ನಮ್ಮ ಮಕ್ಕಳಿಗೆ ಎಂಥ ಶಿಕ್ಷಣ ಕೊಡಬೇಕು?
ವಲವಿ, ಬಿಜಾಪೂರ
೧೯೮೩ ಅಥವಾ ೧೯೮೪ ನೇ ಇಸ್ವಿ ಇರಬಹುದೇನೋ? ಸರಿಯಾಗಿ ನೆನಪಿಲ್ಲ. ನಮ್ಮ ಶಾಲೆಯಲ್ಲಿ (ಆಗ ನಾನು ೮/೯ ತರಗತಿಯಲ್ಲಿ ಒದುತ್ತಿರಬಹುದು ) ಪೈಥಾಗೋರಸನ ಪ್ರಮೇಯವನ್ನು ನನ್ನ ಗುರುಗಳು ಹೇಳುತ್ತಾ ಈ ಸೂತ್ರವನ್ನು ಪೈಥಾಗೊರಸನಕ್ಕಿಂತಲೂ ಮೊದಲು ಹೇಳಿದವನು ಭಾಸ್ಕರಾಚಾರ್ಯ ಎಂದು ವಿವರಿಸುತ್ತಾ ಅವನ ಲೀಲಾವತಿ ಗ್ರಂಥದಲ್ಲಿ ಈ ಸಾಲುಗಳನ್ನು ಹೇಳಲಾಗಿದೆ ಎಂದು ಪೈಥಾಗೋರಸನ ಪ್ರಮೇಯದ ರೀತಿಯಲ್ಲಿ ಬಿಡಿಸಬಹುದಾದ ಒಂದು ಲೆಕ್ಕವನ್ನು ತಿಳಿಸಿದ್ದರು. ಆಗ ನಾನು, ಸರ್ ಹಾಗಿದ್ದರೆ ಅದನ್ನು ಪುಸ್ತಕದಲ್ಲೇಕೆ ಬರೆದಿಲ್ಲ?? ಎಂದು ಸಹಜವಾಗಿ ಕೇಳಿದ್ದೆ. ಆಗವರು ನಮ್ಮನ್ನು ನಾವು(ಭಾರತೀಯರನ್ನು) ಹೊಗಳಿಕೊಳ್ಳುವ ಜಾಯಮಾನ ನಮಗಿಲ್ಲ ಎಂದಿದ್ದರು. ಅವರು ವ್ಯಂಗವಾಗಿ ಇದನ್ನು ಹೇಳಿದರೋ ಸಹಜವಾಗಿ ಹೇಳಿದರೋ ನನಗಂತೂ ಅರ್ಥವಾಗಿರಲಿಲ್ಲ.
ಮುಂದೆ ನಾನು ಶಿಕ್ಷಕಿಯಾಗಿ ಗಣಿತ ವಿಷಯದ ತರಬೇತಿಗಾಗಿ ಹೋದಾಗ ಶ್ರೀಮತಿ ಮಂಜುಳಾ ಜೋಷಿ ಎನ್ನುವ ತರಬೇತುದಾರರು ಇದೇ ವಿಷಯವನ್ನು ಮತ್ತು ಭಾಸ್ಕರಾಚಾರ್ಯರ ಅವೇ ಸಾಲುಗಳನ್ನು ಪೈಥಾಗೊರಸನ ಪ್ರಮೇಯ ಕುರಿತು ಹೇಳುವಾಗ ಪುನಃ ಹೇಳಿದರು. (ಬಹುಶಃ ೨೦೦೨/೨೦೦೩ ರಲ್ಲಿ ಹೇಳಿರಬಹುದು.) ಆಗಲೂ ನಾನು ಮೇಲಿನ ಪ್ರಶ್ನೆ ಕೇಳಿದೆ. ಆಗ ಬಿಜೆಪಿ ಸರ್ಕಾರ ಪಠ್ಯ ಪುಸ್ತಕ ಬದಲಾವಣೆ ಮಾಡಲು ಹೊರಟು ಕೇಸರೀಕರಣಗೊಳಿಸುತ್ತಿದೆ ಎಂಬ ಬೊಬ್ಬೆ ಎಲ್ಲೆಡೆ ಶುರುವಾಗಿತ್ತು. ಹಾಗಾಗಿ ಶ್ರೀಮತಿ ಜೋಷಿಯವರು ನಾವು ಹಾಗೆ ಹೇಳಿಕೊಳ್ಳಲು ಬಿಡುತ್ತಿಲ್ಲ ಸರ್ಕಾರವೇನು ಮಾಡಬೇಕು? ಎಂದು ಪ್ರಶ್ನಿಸಿ ಚರ್ಚೆಯನ್ನು ಹುಟ್ಟುಹಾಕಿದ್ದರು. ಬಹುತೇಕ ಶಿಕ್ಷಕರು ನಮ್ಮ ಪೂರ್ವಿಕರ ಸಾಧನೆಗಳನ್ನು ನಮ್ಮ ಮಕ್ಕಳಿಗೆ ತಿಳಿಸುವದರಿಂದ ಅವರು ಸ್ಪೂರ್ತಿಗೊಳ್ಳುತ್ತಾರೆ ಆತ್ಮವಿಶ್ವಾಸ ಬೆಳೆಸಿಕೊಳ್ಳುತ್ತಾರೆಂದು ವಾದಿಸಿದರು. ಅಂದರೆ ತರಬೇತಿಗೆ ಹಾಜರಾಗಿದ್ದ ೧೦೦ ಶಿಕ್ಷಕರಲ್ಲಿ ಸುಮಾರು ೮೦/೯೦ ಜನ ಹೀಗೆ ವಾದಿಸಿದರೆಂದರೆ ಜನರಿಗೆ ತಮ್ಮ ಪೂರ್ವಿಕರ ಮಹತ್ವದ ಲಸ ಸಂಶೋಧನೆಗಳನ್ನು ತಮ್ಮ ಪರಂಪರೆಯನ್ನು ಮುಂದಿನ ಪೀಳಿಗೆ ತಿಳಿಯಲಿ ಎಂಬ ಆಶಯ ಇದೆ ಎಂದಾಯ್ತು. ಆದರೂ ಅಂಥ ಕೆಲಸಗಳು ನಡೆದಾಗ ಕೆಲವರು ನಿಲ್ಲಿಸಲು ಕೇಸರೀಕರಣವೆಂದು ಬೊಬ್ಬೆ ಹೊಡೆಯುತ್ತಾರೆ. ಪುರೋಹಿತಶಾಹಿಯ ಹುನ್ನಾರವೆಂದು, ಇನ್ನು ಕೆಲವರು ಬ್ರಾಹ್ಮಣಿಕೆಯ ಹೇರಿಕೆ ಎಂದೂ ಏನೇನೋ ಅಲ್ಲಸಲ್ಲದ ಅಪಪ್ರಚಾರ ಮಾಡುತ್ತಾರೆ. ಅದು ಹ್ಯಾಗೋ ಇವರ ದನಿ ಮೇಲಾಗಿ ಪಠ್ಯಪುಸ್ತಕಗಳಲ್ಲಿ ಅದೇ ಬ್ರಿಟೀಷರನ್ನು ಯುರೋಪಿಯನ್ನರನ್ನು ಹೊಗಳುವಂಥ ಪಾಠಗಳೇ ಪಠ್ಯ ಪುಸ್ತಕದಲ್ಲಿ ಬಂದು ಬಿಡುತ್ತವೆ.
ಮತ್ತಷ್ಟು ಓದು