ಹೀಗೂ ಆಗಿರುತ್ತೆ!!!
– ಮಧು ಚಂದ್ರ , ಭದ್ರಾವತಿ
ನಮ್ಮ ದಿನನಿತ್ಯ ಜೀವನದಲ್ಲಿ ಹಲವಾರು ಸನ್ನಿವೇಶಗಳು ಬಂದು ಹೋಗಿರುತ್ತವೆ. ಅವುಗಳಲ್ಲಿ ಕೆಲವೊಂದು ಪ್ರಸಂಗಗಳು ಮುಜುಗರಕ್ಕಿಡು ಮಾಡುತ್ತವೆ. ಉದಾಹರಣೆಗೆ, ನಾವು ಪ್ರಯಾಣ ಮಾಡುವಾಗ ಅಥವಾ ಇನ್ನಾವುದೋ ಸಂಧರ್ಭದಲ್ಲಿ ಅಪರಿಚಿತರನ್ನು ಭೇಟಿ ಮಾಡುತ್ತೇವೆ. ನಾವು ಅವರ ಹೆಸರು ಕುಲ ಗೊತ್ರಗಳನ್ನೆಲ್ಲಾ ತಿಳಿದು ಕೊಂಡು ಮುಂದಿನ ಮಾತುಕತೆಗೆ ಮುನ್ನಡಿ ಬರೆಯುತ್ತೇವೆ. ಕೆಲವೊಮ್ಮೆ ಅವರ ಕಾರ್ಯಕ್ಷೇತ್ರದ ಬಗ್ಗೆ ವಿಚಾರಿಸದೆ ಅವರ ಕಾರ್ಯಕ್ಷೇತ್ರದ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡುತ್ತೇವೆ. ಆಮೇಲೆ ಅವರಾರು ಎಂದು ಅರಿತು ನಮಗೆ ಮುಜುಗರವಾಗಿ ” ಅಯ್ಯೋ ಹೀಗೆಲ್ಲ ಮಾತಾಡಬಾರದಿತ್ತು ” ಎಂದು ಅಂದುಕೊಂಡು ನಾವು ತಲೆ ಮೇಲೆ ಕೈ ಇಟ್ಟು ಕೂರುತ್ತೇವೆ. ಇದೆ ರೀತಿಯ ಒಂದು ಪ್ರಸಂಗವು ಕನ್ನಡ ಕಟ್ಟಾಳು ಅ ನ ಕೃಷ್ಣರಾಯರು ಮತ್ತು ಕನ್ನಡದ ಅಸ್ತಿ ” ಮಾಸ್ತಿ ” ಯವರು ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದಾಗ ನಡೆಯಿತು.
ಮಾಸ್ತಿ ಮತ್ತು ಅನಕೃ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದ ಸಲುವಾಗಿ ಆಂಧ್ರದ ಅದವಾನಿಗೆ ರೈಲಿನಲ್ಲಿ ಹೋಗುವರಿದ್ದರು.
ಆಗ ಅವರಿಗೆ ಮುಂಗಡವಾಗಿ ಪ್ರಯಾಣದ ಟಿಕೆಟ್ ಕಾಯ್ದಿರಿಸಲಾಗಿತ್ತು. ಅಂದು ಅವರು ಯಾವುದೂ ಕಾರಣದಿಂದ ತಮಗಾಗಿ ಕಾಯ್ದಿರಿಸಿದ ಬೋಗಿಗೆ ಹತ್ತಲಾಗಲಿಲ್ಲ. ಕಡೆಗೆ ಸಾಮಾನ್ಯ ಬೋಗಿಗೆ ಹತ್ತಿದರು. ಮೊದಲೇ ಸಾಮಾನ್ಯ ಬೋಗಿ ಅದು ತುಂಬಿ ತುಳುಕುತ್ತಿತ್ತು. ಹಾಗು ಹೀಗೂ ಮಾಡಿ ಕಡೆಗೆ ಒಬ್ಬರು ಕೂರುವ ಜಾಗದಲ್ಲಿ ಮಾಸ್ತಿ ಮತ್ತು ಅನಕೃ ಕುಳಿತು ಕೊಂಡರು. ಅವರ ಎದುರಿನ ಆಸನದಲ್ಲಿ ಒಬ್ಬ ಭಾರಿ ಅಸಾಮಿ ಇಬ್ಬರು ಕೂರುವ ಜಾಗದಲ್ಲಿ ಒಬ್ಬನೇ ಕೊತಿದ್ದನು.