ಹೊಸ ಶತಮಾನಕ್ಕೆ ಹೊಸ ಪರಿಭಾಷೆಗಳು-ಪುಸ್ತಕ ಪರಿಚಯ –೧
ವಿನಯಲಾಲ್ ಮತ್ತು ಅಶೀಶ್ ನಂದಿಯವರ ಸಂಪಾದಕತ್ವದಲ್ಲಿ “ಹೊಸ ಶತಮಾನಕ್ಕೆ ಹೊಸ ಪರಿಭಾಷೆಗಳು” ಎಂಬ ಪುಸ್ತಕವನ್ನು ಅಕ್ಷರ ಪ್ರಕಾಶನದವರು (ಹೆಗ್ಗೋಡು ಸಾಗರ; ಮೊದಲ ಮುದ್ರಣ ೨೦೦೭ ಮತ್ತು ಎರಡನೇ ಮುದ್ರಣ ೨೦೧೦) ಪ್ರಕಟಿಸಿದ್ದಾರೆ. ಈ ಪುಸ್ತಕದ ಬಗ್ಗೆ ಪ್ರಕಾಶಕರು ‘ಬೌದ್ಧಿಕ ಸಿದ್ಧ ಮಾದರಿಗಳ ನಿರಾಕರಣೆ’ ಎಂಬ ಶೀರ್ಷಿಕೆಯಡಿಯಲ್ಲಿ ಹೇಳಿರುವುದನ್ನು ಅವರದೇ ಮಾತುಗಳಲ್ಲಿ ಈ ರೀತಿ ಸಂಕ್ಷೇಪಿಸಿ ಹೇಳಬಹುದು.”… ಕನ್ನಡ ಅಕಾರಾದಿಯಲ್ಲಿ ಜೋಡಿಸಲ್ಪಟ್ಟಿರುವ ಈ ಪರಿಭಾಷಾ ಕೋಶದಲ್ಲಿ (ಅಂದರೆ ಪ್ರಸ್ತುತ ಪುಸ್ತಕದಲ್ಲಿ) ‘ಅರ್ಥಶಾಸ್ತ್ರ’ ದಿಂದ ‘ಬಾಲಿವುಡ್’ ನವರೆಗೆ, ‘ಇಸ್ಲಾಂ’ನಿಂದ ‘ಕೋಕಾಕೋಲಾ’ವರೆಗೆ, ‘ಮಾರ್ಕ್ಸ್ ವಾದ’ ದಿಂದ, ‘ಯಾಹೂ(yahoo)’ ,ದವರೆಗೆ ನಾನಾ ವಿಚಾರ ಕುರಿತ ಕಿರುಲೇಖನಗಳಿವೆ…ಆಧುನಿಕ ಜೀವನಕ್ರಮದಲ್ಲಿ ನಾವಿವತ್ತು ಹಲವು ಪದಗಳನ್ನೂ ಮತ್ತು ಆ ಪದಗಳೊಂದಿಗೆ ಅಂತರ್ಗತವೂ ಆಗಿರುವ ವಿಚಾರಗಳನ್ನು ‘ಸಾಮಾನ್ಯಜ್ಞಾನ’ವಾಗಿ ತುಂಬ ಸಹಜವೂ ಪರಿಚಿತವೂ ಎಂದು ಭಾವಿಸಿ ಸ್ವೀಕರಿಸಿದ್ದೇವೆ. ಉದಾಹರಣೆಗೆ ಶಿಕ್ಷಣ,ಬಡತನ,ಅಥವಾ ಅರ್ಥಶಾಸ್ತ್ರ ಮೊದಲಾದವು…ಈಗ ಈ ಪದವು ಚಾಲ್ತಿಯಲ್ಲಿ ಪಡೆದಿರುವ ಅರ್ಥವನ್ನಾಗಲೀ …ಆ ವ್ಯಾಖ್ಯಾನದ ಹಿನ್ನೆಲೆಯಲ್ಲಿರುವ ಸಿದ್ಧಾಂತವನ್ನಾಗಲಿ ಮೂಲಭೂತವಾಗಿಯೇ ಪ್ರಶ್ನಿಸುವ ಸಾಹಸಕ್ಕೆ ನಾವು ಕೈ ಹಾಕುವುದು ಅಪರೂಪ.
… ಬದಲು ಬದಲಾಗುತ್ತಲೇ ಇರುವ ಬೌದ್ಧಿಕ ಜಗತ್ತಿನೊಳಗೊಂದು ಕಿರುನೋಟವನ್ನು ಕೊಡುವ ಮೂಲಕ ಓದುಗರಿಗೆ ತುಂಬ ಪರಿಚಿತವೆಂದು ಭಾವಿತವಾದದ್ದು, ಎಷ್ಟು ಅಪರಿಚಿತವೆಂಬುದನ್ನೂ ಹಾಗೂ ಅಪರಿಚಿತವೇ ಎಷ್ಟು ಪರಿಚಿತವೆಂಬುದನ್ನೂ ಕಾಣಿಸಿ ಕೊಡುವ ಒಂದು ಪ್ರಯತ್ನ ಇಲ್ಲಿದೆ. ಅಲ್ಲದೆ ಇಲ್ಲಿ ಸಂಕಲಿತವಾಗಿರುವ ಎಲ್ಲ ಲೇಖನಗಳಲ್ಲಿ ಶೈಕ್ಷಣಿಕ ಶಿಸ್ತಿನ ಬಿಗಿಯಾದ ಜಡ ನಿರೂಪಣೆಗಿಂತ ಹಗುರವಾದ ಪ್ರಬಂಧರೂಪಿ ಲಾಲಿತ್ಯದ ಶೈಲಿ ಕಾಣಿಸಿಕೊಂಡಿರುವುದು ಕೂಡಾ ಇಂಥ ಪ್ರಯತ್ನದ ಒಂದು ಅಂಗವಾಗಿಯೇ …ಈ ಎಲ್ಲ ಲೇಖನಗಳು,ತಮ್ಮ ವಸ್ತು -ವಿನ್ಯಾಸಗಳೆರಡರಲ್ಲೂ ಪಾಶ್ಚಿಮಾತ್ಯ ರೂಢಿಯಲ್ಲಿ ಯಾವುದನ್ನು ‘ಅಕೆಡೆಮಿಕ್ ಬರಹ‘ ಎನ್ನಲಾಗುತ್ತದೆಯೋ ಅದಕ್ಕಿಂತ ಭಿನ್ನವಾದ ಹೊಸತನಕ್ಕಾಗಿ ಹವಣಿಸುತ್ತಿವೆ …”
ಇನ್ನು ನಾನು ಮಾಡಲು ಪ್ರಯತ್ನಿಸಿರುವ ಈ ಪುಸ್ತಕದ ಪರಿಚಯದ ರೀತಿಯ ಬಗ್ಗೆ ಒಂದೆರೆಡು ಮಾತುಗಳು. ‘ನಿಲುಮೆ’ಯ ಓದುಗರಲ್ಲಿ ಹಲವರು ಈಗಾಗಲೇ ಈ ಪುಸ್ತಕವನ್ನು ಓದಿರಬಹುದು ಮತ್ತು ಕೆಲವರ ಗಮನಕ್ಕೆ ಬರದೆ ಹೋಗಿರಬಹುದು. ಪ್ರಸ್ತುತ ಪುಸ್ತಕದಲ್ಲಿರುವ ಲೇಖನಗಳ ಅರ್ಥಕ್ಕೆ ಭಂಗ ಬರದಂತೆ ಅವುಗಳ ‘ಸಾರಾಂಶ’ವನ್ನು ನೀಡಲು ನಾನು ಪ್ರಯತ್ನಿಸಿದ್ದೇನೆ.ಈ ಲೇಖನಗಳಲ್ಲಿ ಆಗಾಗ ‘ನಾನು’, ‘ನಾವು’ ಎಂಬ ಪದಗಳು ಬರುತ್ತವೆ. ಅವು ಆ ಮೂಲ ಲೇಖಕರೇ ಹೊರತು ಸಾರಾಂಶ ಬರೆದಿರುವ ”ನಾನಲ್ಲ” ಎಂಬುದನ್ನು ಓದುಗರು ಗಮನಕ್ಕೆ ತರಲು ಇಚ್ಚಿಸುತ್ತೇನೆ.
ನಮ್ಮ ದೇಶದ ಕಥೆ ಇಷ್ಟೇ ಕಣರೋಪ್ಪು!!!
– ಮಧು ಚಂದ್ರ , ಭದ್ರಾವತಿ
ಅವುಲ್ ಪಕೀರ್ ಜೈನುಲಬ್ದೀನ್ ಅಬ್ದುಲ್ ಕಲಾಮ್ ಯಾರಿಗೆ ಗೊತ್ತಿಲ್ಲ ಹೇಳಿ , ನಮ್ಮ ದೇಶದ ಮಾಜಿ ರಾಷ್ಟ್ರಪತಿ ಹಾಗು ಕ್ಷಿಪಣಿ ಗಳ ಜನಕ ಎಂದೇ ಪ್ರಸಿದ್ಧರು.
ಕಲಾಂ ಅವರು ಇಸ್ರೋ ಸಂಸ್ಥೆಯ ಉಪಗ್ರಹ ಉಡಾವಣ ವಾಹನಗಳ ಯೋಜನೆಯ ಕಾರ್ಯದಲ್ಲಿ ತೊಡಗಿದ್ದಾಗ, ಅವರಿಗೆ ಬೆರಿಲಿಯಮ್ ಡಯಾ ಫಾರ್ಮ್ಗಳ ಅವಶ್ಯಕತೆ ಇತ್ತು. ಬೇರಿಲಿಂ ಡಯಾ ಫಾರ್ಮ್ಗಳನ್ನು ವಿಮಾನ, ರಾಕೆಟ್ ಹಾಗು ಕ್ಷಿಪಣಿಗಳ ಭ್ರಮಣ ದಿಕ್ಸೂಚಿಗಳಲ್ಲಿ ಬಳಸುತ್ತಾರೆ. ಭ್ರಮಣ ದಿಕ್ಸೂಚಿಗಳಿಂದ ವಿಮಾನ , ರಾಕೆಟ್ ಹಾಗು ಕ್ಷಿಪಣಿಗಳು ನೆಲದ ಮೇಲೆ ಎಷ್ಟು ಎತ್ತರದಲ್ಲಿ ಹಾರುತ್ತಿವೆ ಎಂದು ಸೂಚಿಸುತ್ತವೆ.
ಅಂದು ನಮ್ಮ ದೇಶದಲ್ಲಿ ಉತ್ಪಾದನೆ ಮಾಡಲು ಯಾವುದೇ ಉದ್ಯಮಗಳು ಇಲ್ಲದೆ ಇರುವುದರಿಂದ , ಇದನ್ನು ಅಮೇರಿಕದಿಂದ ಅಮದು ಮಾಡಿಕೊಳ್ಳುತ್ತಿದ್ದರು . ಇಸ್ರೋದಿಂದ ನಮ್ಮ ಯೋಜನೆಗೆ ನಮಗೆ ಇಷ್ಟು ಡಯಾ ಫಾರ್ಮ್ಗಳು ಬೇಕು ಎಂದು ಅಮೆರಿಕಕ್ಕೆ ಬೇಡಿಕೆ ಇಟ್ಟರು.
ಮೂರು ತಿಂಗಳ ನಂತರ ಅಮೆರಿಕವು, ಭಾರತವು ಖಂಡಾಂತರ ಕ್ಷಿಪಣಿಗಳ ಅಭಿರುದ್ದಿಯಲ್ಲಿ ಬೇರಿಲಿಂ ಡಯಾ ಫಾರ್ಮ್ಗಳನ್ನು ಬಳಸುತ್ತಾರೆ ಎಂದು ಬೇಡಿಕೆ ಪೂರೈಸಲು ನಿರಾಕರಿಸಿತು.