣಕ್ಕೆ ಬೆ೦ಬಲಿಸುವುದು ಮೂರ್ಖತನದ ಪರಮಾವಧಿ.ರಾಜಕೀಯ ಪಕ್ಷಗಳ ನೈತಿಕತೆ ಬದಲಾದ೦ತೇ ಮತದಾರರ ರಾಜಕೀಯಾಸಕ್ತಿಗಳೂ ಬದಲಾಗಬೇಕು.

ರಾಜಕೀಯ ಪಕ್ಷವೊ೦ದು ಕುಲಗೆಟ್ಟು ಹೋಗಿದೆಯೆ೦ದು ಗೊತ್ತಾದನ೦ತರ,ಉಳಿದ ಯಾವುದಾದರೂ ಪಕ್ಷ ಉತ್ತಮ ಆಡಳಿತ ನಡೆಸಬಲ್ಲದು ಎ೦ದೆನಿಸಿದ ನ೦ತರ ನಿಷ್ಟಾವ೦ತ ಮತದಾರರು ರಾಜಕೀಯ ಪಕ್ಷವೊ೦ದನ್ನು ತಮ್ಮ ಅಹ೦ನ ಭಾಗವಾಗಿಸದೇ ಪಕ್ಷ ಬದಲಿಸಿ ಪಕ್ಷ ನಿಷ್ಠೆಗಿ೦ತ ರಾಷ್ಟ್ರನಿಷ್ಠೆ ಮೊದಲು ಎನ್ನಬೇಕು.ಇಲ್ಲವಾದರೇ ಏನೇ ಆದರೂ ತಮ್ಮನ್ನು ಜನ ಬದಲಿಸುವುದಿಲ್ಲ ಎ೦ಬುದನ್ನು ಅರ್ಥೈಸಿಕೊ೦ಡ ರಾಜಕೀಯ ಪಕ್ಷ ಮತ್ತು ಆ ಪಕ್ಷದ ನೇತಾರರು ಸ್ವಾರ್ಥಕ್ಕಾಗಿ ದೇಶವನ್ನು ಮಾರಲೂ ಹಿ೦ಜರಿಯರು.ಸ್ವಲ್ಪ ಎಡವಿದರೂ ಜನತೆ ತಮ್ಮನ್ನು ತಿರಸ್ಕರಿಸುತ್ತಾರೆ ಎ೦ಬ ಭಯವಿದ್ದಾಗ ಮಾತ್ರ ಆಡಳಿತ ಸರಿಯಾಗಿ ನಡೆಯುತ್ತದೆ.ಮತ್ತು ಸರಿಯಾದ ಆಡಳಿತದಿ೦ದ ಮಾತ್ರ ದೇಶದ ಪ್ರಗತಿಯೆ೦ಬುದು ಸಾಧ್ಯ. ಎಷ್ಟೇ ಕೆಟ್ಟದಾಗಿ ಆಡಿದರೂ ನಮ್ಮ ದೇಶವೆ೦ಬ ಒ೦ದೇ ಕಾರಣಕ್ಕೆ ಭಾರತೀಯ ತ೦ಡವನ್ನೇ ಬೆ೦ಬಲಿಸಿದ೦ತೇ, ಕೊಳೆತು ನಾರುತ್ತಿದ್ದರೂ ಒ೦ದೇ ಪಕ್ಷವನ್ನು ಬೆ೦ಬಲಿಸಲು ಚುನಾವಣೆಯೆ೦ಬುದು ಕ್ರಿಕೆಟ್ ಆಟವಲ್ಲ ಎನ್ನುವುದನ್ನು ನೆನಪಿಡಿ. ಒ೦ದು ಪಕ್ಷ ಹೋರಾಟದಲ್ಲಿ ಭಾಗವಹಿಸಿತ್ತು,ದೇಶದ ಮಹಾನ್ ಮುತ್ಸದ್ದಿಗಳು ಆ ಪಕ್ಷದಲ್ಲಿದ್ದರು ಎನ್ನುವವರು,ತಮ್ಮ ಪೂರ್ವಜರು ಆ ಪಕ್ಷವನ್ನು ಬೆ೦ಬಲಿಸುತ್ತಿದ್ದರು ಎನ್ನುವವರು ಒ೦ದು ವಿಷಯ ಗಮನದಲ್ಲಿಟ್ಟುಕೊಳ್ಳಬೇಕು.ರಾಜಕೀಯ ಪಕ್ಷವೆನ್ನುವುದು ಹರಿಯುವ ನೀರಿನ೦ತೇ,ಹರಿಯುತ್ತಲೇ ಇರುತ್ತದೆ.ಹರಿಯುವಾಗ ಪ್ರತಿಬಾರಿಯೂ ಶುದ್ಧ ನೀರೇ ಇರಬೇಕೆ೦ದೇನಿಲ್ಲ,ಅಲ್ಲಿ ಕಾಲುವೆಯ ಕೊಳಚೇ ನೀರು ಸೇರಿಕೊಳ್ಳಬಹುದು.ಅದನ್ನು ಗಮನಿಸಿದವರು ಮಾತ್ರ ಪ್ರಜ್ನಾವ೦ತರೆನಿಸಿಕೊಳ್ಳುತ್ತಾರೆ.ಒ೦ದು ಕಾಲಕ್ಕೆ ಪರಮ ಪಾವನೆಯೆನಿಸಿಕೊ೦ಡ ಗ೦ಗೆಯೇ ಇ೦ದು ಅತ್ಯ೦ತ ಕಲುಷಿತೆ ಎ೦ಬ ಅಪಕೀರ್ತಿಗೊಳಗಾಗಿರುವಾಗ,ರಾಜಕೀಯ ಪಕ್ಷ ಯಾವ ಗಿಡದ ತೊಪ್ಪಲು. ಅಲ್ಲವೇ…?

ಚಿತ್ರ ಕೃಪೆ : http://www.thunderclap.it

17 ಟಿಪ್ಪಣಿಗಳು Post a comment
  1. Rajesh j's avatar
    Rajesh j
    ಡಿಸೆ 2 2013

    Sooooooperrrrrrrr gurugale….!!!

    ಉತ್ತರ
  2. Nagshetty Shetkar's avatar
    ಡಿಸೆ 2 2013

    “ಮೇಲ್ವರ್ಗ, ಮೇಲ್ ಮಧ್ಯಮ ವರ್ಗಗಳು ನಮೋ ಭಜನೆಯಲ್ಲಿ ಮೈಮರೆತಿವೆ. ನಿಜ ನಮ್ಮ ಪ್ರಜಾಪ್ರಭುತ್ವಕ್ಕೆ ಕಾರ್ಪೊರೇಟ್ ಕತ್ತಲು ಕವಿದಿದೆ. ಆದರೆ ಕತ್ತಲು ಸರಿದು ಬೆಳಕಾಗಲೇಬೇಕು.”

    ladaiprakashanabasu.blogspot.in/2013/12/blog-post_7679.html

    ಉತ್ತರ
    • ವಿಜಯ್ ಪೈ's avatar
      ವಿಜಯ್ ಪೈ
      ಡಿಸೆ 2 2013

      ಮತ್ತು ನೆಲೆ ತಪ್ಪಿ, ನಿರಾಶ್ರಿತ ಕ್ಯಾಂಪ್ ಸೇರಿಕೊಂಡಿರುವ ಎಡಬಿಡಂಗಿ ಪಂಥಿಗಳು ಬಾವಿಗೊಳಗಿನ ಕಪ್ಪೆಗಳಾಗಿದ್ದಾರೆ… ಇದ್ದಲ್ಲೇ ಹೊರಳಾಡುತ್ತ, ಸುಳ್ಳಿನ ಪುಂಗಿಯೂದುತ್ತ.. ಇದೇ ಪ್ರಪಂಚ, ಎಲ್ಲರೂ ಹೀಗೆಯೇ ಇರಬೇಕು ಎಂದು ಕೊರೆಯುತ್ತ, ಉಳಿದವರು ತಮ್ಮ ಮಾತುಗಳನ್ನು ಇನ್ನೂ ನಂಬುತ್ತಿದ್ದಾರೆ ಎಂಬ ಭ್ರಮೆಯಲ್ಲಿ ಕೊರೆತ ಮುಂದುವರೆಸಿದ್ದಾರೆ.

      ಉತ್ತರ
    • SSNK's avatar
      ಡಿಸೆ 2 2013

      [[Nagshetty Shetkar> ಮೇಲ್ವರ್ಗ, ಮೇಲ್ ಮಧ್ಯಮ ವರ್ಗಗಳು ನಮೋ ಭಜನೆಯಲ್ಲಿ ಮೈಮರೆತಿವೆ]]

      ಶೇಟ್ಕರ್ ಅವರೇ,
      ನಿಮಗೆ “ಕನಸಲ್ಲೂ ನಮೋ ಜಪ, ಮನಸಲ್ಲೂ ನಮೋ ಜಪ, ಎಲ್ಲೆಲ್ಲೂ ನಮೋ ಜಪ” ಎಂಬಂತಾಗಿದೆ ಎನ್ನುವುದು ತಿಳಿಯುತ್ತಿದೆ. 😀
      ಉತ್ತರ ಭಾರತದ (ವಿಶೇಷವಾಗಿ ಬಿಹಾರ ಮತ್ತು ಉತ್ತರಪ್ರದೇಶ ರಾಜ್ಯಗಳ) ಮುಸಲ್ಮಾನರು ನರೇಂದ್ರ ಮೋದಿಯವರ ಕುರಿತಾಗಿ ಯಾವ ರೀತಿಯ ಆಶಾ ಭಾವನೆ ಇಟ್ಟುಕೊಂಡಿದ್ದಾರೆನ್ನುವುದಕ್ಕೆ, ಇವತ್ತು ಪ್ರಕಟವಾಗಿರುವ ಈ ಸುದ್ದಿಯ ತುಣುಕನ್ನು ನೋಡಿ:

      Mohammad Khalil, a farmer from Purnea in Bihar, says he has come to Delhi for treatment at AIIMS. He stays near Meena Bazar and when he heard Modi was coming to speak he came to check him out. “I can go back to my village and say not only did I get my operation, I also heard Modi speak,” he says with a big smile.

      ಉತ್ತರ
  3. M.A.Sriranga's avatar
    M.A.Sriranga
    ಡಿಸೆ 2 2013

    ಭಾರತದ ಸಾಕ್ಷರತೆ ಮತ್ತು ನಿರುದ್ಯೋಗದ ಅಂಕಿ-ಅಂಶಗಳನ್ನು ಮತ್ತೊಂದು ದೇಶದ ಜತೆ ಹೋಲಿಸುವಾಗ ಆ ದೇಶದ ಜನ ಸಂಖ್ಯೆಯನ್ನೂ ಗಮನಿಸಬೇಕಲ್ಲವೇ? ಭಾರತ, ಶ್ರೀಲಂಕ ಮತ್ತು ಅಂಡ್ರೂರದ ಜನಸಂಖ್ಯೆಯಲ್ಲಿ ಅಗಾಧವಾದ ವ್ಯತ್ಯಾಸವಿದೆ. ಇನ್ನು ಚೀನಾದ ವಿಷಯಕ್ಕೆ ಬಂದರೆ ಬಹುಶಃ ನಮಗೆ ಪ್ರಜಾಪ್ರಭುತ್ವ ಸರಕಾರ ಬೇಕಾದರೆ ಕೆಲವೊಂದು ಅಂಶಗಳ ಜತೆ ಹೊಂದಾಣಿಕೆಗಳು ಅನಿವಾರ್ಯವಾಗುತ್ತವೆ. ಇದು ನಮ್ಮ ತಪ್ಪಿಗೆ ಒಂದು ವ್ಯವಸ್ಥೆಯ ಮೇಲೆ ಗೂಬೆ ಕೂರಿಸುವ ಪ್ರಯತ್ನವಲ್ಲ. ಆದರೆ ಬೇರೆ ದಾರಿ ಇಲ್ಲ.

    ಉತ್ತರ
  4. ramesh nayak's avatar
    ramesh nayak
    ಡಿಸೆ 2 2013

    ಒಳ್ಳೆಯ ಬರಹ ಸರ್, % ತೆಗೆಯುವಾಗ ಜನಸ೦ಖ್ಯೆ ಅ೦ಥಹ ವ್ಯತ್ಯಾಸವಾಗಲಾರದು ಅ೦ತ ನನ್ನ ಅಭಿಪ್ರಾಯ..ಯಾಕೆ೦ದರೆ ಅವರ ಒಬ್ಬ ಪ್ರಜೆಗೆ ನಮ್ಮ ೧೦೦೦೦ ಪ್ರಜೆಗಳು ಸಮ..ಇದಕ್ಕೆ ಧನಾತ್ಮಕ ,ಋಣಾತ್ಮಕ ಪರಿಣಾಮಗಳು ಒ೦ದೇ ಅನ್ನಿಸುತ್ತದೆ

    ಉತ್ತರ
  5. SSNK's avatar
    ಡಿಸೆ 2 2013

    “ಸೆಕ್ಯುಲಾರ್” ಕಾಂಗ್ರೆಸ್ಸಿನ ಅಡಿಯಲ್ಲಿ “ಅಲ್ಪಸಂಖ್ಯಾತ” ಮುಸಲ್ಮಾನರು ಹೇಗೆ ಅಭಿವೃದ್ಧಿ ಹೊಂದುತ್ತಾರೆ ಎಂಬುದನ್ನು ಅರಿಯಲು, ಈ ಕೊಂಡಿಯನ್ನೊಮ್ಮೆ ನೋಡಿ:

    /large

    ಉತ್ತರ
  6. M.A.Sriranga's avatar
    M.A.Sriranga
    ಡಿಸೆ 2 2013

    ಬೇರೆ ದೇಶದ ಒಬ್ಬ ಪ್ರಜೆಗೆ ನಮ್ಮ ದೇಶದ ಹತ್ತು ಸಾವಿರ ಪ್ರಜೆಗಳು ಹೇಗೆ ಸಮ? ಯಾವ ರೀತಿಯಲ್ಲಿ?

    ಉತ್ತರ
    • ramesh nayak's avatar
      ramesh nayak
      ಡಿಸೆ 2 2013

      janasakhyeya aadarada mele…nammadu 100 crore andukondare..avaradu 10 laksha

      ಉತ್ತರ
  7. SSNK's avatar
    ಡಿಸೆ 3 2013

    [[janasakhyeya aadarada mele…nammadu 100 crore andukondare..avaradu 10 laksha]]

    ?????

    ಉತ್ತರ
    • Rajesh j's avatar
      Rajesh j
      ಡಿಸೆ 3 2013

      So 1 = 1000

      ಉತ್ತರ
      • SSNK's avatar
        ಡಿಸೆ 3 2013

        ನಿಮ್ಮ ಮಾತಿನ ಅರ್ಥವನ್ನು ಸ್ವಲ್ಪ ವಿವರಿಸಬಹುದೇ?

        ಉತ್ತರ
        • Rajesh j's avatar
          Rajesh j
          ಡಿಸೆ 3 2013

          Sir nammalli %wise 1000 janakke udyog dorakuvudu sanna deshadalli 1 rige kelasa sigodu onde…at the same time nammalli 1000 jana literate aaguvudakke avaru 1 raadre saaku

          ಉತ್ತರ
          • Rajesh j's avatar
            Rajesh j
            ಡಿಸೆ 3 2013

            Nanna oohe…!!

            ಉತ್ತರ
          • SSNK's avatar
            ಡಿಸೆ 3 2013

            ದೇಶಗಳ ನಡುವಣ ಹೋಲಿಕೆ ಇಷ್ಟೊಂದು ಸರಳವೇ?
            ಜನಸಂಖ್ಯೆಯನ್ನು ಹೊರೆ ಎಂದು ನೋಡುವ ಬದಲು, ಅದು ನಮ್ಮ ಶಕ್ತಿ ಎಂದು ನೋಡಿದರೆ?
            ಜನಸಂಖ್ಯೆಯ ಜೊತೆಗೆ ಸಂಪನ್ಮೂಲದ ಪಾತ್ರವೂ ಮುಖ್ಯವಲ್ಲವೇ?
            ಇದೆಲ್ಲದರ ಜೊತೆಗೆ, ಆ ದೇಶದ ಜನರ ಇಚ್ಚಾಶಕ್ತಿಯೂ ಬಹುಮುಖ್ಯವಲ್ಲವೇ?

            ಉತ್ತರ
            • M.A.Sriranga's avatar
              M.A.Sriranga
              ಡಿಸೆ 3 2013

              ಅಂಕಿ-ಅಂಶಗಳು ಬಿಚ್ಚಿಡುವುದಕ್ಕಿಂತ ಮುಚ್ಚಿಡುವುದೇ ಜಾಸ್ತಿ!!

              ಉತ್ತರ

Leave a reply to Kumar ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments