ಗಾಳಿ ಮಾತು!!!
– ಮಧು ಚಂದ್ರ, ಭದ್ರಾವತಿ
ಅರ್ಕಿಮಿಡಿಸ್, ಎಂದರೆ ತಕ್ಕ್ಷಣ ನೆನಪಿಗೆ ಬರುವುದು “ಯುರೇಕಾ, ಯುರೇಕಾ” ಎಂದು ಬಚ್ಚಲಿನಿಂದ ಬೆತ್ತಲಾಗಿ ಬೀದಿಯಲ್ಲಿ ಓಡಿದ ವ್ಯಕ್ತಿ . ವಸ್ತುವು ತನ್ನ ಗಾತ್ರದಷ್ಟೇ ನೀರನ್ನು ಸ್ಥಾನಪಲ್ಲಟಗೊಳಿಸುವುದು ಎಂದು, ಇದರಿಂದ ತನ್ನ ರಾಜನ ಚಿನ್ನದ ಕಿರೀಟದ ಸಮಸ್ಯೆಗೆ ಪರಿಹಾರ ಕಂಡು ಹಿಡಿದ ಗ್ರೀಕ್ ದೇಶದ ಗಣಿತಜ್ಞ, ತತ್ವಜ್ಞಾನಿ, ಮೇಧಾವಿ, ವಿಜ್ಞಾನಿ.
ಇಂದು ನಾನು ಹೇಳಬಯಸುವುದು ಅರ್ಕಿಮಿಡಿಸನ ದುರಂತ ಅಂತ್ಯದ ಬಗ್ಗೆ.
ರೋಮನ್ ಸೇನೆಯ ನಾಯಕನಾದ ಮರ್ಸಿಲಸ್(Marcellus) ಸ್ಯರಕಾಸ್(Syracuse) ನಗರವನ್ನು ಆಕ್ರಮಿಸಿದ. ಆಗ ಅವನು ತತ್ವಜ್ಞಾನಿ ಅರ್ಕಿಮಿಡಿಸ್ನನ್ನು ನೋಡಲು ಇಚ್ಛೆ ವ್ಯಕ್ತಪಡಿಸಿದ. ತನ್ನ ಸೇನೆಯ ಅಧಿಕಾರಿಯನ್ನು ಕರೆದು
” See if you can find archimedes for me! I should like to see him!” ಎಂದು ಹೇಳಿದ.
ನಂತರ ಅ ಅಧಿಕಾರಿ ತನ್ನ ಕೆಳಗಿನ ಅಧಿಕಾರಿಗೆ ಮರ್ಸಿಲಸ್ ಆಸೆಯನ್ನು ಹೇಳಿದ. ಕಡೆಗೆ ಅದು ಅಲ್ಲಿನ ಕಟ್ಟ ಕಡೆಯ ಸೈನಿಕನಿಗೆ ಮುಟ್ಟಿದಾಗ ಮೆರ್ಸಿಲಸ್ ನೀಡಿದ ಮಾಹಿತಿ ಮೂಲವೆ ಬದಲಾಗಿತ್ತು. ಇದು ಮೆರ್ಸಿಲಸ್ ಇಚ್ಛೆ ಬದಲಾಗಿ ಆದೇಶದ ರೂಪ ಪಡೆದಿತ್ತು.
“Find Archimededes ! the general wants him!” ಎಂದಾಗಿತ್ತು.