ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 16, 2013

3

ಬೆಂಗಳೂರು ಸುಂದರವಾಗಬೇಕೇ – ಹಾಗಿದ್ದರೆ, ಒಂದು ಸಣ್ಣ SMS ಕಳುಹಿಸಿ!

‍ನಿಲುಮೆ ಮೂಲಕ

Katte Sathyaಬೆಂಗಳೂರಿಗರೇ,

  • ನಿಮಗೆ ಬೆಂಗಳೂರಿನ ಕಿತ್ತು ಹೋಗಿರುವ ರಸ್ತೆಗಳನ್ನು ನೋಡಿ ಬೇಸರವಾಗಿದೆಯೇ?
  • ನಿಮಗೆ ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಚೆಲ್ಲಿರುವ ಕಸವನ್ನು ಕಂಡು ರೋಸಿ ಹೋಗಿದೆಯೇ?
  • ಬೆಂಗಳೂರಿನಲ್ಲಿ BBMP ಕೆಲಸ ಮಾಡುತ್ತಿದೆಯೋ ಇಲ್ಲವೋ ಎನಿಸುತ್ತಿದೆಯೇ?

ಇದನ್ನೆಲ್ಲಾ ಸರಿಪಡಿಸಲು ನಾವು ಏನೂ ಮಾಡುವುದು ಬೇಡವೇ? ಎಲ್ಲಾ ಜವಾಬ್ದಾರಿಯನ್ನು BBMP ಮೇಲೆ ಹೊರಿಸಿ, ನಾವು ಮನೆಯಲ್ಲಿ ಕಣ್ಮುಚ್ಚಿ ಹಾಯಾಗಿ ನಿದ್ದೆ ಹೋದರೆ, ಎಲ್ಲವೂ ಸರಿ ಹೋಗುತ್ತದೆಯೇ? ಕನಿಷ್ಠ ಪಕ್ಷ ನಮ್ಮ ದೂರುಗಳನ್ನಾದರೂ BBMPಗೆ ತಲುಪಿಸುವುದನ್ನು ಮಾಡಿದ್ದೇವೆಯೇ? ಮನೆಯಲ್ಲೇ ಕುಳಿತು ಗೊಣಗಿದರೆ, ಗೋಳಾಡಿದರೆ, ಏನು ಪ್ರಯೋಜನ? ಅದನ್ನಾದರೂ ರಸ್ತೆಯಲ್ಲಿ ಮಾಡಿದರೆ ಸುದ್ದಿಯಾಗುತ್ತದೆ.

ನಮ್ಮೆಲ್ಲಾ ತೊಂದರೆಗಳನ್ನೂ ನಮ್ಮ ಮೇಯರ್ ಅವರಿಗೆ ತಿಳಿಸೋಣ. ಒಂದು ಸಣ್ಣ SMS ಕಳುಹಿಸಿದರೂ ಸಾಕು. ಅವರು, ತಮ್ಮ ಮೊಬೈಲ್ ಸಂಖ್ಯೆಯನ್ನು ನೀಡಿದ್ದಾರೆ. ಜನರು ತಮ್ಮ ತೊಂದರೆಗಳನ್ನು ತಮಗೇ ನೇರವಾಗಿ ತಿಳಿಸಬಹುದೆಂದು ಹೇಳಿದ್ದಾರೆ.ಅವರು ಹೇಗೆ ಎಲ್ಲವನ್ನು ಸರಿಪಡಿಸುತ್ತಾರೋ ಗೊತ್ತಿಲ್ಲ. ಕನಿಷ್ಠಪಕ್ಷ ನಮ್ಮ ದೂರನ್ನಾದರೂ ಅವರಿಗೆ ತಿಳಿಸೋಣ.

ಜನರು ಸಂತೋಷವಾಗಿಲ್ಲ; ಜನರಿಗೆ ತೊಂದರೆಗಳಿವೆ; ಜನರು ತೊಂದರೆಗಳಿಂದ ರೋಸಿ ಹೋಗಿದ್ದಾರೆ; ಇತ್ಯಾದಿ ಸುದ್ದಿಗಳು ರಾಜಕಾರಣಿಗೆಳಿಗೆ ನಿದ್ದೆಗೆಡಿಸುತ್ತವೆ; ದೆಹಲಿಯಲ್ಲಿ ಆದಂತೆ ಬೆಂಗಳೂರಿನಲ್ಲೂ ಆಗಬಹುದು – ನಾವು ನಿಶ್ಚಯಿಸಿದರೆ.

ಮೇಯರ್ ಅವರಿಗೆ ಒಂದು ಸಣ್ಣ SMS ಕಳುಹಿಸಿ, ನಿಮ್ಮ ದೂರನ್ನು ಈ ಕೂಡಲೇ ತಿಳಿಸಿ. ಅವರು ಕೆಲಸ ಮಾಡದಿದ್ದರೆ, ಮುಂದಿನ ಚುನಾವಣೆಯಲ್ಲಿ ಪಾಠ ಕಲಿಸುವುದು ಇದ್ದೇ ಇದೆ. ನಮಗೆ ಬೇಕು “ಸುಂದರ ಬೆಂಗಳೂರು”.

ಮೇಯರ್ ಅವರನ್ನು ಈ ಸಂಖ್ಯೆಗಳಲ್ಲಿ ಸಂಪರ್ಕಿಸಬಹುದು:

ಸ್ಥಿರವಾಣಿ: 080-22975501

ಚರವಾಣಿ: 9341220836

*-*-*-*

ಸುದ್ದಿ ಮೂಲ : ನರೇಂದ್ರ ಕುಮಾರ್ ಅವರ ಬ್ಲಾಗ್

ಚಿತ್ರ ಕೃಪೆ : newindianexpress.com

3 ಟಿಪ್ಪಣಿಗಳು Post a comment
  1. SSNK's avatar
    ಡಿಸೆ 16 2013

    ಸಹಸ್ರಾರು SMSಗಳು ಮೇಯರ್ ಅವರ ಮೊಬೈಲ್ ಅನ್ನು ಅಪ್ಪಳಿಸಲಿ.
    ನಾನು ಕನಕಪುರ ರಸ್ತೆಯಲ್ಲಿ (ಜೆ.ಪಿ.ನಗರ) ತುಂಬಿರುವ ಕಸದ ಕುರಿತಾಗಿ SMS ಕಳುಹಿಸಿದೆ.

    ಉತ್ತರ
  2. Nanjunda Raju's avatar
    ಡಿಸೆ 16 2013

    ಮಾನ್ಯರೇ, ಇದೂವರೆಗೂ ಹಿಂದಿನ ಯಾವ ಮೇಯರ್ ಸಹ ತಮ್ಮ ಚರ ದೂರವಾಣಿ ಸಂಖ್ಯೆ ನೀಡಿರಲಿಲ್ಲ. ಈ ಮೇಯರ್ ರವರು ನೀಡಿದ್ದಾರೆ. ಅದಕ್ಕಾಗಿ ಅವರಿಗೆ ಧನ್ಯವಾದಗಳು. ಈ ನಂಬರ್ ಸಿಕ್ಕಿದ್ದೇ ತಡ ಬೃಹತ್ ಬೆಂಗಳೂರು ಮಾಹಾ ನಗರ ಪಾಲಿಕೆಯ ವ್ಯಾಪ್ತಿಯ ನಿವಾಸಿಗಳು ದೂರವಾಣಿ ಅಥವಾ ಎಸ್.ಎಂ.ಎಸ್ ಕಳುಹಿಸಲು ಶುರು ಮಾಡಿದರೆ ಅವರ ಕಾರ್ಯಭಾರದೊಂದಿಗೆ ನಮ್ಮ ದೂರುಗಳನ್ನು ಹೇಗೆ ನಿಭಾಯಿಸುತ್ತಾರೆ. ಅವರಿಗೂ ಕಷ್ಟ ಸಾರ್ವಜನಿಕರಿಗೂ ನಿರಾಶೆಯಾಗುತ್ತದೆ. ಆದುದರಿಂದ ಅವರ ಕಛೇರಿಯಲ್ಲಿಯೇ ಒಂದು ದೂರು ವಿಭಾಗವನ್ನು ತೆರೆದು, ಅದಕ್ಕೊಂದು ದೂರವಾಣಿ ಸಂಖ್ಯೆ ಮತ್ತು ಎಸ್.ಎಂ.ಎಸ್ ಕಳುಹಿಸಲು ಒಂದು ಸಂಖ್ಯೆ ಮತ್ತು ಇ-ಮೇಲ್ ತಾಣವನ್ನು ರಚಿಸಿ ಅದನ್ನು ನಿರ್ವಹಿಸಲು ಸೂಕ್ತ ಅಧಿಕಾರಿಗಳನ್ನು ನೇಮಿಸಿ ದೂರು ಬಂದ ಕೂಡಲೇ ಸಂಬಂಧಿಸಿದ ಆಯಾ ಪ್ರದೇಶದ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಮಾಹಿತಿ ನೀಡಿ ತಪ್ಪದೇ ಕ್ರಮ ತೆಗೆದುಕೊಂಡು ಕ್ರಮ ತೆಗೆದುಕೊಳ್ಳಲು ಕಟ್ಟುನಿಟ್ಟಾಗಿ ಆದೇಶ ನೀಡುವುದು. ತಪ್ಪಿದಲ್ಲಿ ದಂಡ ಹಾಕುವ ವ್ಯವಸ್ಠೆ ತಂದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ದೂರವಾಣಿ ಮುಖಾಂತರ,ಎಸ್.ಎಂ.ಎಸ್ ಮುಖಾಂತರ ಇ-ಮೇಲ್ ಮುಖಾಂತರ ಬಂದ ದೂರುಗಳನ್ನು ಮಾನ್ಯ ಮೇಯರ್ ರವರು ಮತ್ತು ಆಯುಕ್ತರು ಆಗಾಗ ಪರಿಶೀಲಿಸಿ, ಕ್ರಮ ತೆಗೆದುಕೊಂಡಿರುವರೇ ಇಲ್ಲವೇ ಎಂಬುದನ್ನು ಪರಿಶೀಲಿಸಿದರೆ. ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಅಥವಾ ಈ ಹಿಂದೆ ಮಾನ್ಯ ಮಾಜಿ ಮೇಯರ್ ರವರಾದ ಶ್ರೀ ರಾಮಚಂದ್ರಪ್ಪನವರ ಅಧಿಕಾರಾವಧಿಯಲ್ಲಿ ಒಂದು ಕರ್ಯಪಡೆ ಅಥವಾ ಟಾಸ್ಕ್ ಫೋರ್ಸ್ ರಚಿಸಿ, ದೂರು ಬಂದ ಕೂಡಲೆ ಒಂದೆರಡು ಗಂಟೆಗಳಲ್ಲಿ ಕ್ರಮ ತೆಗೆದುಕೊಳ್ಳುವ ವ್ಯವಸ್ಠೆ ಮಾಡಿದ್ದರು ಆಗ ಸಾರ್ವಜನಿಕರಿಗೆ ದೂರು ನೀಡಿದ ಕೂಡಲೆ ಪರಿಹಾರ ದೊರಕುತ್ತಿತ್ತು. ಹಾಲಿ ಮೇಯರ್ ರವರು ಮನಸ್ಸು ಮಾಡಿದರೆ, ಈ ಕ್ರಮವನ್ನು ಈಗಲು ಜಾರಿಗೆ ತರಬಹುದು.

    ಉತ್ತರ
    • SSNK's avatar
      ಡಿಸೆ 16 2013

      ನಾನು ಈ ಹಿಂದೆ ಸಂಬಂಧ ಪಟ್ಟ ಅಧಿಕಾರಿಗಳ ಬಳಿ ದೂರು ಕೊಂಡೊಯ್ದಾಗ ಅವರು ಹೇಳಿದ್ದನ್ನು ಕೇಳಿದರೆ ಆಶ್ಚರ್ಯವೆನಿಸಬಹುದು. “ಇಲ್ಲಿಯವರೆಗೂ ಈ ವಿಷಯದ ಕುರಿತಾಗಿ ಯಾರೂ ದೂರು ನೀಡಿಲ್ಲವಲ್ಲ! ನಿಮಗೊಬ್ಬರಿಗೆ ಮಾತ್ರ ತೊಂದರೆ ಇದ್ದಂತಿದೆ!? ಇನ್ನೂ ಒಂದಷ್ಟು ಜನ ದೂರು ನೀಡಿದರೆ ಏನಾದರೂ ಕ್ರಮ ಕೈಗೊಳ್ಳಬಹುದು…..”.

      ನಮ್ಮ ಜನ, ತಮ್ಮ ಮನೆಗಳಲ್ಲಿಯೇ ಗೊಣಗಾಡುತ್ತಾರೆ, ಪೇಚಾಡುತ್ತಾರೆ. ಯಾರೂ ದೂರು ನೀಡಲು ಮುಂದಾಗುವುದಿಲ್ಲ. ಮೇಯರ್ ಅವರ ಸಂಖ್ಯೆ ಸಿಕ್ಕ ತಕ್ಷಣ ದೂರು ನೀಡುವವರ ಸಂಖ್ಯೆ ಹೆಚ್ಚಾಗಬಹುದು ಎಂದು ನೀವೇಕೆ ಚಿಂತಿಸುತ್ತೀರಿ?
      ಜನ ದೂರು ನೀಡುವ ಅಭ್ಯಾಸ ಇಟ್ಟುಕೊಳ್ಳದ ಕಾರಣ ಅಥವಾ ದೂರು ನೀಡಲು ಹಿಂದೇಟು ಹಾಕುವುದರಿಂದ, ಸಂಬಂಧಪಟ್ಟ ಅಧಿಕಾರಿಗಳು, ಜನರಿಗೆ ತೊಂದರೆಯೇ ಇಲ್ಲ ಎಂದು ಭಾವಿಸಿರುವ ಸಂಭವವಿದೆ. ಹೀಗಾಗಿ, ಅನೇಕ ಕೆಲಸಗಳು ಆಗಿರುವುದಿಲ್ಲ.
      ಕನಿಷ್ಠಪಕ್ಷ ತೊಂದರೆಯಿದೆ ಎನ್ನುವುದಾದರೂ ತಿಳಿಯಲಿ. ಒಂದು ದಿನಕ್ಕೆ 1000 SMS ಹೋಯಿತು ಎಂದಿಟ್ಟುಕೊಳ್ಳಿ. ಅಷ್ಟು ದೊಡ್ಡ ಸಂಖ್ಯೆಯ ಜನರಿಗೆ ತೊಂದರೆಯಿದೆ ಎನ್ನುವುದು ತಿಳಿಯುತ್ತದಲ್ಲವೇ? ಆಗಲಾದರೂ ಅವರು ಜನರ ತೊಂದರೆ ನಿವಾರಣೆಗೆ ತುರ್ತು ಕ್ರಮ ಕೈಗೊಳ್ಳಬಹುದಲ್ಲವೇ?

      ಜನರ ತೊಂದರೆ ನಿಭಾಯಿಸುವುದು ಅವರ ಕರ್ತವ್ಯ. ಅವರಿಗೆ ಓದಲು ಆಗದಷ್ಟು SMSಗಳು ಕರೆಗಳು ಹೋದವೆಂದರೆ, ಅದರರ್ಥ, ಅವರು ಇಷ್ಟು ಜನ ನಿಷ್ಕ್ರಿಯರಾಗಿದ್ದರೆಂದೇ ಅಲ್ಲವೇ? ತಮಗೆ ಬರುವ SMSಗಳನ್ನು ಕರೆಗಳನ್ನು ಹೇಗೆ ನಿಭಾಯಿಸಬೇಕೆಂಬುದನ್ನು ಅವರೇ ಪರಿಹರಿಸಿಕೊಳ್ಳಬೇಕು.

      ಜನರ ತೊಂದರೆ ಪರಿಹಾರವಾದಂತೆ, ಅವರಿಗೆ ಬರುವ ದೂರುಗಳೂ ಕಡಿಮೆಯಾಗುತ್ತವೆ!

      ಉತ್ತರ

Leave a reply to Nanjunda Raju ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments