ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 17, 2013

10

ಸಲಿಂಗ ಕಾಮ ಕಾನೂನು ಬಾಹಿರ ಯಾಕೆ?

‍ನಿಲುಮೆ ಮೂಲಕ

-ಬಾಲಚಂದ್ರ ಭಟ್

Salinga Kamigaluಸಲಿಂಗ ಕಾಮದ ಬಗ್ಗೆ ಸುಪ್ರೀಮ್ ಕೋರ್ಟ್ ಕೊಟ್ಟ ಬಹಳ ಕಾರಣಗಳಿಗಾಗಿ ಹುಬ್ಬೇರಿಸುವಂತೆ ಮಾಡಿದೆ. ಬಹಳಷ್ಟು ಜನರು ತೀರ್ಪಿನ ಬೆಂಬಲಕ್ಕಿದ್ದರೆ, ಇನ್ನು ಕೆಲವರು ಇದು ಸಲಿಂಗಿಗಳ ಹಕ್ಕು ಚ್ಯುತಿ ಎಂದು ತರ್ಕಿಸುತ್ತಿದ್ದಾರೆ. ಮೂಲತಹ ಸಲಿಂಗ ಕಾಮವೆಂಬುದು ಪೌರಾತ್ಯ, ಹಾಗೂ ಅರಬ್ ದೇಶಗಳಲ್ಲಿ ನಿಷೇಧಕ್ಕೊಳಗಾಗಲು ಮುಖ್ಯ ಕಾರಣ ಅಲ್ಲಿನ ರಿಲಿಜಿಯನ್ ಸಂಸ್ಕೃತಿ. ಮುಸ್ಲೀಮ್ ಕ್ರಿಶ್ಚಿಯನ್ ಮತ್ತಿತರ ಅಬ್ರಾಹಮಿಕ್ ಧರ್ಮಗ್ರಂಥಗಳು ಸಲಿಂಗ ಕಾಮವನ್ನು ಧರ್ಮವಿರೋಧಿ ಎಂದು ಬೋಧಿಸುತ್ತವೆಯಾದ್ದರಿಂದ ಅದನ್ನು ಅಪರಾಧ ಎಂದು ಸ್ವೀಕರಿಸಲಾಗಿತ್ತು. ವೈಜ್ನಾನಿಕ ಎಂದು ಹೇಳಲ್ಪಡುವ ನಾಸ್ತಿಕರ ರಾಜಕೀಯ ಪಕ್ಷ ಕಮ್ಯುನಿಸ್ಮ್ ಕೂಡ ಸಲಿಂಗ ಕಾಮದ ಬಗೆಗೆ ಬೇರೆಯದೆ ನಿರ್ಧಾರವನ್ನು ಹೊಂದಿರಲಿಲ್ಲ. ಬದಲಾಗಿ ರಿಲಿಜಿಯನ್ ಗಳು ಕೊಟ್ಟ ತೀರ್ಪನ್ನೆ ಸಲಿಂಗಿಗಳ ಮೇಲೆ ಹೇರಿತು. ಆದರೆ ಕಾರಣದ ವ್ಯಾಖ್ಯಾನವನ್ನಷ್ಟೆ ಬದಲು ಮಾಡಿತು. ಇದು ‘ಅನಾಗರಿಕ’ ಎಂಬ ಕಾರಣಕ್ಕೆ ಸ್ಟಾಲಿನ್ ನ ರಾಜಕಾರಣದಲ್ಲಿ ಅಪರಾಧವೆಂದು ಪರಿಗಣಿಸಲಾಗಿತ್ತು. (ಅನಾಗರಿಕ ಎಂದು ತೀರ್ಮಾನಿಸುವಲ್ಲಿ ವೈಜ್ನಾನಿಕ ಧೋರಣೆಯೇ ಇಲ್ಲದಿದ್ದದ್ದು ಕಮ್ಯುನಿಸ್ಮ್ ನ ವೈಜ್ನಾನಿಕ ನಿಲುವನ್ನು ಅನುಮಾನಪಡುವಂತಾಗಿದೆ).

ಲೈಂಗಿಕ ಆಸಕ್ತಿಯ(sexual orientation) ಕುರಿತಾಗಿ ಹೇಳುವದಾದರೆ ಸಲಿಂಗಿ(homosexuals), ದ್ವಿಲಿಂಗಿ(bisexuals) ಹಾಗೂ ಭಿನ್ನ ಲಿಂಗಿಗಳೆಂಬ(heterosexuals) ಪ್ರತ್ಯೇಕತೆ ಇದೆ. ಭಿನ್ನ ಲಿಂಗಿಗಳು ನಿಸರ್ಗ ಸಹಜವಾಗಿ ತಮ್ಮ ಭಿನ್ನ ಲಿಂಗಿಗಳಲ್ಲಿ ಲೈಂಗಿಕ ಆಸಕ್ತಿಯನ್ನು ಹೊಂದಿದ್ದರೆ, ಸಲಿಂಗಿಗಳು ಸಹಲಿಂಗಿಗಳ ಜೊತೆ ಆಸಕ್ತಿಯನ್ನು ಹೊಂದಿರುತ್ತಾರೆ. ಇನ್ನು ದ್ವಿಲಿಂಗಿಗಳು ಎರಡೂ ಲಿಂಗಿಗಳಲ್ಲಿ ಲೈಂಗಿಕ ಆಸಕ್ತಿಯನ್ನು ಹೊಂದಿರುವರು. ಪ್ರಸ್ತುತ ಸಲಿಂಗಿಗಳ ಬಗ್ಗೆ ಹೇಳುವದಾದರೆ, ಸಲಿಂಗಕಾಮಕ್ಕೆ ಸ್ಪಷ್ಟವಾದ ವೈಜ್ನಾನಿಕ ಕಾರಣಗಳು ಇಂದೂ ಸಿಗುತ್ತಿಲ್ಲ. ಅದನ್ನು ಗುಣಮುಖವಾಗಿಸಲು ಸಾಧ್ಯವೂ ಆಗಿಲ್ಲ. ದೀರ್ಘ ಕಾಲದ ಸೈಕೊಥೆರಪಿಗಳ ಮೂಲಕ ಕೆಲವು ಪ್ರಯೋಗಗಳು ಸಫಲತೆಯನ್ನು ಕಂಡುಕೊಂಡಿವೆ ಎಂದು ಹೇಳಲಾಗುತ್ತವೆಯಾದರೂ  ಸಂಪೂರ್ಣವಾಗಿ ಸಾಭೀತುಪಡಿಸಲಾಗಲಿಲ್ಲ. ಇಂಗ್ಲೆಂಡ್ ನ ಸೈಕಿಯಾಟ್ರಿಸ್ಟ್ ಮೈಕೆಲ್ ಕಿಂಗ್ ಎಂಬಾತ ಇಂಗ್ಲೆಂಡ್ ನಲ್ಲಿ 1,328 ಸೈಕೊಲೊಜಿಸ್ಟ್/ಸೈಕಿಯಾಟ್ರಿಸ್ಟ್ ರನ್ನು ಸರ್ವೆ ಮಾಡಿದ್ದ. ಅವರಲ್ಲಿ ೧೭% ವೈದ್ಯರುಗಳು ಸ್ವಲ್ಪ ಮಟ್ಟಿಗೆ ಹತ್ತಿಕ್ಕಲಷ್ಟೆ ಸಾಧ್ಯವಾಗಿದೆ ಎಂದಷ್ಟೆ ಹೇಳಿಕೊಂಡಿದ್ದಾರೆ. ಜಗತ್ತಿನಾದ್ಯಂತ ಯಾವುದೇ ವೈಜ್ನಾನಿಕ ಪ್ರಯೋಗಗಳು ಸ್ಪಷ್ಟವಾಗಿ ಸಫಲತೆಯನ್ನು ಕಂಡುಕೊಂಡಿಲ್ಲ. ಎಷ್ಟೊ ಸಲ ಇಂತಹ ಪ್ರಯೋಗಗಳಿಂದ ವಿಫಲರಾಗಿ ಸಲಿಂಗಿಗಳು ಆತ್ಮಹತ್ಯೆಗೆ ಪ್ರತ್ನಿಸಿದ ಉದಾರಣೆಗಳೂ ಇವೆ. ಮುಖ್ಯವಾಗಿ ಬಹಳಷ್ಟು ಸಲಿಂಗಿಗಳು ತಮ್ಮ ಲೈಂಗಿಕ ಮನೋಭಾವವನ್ನು ಬದಲಾಯಿಸಿಕೊಳ್ಳಲು ಸಿದ್ಧರಿಲ್ಲ.

ಅಷ್ಟಕ್ಕೂ ಸಲಿಂಗರತಿ ಅನೈಸರ್ಗಿಕವಾಗಿರಬಹುದು, ಅಥವಾ ಮಾನಸಿಕ ರೋಗವೇ ಇರಬಹುದು ಅದನ್ನು ಅದು ಒಪ್ಪಿತವಾದ ಕ್ರಿಯೆಯಾಗಿದ್ದಲ್ಲಿ ಅಪರಾಧ ಎಂದು ಪರಿಗಣಿಸಲು ಯಾವ ಆಧಾರವಿದೆ? ಅವರ ಆ ಲೈಂಗಿಕ ಮನಸ್ಥಿತಿ ಅವರ ಮಟ್ಟಿಗೆ ಸಹಜವಾಗಿ ಅವರ ಹುಟ್ಟಿನಿಂದಲೇ ಬರುವಂತಹುದು. ಅದು ಅವರ ತಪ್ಪೇ? ಅವರು ತಮ್ಮ ಭಿನ್ನ ಲಿಂಗಿಗಳಲ್ಲಿ ಲೈಂಗಿಕ ಆಸಕ್ತಿಯನ್ನೇ ಕಂಡುಕೊಳ್ಳದಿದ್ದಾಗ ಅವರವರಿಗೆ ಒಪ್ಪಿತವಾಗುವ ಸಂಗಾತಿಯನ್ನು ಆಯ್ಕೆ ಮಾಡಿಕೊಂಡರೆ ಯಾರಿಗೆ ಏನು ನಷ್ಟ?ಇನ್ನು ಕೆಲವು ರಿಲಿಜಿಯನ್ ಗಳು ಧಾರ್ಮಿಕ ಹಿನ್ನೆಲೆಯಿಂದ ಸಲಿಂಗ ಕಾಮವನ್ನು ಅಪರಾಧ ಎಂದು ಶಿಕ್ಷಿಸುವದಾದರೆ ಅಂತಹ ಧರ್ಮಗಳ ನಿಲುವನ್ನು ಅಮಾನವೀಯ ಎಂದೇ ಕರೆಯಬೇಕಾಗುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ಇಂತಹ ರಿಲಿಜಿಯನ್ ಗಳು ಇನ್ನೊಂದು ಮಾನಸಿಕ ರೋಗವಾದ, ಅಮಾನವೀಯವಾಗಿ ಪ್ರಕಟಗೊಳ್ಳಬಹುದಾದ pedophilia(ಅಪ್ರಾಪ್ತ ಮಕ್ಕಳ ಮೇಲಿನ ಲೈಂಗಿಕ ಆಸಕ್ತಿ) ಅನ್ನು ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸದಿರುವದು ವಿಪರ್ಯಾಸ ಹಾಗೂ ಅಂತಹ ಧರ್ಮಗಳ ಅಮಾನವೀಯ ನಿಲುವಿಗೆ ಇನ್ನೊಂದು ನಿದರ್ಶನ. ಇದಕ್ಕೆ ಅಂತಹ ಧಾರ್ಮಿಕ ಸಂತರೂ ಹೊರತಾಗಿಲ್ಲ(ಉದಾ ಪ್ರೊಫೆಟ್ ಮೊಹಮ್ಮದರು ತಮ್ಮ ೬೦ನೆಯ ವಯಸ್ಸಿನಲ್ಲಿ ಅಪ್ರಾಪ್ತ ವಯಸ್ಸಿನ ಆಯೇಶಾರನ್ನು ಮದುವೆಯಾಗಿದ್ದನ್ನು ಸ್ಮರಿಸಿಕೊಳ್ಳಬಹುದು).

ಅದೆನೆ ಇರಲಿ ಆಶ್ಚರ್ಯವೆಂದರೆ ಕೆಲವರು ಸಲಿಂಗಕಾಮವನ್ನು ಹಿಂದೂ ಧರ್ಮ ವಿರೋಧಿ ಎಂಬಂತೆ ಚಿತ್ರಿಸುತ್ತಿದ್ದಾರೆ. ಯಾವ ಹಿಂದೂ ಶಾಸ್ತ್ರ ಇದನ್ನು ’ಪಾಪ’ ಎಂದು ಪರಿಗಣಿಸಿದೆ? ಒಂದು ವೇಳೆ ಯಾವುದೊ ಒಂದು ಧರ್ಮಗ್ರಂಥ ಹೇಳಿದ್ದರೂ ಹಿಂದೂ ಧರ್ಮದ ಸಂಪ್ರದಾಯ, ಆಚರಣೆಗಳು ಧರ್ಮಗ್ರಂಥವನ್ನು ದುರ್ಬೀನು ಹಾಕಿ ಹುಡುಕಿ ಆಚರಿಸಲ್ಪಡುತ್ತಲೂ ಇಲ್ಲ. ಅಷ್ಟಕ್ಕೂ ಎಲ್ಲ ಹಿಂದೂಗಳಿಗೂ ಏಕರೂಪವಾದ ಧರ್ಮಗ್ರಂಥವೇ ಇಲ್ಲ. ಹಾಗಿರುವಾಗ ಸಲಿಂಗ ಕಾಮವೆಂಬುದು ಹಿಂದೂ ಧರ್ಮ ವಿರೋಧಿ ಎಂದು ಬಿಂಬಿಸುವ ಅವಶ್ಯಕತೆಯಿಲ್ಲ. ಹಾಗೆಂದ ಮಾತ್ರಕ್ಕೆ ಹಿಂದೂ ಸಮಾಜ ಸಲಿಂಗಕಾಮವನ್ನು ಪುಷ್ಠಿಕರಿಸಿದೆ ಎಂದಲ್ಲ. ಬಹುಶಹ ಜಗತ್ತಿನೆಲ್ಲೆಡೆಯಲ್ಲೆಡೆಯಂತೆ ಇಲ್ಲಿಯೂ ಸಲಿಂಗಿಗಳು ತಿರಸ್ಕರಿಸಲ್ಪಡುತ್ತಿದ್ದಾರೆ. ಆದರೆ ಧಾರ್ಮಿಕ ಕಾರಣಗಳಿಂದಲ್ಲ. ಕಾರಣ, ಸಮಾಜದಲ್ಲಿ ಬಹುಸಂಖ್ಯಾತರಾಗಿರುವ ಭಿನ್ನ ಲಿಂಗಿಗಳಿಗೆ (heterosexuals) ಸಲಿಂಗ ಕಾಮವೆಂದರೆ ಸಹಜವಾಗಿಯೆ ಅಸಹ್ಯ ಹುಟ್ಟಿಸುವಂತಾದ್ದು(ಸಲಿಂಗಿಗಳಿಗೆ ಭಿನ್ನ ಲಿಂಗ ಕಾಮನೆಗಳು ಅಸಹ್ಯ ಹುಟ್ಟಿಸುವಂತೆ). ಅಲ್ಲದೆ ಕೆಲವು ಸಲಿಂಗಿಗಳು ಇತರರೊಡನೆ ಒಪ್ಪಿತವಲ್ಲದೆ ನಡೆಸುವ ಅಸಭ್ಯ ನಡುವಳಿಕೆಗಳು ಅವರನ್ನು ತಿರಸ್ಕಾರದಿಂದ ನೋಡುವಂತಾಗಿದೆ. ಹಾಗೆ ಎಷ್ಟೊ ಸಲ ಸಲಿಂಗಿಗಳು ಪಬ್ಲಿಕ್ ಗಳಲ್ಲಿ ತಮ್ಮ ನಾರ್ಮಲ್ ಜನರ ಜೊತೆ ಒಪ್ಪಿತವಿಲ್ಲದೆ ಅಸಭ್ಯ ನಡುವಳಿಕೆಯಿಂದ ಕಿರಿಕಿರಿ ಮಾಡುವದು ನಿಜ. ಅದು ಖಂಡಿತ ಭಿನ್ನಲಿಂಗಿಗಳಲ್ಲಿ ನಡೆಯುವ ಲೈಂಗಿಕ ಕಿರುಕುಳದಷ್ಟೆ(sexual harassment) ಖಂಡನಾ ಯೋಗ್ಯ. ಅದನ್ನು ಹತ್ತಿಕಲು ಇರುವ ಕಾನೂನನ್ನು ಬಳಸಿಕೊಳ್ಳಬಹುದು. ಆದರೆ ಅದನ್ನು ನಾವು ಧಾರ್ಮಿಕ ಹಿನ್ನೆಲೆಯಲ್ಲಿ ಹಿಂದೂ ಧರ್ಮ ವಿರೋಧಿ ಎಂದು ಪರಿಗಣಿಸುವದು ಪೌರಾತ್ಯ ದೇಶಗಳು ನಮ್ಮ ಮೇಲೆ ಬಿತ್ತಿದ ಅವರ ರಿಲಿಜಿಯನ್ ಗಳ ಪ್ರಭಾವವನ್ನು ಪೋಷಿಸಿದಂತೆಯೆ ಸರಿ.

ಚಿತ್ರ ಕೃಪೆ : http://www.outsidethebeltway.com

10 ಟಿಪ್ಪಣಿಗಳು Post a comment
  1. SSNK's avatar
    ಡಿಸೆ 17 2013

    ವೇದಸುಧೆ ಎನ್ನುವ ತಾಣದಲ್ಲಿ ಹರಿಹರಪುರ ಶ್ರೀಧರ್ ಅವರು, ಸಲಿಂಗ ಕಾಮಕ್ಕೆ ಸಂಬಂಧಿಸಿದಂತೆ ಹಿಂದು ಧರ್ಮದ ನಿಲುವನ್ನು ವಿವರಿಸಿದ್ದಾರೆ.
    ಆಸಕ್ತರು ಅದನ್ನು ಈ ಕೊಂಡಿಯಲ್ಲಿ ಓದಬಹುದು:
    http://blog.vedasudhe.com/2013/12/society-one-legged-dharma-part-4.html

    ಉತ್ತರ
    • Balachandra Bhat's avatar
      ಡಿಸೆ 18 2013

      ನೀವು ಹಾಕಿದ ಕೊಂಡಿಯಲ್ಲಿ ಓಪನ್ ಆಗ್ತಾ ಇಲ್ಲ

      ಉತ್ತರ
      • SSNK's avatar
        ಡಿಸೆ 19 2013

        ಅವರು, ಆ ಲೇಖನವನ್ನು ಅಲ್ಲಿಂದ ಏಕೆ ತೆಗೆದಿರುವರೋ ತಿಳಿದಿಲ್ಲ. ಆ ಲೇಖನವು ನನ್ನ ಇಮೈಲ್^ನಲ್ಲಿ ಇದೆ. ಅದನ್ನೇ ಇಲ್ಲಿ ಕೆಳಗೆ ಹಾಕುತ್ತಿರುವೆ:

        ಮೂಲ: ವೇದಸುಧೆ
        Homosexuality & Gay Marriage

        News-Report:
        In a big blow to gay rights in India, the Supreme Court upheld a law criminalizing homosexual sex on Wednesday, setting aside a landmark Delhi high court decision in 2009 which had overturned the colonial-era ban.

        Read More: http://www.livemint.com/Politics/FHDQ9yB2jRJMsOlNCQrkgL/Supreme-Court-to-rule-on-legality-of-gay-sex-today.html

        ________________________________________

        My Comments:

        The issue whether gays are born as gay or later in life circumstances turn them into gay is to be left to science. In either case, what two sane adults do in their bedroom, is none of the concern of Government or Law. Hence, the very act of criminalizing of supposed ‘unnatural sex between two consenting adults’ is wrong as long as it does not lead to some violence. There is nothing criminal about what goes between consenting adults.

        Now, sex and marriage can be treated as separate issue or also as connected issue. The Section 377 is concerned only with sexual aspect and not the aspect of marriage. Marriage is not just about Sex though Sex/physical intimacy is one of the most important tenets of marriage. As far as the matter of sex alone is concerned, I believe it should be left to individuals and state has no moral rights to interfere in it.

        Now, coming to issue of marriage of a gay couple. It is to be first understood that there is not much difference between a gay live in together couple and a gay married couple, except the latter involves more personal commitment along with legal security and social acceptance. Coming to the issue Hindu conception of Marriage, it is understood as a “Dharmic Bond” in which two are brought together for the purpose of practicing Dharmic duties together. Giving birth to children and continuing the family is one of the important duties of a married couple.So, also a series of Dharmic rituals and actions like Samskaras, Yajnas etc that has to be performed by Husband and wife. The present condition of society is such that, even Heterosexual couple practice only few religious duties. In case of a Gay couple, they cannot conceive children nor are they eligible for religious duties that has to be performed by husband and wife. Nevertheless, we can see that marriage is also based on concept of commitment, love, support and a desire to be with each other till the end. And these attitudes are present in a relationship between two men or two women even when they have not legally married. So, I feel even within Hinduism, Homosexual marriages can be allowed to happen, or at least be given a semi-marital status, where-in though they cannot conceive children or cannot perform certain rites like yajnas etc, they can at least practice Dharma like Truth, commitment, love etc. And if not Yajna, they can at least practice Japa, Puja etc. Further, some of the Dharmic tenets that are applicable to Heterosexual Married couple which cannot conceive nor adopts can also be applied to Homosexual marriages who do not go for adoption. Even if a homosexual couple adopts children, they can be treated the way heterosexual couples who adopted are treated.

        Further, as far as the issue of Legal marriage is concerned, Homosexuals can be easily be allowed to get married under special marriages act by making provision for gay/lesbian marriages. Irrespective of the fact that whether such marriages are acceptable or not acceptable to some people, whether or not such a marriage will be recognized by religious heads or by religious tenets there should be no bar on considering, homosexual marriages as legal marriages.

        ಉತ್ತರ
  2. vidya's avatar
    vidya
    ಡಿಸೆ 17 2013

    ನಿಸರ್ಗವೆ ಸಲಿಂಗಿಗಳನ್ನು ಹಾಗೆ ಹುಟ್ಟಿಸಿದೆ ಇದು ಅವರು ಬೇಕೆಂತಲೆ ಮಾಡುವ ತಪ್ಪಾ ? ಇಷ್ಟಕ್ಕೂ ಅವರು ತಮ್ಮಂತೆ ಇರುವ ವ್ಯಕ್ತಿಗಳನ್ನಾರಿಸಿಕೊಂಡು ಲೈಂಗಿಕ ವಾಂಛೆ ತೀರಿಸಿಕೊಂಡರೇನು ತಪ್ಪು? ಅವರದಲ್ಲದ ತಪ್ಪಿಗೆ ಯಾಕೆ ಶಿಕ್ಷೆ? ಆದರೆ ಸಲಿಂಗ ಕಾಮ ಒಲ್ಲದ ವ್ಯಕ್ತಿಗಳಿಗೆ ಅವರು ತೊಂದರೆ ಕೊಟ್ಟರೆ ಅವರದೂ ಅಪರಾಧವೆ. ಆಗ ಶಿಕ್ಷೆ ಕೊಡಿ. ಸಾಮಾನ್ಯವಾಗಿ ಸಮಾನ ಲಿಂಗಿಗಳು ಇದ್ದಾಗ ಒಬ್ಬರನ್ನು ಇನ್ನೊಬ್ಬರು ನಂಬುತ್ತಾರೆ. ಉದಾ ಹೆಣ್ಣು ಹೆಣ್ಣನ್ನು ಗಂಡು ಗಂಡನ್ನು ನಂಬುತ್ತಾರೆ. ಮತ್ತು ಹಾಗಿದ್ದಾಗ ಅವರು ವಿಶೇಷ ಎಚ್ಚರ ವಹಿಸುವದಿಲ್ಲ. ಇಂಥಲ್ಲಿ ಸಲಿಂಗ ಕಾಮಿಗಳಿದ್ದರೆ ತೊಂದರೆ ಅನುಭವಿಸಬೇಕಾಗುತ್ತದೆ. ಇಂಥ ಸಂದರ್ಭಗಳಲ್ಲಿ ಶಿಕ್ಷೆ ಅನಿವಾರ್ಯ.

    ಉತ್ತರ
  3. M.A.Sriranga's avatar
    M.A.Sriranga
    ಡಿಸೆ 19 2013

    ಸಲಿಂಗಕಾಮವನ್ನು ಮುಂದೆ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸುವ ಮೂಲಕ ಕಾನೂನು ಬದ್ಧ ಮಾಡಬಹುದು ಅಥವಾ ಮಾಡದೇ ಇರಬಹುದು. ಅದು ಹಿಂದುಧರ್ಮಕ್ಕೆ/ಸಂದ್ರದಾಯಕ್ಕೆ/ಆಚರಣೆಗಳಿಗೆ ಪರವೋ ವಿರೋಧವೋ ಎಂಬುದೂ ಮುಖ್ಯವಲ್ಲ. ಏಕೆಂದರೆ ಆ ಧರ್ಮ/ಆಚರಣೆ/ಸಂಪ್ರದಾಯಗಳನ್ನು ನಾವು ಆಚರಿಸಲೇಬೇಕೆಂಬ ಸಂವಿಧಾನಬದ್ಧವಾದ ಕಾನೂನು ಏನಿಲ್ಲ. ಬಹುಶಃ ಸಲಿಂಗ ಕಾಮ ಒಂದು ಮನೋದೈಹಿಕ ವ್ಯಾಧಿ/ಹೆದರಿಕೆ ಇರಬಹುದೇನೋ? ಕಾಮದ ವಿಷಯದಲ್ಲಿ ಮಾನವನೂ ಪಶು ಸಮಾನ. ಪಶುಗಳಲ್ಲಿ ಸಲಿಂಗ ಕಾಮವಿದೆಯೇ? ನಮ್ಮ ಪುರಾಣದ ಕಥೆಗಳಲ್ಲಿ/ರಾಮಾಯಣ/ಮಹಾಭಾರತದ ಕಥೆಗಳಲ್ಲಿ ಸಲಿಂಗ ಕಾಮಿಗಳ ಪ್ರಸ್ತಾಪ ಇದೆಯೇ? ಈ ಬಗ್ಗೆ ತಿಳಿಯುವ ಕುತೂಹಲವಿದೆ. ನಮ್ಮ ಭಾರತ ದೇಶದಲ್ಲಿ ನಿವಾರಣೆಗಾಗಿ ಕಾಯುತ್ತಿರುವ ನೂರಾರು ಸಮಸ್ಯೆಗಳಿವೆ. ಬಹುಶಃ ಪ್ರಕೃತಿವಿರೋಧಿಯಾದ ಸಲಿಂಗಕಾಮವನ್ನು ಕಾನೂನು ಬದ್ಧ ಮಾಡುವ ಬಗ್ಗೆ ನಡೆಯುತ್ತಿರುವ ಚರ್ಚೆಗಳು ವಿಷಾದನೀಯ ಎಂದಷ್ಟೇ ಹೇಳಬಹುದು. ಇಂದು ಮಾನವ ಹಕ್ಕುಗಳು ಎಂಬ ಅಸ್ತ್ರವನ್ನು ಉಪಯೋಗಿಸಿಕೊಂಡು ಸರ್ಕಾರದ ಮೇಲೆ ಒತ್ತಡ ಹಾಕುತ್ತಿರುವ ವಿಷಯಗಳ ಸಾಲಿಗೆ ಇದೊಂದು ಹೊಸ ಸೇರ್ಪಡೆ.

    ಉತ್ತರ
    • Balachandra Bhat's avatar
      ಡಿಸೆ 22 2013

      ಪ್ರಕೃತಿವಿರೋಧಿಯಾಗಿದ್ದರೆ, ಪ್ರಕೃತಿ ಯಾಕೆ ಅಂತವರನ್ನು ಸೃಷ್ಟಿಸುತ್ತಿತ್ತು? ಅದು ಅವರು ಬಯಸಿ ಬಂದದ್ದಲ್ಲವಲ್ಲ. ಅವರಿಗೂ ಸಹಜ ಉಳಿದವರಂತೆ ಬದುಕುವ ಹಂಬಲ ಇರಬಹುದೇನೊ, ಆದರೆ ಸಹಜ ಮನುಷ್ಯರಂತೆ ತಮ್ಮ ಭಿನ್ನ ಲಿಂಗಿಗಳಲ್ಲಿ ಲೈಂಗಿಕ ಆಸಕ್ತಿಯನ್ನು ಕಂಡುಕೊಳ್ಳಲು ಅಸಮರ್ಥರು ಅವರು. ಹಾಗಿದ್ದಾಗ ಈರ್ವರು ಸಲಿಂಗಿಗಳು ತಮಗಿಷ್ಟವಾದವರನ್ನು ಆಯ್ಕೆ ಮಾಡಿಕೊಂಡರೆ ಯಾರಿಗೆ ನಷ್ಟ?

      ಉತ್ತರ
  4. M.A.Sriranga's avatar
    M.A.Sriranga
    ಡಿಸೆ 23 2013

    ಗಂಡು ಹೆಣ್ಣು ಎಂದು ಹುಟ್ಟುವ ಮಕ್ಕಳು ನಂತರದಲ್ಲಿ ಸಲಿಂಗ ಕಾಮಿಗಳಾದರೆ ಅದು ನಂತರದ ಮನೋದೈಹಿಕ ಪರಿಸ್ಥಿತಿ ಅಲ್ಲವೇ? ಇದರಲ್ಲಿ ಪ್ರಕೃತಿಯ ಪಾತ್ರವೆಲ್ಲಿದೆ?

    ಉತ್ತರ
    • Balachandra Bhat's avatar
      ಡಿಸೆ 24 2013

      ಇಲ್ಲ ಶ್ರೀರಂಗ ಅವರೆ, ನಾನೂ ಈ ಮೊದಲು ಹಾಗೆಯೆ ತಿಳಿದಿದ್ದೆ. ಅದೊಂದು ಇತರ ಚಟಗಳಂತೆ addiction ಎಂದು. ಆದರೆ ಹಾಗಲ್ಲ, ಅವರ ಲೈಂಗಿಕ ಆಸಕ್ತಿಗಳು ಎಲ್ಲರಂತೆಯೆ ಇರುವದಿಲ್ಲ, ಅವರೆ ರೂಢಿಸಿಕೊಂಡಿದ್ದೂ ಆಗಿರುವದಿಲ್ಲ. ಅವರು ವಿಕೃತ ಕಾಮಿಗಳೂ ಅಲ್ಲ. ಅದು ಹುಟ್ಟಿನಿಂದಲೆ ಅವರಿಗೆ ತಗಲಿರುವ ವ್ಯಾಧಿ. ’ಹುಟ್ಟಿನಿಂದ’ ಎಂದರೆ, ಆ ಸ್ವಭಾವದ ಮೂಲ ಬೇರು ಹುಟ್ಟು ಎಂದರ್ಥ. ಅದು ಹಾರ್ಮೊನುಗಳ ವ್ಯತ್ಯಾಸ ಇರಬಹುದು, ಅಥವಾ ಜೀನ್ ಗಳಲ್ಲಿನ ಬದಲಾವಣೆ ಇರಬಹುದು, ವಿಜ್ನಾನ ತಕ್ಕಮಟ್ಟಿಗೆ ಕಾರಣವನ್ನು ಹುಡುಕಲು ಪ್ರಯತ್ನಿಸಿದರೂ ಸರಿಯಾದ ಕಾರಣವನ್ನು ಬೆಢಿಸಲು ಇನ್ನೂ ಸಾಧ್ಯವಾಗಿಲ್ಲ. ಈ ಬಗ್ಗೆ ಇಲ್ಲಿ ನೀವು ಓದಬಹುದು. http://news.sciencemag.org/evolution/2012/12/homosexuality-may-start-womb. ಒಟ್ಟಾರೆ ಅವರ ಆ ಮನಸ್ಥಿತಿ ಅವರ ಮನಸಿನ ಹಿಡಿತದಿಂದ ಹೊರತಾದದ್ದು ಎನ್ನಬಹುದು. ಹುಡುಗಿ ಅಪ್ಸರೆಯಂತಿದ್ದರೂ ಅವರು ಸ್ವಲ್ಪವೂ ಆಕರ್ಷಿತರಾಗರು. ಬದಲಿಗೆ ಇನ್ನೊಬ್ಬ ಹುಡುಗನನ್ನೆ ಇಷ್ಟಪಡುತ್ತಾರೆ. ಇನ್ನೊಂದರ್ಥದಲ್ಲಿ ಅವರ ದೈಹಿಕ ಗುಣಲಕ್ಷಣಗಳು ಪಕ್ಕಾ ಗಂಡಿನಂತೆಯೆ ಇದ್ದರೂ ಸೈಕೊಲೊಜಿಕಲಿ ಅವರು ಹೆಣ್ಣಾಗಿರುತ್ತಾರೆ. ಹಾಗೆಯೆ ಲೆಸ್ಬಿಯನ್ ಗಳದು ಇದಕ್ಕೆ ವಿರುದ್ಧವಾದ ಮನಸ್ಥಿತಿ. ಅವರ ದೈಹಿಕ ಗುಣಲಕ್ಷಣಗಳು ಎಲ್ಲಾ ಹೆಣ್ಣಿನಂತೆಯೆ. ಆದರೆ ಮನಸ್ಥಿತಿ ಗಂಡಿನಂತೆ. ಗಂಡು ಎಷ್ಟೆ ಸ್ಪುರದ್ರೂಪಿಯಾಗಿದ್ದರೂ ಅವರಿಗೆ ಆಕರ್ಷಣೆಯೆ ಇರದು. ಇನ್ನೊಂದು ಹೆಣ್ಣನ್ನಷ್ಟೆ ಇಷ್ಟಪಡುತ್ತಾರೆ. ನಮಗೆ, ಸಹಜ ಮನುಷ್ಯರಿಗೆ ಸಲಿಂಗ ಕಾಮ ಎಷ್ಟು ಅಸಹ್ಯ ತರಿಸುವದೊ ಅಷ್ಟೆ ಅಸಹ್ಯ ಸಲಿಂಗಿಗಳಿಗೆ ಭಿನ್ನ ಲಿಂಗಿಗಳ ಜೊತೆಗಿನ ಕಾಮ ಅಸಹ್ಯ ತರಿಸುತ್ತೆ. ಇದನ್ನು ವಾಸಿ ಮಾಡಲು ಸಾಧ್ಯವೂ ಆಗಿಲ್ಲ. ಇದೊಂದು ಅವರಿಗೆ ಶಾಪದಂತೆಯೆ. ಇದು ಅವರಿಗೂ ಬೇಕಾಗಿಲ್ಲ. ಎಷ್ಟೊ ಸಲಿಂಗಿಗಳು ಈ ಕಾರಣಕ್ಕಾಗಿ ತಮ್ಮನ್ನು ತಾವೆ ದ್ವೇಷಿಸಿಕೊಳ್ಳುವರಿದ್ದಾರೆ. ಆದರೆ ಅವರು ಅಸಹಾಯಕರು. ಸರಿಹೊಂದಲಾಗದೆ ಹತಾಶರಾಗಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದವರೂ ಇದ್ದಾರೆ. ಹಾಗೆಂದು ಪಬ್ಲಿಕ್ ಗಳಲ್ಲಿ ಸಹಜ ಜನರ ಜೊತೆ ಅವರ ಅನುಚಿತ ವರ್ತನೆಯನ್ನು(sexual advancement) ನಾನು ಸಮರ್ಥಿಸುವದಿಲ್ಲ. ಹಾಗೆ ಅನುಚಿತವಾಗಿ ವರ್ತಿಸಿದಾಗ ಅವರನ್ನು ಖಂಡಿತ mistreat ಮಾಡಲೇಬೇಕು. ಆದರೆ ಅವರವರೊಳಗೆ ತಮಗೊಪ್ಪುವ ಸಂಗಾತಿಯನ್ನು ಹುಡುಕಿಕೊಂಡರೆ ಅದನ್ನು ವಿರೋಧಿಸುವದು ಅಮಾನವೀಯವಲ್ಲವೇ? ಅವರ ಬದುಕಿನ ಇಷ್ಟಗಳಿಗೆ ಸಂಕೋಲೆ ಹಾಕಲು ನಾವ್ಯಾರು?

      ಉತ್ತರ
  5. vidya's avatar
    vidya
    ಡಿಸೆ 23 2013

    ನಮ್ಮ ಪ್ರಶ್ನೆ ಇಷ್ಪೇ ಸಲಿಂಗ ಕಾಮ ಅಪೇಕ್ಷೆ ಅವರು ತಾವೆ ಇಷ್ತಪಟ್ಟು ಮಾಡುವ ಸ್ವಯಂ ಕೃತ ಅಪರಾಧವೆ?? ನಿಮ್ಮ ಪ್ರಕಾರ ಕುರುಡ ಕಿವುಡ ಹೆಳವನಾಗಿ ಹುಟ್ಟುವದು ಅವರೆ ಬಯಸಿ ಮಾಡಿಕೊಂಡೆದ್ದೆ??

    ಉತ್ತರ
  6. M.A.Sriranga's avatar
    M.A.Sriranga
    ಡಿಸೆ 23 2013

    ಹುಟ್ಟಿನಿಂದಲೇ ಬರುವ ಕುರುಡ,ಕಿವುಡ,ಮೂಗ ಇತ್ಯಾದಿ ಅಂಗವಿಕಲತೆಗೂ ಸಲಿಂಗ ಕಾಮಕ್ಕೂ ಹೋಲಿಕೆ ಯಾವ ರೀತಿಯಲ್ಲಿ ಸಾಧ್ಯ? ಹುಟ್ಟುತ್ತಲೇ ಒಂದು ಶಿಶುವಿಗೆ ಕಾಮ ಪ್ರಜ್ಞೆ ಬರುತ್ತದೆಯೇ?

    ಉತ್ತರ

Leave a reply to Balachandra Bhat ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments