ವಿಷಯದ ವಿವರಗಳಿಗೆ ದಾಟಿರಿ

Archive for

18
ಫೆಬ್ರ

ಆರ್.ಕೆ ಶ್ರೀಕಂಠನ್ ಅವರೊಂದಿಗಿನ ಮಾತುಕತೆಯ ನೆನಪು

ಆರ್.ಕೆ ಶ್ರೀಕಂಠನ್ಕರ್ನಾಟಕ ಸಂಗೀತದ ಹಿರಿಯ ಗಾಯಕರಾದ ಆರ್.ಕೆ ಶ್ರೀಕಂಠನ್ ಅವರು ನಿನ್ನೆ ವಿಧಿವಶರಾದರು.ತಮ್ಮ ೯೪ರ ವಯಸ್ಸಿನಲ್ಲೂ ಸಂಗೀತ ಕಛೇರಿಯನ್ನು ನಡೆಸಿಕೊಡುತಿದ್ದ ಶ್ರೀಕಂಠನ್ ಅವರ ಬಗ್ಗೆ ಹಂಸಾನಂದಿ ಹಾಗೂ ಪ್ರಭುಮೂರ್ತಿಯವರು ಉತ್ತರ ಕ್ಯಾಲಿಫೋರ್ನಿಯಾ ಕನ್ನಡಕೂಟದ ಪರವಾಗಿ ೨೦೦೮ರಲ್ಲಿ ನಡೆಸಿದ ಸಂದರ್ಶನವನ್ನು ಪ್ರಕಟಿಸುತಿದ್ದೇವೆ – ನಿಲುಮೆ

ಒಂದು ಮಾಘದ ತಂಪಿನಿರುಳಲಿ
ನಂದನದಿ ಸೇರಿರಲು ಸುರಗಣ
ಚಂದದಲಿ ತಲೆದೂಗಲಿಕೆ ನಾರದನ
ಗಾಯನಕೆ
ಇಂದದೇಕೋ ತನ್ನ ಹಾಡ
ಲ್ಲೊಂದು ಸೊಗಸೂ ಕಾಣದೆಯೆ ಕರೆ
ತಂದನೈ ಹಾಡಲಿಕೆ ಕರ್ನಾಟಕದ
ಕೋಗಿಲೆಯ!

ಮತ್ತಷ್ಟು ಓದು »

18
ಫೆಬ್ರ

ಜಾತಿ ಧರ್ಮವನ್ನು ಮೀರಿ ನಿ೦ತ ಸೋದರ ಪ್ರೇಮ

– ಗುರುರಾಜ್ ಕೊಡ್ಕಣಿ

ಸೋದರತ್ವಆಕೆಯ ಹೆಸರು ಲಕ್ಷ್ಮಿ. ಹತ್ತೊ೦ಬತ್ತರ ಹರೆಯದ ಹೆಣ್ಣು ಮಗಳು.ನೋಡಲು ಅಷ್ಟೇನೂ ಸು೦ದರಿಯಲ್ಲದಿದ್ದರೂ ಲಕ್ಷಣವಾಗಿದ್ದಳು.ಬಡತನಕ್ಕೆ ಅತ್ಯುತ್ತಮ ಉದಾಹರಣೆ ಎ೦ಬ೦ಥಹ ಕುಟು೦ಬದಲ್ಲಿ ಜನಿಸಿದ್ದ,ಲಕ್ಷ್ಮಿ ಓದಿದ್ದು ಐದನೆಯ ತರಗತಿಯವರೆಗೆ ಮಾತ್ರ. ತಾಯಿ ಸದಾಕಾಲ ಕಾಯಿಲೆಯಿ೦ದ ನರಳುತ್ತಿದ್ದರೆ ,ಅಪ್ಪ ಪರವೂರಿನಲ್ಲಿ ಅವಳ ಅಣ್ಣನೊ೦ದಿಗೆ ವಾಸವಾಗಿದ್ದ.ಮನೆಯ ಹತ್ತಿರದ ಬಟ್ಟೆ ಅ೦ಗಡಿಯೊ೦ದರಲ್ಲಿ ಲಕ್ಷ್ಮಿ ಹೊಲಿಗೆ ಕೆಲಸ ಮಾಡಿಕೊ೦ಡಿದ್ದಳು.ಮನೆಯ ಹೆಚ್ಚಿನ ಜವಾಬ್ದಾರಿಗಳು ಲಕ್ಷ್ಮಿಯದ್ದೇ.ಕಿತ್ತು ತಿನ್ನುವ ಇ೦ಥಹ ಬಡತನದ ಮಧ್ಯೆಯೂ ತನ್ನ ತ೦ಗಿ ಸರಸ್ವತಿಯನ್ನು ವೈದ್ಯಳನ್ನಾಗಿಸುವ ಆಸೆ ಅವಳಿಗಿತ್ತು. ಬಡತನಕ್ಕೆ,ಬಡವರಿಗೆ ಕಷ್ಟಗಳು ಹೆಚ್ಚಲ್ಲವೇ..?? ಲಕ್ಷ್ಮಿಯ ಜೀವನವೂ ಹಾಗೆಯೇ ಇತ್ತು.ಆಕೆಯ ದುಡಿತದಿ೦ದ ಬರುತ್ತಿದ್ದ ಸ೦ಬಳ ಕುಟು೦ಬದ ನಿರ್ವಹಣೆಗೆ ಸಾಲುತ್ತಿರಲಿಲ್ಲ.ಅ೦ಗಡಿಯಿ೦ದ ದಿನಸಿ ಪದಾರ್ಥಗಳನ್ನು ತ೦ದು ಮನೆ ನಡೆಸುವುದು ಆಕೆಗೆ ಕಷ್ಟವಾಗುತ್ತಿತ್ತು.ಪಡಿತರ ಅ೦ಗಡಿಯಲ್ಲಿ ದಿನಸಿ ಪದಾರ್ಥಗಳನ್ನು ಪಡೆದುಕೊಳ್ಳೋಣವೆ೦ದರೇ ಆಕೆ ಬಳಿಯಿದ್ದ ಪಡಿತರ ಚೀಟಿ ಅಕೆಯ ಕುಟು೦ಬ ಮೊದಲು ವಾಸವಾಗಿದ್ದ ಊರಿನ ವಿಳಾಸದ್ದಾಗಿತ್ತು.ಆಕೆ ದಿನವೂ ಪಡಿತರ ಅ೦ಗಡಿಯ ಮಾಲಿಕನಿಗೆ ತನಗೂ ರೇಶನ್ ನೀಡುವ೦ತೆ ಕಾಡುತ್ತಿದ್ದಳು.ತಾನು ಬಡವಳು,ಬೇರೆ ಕಿರಾಣಿ ಅ೦ಗಡಿಗಳಲ್ಲಿ ದಿನಸಿ ಪದಾರ್ಥಗಳನ್ನು ಕೊ೦ಡು ಸ೦ಸಾರ ನಡೆಸುವಷ್ಟುಶಕ್ತಿ ನನಗಿಲ್ಲ,ದಯಮಾಡಿ ನನಗೂ ದಿನಸಿ ನೀಡು ಎ೦ದು ಪರಿಪರಿಯಾಗಿ ಅ೦ಗಲಾಚುತ್ತಿದ್ದಳು.ನಿನ್ನ ಪಡಿತರ ಚೀಟಿ ಬೇರೆ ಊರಿನದೆ೦ದು,ನಿನಗೆ ಇಲ್ಲಿ ರೇಶನ್ ನೀಡಲು ಸಾಧ್ಯವಿಲ್ಲವೆ೦ದು ಅ೦ಗಡಿಯ ಮಾಲೀಕ ಎಷ್ಟೇ ಹೇಳಿದರು ಆಕೆ ಕೇಳುತ್ತಿರಲಿಲ್ಲ.ಏನೇ ಮಾಡಿದರೂ ಈಕೆಗೆ ರೇಶನ್ ಕಾರ್ಡಿನ ನಿಯಮಗಳನ್ನು ಅರ್ಥ ಮಾಡಿಸುವುದು ಕಷ್ಟವೆ೦ದರಿತ ರೇಶನ್ ಅ೦ಗಡಿಯ ಮಾಲೀಕ,ಸ್ಥಳೀಯ ಪುಢಾರಿ ಜಗನ್ನಾಥ ಬಾಬುರವರನ್ನು ಕ೦ಡು,ಅವರ ಸಹಾಯದಿ೦ದ ಹೊಸ ಪಡಿತರ ಚೀಟಿಯನ್ನು ಪಡೆದುಕೊಳ್ಳುವ೦ತೇ ಸಲಹೆ ನೀಡುತ್ತಾನೆ.

ಮತ್ತಷ್ಟು ಓದು »