ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 16, 2013

3

ಸೆಕ್ಯುಲರ್ ಮೀಡಿಯಾದ ನವಕಣ್ಮಣಿ ’ಕೇಜ್ರಿವಾಲ್’

‍ನಿಲುಮೆ ಮೂಲಕ

– ಪ್ರಹ್ಲಾದ್ ಜೋಷಿ

AAPಇನ್ನು 6 ತಿಂಗಳಲ್ಲಿಯೇ ಲೋಕಸಭಾ ಚುನಾವಣೆ ಬರಲಿದೆ ಬಹುತೇಕ ಎಲ್ಲ ಪಕ್ಷಗಳು ಇದಕ್ಕೆ ತಯಾರಿ ನಡೆಸಿವೆ, ದೇಶದ ೨ ಪಕ್ಷಗಳಾದ ಕಾಂಗ್ರೆಸ್ ಇಲ್ಲವೇ ಬಿಜೆಪಿ ಅಧಿಕಾರ ಹಿಡಿಯಲು ಪ್ರಯತ್ನ ನಡೆಸಿವೆ. ಕಾಂಗ್ರೆಸ್ಸಿನ ಜನ ವಿರೋಧಿ ನೀತಿಗಳು ಅಧಿಕಾರ ಹಿಡಿಯಲು ಮುಳುವಾಗಿದೆ, ಇನ್ನು ಬಿಜೆಪಿ ಮೋದಿಯನ್ನು ಅಖಾಡಕ್ಕೆ ಇಳಿಸುತ್ತಿದೆ ಇನ್ನು ಮೊನ್ನೆ ನಡೆದ ಚುನಾವಣಾ ಫಲಿತಾಂಶ ನೋಡಿದರೆ ಮೋದಿಯ ಕಾರ್ಯತಂತ್ರ ಫಲ ಕೊಟ್ಟಿದೆ, ಇದು ಇನ್ನು ಕಾಂಗ್ರೆಸ್ಸಗೆ ಚಿಂತೆಗಿಡುಮಾಡಿದೆ.ಮೋದಿಯ ಜನಪ್ರಿಯತೆ ಕಾಂಗ್ರೆಸ್ಸಿಗೆ ಚಿಂತೆ ಉಂಟು ಮಾಡಿದೆ, ಇಂತಹ ಸ್ಥಿತಿಯನ್ನು ಕಾಂಗ್ರೆಸ್ ಮೊದಲೇ ಊಹೆ ಮಾಡಿತ್ತು.

ಮೋದಿ ಮಾಡಿದ ಅಭಿವೃದ್ಧಿ ಯಾವಾಗ ಜನರ ತಲುಪಿತೋ ಯಾವಾಗ ಮೋದಿಯನ್ನು ಮುಸ್ಲಿಮರು ಬೆಂಬಲಿಸಿದರೋ ಕಾಂಗ್ರೆಸ್ ನಾಯಕರು ಸಣ್ಣದಾಗಿ ಬೆವರತೊಡಗಿದರು, ಮೋದಿಯ ಸಮನಾದ ನಾಯಕರನ್ನು ಹುಡುಕತೊಡಗಿದರು, ರಾಹುಲನಿಂದ ಉತ್ತರ ಪ್ರದೇಶ ಅದಾಗಲೇ ಸೋತಾಗಿತ್ತು, ಮೋದಿಯ ಮುಂದೆ ರಾಹುಲ್ ನಿಲ್ಲುವುದಿಲ್ಲ ಎಂಬುದು ಕಾಂಗ್ರೆಸ್ಸಿಗೆ ಚೆನ್ನಾಗಿ ಗೊತ್ತಿತ್ತು, ಕಾಂಗ್ರೆಸ್ಸಿನ ಹಗರಣಗಳು ಜನರನ್ನು ಕಾಂಗ್ರೆಸ್ಸಿನಿಂದ ದೂರಮಾಡುತ್ತಿದ್ದವು, ಕಾಂಗ್ರೆಸ್ ಒಬ್ಬ ಸಮರ್ಥ ನಾಯಕನಿಗೆ ಹುಡುಕುತ್ತಿತ್ತು ಆಗ ಕಂಡವರೇ ಅರವಿಂದ ಕೇಜ್ರಿವಾಲ್.

ಅರವಿಂದ ಚಾಣಾಕ್ಷ, ಬುದ್ಧಿವಂತ, ಒಳ್ಳೆಯ ಮಾತುಗಾರ, ಯುವಕರನ್ನು ಸೆಳೆಯುವ ಶಕ್ತಿ ಇದೆ, ಮೋದಿ ಬೆಂಬಲಿಗರನ್ನು ಕೂಡ. ಮತ್ತು ಭ್ರಷ್ಟಾಚಾರ ವಿರೋಧಿ ಇವೆಲ್ಲವೂ ಕಾಂಗ್ರೆಸ್ಸಿನ ವಿರುದ್ಧವೇ ಆದರೆ ಇವುಗಳೇ ಮೋದಿಯ ವೋಟುಗಳನ್ನು ಕಸಿಯುವ ಅಂಶಗಳು.

ನೀವು ನಾನು ಹೇಳಿದ್ದನ್ನು ಒಪ್ಪುವುದಿಲ್ಲ, ಆದರೆ ಅಣ್ಣಾ ಹಜಾರೆ ಸತ್ಯಾಗ್ರಹ ಮುಗಿದ ಬಳಿಕ ನಡೆದ ಬೆಳವಣಿಗೆಗಳನ್ನು ಗಮನಿಸಿ ಅಣ್ಣಾ ಟೀಂ ನಲ್ಲಿ ಭಿನ್ನಮತ ಶುರುವಾಯಿತು, ಒಂದು ಗುಂಪು ರಾಜಕೀಯಕ್ಕೆ ಸೇರಿಯೇ ಜನ ಲೋಕಪಾಲ್ ತರೋಣವೆಂದು ಹೇಳಿತು, ಅಣ್ಣಾ ವಿರೋಧದ ನಡುವೆ ಆಮ್ ಆದ್ಮಿ ಪಾರ್ಟಿ ಸ್ಥಾಪನೆಯೂ ಆಯಿತು, ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಆಮ್ ಆದ್ಮಿ ಪಾರ್ಟಿ ಅಧಿಕಾರಕ್ಕೆ ಬಂದು ಜನ ಲೋಕಪಾಲ್ ತರುವುದು ತುಂಬಾ ಕಷ್ಟದ ಕೆಲಸ.ಏಕೆಂದರೆ,ಹೊಸದಾಗಿ ಬಂದಿರುವ ಪಾರ್ಟಿಗೆ ಪೂರ್ಣ ಬಹುಮತ ಸಿಗುವುದೇ ಕಡಿಮೆ ಅದರ ಬದಲು ಅಣ್ಣಾ ಜೊತೆ ಸೇರಿ ಸರ್ಕಾರಕ್ಕೆ ಒತ್ತಡ ತರುವುದೇ ಉತ್ತಮ ಆದರೆ ಅರವಿಂದ ಕೇಜ್ರಿವಾಲ್ ತಲೆಯಲ್ಲಿ ವಿಚಾರಗಳು ಬೇರೆಯೇ ಇದ್ದವು.

ಪಾರ್ಟಿ ಸ್ಥಾಪನೆಯಾಯಿತು, ದೆಹಲಿಯಿಂದ ಸ್ಪರ್ಧಿಸುವುದು ಎಂದು ತಿರ್ಮಾನವಾಯಿತು, ಮೀಡಿಯಾ ಗಳು ಎಲ್ಲಿಲ್ಲದ ಪ್ರಚಾರವನ್ನು ಮಾಡಿದವು, ಅರವಿಂದ ಕೇಜ್ರಿವಾಲ್ ಒಬ್ಬ ಕ್ರಾಂತಿಕಾರಿಯಾಗಿ ಹೊರಹೊಮ್ಮಿದರು.ಯಾರಿಗೆ ಕಾಂಗ್ರೆಸ್ ಆಡಳಿತ ಸಾಕೆನಿಸಿತ್ತೋ ಅವರೆಲ್ಲ ಆಮ್ ಆದ್ಮಿ ಪಾರ್ಟಿ ಗೆ ಹೊರಳಿದರು. ಇದರಿಂದ ಕಾಂಗ್ರೆಸ್ ವಿರೋಧಿ ವೋಟುಗಳು ಬಿಜೆಪಿ ಮತ್ತು ಆಮ್ ಆದ್ಮಿ ಪಾರ್ಟಿಗಳ ಮಧ್ಯೆ ಹಂಚಿಕೆಯಾದವು, ಇದರಿಂದ ಸ್ವಲ್ಪ ಮತಗಳನ್ನು ಬಿಜೆಪಿ ಕಳೆದುಕೊಳ್ಳಬೇಕಾಯಿತು ಇಲ್ಲವಾದರೆ ದೆಹಲಿಯಲ್ಲಿ ಬಿಜೆಪಿ ಭಾರಿ ಅಂತರದಿಂದ ಚುನಾವಣಾ ಗೆಲ್ಲುತ್ತಿತ್ತು. ಮೋದಿಯನ್ನು ತಡೆಯಲು ಇದೇ ಕಾರ್ಯತಂತ್ರವನ್ನೇ ಆಮ್ ಆದ್ಮಿ ಪಾರ್ಟಿ ಲೋಕಸಭೆ ಚುನಾವಣೆಗೆ ಮಾಡಬೇಕೆಂದಿರುವುದು, ದೆಹಲಿಯಲ್ಲಿ ನಡೆದಿದ್ದು ಒಂದು ಪರಿಕ್ಷೆಯಷ್ಟೇ, ಅರವಿಂದ ಕೇಜ್ರಿವಾಲ್ ನನ್ನು ತಯಾರು ಮಾಡಿದ್ದೆ ಲೋಕಸಭೆ ಚುನಾವಣೆಗಾಗಿ, ಮತ ವಿಭಜನೆ ಮಾಡುವುದೇ ಇವನ ಕೆಲಸ. ಇದೇ ಕಾರಣಕ್ಕಾಗಿಯೇ ರಾಹುಲ್ ಗಾಂಧಿ ರಾಜಸ್ತಾನದಲ್ಲಿ 20 ಕ್ಕೂ ಹೆಚ್ಚು ಸಮಾವೇಶಗಳನ್ನು ಮಾಡಿದರೆ ದೆಹಲಿಯಲ್ಲಿ ಮಾಡಿದ್ದು ಬರಿ 2, ಸೋನಿಯಾ ಗಾಂಧಿ ಮಾಡಿದ್ದು ಬರಿ 1 ಸಮಾವೇಶ, ಬೇರೆ ಯಾವ ನಾಯಕನು ದೆಹಲಿಯಲ್ಲಿ ಪರಿಣಾಮಕಾರಿಯಾಗಿ ಪ್ರಚಾರ ಮಾಡಲೇ ಇಲ್ಲ. ಕಾಂಗ್ರೆಸ್ ದೆಹಲಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿತು, ಇನ್ನು ಶೀಲಾ ದೀಕ್ಷಿತ್ ಗೆ ಈರುಳ್ಳಿ ಬೆಲೆ ಏರುತ್ತಿರುವುದರ ಬಗ್ಗೆ ಚಿಂತೆಯಾಗಿತ್ತು ಈರುಳ್ಳಿ ಬೆಲೆ ಇಳಿದರೆ ಸ್ವಲ್ಪ ವೋಟು ಗಳಾದರೂ ಕಾಂಗ್ರೆಸ್ಸಿಗೆ ಬರುತ್ತವೆಂದು ಆಸೆಯಿತ್ತು, ಇದೆ ಕಾರಣಕ್ಕಾಗಿ ಈರುಳ್ಳಿ ಹೆಚ್ಚಿಗೆ ಬೇಕೆಂದು ಶೀಲಾ ಅಗ್ರಿಕಲ್ಚರ್ ಮಿನಿಸ್ಟ್ರಿ ಬಾಗಿಲು ತಟ್ಟಿದರು ಆದರೆ ಅಗ್ರಿಕಲ್ಚರ್ ಮಿನಿಸ್ಟ್ರಿ ತಿರುಗಿ ಕೂಡ ನೋಡಲಿಲ್ಲ ಕಾಂಗ್ರೆಸ್ಸೇ ಶೀಲಾ ದೀಕ್ಷಿತ್ ಗೆ ಮುಳುವಾಯಿತು.

ಇನ್ನು ದೆಹಲಿಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತಿದ್ದಕ್ಕೆ ಆಮ್ ಆದ್ಮಿ ಪಾರ್ಟಿಯೇ ಕಾರಣವೆಂದು ಪ್ರಚಾರ ಮಾಡಲಾಯಿತು, ಕೇಜ್ರಿವಾಲ್ ಒಬ್ಬ ಅದ್ಭುತ ನಾಯಕನಾಗಿ ಹೊರಹೊಮ್ಮಿದರು. ಬಿಜೆಪಿ ಮೊದಲ ಸ್ಥಾನದಲ್ಲಿದ್ದರೂ ಆಮ್ ಆದ್ಮಿ ಪಾರ್ಟಿಗೆ ಹೆಚ್ಚಿನ ಪ್ರಚಾರ ಕೊಡಲಾಯಿತು, ಬಿಜೆಪಿಯ ಹ್ಯಾಟ್ರಿಕ್ ಕೊಟ್ಟ ಮುಖ್ಯಮಂತ್ರಿಗಳನ್ನು ಸುದ್ದಿಯಿಂದ ದೂರವಿಡಲಾಯಿತು. 4 ರಾಜ್ಯಗಳಲ್ಲಿಯೂ ಮೋದಿ ಫ್ಯಾಕ್ಟರ್ ಕೆಲಸ ಮಾಡಿದ್ದರು ಅದನ್ನು ಮುಚ್ಚಿಡುವ ಪ್ರಯತ್ನ ನಡೆಯಿತು, ದೆಹಲಿ ಗೆಲುವಾದ ಬಳಿಕ ಅರವಿಂದ ಕೇಜ್ರಿವಾಲ್ ನಾವು ಲೋಕಸಭೆಗೆ ಸ್ಪರ್ಧಿಸುತ್ತೇವೆ ಗುಜರಾತಿನಲ್ಲಿಯು ಸಹ ಎಂದು ಹೇಳಿಕೆ ಕೊಟ್ಟರು

ಆಮ್ ಆದ್ಮಿ ಪಾರ್ಟಿಯಲ್ಲಿ ಎಲ್ಲ ತರದವರೂ ಇದ್ದಾರೆ.ಮುಸ್ಲಿಮರಿದ್ದಾರೆ, ಕಾಶ್ಮೀರಿ ಪ್ರತ್ಯೇಕವಾದಿಗಳು, ಕಮ್ಯುನಿಸ್ಟ್ ಬೆಂಬಲಿಗರು ಮತ್ತು ಯುವಕರ ಬೆಂಬಲ, ವೋಟು ಬ್ಯಾಂಕ್ ರಾಜಕಾರಣ ಎಲ್ಲವೂ ಇದೆ. ಇದು ಮೋದಿಯನ್ನು ತಡೆಯಲು ಮಾಡಿರುವ ಒಂದು ಪಕ್ಷ ಇದೇ ಕಾರಣಕ್ಕಾಗಿಯೇ ಗುಜರಾತ್ ಚುನಾವಣೆಗೆ ಕೆಲವು ದಿನಗಳ ಮೊದಲು ಮೋದಿ ಸರ್ಕಾರದ ಮೇಲೆ ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಭ್ರಷ್ಟಾಚಾರದ ಆರೋಪ ಮಾಡಿತು, ಈ ಪಕ್ಷ ಭ್ರಷ್ಟಾಚಾರ ವಿರೋಧಿಸುವ ಕಾಂಗ್ರೆಸ್ ಅಷ್ಟೇ.

ನಾವು ಲಾಲ್ ಬಹುದ್ದೂರ್ ಶಾಸ್ತ್ರೀ, ಸರ್ದಾರ್ ಪಟೇಲ್, ಅಟಲ್ ಬಿಹಾರಿ ವಾಜಪೇಯಿಯವರು ರಾಜಕೀಯದಲ್ಲಿ ಹೆಸರು ಮಾಡಲು ಎಷ್ಟು ಕಷ್ಟಪಟ್ಟಿದ್ದಾರೆಂದು ಕೇಳಿದ್ದೇವೆ, ಸತತ ಮೂರು ಬಾರಿ ಅಧಿಕಾರಕ್ಕೆ ಬಂದು ಉತ್ತಮ ಆಡಳಿತ ಕೊಟ್ಟ ಶಿವರಾಜ್ ಸಿಂಗ್ ಚೌಹಾಣ್, ರಮಣ ಸಿಂಗ್ ಗಿಂತ ಕೇಜ್ರಿವಾಲ್ ಬಹುಬೇಗ ಜನಪ್ರಿಯರಾದರು ಅದು ಏನು ಸಾಧಿಸದೆ.

ಮೋದಿಯನ್ನು ತಡೆಯಲು ಕಾಂಗ್ರೆಸ್ ಇಷ್ಟೆಲ್ಲ ಕಾರ್ಯತಂತ್ರ ರೂಪಿಸುತ್ತಿದೆ, ಆದರೆ ಮೋದಿ ಅಭಿಮಾನಿಗಳಿಂದ ಮೋದಿಯನ್ನು ಕಸಿಯುವುದು ಅಷ್ಟು ಸುಲಭವಲ್ಲ!!

3 ಟಿಪ್ಪಣಿಗಳು Post a comment
  1. M.A.Sriranga's avatar
    M.A.Sriranga
    ಡಿಸೆ 16 2013

    ಮೀಡಿಯಾಗಳಿಗೆ ಬ್ರೇಕಿಂಗ್ ನ್ಯೂಸ್ ಗಳಿದ್ದರೆ ಒಂದಷ್ಟು ಜಾಹೀರಾತು ಸಿಗುತ್ತದೆ. ಜತೆಗೆ T R P ಒಂದಷ್ಟು ಏರಿಕೆಯಾಗಬಹುದು. ಇದಲ್ಲದೆ ಸ್ಥಾಪಿತ ಮೌಲ್ಯಗಳನ್ನು, ಪಕ್ಷಗಳನ್ನು ಟೀಕಿಸುವುದೇ ಈಗ ಸೆಕ್ಯುಲರ್ ಎಂದು ಭಾವಿಸುವ ಒಂದಷ್ಟು ಮಂದಿಗೆ ಎ ಎ ಪಿ ಯ ಸಾಧನೆ ಖುಷಿ ಕೊಟ್ಟಿರಬಹುದು. ಹೊಸಪಕ್ಷವೊಂದು ಈಗಾಗಲೇ ಅಧಿಕಾರದಲ್ಲಿರುವ ಪಕ್ಷಗಳ ಒಂದಷ್ಟು ಓಟುಗಳನ್ನು ಕಸಿಯಬಹುದಷ್ಟೇ; ಆದರೆ ಇಡೀ ಭಾರತದ ಭೂಪಟದಲ್ಲಿ ಗುರುತಿಸಿಕೊಳ್ಳುವುದು ಸಾಧ್ಯವಾಗಲಾರದು. . ಹೆಚ್ಚೆಂದರೆ ದಿಲ್ಲಿಯಲ್ಲಿ ಒಂದು ಪ್ರಾದೇಶಿಕ ಪಕ್ಷ ಹುಟ್ಟಿದೆ ಅಂದುಕೊಳ್ಳಬಹುದು. ಕಮ್ಯುನಿಸ್ಟರು ಇಷ್ಟು ವರ್ಷಗಳಾದರೂ ಪಶ್ಚಿಮ ಬಂಗಾಳ ಮತ್ತು ಕೇರಳದ ಗಡಿ ದಾಟಲು ಆಗಲಿಲ್ಲ. ತೃಣಮೂಲ ಪಕ್ಷ ಬಂದಮೇಲೆ ಪಶ್ಚಿಮ ಬಂಗಾಳದಲ್ಲೂ ಕಮ್ಯುನಿಷ್ಟರು ನೆಲೆ ಕಳೆದುಕೊಂಡಿದ್ದಾರೆ. ಆದರೆ ಬಿ ಜೆ ಪಿ ಆಗಲಿ ಕಾಂಗ್ರೆಸ್ಸೇ ಆಗಲಿ ಮುಂದಿನ ಲೋಕಸಭೆ ಚುನಾವಣೆಗೆ ತನ್ನ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಜಾಗ್ರತೆಯಿಂದ ಇರಬೇಕು ಎಂಬ message ಎ ಎ ಪಿ ಯಿಂದ ರವಾನೆಯಾಗಿದೆ.

    ಉತ್ತರ
  2. ಪ್ರಮೋದ್'s avatar
    ಪ್ರಮೋದ್
    ಡಿಸೆ 16 2013

    ದಿಲ್ಲಿಯಲ್ಲಿ ಆಮ್ ಆದ್ಮಿ ಪಕ್ಷದ ಯಶಸ್ಸನ್ನು ಕಂಡರೆ, ಎಲ್ಲೋ ಒಂದು ಕಡೆ ಕಾಂಗ್ರೆಸ್ಸಿಗರ ಹುನ್ನಾರ ಇದರಲ್ಲಡಗಿದೆ ಎಂಬ ಸಂಶಯ. ಯಾಕೆ ಕಾಂಗ್ರೆಸ್ಸೆ ತನ್ನ ಪಕ್ಷವನ್ನು ತಾನೇ ಸೋಲಿಸಿಕೊಳ್ಳುವ ಹಾಗೂ ಆಮ್ ಆದ್ಮಿ ಪಕ್ಷವನ್ನು ಗೆಲ್ಲಿಸುವ ಮೂಲಕ, ಆಮ್ ಆದ್ಮಿ ಪಕ್ಷದ ಗೆಲುವನ್ನು ಮಾಧ್ಯಮಗಳ ಮುಖೇನ ಸಕಾರಾತ್ಮಕವಾಗಿ ಬಿಂಬಿಸಿ ಹಾಗೂ ಭಾರತೀಯ ಜನತಾ ಪಕ್ಷದ ಮತಗಳನ್ನು ದೇಶಾದ್ಯಂತ ಒಡೆದು ಹಾಕಿ ತನ್ನ ಸಾಂಪ್ರದಾಯಿಕ ಮತಗಳಿಂದಲೇ ಮತ್ತೊಮ್ಮೆ ಗೆಲ್ಲುವ ತಂತ್ರ ಕಾಂಗ್ರೆಸ್ಸಿನ್ನದ್ದಾಗಿರಬಹುದೆಂಬುದು ನನ್ನ ಅನಿಸಿಕೆ.

    ಇದೇ ತಂತ್ರವನ್ನೇ ಕಾಂಗ್ರೆಸ್ಸ್ ಆಂಧ್ರದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಿತ್ರನಟ ಚಿರಂಜೀವಿಯನ್ನು ಕಣದಲ್ಲಿಳಿಸುವ ಮೂಲಕ ಭಾರೀ ಯಶಸ್ಸನ್ನೂ ಕಂಡಿತ್ತು. ಇದು ಒಂದು ಉದಾಹರಣೆಯಾದರೆ, ಈ ರೀತಿ ರಾಜಕೀಯವಾಗಿ ಸಮಾಜವನ್ನು ಹಾಗೂ ಮತಗಳನ್ನು ಅನೇಕ ಭಾರಿ ಒಡೆದು ಈ ರೀತಿಯ ಒಡೆದು ಆಳುವ ನೀತಿಯಲ್ಲಿ ಭಾರೀ ಯಶಸ್ಸನ್ನು ಕಂಡುಕೊಂಡಿರುವ ಎಷ್ಟೋ ನಿದರ್ಶನಗಳು ಸಾಕ್ಷಿಯಾಗಿ ನಿಂತಿವೆ.

    ಉತ್ತರ
  3. SSNK's avatar
    ಡಿಸೆ 16 2013

    ರಾಜಕೀಯದಲ್ಲಿ ಎಲ್ಲ ತಂತ್ರಗಳನ್ನೂ ಉಪಯೋಗಿಸಲಾಗುತ್ತದೆ.
    ಅಲ್ಲಿ ಶಕುನಿಯೂ ಇರುತ್ತಾರೆ, ಅಮಾತ್ಯ ರಾಕ್ಷಸರೂ ಇರುತ್ತಾರೆ, ಚಾಣಕ್ಯರೂ ಇರುತ್ತಾರೆ.
    ಎಲ್ಲ ರೀತಿಯ ದಾಳಗಳನ್ನೂ ಉರುಳಿಸಲಾಗುತ್ತದೆ. ಎದುರಾಳಿಯನ್ನು ಮಣಿಸಲು ಎಲ್ಲ ರೀತಿಯ ಪ್ರಯತ್ನಗಳೂ ನಡೆಯುತ್ತವೆ.
    ಗೆಲ್ಲುವುದೊಂದೇ ಮುಖ್ಯ. ಸೋತವರು ಸೋತದ್ದಕ್ಕೆ ಕಾರಣ ಹುಡುಕುತ್ತಾರೆ, ಅಷ್ಟೇ!
    ಎಎಪಿ ಕಾಂಗ್ರೆಸ್ ಹೂಡಿರುವ ತಂತ್ರದ ಭಾಗವೇ ಇರಬಹುದು, ಅಥವಾ ಒಂದು ಪ್ರಾಮಾಣಿಕ ಪ್ರಯತ್ನವೇ ಇರಬಹುದು.
    ಭಾಜಪವು ರಾಷ್ಟ್ರಮಟ್ಟದಲ್ಲಿ ದೊಡ್ಡ ಶಕ್ತಿಯಾಗಿ ಬೆಳೆಯಬೇಕಾದರೆ, ಇದಕ್ಕೆ ಪ್ರತಿತಂತ್ರಗಳನ್ನು ಹೂಡಬೇಕು, ವಿರೋಧವನ್ನು ಮೆಟ್ಟಿನಿಲ್ಲಬೇಕು, ಪರ್ಯಾಯ ಶಕ್ತಿಯಾಗೆ ಬೆಳೆಯಬೇಕು.
    “ಮೋದಿ ಅಲೆ”ಯಿಂದ ಒಂದಷ್ಟು ಮತಗಳು ಭಾಜಪದ ತೆಕ್ಕೆಗೆ ಬೀಳುವುದು ನಿಶ್ಚಿತ. ಕಾಂಗ್ರೆಸ್^ನ ದುರಾಡಳಿತವೂ ಇದಕ್ಕೆ ಕಾರಣ. ಆದರೆ, ಭಾಜಪವು ಬಹುಮತ ಗಳಿಸಬೇಕಾದರೆ, ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶ, ಪೂರ್ವಾಂಚಲ, ತಮಿಳುನಾಡು, ಕೇರಳ, ಮುಂತಾದ ರಾಜ್ಯಗಳಲ್ಲಿ ಪಕ್ಷವನ್ನು ಬೇರುಮಟ್ಟದಿಂದ ಬೆಳೆಸಬೇಕು. ಅದನ್ನು ಮಾಡದಿದ್ದರೆ, “ಮೋದಿ ಅಲೆ”ಯಿಂದ ಬಂದ ಗೆಲುವು ಇನ್ಯಾವುದೋ ಅಲೆಯಿಂದ ಕೊಚ್ಚಿ ಹೋಗಿಬಿಡಬಹುದು!

    ಉತ್ತರ

Leave a reply to Kumar ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments