ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 23, 2014

90

ಪ್ರತ್ಯೇಕ ಪಂಕ್ತಿ ಭೋಜನ : “ಸಂಪ್ರದಾಯ”ದ ಮುಸುಕಿನ “ಅನಾಗರೀಕ” ವರ್ತನೆಯ ಸುತ್ತ

‍ನಿಲುಮೆ ಮೂಲಕ

– ರಾಕೇಶ್ ಶೆಟ್ಟಿ

ಪ್ರತ್ಯೇಕ ಪಂಕ್ತಿ ಬೇಧಉಡುಪಿಯ ಮಠ ಸದಾಕಾಲ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುತ್ತದೆ. ಅದರಲ್ಲೂ ಬಹುಪಾಲು ಅದು ಸುದ್ದಿಯಾಗುವುದು ವಿವಾದಗಳಿಂದಲೇ, ಹಲವು ಬಾರಿ ಅದು ಪೇಜಾವರ ಶ್ರೀಗಳ ಯಾವುದೋ ಹೇಳಿಕೆಯ ಮೂಲಕವೇ ಸುದ್ದಿಯಾದರೇ ಉಳಿದಂತೆ ಅದು ಮತ್ತೆ ಮತ್ತೆ ಸುದ್ದಿಯಾಗುವುದು  ‘ಪ್ರತ್ಯೇಕ ಪಂಕ್ತಿ ಭೋಜನ’ದ ಕಾರಣಕ್ಕೆ.

ಏನಿದು ಮತ್ತೆ ಈ ವಿವಾದ ಅಂತ ನೋಡಲಿಕ್ಕೆ ಹೋದರೆ :  ಕೃಷ್ಣ ಮಠದ ಭೋಜನ ಶಾಲೆಯಲ್ಲಿ ಶನಿವಾರ (ಏ 19) ಬಂಟ್ಸ್ ಸಮುದಾಯದ ಮಹಿಳೆಯೊಬ್ಬರು ತನ್ನ ಸ್ನೇಹಿತೆಯರ ಜೊತೆ ಊಟಕ್ಕೆ ಕುಳಿತಿದ್ದರು. ಮಹಿಳೆ ಊಟ ಮಾಡುತ್ತಿರುವ ಸಂದರ್ಭದಲ್ಲಿ ಮಠದ ಅಧಿಕಾರಿಗಳು ಬ್ರಾಹ್ಮಣರೇತರರಿಗೆ ಇಲ್ಲಿ ಊಟಕ್ಕೆ ಅವಕಾಶವಿಲ್ಲ ಎಂದು ಮಹಿಳೆಯನ್ನು ಊಟದ ಮಧ್ಯದಲ್ಲೇ ಎಬ್ಬಿಸಿದ್ದಾರೆ ಎನ್ನುವುದು ವಿವಾದ.

“ನಾನು ಉಡುಪಿ ಮೂಲದವಳು, ವೈದ್ಯಕೀಯ ಕ್ಷೇತ್ರದವಳು. ನಾನು ಚೌಕಿಯಲ್ಲಿ (ಬ್ರಾಹ್ಮಣರಿಗಾಗಿರುವಊಟದ ಹಾಲ್) ಊಟಕ್ಕೆ ಕುಳಿತಿಲ್ಲ.ಭೋಜನ ಶಾಲೆಯಲ್ಲಿ ಊಟಕ್ಕೆ ಕೂತೆ. ಅಲ್ಲಿ ಇತರ ಜಾತಿಯವರಿಗೆ ಊಟದ ವ್ಯವಸ್ಥೆ ಇಲ್ಲ ಎನ್ನುವುದಾದರೆ ಫಲಕ ಹಾಕಬೇಕಿತ್ತು. ತುಂಬಿದ ಊಟದ ಹಾಲಿನಲ್ಲಿ ಎಲ್ಲರ ಮುಂದೆ ನನ್ನನ್ನು ಊಟ ಮಾಡುತ್ತಿರಬೇಕಾದರೆ ಎಬ್ಬಿಸಿ ಹೊರಕ್ಕೆಕಳುಹಿಸಿದರು. ಸ್ನೇಹಿತೆಯರ ಮುಂದೆ ನನಗೆ ತುಂಬಾ ಅವಮಾನವಾಗಿದೆ.ನನಗಾದ ಪರಿಸ್ಥಿತಿ ಬೇರೆಯಾರಿಗೂ ಬರುವುದು ಬೇಡ “

ಇದು,ಉಡುಪಿಯ ಶ್ರೀಕೃಷ್ಣ ದೇವಸ್ಥಾನದ ಭೋಜನಶಾಲೆಯಿಂದ “ಅನಾಗರೀಕ”ರ ಕೈಯ್ಯಿಂದ ಹೊರಹಾಕಲ್ಪಟ್ಟ ಹೆಣ್ಣು ಮಗಳೊಬ್ಬಳ ನೋವಿನ ನುಡಿಗಳು.

ಈಗೀನ ಕಾಲದಲ್ಲೂ ಊಟಕ್ಕೆ ಕೂತವರನ್ನು ಅವರ ಚರ್ಮದ / ಜಾತಿಯ ಬಣ್ಣದಿಂದ ಗುರುತಿಸಿ ಎಬ್ಬಿಸುವ ಅನಾಗರೀಕರು ನಮ್ಮ ನಡುವೆ ಬದುಕುತಿದ್ದಾರೆ ಅನ್ನುವುದೇ ನಾಗರೀಕ ಸಮಾಜವೊಂದುತಲೆ ತಗ್ಗಿಸುವ ವಿಚಾರ. ಊಟದ ಸಮಯದಲ್ಲಿ ಮಾತ್ರ ಬೇರೆ ಜಾತಿಯವರು ಬೇಡ ಅನ್ನುವುದಾದರೇ,ಬೇರೆ ಜಾತಿಯವರು ಕೊಡುವ ದೇಣಿಗೆ,ಕಾಣಿಕೆಗಳೇಕೆ ಬೇಕು ಇವರಿಗೆ? ಪರಮಾತ್ಮ ಶ್ರೀ ಕೃಷ್ಣ ಇವರ ಖಾಸಗಿ ಸ್ವತ್ತಾದರೇ, ಹಾಗೆ ಹೇಳಿ ಬಿಡುವುದೊಳಿತು. ಆಗ ಯಾರು ಅಲ್ಲಿಗೆ ಹೋಗಿ ಹೀಗೆ ಅವಮಾನ ಮಾಡಿಸಿಕೊಂಡು ಬರಲಿಚ್ಛಿಸುವುದಿಲ್ಲ.

–*–*–*–

ಈ ಪ್ರತ್ಯೇಕ ಪಂಕ್ತಿ ಭೋಜನದ ಬಗ್ಗೆ ಬರೆಯುವ ಮೊದಲಿಗೆ ನಾನು ಒಂದು ಮಾತು ಸ್ಪಷ್ಟಪಡಿಸಿ ಮುಂದಡಿಯಿಡುತ್ತೇನೆ. ಪ್ರತ್ಯೇಕ ಪಂಕ್ತಿ ಭೋಜನವನ್ನು ವಿರೋಧಿಸಿ ಈ ಮೊದಲು ಬರೆದಿದ್ದೇನೆ, ಮುಂದಕ್ಕೂ ಬರೆಯುತ್ತಿರುತ್ತೇನೆ. ಸಾರ್ವಜನಿಕ ಸ್ಥಳಗಳಲ್ಲೂ ಕನಿಷ್ ಟಜೊತೆಗೆ ಕೂತು ಊಟ ಮಾಡಲಾಗದವರು ‘ಏಕತೆ’ ಅಂತೆಲ್ಲ ಹರಿಕತೆ ಹೇಳಬಾರದು ಅನ್ನುವ ನನ್ನ ನಿಲುವಿನಲ್ಲೂ ಯಾವುದೇ ಬದಲಿಲ್ಲ.

ಆದರೆ,ನಾನಿದನ್ನು ನಮ್ಮ ಕಮ್ಯುನಿಸ್ಟ್,ಸೆಕ್ಯುಲರ್,ಪ್ರಗತಿಪರರ ರೀತಿಯಲ್ಲಿ ವಿರೋಧಿಸುವುದಿಲ್ಲ. ಏಕೆಂದರೆ, “ಆನುದೇವಾ ಹೊರಗಣವನು ಸೆಕ್ಯುಲರಿಸಂ”ನಿಂದ.

ಪ್ರತ್ಯೇಕ ಪಂಕ್ತಿ ಭೋಜನವೆನ್ನುವುದು ಕರ್ನಾಟಕದಲ್ಲಿ ಕೇವಲ ಉಡುಪಿ ಮಠದಲ್ಲಿ ಮಾತ್ರವಿಲ್ಲ.ರಾಜ್ಯದ ಇತರೆ ಪ್ರಖ್ಯಾತ ತೀರ್ಥಕ್ಷೇತ್ರಗಳಲ್ಲೂ ಇದು ನಡೆಯುತ್ತಲೇ ಇದೆ.ಆದರೆ, ನಮ್ಮಸೆಕ್ಯುಲರಿಸ್ಟರ ಮತ್ತು ಕಮ್ಯುನಿಸ್ಟರ ಕಣ್ಣು ಮಾತ್ರ ಯಾವಾಗಲು ಉಡುಪಿಯ ಮೇಲೆಯೇ ಬೀಳುತ್ತದೆ. ಅದೇನು ಪೇಜಾವರಶ್ರೀಗಳ ಮೇಲಿನ ವಿಶೇಷ ಮಮಕಾರದಿಂದ ಅವರ ಕಣ್ಣು ಉಡುಪಿಯ ಮೇಲಿರುತ್ತದೆಯೋ ಅಥವಾ ಇನ್ನೇನೋ ಗೊತ್ತಿಲ್ಲ.

ಪ್ರಗತಿ ಪರರು ಎಂದು ಕರೆಸಿಕೊಳ್ಳುವವರ ಗುರಿ ಪ್ರತ್ಯೇಕ ಪಂಕ್ತಿ ಭೋಜನವನ್ನು ಕೊನೆಗಾಣಿಸುವುದರ ಮೇಲೆ ಮಾತ್ರವೇ ಆಗಿದ್ದರೆ, ಇಡೀ ರಾಜ್ಯದ ಅಷ್ಟೂ ದೇವಸ್ಥಾನಗಳ ಬಗ್ಗೆ ಮಾತನಾಡ ಬೇಕಾಗುತ್ತದೆಯೇ ಹೊರತು ಕೇವಲ ಉಡುಪಿ ಮಠದ ಮೇಲೆ ಮಾತ್ರವಲ್ಲ. ಹಾಗೆಯೇ. ಪೇಜಾವರರನ್ನು, ಬ್ರಾಹ್ಮಣರನ್ನು ಮತ್ತು ಸೆಕ್ಯುಲರ್ ಡಿಕ್ಷನರಿಯ ಅರ್ಥವಿಲ್ಲದ ವಿಕೃತ ಪದವಾದ “ಬ್ರಾಹ್ಮಣ್ಯ”ವನ್ನು ಬಯ್ಯುತ್ತ  ಕೂರುವುದರಿಂದ ಪತ್ರಿಕೆಗಳಲ್ಲಿ ಸುದ್ದಿಯಾಗಿ ಸದ್ದು ಮಾಡಬಹುದೇ ಹೊರತು ಪರಿಹಾರವೂ ದೊರಕುವುದಿಲ್ಲ. ಹೀಗೆ ಮಾಡುವುದರಿಂದ ಚರ್ಚೆಯ ಹಾದಿಯನ್ನುತಪ್ಪಿಸಿ,ಸಮಸ್ಯೆಯನ್ನು ಜೀವಂತವಾಗಿಡಬಹುದಷ್ಟೇ. ಸುದ್ದಿಯಾಗುವುದಕ್ಕಿಂತ ಸಮಸ್ಯೆಗಳು ಪರಿಹಾರವಾಗುವುದು ಮುಖ್ಯವಲ್ಲವೇ? ಹಾಗಾಗಿಯೇ ನಾನು ಈ ಸೆಕ್ಯುಲರ್/ ಕಮ್ಯುನಿಸ್ಟ್ /ಪ್ರಗತಿಪರರ ಪೈಕಿಯಲ್ಲ ಅಂತ ಹೇಳಿದ್ದು.

‘ನಾನು ಸೆಕ್ಯುಲರ್ ಅಲ್ಲ’ ಅನ್ನಲಿಕ್ಕೆ ಇನ್ನೊಂದು ಕಾರಣವಿದೆ. ಅದೇನೇಂದರೆ, ನಮ್ಮಲ್ಲಿ ಕೆಲವರು ನಾವು ಪಂಕ್ತಿಬೇಧ ಇತ್ಯಾದಿ ನಮ್ಮ ಸಂಪ್ರದಾಯದ ಆಚರಣೆಗಳ ಬಗ್ಗೆ ಪ್ರಶ್ನಿಸಿದಾಗ “ನಿಮಗೇ ಬೇರೆ ಧರ್ಮದ ಅನಿಷ್ಟಗಳು ಕಣ್ಣಿಗೆ ಕಾಣಿಸುವುದಿಲ್ವಾ ಎನ್ನುತ್ತ ಚರ್ಚೆಯ ಹಾದಿ ತಪ್ಪಿಸುತ್ತಾರೆ!”.ನಾನು ಸೆಕ್ಯುಲರ್ ಅಲ್ಲವಾದ್ದರಿಂದ ನನಗೆ ಈ ಪ್ರಶ್ನೆಗಳನ್ನು ಕೇಳಬೇಡಿ.ಸಾಂಪ್ರದಾಯಿಕವಾಗಿ ನಾನೊಬ್ಬ ಹಿಂದೂವಾಗಿ, ನನ್ನ ಸಮಾಜದ ಸಂಪ್ರದಾಯಗಳಿಂದ ಸಮಸ್ಯೆಗಳಾದಾಗ ದನಿಯೆತ್ತುವುದು ನನ್ನ ಕರ್ತ್ಯವ್ಯವೆಂದು ಭಾವಿಸುತ್ತೇನೆ.

ಹಾಗೆಯೇ, ಇಂತಹ ಘಟನೆಗಳಿಗೆ ಬ್ರಾಹ್ಮಣ ವರ್ಗವನ್ನೇ ಸಂಪೂರ್ಣವಾಗಿ ಆರೋಪಿಯ ಸ್ಥಾನದಲ್ಲಿ ನಿಲ್ಲಿಸಿಬೊಬ್ಬೆ ಹಾಕುವುದು ಸಹ ಅಷ್ಟೇ ಹೀನ ಕೃತ್ಯ. ಪ್ರತ್ಯೇಕ ಪಂಕ್ತಿ ಭೋಜನವನ್ನು ಧಿಕ್ಕರಿಸಿ ಎಲ್ಲರ ಜೊತೆ ಊಟಮಾಡುವ, ಇಂತಹ  ಘಟನೆಗಳಿಂದ ತೀರ ನೊಂದುಕೊಳ್ಳುವ ಸಹೃದಯಿಗಳು ಸಹ ನಮ್ಮಜೊತೆಗಿದ್ದಾರೆ.

ಇನ್ನು, ಈ ವಿವಾದದಲ್ಲಿ ಬೇಡವೆಂದರೂ ಕೇಳಿಬರುವುದು ಪೇಜಾವರ ಶ್ರೀಗಳ ಹೆಸರು. ಯಾಕೆಂದರೆ ಉಡುಪಿಯ ಅಷ್ಟ ಮಠಗಳ ಪೈಕಿ ಉತ್ತರದಾಯಿ ಅಂತ ನಮಗೆಕಾಣಿಸುವುದು ಹಿರಿಯ ಶ್ರೀಗಳಾದ ಪೇಜಾವರರೇ.ಒಂದೆಡೆ ಶ್ರೀಗಳು ದಲಿತರ ಕೇರಿಯಲ್ಲಿ ಪಾದಯಾತ್ರೆ ಮಾಡುತ್ತಾರೆ. ಆಮೇಲೆ ಅದೇನೋ ದೀಕ್ಷೆ ಕೊಡುತ್ತೇನೆ ಅಂತೆಲ್ಲ ವಿವಾದವೆಬ್ಬಿಸುತ್ತಾರೆ. ಒಟ್ಟಾರೆಯಾಗಿ ಶ್ರೀಗಳು ಹಿಂದೂಧರ್ಮದ ಸುಧಾರಣೆಗೆ ಹೊರಟು ನಿಲ್ಲುತ್ತಾರೆ.ಒಳ್ಳೆಯ ಕೆಲಸ ಯಾರು ಮಾಡಿದರೇನು, ಅದನ್ನು ಸ್ವಾಗತಿಸೋಣ. ಆದರೆ, ವೈರುಧ್ಯ ನೋಡಿ ,ಅಸ್ಪೃಷ್ಯತೆಯನ್ನು ಒಂದು ಸಮಸ್ಯೆಯೆನ್ನುವಂತೆ ನೋಡುವ, ಹಿಂದೂಧರ್ಮವನ್ನು ಸುಧಾರಣೆ ಮಾಡುತ್ತೇನೆ ಎಂದು ಹೊರಡುವ ಇದೇ ಶ್ರೀಗಳಿಗೆ “ಪ್ರತ್ಯೇಕ ಪಂಕ್ತಿ ಭೋಜನ”ವೆನ್ನುವುದು ಸಮಸ್ಯೆಯಾಗಿ ಕಾಣುವುದಿಲ್ಲ!

ಅಸಮಾನತೆಯನ್ನು ತೊಡೆದು ಹಾಕುವುದೇ ಸಮಾಜ ಸುಧಾರಣೆಯ ಭಾಗವೆಂದು ಶ್ರೀಗಳು ಒಪ್ಪಿಕೊಂಡ ಮೇಲೆ ಪಂಕ್ತಿಬೇಧವನ್ನು ಯಾವ ವಿಧದಲ್ಲಿ ಸಮರ್ಥಿಸಿಕೊಳ್ಳಬಲ್ಲರು? ಅವರ ಪ್ರಕಾರ ಪಂಕ್ತಿ ಬೇಧವು ಸಂಪ್ರದಾಯವೆನಿಸಿಕೊಳ್ಳುತ್ತದೆ.  ಇದು ನಿಜವಾಗಿಯೂ ಪರಸ್ಪರ ವಿರುದ್ಧವಾದ ನಿಲುವಲ್ಲವೇ ಪೇಜಾವರ ಶ್ರೀಗಳೇ? ಈ ಸಾಂಪ್ರಾದಾಯಿಕ ಆಚರಣೆಗಳು ಬದಲಾಗುವುದಿಲ್ಲ ಅನ್ನುವುದಾದರೆ ಯಾವ ಸುಧಾರಣೆಯ ಬಗ್ಗೆ ಶ್ರೀಗಳು ಮಾತನಾಡುತ್ತಾರೆ?

ಪ್ರತ್ಯೇಕ ಪಂಕ್ತಿ ಭೋಜನವನ್ನು ಬೇಕಾದರೆ ಮಠಗಳಲ್ಲಿ ಇಟ್ಟುಕೊಳ್ಳಲಿ. ಶ್ರೀ ಕೃಷ್ಣ ದೇವಸ್ಥಾನದ ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲರಿಗೂ ಒಂದೇ ಪಂಕ್ತಿಯಿರಲಿ. ಕನಿಷ್ಟ ಇಷ್ಟನ್ನೂಮಾಡಲಾಗದಿದ್ದರೆ, ಅಡ್ಡಗೋಡೆಯ ಮೇಲೆ ದೀಪವಿಡುವುದನ್ನು ಶ್ರೀಗಳು ನಿಲ್ಲಿಸುವುದೊಳಿತು.

‘ಪ್ರತ್ಯೇಕ ಪಂಕ್ತಿಯನ್ನು ಸಂಪ್ರದಾಯದ ಹೆಸರಿನಲ್ಲಿ ಬೆಂಬಲಿಸುವವರಿಗೆ, ಸಂಪ್ರದಾಯ ಅನ್ನುವುದು ನಿಮ್ಮ ನಿಮ್ಮ ಮನೆಯಲ್ಲಿರಲಿ ಅದನ್ನು ಸಾರ್ವಜನಿಕ ಸ್ಥಳಗಳಲ್ಲಿ ಬಳಸಬೇಡಿ’ ಅಂತ ಹೇಳಬಯಸುತ್ತೇನೆ. ಊಟಕ್ಕೆ ಕುಳಿತವರನ್ನು ಅವರ ಚರ್ಮದ ಬಣ್ಣದಿಂದ ಗುರುತಿಸಿ ಅರ್ಧಕ್ಕೆಎಬ್ಬಿಸಿ ಅವಮಾನ ಮಾಡುವಂತ “ಅನಾಗರೀಕತೆ”ಯು ಯಾವ ಸೀಮೆಯ “ಸಂಪ್ರದಾಯ”?

ಇಂತಹ ಪರಿಸ್ಥತಿಯನ್ನು ನಿಭಾಯಿಸಲು ಶ್ರೀಗಳು ಈ ಮುಂದಿನ ಕಾರ್ಯದಲ್ಲಿ ತೊಡಗಬೇಕಾಗುತ್ತದೆ.

1. ಮಠಗಳು ಸಾರ್ವಜನಿಕವಲ್ಲ, ಅದು ಕೆಲವು ಸಮುದಾಯಗಳಿಗೆ ಮಾತ್ರ ಸೀಮಿತವಾದುದು ಎಂದು ಘೋಷಿಸಿ, ಮನಸ್ಸಿಗೆ ಬಂದಂತಹ ಆಚರಣೆಗಳನ್ನು ಆಂತರಿಕವಾಗಿ ಮಾಡುವುದು.

2.ಹಿಂದೂಧರ್ಮದ ಸುಧಾರಣೆ ಆಗಬೇಕು ಎಂದು ಓಡಾಡುವುದು ಮುಖ್ಯವಾದರೆ, ಪಂಕ್ತಿ ಬೇಧವನ್ನುನಿಲ್ಲಿಸಬೇಕು, ಆಗ ಅವರ ಸುಧಾರಣೆಯ ಭಾಗವಾಗಿ ಪಂಕ್ತಿಬೇಧದ ನಿಷೇಧವೇ ಆದರ್ಶಪ್ರಾಯವಾಗಿಗೋಚರಿಸುತ್ತದೆ.

3.ನಮ್ಮ ಸಂಪ್ರದಾಯವೇ ಮುಖ್ಯ. ಸಮಾಜ ಸುಧಾರಣೆ ಮುಖ್ಯವಲ್ಲ ಎಂದು ತೀರ್ಮಾನಿಸಿ ಸುಧಾರಣಾ ಕಾರ್ಯಕ್ರಮಗಳಿಗೆ ತಿಲಾಂಜಲಿಯನ್ನು ಬಿಡಬೇಕು.

ಈ ಮೂರರಲ್ಲಿ ಒಂದನ್ನು ಆಯ್ಕೆ ಮಾಡದ ಹೊರತು ವಿವಾದಗಳಿಂದ ಮತ್ತು ವೈರುಧ್ಯತೆಗಳಿಂದ ಅವರು ಹೊರಬರಲು ಸಾಧ್ಯವಿಲ್ಲ. ಇದು ಹೀಗೆ ಮುಂದುವರಿದರೆ ತಮ್ಮ ಸಂಪ್ರದಾಯವನ್ನು ಸಮರ್ಥಿಸಲಾಗದ ಮತ್ತು ಸಮಾಜವನ್ನೂ ಸುಧಾರಣೆ ಮಾಡಲಾಗದ ಅಸಹಾಯಕ ಸ್ಥಿತಿಯನ್ನು ಎದುರಿಸಬೇಕಾಗುತ್ತದೆ.

ಸಂಪ್ರದಾಯದ ಹೆಸರಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಅವರ ಮಠದ ಸಿಬ್ಬಂದ್ದಿಯೊಬ್ಬ ಅನಾಗರೀಕವಾಗಿ ವರ್ತಿಸಿದಾಗ ಅದಕ್ಕೆ ಖೇದವನ್ನು ವ್ಯಕ್ತಪಡಿಸುತ್ತಾರೆಯೇ ಹೊರತು,ಸಾರ್ವಜನಿಕ ಸ್ಥಳಗಳಿಂದ ತಮ್ಮ “ಸಂಪ್ರದಾಯ”ಕ್ಕೆ ಮುಕ್ತಿ ಕೊಡಿಸಿ ಅದನ್ನು ತಮ್ಮ ಒಳಮನೆಗೆ ತೆಗೆದುಕೊಂಡು ಹೋಗುವ ಮಾತನಾಡುವುದಿಲ್ಲ ನೋಡಿ!

ಹಾಗೆಯೇ ಆ ಅನಾಗರೀಕ ಸಿಬ್ಬಂದಿಗೆ ಕನಿಷ್ಟ ಮಟ್ಟದ ಬಿಸಿಯನ್ನಾದರು ಮುಟ್ಟಿಸಿ ಸಭ್ಯತೆಯ ಪಾಠವನ್ನು ಹೇಳಿ ಕೊಡಬಾರದೇ?

ಸಂಪ್ರದಾಯಗಳು ತಪ್ಪಲ್ಲ. ಆದರೆ, ಅದೂ ಕೂಡ ಕಾಲಕ್ಕೆ ತಕ್ಕಂತೆ ಸ್ಥಳ ಮತ್ತು ರೀತಿಗಳನ್ನು ಬದಲಾವಣೆ ಮಾಡಿಕೊಳ್ಳಬೇಕು. ಕನಿಷ್ಠ ಜೊತೆಗೆ ಕೂತು ಊಟ ಮಾಡಲಾಗದಿದ್ದರೆ ಸಮಾನತೆ /ಸಾಮರಸ್ಯ ಅಂತೆಲ್ಲ ಮಾತನಾಡುತ್ತ “ನಾವೆಲ್ಲ ಹಿಂದೂ-ನಾವೆಲ್ಲ ಒಂದು” ಅನ್ನಲೂರದು ಮತ್ತು ಹಾಗೇ ಹೇಳುತ್ತಲೇ ಸಂಪ್ರದಾಯದ ಹೆಸರಲ್ಲಿ “ಹಿಂದೂ”ಗಳನ್ನು “ಹಿಂದ”ಕ್ಕೆ ತಳ್ಳಲೂಬಾರದಲ್ಲವೇ?

90 ಟಿಪ್ಪಣಿಗಳು Post a comment
  1. ಅಜಯ's avatar
    ಅಜಯ
    ಏಪ್ರಿಲ್ 23 2014

    ಕರೆಕ್ಟು. ಆದ್ರೆ ಚರ್ಮದ ಬಣ್ಣ ನೋಡಿ ಎಬ್ಬಿಸಿದರು ಅಂತ ನಂಬಕ್ಕಾಗ್ತಿಲ್ಲ. “ನಾನು ಚೌಕಿಯಲ್ಲಿ (ಬ್ರಾಹ್ಮಣರಿಗಾಗಿರುವ ಊಟದ ಹಾಲ್) ಊಟಕ್ಕೆ ಕುಳಿತಿಲ್ಲ. ಭೋಜನ ಶಾಲೆಯಲ್ಲಿ ಊಟಕ್ಕೆ ಕೂತೆ” ಅಂತ ಹೇಳಿದ್ದಾರೆ. ಭೋಜನಶಾಲೆಯಲ್ಲಿ ಊಟಕ್ಕೆ ಕೂತವರನ್ನು ಯಾರೂ ಜಾತಿ ಕೇಳಿ (ನೋಡಿ) ಎಬ್ಬಿಸುವುದಿಲ್ಲವಲ್ಲ !! ಅಂದಮೇಲೆ ಇವರನ್ನು ಮಾತ್ರ ಏಕೆ ಎಬ್ಬಿಸುತ್ತಾರೆ?! ಇದು ಉಡುಪಿ ಮಠಕ್ಕೆ ಕೆಟ್ಟ ಹೆಸರು ತರಲು ಇವರನ್ನು ಬಳಸಿಕೊಂಡು ನಡೆಸುತ್ತಿರುವ ಹುನ್ನಾರ ಅನ್ನಿಸುತ್ತದೆ.

    ಉತ್ತರ
    • Nagshetty Shetkar's avatar
      Nagshetty Shetkar
      ಏಪ್ರಿಲ್ 23 2014

      ಅನ್ಯಾಯದ ವಿರುದ್ಧ ಹೋರಾಡುವ ಬದಲು ಸಂಚನ್ನು ಹುಡುಕುವ ನೀಚ ಬುದ್ಧಿ ಬಿಡಿ. ಜಾತಿಯ ಕಾರಣದಿಂದ ಆಕೆಯನ್ನು ಊಟದ ಮಧ್ಯದಿಂದ ಎಬ್ಬಿಸಿದ್ದು ನಿಜ ತಾನೇ? ಪಂಕ್ತಿ ಭೋಜನ ಉಡುಪಿ ಮಠದಲ್ಲಿ ನಿತ್ಯದ ಸಂಗತಿ ಅಲ್ಲವೇ?

      ಉತ್ತರ
      • ಅಜಯ's avatar
        ಅಜಯ
        ಏಪ್ರಿಲ್ 24 2014

        ಆಕೆಯನ್ನು ಊಟದ ಮಧ್ಯದಿಂದ ಎಬ್ಬಿಸಿದ್ದು ನಿಜ ತಾನೇ ? ಅಂತ ಕೇಳುತ್ತಿರ. ಯಾರಿಗೆ ಗೊತ್ತು? ನೀವು ಅಲ್ಲಿ ಮುಂಬೈಯಲ್ಲೆಲ್ಲೋ ಓಟು ಕೇಳುತ್ತಿದ್ದೀರಿ. ನಾನು ಬೆಂಗಳೂರಲ್ಲಿದ್ದೇನೆ. ಇಬ್ಬರೂ ಆ ನಿಜ ನೋಡಿಲ್ಲ. ಆದರೆ ಅಲ್ಲಿನ ರೀತಿರಿವಾಜು ಪಾಲಿಸದವರನ್ನು (ಅವರು ಬ್ರಾಹ್ಮಣರೇ ಆಗಿದ್ದರೂ) ಆಚೆಗೆ ಕಳಿಸುತ್ತಾರೆ ಅಂತ ಬಲ್ಲವರು ಹೇಳುತ್ತಾರೆ. ಜಾತಿ ಕಾರಣದಿಂದ ಎಬ್ಬಿಸಿದ್ದಾರೆ ಅಂತ ಆದರೆ ಇವರ ಜಾತಿ ಅವರಿಗೆ ಹೇಗೆ ಗೊತ್ತಾಯಿತು ಅನ್ನುವುದೂ ಮುಖ್ಯ. ಹಾಗಾಗಿ ಸಂಚನ್ನು ಹುಡುಕುವುದು ನೀಚ ಬುದ್ಧಿಯಲ್ಲ.

        ಉತ್ತರ
        • Nagshetty Shetkar's avatar
          Nagshetty Shetkar
          ಏಪ್ರಿಲ್ 24 2014

          “ಯಾರಿಗೆ ಗೊತ್ತು?”

          ಪ್ರತ್ಯಕ್ಷದರ್ಶಿಗಳಿದ್ದಾರೆ. ಅವರನ್ನೇ ವಿಚಾರಿಸಿ.

          “ಜಾತಿ ಕಾರಣದಿಂದ ಎಬ್ಬಿಸಿದ್ದಾರೆ ಅಂತ ಆದರೆ ಇವರ ಜಾತಿ ಅವರಿಗೆ ಹೇಗೆ ಗೊತ್ತಾಯಿತು”

          ಅವಮಾನಿತ ಮಹಿಳೆಯನ್ನೂ ಆಕೆಯ ಜೊತೆಗೆ ಇದ್ದವರನ್ನೂ ಭೋಜನಶಾಲೆಯ ಸಿಬ್ಬಂದಿ ನೀವು ಬ್ರಾಹ್ಮಣರಾ ಅಂತ ಕೇಳಿದ್ದಾರೆ. ಇವರು ಅಲ್ಲ ಅಂತ ಹೇಳಿದ್ದಾರೆ. ಬ್ರಾಹ್ಮಣರಲ್ಲದವರಿಗೆ ಇಲ್ಲಿ ಭೋಜನ ಇಲ್ಲ ಅಂತ ಹೇಳಿ ಸಿಬ್ಬಂದಿ ಮಹಿಳೆಗೆ ಊಟ ಅರ್ಧಕ್ಕೆ ನಿಲ್ಲಿಸಿ ಎಲೆ ಬಿಟ್ಟು ಹೊರಗೆ ಹೋಗಲು ಹೇಳಿದ್ದಾರೆ.

          ಉತ್ತರ
          • ಅಜಯ's avatar
            ಅಜಯ
            ಏಪ್ರಿಲ್ 25 2014

            ಎಲ್ಲಿದ್ದಾರೆ ಪ್ರತ್ಯಕ್ಷದರ್ಶಿಗಳು? ನಿಮ್ಮ ಜೊತೆಯಲ್ಲಾ? ಅಥವಾ ನೀವೇ ಪ್ರತ್ಯಕ್ಷದರ್ಶಿಯಾ? ಕತೆ ಹೇಳುತ್ತಿರುವುದು ನೋಡಿದರೆ ನಿಮ್ಮ ಕಣ್ಣ ಮುಂದೇ ನಡೆದಂತಿದೆ !

            ಉತ್ತರ
  2. SSNK's avatar
    ಏಪ್ರಿಲ್ 23 2014

    ಆ ಮಹಿಳೆ ತಿಳಿಸಿರುವುದು ಸತ್ಯವಾದರೆ, ಇದು ನಿಜಕ್ಕೂ ಅಮಾನವೀಯ ಘಟನೆ.
    ಈ ಪ್ರಸಂಗದ ಕುರಿತಾಗಿ ಪೂಜ್ಯ ಪೇಜಾವರ ಶ್ರೀಗಳನ್ನು ಪ್ರಶ್ನಿಸಬೇಕು. ಆ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆಯೇ?
    ‘ನಿಲುಮೆ’ಯಿಂದ ಏಕೆ ಈ ಪ್ರಯತ್ನ ನಡೆಸಬಾರದು?
    ಮೊದಲಿಗೆ, ಈ ಪ್ರಸಂಗದ ಸತ್ಯಾಸತ್ಯತೆ ತಿಳಿದುಕೊಳ್ಳಬೇಕು. ಈ ಘಟನೆ ನಡೆದದ್ದು ಸತ್ಯವೆಂದು ಖಚಿತವಾದ ನಂತರ, ಪೂಜ್ಯ ಪೇಜಾವರ ಶ್ರೀಗಳನ್ನು ಭೇಟಿ ಮಾಡಿ (ಸಾಧ್ಯವಾದರೆ, ಆ ಮಹಿಳೆಯನ್ನೂ ಜೊತೆಗೆ ಕರೆದೊಯ್ಯಬೇಕು), ಈ ವಿಷಯದ ಕುರಿತಾಗಿ ಅವರ ಸ್ಪಷ್ಟ ಅಭಿಪ್ರಾಯ ಕೇಳಬೇಕು.
    ಅವರು “ಎಲ್ಲಾ ಹಿಂದುಗಳೂ ಒಂದು; ಅಸ್ಪೃಷ್ಯತೆಗೆ ಹಿಂದೂ ಧರ್ಮದಲ್ಲಿ” ಸ್ಥಾನವಿಲ್ಲ ಎನ್ನುವುದಾದರೆ, ಈ ಘಟನೆಯನ್ನು ಯಾವ ರೀತಿ ಸಮರ್ಥಿಸಿಕೊಳ್ಳುತ್ತಾರೆ ನೋಡೋಣ.

    ಉತ್ತರ
  3. Nanjunda Raju's avatar
    ಏಪ್ರಿಲ್ 23 2014

    ಮಾನ್ಯರೇ, ಒಂದು ಊಟಕ್ಕಾಗಿ ವಿವಾದ ಏತಕ್ಕೆ. ಅದಕ್ಕೂ ಮುಖ್ಯವಾಗಿ ಊಟಕ್ಕೆ ಪಂಕ್ತಿಯಲ್ಲಿ ಕುಳಿತು ಮಠದವರಿಂದ ಅವಮಾನಪಡುವುದು ಏಕೆ. ಮನಸ್ಸಿನ ಸಂತೋಷಕ್ಕಾಗಿ ದೇವರ ದರುಶನ ಮಾತ್ರ ಸಾಕು. ಅ ಮಠವೂ ಊಟವೂ ಬೇಡ. ಬಹುತೇಕ ಈ ಪ್ರಪಂಚ ಇರುವ ತನಕ ಪಂಕ್ತಿ ಬೇಧ ಹೋಗುವಂತೆ ಕಾಣುವುದಿಲ್ಲ. ನಾವೇ ಸ್ವಯಂ ನಿಯಂತ್ರಣ ಮಾಡಿಕೊಂಡು ಊಟಕ್ಕೆ ಬಹಿಸ್ಕಾರ ಹಾಕುವುದು ಒಳಿತು. ಜಾತಿಬೇಧ ಬೇಡವೆಂದು ಹೇಳಿದ ಕನಕದಾಸರೆ ಇನ್ನೂ ದೇವಸ್ತಾನದ ಹೊರಗೆ ನಿಂತಿದ್ದಾರೆ. ಇನ್ನು ನಮ್ಮದೇನು ಮಹಾ!

    ಉತ್ತರ
  4. Universal's avatar
    Universal
    ಏಪ್ರಿಲ್ 23 2014

    ಆಕೆ ಮಠಕ್ಕೆ ಊಟಕ್ಕೆ ಹೋಗಿದ್ದೇ ಮೊದಲ ತಪ್ಪು. ಹೋದ ಮೇಲೆ ‘Be a Roman while u r in Rome’ ಅಂದಂತೆ ಸ್ಥಳ ಮರ್ಯಾದೆಗೆ ಹೊಂದಿಕೊಳ್ಳಬೇಕು. ಅವಮಾನವಾಯಿತು ಎಂದು ಅಳುವುದರಿಂದ ಉಪಯೋಗವೇನು? ಅದರ ಬದಲಿಗೆ ಅಂತಹ ಕಾರ್ಯಕ್ರಮಗಳನ್ನು ಬಹಿಷ್ಕರಿಸುವುದೇ ಸರಿ.

    ಉತ್ತರ
  5. Nagshetty Shetkar's avatar
    Nagshetty Shetkar
    ಏಪ್ರಿಲ್ 23 2014

    ತಕ್ಷಣವೇ ಉಡುಪಿ ಕೃಷ್ಣದೇವಾಲಯವನ್ನು ಮುಜರಾಯಿ ಇಲಾಖೆ ತನ್ನ ಸ್ವಾಮ್ಯಕ್ಕೆ ಒಳಪಡಿಸಬೇಕು ಹಾಗೂ ಈಗ ಇರುವ ಅಷ್ಠ ಮಠಾಧೀಶರನ್ನು ಮನೆಗೆ ಕಳುಹಿಸಬೇಕು.

    ಉತ್ತರ
    • Nagshetty Shetkar's avatar
      Nagshetty Shetkar
      ಏಪ್ರಿಲ್ 23 2014

      “ಈಗ ಇರುವ ಅಷ್ಠ ಮಠಾಧೀಶರನ್ನು ಮನೆಗೆ ಕಳುಹಿಸಬೇಕು.”

      ತಿದ್ದುಪಡಿ: ಕೃಷ್ಣನ ಜನ್ಮಸ್ಥಳಕ್ಕೆ ಕಳುಹಿಸಬೇಕು.

      ಉತ್ತರ
      • Universal's avatar
        Universal
        ಏಪ್ರಿಲ್ 23 2014

        ಎಲ್ಲಾ ಮಠಗಳನ್ನೂ, ಮಸೀದಿಗಳನ್ನೂ, ಚರ್ಚುಗಳನ್ನೂ ಸರ್ಕಾರದ ವಷಕ್ಕೆ ತೆಗೆದುಕೊಳ್ಳಬೇಕು.

        ಉತ್ತರ
      • ವಿಜಯ್ ಪೈ's avatar
        ವಿಜಯ್ ಪೈ
        ಏಪ್ರಿಲ್ 24 2014

        ಈ ಎಡಬಿಡಂಗಿ ಗಂಜಿಗಿರಾಕಿಗಳೆಲ್ಲವನ್ನೂ ಅರಬ್ಬಿ ಸಮುದ್ರಕ್ಕೆ ಎಸೆಯಬೇಕು..ಅದೂ ಬೆನ್ನಿಗೆ ೫೦ ಕೆಜಿಯ ಕಲ್ಲು ಕಟ್ಟಿ…ಮುಳುಗುವುದನ್ನು ಖಾತ್ರಿ ಮಾಡಿಕೊಳ್ಳಲು!.

        ಉತ್ತರ
  6. anamika's avatar
    anamika
    ಏಪ್ರಿಲ್ 23 2014

    ಉಡುಪಿಯಲ್ಲಿ ಏನೇ ನಡೆದರೂ ಅದಕ್ಕೆ ಪೇಜಾವರ ಶ್ರೀಗಳವರನ್ನು
    ಹೊಣೆಮಾಡುವು ರೂಢಿಯಾಗಿಬಿಟ್ಟಿದೆ. ಪೇಜಾವರ ಸ್ವಾಮಿಗಳು
    ಉಡುಪಿ ಅಷ್ಟಮಠಗಳಲ್ಲಿ ಒಂದಾದ ಪೇಜಾವರ ಮಠದ ಅಧಿಪತಿಗಳು.
    ಅವರಂತೆಯೇ ಇನ್ನೂ ಎಳುಮಂದಿ ಸ್ವಾಮಿಗಳು ಉಡುಪಿಯಲ್ಲಿದ್ದಾರೆ.
    ಹಾಗಾಗಿ ಪೇಜಾವರರ ತೀರ್ಮಾನದಂತೆಯೇ ಉಡುಪಿಯಲ್ಲಿ ಎಲ್ಲವೂ
    ನಡೆಯುವುದಿಲ್ಲ. ಉಳಿದ ಏಳು ಮಠಗಳು ಪೇಜಾವರ ಮಠಕ್ಕೆ ಅಧೀನವಾಗಿ
    ನಡೆದುಕೊಳ್ಳುವುದಿಲ್ಲ. ಟೀಕೆ ಮಾಡುವಾಗ ಟೀಕಾಕಾರರು ಈ ವಿಷಯವನ್ನು
    ನೆನಪಿನಲ್ಲಿಟ್ಟುಕೊಳ್ಳಬೇಕು…..

    ಉತ್ತರ
    • Universal's avatar
      Universal
      ಏಪ್ರಿಲ್ 23 2014

      ಪೇಜಾವರ ಶ್ರೀಗಳವರನ್ನೊಬ್ಬರನ್ನೇ ಗುರಿಯಾಗಿಟ್ಟುಕೊಂಡು ಮನಸ್ಸಿಗೆ ಬಂದಂತೆ ಬರೆಯುವುದು ವಿವೇಕಿಗಳ ಲಕ್ಷಣವಲ್ಲ.

      ಉತ್ತರ
      • ರಾಕೇಶ್ ಶೆಟ್ಟಿ's avatar
        ಏಪ್ರಿಲ್ 23 2014

        ಪೇಜಾವರರನ್ನೇ ಯಾಕೆ ಕೇಳಬೇಕು ಅನ್ನುವುದಕ್ಕೆ ಲೇಖನದಲ್ಲೇ ಉತ್ತರವಿದೆ.ಓದಿಕೊಳ್ಳಿ

        ಉತ್ತರ
  7. Nagshetty Shetkar's avatar
    Nagshetty Shetkar
    ಏಪ್ರಿಲ್ 23 2014

    “ಕೃಷ್ಣ ಮಠದ ಭೋಜನ ಶಾಲೆಯಲ್ಲಿ ಶನಿವಾರ (ಏ 19) ಬಂಟ್ಸ್ ಸಮುದಾಯದ ಮಹಿಳೆಯೊಬ್ಬರು ತನ್ನ ಸ್ನೇಹಿತೆಯರ ಜೊತೆ ಊಟಕ್ಕೆ ಕುಳಿತಿದ್ದರು.”

    ಬಂಟ ಸಮುದಾಯದವರೇ ಆದ ರಾಕೇಶ್ ಶೆಟ್ಟಿಯವರು ಸ್ವಜಾತಿಯ ಮಹಿಳೆಗೆ ಉಡುಪಿ ಮಠದಲ್ಲಿ ಆದ ಅವಮಾನದ ಬಗ್ಗೆ ಆಕ್ರೋಶ ಹಾಗೂ ಕಾಳಜಿ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಬಂಟ ಸಮುದಾಯದ ಮಹಿಳೆಯ ಜಾಗದಲ್ಲಿ ದಲಿತ ಮಹಿಳೆ ಇದ್ದಿದ್ದರೆ ಶೆಟ್ಟರು ಈ ಲೇಖನ ಬರೆಯುತ್ತಿದ್ದರೇನು??? ವೈದಿಕಶಾಹಿಯಿಂದ ಸಹಸ್ರಾರು ವರ್ಷಗಳ ಕಾಲ ನಿರಂತರವಾಗಿ ಅವಮಾನಿತರಾದ ಜನಸಮುದಾಯಗಳ ನೋವಿಗೆ ಧ್ವನಿಯಾಗದೆ ಸ್ವಜಾತಿ ಬಾಂಧವರ ನೋವುಗಳಿಗೆ ಧ್ವನಿಯಾಗುವುದೂ ಜಾತೀಯತೆಯಲ್ಲವೇ ಮಿ. ಶೆಟ್ಟಿ?

    ಉತ್ತರ
    • ರಾಕೇಶ್ ಶೆಟ್ಟಿ's avatar
      ಏಪ್ರಿಲ್ 23 2014

      ತಮ್ಮನ್ನು ತಾವು ಶರಣರೆಂದುಕೊಳ್ಳುವ ಶೆಟ್ಕರ್ ಮಹಾಶಯರೇ ತಮ್ಮ ಯೋಚನಾಲಹರಿ ಎಷ್ಟು ಕೀಳು ಮಟ್ಟದ್ದು ಎನ್ನಲಿಕ್ಕೆ ನಿಮ್ಮ ಮೇಲಿನ ಕಮೆಂಟೇ ಸಾಕ್ಷಿಯಾಗಿದೆ.ಈ ರೀತಿ ಯೋಚಿಸಲಿಕ್ಕೆ ತಮಗೆ ನಾಚಿಕೆಯೆನಿಸುವುದಿಲ್ಲವೇ? ನೀವ್ಯಾವ ಸೀಮೆಯ ಜಾತ್ಯಾತೀತರು?

      ಉತ್ತರ
      • Nagshetty Shetkar's avatar
        Nagshetty Shetkar
        ಏಪ್ರಿಲ್ 23 2014

        ನಾನು ಯಾವ ಸೀಮೆಯ ಜಾತ್ಯತೀತ ಅಂತ ತಮಗೆ ಗೊತ್ತೇ ಇದೆ ಮಿ. ಶೆಟ್ಟಿ. ಆದರೆ ಈಗ ನಾನು ನನ್ನ ಸೀಮೆಯಲ್ಲಿಲ್ಲ. ಮುಂಬೈಯಲ್ಲಿ ಮೇಧಾ ಪಾಟ್ಕರ್ ಅವರ ಪರ ಮತ ಯಾಚಿಸುವ ಕಾಯಕದಲ್ಲಿ ನಿರತನಾಗಿದ್ದೇನೆ. ವೋಟು ಕೇಳಲು ಮತದಾರರ ಜಾತಿ ನೋಡಿ ಹೋಗುತ್ತಿಲ್ಲ.

        ಅಲ್ಲಿ ವರ್ತಮಾನ ಸೈಟಿನಲ್ಲಿ ನಿಮ್ಮ ವಿಜಯ್ ಪೈ ಅವರಿಗೆ ಸಲಾಂ ಬಾವ ಸರಿಯಾಗಿ ಜಾಡಿಸಿದ್ದಾರೆ. ಸದ್ಯಕ್ಕೆ ನಾನು ಮುಂಬೈಯಲ್ಲಿ ಬಿಸಿ ಆಗಿರುವುದರಿಂದ ನಿಲುಮೆಯ ವೈದಿಕ ವೈರಸುಗಳಿಗೆ ಮದ್ದು ಕೊಡಿ ಅಂತ ಬಾವ ಅವರಿಗೆ ಹೇಳಿದ್ದೇನೆ.

        ಉತ್ತರ
        • ರಾಕೇಶ್ ಶೆಟ್ಟಿ's avatar
          ಏಪ್ರಿಲ್ 24 2014

          ಸದಾಕಾಲ ಜಾತಿ ಲೆಕ್ಕಾಚಾರದಲ್ಲೇ ಪ್ರತಿಯೊಂದನ್ನು ಲೆಕ್ಕಹಾಕುವ ನಿಮ್ಮ ಜಾತ್ಯಾತೀತರ ಬಂಡವಾಳ ನಮಗೆ ಗೊತ್ತಿದೆ ಶೆಟ್ಕರ್ ಅವರೇ.ಅದೇ ಲೆಕ್ಕಾಚಾರವೇ ತಮಗೆ ಆ ಹೆಣ್ಣು ಮಗಳ ಜಾತಿಯನ್ನು ಮೊದಲು ನೋಡುವಂತೆ ಮಾಡಿತೇ ಹೊರತು ಆಕೆಯ ನೋವನ್ನಲ್ಲ,ಹಾಗೆಯೇ ನೋವಿದೆ ಅಕ್ಷರವಾದ ನನ್ನ ಮಾತಿಗಿಂತ ನನ್ನ ಜಾತಿಯೇ ತಮಗೆ ಮುಖ್ಯವಾಯಿತು.

          ಉತ್ತರ
          • Nagshetty Shetkar's avatar
            Nagshetty Shetkar
            ಏಪ್ರಿಲ್ 24 2014

            ನೀವು ನಿಜಕ್ಕೂ ಜಾತ್ಯತೀತರೇ ಆಗಿದ್ದರೆ ಬಂಟ್ಸ್ ಸಮುದಾಯದ ಮಹಿಳೆ ಎಂದೇಕೆ ಬರೆಯುತ್ತಿದ್ದೀರಿ? ಬ್ರಾಹ್ಮಣೇತರ ಮಹಿಳೆ ಎಂದು ಬರೆಯಬೇಕಿತ್ತಲ್ಲ!

            ವೈದಿಕಶಾಹಿಯಿಂದ ಬಂಟ ಸಮುದಾಯದವರಿಗೆ ಆದ ಅನ್ಯಾಯ ಮಾತ್ರ ಅನ್ಯಾಯ ಮಿಕ್ಕವರದ್ದು ಅಲ್ಲ ಎಂಬ ಧೋರಣೆ ಜಾತ್ಯತೀತವೇ ಮಿ. ರಾಕೇಶ್?

            ಉತ್ತರ
            • ರಾಕೇಶ್ ಶೆಟ್ಟಿ's avatar
              ಏಪ್ರಿಲ್ 24 2014

              ಅಲ್ರೀ ಶೆಟ್ಕರ್ ಅವರೇ, ನನ್ನ ಲೇಖನದಲ್ಲಿ ಮುಖಕ್ಕೆ ಹೊಡೆದಂತೆ ಹೇಳಿದ್ದೇನೆ ನಾನು ಜಾತ್ಯಾತೀತನೂ ಅಲ್ಲ,ಸೆಕ್ಯುಲರ್ ಅಲ್ಲ ಮತ್ತು ಕಮ್ಯುನಿಸ್ಟನು ಅಲ್ಲ ಅಂತ. ಇಲ್ಲಿ ಜಾತಿ ಲೆಕ್ಕಾಚಾರ ಹಾಕುತ್ತಿರುವ “ಜಾತ್ಯಾತೀತ” ಯಾರು ಅನ್ನುವುದು ನಿಲುಮೆಯ ಓದುಗರಿಗೆ ಗೊತ್ತಾಗುತ್ತಿದೆ ಬಿಡಿ.ನನ್ನ ಜಾತಿಯ ಹೆಸರೇಳಲು ನನಗೇನು ಮುಜಗರವಾಗುವುದಿಲ್ಲ

              ನೀವು ಉಲ್ಲೇಖಿಸಿರುವ ಆ ಸಾಲು ದಟ್ಸ್ ಕನ್ನಡದ ಸುದ್ದಿಯ ಸಾಲು. ನಾಯಿಯನ್ನು ಬಿಟ್ಟು ಬಾಲ್ ಹಿಡಿದು ಬೊಬ್ಬೆ ಹಾಕುವ ನಿಮ್ಮ ಸೆಕ್ಯುಲರ್/ಕಮ್ಯುನಿಸ್ಟ್ ಚಾಳಿ ಬಿಟ್ಟು ಮೂಲ ಸಮಸ್ಯೆಯ ಬಗ್ಗೆ ಏನಾದರೂ ಹೇಳುವುದಿದ್ದರೆ ಹೇಳಿ.

              ಉತ್ತರ
              • Nagshetty Shetkar's avatar
                Nagshetty Shetkar
                ಏಪ್ರಿಲ್ 24 2014

                ನಿಮ್ಮ ಮಾನವೀಯ ಕಾಳಜಿಗಳೆಲ್ಲ ಬಂಟ್ಸ್ ಸಮುದಾಯದವರಿಗೆ ಮಾತ್ರ ಮೀಸಲು! ಅಂತೂ ನಿಮ್ಮ ಜಾತಿವಾದ ಬಯಲಾಯಿತು ಶೆಟ್ಟರೆ!

                ಉತ್ತರ
                • ರಾಕೇಶ್ ಶೆಟ್ಟಿ's avatar
                  ಏಪ್ರಿಲ್ 25 2014

                  ಹೀಗೆ ಬಣ್ಣ ಬಣ್ಣದ, ಕಣ್ಣೀರು ಸುರಿಸಿವ,ಕರುಳು ಹಿಂಡುವ ಕತೆಗಳನ್ನು ಕಟ್ಟಿ ಸಮಸ್ಯೆಗಳನ್ನು ಶಾಶ್ವತವಾಗಿಸಿ ಅದರಿಂದ ತಮ್ಮ ಹೊಟ್ಟೆಹೊರೆದುಕೊಳ್ಳುವಂತ ’ಮಾನವೀಯ ಮುಖವಾಡ’ ನನಗೆ ಬೇಕಿಲ್ಲ. ಅಂತ ದುರ್ಗತಿ ನನಗಿನ್ನೂ ಬಂದಿಲ್ಲ.ಸೋ-ಕಾಲ್ಡ್ ಮಾನವೀಯ ಕಾಳಜಿಯೂ ತಮ್ಮ ಬಳಗದ ಗುತ್ತಿಗೆಯೇ ಆಗಿರಲಿ ಶೆಟ್ಕರ್ ಅವರೇ.

                  ಈಗಲಾದರೂ ವಿಷಯದ ಬಗ್ಗೆ ಏನಾದರೂ ಮಾತನಾಡುವುದಿದ್ದರೆ ಹೇಳಿ

                  ಉತ್ತರ
        • SSNK's avatar
          ಏಪ್ರಿಲ್ 24 2014

          [[ವೈದಿಕ ವೈರಸುಗಳಿಗೆ]]

          ಹೇತ್ಕರ್…..!?

          ಉತ್ತರ
          • Nagshetty Shetkar's avatar
            Nagshetty Shetkar
            ಏಪ್ರಿಲ್ 24 2014

            ಸಲಾಂ ಬಾವ ನಿಲುಮೆಗೆ ಬರಲಿದ್ದಾರೆ. ನಿಮಗೂ ಚೆನ್ನಾಗಿ ಜಾಡಿಸುತ್ತಾರೆ. ಆಗ ಹೇತುಕೊಳ್ಳುವವರು ಯಾರು ಅಂತ ಎಲ್ಲರಿಗೂ ಗೊತ್ತಾಗುತ್ತದೆ.

            ಉತ್ತರ
            • ವಿಜಯ್ ಪೈ's avatar
              ವಿಜಯ್ ಪೈ
              ಏಪ್ರಿಲ್ 24 2014

              ಅದ್ಯಾರೊ ಬಾವಗೆ ಈ ಶೆಟ್ಕರ್ (?) ಅಹ್ವಾನ ನೋಡಿ..ವರ್ತಮಾನ ಬ್ಲಾಗ್ ನಲ್ಲಿ.

              “ಖುದಾ ಹಾಫೆಜ್ ಸಲಾಂ ಬಾವ ಭಾಯಿ! ನೀವು ಕೆಂಡಸಂಪಿಗೆಯಲ್ಲಿ ಬಹಳ ಪ್ರಬುದ್ಧ ಕಮೆಂಟ್ಸ್ ಮಾಡುತ್ತಿದ್ದದ್ದು ನನಗೆ ಇಂದೂ ನೆನಪಿದೆ. ನೀವು ನಿಲುಮೆ ತಾಣಕ್ಕೆ ಬಂದು ಕಮೆಂಟ್ಸ್ ಮಾಡಬೇಕು. ಏಕೆಂದರೆ ಅಲ್ಲಿ ನಾನೊಬ್ಬನೇ ಬಲಪಂಥೀಯರನ್ನು ಎದುರಿಸಿ ವಿವೇಕ ಹುಟ್ಟಿಸುವ ಕೆಲಸ ಮಾಡುತ್ತಿದ್ದೇನೆ. ನಿಮ್ಮಂತಹ ವಿವೇಕಿಗಳು ಸಹಾಯ ಮಾಡಿದರೆ ಬಲಪಂಥೀಯ ವಾದವನ್ನು ಹತ್ತಿಕ್ಕಲು ಸಾಧ್ಯವಾಗುತ್ತದೆ.”

              ಅದಕ್ಕೆ ಬಾವ ಉತ್ತರ ನೋಡಿ..
              “Dear Mr.Nagshetty,ನಿಮ್ಮ ಕಳಕಳಿಯ ಅಹ್ವಾನಕ್ಕೇ ಕ್ರತ್ಝಜತೆ,ನಾನು ಕೇವಲ ಸಾಮಾನ್ಯ ಓದುಗ ಮತ್ತು ಕೆಲವೊಮ್ಮೆ ಅನ್ಯ್ಯಾಯದ ವಿರುದ್ದ ಪ್ರತಿಕಯಿಸುವ ಮತ್ತು ಪ್ರತಿಭಟಿಸುವವ.
              ನಿಮ್ಮ೦ಥ ಸಜ್ಜನರ ವಿದ್ವತ್ ಮತ್ತು ಬರವಣಿಗೆಯ ಲೇಶ ಮಾತ್ರವೂ ನನ್ನಲ್ಲಿಲ್ಲ. ಆದರೆ ನಿಮ್ಮನ್ನು ಖ೦ಡಿತವಾಗಿಯು ಪ್ರೋತ್ಸಾಹಿಸುವೆ.”

              ಒತಿಕ್ಯಾತ ಬೇಲಿಗೂಟ!! ಪಾಪ..ವಿವೇಕ ಹುಟ್ಟಿಸುವ ಕೆಲಸ ಮಾಡುತ್ತಿದ್ದಾರಂತೆ..ಧನ್ಯವಾದಗಳನ್ನು ಹೇಳೋಣವೇ ನಮ್ಮ ಕಾಮಿಡಿ ಕಿಂಗ್ ಅವರಿಗೆ 🙂

              ಉತ್ತರ
          • SSNK's avatar
            ಏಪ್ರಿಲ್ 24 2014

            [[ಸಲಾಂ ಬಾವ ನಿಲುಮೆಗೆ ಬರಲಿದ್ದಾರೆ. ನಿಮಗೂ ಚೆನ್ನಾಗಿ ಜಾಡಿಸುತ್ತಾರೆ. ಆಗ ಹೇತುಕೊಳ್ಳುವವರು ಯಾರು]]
            ಮತ್ತೊಬ್ಬ ಹೇತ್ಕರ್!!?
            ಹೇತ್ಕರರ ಸಂತತಿ ಬೆಳೆಯುತ್ತಿದೆ ಎಂದ ಹಾಗಾಯಿತು. 😉

            ಉತ್ತರ
        • ವಿಜಯ್ ಪೈ's avatar
          ವಿಜಯ್ ಪೈ
          ಏಪ್ರಿಲ್ 24 2014

          @ ಗುರು ಮಹೋದಯ…
          ಹ್ಮ..ಮುಂಬಯಿಯಲ್ಲಿ ಹ್ಯಾಂಡಬಿಲ್ ಹಂಚುವ, ಬ್ಯಾನರ್ ಹಚ್ಚುವ ಕಾರ್ಯ ಮುಗಿಯಿತೆ? ಸಂಪಾದನೆ ಚೆನ್ನಾಗಿದೆಯೆ? ಇನ್ನು ಮುಂದೆ, ಅಲ್ಲಿಂದ ವಾರಣಸಿಯೆ ಹೋಗುತ್ತಿರೊ?

          [ಅಲ್ಲಿ ವರ್ತಮಾನ ಸೈಟಿನಲ್ಲಿ ನಿಮ್ಮ ವಿಜಯ್ ಪೈ ಅವರಿಗೆ ಸಲಾಂ ಬಾವ ಸರಿಯಾಗಿ ಜಾಡಿಸಿದ್ದಾರೆ. ]
          ಹಾಹಾ..ಎಷ್ಟೆಂದರೂ ನೀವು ಉಲ್ಟಾ ಗಿರಾಕಿ.. ವರ್ತಮಾನದಲ್ಲಿ ನಿಮ್ಮ ಈ ಸೈಯದ್ ‘ಶಾಬಾನೊ’ ಶಹಾಬುದ್ದೀನ್ ಶಿಷ್ಯ ಬಾವ ‘ವಿಚಾರ ಧಾರೆ’ ಯನ್ನು , ಪರದಾಟವನ್ನು ನಿಲುಮೆಯ ಓದುಗರೇ ನೋಡಲಿ. ]
          http://www.vartamaana.com/2014/04/19/%E0%B2%95%E0%B2%AC%E0%B3%80%E0%B2%B0%E0%B3%8D-%E0%B2%B8%E0%B2%BE%E0%B2%B5%E0%B3%81-%E0%B2%AE%E0%B2%A4%E0%B3%8D%E0%B2%A4%E0%B3%81-%E0%B2%AA%E0%B3%8D%E0%B2%B0%E0%B2%97%E0%B2%A4%E0%B2%BF%E0%B2%AA/

          [ಸದ್ಯಕ್ಕೆ ನಾನು ಮುಂಬೈಯಲ್ಲಿ ಬಿಸಿ ಆಗಿರುವುದರಿಂದ ನಿಲುಮೆಯ ವೈದಿಕ ವೈರಸುಗಳಿಗೆ ಮದ್ದು ಕೊಡಿ ಅಂತ ಬಾವ ಅವರಿಗೆ ಹೇಳಿದ್ದೇನೆ.]]
          ನಿಮ್ಮ ಈ ‘ಮುಂಬೈಯಲ್ಲಿ ಬಿಸಿ’ ಇರುವ ಡಯಲಾಗ್ ಕೇಳಿದರೆ ನಗು ಬರುತ್ತದೆ. ಎಲ್ಲಿ ಮೇದಾ ಪಾಟ್ಕರ್ ನ್ನು ಗೆಲ್ಲಿಸುವ ಹೊಣೆಯನ್ನು ಈ ಯಪ್ಪನೆ ತಲೆ ಮೇಲೆ ಹೊತ್ತುಕೊಂಡಿದ್ದಾರೆ, ಈ ಯಪ್ಪನಿಂದಲೇ ಗೆಲ್ಲುವ ಮತಗಳು ಬಿಳುತ್ತವೆಯೇನೊ ಅನ್ನಬೇಕು!. ಸ್ವಾಮಿ..ನಿಮ್ಮ ಬಂಡವಾಳ ಗೊತ್ತು ನಮಗೆ!. ಈಶಾನ್ಯ ಮುಂಬಯಿ ಕ್ಷೇತ್ರದ ಸ್ಥಿತಿ-ಗತಿಯೂ ಗೊತ್ತು.

          ಉತ್ತರ
          • Manohar Naik's avatar
            Manohar Naik
            ಏಪ್ರಿಲ್ 26 2014

            ಅಲ್ಲಿ ಜಾಡಿಸಿಕೊಂಡು ಓಡಿಹೋಗಿರುವುದು ಶೇಟ್ಕರ್ ರವರ ಭಾವ..

            ಉತ್ತರ
    • M.A.Sriranga's avatar
      M.A.Sriranga
      ಏಪ್ರಿಲ್ 24 2014

      ಶೆಟ್ಕರ್ ಅವರಿಗೆ– ಶೃಂಗೇರಿ ಬಳಿಯ ತನಿಕೋಡ್ ನಲ್ಲಿ ನಡೆದ ಶೂಟ್ ಔಟ್ ಪ್ರಕರಣಕ್ಕೆ ‘ಜಾತೀಯತೆ’ಯ ಬಣ್ಣ ಹಚ್ಚಿ ಇದ್ದಕ್ಕಿದ್ದಂತೆ ಸರ್ಕಾರ ಮೃತರ ಕುಟುಂಬಕ್ಕೆ ಪರಿಹಾರ ಧನವನ್ನು ಹತ್ತು ಲಕ್ಷಕ್ಕೆ ಏರಿಸಿದ್ದು ತಮಗೆ ಮತ್ತು ತಮ್ಮಂತಹ ಜಾತ್ಯಾತೀತತೆಯ ಹರಿಕಾರರಿಗೆ ಸರಿಯೆನಿಸುತ್ತದೆ. ಆದರೆ ಹಿಂದುಗಳಾದ ನಾವೇ ನಮ್ಮ ಮಠ,ಮಂದಿರಗಳನ್ನು ಟೀಕಿಸುವುದು ‘ಜಾತ್ಯಾತೀತತೆ’ ಎನಿಸುವುದಿಲ್ಲ. ಇಂತಹ double standards ಸರಿಯೇ?.

      ಉತ್ತರ
      • Nagshetty Shetkar's avatar
        Nagshetty Shetkar
        ಏಪ್ರಿಲ್ 24 2014

        ಮಿ. ಶ್ರೀರಂಗ, ವೈದಿಕಶಾಹಿಯನ್ನು ನೀವು ನಿಮಗೆ ತೃಪ್ತಿಯಾಗುವಷ್ಟು ಟೀಕಿಸಿ. ನನ್ನದೇನೂ ಅಭ್ಯಂತರವಿಲ್ಲ.

        ಉತ್ತರ
      • Nagshetty Shetkar's avatar
        Nagshetty Shetkar
        ಏಪ್ರಿಲ್ 24 2014

        “ನಿಮ್ಮಂಥ ಸಂತೆ ಚರ್ಚಿಗರಲ್ಲಿ ವಾದಿಸಲು ಕೇವಲ ಪ್ರಾಥಮಿಕ ಶಾಲೆಯ ಮಗು ಸಾಕು,ಅಸ್ಟೇ ನಿಮ್ಮ capacity.
        ನೀವೆಲ್ಲಾ classless,below the level, uncultured and low Intellectuality ಮನುಷ್ಯರು.”

        ಉತ್ತರ
        • SSNK's avatar
          ಏಪ್ರಿಲ್ 24 2014

          [[“ಖುದಾ ಹಾಫೆಜ್ ಸಲಾಂ ಬಾವ ಭಾಯಿ! ನೀವು ಕೆಂಡಸಂಪಿಗೆಯಲ್ಲಿ ಬಹಳ ಪ್ರಬುದ್ಧ ಕಮೆಂಟ್ಸ್ ಮಾಡುತ್ತಿದ್ದದ್ದು ನನಗೆ ಇಂದೂ ನೆನಪಿದೆ. ನೀವು ನಿಲುಮೆ ತಾಣಕ್ಕೆ ಬಂದು ಕಮೆಂಟ್ಸ್ ಮಾಡಬೇಕು. ಏಕೆಂದರೆ ಅಲ್ಲಿ ನಾನೊಬ್ಬನೇ ಬಲಪಂಥೀಯರನ್ನು ಎದುರಿಸಿ….”]]
          [[“ನಿಮ್ಮಂಥ ಸಂತೆ ಚರ್ಚಿಗರಲ್ಲಿ ವಾದಿಸಲು ಕೇವಲ ಪ್ರಾಥಮಿಕ ಶಾಲೆಯ ಮಗು ಸಾಕು]]

          ಈಗರ್ಥವಾಯಿತು, ನೀವ್ಯಾಕೆ ನಿಮ್ಮ “ಬಾವ ಬಾಯಿ” ಅವರ ಸಹಾಯಕ್ಕೆ ಅಲವತ್ತುಕೊಳ್ಳುತ್ತಿದ್ದೀರಿ ಅಂತ!
          ನಿಲುಮೆಯಲ್ಲಿರುವ ಬಲಪಂಥೀಯರ ವಾದ ಎದುರಿಸಲು ನಿಮಗೆ ಆಗುತ್ತಿಲ್ಲ; ಕಾರಣ, ನೀವಿನ್ನೂ ಶಿಶುವಿಹಾರದಲ್ಲಿರುವ ಹಸುಗೂಸು!
          ಶಿಶುವಿಹಾರದ ಮಗುವಿಗೆ ಪ್ರಾಥಮಿಕ ಶಾಲೆಯ ಮಗು ಎಷ್ಟೆಂದರೂ ದೊಡ್ಡದು ಎನಿಸುತ್ತದೆ; ಪ್ರಾಥಮಿಕ ಶಾಲೆಯ ಮಗುವಿಗೆ ತನಗಿಂತ ಹೆಚ್ಚು ಶಕ್ತಿ ಮತ್ತು ಬುದ್ಧಿ ಇದೆ ಎನ್ನುವುದು ಶಿಶುವಿಹಾರದ ಮಗುವಿನ ಅನಿಸಿಕೆ!
          ನಿಮ್ಮ ‘ಬಾವ ಬಾಯಿ’ ಪ್ರಾಥಮಿಕ ಶಾಲೆಯಲ್ಲಿರುವ ಮಗು ಅನ್ನಿಸುತ್ತದೆ!

          [[ಬಲಪಂಥೀಯ ವಾದವನ್ನು ಹತ್ತಿಕ್ಕಲು ಸಾಧ್ಯವಾಗುತ್ತದೆ]]
          ಬರಲಿ ಬಿಡಿ ‘ಬಾವ ಬಾಯಿ’. ಯಾರು ಬೇಕಾದರೂ ಇಲ್ಲಿ ಮುಕ್ತವಾಗಿ ಚರ್ಚಿಸಬಹುದು.
          ಇಲ್ಲಿ ನಾವು ಯಾರ ವಾದವನ್ಣೂ ಹತ್ತಿಕ್ಕಲು ಹೊರಟಿಲ್ಲ. ಅದೆಲ್ಲಾ ನಮಗೆ ಪರಕೀಯ.
          ಸತ್ಯವಷ್ಟೇ ನಮಗೆ ಮುಖ್ಯ.
          ಪ್ರಾಥಮಿಕ ಶಾಲೆಯವರಿಗೆ ಆಗದಿದ್ದರೆ, ಮಾಧ್ಯಮಿಕ ಶಾಲೆಯವರನ್ನು, ಅವರು ಪ್ರೌಢಶಾಲೆಯವರನ್ನು ಕರೆಸಿ ಸಹಾಯ ಯಾಚಿಸುತ್ತಾರೆ!

          ಉತ್ತರ
          • Nagshetty Shetkar's avatar
            Nagshetty Shetkar
            ಏಪ್ರಿಲ್ 24 2014

            You are pathetic. Go to a psychiatrist and get treated. I’ll pay the doctors fee.

            ಉತ್ತರ
            • Universal's avatar
              Universal
              ಏಪ್ರಿಲ್ 25 2014

              ಅರ್ಥವಿಲ್ಲದ ಜಾತಿಗಳ ಬಗ್ಗೆ, ಕೆಲಸಕ್ಕೆ ಬಾರದ ದೇವರುಗಳ ಹೆಸರಿನಲ್ಲಿ ಬರೆಯುವವರಿಗೆ ಮೆದುಳೇ ಇಲ್ಲ. ನಾಗಶೆಟ್ಟಿಯವರೇ ನೀವು ಮಾಡುತ್ತಿರುವುದು ಇದೇ ವಿರೋಧಾಭಾಸದ ಕೆಲಸ. ಮೊದಲು ನಿಮ್ಮ ತಲೆ ಸರಿಯಿದೆಯೇ ಎಂಬುದಕ್ಕೆ ಮಾನಸಿಕ ವೈದ್ಯರಿಗೆ ಕೂಡಲೇ ತೋರಿಸಿ.

              ಉತ್ತರ
        • ವಿಜಯ್ ಪೈ's avatar
          ವಿಜಯ್ ಪೈ
          ಏಪ್ರಿಲ್ 24 2014

          ನಿಮ್ಮ ಬಂಡವಾಳ ಮುಗಿಯಿತೆ? ನಿಮ್ಮ ಆ ಬೇಲಿಗೂಟದ ವಿಚಾರಗಳ ಬದ್ಧತೆ ಇಲ್ಲಿ ಉಳಿದವರಿಗೆ ತಿಳಿಯಲಿ ಎಂದೇ ವರ್ತಮಾನದಲ್ಲಿನ ಲೇಖನದ ಕೊಂಡಿಯನ್ನು ಕೊಟ್ಟಿದ್ದೇನೆ.. ಮತದ ಬಾವುಟ ಎತ್ತಿ ‘ಅತ್ಯಾಚಾರ, ಅನ್ಯಾಯ’ ಅಂತ ಬೊಬ್ಬೆ ಹೊಡೆಯಬಾರದು ಅಂತ ರೀಯಾಯತಿ ದರದಲ್ಲಿಯೇ ನಿಮ್ಮ ಮಿತ್ರನಿಗೆ ಉಗಿಯಲಾಗಿದೆ. ಆದರೂ ನೀವಿನ್ನೂ ಬಟ್ಟೆ ಹರಿದುಕೊಳ್ಳುತ್ತಿದ್ದೀರಿ..ಪಾಪ! :). ಅಂದಹಾಗೆ ಕನ್ನಡಿ ಖರೀದಿ ಮಾಡಿದ್ರಾ? ಮುಂಬಯಿಯಲ್ಲಿ ಕಡಿಮೆ ದರದಲ್ಲಿ ಸಿಗುತ್ತವೆ..ನಿಮ್ಮ ಇಲ್ಲಿನ ಮಿತ್ರರಿಗೂ ಹಂಚಬಹುದು.

          ಉತ್ತರ
  8. ರವಿಕುಮಾರ ಜಿ ಬಿ's avatar
    ರವಿಕುಮಾರ ಜಿ ಬಿ
    ಏಪ್ರಿಲ್ 23 2014

    ಅಲ್ಲಾ ಇಷ್ಟೆಲ್ಲಾ ಅವಮಾನ ಆಯಿತು ,ಹಾಗೆ ಹೀಗೆ ಅಂತೆಲ್ಲಾ ಬೊಬ್ಬಿಡುವ ಮಂದಿ , ಮತ್ತೆ ಮತ್ತೆ ಅಲ್ಲೇ ಹೋಗಿ ಊಟಕ್ಕೆ ಯಾಕೆ ಕೂರಬೇಕು? ದೇವರ ದರ್ಶನ ಆದ ನಂತರ ಪ್ರಸಾದ ಅಂತೂ ಖಂಡಿತಾ ಕೊಡುತ್ತಾರೆ , ಊಟ ಹೊರಗೆ ಹೋಟೆಲಿನಲ್ಲಿ ಖಂಡಿತಾ ಇದೆ! ಸುಮ್ಮನೆ ಅಲ್ಲಿ ಕುಳಿತು ಊಟಮಾಡಿ , ಪ್ರಚಾರ ಪಡೆದು ಮಠಕ್ಕೆ ಮತ್ತು ಧರ್ಮಕ್ಕೆ ಕೆಟ್ಟ ಹೆಸರು ತರಿಸುವ ಬದಲು ಅಲ್ಲಿ ಊಟಕ್ಕೆ ಕುಳಿತುಕೊಳ್ಳಬೇಡಿ! ಅಷ್ಟೇ!!

    ಈಗ ಬ್ರಾಹ್ಮಣ ಎನಿಸಿಕೊಂಡವರು “ಮೀಸಲಾತಿಯ” ದೆಸೆಯಿಂದ ಸರಕಾರೀ ಉದ್ಯೋಗ ಮತ್ತು ಸೌಲಭ್ಯದಿಂದ ವಂಚಿತರಾಗಿ ಅದಕ್ಕೆ ಅರ್ಜಿ ಹಾಕುವುದನ್ನೇ ಬಿಟ್ಟಿಲ್ಲವೆ? ಆದರೂ ಅವರೇನು ಸುಖವಾಗಿ ಜೀವನ ಮಾಡುತ್ತಿಲ್ಲವೇ? ಇದೂ ಹಾಗೆಯೇ!!

    ಉತ್ತರ
    • vinaayak's avatar
      vinaayak
      ಏಪ್ರಿಲ್ 23 2014

      ರವಿಕುಮಾರರಿಗೆ ಮತ್ತು ಇನ್ನು ಕೆಲವರಿಗೆ— ನೀವು ಆ ಮಠಕ್ಕೆ ಊಟಕ್ಕೆ ಏಕೆ ಹೋಗುತ್ತೀರಿ? ಏಕೆ ಅಪಮಾನಿತರಾಗುತ್ತೀರಿ ಎಂದು ಕೇಳುತ್ತೀರಿ. ಆದರೆ ಇದು ಸಮಸ್ಯೆಗೆ ಪರಿಹಾರವಲ್ಲ. ಇತರ ಜನಾಂಗಗಳಿಂದ ಪಡೆಯುವ ಹಣಕ್ಕೆ ಮೈಲಿಗೆ ಇಲ್ಲ. ಆದರೆ ಅವರ ಹಣದಿಂದಲೇ ಮಾಡಿದ ಅಡಿಗೆಯನ್ನು ಅವರೊಂದಿಗೆ ಕುಳಿತು ಊಟ ಮಾಡುವದಕ್ಕೆ ಯಾಕೆ ಮೈಲಿಗೆ? ಒಂದು ವೇಳೆ ಸಂಪ್ರದಾಯವೆಂದು ಅಂದುಕೊಳ್ಳುವಿರಾದರೆ ಕೃಷ್ಣನ ನೈವೇದ್ಯವನ್ನು ಕೆಲವು ಬ್ರಾಹ್ಮಣರ ಮನೆಯಲ್ಲಿ ಮಾಡಿಸಿ ಕೆಲವರಷ್ಟೇ ಊಟಕ್ಕೆ ಹೋಗುವದು ಒಳ್ಳಿತು. ನಿಮಗೆ ಮಡಿ ಸಂಪ್ರದಾಯ ಬೇಕೆಂದರೆ ನೀವು ಇತರ ಜಾತಿಯವರಿಂದ ಬಿಡಿಕಾಸು ತಕ್ಕೋಬೇಡಿ. ನಿಮ್ಮ ಕೃಷ್ಣನನ್ನು ನೀವೇ ಇಟ್ಟುಕೊಂಡು ಪೂಜಿಸಿ. ನಿಮ್ಮ ಬ್ರಾಹ್ಮಣರಷ್ಟೇ ಅಲ್ಲಿ ಪ್ರವೇಶ ಪಡೆಯಲಿ . ಎಲ್ಲರಿಂದ ಹಣ ಪಡೆದಾಗ ಎಲ್ಲರಿಗೂ ಅವಕಾಶ ಕೊಡಬೇಕು. ಬೇರೆ ಧರ್ಮೀಯರು ಕೂಡ ಇಂಥ ಅನಿಷ್ಟ ಪದ್ಧತಿ ಇರುವ ದೇವರಿಗೆ ಯಾಕಾಗಿ ಬರುತ್ತಾರೆ? ಎಲ್ಲ ಜಾತಿ ಜನಾಂಗದವರಿಗೂ ಹಿಂದೂ ಧರ್ಮದಲ್ಲಿ ತಮ್ಮದೇ ಆದ ದೇವರಿದ್ದಾರೆ. ಅವರನ್ನು ಬಿಟ್ಟು ಈ ವೈದಿಕ ದೇವರಿಗೆ ಅವರೇಕೆ ಬಂದು ಈದೇವರುಗಳನ್ನು ಮತ್ತು ಈ ದೇವರ ಪೂಜಾರಿಗಳನ್ನು ಬಹಳೇ ಶ್ರೀಮಂತ ಗೊಳಿಸಿದ್ದಾರೆ. ಅಷ್ಟೇ ಅಲ್ಲ ಸೊಕ್ಕಿಗೆ ಕೂಡ ಇತರ ಜಾತಿಯವರೇ ಕಾರಣರಾಗಿದ್ದಾರೆ. ಅವರೇ ಈ ದೇವರುಗಳಿಗೆ ಭೆಟ್ಟಿ ಕೊಡದೇ ಹೋದರೆ ಅಧ್ಹೇಗೆ ಇವರ ದೇವರು ಇಷ್ಟು ಶ್ರೀಮಂತರಾಗುತ್ತಾರೆ. ಈ ಭ್ರಾಹ್ಮಣರು ಇರುವದೇ 3/4 ಪರಶೆಂಟ್ ಕೇವಲ ಅವರಿಂದ ಇವರ ದೇವಸ್ಥಾನಗಳು ನಡೆಯುವದಿಲ್ಲ. ಇವರ ಎಲ್ಲಾ ಆಟಾಟೋಪಗಳು ಮುರಿಯಬೇಕೆಂದರೆ ಎಲ್ಲಾ ಜಾತಿ ಬಾಂಧವರು ತಮ್ಮ ತಮ್ಮ ದೇವರುಗಳನ್ನು ಕೀಳಿರಿಮೆ ಬಿಟ್ಟು ಪೂಜಿಸಬೇಕು. ಮೇಲ್ಜಾತಿ ದೇವರುಗಳನ್ನು ಪೂಜಿಸಿದರೆ ತಾವೂ ಮೇಲ್ಜಾತಿ ಆಗಿಬಿಡುತ್ತೇವೆ ಎಂಬ ಭ್ರಮೆ ಬಿಡಬೇಕು. ತಮ್ಮ ದೇವರುಗಳ ಮಂದಿರಗಳನ್ನು ಭವ್ಯವಾಗಿ ಕಟ್ಟಿಸಬೇಕು. ಉದಾ ಕುರುಬರು ಬೀರಪ್ಪ ದೇವರ ಮಂದಿರ, ಲಂಬಾಣಿಗರು ಸೇವಾಲಾಲನ ಮಂದಿರ, ಹೀಗೆ. ಆಗ ಮಾತ್ರ ಪಂಕ್ತಿ ಭೇದ ತೊಲಗುತ್ತದೆ. ತಪ್ಪಿ ಕೂಡ ವೈದಿಕ ದೇವಾಲಯಗಳಿಗೆ ಕಾಲಿಡ ಬಾರದು. ಎಲ್ಲ ಜನಕ್ಕೆ ತಿಳುವಳಿಕೆ ಬಂದರೆ ಇದೇನೂ ಅಸಾಧ್ಯವಲ್ಲ. ಕಾಲನ ಗರ್ಬದಲ್ಲಿ ಮುಂದೇನಿದೆ ಯಾರು ಬಲ್ಲರು? ಖಂಡಿತ ಆ ಕಾಲ ಬರಬಹುದು. ಈ ಹಿಂದೆ ಇಂಥ ಪದ್ಧತಿ ಇತ್ತೆಂದು ಬಾಲು ಅವರು ವಸಾಹತು ಪ್ರಜ್ಞೆ ಅಂಕಣದಲ್ಲಿ ಒಮ್ಮೆ ಬರೆದಿದ್ದರು ಆ ಕಾಲ ಬೇಗ ಇನ್ನೊಮ್ಮೆ ಬರಲಿ ಎಂದು ಹಾರೈಸುವೆ. ಆಗ ಯಾರೂ ದೇವಾಲಯ ಪ್ರವೇಶಕ್ಕೆ ಆಗ್ರಹ, ಪಂಕ್ತಿ ಭೇದಕ್ಕೆ ತಕರಾರು ಮಾಡುವದು ತಪ್ಪುತ್ತೆ. ಹಾಗೆ ಬ್ರಾಹ್ಮಣರ ಮೇಲಿರಿಮೆಯ ಗರ್ವವೂ ಇಳಿಯಬಹುದು.

      ಉತ್ತರ
      • SSNK's avatar
        ಏಪ್ರಿಲ್ 24 2014

        [[ಅವರನ್ನು ಬಿಟ್ಟು ಈ ವೈದಿಕ ದೇವರಿಗೆ ಅವರೇಕೆ ಬಂದು]]
        ಯಾವುದು ವೈದಿಕ ದೇವರು? ಉಡುಪಿಯಲ್ಲಿರುವುದು ಶ್ರೀಕೃಷ್ಣ. ವೇದದಲ್ಲೆಲ್ಲೂ ಕೃಷ್ಣನ ಹೆಸರೇ ಬರುವುದಿಲ್ಲವಲ್ಲ!
        ಹಾಗಾದರೆ, ಕೃಷ್ಣ ವೈದಿಕ ದೇವರಾದದ್ದು ಯಾವಾಗ!?

        [[ಮೇಲ್ಜಾತಿ ದೇವರುಗಳನ್ನು ಪೂಜಿಸಿದರೆ]]
        ದೇವರಿಗೂ ಮೇಲ್ಜಾತಿ ಕೀಳ್ಜಾತಿಯೇ!
        ಶ್ರೀಕೃಷ್ಣನು ಗೊಲ್ಲನಾಗಿದ್ದ. ಆತ ಮೇಲ್ಜಾತಿಯೋ ಕೀಳ್ಜಾತಿಯೋ!?

        [[ಕೂಡ ವೈದಿಕ ದೇವಾಲಯಗಳಿಗೆ]]
        ಏನಿದು ವೈದಿಕ ದೇವಾಲಯ?
        ವೇದದಲ್ಲೆಲ್ಲೂ ದೇವರ ವಿಗ್ರಹ/ಪ್ರತಿಮೆ ಮತ್ತು ಅವುಗಳನ್ನಿಡುವ ದೇವಾಲಯದ ಪ್ರಸ್ತಾಪವೇ ಇಲ್ಲವಲ್ಲ!
        ಹಾಗಿದ್ದರೆ, ವೈದಿಕ ದೇವಾಲಯ ಎನ್ನುವುದು ನಿಮ್ಮ ಕಲ್ಪನೆ ಮಾತ್ರ ಅಲ್ಲವೇ!?

        ನಿಮ್ಮ ಬರಹದ ಪ್ರತಿಯೊಂದು ವಾಕ್ಯವೂ, ನೀವು ವಿನಾಕಾರಣ ವೇದಗಳನ್ನು, ವೈದಿಕತೆಯನ್ನು ಹಳಿಯಲು ಯತ್ನಿಸುತ್ತಿದ್ದೀರಿ ಎನಿಸುತ್ತದೆ!
        ನಿಮಗೆ ಇಂದು ನಮ್ಮಲ್ಲಿರುವ ಅಸ್ಪೃಷ್ಯತೆ ಮುಂತಾದ ಪದ್ಧತಿಗಳ ಕುರಿತಾಗಿ ಅಸಮಾಧಾನವಿರಬಹುದು. ಆದರೆ, ಅದಕ್ಕೆ ವೇದವನ್ನಾಗಲೀ, ವೈದಿಕತೆಯನ್ನಾಗಲೀ, ದೇವಾಲಯಗಳನ್ನಾಗಲೀ, ದೇವರನ್ನಾಗಲೀ ಧೂಷಿಸುವುದರಿಂದ ಏನು ಪ್ರಯೋಜನ?
        ವೇದಗಳೆಂದೂ ಕುರೂಢಿಗಳಾದ ಅಸ್ಪೃಷ್ಯತೆಯನ್ನಾಗಲೀ, ಅಥವಾ ಅಂತಹ ಇನ್ನಾವುದೇ ಆಚರಣೆಗಳನ್ನಾಗಲೀ ವಿಧಿಸಿಲ್ಲ.
        ನಮ್ಮಲ್ಲಿರುವ ಅನೇಕ ಪದ್ಧತಿಗಳನ್ನು ನಾವೇ ಹಾಕಿಕೊಂಡಿರುವುದು. ಅವು ಹೋಗಬೇಕೆಂದರೆ, ಅದಕ್ಕೆ ವ್ಯಕ್ತಿಗಳಲ್ಲಿ ಪರಿವರ್ತನೆ ತರಬೇಕು. ಅದನ್ನು ಬಿಟ್ಟು, ವೇದಗಳನ್ನು ಧೂಷಿಸಿದರೆ ಏನೂ ಪ್ರಯೋಜನವಿಲ್ಲ!

        ಇನ್ನು ನೀವು, ಮೇಲ್ಜಾತಿಗಳಲ್ಲಷ್ಟೇ ಅಸ್ಪೃಷ್ಯತೆಯೇ ಮುಂತಾದ ರೂಢಿಗಳಿವೆ ಎಂದು ತಿಳಿದಿರುವಂತಿದೆ. ಆದರೆ, ನಿಮ್ಮ ಅಭಿಪ್ರಾಯ ಸುಳ್ಳು. ಎಲ್ಲ ಜಾತಿಗಳಲ್ಲೂ, ಈ ರೀತಿಯ ಸಂಪ್ರದಾಯಗಳಿವೆ. ನೀವು ಕೀಳ್ಜಾತಿಗಳೆಂದು ತಿಳಿದಿರುವ ಜಾತಿಗಳೂ, ತಮಗಿಂತ ಕೆಳಗಿದೆ ಎಂದು ಭಾವಿಸಿರುವ ಜಾತಿಗಳೊಡನೆ ಅಸ್ಪೃಷ್ಯತೆ ಆಚರಿಸುತ್ತಾರೆ.

        ಅಸ್ಪೃಷ್ಯತೆ ಎನ್ನುವುದು ಸಾಮಾಜಿಕ ಪಿಡುಗು. ಕೇವಲ ಬ್ರಾಹ್ಮಣರನ್ನು ಧೂಷಿಸುವುದರಿಂದಾಗಲೀ, ವೇದಗಳನ್ನೋ ವೈದಿಕತೆಯನ್ನೋ ಹಳಿಯುವುದರಿಂದಾಗಲೀ, ಅದು ತೊಲಗಲಾರದು. ಆ ರೀತಿ ಮಾಡುವುದರಿಂದ, ನಿಮ್ಮ ಬಾಯಿಚಪಲ ತೀರಬಹುದಷ್ಟೇ! ನಿಮಗೆ ನಿಜಕ್ಕೂ ಆ ಪಿಡುಗು ತೊಲಗಬೇಕೆಂದರೆ, ಮೊಟ್ಟಮೊದಲಿಗೆ ನೀವು ಮಾಡಬೇಕಿರುವುದು, ಜಾತಿಯ ಕುರಿತಾಗಿ ಮಾತನಾಡುವುದನ್ನು ನಿಲ್ಲಿಸುವುದು ಮತ್ತು ಜಾತಿಗಳನ್ನು ಧೂಷಿಸುವುದನ್ನು ನಿಲ್ಲಿಸುವುದು. ಮತ್ತು ಮುಂದುವರೆದು, ವ್ಯಕ್ತಿ ಪರಿವರ್ತನೆಯ ಕಾಯಕಕ್ಕೆ ತೊಡಗುವುದು. ಇದಲ್ಲದೇ ಬೇರಾವುದೇ ಮಾರ್ಗವಿಲ್ಲ.

        ಉತ್ತರ
      • ವಿಜಯ್ ಪೈ's avatar
        ವಿಜಯ್ ಪೈ
        ಏಪ್ರಿಲ್ 24 2014

        @ವಿನಾಯಕ್..
        ೧) ನಿಮ್ಮ ಮಾತು ಕೇಳಿದರೆ, ಸಮಾಜದ ಉಳಿದೆಲ್ಲರ ದುಡ್ಡನ್ನು ಹೊಡೆದು, ಈ ಅಷ್ಟಮಠದ ಪ್ರತಿಯೊಬ್ಬ ಸ್ವಾಮಿಗಳು ಬೆಂಝ್ ಕಾರಲ್ಲಿ ಮತ್ತು ಅಲ್ಲಿ ಪೂಜೆ ಮಾಡುವ/ಕೆಲಸ ಮಾಡುವ ಬ್ರಾಹ್ಮಣರು ಅದ್ಯಾವುದು SUV ಯಲ್ಲಿ ಸುತ್ತಾಡುತ್ತಾರೆ ಎನ್ನುವ ಹಾಗಿದೆ!. ಸ್ವಾಮಿ..ಇರುವ ಮೂರು-ನಾಲ್ಕು ಪರ್ಸೆಂಟ್ ಬ್ರಾಹ್ಮಣರಲ್ಲಿ ಎಲ್ಲರೂ ಪೂಜೆ ಮಾಡುವ ಭಟ್ಟರಲ್ಲ!. ಬ್ರಾಹ್ಮಣ ವೃತ್ತಿಯಾಗಿಸಿಕೊಂಡವರು ಈ ನಾಲ್ಕು ಪರ್ಸೆಂಟಿನಲ್ಲಿ ಅರ್ಧ ಪರ್ಸೆಂಟ್ ನ್ನು ಮೀರುವುದಿಲ್ಲ. ಪೂಜೆ ಮಾಡಿಕೊಂಡೇ ಹೊಟ್ಟೆ ಹೊರೆದುಕೊಳ್ಳಬೇಕಾದ ಅನಿವಾರ್ಯತೆಯೂ ಇಲ್ಲ. ಆದ್ದರಿಂದ ಈ ಕಲ್ಪನೆಯಿಂದ ದೂರವಾಗಿ.
        ೨) ದೇವಸ್ಥಾನಕ್ಕೆ ಹೋದಾಗ ದುಡ್ಡು ಹಾಕುವುದು ಕಡ್ಡಾಯವಲ್ಲ. ನಿಮಗೆ ಮನಸ್ಸಿಲ್ಲದಿದ್ದರೆ ಹಾಕಬೇಡಿ..ಸಿಂಪಲ್. ಇನ್ನೊಂದೇನೆಂದರೆ, ದೇವಸ್ಥಾನಗಳಿಂದ, ಅದರ ಹುಂಡಿಗೆ ಬಿದ್ದ ಹಣದಲ್ಲಿ ಸರಕಾರ ಎಷ್ಟು ದೋಚುತ್ತಿದೆ ಎಂಬುದನ್ನು ಕೂಡ ಗಮನಿಸಿ.
        ೩) ದೇವರಲ್ಲೂ ಮೇಲ್ಜಾತಿ-ಕೀಳ್ಜಾತಿ ಹುಡುಕಿದ್ದನ್ನು ನೋಡಿದರೇ, ದೇವರ ಕುರಿತ ನಿಮ್ಮ ಕಲ್ಪನೆ ಏನಿರಬಹುದು ಎಂಬ ಕುತೂಹಲ ಹುಟ್ಟುತ್ತಿದೆ.
        ೪) ಯಾರು ಯಾವುದೇ ದೇವಸ್ಥಾನ ಕಟ್ಟಿಸಿದರೂ, ತಮಗೆ ಬೇಕಾದಂತೆ ಒಂದು ಮಟ್ಟಿಗಿನ ನಿಯಮಗಳನ್ನು ಪಾಲಿಸುತ್ತಾರೆ ಮತ್ತು ನೀವು ಅಲ್ಲಿಗೆ ಬೇಟಿ ಇತ್ತರೆ, ಅವುಗಳ ಪ್ರಕಾರ ನಡೆದುಕೊಳ್ಳುವುದು ಅನಿವಾರ್ಯ. ಹಿಡಿಸಲಿಲ್ಲವಾದರೆ ಅವುಗಳಿಂದ ದೂರವಿರೋಣ

        ಉತ್ತರ
        • vinaayak's avatar
          vinaayak
          ಏಪ್ರಿಲ್ 24 2014

          ಆತ್ಮೀಯ ssnk ಮತ್ತು ಪೈಗಳೇ ನಾನು ಹೇಳಿದ್ದು ಪಂಕ್ತಿಭೇದ , ಮತ್ತು ಅಸ್ಪೃಶ್ಯರನ್ನು ದೇವಾಲಯದ ಒಳಗೆ ಬಿಡದಿರುವದು ಇವು ವೇದ ಕಾಲದಿಂದ ಇವೆ. ಎಂದು ಹೇಳುತ್ತಿಲ್ಲ. ಎಲ್ಲ ಜಾತಿಯವರಿಗೂ ಅವರದೇ ಆದ ದೇವಾಲಯಗಳಿದ್ದರೆ ಆಗ ಈ ಪಂಕ್ತಿಭೇದ ತೊಲಗುತ್ತದಲ್ಲವೇ? ಮತ್ತು ದೆವಾಲಯ ಪ್ರವೇಶದಂಥ ಜಗಳಗಳು, ಇಲ್ಲವಾಗುತ್ತವೆ. ನಾವೆಲ್ಲ ಒಂದಾಗಿ ಸೆಮೆಟಿಕ ಧರ್ಮಗಳ ಕುರಿತು ಅವರ ಆಕ್ರಮಣ ಕುರಿತು ಹೋರಾಟ ಮಾಡಬೇಕಾಗಿದೆಯೇ ವಿನಃ ನಮ್ಮ ನಮ್ಮಲ್ಲಿ ಪಂಕ್ತಿಭೇದ ಮುಂತಾದವನ್ನು ಕುರಿತು ಜಗಳವಾಡುತ್ತಾ ಇನ್ನೊಬ್ಬರಿಗೆ ಅನುಕೂಲ ಮಾಡಿಕೊಡುತ್ತಿದ್ದೇವೆ. ದೇವರು ಮೇಲ್ಜಾತಿ ಕೆಳಜಾತಿ ಎಂದಿಲ್ಲ ಎಂದು ನೀವು ಹೇಳುತ್ತಿದ್ದೀರಿ. ಆದರೆ ಕುರುಬರ ಮನೆ ದೇವರು ಎಂದಾದ್ರೂ ನರಸಿಂಹ, ಕೃಷ್ಣ , ಇದ್ದಾರಾ? ಹಾಗೆ ಯಾರದಾದ್ರೂ ಬ್ರಾಹ್ಮಣರ ಮನೆ ದೇವರು ಬೀರಪ್ಪದೇವರಿದ್ದಾರಾ?? ಅಂದ ಮೇಲೆ ದೇವರು ಮೇಲ್ಜಾತಿ, ಕೆಳಜಾತಿ ಇದ್ದಂತಾಯಿತಲ್ಲವೆ? ದೇವರಿಗೆ ಜಾತಿ ಇಲ್ಲ. ಆದರೆ ಪೂಜಿಸುವ ಭಕ್ತರು ಅವರನ್ನು ಜಾತಿಯ ಸಂಕೋಲೆಯಲ್ಲಿ ಬಂಧಿಸಿದ್ದಾರಲ್ಲ?? ನಾನು ಮೇಲಿನ ಕಮೆಂಟಿನಲ್ಲಿ ಹೇಳಿದಂತೆ ಶ್ರೀ ಬಾಲು ಅವರು ವಸಾಹತು ಪ್ರಜ್ಞೆ ಅಂಕಣವೊಂದರಲ್ಲಿ ಹೇಳುತ್ತಾರೆ ಏನೆಂದರೆ ಮೊದಲು ಎಲ್ಲಾ ಜಾತಿ ಜನರಿಗೂ ದೇವಸ್ಥಾನಗಳಿದ್ದವು . ಒಬ್ಬರು ಇನ್ನೊಬ್ಬರ ದೇವಸ್ಥಾನಕ್ಕೆ ಹೋಗುತ್ತಿರಲಿಲ್ಲ. ಇದರಿಂದ ಪ್ರವೇಶದ ಮಾತೇ ಇರಲಿಲ್ಲ. ಬ್ರಿಟೀಷರು ಬಂದ ನಂತರ ಇದೆಲ್ಲ ಶುರುವಾಯಿತು ಎನ್ನುತ್ತಾರೆ. ಅದಕ್ಕೇ ಮೊದಲಿನಂತೆ ಅವರವರ ಮತದ ದೇವಾಲಯಗಳನ್ನು ಅವರವರು ಕಟ್ಟಿಕೊಂಡರೆ ಈ ಎಲ್ಲ ರಗಳೆ ಇರುವದೇ ಇಲ್ಲವಲ್ಲ? ನಾವು ದುಡ್ಡು ಕೊಡುತ್ತೇವೆ. ನಮಗೇಕೆ ಹಕ್ಕಿಲ್ಲ ಎಂದು ಕೇಳುವ ಪ್ರಸಂಗಗಳೇ ಇಲ್ಲವಲ್ಲ? ನಿಮಗೇನನಿಸುತ್ತೆ? ನಾನು ಬ್ರಾಹ್ಮಣರನ್ನು ಟೀಕಿಸುತ್ತಿಲ್ಲ. ವೇದಗಳನ್ನು ಟೀಕಿಸಿಲ್ಲ.

          ಉತ್ತರ
          • ವಿಜಯ್ ಪೈ's avatar
            ವಿಜಯ್ ಪೈ
            ಏಪ್ರಿಲ್ 24 2014

            @ವಿನಾಯಕ್..
            ನಮ್ಮ ನಮ್ಮಲ್ಲಿ ಜಗಳ ಹುಟ್ಟಿಸಿಕೊಂಡು, ಮೂರನೆಯವನಿಗೆ ಲಾಭ ಮಾಡಿಕೊಡಬಾರದು ಎಂಬುದು ಸರಿಯಾದದ್ದೆ. ದೇವರಿದ್ದಲ್ಲಿ ಬೇಧ-ಭಾವ ಇರಬಾರದು ಎನ್ನುವುದು ಕೂಡ ಖಂಡಿತ ಒಪ್ಪುವಂತದ್ದು. ಆದರೆ ಕೆಲವು ಸಿಬ್ಬಂದಿಗಳ ವರ್ತನೆಗೆ ಇಡಿ ವ್ಯವಸ್ಥೆಯನ್ನು ದೂರುವುದು ಸರಿಯಾಗದು. ಯಾರೊ ಸರಕಾರಿ ನೌಕರ ದುರ್ವರ್ತನೆ ಮಾಡಿದ ಅಂದರೆ ಮುಖ್ಯಮಂತ್ತಿ ರಾಜಿನಾಮೆಗೆ ಆಗ್ರಹ ಮಾಡಿದಂತೆ. ಉಡುಪಿ ಹಾಗೂ ದಕ್ಷಿಣ ಕನ್ನಡದ ಎಷ್ಟೋ ದೇವಸ್ಥಾನಗಳು ಪ್ರತಿದಿನ ಕನಿಷ್ಟ ಒಂದು ಲಕ್ಷ ಜನರಿಗಾದರೂ (ಎಲ್ಲ ಸೇರಿ ಅಂದುಕೊಳ್ಳೊಣ) ಪ್ರಸಾದ ರೂಪದಲ್ಲಿ ಅನ್ನ ಹಾಕುತ್ತವೆ..ಅಂದರೆ ವರುಷಕ್ಕೆ ೪ಕೋಟಿ ಜನರಿಗೆ ಅನ್ನದಾಸೋಹ ನಡೆಯುತ್ತದೆ. ಇವು ದೂರದಿಂದ ಬಂದಂತಹ ಎಷ್ಟೋ ಯಾತ್ರಾರ್ಥಿಗಳಿಗೆ ಊಟದ ಖರ್ಚಿನ ಹೊರೆಯನ್ನು ಕಡಿಮೆ ಮಾಡುತ್ತಿವೆ. .ಎಷ್ಟೋ ವಿದ್ಯಾರ್ಥಿಗಳಿಗೆ ಊಟ ಒದಗಿಸುತ್ತಿವೆ. ಈ ಅನ್ನದಾಸೋಹದ ಪಾಸಿಟಿವ ಅಂಶಗಳು ಸಾಕಷ್ಟಿವೆ. ಇಂತಹುದರಲ್ಲಿ, ಆಗೀಗ ವಿರಳವಾಗಿ ‘ಕುಳಿತವರನ್ನು ಎಬ್ಬಿಸಿದರು’ ಎಂಬ ಪ್ರಕರಣಗಳು ವರದಿಯಾಗುತ್ತವೆ. ಈ ಪ್ರಕರಣದ ರೂವಾರಿಗಳು ಸಿಬ್ಭಂದಿಗಳಷ್ಟೇ ಅಲ್ಲದೇ, ದೇವಸ್ಥಾನಕ್ಕೆ ಹೋದಾಗಲೂ ‘ನಾನು’ ಎಂಬುದನ್ನು ಬಿಡದ ಭಕ್ತರು. ಈಗೀಗ ಹೆಚ್ಚಿನ ವಿವಾದಗಳು ಹುಟ್ಟುತ್ತಿರುವುದು, out of proportion ಬೆಳೆಯುತ್ತಿರುವುದು.. ಬೆಂಕಿ ಹತ್ತಿದಲ್ಲಿ ಬೀಡಿ ಹಚ್ಚಿಕೊಳ್ಳುವ ಚಟವಿರುವ ಈ ದರಿದ್ರ ಎಡಪಂಥಿಯರ ಪ್ರವೇಶದಿಂದ.. ನಾವು ಈ ದರಿದ್ರಗಳಿಗೆ ಮಧ್ಯಪ್ರವೇಶಿಸುವ ಅವಕಾಶ ಕೊಡಬಾರದು..ಇವರಿಂದ ಬೆಂಕಿ ಹಚ್ಚುವುದನ್ನು ಬಿಟ್ಟು ಉಳಿದ ಯಾವ ಕಾರ್ಯವು ಆಗುವುದಿಲ್ಲ.

            [ದೇವರು ಮೇಲ್ಜಾತಿ ಕೆಳಜಾತಿ ಎಂದಿಲ್ಲ ಎಂದು ನೀವು ಹೇಳುತ್ತಿದ್ದೀರಿ. ಆದರೆ ಕುರುಬರ ಮನೆ ದೇವರು ಎಂದಾದ್ರೂ ನರಸಿಂಹ, ಕೃಷ್ಣ , ಇದ್ದಾರಾ? ಹಾಗೆ ಯಾರದಾದ್ರೂ ಬ್ರಾಹ್ಮಣರ ಮನೆ ದೇವರು ಬೀರಪ್ಪದೇವರಿದ್ದಾರಾ?? ಅಂದ ಮೇಲೆ ದೇವರು ಮೇಲ್ಜಾತಿ, ಕೆಳಜಾತಿ ಇದ್ದಂತಾಯಿತಲ್ಲವೆ? ದೇವರಿಗೆ ಜಾತಿ ಇಲ್ಲ. ಆದರೆ ಪೂಜಿಸುವ ಭಕ್ತರು ಅವರನ್ನು ಜಾತಿಯ ಸಂಕೋಲೆಯಲ್ಲಿ ಬಂಧಿಸಿದ್ದಾರಲ್ಲ?? ]
            ದೇವನೊಬ್ಬ ನಾಮ ಹಲವು ಎಂಬಂತೆ, ಹಿಂದುಗಳಲ್ಲಿ ನಮಗೆ ಸಿಗುವುದು ಶಿವ-ಪಾರ್ವತಿ-ವಿಷ್ಣು-ಲಕ್ಮಿಯರ ಅಂಶಗಳೆ.. ಅದರಲ್ಲೂ ಶಿವ-ಪಾರ್ವತಿ ಅಂಶಗಳೇ ಹೆಚ್ಚು. ಬೀರಪ್ಪ ಹೆಸರಿನ ಹುಟ್ಟಿಗೆ ಕಾರಣಗಳೇನೇ ಇದ್ದರೂ ಆತ ಶಿವನ ಅಂಶವೇ ಮತ್ತು ಆತ ಕುರುಬರಿಗೆ ‘ತಮ್ಮ’ವನೇ ಆದ ಸ್ವಂತವಾದ ದೇವರಾಗುತ್ತಾನೆ. ಈಗ ಉದಾಹರಣೆಗೆ ನಮ್ಮ ಮನೆ ದೇವರು ಶಾಂತೇರಿ-ಕಾಮಾಕ್ಷಿ- ರಾಮನಾಥ ಅನ್ನುವುದು. ಇವರು ಮೂಲದಲ್ಲಿ ಶಿವ-ವಿಷ್ಣು-ಪಾರ್ವತಿ ಯ ಅಂಶಗಳೆ..ಆದರೆ ನಾವಿವರನ್ನು ಶಾಂತೇರಿ-ಕಾಮಾಕ್ಷಿ- ರಾಮನಾಥ ಆಗಿ ‘ನಮ್ಮ’ವರನ್ನಾಗಿ ಮಾಡಿಕೊಂಡಿದ್ದೇವೆ..ಅಲ್ಲಿಯೇ ಅರ್ಧ ಕಿ.ಮಿ ನಡೆದರೆ ಪಾರ್ವತಿ ಶಾಂತಾದುರ್ಗೆ ಯಾಗಿ ಇನ್ನೊಬ್ಬರ ಕುಲದೈವವಾಗಿದ್ದಾಳೆ..ಬಸ್ಸು ಹತ್ತಿ ೧೫ ಕಿ,ಮಿ ದೂರಕ್ಕೆ ಪಯಣಿಸಿದರೆ ಅದೇ ಪಾರ್ವತಿ ಮಹಾಲಸೆ ಯಾಗಿ ಮತ್ತೊಬ್ಬರ ‘ಸ್ವಂತ; ಕುಲದೈವವಾಗಿದ್ದಾಳೆ. ಹೀಗಿರುವಾಗ ದೇವರಂದರೆ ಯಾರು ಮತ್ತು ಬದುಕಿನಲ್ಲಿ ಆತನ ಸ್ಥಾನ ಎಂತದು ಎಂದು ಅರ್ಥವಾದಾಗ, ಬೀರಪ್ಪ-ರಾಮನಾಥ ಎಲ್ಲರೂ ಒಂದೇ ಆಗುತ್ತಾರೆ.

            ನಾನು ಓದಿದಂತೆ, ಮೊದ-ಮೊದಲು ಈ ಭರತಖಂಡದಲ್ಲಿ ದೇವಸ್ತಾನಗಳ ಗೊಡವೆಯೇ ಇರಲಿಲ್ಲವಂತೆ. ಜನರು ಪೃಕೃತಿಯ ಆರಾಧಕರಾಗಿದ್ದರಂತೆ. ಗಿಡ-ಮರ-ಪಶು-ಪಕ್ಷಿಗಳನ್ನು ಆರಾಧಿಸಿಕೊಂಡು, ತಾವೂ ಕೂಡ ಈ ವಿಶಾಲ ಜಗದ ಒಂದು ಭಾಗ ಎಂದಷ್ಟೇ ತಿಳಿದುಕೊಂಡು ಸುಖವಾಗಿದ್ದರು. ನಾವು ಮತ್ತೆ ಈ ಹಂತಕ್ಕೆ ಮರಳುವುದು ಉತ್ತಮ ..:)

            ಉತ್ತರ
            • vinaayak's avatar
              vinaayak
              ಏಪ್ರಿಲ್ 24 2014

              [[ಮೊದ-ಮೊದಲು ಈ ಭರತಖಂಡದಲ್ಲಿ ದೇವಸ್ತಾನಗಳ ಗೊಡವೆಯೇ ಇರಲಿಲ್ಲವಂತೆ. ಜನರು ಪೃಕೃತಿಯ ಆರಾಧಕರಾಗಿದ್ದರಂತೆ. ಗಿಡ-ಮರ-ಪಶು-ಪಕ್ಷಿಗಳನ್ನು ಆರಾಧಿಸಿಕೊಂಡು, ತಾವೂ ಕೂಡ ಈ ವಿಶಾಲ ಜಗದ ಒಂದು ಭಾಗ ಎಂದಷ್ಟೇ ತಿಳಿದುಕೊಂಡು ಸುಖವಾಗಿದ್ದರು. ನಾವು ಮತ್ತೆ ಈ ಹಂತಕ್ಕೆ ಮರಳುವುದು ಉತ್ತಮ ..:)]] ಹೌದು ಹೀಗಿದ್ದರೆ ಇನ್ನೂ ಉತ್ತಮ.

              ಉತ್ತರ
              • Nagshetty Shetkar's avatar
                Nagshetty Shetkar
                ಏಪ್ರಿಲ್ 24 2014

                Scientific education and rational outlook will make people see through all fake Hindu swamis and god men. There is only one God and that is the God Vachanakaras envisioned. Vadikashahi corrupted the God into million gods and godmen.

                ಉತ್ತರ
                • Naani's avatar
                  Naani
                  ಏಪ್ರಿಲ್ 25 2014

                  ಶೇಟ್ಕರ್(ಮೂಲಕ ದರ್ಗಾರವರೆ), ಇಂದಿನ ನಿಮ್ಮ ಪ್ರೀತಿಯ ಪತ್ರಿಕೆ ಪ್ರಜಾವಾಣಿಯಲ್ಲಿ ಪ್ರಕಟವಾಗಿರುವ ಹಂಪನಾ ರವರ “ಕನ್ನಡಿಗರ ಮೊದಲ ಧರ್ಮ”ದ ಕುರಿತ ಲೇಖನವನ್ನು ಓದಿ. ತಮ್ಮಂತವರ ಮುಖಕ್ಕೆ ಕನ್ನಡಿ ಹಿಡಿದಿದ್ದಾರೆ. ಈಗ ನಿಮ್ಮ ಮಾನವೀಯ ಮುಖವಾಡದ ಮುಖವನ್ನು ಎಲ್ಲಿ ಇಟ್ಟುಕೊಳ್ಳುವಿರಿ. ಅನ್ಯ ಪಂಥದವರನ್ನು ಹೀಯಾಳಿಸುವುದನ್ನೇ ‘ಕಾಯಕ’ವಾಗಿಸಿಕೊಂಡಿರುವ ನಿಮ್ಮ ಮೂಲ ಸಂಸ್ಕೃತಿಯನ್ನು ಇಲ್ಲಿ ತೆರೆದಿಟ್ಟಿದ್ದಾರೆ. ಬೌದ್ದ, ಜೈನ ಪಂಥಗಳ ನಾಶಕ್ಕೆ ಇಲ್ಲದ ‘ವೈಧಿಕ/ಬ್ರಾಹ್ಮಣಶಾಹಿಗಳ’ ನ್ನು ಹೊಣೆಯಾಗಿಸುವ ನಿಮ್ಮ ನಿಜಮುಖವನ್ನು ತೆರೆದಿಟ್ಟಿದ್ದಾರೆ. ನಿಮ್ಮಂಥವರ ‘ಕಾಯಕ’ವೇ ಇಲ್ಲಿ ಅನ್ಯ ಫಂಥಗಳನ್ನು ನಾಶ ಮಾಡಿದೆ ಎನ್ನುವುದನ್ನು ಸಾಕ್ಷಿಗಳ ಸಮೇತ ತೋರಿಸಿದ್ದಾರೆ.

                  ಉತ್ತರ
                  • Nagshetty Shetkar's avatar
                    Nagshetty Shetkar
                    ಏಪ್ರಿಲ್ 25 2014

                    ವೀರಶೈವ ಧರ್ಮವೇ ಬೇರೆ ಲಿಂಗಾಯತ ಧರ್ಮವೇ ಬೇರೆ. ಜಿನಹಂತಕ ರಾಮಯ್ಯ ಮೊದಲಾದವರು ಲಿಂಗಾಯತರಲ್ಲ ವೀರಶೈವರು. ಲಿಂಗಾಯತರು ಶಾಂತಿಪ್ರಿಯರು ದಯಾಶೀಲರು. ಅವರು ಸಕಲರ ಒಳಿತನ್ನೇ ಬಯವುವವರು.

                    ಉತ್ತರ
                    • Universal's avatar
                      Universal
                      ಏಪ್ರಿಲ್ 25 2014

                      ಲಿಂಗಾಯಿತ ಎನ್ನುವ ಧರ್ಮವೇ ಇಲ್ಲ.

                    • Nagshetty Shetkar's avatar
                      Nagshetty Shetkar
                      ಏಪ್ರಿಲ್ 25 2014

                      “ಲಿಂಗಾಯಿತ ಎನ್ನುವ ಧರ್ಮವೇ ಇಲ್ಲ.” ಎಂದು ಹೇಳುವವರಿಗೆ ತಲೆ ಸರಿ ಇಲ್ಲ.

                    • Balachandra Bhat's avatar
                      ಏಪ್ರಿಲ್ 25 2014

                      ಸ್ನೇಹಿತರೆ,
                      ಶೆಟ್ಕರ್ ರವರನ್ನು ವಿರೋಧಿಸುವ ಭರದಲ್ಲಿ ಲಿಂಗಾಯಿತ ಧರ್ಮವನ್ನು ತೆಗಳಬೇಡಿ. ಲಿಂಗಾಯಿತ ಎನ್ನುವದು ನಿಸ್ಸಂಶಯವಾಗಿಯೂ ಶ್ರೇಷ್ಟ ಧರ್ಮ. ಲಿಂಗಾಯಿತ ಹಾಗೂ ವೀರಶೈವ ಎರಡೂ ವೈದಿಕ ಧರ್ಮದ ಆಶ್ರಯದಿಂದಲೆ ಬೆಳೆದುಬಂದಿದ್ದು(ಇದನ್ನು ತಾರ್ಕಿಕವಾಗಿ ವಿರೋಧಿಸಲು ಶೆಟ್ಕರ್ ರವರಿಂದ ಸಾಧ್ಯವಾಗಿಲ್ಲ). ಶೆಟ್ಕರವರು ಲಿಂಗಾಯಿತರಲ್ಲ;ಲಿಂಗಾಯಿತರ ವೇಷದಲ್ಲಿರುವ ಒಬ್ಬ ಚಾರ್ವಾಕ. ಈ ನೀಚ ಚಾರ್ವಾಕರು ಸ್ವಲಾಭಕ್ಕೋಸ್ಕರ ಬೌದ್ಧ, ಲಿಂಗಾಯಿತ ಧರ್ಮಿಗಳ ವೇಷ ತೊಡುತ್ತಾರೆ ಅಷ್ಟೆ.

                    • Naani's avatar
                      Naani
                      ಏಪ್ರಿಲ್ 26 2014

                      [ವೀರಶೈವ ಧರ್ಮವೇ ಬೇರೆ ಲಿಂಗಾಯತ ಧರ್ಮವೇ ಬೇರೆ. ಜಿನಹಂತಕ ರಾಮಯ್ಯ ಮೊದಲಾದವರು ಲಿಂಗಾಯತರಲ್ಲ ವೀರಶೈವರು. ಲಿಂಗಾಯತರು ಶಾಂತಿಪ್ರಿಯರು ದಯಾಶೀಲರು. ಅವರು ಸಕಲರ ಒಳಿತನ್ನೇ ಬಯವುವವರು.]
                      ನಾನವನಲ್ಲ!!!! ಫಿಲ್ಮ ಡೈಲಾಗ್ !!! ಚೆನ್ನಾಗಿದೆ. ಸರಿ, ಶೇಟ್ಕರ್/ ದರ್ಗಾರವರೇ… ಹಾಗಿದ್ದರೆ ಈ ವೀರಶೈವರಲ್ಲದ ‘ಲಿಂಗಾಯತಧರ್ಮದವರು’ ಕರ್ನಾಟಕದಲ್ಲಿ ಎಲ್ಲಿದ್ದಾರೆ ಅಂತ ಒಸಿ ಹೇಳ್ತೀರಾ.. ಅವರ ಲಿಂಗಾಯತ ಧರ್ಮದ ಪ್ರಕಾರವೇ ಜಾತಿಗೀತಿಗಳೆಲ್ಲವನ್ನೂ ಮೀರಿದ, ಯಾವ ಮಡಿಮೈಲಿಗೆಗಳನ್ನೂ ಆಚರಿಸದ, ಆ ಶಾಂತಿಪ್ರಿಯ ದಯಾಪರರ ಸಮುದಾಯಗಳಾವುವು ಮತ್ತು ಅವು ಎಲ್ಲೆಲ್ಲಿವೆ ಎಂದು ತೋರಿಸಿದರೆ ಒಮ್ಮೆ ಕಣ್ಣಾರೆ ಕಂಡು ಕೃತಾರ್ಥನಾಗಿಬಿಡುತ್ತೇನೆ. ಅವುಗಳನ್ನು ಯಾವ ರೀತಿಯಲ್ಲಿ ಇಲ್ಲಿ ಗುರುತಿಸಿಕೊಂಡಿದ್ದಾರೆ ಅನ್ನೋ ಕುತೂಹಲವೂ ಇದೆ. ಜಾತಿಗಳೇ ತುಂಬಿರುವ ಸಮಾಜದಲ್ಲಿ ಜಾತಿರಹಿತ ಈ ಮಾನವ ಧರ್ಮದ ಪಾಲಕರು ಆದರ್ಶ ಜೀವಿಗಳೇ ಸರಿ. ದಯವಿಟ್ಟು ಅವರನ್ನು ತೋರಿಸಿ.

                    • ವಿಜಯ್ ಪೈ's avatar
                      ವಿಜಯ್ ಪೈ
                      ಏಪ್ರಿಲ್ 26 2014

                      ಹಂಪನಾ ರ ಪ್ರತಿಕ್ರಿಯಾ ಲೇಖನ ಓದಿ ನಮ್ಮ ಬುಡಬುಡಕೆ ದಾಸಯ್ಯನವರಿಗೆ ಛಳಿ ಹುಟ್ಟಿರಬೇಕು.. ಅಲ್ಲೆಲ್ಲೂ ಬ್ರಾಹ್ಮಣರ ಪ್ರಸ್ತಾಪ ಬರದಿರುವುದು ನೋಡಿ ಹೇಳ ತೀರದ ಬೇಜಾರಾಗಿರಬೇಕು! 😉

                    • Godbole's avatar
                      Godbole
                      ಏಪ್ರಿಲ್ 26 2014

                      from http://ladaiprakashanabasu.blogspot.in/2014/04/blog-post_6463.html

                      “ಇತ್ತೀಚೆಗೆ ಬೆಂಗಳೂರಿನಲ್ಲಿ ‘ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು’ ಮತ್ತು ‘ಕರ್ನಾಟಕ ಸಾಹಿತ್ಯ ಪರಿಷತ್ತು’ ಮೂರು ದಿವಸ ‘ವಚನ ಸಾಹಿತ್ಯ’ ಹಾಗೂ ಆ ಕಾಲಘಟ್ಟದ ‘ಪರ್ಯಾಯ ಸಂಸ್ಕೃತಿ’ ಕುರಿತ ಚಿಂತನಾ ಸಮಾವೇಶ ಏರ್ಪಡಿಸಿತ್ತು. ಕರ್ನಾಟಕದ ಉದ್ದಗಲದಿಂದ ಸಾಕಷ್ಟು ಮಂದಿ ಬಂದು ಭಾಗವಹಿಸಿದ್ದರು. ಅವರೆಲ್ಲ ಸಂಸ್ಕೃತಿಯ ಏಳುಬೀಳುಗಳ ಬಗ್ಗೆ ಯೋಚಿಸುತ್ತ ಬಂದವರು. ಆದರೆ ನಾನು ಎರಡು ದಿನ ಭಾಗಿಯಾಗಲು ಆಗಲಿಲ್ಲ.

                      ಈ ಅಪೂರ್ವ ಸಮಾವೇಶದಲ್ಲಿ ಮೂರನೆಯ ದಿನದ ಗೋಷ್ಠಿಯಲ್ಲಿ ಗೆಳೆಯ ರಮಝಾನ್ ದರ್ಗಾ ಅವರ ಮಾತನ್ನು ಕೇಳಿಸಿಕೊಳ್ಳುವ ಕುತೂಹಲವಿತ್ತು. ಹಾಗೆಯೇ ನಾನು ಇಷ್ಟಪಡುವ ಚಿಂತಕ ಮತ್ತು ಇತಿಹಾಸತಜ್ಞ ಪ್ರೊ. ಷ. ಶೆಟ್ಟರ್ ಅವರು ಸಮಾರೋಪದಲ್ಲಿ ಏನು ಮಾತಾಡಬಹುದು ಎಂಬ ತವಕ ತೀವ್ರವಾಗಿತ್ತು. ಯಾಕೆಂದರೆ ವೀರಶೈವ ಸಮಾಜದಿಂದ ಬಂದು; ಒಬ್ಬ ದೊಡ್ಡ ಇತಿಹಾಸಕಾರರಾಗಿ; ಯಾವ ರೀತಿಯ ಅಂತರವನ್ನು ಇಟ್ಟುಕೊಂಡು ಆ ಸಾಂಸ್ಕೃತಿಕ ಸಂದರ್ಭವನ್ನು ಗ್ರಹಿಸಿ ಅವಲೋಕನಕ್ಕೊಳಪಡಿಸಬಲ್ಲರು ಎಂದು.

                      ಇನ್ನು ರಮಝಾನ್ ದರ್ಗಾ ಗಂಭೀರ ಸಾಹಿತ್ಯದ ವಿದ್ಯಾರ್ಥಿಯಾಗಿ ಎಡಪಂಥೀಯ ಚಿಂತನೆಗಳಿಂದ ಬೆಳೆದಿರುವಂಥವನು. ಹಿರಿಯ ಪತ್ರಕರ್ತನಾಗಿ ಪ್ರಾಮಾಣಿಕವಾಗಿ ದುಡಿದು ನಿವೃತ್ತಿಯಾದವನು. ಈಗ ಪೂರ್ಣ ಪ್ರಮಾಣದಲ್ಲಿ ಕೆಲವು ವರ್ಷಗಳಿಂದ ವಚನ ಸಾಹಿತ್ಯ ಮತ್ತು ಅದರ ಚಳವಳಿಯ ಅಧ್ಯಯನದ ಗಂಭೀರ ವಿದ್ಯಾರ್ಥಿ. ಇದರ ಮೂಲಕ ವೀರಶೈವ ಮಠಗಳಿಗೆ ಹತ್ತಿರದವನೂ ಆಗಿದ್ದಾನೆ. ಇದರ ಬಗ್ಗೆ ಬಹಳಷ್ಟು ಗೆಳೆಯರು ‘ದರ್ಗಾ ಒಂದು ರೀತಿಯ ಅಂತರವನ್ನು ಮಠಗಳ ಜೊತೆ ಕಾಪಾಡಿಕೊಂಡು; ವಚನಾಧ್ಯಯನದಲ್ಲಿ ತೊಡಗಬೇಕಾಗಿತ್ತು’ಎಂದು ಹೇಳಿದವರೂ ಇದ್ದಾರೆ.

                      ಅವರ್ಯಾರು ವಿಕೃತಿಯಿಂದ ಹೇಳಿದ ವರಲ್ಲ. ಈ ಮಧ್ಯೆ ದರ್ಗಾ ಬರೆದಿರುವ ‘ವಚನ ಸಾಹಿತ್ಯ’ ಕುರಿತ ಕೃತಿಗಳನ್ನು ಓದಿದಾಗ; ಕೆಲವು ಪ್ರಶ್ನೆಗಳು ಉದ್ಭವಿಸಿದ್ದವು. ಆ ಪ್ರಶ್ನೆಗಳು ಮತ್ತಷ್ಟು ದಟ್ಟವಾಗತೊಡಗಿದ್ದವು: ಗೋಷ್ಠಿಯಲ್ಲಿ ದರ್ಗಾನ ಮಾತುಗಳನ್ನು ಕೇಳಿದ್ದರಿಂದ ಅತ್ಯಂತ ಗಂಭೀರವಾಗಿ ಓದಿಕೊಂಡಿದ್ದಾನೆಂಬುದರಲ್ಲಿ ಎರಡನೆಯ ಮಾತಿಲ್ಲ. ಆದರೆ ಓದಿ ಪಂಡಿತ ನಾಗಿಬಿಟ್ಟಿದ್ದಾನೆ; ಚಿಂತಕನಾಗಿಲ್ಲ. ನಾವು ಚಿಂತಕರಾಗದಿದ್ದಾಗ ಭಟ್ಟಂಗಿಗಳಾಗುವ ಸಾಧ್ಯತೆ ಇರುತ್ತದೆ. ನಮಗೆ ಗೊತ್ತಿಲ್ಲದೆಯೇ ‘ಪ್ರವಾದಿತನ’ದ ಧೋರಣೆ ಆವರಿಸಿಕೊಂಡು ಬಿಟ್ಟಿರುತ್ತದೆ.

                      ಚಾರಿತ್ರಿಕವಾಗಿ ಯಾವುದೇ ಚಳವಳಿಯನ್ನಾಗಲೀ, ಅದರಜೊತೆ ಬಂದ ಸಾಹಿತ್ಯವನ್ನಾಗಲಿ ಅಧ್ಯಯನ ಮಾಡುವಾಗ ಗಂಭೀರ ತಾಳ್ಮೆ ಇರಬೇಕಾಗುತ್ತದೆ. ಅದು ಯಾಕೆ ಹುಟ್ಟಿತು. ಯಾವ ಪ್ರಭಾವವನ್ನು ಬೀರಿತು ಮತ್ತು ಅದು ಅವನತಿಯನ್ನು ಕಾಣಲು ಕಾರಣವೇನು? ಎಂಬ ಪ್ರಶ್ನೆಯನ್ನು ಕೇಳಿಕೊಳ್ಳುವಾಗಭಾವುಕರಾಗುವ ಕಾರಣವಿಲ್ಲ. ಭಾವುಕರಾದ ತಕ್ಷಣ ಸಮತೋಲನವನ್ನು ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಅಂಥ ಸಮತೋಲನವನ್ನು ದರ್ಗಾ ನಿಜವಾಗಿಯೂ ಕಳೆದುಕೊಂಡಿದ್ದ. ಒಮ್ಮೆಮ್ಮೆ ಎಷ್ಟು ಚೆನ್ನಾಗಿ ಓದಿಕೊಂಡಿದ್ದಾನೆಂದು ಹೊಟ್ಟೆಕಿಚ್ಚು ಬಂದರೂ; ಅದನ್ನು ಮರೆಮಾಚುವ ರೀತಿಯಲ್ಲಿ ‘ಭಟ್ಟಂಗಿ’ಯಾಗಿಬಿಟ್ಟಿದ್ದಾನೆ ಅನ್ನಿಸಿತು.

                      ಅವನ ಮಾತಿನ ವೈಖರಿ ಹೇಗಿತ್ತು ಎಂದರೆ ಹನ್ನೆರಡನೆಯ ಶತಮಾನದ ಚಳವಳಿ ಜಗತ್ತಿನ ಯಾವುದೇ ಚಳವಳಿಗೆ ಪ್ರೇರಕವಾಗಿದೆಯೆನ್ನುವ ಧೋರಣೆಯನ್ನು ತಾಳಿದ್ದ. ಯು.ಎನ್.ಒ ಸಂಸ್ಥೆಯ ಸಿದ್ಧಾಂತಗಳ ಮೇಲು ಆಗಿರುವ ಪ್ರಭಾವವನ್ನು ಪ್ರಸ್ತಾಪಿಸುತ್ತ ಹೋದ. ಹೌದು ಜಗತ್ತಿನ ಎಲ್ಲ ಚಳವಳಿಗಳಲ್ಲೂ ಹಾಗೂ ಕ್ರಾಂತಿಗಳಲ್ಲೂ ಕೆಲವು ಸಮಾನವಾದ ಅಂಶಗಳು ಇರುತ್ತವೆ. ಬಡತನ, ಮೇಲುಕೀಳು, ಭ್ರಷ್ಟಾಚಾರ ಹಿಂಸೆಯ ಅತಿರೇಕತೆ ಮುಂತಾದವುಗಳೇ ಕಾರಣವಾಗಿರುತ್ತವೆ. ಆದ್ದರಿಂದ ಎಂಟುನೂರು ವರ್ಷಗಳ ಹಿಂದೆ ಆಯಿತು ಎಂಬ ಕಾರಣಕ್ಕಾಗಿ ಕುರುಡು ಮೋಹದಿಂದ ವಾಸ್ತವವನ್ನು ಬದಿಗೊತ್ತುವ ಪ್ರಯತ್ನವನ್ನು ಮಾಡಬಾರದು.

                      ರಮಝಾನ್ ದರ್ಗಾ ಹೇಳಿದ ಎಂದು ಕೆಲವರು ಸಭೆ ಸಮಾರಂಭಗಳಲ್ಲಿ ಮುಂದುವರಿಸುವಂತೆ ಆಗಬಾರದು. ಯಾವುದನ್ನು ‘ಡೈಲೆಕ್ಟಿಕಲ್ ಮೆಟೀರಿಯಲಿಸಂ’ ಪ್ರಸ್ತಾಪಿಸಿ. ಅದನ್ನು ನಾನು ಓದಿಕೊಂಡಿರುವನು ಎಂದು ಹೇಳುವಾಗ ನಮ್ಮ ಮಾತಿನಲ್ಲಿ ಸಮತೋಲನವಿರಬೇಕಾಗುತ್ತದೆ. ಬಹಳ ತಮಾಷೆಯ ವಿಷಯವೆಂದರೆ ಡಾ.ಆಶಾದೇವಿಯವರು ಲಿಂಗ ತಾರತಮ್ಯ ಕುರಿತು ಗಂಭೀರವಾಗಿ ಮಾತಾಡಿದ ಮೇಲೆ ಕೆಲವರು ಪ್ರಶ್ನೆಗಳು ಕೇಳಿದ್ದಕ್ಕೆ.ನಾನು ಹೇಳುತ್ತೇನೆ ಘಂಟಾಘೋಷವಾಗಿ, ಹನ್ನೆರಡನೆಯ ಶತಮಾನದಲ್ಲಿ ಸ್ತ್ರೀವಾದಿ ಚಳವಳಿಯಿಂದ ಇವತ್ತಿನ ಸ್ತ್ರೀವಾದಿಗಳು ಸಾಕಷ್ಟು ಕಲಿಯಬೇಕಾಗಿದೆ ಎಂದು ಹೇಳುವಾಗ ಆಶಾ ಅವರು ಮುಸಿಮುಸಿ ನಕ್ಕು ಸುಮ್ಮನಾಗಿದ್ದರು.

                      ಹಾಗೆಯೇ ಕೆಲವು ವಿದ್ವಾಂಸರು ‘ಕಲ್ಯಾಣ ನಾಡಿನ ಕ್ರಾಂತಿ’ಎಂದು ಕರೆದುದರ ಬಗ್ಗೆ ಆಕ್ಷೇಪಣೆಯನ್ನು ಎತ್ತಿದ; ಹಾಗೆ ಕರೆಯಬಾರದಾಗಿತ್ತೆಂದು. ಯಾಕೆಂದರೆ ಕ್ರಾಂತಿಯಾದ ಮೇಲೆ ಎಲ್ಲವೂ ಸರಿಹೋಗಿ ಬಿಡುತ್ತದೆಂದು, ಯಾವ ಕ್ರಾಂತಿಯೂ ಶಾಶ್ವತ ಪರಿವರ್ತನೆಯನ್ನು ತಂದಿರುವುದಿಲ್ಲ ಎಂಬುದು ದರ್ಗನಂಥ ಗಂಭೀರ ಮಾರ್ಕ್ಸ್‌ವಾದಿ ಚಿಂತಕನಿಗೆ ಗೊತ್ತಿಲ್ಲದ ವಿಷಯವಲ್ಲ. ಒಂದು ವೇಳೆ ‘ಕಲ್ಯಾಣ ನಾಡಿನ ಕ್ರಾಂತಿ’ ಎಂದು ಕರೆದದ್ದರಲ್ಲಿ ತಪ್ಪೇನು? ಅದನ್ನು ಕ್ರಾಂತಿಯ ಆಶಯದಿಂದ ಹೇಳಿರಬಹುದೆಂದು ಸ್ವೀಕರಿಸಬೇಕು. ಇದರ ಬಗ್ಗೆ ಚಂಪಾ ಅವರು ಎದ್ದು ನಿಂತು ಸ್ಪಷ್ಟೀಕರಣ ನೀಡಿದರು.

                      ದರ್ಗಾ ಚರ್ಚೆಯ ಸಂದರ್ಭದಲ್ಲಿ ಎಷ್ಟು ಭಾವುಕನಾದನೆಂದರೆ: ವೀರಶೈವರು ಇಂದು ತಮ್ಮ ಮಕ್ಕಳಿಗೆ ವಚನ ಚಳವಳಿಗೆ ಕಾರಣರಾದ ಮಹನೀಯರ ಮತ್ತು ಮಹಿಳೆಯರ ಹೆಸರು ಇಡುತ್ತಿಲ್ಲ ಎಂದು ದುಃಖದಿಂದ ಮಾತೇ ಹೊರಡಲಿಲ್ಲ ಸ್ವಲ್ಪ ಸಮಯ.ಮತ್ತೊಂದು ಮುಖ್ಯ ವಿಷಯ: ದರ್ಗಾ ಮಾತಾಡುವಾಗ ‘ನಾನು’ ಎಂಬ ಶಬ್ದವನ್ನು ತುಂಬ ಬಳಸುವನು. ಹಾಗೆಯೇ ‘ನೀವು’ ಎಂದು. ಇವರೆಡೂ ಆಜ್ಞಾರೂಪಕ ಶಬ್ದಗಳು. ಭಾಷಣದಲ್ಲಿ ಮತ್ತು ಸಂವಾದದಲ್ಲಿ ಇದನ್ನು ಬಳಸಬಾರದು. ‘ನಾವು ’ಎಂಬುದು ಆರೋಗ್ಯಪೂರ್ಣವಾದದ್ದು.

                      ದರ್ಗಾನಂತಹ ಪ್ರಜ್ಞಾವಂತ ಲೇಖಕ ಮತ್ತು ಚಿಂತಕ ಈ ನನ್ನ ಮೇಲಿನ ವಾಕ್ಯಗಳನ್ನು ಪ್ರೀತಿಯಿಂದ ಸ್ವೀಕರಿಸಬೇಕು. ಯಾಕೆಂದರೆ: ಬಸವಣ್ಣ ಮತ್ತು ವಚನ ಚಳವಳಿ ನಮ್ಮ ಒಳನೋಟಗಳನ್ನು ವಿಸ್ತರಿಸುವ ಹಂತದಲ್ಲಿ ತೊಡಕಾಗಬಾರದು.ಹೀಗೆ ಆಗುವಾಗ ಬಸವಣ್ಣನವರಂಥ ಮಹಾನ್ ಸಂತನನ್ನು ಜಗತ್ತಿನ ಯಾರ್ಯಾರಿಗೋ ಹೋಲಿಸಿ ಮಾರ್ಕ್ಸ್ ಕೊಡಲು ಪ್ರಯತ್ನಿಸಬಾರದು. “

                    • Nagshetty Shetkar's avatar
                      Nagshetty Shetkar
                      ಏಪ್ರಿಲ್ 28 2014

                      “ಲಿಂಗಾಯಿತ ಹಾಗೂ ವೀರಶೈವ ಎರಡೂ ವೈದಿಕ ಧರ್ಮದ ಆಶ್ರಯದಿಂದಲೆ ಬೆಳೆದುಬಂದಿದ್ದು(ಇದನ್ನು ತಾರ್ಕಿಕವಾಗಿ ವಿರೋಧಿಸಲು ಶೆಟ್ಕರ್ ರವರಿಂದ ಸಾಧ್ಯವಾಗಿಲ್ಲ). ”

                      ಬಾಲು ಭಟ್ಟರ ಭಂಡತನಕ್ಕೆ ಏನನ್ನುವುದು?!

                      ನೋಡಿ: http://ladaiprakashanabasu.blogspot.in/2014/04/blog-post_410.html

                      ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳವನಿಕ್ಕುವೆ,
                      ತರ್ಕದ ಬೆನ್ನ ಬಾರನೆತ್ತುವೆ, ಆಗಮದ ಮೂಗ ಕೊಯುವೆ ನೋಡಯ್ಯಾ
                      ಮಹಾದಾನಿ ಕೂಡಲಸಂಗಮದೇವಾ,
                      ಮಾದಾರ ಚೆನ್ನಯ್ಯನ ಮನೆಯ ಮಗ ನಾನಯ್ಯಾ.

                    • Universal's avatar
                      Universal
                      ಏಪ್ರಿಲ್ 29 2014

                      ಬಸವಣ್ಜನವರು ಜನಿವಾರವನ್ನು ವಿರೋಧಿಸಿ ಶಿವದಾರವನ್ನು ಹಾಕಿಸಿದ್ದಷ್ಟೇ ಬಂತು. ವೀರಶೈವ/ಲಿಂಗಾಯಿತ ಎಂಬ ಜಾತಿಯಲ್ಲದ ಜಾತಿಯನ್ನು ಸೃಷ್ಟಿಸಲು ಹೋಗಿ ಕಗ್ಗೊಲೆಯಾದವರು ಅವರು. ಬ್ರಾಹ್ಮಣರಲ್ಲೂ ಸಾಕಷ್ಟು ಒಳ ಪಂಗಡಗಳಿವೆ. ಮಾಧ್ವ ಪಂಗಡದವರು ಮತ್ತು ಶ್ರೀ ವೈಷ್ಣವರು ಮಾತ್ರ ವಿಷ್ಣುವನ್ನು ಪೂಜಿಸುತ್ತಾರೆ. ಕೆಲವರು ಎಲ್ಲ ದೇವರನ್ನೂ ಪೂಜಿಸುತ್ತಾರೆ. ಬೇರೆಯವರೆಲ್ಲರೂ ಶಿವಭಕ್ತರು. ಹೀಗೆ ವಿಷ್ಣು ಮತ್ತು ಈಶ್ವರನ ಮಧ್ಯೆ ವ್ಯತ್ಯಾಸ ಮಾಡುತ್ತಾರೆ. ಹಾಗೆಂದು ಹೇಳಿಕೊಂಡು ಕಣ್ಣಿಗೆ ಕಾಣದ, ಉಪಯೋಗವಿಲ್ಲದ 33 ಕೋಟಿ ದೇವರನ್ನು ಈ ದೇಶದಲ್ಲಿ ಸೃಷ್ಟಿಸಿದ್ದಾರೆ. ಯಾವ ಜಾತಿಯಿಂದ, ಧರ್ಮದಿಂದ ಯಾರಿಗೆ ಏನು ಲಾಭವೋ ಯಾರಿಗೂ ತಿಳಿದಿಲ್ಲ.

                    • Umesh's avatar
                      Umesh
                      ಏಪ್ರಿಲ್ 28 2014

                      ಬಸವಾದಿ ಶರಣರು ವೇದ ಶಾಸ್ತ್ರಗಳ ಬಗ್ಗೆ ಅಪಾರವಾದ ಭಕ್ತಿ ಮತ್ತು ಶ್ರದ್ದೆ ಹೊಂದಿದ್ದರು. ಕೆಳಗಿನ ಉರಿಲಿಂಗಿಪೆದ್ದಿಯವರ ವಚನ ಇದನ್ನು ಸ್ಪಷ್ಟಪಡಿಸುತ್ತದೆ;
                      “ಓಂಕಾರವೆಂಬ ವೃಕ್ಷದಲ್ಲಿ ಋಗ್ವೇದ ಯಜುರ್ವೇದ ಸಾಮವೇದ ಅಥರ್ವಣ ವೇದಗಳೆಂಬ ನಾಲ್ಕು ಶಾಖೆಗಳು.
                      ಅನಂತಾ ವೈ ವೇದಾ ಉಪವೇದಗಳೆಂಬ ಉಪಶಾಖೆಗಳು, ಶಾಸ್ತ್ರಗಳೆಂಬ ಅಂಕುರ ಪಲ್ಲವ, ಪುರಾಣಗಳೆಂಬ ಪುಷ್ಪ
                      ಅಗಮಂಗಲೆಂಬ ಕಾಯಿ ಬಲಿದು ಶ್ರೀ ಪಂಚಾಕ್ಷರಿ ಎಂಬ ಮಧುರ ಹಣ್ಣುಗಳು ಅಗಣಿತ ಫಲವನು ಅನಂತ ಕಾಲ ಭೋಗಿಸಲು
                      ಮತ್ತಂ ಜಿಹ್ನೆಯೊಳಗೆ ಬಂದಿರಲು ಭೋಗಿಸಿ ಸುಖಿಯಹುದಲ್ಲದೆ ಇದಿರ ವಿದ್ಯೆಗಳೆಂಬ ಸಸಿಯ ಸಾಕಿ ಸಲಹಲುನ್ತೆ
                      ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ?”

                  • Umesh's avatar
                    Umesh
                    ಏಪ್ರಿಲ್ 26 2014

                    ಲಿಂಗಾಯತ ಧರ್ಮ ಕನ್ನಡಿಗರ ಪ್ರಥಮ ಧರ್ಮ ಎಂದು ಪ್ರೊ. ಕಲ್ಬುರ್ಗಿ ಹೇಳಿದ ಸುಳ್ಳನ್ನು ಪ್ರೊ. ಹಂಪನಾ ಸಾಕ್ಷಿ ಸಮೇತ ಪ್ರಜಾವಾಣಿಯಲ್ಲಿ ನಿರಾಕರಿಸಿದ್ದಾರೆ.

                    ಉತ್ತರ
                    • Nagshetty Shetkar's avatar
                      Nagshetty Shetkar
                      ಏಪ್ರಿಲ್ 26 2014

                      ಹಂಪನಾ ಅವರು ವೀರಶೈವ ಧರ್ಮವನ್ನು ಲಿಂಗಾಯತ ಎಂದು ತಪ್ಪಾಗಿ ತಿಳಿದು ಪ್ರಜಾವಾಣಿ ಲೇಖನ ಬರೆದಿದ್ದಾರೆ. ವೀರಶೈವವೇ ಬೇರೆ ಲಿಂಗಾಯತವೇ ಬೇರೆ. ಜಿನಹಂತಕರೆಲ್ಲ ವೈದಿಕ ವೀರಶೈವರು. ವಚನಕಾರರೆಲ್ಲ ಅವೈದಿಕ ಲಿಂಗಾಯತರು. ದರ್ಗಾ ಸರ್ ಅವರು ಲಿಂಗಾಯತ ವೀರಶೈವ ಬೇರೆ ಬೇರೆ ಅಂತ ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ಈ ಲೇಖನದಲ್ಲಿ ಹೇಳಿದ್ದಾರೆ. ನೋಡಿ: http://bit.ly/1hAsDZO

                    • Naani's avatar
                      Naani
                      ಏಪ್ರಿಲ್ 26 2014

                      ಸರಿ ವಾದಕ್ಕಾಗಿ ಒಪ್ಪುವ, ಈ ಲಿಂಗಾಯತ ಧರ್ಮಕ್ಕೆ ಸೇರಿರುವವರು ಈಗ ಎಲ್ಲಿದ್ದಾರೆ?? ಅದು ಈಗ ಅಸ್ತಿತ್ವದಲ್ಲಿದೆಯೇ? ಇದ್ದರೆ, ಅದನ್ನು ಅನುಸರಿಸುತ್ತಿರುವ ಜನಸಮುದಾಯಗಳಾವುವು? ಎಲ್ಲೂ ಅದನ್ನನುಸರಿಸುವವರು ಇಲ್ಲ ಎಂದಾದಲ್ಲಿ ಅದು ಈಗ ಅಸ್ತಿತ್ವದಲ್ಲೇ ಇಲ್ಲದ ಧರ್ಮವೇ??? ಅಂದರೆ ಸತ್ತು ಹೋಗಿದೆಯೇ???!!!!

                    • Universal's avatar
                      Universal
                      ಏಪ್ರಿಲ್ 27 2014

                      ವೀರಶೈವ ಧರ್ಮವನ್ನೇ ಲಿಂಗಾಯಿತ ಧರ್ಮವೆಂದು ಕೆಲವರು ಕರೆದುಕೊಳ್ಳುತ್ತಾರೆ. ಲಿಂಗಾಯಿತ ಧರ್ಮವೆನ್ನುವ ಬೇರೆಯದೇ ಆದ ಪಂಥವೇ ಇಲ್ಲ. ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿ, ಆ ಜಾತಿಯನ್ನು ಧಿಕ್ಕರಿಸಿ ಹೊರಬಂದಿದ್ದ, ಜಾತಿಯಲ್ಲದ ಜಾತಿಯಾದ ವೀರಶೈವ ಜಾತಿ/ಧರ್ಮವನ್ನು ಹುಟ್ಟು ಹಾಕಿದವರು ಬಸವಣ್ಣನವರೇ ಎಂಬುದನ್ನು ತಿಳಿದುಕೊಳ್ಳಬೇಕು. ಅವರ ಉತ್ಸಾಹವನ್ನು ತಡೆಯಲಾಗದ ಇತರ ವಿರೋಧಿ ಗುಂಪಿನವರು ಕಡೆಗೆ ಅವರನ್ನೇ ಕೊಲೆ ಮಾಡಿದರು. ಪ್ರಪಂಚ ಎಷ್ಟೊಂದು ಮುಂದುವರೆದಿದೆ ಎಂದು ಹೇಳಿಕೊಳ್ಳುತ್ತಲೇ ಅರ್ಥವಿಲ್ಲದ ಸಾವಿರಾರು ಜಾತಿ ಧರ್ಮಗಳ ಹೆಸರಿನಲ್ಲಿ, ಕೆಲಸಕ್ಕೆ ಬಾರದ 33 ಕೋಟಿ ದೇವರುಗಳ ಹೆಸರಿನಲ್ಲಿ ಕಚ್ಚಾಡುತ್ತಾ ತಮ್ಮ ಅವಿವೇಕವನ್ನು ಇಡೀ ಲೋಕಕ್ಕೆ ತೋರಿಸುವುದನ್ನು ನಮ್ಮ ಜನ ಎಂದಿಗೆ ನಿಲ್ಲಿಸುತ್ತಾರೋ ಆ ಕಣ್ಣಿಗೆ ಕಾಣದ ನಿರುಪಯೋಗೀ ದೇವರುಗಳೇ ಹೇಳಬೇಕು.

                    • Umesh's avatar
                      Umesh
                      ಏಪ್ರಿಲ್ 26 2014

                      ಪ್ರೊ.ಹಂಪನಾ ಪ್ರಾಚೀನ ಕನ್ನಡ ಶಾಸನ ಹಾಗು ವಚನ ವಿದ್ವಾಂಸರೂ ಹೌದು. ಅವರಿಗೆ ಲಿಂಗಾಯತರ ಹಾಗು ವೀರಶೈವರ ನಡುವೆ ವ್ಯತ್ಯಾಸ ಇಲ್ಲ ಅಂತ ಗೊತ್ತಿದೆ. ಸ್ವಯಂ ಶ್ರೀ ಬಸವಣ್ಣನವರೆ ಒಂದು ವಚನದಲ್ಲಿ ತಾನು ವೀರಶೈವನೆಂದು ಹೇಳಿಕೊಂಡಿದ್ದಾರೆ. ಇದನ್ನು ಖ್ಯಾತ ವಚನ ವಿದ್ವಾಂಸರಾದ ಪ್ರೊ.ಚಿದಾನಂದಮೂರ್ತಿ ಒಂದು ಕಡೆ ಉಲ್ಲೇಕಿಸಿದ್ದಾರೆ. ಹಾಗಾಗಿ ವೀರಶೈವ ಮತ್ತು ಲಿಂಗಾಯತ ಪರ್ಯಾಯಪದಗಳು. ಬೇರೆ ಅಲ್ಲ.

                    • Nagshetty Shetkar's avatar
                      Nagshetty Shetkar
                      ಏಪ್ರಿಲ್ 27 2014

                      ಹಂಪನಾ ಅವರು ವಿದ್ವಾಂಸರು ಹೌದು. ಆದರೆ ಅವರ ವಿದ್ವತ್ ಕ್ಷೇತ್ರ ಜೈನ ಸಾಹಿತ್ಯ. ಹಂಪನಾ ಅವರು ವಚನಸಾಹಿತ್ಯದ ಮೇಲೆ ಸಂಶೋಧನೆ ನಡೆಸಿಲ್ಲವಾದುದರಿಂದ ಅವರಿಗೆ ಲಿಂಗಾಯತ ಧರ್ಮದ ಬಗ್ಗೆ ಕೆಲವು ತಪ್ಪು ಕಲ್ಪನೆಗಳಿವೆ.

                    • Nagshetty Shetkar's avatar
                      Nagshetty Shetkar
                      ಏಪ್ರಿಲ್ 27 2014

                      “ಲಿಂಗಾಯಿತ ಧರ್ಮವೆನ್ನುವ ಬೇರೆಯದೇ ಆದ ಪಂಥವೇ ಇಲ್ಲ.”

                      ಇದು ನೀವು ಲಿಂಗಾಯತ ಧರ್ಮದ ಅನುಯಾಯಿಗಳಿಗೆ ಮಾಡುತ್ತಿರುವ ಅನ್ಯಾಯ ಹಾಗೂ ಬಸವಣ್ಣ ಆದಿಯಾಗಿ ವಚನಕಾರರಿಗೆ ಮಾಡುತ್ತಿರುವ ಅವಮಾನ.

                    • Naani's avatar
                      Naani
                      ಏಪ್ರಿಲ್ 28 2014

                      ಲಿಂಗಾಯತ ಧರ್ಮದ ಅನುಯಾಯಿಗಳು ಎಲ್ಲೆಲ್ಲಿದ್ದಾರೆ? ಅವರುಗಳ್ಯಾರು? ಎನ್ನುವ ಪ್ರಶ್ನೆಗೆ ಜಾಣಕಿವುಡುತನ ಪ್ರದರ್ಶಿಸುವ ನೀವು “ಲಿಂಗಾಯತ ಧರ್ಮಾನುಯಾಯಿಗಳಿಗೆ ಮಾಡುತ್ತಿರುವ ಅನ್ಯಾಯ” ಎಂದರೆ ಅದಕ್ಕೆ ಅರ್ಥವೇನಾದರೂ ಉಂಟೇ? ಇಲ್ಲದವರಿಗೆ ಅನ್ಯಾಯ ಮಾಡಲೇಗೆ ಸಾಧ್ಯ? (ದಯವಿಟ್ಟು ಉಳದ ಸ್ನೇಹಿತರು ಸಾವಧಾನದಿಂದ ಇದ್ದು ಈ ಶೇಟ್ಕರ್/ದರ್ಗಾರವರು ಈ ಪ್ರಶ್ನೆಗೆ ಮಾತ್ರ ಉತ್ತರಿಸುವಂತೆ ಮಾಡಲು ಸಹಕರಿಸಬೇಕಾಗಿ ವಿನಂತಿ) ಈ ಪ್ರಶ್ನೆಯ ಕುರಿತ ನಿಮ್ಮ ಭಂಡ ಕಿವುಡತನವನ್ನು ಕೈಬಿಟ್ಟು (ದರ್ಗಾರವರು ಅವಧಿಯಲ್ಲಿ) ಲಕ್ಷಣೀಕರಿಸಿದ ಲಿಂಗಾಯತ ಧರ್ಮವನ್ನು ಅನುಸರಿಸುತ್ತಿರುವ ಸಮುದಾಯಗಳಾವುವು? ಅವು ಎಲ್ಲೆಲ್ಲಿವೆ ಎಂದು ಹೇಳಬೇಕಾಗಿ ವಿನಂತಿ. ಹಾಗೆ ತೋರಿಸಲು ವಿಫಲವಾದಲ್ಲಿ ಆ ಲಕ್ಷಣಗಳು ಕೇವಲ ದರ್ಗಾರವರ ಬುರಡೆಗಳೇ ವಿನಃ ಆ ರೀತಿಯ ಧರ್ಮವೊಂದನ್ನು ಪರಿಪಾಲಿಸುವ ಸಮುದಾಯಗಳೇ ಈ ಭೂಮಿ ಮೇಲೆ ಎಲ್ಲೂ ಇಲ್ಲವೆಂದರ್ಥವಾಗುತ್ತದಷ್ಟೇ!!! ಸರೀ ತಾನೇ!!!

                • ವಿಜಯ್ ಪೈ's avatar
                  ವಿಜಯ್ ಪೈ
                  ಏಪ್ರಿಲ್ 25 2014

                  ಮೇಲಿನ ವಾಕ್ಯದಲ್ಲಿ Scientific education and rational outlook ನ ಬಗ್ಗೆ ಬರೆದು (ಹಾಗೆ ನೋಡಿದರೆ Scientific education and rational outlook ಇರವವನಿಗೆ/ಹೆಚ್ಚಾದವನಿಗೆ ಯಾವ ದೇವರು/ಮತ ಬೇಕಾಗಿಲ್ಲ. ).., ಅದರ ನಂತರದ ವಾಕ್ಯದಲ್ಲಿ..ಎಂದಿನಂತೆ ಬುಡಬುಡಿಕೆ ದಾಸಯ್ಯನ ಹಾಗೆ, ನಿಮ್ಮ ಏಕಮತ/ಏಕದೇವ ಪ್ರಚಾರ ಸುರು ಇಟ್ಟುಕೊಂಡಿದ್ದೀರಿ.. ಮಿಶನರಿನಾ ನೀವು? ಅಥವಾ ಮಧ್ಯಪ್ರಾಚ್ಯದಿಂದ ಈ ಏಕಮತ/ಏಕದೇವ ಪ್ರಚಾರಕ್ಕೆ ದುಡ್ಡು ಸಿಗುತ್ತಾ ಇದೆಯೆ?
                  ನಮಗೆ ಮಿಲಿಯನ್ ದೇವರೇ ಬೇಕು..ನಿಮಗೇನಾದರೂ ಸಮಸ್ಯೆ ಇದೆಯೆ ಅದರಲ್ಲಿ??

                  ಉತ್ತರ
                  • Nagshetty Shetkar's avatar
                    Nagshetty Shetkar
                    ಏಪ್ರಿಲ್ 25 2014

                    ಮುಂಬೈಯಲ್ಲಿ ಮೇಧಾ ಪಾಟ್ಕರ್ ಗೆಲ್ಲುವುದು ನಿಶ್ಚಿತ. ಜನತಾ ಜನಾರ್ದನರಿಂದ ಆಪ್ ಪಕ್ಷಕ್ಕೆ ಅಭೂತಪೂರ್ವ ಬೆಂಬಲ. ನನ್ನ ಪರಿಶ್ರಮ ಸಾರ್ಥಕವಾಯಿತು.

                    ಉತ್ತರ
                    • Balachandra Bhat's avatar
                      ಏಪ್ರಿಲ್ 25 2014

                      Shetkar, didnt u canvas for Shazia ilmi? U must!

                    • Nagshetty Shetkar's avatar
                      Nagshetty Shetkar
                      ಏಪ್ರಿಲ್ 25 2014

                      ವಾರಣಾಸಿಗೆ ಹೊರಟಿದ್ದೇನೆ.

                    • ವಿಜಯ್ ಪೈ's avatar
                      ವಿಜಯ್ ಪೈ
                      ಏಪ್ರಿಲ್ 26 2014

                      [ಜನತಾ ಜನಾರ್ದನರಿಂದ ಆಪ್ ಪಕ್ಷಕ್ಕೆ ಅಭೂತಪೂರ್ವ ಬೆಂಬಲ. ನನ್ನ ಪರಿಶ್ರಮ ಸಾರ್ಥಕವಾಯಿತು.]
                      ಹೌದು…ಹ್ಯಾಂಡ್ ಬಿಲ್ ಹಂಚುವವರು ಮತ್ತು ಬ್ಯಾನರ್ ಹಚ್ಚುವವರು ಕೂಡ ನಗಣ್ಯರಲ್ಲ. ಒಳ್ಳೆ ಸಂಪಾದನೆಯೂ ಆಗಿರಬೇಕು. ಪುಕ್ಕಟೆ ಮಾಡಿದ್ದರೂ, ಮುಂದೊಂದು ದಿನ ‘ಲಾಭ’ವಿದೆ ಬಿಡಿ. ಮೇಧಾ ಅವರು ಇಂಟರ್ ನ್ಯಾಶನಲ್ ಫಿಗರ್ರು.
                      [ವಾರಣಾಸಿಗೆ ಹೊರಟಿದ್ದೇನೆ.]
                      ಒಳ್ಳೆ ಸಂಪಾದನೆ ಆಗಲಿ ಎಂಬ ಹಾರೈಕೆ. ಆದರೆ ಇಲ್ಲಿ ಊದಿದ ಹಾಗೆ ಪುಂಗಿ ಊದಬೇಡಿ..ನೋಡಿಕೊಂಡು ಊದಿ. ಗಂಗಾನದಿಯಲ್ಲಿ ಮುಳುಗಿಸಿಬಿಟ್ಟಾರು ಮತ್ತೆ! 🙂

                    • vinaayak's avatar
                      vinaayak
                      ಏಪ್ರಿಲ್ 26 2014

                      ಶೆಟ್ಕರ ಅವರೆ ನೀವು ಲೇಖನದ ವಿಷಯಕ್ಕೆ ಅಥವಾ ಕಮೆಂಟಿಗೆ ತಕ್ಕಂತೆ ಉತ್ತರಿಸುವದನ್ನು ಬಿಟ್ಟು ಮೇಧಾ ಗೆಲ್ಲುತ್ತಾರೆಂದು ಹೇಳುವದು ಅವಶ್ಯವಿದೆಯೇ? ಇಲ್ಲಿ ಮೇಧಾರ ಕುರಿತು ಯಾರೂ ನಿಮ್ಮನ್ನು ಪ್ರಶ್ನಿಸಿಲ್ಲವಲ್ಲ?? ಒಳ್ಳೆ ಪ್ರಾಥಮಿಕ ಶಾಲಾ ಮಕ್ಕಳಂತೆ ನೀವು ಪ್ರಚಾರ ಮಾಡಿದ ವ್ಯಕ್ತಿ ಗೆಲ್ಲುತ್ತಾರೆಂದು ಸಂಭ್ರಮಿಸುತ್ತಿದ್ದೀರಲ್ಲಾ? ಅವರ ಗೆಲ್ಲುವಿಕೆ ಕುರಿತು ಯಾರೂ ಮಾತನಾಡಿಲ್ಲ? ನೀವು ಕಮೆಂಟ ಮಾಡುವಾಗ ಬೇರೆಯವರ ಕಂಮೆಂಟ ಓದಿ , ಲೇಖನ ಓದಿ ಕಮೇಂಟಿಸುತ್ತಿಲ್ಲವೆನಿಸುತ್ತದೆ. ಕೇವಲ ವಿರೋಧಕ್ಕಾಗಿ ವಿರೋಧಿಸುತ್ತೀರೆನಿಸುತ್ತದೆ. ಎಲ್. ಕೆ. ಜಿ ಮಕ್ಕಳ ಪ್ರಶ್ನೆಗಳಂತೆ ಉತ್ತರಗಳಂತಿವೆ ನಿಮ್ಮ ಕಮೆಂಟುಗಳು.

                • Balachandra Bhat's avatar
                  ಏಪ್ರಿಲ್ 25 2014

                  @Shetkar,
                  [Scientific education and rational outlook will make people see through all fake Hindu swamis and god men.]
                  U are neither qualified to understand science/rationalism, nor you are philosophically excellent.

                  ಉತ್ತರ
                  • Nagshetty Shetkar's avatar
                    Nagshetty Shetkar
                    ಏಪ್ರಿಲ್ 25 2014

                    ವಿಜ್ಞಾನ ಹಾಗೂ ವೈಚಾರಿಕತೆ ವೈದಿಕರ ಖಾಸಗಿ ಸ್ವತ್ತು ಎಂದು ನೀವು ತಿಳಿದಿದ್ದೀರಿ. ಆದರೆ ವಿಜ್ಞಾನ ಹಾಗೂ ವೈಚಾರಿಕತೆಗೆ ಹೊಲೆ ಇಲ್ಲ ಮೈಲಿಗೆ ಇಲ್ಲ ಕುಲದ ಹಂಗಿಲ್ಲ. ಅವು ದ್ವೈತಾದ್ವೈತವಿಶಿಷ್ಟಗಳ ತರಹ ಜಾತಿ ಅರಸಿ ನೆಲೆ ಹುಡುಕುವುದಿಲ್ಲ.

                    ಉತ್ತರ
                    • Balachandra Bhat's avatar
                      ಏಪ್ರಿಲ್ 25 2014

                      ಆದರೆ ನಿಮಗ್ಯಾಕೆ ವಿಜ್ನಾನ ತಲೆಗೆ ಹತ್ತಲಿಲ್ಲ?

                    • Nagshetty Shetkar's avatar
                      Nagshetty Shetkar
                      ಏಪ್ರಿಲ್ 28 2014

                      “ಆದರೆ ನಿಮಗ್ಯಾಕೆ ವಿಜ್ನಾನ ತಲೆಗೆ ಹತ್ತಲಿಲ್ಲ?”

                      ಸರಿ ನನ್ನ ತಲೆಗೆ ವಿಜ್ಞಾನ ಹತ್ತಲಿಲ್ಲ, ಆದರೆ ನಿಮ್ಮ ತಲೆಗೆ ಗೊಬ್ಬರದ ಹುಳುಗಳು ಹತ್ತಿವೆಯಲ್ಲ!

            • Universal's avatar
              Universal
              ಏಪ್ರಿಲ್ 25 2014

              ಒಂದೇ ಮಾತಿನಲ್ಲಿ ಹೇಳುವುದಾದರೆ, 33 ಕೋಟಿ ನಿರುಪಯೋಗೀ ದೇವರುಗಳನ್ನು ನಮ್ಮ ಭಾರತ ದೇಶದಲ್ಲಿ ಹುಟ್ಟು ಹಾಕಿದವರು ಮನುಷ್ಯರೇ. ಸಾವಿರಾರು ಕೆಲಸಕ್ಕೆ ಬಾರದ ಜಾತಿಗಳನ್ನು ಹುಟ್ಟು ಹಾಕಿದವರೂ ಮನುಷ್ಯರೇ. ಹಾಗಾಗಿ, ಇಲ್ಲದ ದೇವರುಗಳ ಹೆಸರಿನಲ್ಲಿ ಹೊಡೆದಾಡುವುದಂತೂ ಅವಿವೇಕತನವೆಂದು ಹೇಳಬೇಕಾಗಿದೆ. ವಿದ್ಯಾವಂತ ಕ್ರೂರಿಗಳೂ, ಅವಿದ್ಯಾವಂತ ಮುಠ್ಠಾಳರೂ ಈ ದೇಶದಲ್ಲಿ ಹೆಚ್ಚಾಗಿರುವುದರಿಂದ ನಮ್ಮ ದೇಶವೆಂದಿಗೂ ಮುಂದುವರೆಯುವುದೇ ಇಲ್ಲ. ಎಲ್ಲರೂ ಈಚಲ ಮರದ ಕೆಳಗೆ ಕುಳಿತುಕೊಂಡವರಂತೆ ಆಡುವುದರಿಂದ ಯಾವುದೇ ಅಭಿವೃದ್ಧಿಯೂ ಈ ದೇಶದಲ್ಲಿ ಆಗುವುದೇ ಇಲ್ಲ.

              ಉತ್ತರ
  9. ಹದಮೀರದ, no-nonsense ಲೇಖನ. ಇಂಥ ವಿವಾದಗಳಲ್ಲೆಲ್ಲ ಬೇಡಬೇಡವೆಂದರೂ ರಾಜಕೀಯದ ನಾತ ರಪ್ಪೆಂದು ಮೂಗಿಗೆ ಬಡಿಯುತ್ತದೆ; ಆದ್ದರಿಂದ ಇಂಥವುಗಳಬಗ್ಗೆ ಏನೂ ಮಾತಾಡಲು ಮನಸ್ಸು ಬರುವುದಿಲ್ಲ. ಆದರೆ ಸ್ಪಷ್ಟನಿಲುವಿನ ಲೇಖನಗಳು ಹೆಚ್ಚುಹೆಚ್ಚು ಬರುವುದರಿಂದಲಾದರೂ ವಾತಾವರಣದಲ್ಲಿರುವ confusionಗಳನ್ನು ನಿಯಂತ್ರಣದಲ್ಲಿಡಬಹುದೇನೋ ಎಂದೂ ಒಮ್ಮೊಮ್ಮೆ ಅನಿಸುತ್ತದೆ.

    ಇದರ ಬಗ್ಗೆ ನನ್ನ ಅನಿಸಿಕೆಗಳನ್ನು ಇಷ್ಟರಲ್ಲೇ ಬರೆಯುವೆ.

    ಉತ್ತರ
  10. M.A.Sriranga's avatar
    M.A.Sriranga
    ಏಪ್ರಿಲ್ 24 2014

    ಇಂತಹ ಘಟನೆಗಳಿಂದ ಜನರಿಗೆ ಪೇಜಾವರ ಶ್ರೀಗಳ ಬಗ್ಗೆ ಇರಬಹುದಾದ ಅಷ್ಟೋ ಇಷ್ಟೋ ವಿಶ್ವಾಸವೂ ಹೊರಟುಹೋಗುತ್ತದೆ.

    ಉತ್ತರ
    • ವಿಜಯ್ ಪೈ's avatar
      ವಿಜಯ್ ಪೈ
      ಏಪ್ರಿಲ್ 24 2014

      @ಎಂ ಎ ಶ್ರೀರಂಗ
      [ಇಂತಹ ಘಟನೆಗಳಿಂದ ಜನರಿಗೆ ಪೇಜಾವರ ಶ್ರೀಗಳ ಬಗ್ಗೆ ಇರಬಹುದಾದ ಅಷ್ಟೋ ಇಷ್ಟೋ ವಿಶ್ವಾಸವೂ ಹೊರಟುಹೋಗುತ್ತದೆ.]
      ಜನರು ನಿಜವನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡದೇ, ಪೇಪರಿನಲ್ಲಿ ಬಂದದ್ದನ್ನೇ ನಂಬುವ ಕುರಿಗಳಾದರೆ ಈ ಸಾಧ್ಯತೆ ಇದೆ.

      ಮೊದಲನೆಯದಾಗಿ ಆದ ಎಲ್ಲ ಘಟನೆಗಳಿಗೆ, ಯಾರದೋ ತಪ್ಪಿಗೆ ಪೇಜಾವರರನ್ನು ಹೊಣೆ ಮಾಡುವುದನ್ನು ಬಿಡಬೇಕು. ಪೇಜಾವರರ ಪರ್ಯಾಯದ ಕಾಲದಲ್ಲಿ ಉಡುಪಿಯಲ್ಲಿ ಎಷ್ಟು ಮುಕ್ತತೆ ಇತ್ತು ಎನ್ನುವುದು ಎಲ್ಲರಿಗೂ ಗೊತ್ತು. ಉಳಿದವರ ಪರ್ಯಾಯದ ಮೇಲೆ, ಆ ಹೊತ್ತಿಗೆ ಉಡುಪಿಯಲ್ಲಿ ಆಗುವ ವ್ಯವಸ್ಥೆ/ ಆವ್ಯವಸ್ಥೆಗಳ ಮೇಲೆ ಪೇಜಾವರರ ಹಿಡಿತ ಇರುವುದಿಲ್ಲ. ಪೇಜಾವರರು ಹಿರಿಯರಾಗಿ ಸಲಹೆ ಕೊಡಬಹುದಷ್ಟೆ. ಪೇಜಾವರರು ತಮ್ಮ ಲಿಮಿಟೇಶನ್ ನಲ್ಲಿಯೇ ಸಾಕಷ್ಟು ಸುಧಾರಣೆಯನ್ನು ತರಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಇದರಿಂದ ವಿರೋಧಿಗಳಿಂದ ಕುಹಕವನ್ನು, ಸ್ವಸಮಾಜ ಬಾಂಧವರಿಂದ ಅಸಮಾಧಾನವನ್ನು ಎದುರಿಸಿದ್ದಾರೆ. ಮಿಡಿಯಾದವರು ಅವರ ಬಾಯಿಯಲ್ಲಿ ಪ್ರಶ್ನೆ ತುರುಕಿ, ಉತ್ತರ ತೆಗೆದುಕೊಂಡು..ಆಮೇಲೆ ತಮಗೆ ಬೇಕಾದಂತೆ ತಿರುಚಿ..ವಿವಾದ ಎಬ್ಬಿಸಿದ ಘಟನೆಗಳು ಹಲವಾರು ನಡೆದಿವೆ. ಉದಾ: ಉಳಿದವರಿಗಾಗಿ ಕೊಟ್ಟ ಹಾಗೆ, ನೀವು ಕುರುಬರಿಗೆ ವೈಷ್ಣವ ದೀಕ್ಷೆ ಕೊಡುತ್ತೀರಾ? ಎಂಬ ಪ್ರಶ್ನೆ ಕೇಳಿ, ಅವರಿಂದ ‘ಅವರು ಬಯಸಿದರೆ ಖಂಡಿತವಾಗಿಯೂ ಕೊಡುತ್ತೇನೆ” ಎಂಬ ಉತ್ತರ ಬಂದಾಗ, ಅದನ್ನು ‘ಕುರುಬರಿಗೆ ವೈಷ್ಣವ ದೀಕ್ಷೆ ಕೊಡಲು ನಾನು ಸಿಧ್ಧ : ಪೇಜಾವರ ಶ್ರೀ” ಎಂಬ ಸುದ್ದಿಯನ್ನಾಗಿ ಪ್ರಕಟಿಸಿ, ಅದನ್ನು ವಿವಾದವಾಗಿಸಿ, ಕೆಲವು ಕುರುಬ ಮುಖಂಡರು, ಸ್ವಾಮಿಗಳು ‘ಇವರ ದೀಕ್ಷೆಯ ಭಿಕ್ಷೆ ನಮಗೆ ಬೇಕಾಗಿಲ್ಲ’ ಎಂದು ಪ್ರತಿಭಟಿಸುವಂತೆ ಮಾಡಿದ್ದಾರೆ. ಇಂತಹ ವಿವಾದಗಳು, ಆಂತರ್ಯದಲ್ಲಿ ಒಳ್ಳೆಯವರಾಗಿರುವ, ಹಿಂದುಗಳನ್ನು ಒಗ್ಗೂಡಿಸಲು ತನ್ನದೇ ಆದ ಪ್ರಯತ್ನ ಮಾಡಿರುವ ಪೇಜಾವರ ಶ್ರೀಗಳನ್ನು ಕಾಡಿವೆ. ಹಿರಿಯರಾದ ಪೇಜಾವರರ ಮೇಲೆ ಕೊಂಚ ಪ್ರೀತಿ ಇದ್ದವರು, ಸುಕಾ ಸುಮ್ಮನೆ ಎದ್ದ ಈ ವಿವಾದಗಳಿಂದ ಬೇಸತ್ತು, ಯಾಕಪ್ಪಾ ಈ ಪೇಜಾವರ ಶ್ರೀಗಳು ಈ ‘ಸುಧಾರಣೆ’ಯ ಕಾರ್ಯವನ್ನು ಬಿಟ್ಟು ಸುಮ್ಮನಿರುವುದಿಲ್ಲ ಎಂದುಕೊಂಡಿದ್ದಿದೆ.

      ಉತ್ತರ
    • Nagshetty Shetkar's avatar
      Nagshetty Shetkar
      ಏಪ್ರಿಲ್ 24 2014

      “ಪೇಜಾವರ ಶ್ರೀಗಳ ಬಗ್ಗೆ ಇರಬಹುದಾದ ಅಷ್ಟೋ ಇಷ್ಟೋ ವಿಶ್ವಾಸ”

      scientific education and rational outlook will make people see through all fake Hindu swamis and god men.

      ಉತ್ತರ
  11. ವಿಜಯ್ ಪೈ's avatar
    ವಿಜಯ್ ಪೈ
    ಏಪ್ರಿಲ್ 24 2014

    ಮೊನ್ನೆ ಆದ ‘ಪಂಕ್ತಿಬೇಧ’ ಘಟನೆ ನಮ್ಮ ಕಣ್ಣಿಗೆ ಕಾಣುವಷ್ಟು ಸರಳ ಪ್ರಕರಣವಲ್ಲ. ಇದು ದ.ಕ ನ ಎಡಬಿಡಂಗಿಗಳ, ಕಕ್ಕಸವೇ ವೇದಿಕೆ ಮಾಡಿಕೊಂಡವರ ಪ್ರಾಯೋಜಿತ ಕಾರ್ಯಕ್ರಮ. ಈ ‘ಪಂಕ್ತಿಬೇಧ’ ‘ಅವಮಾನ’ ಮಾಡಿದರು ಎಂಬ ಝಂಢಾ ಹಾರಿಸಿ, ಹುಯಿಲೆಬ್ಬಿಸಿ.. ದ.ಕ ದ ಬಂಟ ಕಮ್ಯುನಿಟಿ ಮತ್ತು ಬ್ರಾಕ್ಮಣರ ನಡುವೆ ದ್ವೇಶ/ಅಸಮಾಧಾನ ಹರಡುವುದು. ತನ್ಮೂಲಕ ಹಿಂದು ಒಗ್ಗಟ್ಟನ್ನು ಒಡೆಯಬಹುದು ಎಂಬ ಲೆಕ್ಕಾಚಾರ.

    ಇನ್ನು ಈ ಪ್ರಕರಣದಲ್ಲಿ ವನಿತಾ ಶೆಟ್ಟಿಯವರಿಗೆ ಅವಮಾನ ಆಗಿದ್ದಲ್ಲಿ, ಅವರು ನೇರವಾಗಿ ತಮ್ಮ ಪತಿ ನಿತ್ಯಾನಂದ ಶೆಟ್ಟಿಯವರೊಂದಿಗೆ ಪೇಜಾವರ ಶ್ರೀಗಳನ್ನು ಭೆಟ್ಟಿಯಾಗಿ ತಮ್ಮ ಅಸಮಾಧಾನವನ್ನು ತೋಡಿಕೊಳ್ಳಬಹುದಿತ್ತು. ಉಡುಪಿಯ ಭಕ್ತರಾದ, ಶಿಕ್ಷಿತರಾದ ಅವರು ಖಂಡಿತವಾಗಿಯೂ ಇದನ್ನು ಮಾಡಬಹುದಿತ್ತು. ಪೇಜಾವರರು inaccessible ಅಂತು ಅಲ್ಲ. ಅವರು ವಿಷಯ ತಿಳಿದುಕೊಂಡು, ಈಗಿನ ಪರ್ಯಾಯದವರ ಹತ್ತಿರ ಮಾತನಾಡುತ್ತಿದ್ದರೇನೊ. ಆದರೆ ಈ ಸಂದರ್ಭದಲ್ಲಿ ಆಶ್ಚರ್ಯವೆನಿಸುವಂತೆ ಒಳ ಹೊಕ್ಕವರು ಕಕ್ಕಸ ವೇದಿಕೆಯವರು!. ದ.ಕ ನಲ್ಲಿ ನೆಲೆ ಕಳೆದು ಕೊಳ್ಳುತ್ತಿರುವ ಇವರಿಗೆ ಈಗ ಪ್ರಸ್ತುತದಲ್ಲಿರಲು ಯಾವುದಾದರೂ ವಿಷಯ ಬೇಕೇ ಬೇಕು ಮತ್ತು ಹಿಂದು ಒಗ್ಗಟ್ಟನ್ನು ಒಡೆದರೆ ಮಾತ್ತ ಇವರಿಗೆ ಗಂಜಿ ಸಂಪಾದನೆ. ಕೆಲವು ಕಾಲದ ಹಿಂದೆ ನಡೆದ ಧರ್ಮಸ್ಥಳದ ಗದ್ದಲದಲ್ಲಿ ಮಹೇಶ ಶೆಟ್ಟಿ ತಿಮರೋಡಿ, ಕೇಮಾರು ಶ್ರೀಗಳನ್ನು ಉತ್ಸವ ಮೂರ್ತಿಗಳಾಗಿಟ್ಟುಕೊಂಡು, ಹಿಂದಿನಿಂದ ನಾಟಕವಾಡಿದವರು ಇದೇ ಎಡಬಿಡಂಗಿಗಳು. ಧರ್ಮಸ್ಥಳ ಪ್ರಕರಣದಲ್ಲಿ crusader ಎಂದು ಬಿಂಬಿಸಿ ದ ಮಹೇಶ ಶೆಟ್ಟಿ ಮತ್ತೆ ಬಿಜೆಪಿಗೆ ಬೆಂಬಲಿಸಿದಾಗ, ಒಮ್ಮಿಂದೊಮ್ಮೆಗೆ ಇವರಿಗೆ ಖಳನಾಯಕನಾಗಿಬಿಟ್ಟರು!.

    ಚುನಾವಣೆ ಆಗುವ ತನಕ ಮೋದಿ/ಬಿಜೆಪಿ/ಸಂಘ ಪರಿವಾರದ ಹಿಂದೆ ಬಿದ್ದಿದ್ದ ಇವರು, ಈಗ ಸಧ್ಯದಲ್ಲಿ ಇವರು ಚಾಲ್ತಿಯಲ್ಲಿಟ್ಟಿರುವ ಪ್ರಕರಣಗಳು ಎರಡು
    ೧) ಉಡುಪಿ ಪಂಕ್ತಿಬೇಧ
    ೨) ದನದ ವ್ಯಾಪಾರಿ ಕಬೀರ ಸಾವು

    ಎರಡು ಪ್ರಕರಣಗಳ ಹುಯಿಲೆಬ್ಬಿಸುವಿಕೆಯ ಹಿಂದೆ ಯೋಜಿತ ಸಂಚಿದೆ. ಈ ದರಿದ್ರ ಎಡಬಿಡಂಗಿ ಗಂಜಿಗಿರಾಕಿಗಳು ಇರುವ ತನಕ ಕರ್ನಾಟಕದಲ್ಲಿ ಶಾಂತಿಯಿಲ್ಲ. ಇವುಗಳ ಮುಖಕ್ಕೆ ಸೆಗಣಿ ಬಡಿದರೆ, ಅದು ಸೆಗಣಿಗೆ ಅವಮಾನ ಮಾಡಿದಂತೆ!

    ಉತ್ತರ
  12. caarvaka's avatar
    caarvaka
    ಮೇ 1 2014

    ವಿಜಯ್ ಅವರೇ,
    ಆ ದರಿದ್ರ ಎಡಬಿಡಂಗಿಗಳಿಗೆ ನೀವು ಕುಡಿಯುವ ದನದ ಗಂಜಲವನ್ನ ಮುಕ್ಕಳಿಸಿ ಉಗಿದುಬಿಡಿ. ಬುದ್ದಿ ಕಲಿಯುತ್ತಾರೆ!
    ‘ಬಂಟ್ಸ್’ಗೆ ಸೇರಿದ ರಾಕೇಶ್ ಶೆಟ್ಟಿಯವರೇ,
    ಸಮಾನತೆ ಅಂದರೆ ಬ್ರಾಹ್ಮಣರು ನಿಮ್ಮನ್ನು ಪಕ್ಕದಲ್ಲಿ ಕೊರಿಸಿಕೊಂಡು ಊಟ ಮಾಡುವುದಲ್ಲ. ಹಲವು ಬ್ರಾಹ್ಮಣರು ತಮ್ಮ ಸಾಕುನಾಯಿಗಳನ್ನು ಪಕ್ಕದಲ್ಲೇ ಕೂರಿಸಿಕೊಂಡು ಊಟ ಮಾಡುತ್ತಾರೆ. ಸಾಕುನಾಯಿಯ ಮರ್ಯಾದೆಯನ್ನು ಬಯಸುವುದರಲ್ಲೇ ಸಮಾದಾನಪಟ್ಟುಕೊಳ್ಳಬೇಡಿರಿ. ಹಿಂದೂ ದೇವಸ್ತಾನದಲ್ಲಿ ಸಮಾನತೆ ಅಂದರೆ ‘ಬಂಟ್ಸ್’ ಕೂಡ ಪೂಜೆ ಅರ್ಚನೆಗಳನ್ನು ಮಾಡುವ ಕೆಲಸದಲ್ಲಿ ತೊಡಗುವುದು ಎಂದು. ಅದನ್ನು ಬಯಸದೇ ಊಟದ ಸುತ್ತಾ ಗಿರಕಿ ಹೊಡೆಯುವುದು ಹಸಿದ ಸಾಕುನಾಯಿಗಳೂ ಕೂಡ ಒಮ್ಮೊಮ್ಮೆ ಮನೆಯವರ ಮೇಲೆ ಬೋಗುಳುವ ಹಾಗೆ. ನೀವು ಊಟ ಸಿಕ್ಕರೆ ಸಾಕು ಬ್ರಾಹ್ಮಣರ ಮನೆ (ಹಿಂದು ಮತ) ಕಾಯೋಕೆ ತಯಾರಾಗಿದ್ದೀರಿ. ಜುಮಾದಿ ಈ ‘ಬಂಟ್’ಗೆ ತೋಳದ ಸ್ವಂತ ಬುದ್ದಿ ಕೊಡು! ಪಮರೆನಿಯನ್ ಹಾಗೆ ಕುಯ್ ಕುಯ್ ಅನ್ನುತ್ತಿದ್ದಾರೆ. ಗಟ್ಟಿ ದನಿ ಕೊಡು!!

    ಉತ್ತರ
    • viji's avatar
      viji
      ಮೇ 7 2014

      olleya pratikriye

      ಉತ್ತರ
      • ಹೇಮಾಪತಿ's avatar
        ಹೇಮಾಪತಿ
        ಮೇ 7 2014

        ಕುಲಗೆಟ್ಟವನಿಗೆ ಸರಿಯಾದ ಉತ್ತರ. ಸರಿಯಾಗಿ ಹೇಳಿದ್ರಿ!

        ಉತ್ತರ
    • ವಿಜಯ್ ಪೈ's avatar
      ವಿಜಯ್ ಪೈ
      ಮೇ 7 2014

      ಓಹ್ ಈ ಚಾರ್ವಾಕ್ ಮಹಾರಾಜರ ಪ್ರತಿಕ್ರಿಯೆಯನ್ನು ನೋಡಿಯೇ ಇರಲಿಲ್ಲ!..
      [ಆ ದರಿದ್ರ ಎಡಬಿಡಂಗಿಗಳಿಗೆ ನೀವು ಕುಡಿಯುವ ದನದ ಗಂಜಲವನ್ನ ಮುಕ್ಕಳಿಸಿ ಉಗಿದುಬಿಡಿ. ಬುದ್ದಿ ಕಲಿಯುತ್ತಾರೆ!]
      ನಮ್ಮ ಚಾರ್ವಾಕ ಸಾಹೇಬರು ‘ಕುಡಿಯುವ ದನದ ಗಂಜಲವನ್ನ’ ಎಂದು ಹೇಳಿ ತಮ್ಮ ತುರಿಕಾನಂದವನ್ನು ವಿಚಿತ್ರವಾಗಿ ಸಂತೃಪ್ತಿಪಡಿಸಿಕೊಂಡಂತಿದೆ!..ಜಗತ್ತಿನ, ಸಮಾಜದ ಸಕಲ ಸಂತಾಪಗಳನ್ನು ತಲೆಯ ಮೇಲೆ ಹೊತ್ತುಕೊಂಡ, ಅದಕ್ಕಾಗಿಯೇ ಚಿಂತಿಸುವ ಎಡಬಿಡಂಗಿಗಳು ಸಂತೋಷವಾಗಿತರುವುದೇ ಅಪರೂಪ. ನಕ್ಕೆರೆ ಅದೇ ಧನ್ಯತೆ!. ವಿಷಯ ಏನು ಗೊತ್ತೆ ಸಾಹೇಬರೆ..ತಲೆಯಲ್ಲಿ ಅಮೇಧ್ಯ ತುಂಬಿಕೊಂಡಿರುವ ಈ ದರಿದ್ರಗಳಿಗೆ ಸೆಗಣಿ ಎರೆಚಿದರೆ, ಗಂಜಲ ಉಗಿದರೆ ಅದು ಆಕಳಿಗೆ, ಸೆಗಣಿಗೆ ಮಾಡುವ ಅವಮಾನ..

      ಉತ್ತರ
      • ಹೇಮಾಪತಿ's avatar
        ಹೇಮಾಪತಿ
        ಮೇ 7 2014

        ಚಾರ್ವಾಕ ಅಲ್ಲ ಸ್ವಾಮಿ, ಅದು ಕಾರ್ವಾಕ.

        ಉತ್ತರ
        • ವಿಜಯ್ ಪೈ's avatar
          ವಿಜಯ್ ಪೈ
          ಮೇ 7 2014

          ಹೇಮಾಪತಿ ಯವರೆ..
          ೧) ನೀವು ಆ ಕಮೆಂಟನ್ನು ಬರೆದವರೆ? ಅಲ್ಲ ತಾನೆ? ಅಂದ ಮೇಲೆ ನಾನು ಕರೆದದ್ದು ತಪ್ಪಿದಲ್ಲಿ, ಅದರ ಬಗ್ಗೆ ಸಂಬಂಧಪಟ್ಟವರು ವಿವರಣೆ ಕೊಡಲಿ.
          ೨) ತಮಿಳು ಮನೆಮಾತಿನಿಂದ ಬಂದವರು ‘ಚ’ ಬರೆಯುವಾಗ Ch ಬರೆಯುವುದು ಕಡಿಮೆ. ಉದಾ: Vachana ಎಂಬುದನ್ನು ಬರೆಯಬೇಕಾದರೆ Vacana ಎಂದು ಬರೆಯುವುದೇ ಜಾಸ್ತಿ.
          ೩) Carvac ಶಬ್ದವನ್ನು ಉಪಯೋಗಿಸುವುದು Car vacuum cleaner ಗೆ. ಆದ್ದದಿಂದ ಈ ಸಾಹೇಬರು ಕಾರನ್ನು ಕ್ಲೀನ್ ಮಾಡುವ ಸಣ್ಣ ಯಂತ್ತದಿಂದ ಅಷ್ಟೊಂದು ಫ್ರಭಾವಿತರಾಗಿ ಈ ಹೆಸರನ್ನು ಇಟ್ಟುಕೊಂಡಿಲ್ಲವೆಂದು ನನ್ನ ಅನಿಸಿಕೆ. ಅಷ್ಟಕ್ಕೂ ಇಲ್ಲಿ ಉಪಯೋಗಿಸಿದ್ದು Caarvaka..Carvac ಅಲ್ಲ!

          ಉತ್ತರ
          • ಹೇಮಾಪತಿ's avatar
            ಹೇಮಾಪತಿ
            ಮೇ 7 2014

            ತುಂಬಾ ಸಂತೋಷ.

            ಉತ್ತರ
          • ಹೇಮಾಪತಿ's avatar
            ಹೇಮಾಪತಿ
            ಮೇ 7 2014

            ಆದರೆ ತಮಿಳಿನ ಉಚ್ಛಾರಣೆಗೂ ಕನ್ನಡಕ್ಕೂ ಏನು ಸಂಬಂಧ?

            ಉತ್ತರ
            • ವಿಜಯ್ ಪೈ's avatar
              ವಿಜಯ್ ಪೈ
              ಮೇ 7 2014

              ೧) ಚಾರ್ವಾಕ ಕನ್ನಡನಾಡಿಗಷ್ಟೇ ಸಂಬಂಧಪಟ್ಟ ಅಥವಾ ಕನ್ನಡ ಮೂಲದ ಹೆಸರಲ್ಲ. ಸಂಸ್ಕೃತ ಮೂಲದ ಹೆಸರು.
              ೨) ಈಗ ಸಾಕಷ್ಟು ಜನ ತಮಿಳು ಮನೆ ಮಾತಿನವರು, ತಮ್ಮ ಜೀವನದ ಒಂದು ಭಾಗವನ್ನು ತಮಿಳುನಾಡಿನಲ್ಲಿ ಕಳೆದು ನಂತರ ಕರ್ನಾಟಕಕ್ಕೆ ಬಂದು ಇಲ್ಲಿಯವರೇ ಆದವರು ಕನ್ನಡದಲ್ಲಿ ಬರೆಯುತ್ತಿದ್ದಾರೆ. ಅವರಲ್ಲಿ ಬಹಳ ಜನ ‘ಚ’ ಬರೆಯುವಾಗ ‘C’ ಅಷ್ಟನ್ನೇ ಬಳಸುವುದನ್ನು ಕಾಣಬಹುದು.
              ೩) ಈ ಕೊಂಡಿಗಳನ್ನು ನೋಡಿ ಮತ್ತು ನಿಮ್ಮ ಇನ್ನುಳಿದ ಅನುಮಾನ ಪರಿಹರಿಸಿಕೊಳ್ಳಿ.
              princeton.edu/~achaney/tmve/wiki100k/docs/C%C4%81rv%C4%81ka.html
              en.wikipedia.org/wiki/C%C4%81rv%C4%81ka
              http://www.britannica.com/EBchecked/topic/621236/vacana

              ಇವನ್ನೆಲ್ಲ ನೋಡಿದ ಮೇಲೂ, ನಿಮಗೆ Caarvaka ಯನ್ನು ಕಾರ್ವಾಕ ಎಂದೇ ಕರೆಯಬೇಕು ಎನಿಸಿದರೆ, ನಿಮ್ಮ ಉಚ್ಛಾರಣೆಗೆ ನನ್ನ ಅಭ್ಯಂತರವಿಲ್ಲ:)

              ಉತ್ತರ
    • ಸ್ವಾಮಿ ಚಾರ್ವಾಕ ಮಹಾಶಯರೇ,
      ಮೊದಲು ತಮ್ಮ ಆತ್ಮರತಿ ಕಮ್ಮಿ ಮಾಡಿಕೊಳ್ಳಿ.ಆ ನಂತರ ನಿಮ್ಮೊಂದಿಗೆ ಸಂವಾದ ಮಾಡುವ ಬಗ್ಗೆ ಯೋಚಿಸುವೆ.

      @ಹೇಮಾಪತಿಯವರೇ,
      ಯಾರು ಕುಲಗೆಟ್ಟವನು?ಮಾತಿಗೆ ಮರ್ಯಾದೆಯಿಲ್ಲವೇ? ನೀವೆನು ನನಗೆ ಊಟ ಹಾಕುತಿದ್ದೀರೇ ಬಾಯಿಗೆ ಬಂದ ಹಾಗೆ ಮಾತನಾಡಲು

      ಉತ್ತರ
  13. ಸಂತೋಷ's avatar
    Maaysa
    ಮೇ 11 2014

    ಇದಕ್ಕೆ ಉತ್ತಮ ಪರಿಹಾರ:

    1. ಮಠಗಳು ಗುಡಿಗಳು ಬಿಟ್ಟಿಯಾಗಿ ಎಲ್ಲರಿಗೂ ಊಟವನ್ನು ಹಾಕುವುದನ್ನು ನಿಲ್ಲಿಸಬೇಕು.

    2. ಬೇಕಾದರೆ ವೇದ, ಭಗವದ್ಗೀತೆ, ದಾಸರ ಪದಗಳು ಮುಂದಾದ ಧಾರ್ಮಿಕ-ಸಾಹಿತ್ಯವನ್ನು ತಿಳಿದವರಿಗೆ ಮಾತ್ರ ಊಟಕೊಡಲಿ.

    ಉತ್ತರ

Leave a reply to ವಿಜಯ್ ಪೈ ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments