ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 5, 2014

1

ಗಾಳಿ ಮಾತು!!!

‍ನಿಲುಮೆ ಮೂಲಕ

– ಮಧು ಚಂದ್ರ, ಭದ್ರಾವತಿ 

Image

ಅರ್ಕಿಮಿಡಿಸ್, ಎಂದರೆ ತಕ್ಕ್ಷಣ ನೆನಪಿಗೆ ಬರುವುದು “ಯುರೇಕಾ, ಯುರೇಕಾ” ಎಂದು ಬಚ್ಚಲಿನಿಂದ ಬೆತ್ತಲಾಗಿ ಬೀದಿಯಲ್ಲಿ ಓಡಿದ ವ್ಯಕ್ತಿ . ವಸ್ತುವು ತನ್ನ ಗಾತ್ರದಷ್ಟೇ ನೀರನ್ನು ಸ್ಥಾನಪಲ್ಲಟಗೊಳಿಸುವುದು ಎಂದು, ಇದರಿಂದ ತನ್ನ ರಾಜನ ಚಿನ್ನದ ಕಿರೀಟದ ಸಮಸ್ಯೆಗೆ ಪರಿಹಾರ ಕಂಡು ಹಿಡಿದ ಗ್ರೀಕ್ ದೇಶದ ಗಣಿತಜ್ಞ, ತತ್ವಜ್ಞಾನಿ, ಮೇಧಾವಿ, ವಿಜ್ಞಾನಿ.

ಇಂದು ನಾನು ಹೇಳಬಯಸುವುದು ಅರ್ಕಿಮಿಡಿಸನ ದುರಂತ ಅಂತ್ಯದ ಬಗ್ಗೆ.

ರೋಮನ್ ಸೇನೆಯ ನಾಯಕನಾದ ಮರ್ಸಿಲಸ್(Marcellus) ಸ್ಯರಕಾಸ್(Syracuse) ನಗರವನ್ನು ಆಕ್ರಮಿಸಿದ. ಆಗ ಅವನು ತತ್ವಜ್ಞಾನಿ ಅರ್ಕಿಮಿಡಿಸ್ನನ್ನು ನೋಡಲು ಇಚ್ಛೆ ವ್ಯಕ್ತಪಡಿಸಿದ. ತನ್ನ ಸೇನೆಯ ಅಧಿಕಾರಿಯನ್ನು ಕರೆದು

” See if you can find archimedes for me! I should like to see him!” ಎಂದು ಹೇಳಿದ.

ನಂತರ ಅ ಅಧಿಕಾರಿ ತನ್ನ ಕೆಳಗಿನ ಅಧಿಕಾರಿಗೆ ಮರ್ಸಿಲಸ್ ಆಸೆಯನ್ನು ಹೇಳಿದ. ಕಡೆಗೆ ಅದು ಅಲ್ಲಿನ ಕಟ್ಟ ಕಡೆಯ ಸೈನಿಕನಿಗೆ ಮುಟ್ಟಿದಾಗ ಮೆರ್ಸಿಲಸ್ ನೀಡಿದ ಮಾಹಿತಿ ಮೂಲವೆ ಬದಲಾಗಿತ್ತು. ಇದು ಮೆರ್ಸಿಲಸ್ ಇಚ್ಛೆ ಬದಲಾಗಿ ಆದೇಶದ ರೂಪ ಪಡೆದಿತ್ತು.

“Find Archimededes ! the general wants him!” ಎಂದಾಗಿತ್ತು.

ಮಾಹಿತಿ ಪಡೆದ ಸೈನಿಕರು ಸ್ಯರಕಾಸ ನಗರದ ಮೂಲೆ ಮೂಲೆಯನ್ನು ಜಾಲಾಡಿ ಅರ್ಕಿಮಿಡಿಸ್ನನ್ನು ಪತ್ತೆ ಹಚ್ಚಿದರು. ಇಳಿ ವಯಸ್ಸಿನ ಅರ್ಕಿಮಿಡಿಸ್ಗೆ ರೋಮನರು ತನ್ನ ನಗರವನ್ನು ಆಕ್ರಮಿಸಿದ್ದಾರೆ ಎನ್ನುವ ಮಾಹಿತಿಯ ಪರಿವೆ ಇಲ್ಲದೆ ಒಂದು ಕಷ್ಟಕರವಾದ ಸಮಸ್ಯೆಯನ್ನು ಬಿಡಿಸುವುದರಲ್ಲಿ ನಿರತನಾಗಿದ್ದ.

“Come on, you!” he orders. ” The general wants you !” ಎಂದು ರೋಮನ್ ಸೈನಿಕ ಹೇಳಿದ

ನನಗೆ ಕೆಲಸವಿದೆ ಬರುವುದಕ್ಕೆ ಆಗುವುದಿಲ್ಲ ಎಂದು ಅರ್ಕಿಮಿಡಿಸ್ ಹೇಳಿದ.
ಅದಕ್ಕೆ ಮೆರ್ಸಿಲಸ್ ನ ಆದೇಶವನ್ನು ಪಾಲಿಸುವ ಸಲುವಾಗಿ ಅ ಸೈನಿಕ ಅರ್ಕಿಮಿಡಿಸ್ನನ್ನು ಗಟ್ಟಿಯಾಗಿ ಹಿಡಿದು ಎಳೆದುಕೊಂಡು ಹೋಗಲು ಅನುವಾದ. ಇಳಿ ವಯಸ್ಸಿನ ಅರ್ಕಿಮಿಡಿಸ್ ಬಿಡಿಸಿ ಕೊಳ್ಳಲು ಪ್ರಯತ್ನ ಪಟ್ಟು, ಕಡೆಗೆ ಯಶಸ್ವಿಯಾದ.
ಮೊದಲೇ ಸಿಟ್ಟಿನಿಂದ ಕೆಂಪೆರಿದ್ದ ರೋಮನ್ ಸೈನಿಕ ಹಿಂದು ಮುಂದು ನೋಡದೆ ತನ್ನ ಕತ್ತಿಯಿಂದ ಅರ್ಕಿಮಿಡಿಸ್ನನ್ನು ತರಿದ.
ಅರ್ಕಿಮಿಡಿಸನ ಪ್ರಾಣ ಪಕ್ಷಿ ಹಾರಿ ಹೋಯಿತು. ಅದ ಅಚಾತುರ್ಯ ಸರಿ ಪಡಿಸಲು ಮರ್ಸಿಲಸ್ ಅ ಸೈನಿಕನಿಗೆ ಮರಣ ದಂಡನೆ ವಿಧಿಸಿದನು.

ಮೇಲಿನ ಕತೆಯಿಂದ ಏನು ತಿಳಿದು ಬರುವ ಅಂಶ ಇಷ್ಟೇ ನಾವು ನೀಡುವ ಮಾಹಿತಿ ಕಿವಿಯಿಂದ ಕಿವಿಗೆ ರವಾನೆಯಾದಾಗ ಅದರ ಮೂಲದಲ್ಲೇ ಬದಲಾವಣೆಯಾಗುತ್ತದೆ. ಕೆಲವೊಮ್ಮೆ ತಮಾಷೆ ಎನ್ನುವ ಮಟ್ಟಿಗೆ ತಿರುವು ಪಡೆದರೆ ಕೆಲವೊಮ್ಮೆ ವಿಕೃತದ ಕಡೆಗೆ ತಿರುಚುತ್ತದೆ. ಪ್ರತಿಯೊಂದನ್ನು ಪ್ರಮಾಣಿಸಿ ನೋಡಬೇಕಾದ ಅವಶ್ಯಕತೆ ಇದೆ.

ಇದಕ್ಕೊಂದು ಪರಿಹಾರವಿಲ್ಲಿದೆ.

” ಟೆಲಿಫೋನ್ ಗೇಮ್ ” ಇದು ಅಮೇರಿಕ ದೇಶದ ಶಾಲೆಗಳಲ್ಲಿ ಆಡಿಸುವ ಮಕ್ಕಳ ಆಟ
ಮಕ್ಕಳನ್ನು ಒಂದು ವೃತ್ತಾಕಾರದಲ್ಲಿ ಕೂರಿಸುತ್ತಾರೆ. ನಂತರ ಶಿಕ್ಷಕನಾದವನು ಒಂದು ಎರಡು ಸಾಲುಗಳನ್ನು ತನಗೆ ಸಮೀಪ ಇರುವ ಮಗುವಿಗೆ ಕಿವಿಯಲ್ಲಿ ಗುಟ್ಟಾಗಿ ಹೇಳುತ್ತಾರೆ. ಅ ಮಗು ತನ್ನ ಪಕ್ಕದಲ್ಲಿ ಕುಳಿತಿರುವ ಮಗುವಿಗೆ ಗುಟ್ಟಾಗಿ ಹೇಳುತ್ತದೆ. ಹೀಗೆ ಮುಂದುವರೆದು ಒಂದು ಮಗುವಿನಿಂದ ಮತ್ತೊಂದು ಮಗುವಿಗೆ ಕತೆ ವರ್ಗಾವಣೆಯಾಗುತ್ತದೆ. ಕಟ್ಟಕಡೆಗೆ ಕುಳಿತಿರುವ ಮಗು ತಾನು ಕೇಳಿಸಿಕೊಂಡ ವಿಷಯವನ್ನು ಎಲ್ಲರಿಗು ಕೇಳುವ ಹಾಗೆ ಎದ್ದು ಜೋರಾಗಿ ಹೇಳುತ್ತದೆ.

ಆಟದ ಮೂಲ ಉದ್ದೇಶ ಕಿವಿಯಿಂದ ಕಿವಿಗೆ ಮಾತು ಹರಿದಾಗ ಮಕ್ಕಳು ಎಷ್ಟರ ಮಟ್ಟಿಗೆ ನೆನಪಿಟ್ಟುಕೊಂಡು ಕಡೆಗೆ ಮೂಲ ವಿಷಯವನ್ನು ಸಮರ್ಥವಾಗಿ ಹೇಳುತ್ತಾರೆ ಎನ್ನುವುದು.

ಇದು ನಮ್ಮ ದೇಶದ ಶಾಲೆಗಳಲ್ಲಿ ಅನುಷ್ಟಾನಕ್ಕೆ ಬಂದರೆ ಬಹಳ ಒಳಿತು. ಇದರಿಂದ ಬಾಲ್ಯದಲ್ಲಿ ಮಕ್ಕಳು ಗಾಳಿ ಮಾತಿಗೆ ಬೆಲೆ ಕೊಡದೆ ಪ್ರಮಾಣಿಸಿ ನೋಡುತ್ತಾರೆ ಯಾಕೆಂದರೆ ಜನಸಂಖ್ಯೆ ಬಹಳ ಜಾಸ್ತಿ ಅದಕ್ಕೆ ಪ್ರಿವೆಂಶನ್ ಇಸ್ ಬೆಟರ್ ದ್ಯಾನ್ ಕ್ಯೂರಿಂಗ್.

——————————————————————

ಚಿತ್ರ ಕೃಪೆ : ಅಂತರ್ಜಾಲ

Read more from ಲೇಖನಗಳು
1 ಟಿಪ್ಪಣಿ Post a comment
  1. TNBudhera's avatar
    TNBudhera
    ಫೆಬ್ರ 7 2014

    very good

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments