ಬಯಲಾಗುತ್ತಿರುವ ಬುದ್ಧಿಜೀವಿಗಳ ಮನೋಲೋಕ..!
-ರಮಾನಂದ ಐನಕೈ
ಪ್ರಭುತ್ವವನ್ನು ಓಲೈಸಿಕೊಳ್ಳದಿದ್ದರೆ ಸಾಹಿತಿಗಳಿಗೂ ಉಳಿಗಾಲವಿಲ್ಲದ ಪರಿಸ್ಥಿತಿ ನಿರ್ಮಿಸಿಕೊಂಡಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳ, ಅಕಾಡೆಮಿಗಳ ಪ್ರಶಸ್ತಿಗಳು, ಅನುದಾನಗಳು, ಫೆಲೋಶಿಫ್ಗಳು, ವಿಶ್ವವಿದ್ಯಾಲಯಗಳ ಕುಲಪತಿತ್ವ ಮತ್ತು ವಿವಿಧ ಕಲಾಸಾಹಿತ್ಯ ಸಂಸ್ಥೆಗಳ ಹುದ್ದೆಗಳನ್ನು ಪಡೆಯಬೇಕಾದರೆ ದೊರೆಗಳ ಹಿಂದೆ ಬಹುಪರಾಕ್ ಹಾಕುತ್ತ ಓಡಾಡಬೇಕಾಗುತ್ತದೆ. ಅಂತೆಯೇ ರಾಜಕೀಯದವರಿಗೂ ಕೂಡ ಸಾಹಿತಿಗಳನ್ನು ಮತ್ತು ಕಲಾವಿದರನ್ನು ಹತ್ತಿಕ್ಕಿ ಮುನ್ನಡೆಯಲು ಸಾಧ್ಯವಿಲ್ಲ. ಏಕೆಂದರೆ ಕನ್ನಡ ನಾಡಿನ ಸಾಂಸ್ಕೃತಿಕ ಶರೀರವನ್ನು ಎತ್ತಿ ತೋರಿಸಿ ಇಲ್ಲೊಂದು ಭೌತಿಕ ಪ್ರಭುತ್ವಕ್ಕೆ ಅನುವು ಮಾಡಿಕೊಡುವಲ್ಲಿ ಸಾಹಿತಿಗಳ ಪಾತ್ರ ಹಿರಿದಾಗಿದೆ. ಜೊತೆಗೆ ಸಾಹಿತಿಗಳು ಭಾಷೆಯನ್ನು ಬೆಳೆಸುವವರು ಮತ್ತು ಉಳಿಸುವವರು ಎಂಬ ಸಾಮಾನ್ಯ ನಂಬಿಕೆ. ಹಾಗಂತ ಈ ನಂಬಿಕೆಯ ಹಿಂದಿನ ಸತ್ಯಾಸತ್ಯತೆಯನ್ನೂ ಯಾರೂ ಒರೆಗೆ ಹಚ್ಚಿಲ್ಲ ಆ ಪ್ರಶ್ನೆ ಬೇರೆ. ಹಾಗಾಗಿ ಕಳ್ಳರು ದೇವರನ್ನು ಬಳಸಿಕೊಂಡಂತೆ ರಾಜಕಾರಣಿಗಳು ಸಾಹಿತಿಗಳನ್ನು ಕಾಲಕ್ಕೆ ತಕ್ಕುನಾಗಿ ಉಪಯೋಗಿಸಿಕೊಳ್ಳುತ್ತಾರೆ. ಸಾಹಿತಿಗಳು ಚುನಾವಣೆಗಳಲ್ಲಿ ಭಾಗಿಯಾಗಬಾರದೆ? ಅವರಿಗೂ ವಾಕ್ ಸ್ವಾತಂತ್ರ್ಯವಿಲ್ಲವೆ? ಎಂಬಿತ್ಯಾದಿ ಹತ್ತಾರು ಪ್ರಶ್ನೆಗಳು ಕನ್ನಡದ ಸಾರಸ್ವತ ಲೋಕವನ್ನು ಆವರಿಸಿಕೊಂಡಿದೆ. ಆದರೆ ಈ ಪ್ರಶ್ನೆಗಳಿಗೆ ಉತ್ತರಿಸುವುದು ತಿಳಿದುಕೊಂಡಷ್ಟು ಸುಲಭವಾಗಿಲ್ಲ.
ಕರ್ನಾಟಕದಲ್ಲಿ ಪಕ್ಷಗಳ ಪರವಾಗಿ ಸಾಹಿತಿಗಳು ಅಖಾಡಕ್ಕೆ ಇಳಿದಿದ್ದಾರೆ. ಮೊದಲು ಪ್ರಾರಂಭಿಸಿದವರು ಕಾಂಗ್ರೇಸ್ ಪರವಾದ ಸಾಹಿತಿಗಳು. ಅದಕ್ಕೆ ವಿರೋಧವಾಗಿ ಪ್ರತಿಕ್ರಿಯಿಸಿದ ಒಂದಿಷ್ಟು ಸಾಹಿತಿಗಳಿಗೆ ಬಿ.ಜೆ.ಪಿ.ಪಟ್ಟ ಕಟ್ಟಲಾಯಿತು. ಇಲ್ಲಿ ಯಾರು ಯಾರನ್ನು ಸಮರ್ಥಿಸಿದರು ಎಂಬುದು ವಾದಕಾರಣವಲ್ಲ. ಕೆಲವು ಸಾಹಿತಿಗಳು ಪಕ್ಷರಾಜಕಾರಣವನ್ನು ಆತುಕೊಂಡು ತಮ್ಮ ಅಪಕ್ವ ನಿಲುವುಗಳನ್ನು ಹೊರಗೆಡಹಿದ ರೀತಿ ಮಾತ್ರ ತೀರಾ ಹಾಸ್ಯಾಸ್ಪದವಾಗಿದೆ. ಅಹಿಂದ್ ವಿದ್ಯಾರ್ಥಿಗಳಿಗೆ ಮಾತ್ರ ಪ್ರವಾಸ, ಭಾರತೀಯ ಸಂಪ್ರದಾಯಗಳೆಲ್ಲ ಮೂಢನಂಬಿಕೆಗಳಾದ್ದರಿಂದ ನಿಷೇಧಿಸಬೇಕು, ಮದುವೆಯಾದ ಮುಸ್ಲಿಮ ಮಹಿಳೆಯರಿಗೆ ಮಾತ್ರ ಮಂಚ ಮುಂತಾದ ಸರ್ಕಾರಿ ಘೋಷಣೆಗಳಿಗೆಲ್ಲ ತುಟಿ ಪಿಟಕ್ಕೆನ್ನದೆ ಕುಳಿತ ಸಮನ್ವಯವಾದಿಗಳು ಈ ಚುನಾವಣಾ ಪ್ರಕರಣದ ಮೂಲಕ ತಾವು ನಿರ್ದಿಷ್ಟ ಪಕ್ಷದ ಮುಖವಾಣಿಗಳು ಎಂಬುದನ್ನು ಸಾಬೀತು ಮಾಡಿದರು.
ಒಕ್ಕೂಟ ವ್ಯವಸ್ಥೆಯಲ್ಲಿ ಆಯಾ ರಾಜ್ಯಕ್ಕೆ ತನ್ನದೇ ಆದ ಅಸ್ತಿತ್ವವಿದೆ. ಆದರೆ ಬಿ.ಜೆ.ಪಿ ಇಲ್ಲಿ ಏಕಸಂಸ್ಕೃತಿ ಸ್ಥಾಪಿಸಲು ಹೊರಟಿದೆಯೆಂಬುದು ಒಬ್ಬ ಸಾಹಿತಿಯ ಆರೋಪ. ಏಕಸಂಸ್ಕೃತಿ ಎಂಬುದು ಅವರಿಗೇ ಅರ್ಥವಾಗಿಲ್ಲ. ಕಾಂಗ್ರೇಸ್ ಎಂಬ ಸವಕಲು ಸೆಕ್ಯುಲಾರಿಸಮಿನ ಗುಡಾಣವನ್ನು ಸಮರ್ಥಿಸುವ ಇವರಿಗೆ ಬಹುಸಂಸ್ಕೃತಿಯಲ್ಲಿ ಸೆಕ್ಯುಲಾರಿಸಂ ಅನ್ಯಾಯಕ್ಕೆ ನಾಂದಿಹಾಡುತ್ತದೆ ಎಂಬ ಸರಳಸತ್ಯ ಇನ್ನೂ ಅರಿವಿಗೆ ಬಂದಿಲ್ಲವೆ? ಒಂದು ದೇಶದಲ್ಲಿ ಹಲವಾರು ರಿಲಿಜನ್ನುಗಳು ಇದ್ದಾಗ ಸೆಕ್ಯುಲಾರಿಸಮಿಗೆ ಅರ್ಥ ಬರುತ್ತದೆ. ಬಹುಸಂಸ್ಕೃತಿಯಲ್ಲಿ ಸೆಕ್ಯುಲಾರಿಸಂ ತುರುಕಿದರೆ ತಲೆನೋವಿಗೆ ಹೊಟ್ಟೆನೋವಿನ ಚಿಕಿತ್ಸೆ ನೀಡಿದಂತಾಗುತ್ತದೆ. ಕಾಲಾಂತರದಲ್ಲಿ ಕ್ಯಾನ್ಸರಿಗೆ ಪರಿವರ್ತಿತವಾಗುವ ಸಾಧ್ಯತೆಯಿರುತ್ತದೆ. ಏಕಸಂಸ್ಕೃತಿ ಎಂಬುದರ ಹಿಂದೆ ‘ವೈದಿಕಶಾಹಿ’ ‘ಬ್ರಾಹ್ಮಣ’ ಇತ್ಯಾದಿ ಅಪಕ್ವ ತಿಳುವಳಿಕೆಯನ್ನು ತುಂಬಿಕೊಂಡಿದ್ದಾರೆ. ಈ ತಿಳುವಳಿಕೆಯ ಸತ್ಯಾಸತ್ಯತೆಯನ್ನು ಶೋಧಿಸಿಕೊಳ್ಳದಿದ್ದಲ್ಲಿ ನಮ್ಮ ಸಾಹಿತಿಗಳು ಮತ್ತು ಚಿಂತಕರು ಖಂಡಿತಾ ತಮ್ಮ ಚಿಪ್ಪಿನಿಂದ ಹೊರಬರಲು ಸಾಧ್ಯವಿಲ್ಲ ಹಾಗೂ ಇಂಥವರಿಂದ ಸಮಾಜಕ್ಕೆ ಕಿಂಚಿತ್ತೂ ಪ್ರಯೋಜನವಿಲ್ಲ.
ಬಿ.ಜೆ.ಪಿ ಏಕವ್ಯಕ್ತಿ ಮತ್ತು ಸರ್ವಾಧಿಕಾರ ಧೋರಣೆ ಸ್ಥಾಪಿಸಲು ಹೊರಟಿದೆ. ಮೋದಿ ಹೆಸರಿನಲ್ಲಿ ವೋಟು ಕೇಳುವುದು ಸಂವಿಧಾನ ವಿರೋಧಿ ಕೆಲಸವೆಂದು ಸಾಹಿತಿಗಳೊಬ್ಬರು ಹೇಳಿದ್ದಾರೆ. ನೆಹರೂ, ಇಂದಿರಾ, ರಾಜೀವ್, ಸೋನಿಯಾಗಾಂದಿ ಹೆಸರಿನಲ್ಲಿ ವೋಟುಕೇಳುವಾಗ ಈ ಸಾಹಿತಿ ನಿದ್ದೆ ಮಾಡಿದ್ದರೆ? ಹಿಂದೆ ಕಾಂಗ್ರೇಸ್ ಮುಖಂಡ ಡಿ.ಕೆ.ಬರೋವಾ ಇಂದಿರಾ ಎಂದರೆ ಇಂಡಿಯಾ-ಇಂಡಿಯಾ ಅಂದರೆ ಇಂದಿರಾ ಎಂದು ಹೊಗಳುವಾಗ ಈ ಬುದ್ಧಿಜೀವಿಗಳೆಲ್ಲ ಬಾಯಿಗೆ ಬೀಗ ಹಾಕಿಕೊಂಡಿದ್ದರೆ? ಒಬ್ಬ ವ್ಯಕ್ತಿಯಾಗಿ ಪಕ್ಷದ ಪ್ರಚಾರ ಮಾಡುವುದಕ್ಕೂ ಒಬ್ಬ ಸಾಹಿತಿ, ಬುದ್ಧಿಜೀವಿಯಾಗಿ ಪಕ್ಷದ ಪರ ಮಾತನಾಡುವುದಕ್ಕೂ ತುಂಬಾ ವ್ಯತ್ಯಾಸವಿದೆ. ಹಾಸ್ಯವೆಂದರೆ ಅನೇಕ ಚಿಂತಕರು ಪಕ್ಷದ ಪ್ರಣಾಳಿಕೆಯ ಪ್ರಚಾಕರಾಗಿ ಕೆಲಸ ಮಾಡುತ್ತಿದ್ದಾರೆ. ಇದು ಸಾಹಿತ್ಯಾಸಕ್ತರಿಗೆ ತಲೆಕೆಡಲು ಕಾರಣವಾಗಿದೆ. ಪ್ರಜಾಪ್ರಭುತ್ವದಲಿ ಪರಸ್ಪರ ವಿರೋಧಿಸಿಕೊಳ್ಳುವುದೇ ರಾಜಕಾರಣಿಗಳ ಅಸ್ತಿತ್ವ. ಹಾಗಂತ ರಾಜಕೀಯ ಅಜಂಡಾಗಳನ್ನು ಜೋತು ಸಾಹಿತಿಗಳು ವಿರೋಧಿಸುವಾಗ ವಿವೇಕ ಬೇಕಾಗುತ್ತದೆ.
ಮೋದಿ ಕೇವಲ ಸುಳ್ಳುಹೇಳಿಕೊಂಡು ಪ್ರಚಾರ ಪಡೆಯುತ್ತಿದ್ದಾರೆ ಆದ್ದರಿಂದ ನಾವು ಕಾಂಗ್ರೇಸ್ ಬೆಂಬಲಿಸುತ್ತೇವೆ ಎಂದು ದೇಶಾಂತರದ ಮಾತನಾಡುವ ಅನಂತಮೂರ್ತಿ ಹೇಳಿದ್ದಾರೆ. ಅಂದರೆ ಇವರ ಪ್ರಕಾರ ಕಾಂಗ್ರೇಸ್ ಸತ್ಯಹೇಳುತ್ತಿದೆ ಎಂದಾಯಿತು. ಎಂಥಾ ದಡ್ಡತನದ ಅಭಿಪ್ರಾಯ! ಮೋದಿ ಮಾನಸಿಕವಾಗಿ ಭ್ರಷ್ಟರಾಗಿದ್ದಾರೆ ಎಂದಿದ್ದಾರೆ. ಈ ಮಾತಿಗೆ ಅರ್ಥವಿದೆಯಾ? ಪ್ರಭುತ್ವದಿಂದ ಈಗಾಗಲೇ ಸಾಕಷ್ಟು ಪ್ರಯೋಜನ ಪಡೆದಿದ್ದು ಮುಂದೆಯೂ ಪಡೆಯುವ ಭರವಸೆ ಹೊಂದಿದವರಿಗೆ ಮಾತ್ರ ಈ ರೀತಿ ಹಲುಬಲು ಸಾಧ್ಯ. ಇಂಥವರು ಕಾಂಗ್ರೇಸ್ ಸತ್ಯವನ್ನೇ ಹೇಳುತ್ತಿದೆಯೆಂದು ಜನರೆದುರು ಸುಳ್ಳು ಹೇಳಿಕೊಂಡು ತಿರುಗುತ್ತಾರೆ. ಇದು ನಿಜವಾದ ಮಾನಸಿಕ ಭ್ರಷ್ಟತೆ. ಅನಂತಮೂರ್ತಿಗೆ ಇದು ಬೇಕಿತ್ತಾ? ಆದ್ದರಿಂದ ಅನಂತಮೂರ್ತಿಯವರ ಮಾತನ್ನು ಅವರೊಬ್ಬ ಕಾಂಗ್ರೇಸ್ ಪಕ್ಷದ ಕಾರ್ಯಕರ್ತ ಎಂದು ಸ್ವೀಕರಿಸಬೇಕೇ ವಿನಃ ನಾಡಿನ ಬುದ್ಧಿಜೀವಿ ಎಂದು ಗೃಹಿಸಿದಲ್ಲಿ ಚಿಂತನಾ ಪ್ರಪಂಚಕ್ಕೆ ಅವಮಾನ ಮಾಡಿದಂತಾಗುತ್ತದೆ.
ಕತೆಕಾದಂಬರಿಗಳನ್ನು ಬರೆದಾಕ್ಷಣ ಸಮಾಜದ ಬಗ್ಗೆ ಹೇಳುವ ಎಲ್ಲಾ ಅರ್ಹತೆಯೂ ಬಂದುಬಿಡುತ್ತದೆಯಾ? ಸಾಹಿತಿಗಳು, ಇತಿಹಾಸಕಾರರು ಪಕ್ಷಗಳಿಗೆ ಅಂಟಿಕೊಂಡಲ್ಲಿ ಆಯಾ ಪಕ್ಷಗಳಿಗೆ ಬೇಕಾದ ಸಮಾಜವಿಜ್ಞಾನ ಮತ್ತು ಇತಿಹಾಸ ಸೃಷ್ಟಿಯಾಗುವ ಅಪಾಯ ಎದುರಾಗುತ್ತದೆ. ಇದರಿಂದ ದೇಶದಲ್ಲಿ ನ್ಯಾಯನೀತಿ ಸಮಾನತೆ ಸಾಧಿಸಲು ಖಂಡಿತಾ ಸಾಧ್ಯವಿಲ್ಲ. ಕತೆಕವನಗಳನ್ನು ಬರೆಯಲು ಸಮಾಜದ ಬಗ್ಗೆ ಓದಿಕೊಂಡಿರಲೇ ಬೇಕೆಂದೇನಿಲ್ಲ. ಸಾಮಾನ್ಯ ಅನುಭದ ನೆಲೆಯಲ್ಲೂ ಈ ಕಸುಬು ಮಾಡಬಹುದು. ಒಂದೊಮ್ಮೆ ಓದಿಕೊಂಡಿದ್ದರೆ ಅವು ಈಗಾಗಲೇ ಭಾರತೀಯ ಸಮಾಜದ ಬಗ್ಗೆ ಪಾಶ್ಚಾತ್ಯರು ಭಟ್ಟಿಇಳಿಸಿಟ್ಟ ವಿಚಾರಗಳು. ಈ ವಿಚಾರಗಳನ್ನು ಪುನರ್ ಪರಿಶೀಲಿಸುವ ಸಾಹಸವನ್ನು ಎಷ್ಟುಜನ ಮಾಡಿದ್ದಾರೆ? ಕೇವಲ ಬೆರಳೆಣಿಕೆಯಷ್ಟು ಮಾತ್ರ. ಇಂಥ ಅಪಕ್ವ ವಿಚಾರಗಳ ಮೇಲೇ ಪ್ರಭುತ್ವ ಕಲ್ಯಾಣದ ಕಲ್ಪನೆ ಕಟ್ಟಿಕೊಂಡಿರುವಾಗ ಈ ವಿಚಾರಕ್ಕೆ ಜನಪ್ರೀಯ ಅರ್ಥಗಳನ್ನು ನೀಡಿ ವಿಶ್ಲೇಷಿಸಲು ಸಾಹಿತಿಗಳು ಬೇಕಾಗುತ್ತಾರೆ. ಹಾಗಾಗಿ ಸಾಹಿತಿಗಳು ಅಘೋಷಿತ ಸಮಾಜವಿಜ್ಞಾನಿಗಳಾಗಿ ಬಿಡುತ್ತಾರೆ. ಜ್ಞಾನ ಇದ್ದವರೂ ಬರೆಯಬಹುದು ಇಲ್ಲದವರೂ ಬರೆಯಬಹುದು. ಆದ್ದರಿಂದ ಸಮಾಜದ ಬಗ್ಗೆ ಬರೆಯುವುದರಿಂದ ಸಮಾಜದ ಜ್ಞಾನ ಬರುತ್ತದೆ, ಅವರು ಸಮಾಜ ವಿಜ್ಞಾನಿಗಳು ಎಂಬುದು ತರ್ಕವಾಗಲಾರದು. ಜ್ಞಾನಪೀಠ ಕೊಟ್ಟಾಕ್ಷಣ ಅವರಿಗೆ ಮಾತ್ರ ಜ್ಞಾನವಿದೆ ಉಳಿದವರಿಗಿಲ್ಲ ಎಂತಾಗುವುದಿಲ್ಲ. ಪಕ್ಷಾತೀತವಾಗಿ ದೇಶದ ಹಿತದ ಬಗ್ಗೆ ಚಿಂತನೆ ಮಾಡುವವರು ಮಾತ್ರ ನಿಜವಾದ ಸಾಹಿತಿಗಳು ಅಥವಾ ಬುದ್ಧಿಜೀವಿಗಳು ಎನಿಸಿಕೊಳ್ಳುತ್ತಾರೆ.
ಸಾಹಿತಿಗಳೂ ಕೂಡ ಗೋದ್ರಾ ಪ್ರಕರಣವನ್ನು ಉಲ್ಲೇಖಿಸಿ ನರಮೇಧ, ಕೋಮುವಾದ ಎಂದು ತುತ್ತೂರಿ ಊದುತ್ತಿದ್ದಾರೆ. ಆ ಪ್ರಕರಣದ ಕುರಿತು ಇವರು ಅಲ್ಲಿ ಹೋಗಿ ಅಧ್ಯಯನ ನಡೆಸಿದ್ದಾರಾ? ದೇಶದ ಖ್ಯಾತ ಚಿಂತಕಿ, ಸಾಮಾಜಿಕ ಕಾರ್ಯಕರ್ತೆ ಮಧುಕೀಶ್ವರ್ ಇತ್ತೀಚೆಗೆ ಮೋದಿಯ ಕುರಿತಾಗಿ ಒಂದು ಪುಸ್ತಕ ಬರೆದಿದ್ದಾರೆ. ಗುಜರಾಥಿಗೆ ಹೋಗಿ ಅಲ್ಲೇ ಇದ್ದು ಕ್ಷೇತ್ರಕಾರ್ಯ ಮಾಡಿ ನಿಜಾಂಶವನ್ನು ಸೆರೆ ಹಿಡಿದಿದ್ದಾರೆ. ಗುಜರಾತಿನಲ್ಲಿ ನಿಜವಾದ ಅಭಿವೃದ್ಧಿ ಆಗಿದೆ. ಮೋದಿ ಸರ್ಕಾರ ಖಂಡಿತಾ ಮುಸ್ಲಿಂ ವಿರೋಧಿ ಅಲ್ಲ. ಗೋದ್ರಾ ಪ್ರಕರಣದ ನಂತರ ಬುಗಿಲೆದ್ದ ಗುಜರಾತನ್ನು ಮೋದಿಯಲ್ಲದೇ ಬೇರಾರಿಂದಲೂ ಶಮನ ಮಾಡಲು ಸಾಧ್ಯವಿಲ್ಲವಾಗಿತ್ತು. ಮೋದಿಯಿಂದಲೇ ಅದು ನಿಯಂತ್ರಣಕ್ಕೆ ಬಂತೆಂಬುದನ್ನು ಮಧುಕೀಶ್ವರ್ ನಿದರ್ಶನ ಸಮೇತ ವಿವರಿಸುತ್ತಾರೆ. ಇದಕ್ಕೆ ಇನ್ನೊಂದು ಮುಖವಾಗಿ ಇಂದಿರಾ ಗಾಂಧಿ ಹತ್ಯೆಯನ್ನು ನೆನಪಿಸುತ್ತಾರೆ. ಹತ್ಯೆಯ ನಂತರ 25/30 ಸಾವಿರ ಸಿಕ್ಕರ ನರಮೇಧ ಮಾಡಲಾಯಿತು. ಇದರಲ್ಲಿ ಶಾಮೀಲಿದ್ದವರು ಕಾಂಗ್ರೇಸಿನ ಕಾರ್ಯಕರ್ತರು ಮತ್ತು ಪ್ರತಿನಿಧಿಗಳು. ಗುಜರಾತಿನ ಗಲಭೆಯನ್ನು ಶೀಘ್ರವಾಗಿ ನಿಯಂತ್ರಣಕ್ಕೆ ತಂದ ಮೋದಿ ಜೀವವಿರೋಧಿ ಎನ್ನುತ್ತೇವೆ. ಸಹಸ್ರಾರು ಜನರನ್ನು ಹತ್ಯೆ ಮಾಡಿಸಿದ ಕಾಂಗ್ರೇಸ್ ಜನಪರವಾದದ್ದು ಎಂದು ಗುಣಗಾನ ಮಾಡುತ್ತೇವೆ. ಏನಾಗಿದೆ ನಮ್ಮ ಬುದ್ಧಿಜೀವಿಗಳಿಗೆ? ಇದು ಮೋದಿಯ ಜನಪ್ರಿಯತೆಗೆ ಮಸಿ ಬಳಿದು ಅವರನ್ನು ರಾಜಕೀಯವಾಗಿ ನಾಶಮಾಡುವ ವ್ಯವಸ್ಥಿತ ಪ್ರಯತ್ನವೆಂದು ಮಧುಕೀಶ್ವರ್ ಸ್ಪಷ್ಟವಾಗಿ ಹೇಳುತ್ತಾರೆ.
ಕೊನೆಯದಾಗಿ ಕಾಂಗ್ರೇಸಿನವರಿಗೆ ಒಂದು ಕಿವಿಮಾತು. ನಿಮ್ಮ ಪರವಾಗೇ ಮಾತನಾಡುತ್ತಿರುವ ಈ ಬುದ್ಧಿಜೀವಿಗಳಿಂದ ಇನ್ನೂ ಸಾವಿರಾರು ಮತಗಳನ್ನು ಕಳೆದುಕೊಳ್ಳುತ್ತೀರಿ ನೋಡಿ!






ಐನಕೈ ಅವರೇ, ಬು(ಸು)ದ್ಧಿ ಜೀವಿಗಳ ನಿಜ ಬಣ್ಣವನ್ನು ಬಯಲು ಮಾಡಿದ್ದೀರಿ. ಅನಂತಮೂರ್ತಿ ಮತ್ತು ಇತರೆ ಜೀವಿಗಳು ಮಾತಾಡುವಾಗ ಸಮಾಜವಾದಿಗಳು, ಕೆಲವೊಮ್ಮೆ ಕಮ್ಯೂನಿಸ್ಟರು. ಆದರೆ ದುರಂತ ನೋಡಿ. ಇವೆರಡೂ ಸ್ವತಂತ್ರವಾಗಿ ಎಂದೂ ಅಧಿಕಾರಕ್ಕೆ ಬರುವ ಸಾಧ್ಯತೆಯೇ ಇಲ್ಲ. ಅಧಿಕಾರದ ಸುತ್ತ ತಿರುಗುವ ಈ ಜೀವಿಗಳಾದರೂ ಏನು ಮಾಡಬೇಕು ಹೇಳಿ? ಹಾಗಾಗಿ ಭಾಷಣದಲ್ಲಿ ಸಮಾಜವಾದ ಹೇಳುತ್ತ ಕೆಲವೊಮ್ಮೆ ಕಾಂಗ್ರೆಸ್ ಟೀಕಿಸುತ್ತ ಇತ್ತ ನಕ್ಸಲರನ್ನೂ ಸಮರ್ಥಿಸುತ್ತ ಸಿಪಿಐ, ಸಿಪಿಐಎಂಗಳ ಮಿತ್ರರನ್ನು ಓಲೈಸುತ್ತ, ಇವರೆಲ್ಲರೂ ಈ ಜೀವಿಗಳು ನಮ್ಮ ಪರ ಎಂಬಂತೆ ಇದುವರೆಗೆ ಕಾಣಿಸಿಕೊಂಡಿದ್ದರು. ಸದ್ಯ ಈಗಲಾದರೂ ಒಂದು ಪಕ್ಷದ ಪರ ಬೀದಿಗೆ ಬಂದರಲ್ಲ. ಅಷ್ಟರ ಮಟ್ಟಿಗಾದರೂ ಇವರು ಯಾವ ಕಡೆ ಎಂಬುದು ಸ್ಪಷ್ಟವಾಯಿತಲ್ಲ. ಅಷ್ಟೇ ಸಮಾಧಾನ!
-ಶ್ರೀಪಾದ ಭಟ್
“ಅಷ್ಟರ ಮಟ್ಟಿಗಾದರೂ ಇವರು ಯಾವ ಕಡೆ ಎಂಬುದು ಸ್ಪಷ್ಟವಾಯಿತಲ್ಲ.”
ಅನಂತಮೂರ್ತಿಯವರನ್ನು ತಪ್ಪಾಗಿ ಅರ್ಥೈಸಿ ಅಟಾಕ್ ಮಾಡುವ ಬಲಪಂಥೀಯ ಹುನ್ನಾರ ನಿಮ್ಮದು. ನೀವು ಇಲ್ಲಿ ಏನೇ ಬರೆದುಕೊಳ್ಳಿ. ಆದರೆ ಎಲ್ಲಾ ಪ್ರಜ್ಞಾವಂತ ಮತದಾರರ ವೋಟು ಆಪ್ಗೆ ಅನ್ನುವುದು ನಿಸ್ಸಂದೇಹ. ಯಾವ ಕ್ಷೇತ್ರದಲ್ಲಿ ಆಪ್ ಅಭ್ಯರ್ಥಿಗಳಿಲ್ಲವೋ ಅಥವಾ ಆಪ್ ಅಭ್ಯರ್ಥಿ ತುಂಬಾ ವೀಕ್ ಎಂಬ ಅಭಿಪ್ರಾಯವಿದೆಯೋ ಅಂತಹ ಕ್ಷೇತ್ರಗಳಲ್ಲಿ ಕಾಂಗ್ರೆಸ್ಗೆ ವೋಟು ಹಾಕುವುದು ವಾಸಿ. ದೇವನೂರ ಮಹಾದೇವ ಕೂಡ ಇದನ್ನೇ ಹೇಳಿದ್ದಾರೆ, ಅನಂತಮೂರ್ತಿಯವರ ನಿಲುವೂ ಇದೇ ಆಗಿದೆ. ಹಾಗೂ ಎಲ್ಲಾ ಪ್ರಜ್ಞಾವಂತರ ಅಭಿಪ್ರಾಯವೂ ಇದೇ ಆಗಿದೆ. ಆಪ್ ನಮ್ಮ ನೈತಿಕ ಶಕ್ತಿಯ ಪ್ರತೀಕ. ನಮೋಸುರನ ಅಪಾಯದಿಂದ ನಾಡನ್ನು ಬಚಾವು ಮಾಡಲು ಕಾಂಗ್ರೆಸ್ ಸದ್ಯದ ಪರಿಸ್ಥಿತಿಯಲ್ಲಿ ಅನಿವಾರ್ಯ.
ಕಣ್ಣು ಮುಚ್ಚಿಕೊಂಡರೂ ಹಾಲನ್ನೇ ಕುಡಿಯುವ ಬೆಕ್ಕಿನಿಂದ ಸ್ವಸಮರ್ಥನೆ! ಕಳ್ಳನಿಗೊಂದು ಪಿಳ್ಳೆ ನೆಪ ಅಂದಂತೆ!
ದರ್ಗಾ ಸರ್ ಅವರ ಬಗ್ಗೆ, ಪ್ರಗತಿಪರರ ಬಗ್ಗೆ ನೀವೆಷ್ಟೇ ಲಘುವಾಗಿ ಮಾತನಾಡಿದ್ದರೂ ಶರಣರ ನೈತಿಕ ಶಕ್ತಿಗೆ ನಿಮ್ಮ ಎಲ್ಲಾ ಟೀಕೆಗಳನ್ನು ಎದುರಿಸುವ ಶಕ್ತಿ ಇದೆ ಮಿ. ವಿಜಯ್. ನಿಮ್ಮ ಅವಹೇಳನಕಾರಿ ಮಾತುಗಳು ಶರಣರನ್ನು ಪ್ರಚೋದಿಸುವುದಿಲ್ಲ.
ನಾನೆಷ್ಟೇ ಹೇಳಿದರೂ ನಿಮಗೆ ವಿವೇಕದ ಮಾತುಗಳು ಸರಿಬರುವುದಿಲ್ಲ. ನೀವು ರಾಕ್ಷಸ ಶಕ್ತಿಯೊಂದರ ಮಾಯೆಗೆ ಸಿಲುಕಿ ಸಂಪೂರ್ಣ ಪರವಶರಾಗಿದ್ದೀರಿ. ಆ ಮಾಯೆ ನಿಮ್ಮನ್ನು ಪೂರ್ತಿಯಾಗಿ ನಾಶ ಮಾಡುವ ಮೊದಲು ನಿಮಗೆ ಬಂಧನದ ಅರಿವುಂಟಾಗಲಿ ಎಂದು ಕಳಕಳಿಯಿಂದ ಹಾರೈಸುತ್ತೇನೆ. ಶರಣರ ಸಂಘವೇ ನಿಮಗೆ ಬಿಡುಗಡೆಯ ದಾರಿ.
ನಿಮಗೆ ಒಳ್ಳೆಯದಾಗಲಿ.
ಆಪ್ ಜಯಭೇರಿ ನಂತರ ಏನು ಮಾಡುತ್ತೀರೋ ನೋಡೋಣ!
ಸ್ವಾಮಿ..ಮೊದಲು ನೀವು ‘ಶರಣ’ ರ ಹೆಸರಿನಲ್ಲಿ ಸಮಾಜದಲ್ಲಿ ಗಬ್ಬೆಬ್ಬಿಸುವ ‘ಕಾಯಕ’ವನ್ನು ಕಡಿಮೆ ಮಾಡಿಕೊಳ್ಳಿ..ಆಗ ಎಲ್ಲ ಸರಿಯಾಗುತ್ತದೆ. ಇಷ್ಟೆಲ್ಲ ನಗೆ ಪಾಟಲಿಗೆ ಈಡಾದರೂ ನೀವಿನ್ನೂ ಸುಧಾರಿಸುವ ಲಕ್ಷಣ ಕಾಣುತ್ತಿಲ್ಲ. ಪ್ರಗತಿಪರಾವಲಂಬಿಗಳ ಚರ್ಮ ತುಸು ದಪ್ಪ ಅನಿಸುತ್ತದೆ.
[ಆಪ್ ಜಯಭೇರಿ ನಂತರ ಏನು ಮಾಡುತ್ತೀರೋ ನೋಡೋಣ!]
ನಮಗೆ ಬೇಕಾಗಿದ್ದು ಎಡಬಿಡಂಗಿಗಳು ಮತ್ತು ಕಾಂಗಿಗಳು ತೊಳೆದು ಹೋಗುವುದು..ಅದರಲ್ಲೂ ಮುಖ್ಯವಾಗಿ ಎರವಲು ವಿಚಾರದ, ತಿಕ್ಕಲು ಸಿದ್ಧಾಂತದ ಎಡಬಿಡಂಗಿಗಳು. ನಿಮ್ಮ ಸಹವಾಸ ಮಾಡಿದರೆ ಆಪ್ ಮಣ್ಣು ತಿನ್ನುವುದು ಶತ:ಸಿದ್ಧ!
೨೦೦೪ರಲ್ಲಿ ಮಾನ್ಯ ಅನಂತಮೂರ್ತಿಯವರು ಚುನಾವಣೆಗೆ ನಿಂತಾಗ ಜೆಡಿಎಸ್ ಮತ್ತು ಕಾಂಗ್ರೆಸ್ ಬೆಂಬಲ ಕೇಳಿದ್ದರು. ಕಾಂಗ್ರೆಸ್ ಸುಮ್ಮನಿತ್ತು.ಸೋತು ಬೇಸತ್ತ ಮೂರ್ತಿಗಳು ರಾಜ್ಯಸಭೆ ಸೇರಲು ಜೆಡಿಎಸ್ ಗೆ ಮಸ್ಕಾ ಹೊಡೆದರು. ಅದೂ ಉಪಯೋಗಕ್ಕೆ ಬರಲಿಲ್ಲ! ಇಂಥ ಮಹಾನ್ ಬದ್ದತೆಯ ಸಾಹಿತಿಗಳ ನಿಜ ಬಣ್ಣ ಈ ಬಾರಿಯ ಲಂಕೇಶ್ (ಏಪ್ರಿಲ್ ೧೪)ಪತ್ರಿಕೆಯಲ್ಲಿದೆ. ಮತ್ತಷ್ಟು ಮಾಹಿತಿಗೆ ಇದನ್ನು ಓದಿ. ಕನ್ನಡಕ ತೆಗೆದು ಓದಬೇಕಷ್ಟೆ.
-ಶ್ರೀಪಾದ ಭಟ್
ಅನಂತಮೂರ್ತಿ ಅವರ ನೈತಿಕತೆ ಹಾಗೂ ಸೈದ್ಧಾಂತಿಕ ಬದ್ಧತೆ ಬಗ್ಗೆ ಅನುಮಾನ ಪಡುವುದು ಬೇಡ. ಅವರು ನಮ್ಮ ನಡುವಿನ ಕ್ರಿಟಿಕಲ್ ಇನ್ಸೈಡರ್ ಹಾಗೂ ಕನ್ನಡದ ಪ್ರಖರ ಸಾಕ್ಷಿಪ್ರಜ್ಞೆ. ಅನಂತಮೂರ್ತಿ ಅವರ ಚಿಂತನೆಯಿಂದ ತುರಿಕೆಗೆ ಒಳಗಾದ ಬಲಪಂಥೀಯರು ಹಾಗೂ ಜಾತಿವಾದಿಗಳು ಅವರ ಬದ್ಧತೆಯನ್ನು ಪ್ರಶ್ನಿಸಿ ತಮ್ಮ ತುರಿಕಾವಸ್ಥೆಯ ದರ್ಶನ ಮಾಡಿಸುತ್ತಿದ್ದಾರೆ.
ತಾವು ಅಪ್ಪಣೆ ಕೊಟ್ಟಮೇಲಾಯಿತು! ಅನುಮಾನಿಸುವುದಿಲ್ಲ. ಆದರೆ, ಉಪನಿಷತ್ತುಗಳು ಹೇಳಿದಂತೆ ಹಾಗೂ ಸ್ವತಃ ಅನಂತಮೂರ್ತಿಯವರು ಮಾಡಿ ತೋರಿಸುವಂತೆ ಶಂಕಿಸದೇ ಪ್ರಶ್ನಿಸದೇ ಯಾವುದನ್ನೂ ನಂಬುವ ಸ್ಥಿತಿಯಲ್ಲಿ ನಾನು ಇಲ್ಲವಲ್ಲ. ಏನು ಮಾಡುವುದು?
-ಶ್ರೀಪಾದ ಭಟ್
[ಅನಂತಮೂರ್ತಿ ಅವರ ನೈತಿಕತೆ ಹಾಗೂ ಸೈದ್ಧಾಂತಿಕ ಬದ್ಧತೆ ಬಗ್ಗೆ ಅನುಮಾನ ಪಡುವುದು ಬೇಡ.]
ಹಾಗೆ ಆಗಲಿ ಮಹಾಪ್ರಭು.. ಓತಿಕ್ಯಾತಕ್ಕೆ ಬೇಲಿಗೂಟವೇ ಸಾಕ್ಷಿ ಎನ್ನುವ ಲೋಕರೂಢಿಯಂತೆಯೇ ಆಗಲಿ.
[ಅನಂತಮೂರ್ತಿ ಅವರ ಚಿಂತನೆಯಿಂದ ತುರಿಕೆಗೆ ಒಳಗಾದ ಬಲಪಂಥೀಯರು ಹಾಗೂ ಜಾತಿವಾದಿಗಳು ಅವರ ಬದ್ಧತೆಯನ್ನು ಪ್ರಶ್ನಿಸಿ ತಮ್ಮ ತುರಿಕಾವಸ್ಥೆಯ ದರ್ಶನ ಮಾಡಿಸುತ್ತಿದ್ದಾರೆ.]
ಇತ್ತೀಚಿಗೆ ಅ.ಮೂಗಳ ಚಿಂತನೆಯ ಪ್ರಭಾವ ಅವರ ಕಿಡ್ನಿಗಳ ಮೇಲಾಗುತ್ತಿದೆಯೇನೊ ಎಂಬ ಅನುಮಾನ ನನಗೆ ಅವರ ಆರೋಗ್ಯದ ಕಾಳಜಿ ಇರಲಿ. ನೀವು ಸಹ ಈ ತರಹದ ಪ್ರಖರ ಚಿಂತನೆಗಳನ್ನು ಕಡಿಮೆ ಮಾಡಿ..ಕಿಡ್ನಿಯ ಮೇಲೆ ಪರಿಣಾಮ ಬೀರುತ್ತದೆ..ಆಮೇಲೆ ನಿಮ್ಮ ಅನ್ನದಾತರು ಅಧಿಕಾರದಲ್ಲಿ ಇಲ್ಲದಿದ್ದರೆ ಚಿಕಿತ್ಸೆಯ ವೆಚ್ಚವೂ ಸಿಗುವುದಿಲ್ಲ.
nijavada vishayavannu samajada munde javabdariyinda tavu prastutapadisiddeera.adakkagi tamage vandanegalu.nimma vimarshe achhukattagi sandharbikavagide.buddi jeevigalannu bettelegolisiddeera..thanks…..
Please vote AAP candidates in your constituency.Read Shiv Vishwanathan if you want to know why AAP this time:
http://m.thehindu.com/opinion/lead/the-future-and-aap/article5916410.ece/
ಸಾಹೇಬರೆ. ಗೊಂದಲಗೊಂಡು.ಅಪ್ಪಿ ತಪ್ಪಿ ನೀವೇನಾದರೂ ಆಪ್ ಗೆ ಮತ ಒತ್ತಿಬಿಟ್ಟಿರಿ ಮತ್ತೆ !. ಗಂಜಿಕೇಂದ್ರದವರು ಕ್ಷಮಿಸುವುದಿಲ್ಲ ಆಮೇಲೆ.. 🙂
ರಕ್ತಪೀಪಾಸು ಭಾಜಪಕ್ಕಿಂತ ಜಡ ಕಾಂಗ್ರೆಸ್ ಎಷ್ಟೋ ವಾಸಿ. ಈಗ ಆಪ್ ಇವೆರಡಕ್ಕೂ ಪರ್ಯಾಯವಾಗಿ ಉದಯಿಸಿರುವುದರಿಂದ, ಎಲ್ಲಾ ಪ್ರಜ್ಞಾವಂತ ಮತದಾರರ ವೋಟು ಆಪ್ಗೆ ಅನ್ನುವುದು ನಿಸ್ಸಂದೇಹ. ಆದರೆ ಯಾವ ಕ್ಷೇತ್ರದಲ್ಲಿ ಆಪ್ ಅಭ್ಯರ್ಥಿಗಳಿಲ್ಲವೋ ಅಥವಾ ಆಪ್ ಅಭ್ಯರ್ಥಿ ತುಂಬಾ ವೀಕ್ ಎಂಬ ಅಭಿಪ್ರಾಯವಿದೆಯೋ ಅಂತಹ ಕ್ಷೇತ್ರಗಳಲ್ಲಿ ಕಾಂಗ್ರೆಸ್ಗೆ ವೋಟು ಹಾಕುವುದು ವಾಸಿ. ದೇವನೂರ ಮಹಾದೇವ ಕೂಡ ಇದನ್ನೇ ಹೇಳಿದ್ದಾರೆ. ಹಾಗೂ ಎಲ್ಲಾ ಪ್ರಜ್ಞಾವಂತರ ಅಭಿಪ್ರಾಯವೂ ಇದೇ ಆಗಿದೆ. ಆಪ್ ನಮ್ಮ ನೈತಿಕ ಶಕ್ತಿಯ ಪ್ರತೀಕ.
ಕಾಂಗೈ ಗಂಜಿಕೇಂದ್ರದ ವಾಸಿಗಳಿಗೆ ಹಾಗನಿಸುವುದು ತುಂಬಾ ಸಹಜ! ;). ಆಪ್ ಇಲ್ಲದಿದ್ದಲ್ಲಿ ನೋಟಾ ಆಯ್ಕೆ ಇದೆ ಎನ್ನುವುದು ಗೊತ್ತಿರಲಿಲ್ಲವೇನೊ ಪಾಪ..
ಇರಲಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಅಂಬೇಡ್ಕರ್ ರ ಹೆಸರನ್ನು ಢಾಳಾಗಿ ಉಪಯೋಗಿಸಿಕೊಳ್ಳುವ ‘ಪ್ರಜ್ಞಾವಂತ’ ಗಂಜಿ ಗಿರಾಕಿಗಳು ಅಂಬೇಡ್ಕರರ ಈ ಮಾತುಗಳನ್ನು ಕೇಳಿ ನೋಡಬಹುದು ಮತ್ತು ಆಮೇಲೆ ಆಶ್ರಯದಾತರಿಗೆ ಜೈ ಅನ್ನುವುದನ್ನು ಮುಂದುವರೆಸಬಹುದು!
1) youtube.com/watch?v=_FNSQcEx02A ಅಂಬೇಡ್ಕರ ಸಂದರ್ಶನ – ಬಿಬಿಸಿ
2) ಆಂಬೇಡ್ಕರ ಪುಸ್ತಕ – What Congress and Gandhi have done to the untouchables.
ambedkar.org/ambcd/41A.What%20Congress%20and%20Gandhi%20Preface.htm
ಬಾಬಾಸಾಹೇಬ್ ಅವರನ್ನು ನಿಮ್ಮ ಕುಟಿಲ ಯೋಜನೆಗೆ ಬಳಸುವ ಕಂತ್ರಿ ಬುದ್ಧಿ ಬಿಡಿ ಮಿ. ವಿಜಯ್. ಬಾಬಾಸಾಹೇಬ್ ಅವರಿಂದ ನೀವು ಕಲಿಯಬೇಕಾದದ್ದು ಬಹಳಷ್ಟಿದೆ. ಮೊದಲು ಅದನ್ನು ಮಾಡಿ.
ಸ್ವಲ್ಪ ಕೊಟ್ಟ ಲಿಂಕುಗಳ ಮೇಲೆ ಕಣ್ಣಾಡಿಸಿ ಆಮೇಲೆ ನಿಮ್ಮ ಅಣಿಮುತ್ತುಗಳನ್ನು ಉದುರಿಸಿ.
ಆ ಕಾಲದಲ್ಲಿಯೇ ಎಲ್ಲ ಅಡೆತಡೆಗಳನ್ನು ಮೀರಿ ಜ್ಞಾನಿಯಾದ ಅಂಬೇಡ್ಕರ್ ರನ್ನು ನಿಮ್ಮ ಲೆವಲ್ಲಿಗೆ ಎಳೆದು ತಂದಿದ್ದೀರಿ ನಿಮ್ಮ ಸ್ವಾರ್ಥ ಸಾಧನೆಗೆ.. ನಾಚಿಕೆಯಾಗಬೇಕು ನಿಮಗೆ. ಅಂಬೇಡ್ಕರರನ್ನು ಅರ್ಥಮಾಡಿಕೊಳ್ಳುವುದಕ್ಕೆ ಎಡ ಗಂಜಿ ಗಿರಾಕಿಗಳ ಮಾರ್ಗದರ್ಶನ ಬೇಕಾಗಿಲ್ಲ..ನಿಮ್ಮಂಥವರ ಕನ್ನಡಕದಿಂದ ಅಂಬೇಡ್ಕರರನ್ನು ಅರ್ಥ ಮಾಡಿಕೊಳ್ಳುವುದನ್ನು ಬಿಟ್ಟು, ನೇರವಾಗಿ ಅಂಬೇಡ್ಕರರನ್ನು ಓದಿದಾಗಲೇ/ಕೇಳಿದಾಗಲೇ ಅವರು ನಿಜವಾಗಿ ಅರ್ಥವಾಗುವುದು..ಅವರ ಉನ್ನತ ವಿಚಾರಗಳ ಬಗ್ಗೆ ಅರಿವಾಗುವುದು.
ನೀವ್ಯಾಕೆ ವೃಥಾ ಅನಂತಮೂರ್ತಿಯವರ ವಕಾಲತ್ತು ವಹಿಸುತ್ತೀರಿ? ಅವರು ಬೆಂಬಲಿಸಿದ ನೀಲೇಕಣಿ ಇರುವಲ್ಲಿ ಆಪ್ ಅಭ್ಯರ್ಥಿ ಇದ್ದರಲ್ಲ. ಅದನ್ನು ಬೆಂಬಲಿಸುವ ಬದಲು ಇವರು ಸದಾ ಮಾತಲ್ಲಿ ವಿರೋಧಿಸುವ ಬಹುರಾಷ್ಟ್ರೀಯ ಕಂಪನಿಯ ನೀಲೇಕಣಿ ಅವರನ್ನು ಉತ್ತೇಜಿಸುವ ಪ್ರಮೇಯ ಏಕೆ? ಇದು ಕೂಡ ಆಪ್ ನ ಪ್ರಜ್ಣಾವಂತರ ಪ್ರಶ್ನೆ.
-ಶ್ರೀಪಾದ ಭಟ್
ನೀವು ನನ್ನ ನಿನ್ನೆಯ ಕಾಮೆಂಟುಗಳನ್ನು ಓದಿದ್ದರೆ ನಿಮ್ಮ ಪ್ರಶ್ನೆ ಕೇಳುವ ಅಗತ್ಯವೇ ಬರುತ್ತಿರಲಿಲ್ಲ!! ನಾನು ಈಗಾಗಲೇ ನೀಲೇಕಣಿ ಅವರನ್ನೇಕೆ ಪ್ರಜ್ಞಾವಂತರು ಬೆಂಬಲಿಸಬೇಕಾಗಿ ಬಂತು ಅಂತ ಸ್ಪಷ್ಟವಾಗಿ ಹೇಳಿದ್ದೇನೆ.
ಓದಿದ್ದೇನೆ ಗುರುಗಳೇ. ವೀಕ್ ಕ್ಯಾಂಡಿಡೇಟ್ ಇರುವುದರಿಂದ ಅಂತ. ಮರುಳಸಿದ್ಧಯ್ಯನವರು ಹೇಳಿದ್ದು- ಆಪ್ ಅಭ್ಯರ್ಥಿ ಗೆಲ್ಲೋದಿಲ್ಲ ಅದಕ್ಕೆ ನೀಲೇಕಣಿಗೆ ಬೆಂಬಲ! ಗೆಲ್ಲುವವರಿಗೆ ಮಾತ್ರ ನಿಮ್ಮೆಲ್ಲರ ಜೈಕಾರವೇ? ಬುದ್ಧಿಯನ್ನು ಹಾಗೂ ಬಳಸುವ ಹೀಗೂ ಬಳಸುವ ಕಲೆ ಯಾರಿಗಿದೆಯೋ ಅವರೇ ಬುದ್ಧಿಜೀವಿಗಳು! ಜೈ ಬುದ್ಧಿಜೀವಿ!!
-ಶ್ರೀಪಾದ ಭಟ್
“ಗೆಲ್ಲುವವರಿಗೆ ಮಾತ್ರ ನಿಮ್ಮೆಲ್ಲರ ಜೈಕಾರವೇ?”
ಖಂಡಿತ ಇಲ್ಲ. ಗೆಲ್ಲುವ ಸಾಧ್ಯತೆ ಇರುವ ಸೆಕ್ಯೂಲರ್ ಅಭ್ಯರ್ಥಿಗೆ ಪ್ರಜ್ಞಾವಂತರ ಬೆಂಬಲ. ಆಪ್ ಅಭ್ಯರ್ಥಿ ನೀನಾ ನಾಯಕ್ ಹೆಸರೇ ಆ ಕ್ಷೇತ್ರದ ಬಹುತೇಕ ಜನರಿಗೆ ಗೊತ್ತಿಲ್ಲ, ಇನ್ನು ಆಕೆ ಗೆಲ್ಲುವ ಸಾಧ್ಯತೆ ಸೊನ್ನೆ! ಆಪ್ ಅಭ್ಯರ್ಥಿಯನ್ನು ಪ್ರಜ್ಞಾವಂತರು ಬೆಂಬಲಿಸಿದ್ದಾರೆ ಅನಂತ ಕುಮಾರ್ ಜಯಭೇರಿ ನಿಶ್ಚಿತ ಆಗುತ್ತಿತ್ತು. ಕೋಮುವಾದಿ ಪಕ್ಷದ ಅಭ್ಯರ್ಥಿ ಗೆಲ್ಲುವುದನ್ನು ಪ್ರಜ್ಞಾವಂತರು ನೋಡಲು ಸಾಧ್ಯವೇ? ಇನ್ನು ನಮ್ಮೆಲ್ಲರ ಸಾಕ್ಷಿ ಪ್ರಜ್ಞೆಯೇ ಆಗಿರುವ ದೇವನೂರ ಮಹಾದೇವ ಅವರೇ ಹೇಳಿದ್ದಾರಲ್ಲ ಎಲ್ಲೆಲ್ಲಿ ಆಪ್ ಗೆಲ್ಲುವ ಸಾಧ್ಯತೆ ಇಲ್ಲವೋ ಅಲ್ಲಿ ಸೆಕ್ಯೂಲರ್ ಸಿದ್ಧಾಂತದ ಗೆಲುವಿಗಾಗಿ ಕಾಂಗ್ರೆಸ್ ಪಕ್ಷಕ್ಕೆ ವೋಟು ಹಾಕಿ ಅಂತ. ಅಂತಹವರ ಮಾತನ್ನು ಮೀರಲಾಗುತ್ತದೆಯೇ?
ದೇವನೂರರನ್ನು ಎಳೆದು ತರಬೇಡಿ. ಅವರಿಗೆ ಇರುವ ಗಟ್ಟಿತನ ಮತ್ತು ನೈತಿಕತೆ ಅ.ಮೂರ್ತಿ ಮತ್ತು ಕಾರ್ನಾಡರಿಗೆ ಇಲ್ಲವೇ ಇಲ್ಲ. ಅವರು ಮೊದಲು ಆಪ್ ಅನ್ನು ತಮ್ಮ ಸರ್ವೋದಯ ಪಕ್ಷದ ಮೂಲಕ ಬೆಂಬಲಿಸಿ ಅನಂತರ ಆ ಮಾತು ಹೇಳಿದ್ದಾರೆ. ದೇವನೂರರು ಯಾರನ್ನೂ ಓಲೈಸುವ ವ್ಯಕ್ತಿ ಅಲ್ಲ. ಇವರಿಗೂ ಇತರೆ ಸಾಹಿತಿಗಳಿಗೂ ತುಂಬ ವ್ಯತ್ಯಾಸವಿದೆ.
-ಶ್ರೀಪಾದ ಭಟ್
“ಮೋದಿ ನೇತೃತ್ವದಲ್ಲಿ ಈ ಜನರ ಅಸಹನೆಯನ್ನು ಬಳಸಿಕೊಂಡು ಅಧಿಕಾರಕ್ಕೆ ಏರಲು ಫ್ಯಾಸಿಸ್ಟ್ ಸಂಘಪರಿವಾರ ಕಾಯುತ್ತಿದೆ” ಅಂತ ವರ್ತಮಾನದಲ್ಲಿ ಬರೆದು ಇಲ್ಲಿ ಪ್ರಜ್ಞಾವಂತರನ್ನು ಜರಿಯುತ್ತಿರುವುದು ಏತಕ್ಕೆ? ನೀವು ಹೀಗೆ ಮಾಡುವುದರಿಂದಲೇ ನಿಮ್ಮನ್ನು ಎಲ್ಲರೂ ಗೋಸುಂಬೆ ಅಂತ ಕರೆಯುವುದು.
ಅನಂತಮೂರ್ತಿ ಮತ್ತು ಕಾರ್ನಾಡರ ದ್ವಂದ್ವ ಹೇಳಿಕೆಗಳು ಸಾಕಷ್ಟಿವೆ. ಜತೆಗೆ ರಾಜಕಾರಣಿಗಳಂತೆ ತಮಗೆ ಎಲ್ಲಿ ಅನುಕೂಲವೋ ಅಲ್ಲಿಗೆ ವರ್ಷಕ್ಕೊಂದು ಪಕ್ಷ ಬದಲಾಯಿಸುವುದು ಎಲ್ಲರಿಗೂ ತಿಳಿದ ವಿಷಯವೇ. ಮುಖ್ಯವಾದ ಮಾತೆಂದರೆ ಅವರು ಕಾಂಗ್ರೆಸ್ಸ್ ಪರ ಪ್ರಚಾರ ಮಾಡಿದ್ದೇ ತಪ್ಪು ಎಂಬುದನ್ನು ಒಪ್ಪಿಕೊಳ್ಳುವುದು ಸ್ವಲ್ಪ ಕಷ್ಟ. ಪ್ರತಾಪ್ ಸಿಂಹರನ್ನು ಮೈಸೂರಿನಲ್ಲಿ ನಡೆದ ಟಿ ವಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ಸ್ ನ ಎಚ್ ವಿಶ್ವನಾಥ್ ‘ಇದುವರೆಗೆ ನೀವು ಯಡಿಯೂರಪ್ಪ,ಅಡ್ವಾಣಿ ,ವಾಜಪೇಯಿ ಮತ್ತು ಮೊಧಿಯವರನ್ನು ಪತ್ರಿಕೆಯಲ್ಲಿ ಟೀಕಿಸುತ್ತಾ ಇದ್ದವರು. ಈಗ ಅದೇ ಪಕ್ಷದ ವತಿಯಿಂದ ಚುನಾವಣೆಗೆ ನಿಂತಿದ್ದೀರಿ; ಇದು ಸರಿಯೋ’ ಎಂದು ಕೇಳಿದರು. ಪ್ರತಾಪ್ ಸಿಂಹರು ತಮ್ಮನ್ನು ಸಮರ್ಥಿಸಿಕೊಳ್ಳಲು ಕೊಟ್ಟ ಉತ್ತರ ಅನಂತಮೂರ್ತಿ ಮತ್ತು ಕಾರ್ನಾಡ್ ಅವರ ನಡೆ ನುಡಿಗಿಂತ ಭಿನ್ನ ಎಂದು ಹೇಳಲು ಸಾಧ್ಯವಾಗದು. ಕಾಂಗ್ರೆಸ್ಸ್ ಪರ ಪ್ರಚಾರಮಾಡಿದ ಬುದ್ಧಿಜೀವಿಗಳು ಭೈರಪ್ಪ ಮತ್ತು ಚಿದಾನಂದಮೂರ್ತಿಯವರು ಬಿ ಜೆ ಪಿ ಪರ ಹೇಳಿಕೆ ಕೊಡುವುದು ಸರಿಯೋ ಎಂದು ಪ್ರಶ್ನಿಸಿದ್ದೂ ಆಯಿತು ಈಗ ಒಬ್ಬ ಬುದ್ಧಿಜೀವಿ ಇರಲಿ, ಸಾಹಿತಿ,ಪತ್ರಕರ್ತ ಹೀಗೆ ಯಾರೇ ಆಗಿರಬಹುದು ಅವರ ಮುಂದೆ ಎರಡೇ ಆಯ್ಕೆಗಳು ಉಳಿದಿವೆ. (೧) ಅಖಾಡಕ್ಕೆ ಇಳಿಯದೆ ಮನೆಯಲ್ಲೇ ಕುಳಿತು ಭಾಷಣ, ಲೇಖನ ಇತ್ಯಾದಿಗಳನ್ನು ಬರೆದುಕೊಂಡು ಟೀಕಿಸುತ್ತಾ ಕೂರುವುದು. (೨) ಅವರಿಗಿಷ್ಟ ಬಂದ ಪಕ್ಷಕ್ಕೆ ಬಹಿರಂಗವಾಗಿ ಬೀದಿಗೆ ಬಂದು ಪ್ರಚಾರ ಮಾಡುವುದು. ಎರಡನೇ ಆಯ್ಕೆಯೇ ಉತ್ತಮ ಎಂದು ನನ್ನ ಅನಿಸಿಕೆ.
ತತ್ವಕ್ಕೆ ಬದ್ಧವಾಗಿ ನಡೆದಿದ್ದಾರೆ ಅನಂತಮೂರ್ತಿ ಹಾಗೂ ಕಾರ್ನಾಡ್. ನಾವು ಪ್ರಜ್ಞಾವಂತರೆ ಹೀಗೆ. ತತ್ವಕ್ಕೆ ಬದ್ಧವಾಗಿಯೇ ನಡೆಯುತ್ತೇವೆ. ತತ್ವಕ್ಕೆ ಬದ್ಧವಾಗಿ ಸದ್ಯದ ತುರ್ತುಗಳಿಗೆ ಪ್ರತಿಕ್ರಿಯಿಸುವುದು. ನೀವು ದ್ವಂದ್ವ ಅಂತ ಏನನ್ನು ಹೇಳುತ್ತೀರೋ ಅದು ತಾತ್ವಿಕ ನೆಲೆಯಲ್ಲಿ ದ್ವಂದ್ವ ಅಲ್ಲ. ತತ್ವಗಳೇ ಇಲ್ಲದವರಿಗೆ ಅನಂತಮೂರ್ತಿಯವರದ್ದು ದ್ವಂದ್ವ ಅನ್ನಿಸುತದೆ.
ಇದನ್ನು ನಾನು ಖಂಡಿತವಾಗಿಯೂ ಒಪ್ಪುತ್ತೇನೆ.. ಇವರು ಗಂಜಿ ತತ್ಬಕ್ಕೆ ಬದ್ಧರಾಗಿಯೇ ನಡೆಯುವುದು!..ನೆಂಜಿಕೊಳ್ಳಲು ಉಪ್ಪಿನಕಾಯಿ ಕೂಡ ಸಿಗುತ್ತದೆ ಅಂದರೆ ಓಡುತ್ತಾರೆ ಕೂಡ!
ಭಾರತ ರತ್ನ ಡಾ. ಸಿ ಏನ್ ಆರ್ ರಾವ್ ಅವರಿಗೆ ಈ ಬಾರಿಯ ಬಸವಶ್ರೀ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಈ ಪ್ರಶಸ್ತಿಯನ್ನು ಈ ಹಿಂದೆಯೇ ಪಡೆದಿರುವ ದರ್ಗಾ ಸರ್ ಅವರ ಲೆವೆಲ್ ಏನು ಅಂತ ಈಗಲಾದರೂ ನಿಮಗೆ ಅರ್ಥವಾಗಬಹುದು ಮಿ. ವಿಜಯ್.
ಶೆಟ್ಕರ್ ಅವರಿಗೆ– ತತ್ವ ಎನ್ನುವುದು ನಿರಪೇಕ್ಷವಲ್ಲ. ಅದು ಸಾಪೇಕ್ಷವಾದುದು. ದ್ವಂದ್ವವಿಲ್ಲದ ಮನುಷ್ಯ ಜೀವಿಗಳು ಇಬ್ಬರೇ. ಒಬ್ಬ ಇನ್ನೂ ಹುಟ್ಟದವನು; ಮತ್ತೊಬ್ಬ ಸತ್ತವನು. ಹೀಗಾಗಿ ನೀವು ನಂಬುವ ತತ್ವದಲ್ಲಿ ನನಗೆ ದ್ವಂದ್ವ ಕಾಣಿಸಬಹುದು;ಅದೇ ರೀತಿ ನನ್ನ ನಂಬುಗೆಯಲ್ಲಿ ನಿಮಗೆ ದ್ವಂದ್ವ ಕಾಣಿಸುವುದು ಸಹಜ. ಪ್ರಸ್ತುತ ಲೇಖನಕ್ಕೆ ಮತ್ತು ಅದರ ಬಗ್ಗೆ ನಡೆಯುತ್ತಿರುವ ಚರ್ಚೆಗೆ ಮುಖ್ಯವಾದ ಮಾತೆಂದರೆ ಸಾಹಿತಿಗಳು ಮತ್ತು ರಾಜಕಾರಣ. ಚುನಾವಣೆಯ ಸಂದರ್ಭದ ರಾಜಕಾರಣಕ್ಕೆ ಪ್ರತ್ಯಕ್ಷವಾಗೋ ಅಪ್ರತ್ಯಕ್ಷವಾಗೋ ಬಂದ ಮೇಲೆ ಸಾಹಿತಿಗಳು ಮತ್ತು ಬುದ್ಧಿಜೀವಿಗಳನ್ನು at least ಚುನಾವಣೆ ಮುಗಿಯುವ ತನಕ ರಾಜಕಾರಣಿಗಳ ರೂಪದಲ್ಲೇ ನೋಡಬೇಕು ನಿನ್ನೆ ಕರ್ನಾಟಕದ ಮಟ್ಟಿಗಂತೂ ಈ ಪ್ರಕ್ರಿಯೆ ಮುಗಿದಿದೆ. . ಹೀಗಾಗಿ ಯು ಆರ್ ಎ ,ಕಾರ್ನಾಡ್, ದೇವನೂರು,ಮರುಳಸಿದ್ದಪ್ಪ, ಜಿ ಕೆ ಜಿ, ಎಸ್ ಎಲ್ ಬಿ ,ಚಿ ಮೂ ಮತ್ತು ಪ್ರತಾಪಸಿಂಹ ಅವರುಗಳನ್ನು ಅನಂತಕುಮಾರ್,ವಿಶ್ವನಾಥ್,ನೀಲೇಕೇಣಿ, ಕುಮಾರಸ್ವಾಮಿ,ಯಡಿಯೂರಪ್ಪ ಇತ್ಯಾದಿಗಳನ್ನು ತೂಗುವ ತಕ್ಕಡಿಯಲ್ಲೇ ತೂಗಬೇಕು. ಮಾನದಂಡಗಳನ್ನು ಬದಲಾಯಿಸಿಕೊಂಡು ಮಾತನಾಡುವುದು ನಮ್ಮನ್ನು ನಾವೇ ಮೋಸಗೊಳಿಸಿಕೊಂಡಂತೆ.
http://www.livemint.com/Leisure/LoMbco3lMUfusOOXulPfsM/UR-Ananthamurthy–The-interpreter-of-injustices.html
ಶೆಟ್ಕರ್ ಅವರಿಗೆ-ತಾವು ಕೊಟ್ಟ linkನ ಲೇಖನ ಓದಿದೆ. ಅನಂತಮೂರ್ತಿಯವರ ಆತ್ಮಕಥನ “ಸುರಗಿ”, ರುಜುವಾತು ಅಂಕಣ ಬರಹಗಳ ಸಂಕಲನಗಳೂ ಸೇರಿದಂತೆ ಸರಿ ಸುಮಾರು ಅವರ ಎಲ್ಲಾ ಪುಸ್ತಕಗಳನ್ನೂ ನಾನು ಓದಿದ್ದೇನೆ. ಅವುಗಳಲ್ಲಿ ಇವೆಲ್ಲಾ ಬಂದಿರುವ ವಿಷಯವೇ.