ನಮ್ಮ ದೇಶದ ಕಥೆ ಇಷ್ಟೇ ಕಣರೋಪ್ಪು!!!
– ಮಧು ಚಂದ್ರ , ಭದ್ರಾವತಿ
ಅವುಲ್ ಪಕೀರ್ ಜೈನುಲಬ್ದೀನ್ ಅಬ್ದುಲ್ ಕಲಾಮ್ ಯಾರಿಗೆ ಗೊತ್ತಿಲ್ಲ ಹೇಳಿ , ನಮ್ಮ ದೇಶದ ಮಾಜಿ ರಾಷ್ಟ್ರಪತಿ ಹಾಗು ಕ್ಷಿಪಣಿ ಗಳ ಜನಕ ಎಂದೇ ಪ್ರಸಿದ್ಧರು.
ಕಲಾಂ ಅವರು ಇಸ್ರೋ ಸಂಸ್ಥೆಯ ಉಪಗ್ರಹ ಉಡಾವಣ ವಾಹನಗಳ ಯೋಜನೆಯ ಕಾರ್ಯದಲ್ಲಿ ತೊಡಗಿದ್ದಾಗ, ಅವರಿಗೆ ಬೆರಿಲಿಯಮ್ ಡಯಾ ಫಾರ್ಮ್ಗಳ ಅವಶ್ಯಕತೆ ಇತ್ತು. ಬೇರಿಲಿಂ ಡಯಾ ಫಾರ್ಮ್ಗಳನ್ನು ವಿಮಾನ, ರಾಕೆಟ್ ಹಾಗು ಕ್ಷಿಪಣಿಗಳ ಭ್ರಮಣ ದಿಕ್ಸೂಚಿಗಳಲ್ಲಿ ಬಳಸುತ್ತಾರೆ. ಭ್ರಮಣ ದಿಕ್ಸೂಚಿಗಳಿಂದ ವಿಮಾನ , ರಾಕೆಟ್ ಹಾಗು ಕ್ಷಿಪಣಿಗಳು ನೆಲದ ಮೇಲೆ ಎಷ್ಟು ಎತ್ತರದಲ್ಲಿ ಹಾರುತ್ತಿವೆ ಎಂದು ಸೂಚಿಸುತ್ತವೆ.
ಅಂದು ನಮ್ಮ ದೇಶದಲ್ಲಿ ಉತ್ಪಾದನೆ ಮಾಡಲು ಯಾವುದೇ ಉದ್ಯಮಗಳು ಇಲ್ಲದೆ ಇರುವುದರಿಂದ , ಇದನ್ನು ಅಮೇರಿಕದಿಂದ ಅಮದು ಮಾಡಿಕೊಳ್ಳುತ್ತಿದ್ದರು . ಇಸ್ರೋದಿಂದ ನಮ್ಮ ಯೋಜನೆಗೆ ನಮಗೆ ಇಷ್ಟು ಡಯಾ ಫಾರ್ಮ್ಗಳು ಬೇಕು ಎಂದು ಅಮೆರಿಕಕ್ಕೆ ಬೇಡಿಕೆ ಇಟ್ಟರು.
ಮೂರು ತಿಂಗಳ ನಂತರ ಅಮೆರಿಕವು, ಭಾರತವು ಖಂಡಾಂತರ ಕ್ಷಿಪಣಿಗಳ ಅಭಿರುದ್ದಿಯಲ್ಲಿ ಬೇರಿಲಿಂ ಡಯಾ ಫಾರ್ಮ್ಗಳನ್ನು ಬಳಸುತ್ತಾರೆ ಎಂದು ಬೇಡಿಕೆ ಪೂರೈಸಲು ನಿರಾಕರಿಸಿತು.
ಬಂದ ಆಪತ್ತನ್ನು ಪರಿಹರಿಸಲು ತಕ್ಕ್ಷಣ ಒಂದು ಟಾಸ್ಕ್ ಫೂರ್ಸೆ ರಚನೆಯಾಯಿತು. ಆಗ ಬೆಳಕಿಗೆ ಬಂದ ಅಂಶ, ತುಂಬಾ ಕೌತುಕ ಹಾಗು ಆಘಾತವನ್ನು ತಂದಿತ್ತು.
ಅಮೆರಿಕಾವು ಬೆರಿಲಿಯಮ್ ಡಯಾ ಫಾರ್ಮ್ಗಗಳ ಅಭಿರುದ್ದಿಗೆ ಬೇರಿಲಿಂ ರಾಡ್ ಮತ್ತು ಶೀಟ್ ಗಳನ್ನೂ ಜಪಾನಿನಿಂದ ಅಮದು ಮಾಡಿ ಕೊಂಡಿತ್ತು . ಜಪಾನ್ ಬೇರಿಲಿಂ ರಾಡ್ ಮತ್ತು ಶೀಟ್ ಗಳನ್ನೂ ತಯಾರಿಸಲು , ಭಾರತದಿಂದ ಬೇರಿಲಿಂ ಅದಿರನ್ನು ಅಮದು ಮಾಡಿಕೊಂಡಿತ್ತು. ಕೊನೆಗೆ, ನಮ್ಮ ದೇಶ ಬೇರಿಲಿಂ ಅದಿರು ರಫ್ತಿಗೆ ನಿಷೇಧ ಹೇರಿತು.
ನಮ್ಮ ಮನೆ ವಸ್ತುನ ನಮಗೆ ಮಾರೋಕೆ ಇಷ್ಟು ನಕಾರ ಮಾಡು ಅಮೆರಿಕಕ್ಕೆ ಬುದ್ದಿ ಕಲಿಸಿ, ನಾವು ಕಲಿತು , ತಾನೆ ಅಭಿರುದ್ದಿ ಪಡಿಸುವಲ್ಲಿ ಯೋಜನೆ ರೋಪಿಸಿತು.
ಇದೆಲ್ಲ ನೋಡಿದ್ರೆ ನಮ್ಮ ದೇಶದ ಕಥೆ ಇಷ್ಟೇ ಕಣರೋಪ್ಪು ಅಂತ ಸಂದೇಹವಿಲ್ಲದೇ ಹೇಳಬಹುದು.
ಚಿತ್ರ ಕೃಪೆ : ಅಂತರ್ಜಾಲ




