ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 28, 2014

49

ಹೊಸ ಕಾದಂಬರಿ : ಕರಣಂ ಪವನ್ ಪ್ರಸಾದರ “ಕರ್ಮ”

‍ನಿಲುಮೆ ಮೂಲಕ

 – ನಂದೀಶ್ ಆಚಾರ್ಯ

ಕರ್ಮConcave media co.ಈ ಕಾದಂಬರಿಯನ್ನು ಹೊರತಂದಿದೆ. ನಾಟಕಕಾರರಾದ ಕರಣಂ ಪವನ್ ಪ್ರಸಾದರ ಮೊದಲ ಕಾದಂಬರಿಯಿದು. ಖ್ಯಾತ ಕಾದಾಂಬರಿಕಾರರಾದ ಎಸ್ ಎಲ್ ಭೈರಪ್ಪನವರು ಈ ಕಾದಂಬರಿಯ ಪ್ರಥಮ ಪ್ರತಿಯನ್ನು ಓದಿ ಮೆಚ್ಚಿಕೊಂಡಿದ್ದಾರೆ. ಕಳೆದ ವಾರ ಶತವಾಧಾನಿ ಆರ್ ಗಣೇಶರು ಕಾದಾಂಬರಿಯನ್ನು ಬಿಡುಗಡೆಗೊಳಿಸಿದರು. ನಗರ ಜೀವನದ ಅಭದ್ರ ಭಾವಸ್ಥಿತಿಯಿಂದ ಒಮ್ಮೆಲೆ ತಂದೆಯ ಸಾವಿನ ನಂತರದ ಕಾರ್ಯದಲ್ಲಿ ತೊಡಗುವ ಟೆಕ್ಕಿಯ ಮೂಲಕ ಕಥೆ ಹರಡುಕೊಳ್ಳುತ್ತದೆ.  ನಂತರದ ಹದಿನೈದು ದಿನಗಳಲ್ಲಿ ಆತನಲ್ಲಾಗುವ ನಂಬಿಕೆ ಮತ್ತು ಶ್ರದ್ಧೆಯ ನಡುವಿನ ತೊಳಲಾಟ ಮತ್ತು ಸ್ಥಿತ್ಯಂತರದ ಯಾನವೇ ‘ಕರ್ಮ’
ಅಚಾನಕ್ಕಾಗಿ ಅಪ್ಪಳಿಸಿದ ತಂದೆಯ ಸಾವಿನ ಸುದ್ದಿ ತನಗೆ ಏನೂ ಅಘಾತವನ್ನ ನೀಡದ್ದನ್ನು ಕಂಡು ಕಥಾನಾಯಕ ಮೊದಲಿನಿಂದಲೂ ಗೊಂದಲದಲ್ಲೇ ಎದುರಾಗುತ್ತಾನೆ. ಪ್ರತಿ ಪ್ರಸಂಗದಲ್ಲೂ ತನ್ನನ್ನು ತಾನೇ ಕೆಡವಿಕೊಂಡು ಅನುಭವಿಸುತ್ತಾನೆ. ತನ್ನ ಹುಟ್ಟೂರಿಗೆ ಹೋಗಿ ತನ್ನ ತಮ್ಮ ನರಹರಿ, ತಾಯಿಯನ್ನು ಕೂಡಿ ತಂದೆಯ ಕ್ರಿಯೆಯಲ್ಲಿ ಪಾಲ್ಗೊಳ್ಳುವಲ್ಲಿಯಿಂದ ಕರ್ಮ ಮಜಲು ಬದಲಿಸಿ ತನ್ನ ಮೂಲವಾದವಾದ ನಂಬಿಕೆ ಮತ್ತು ಶ್ರದ್ಧೆ ಎರಡೂ ತೀರ ಬೇರೆ. ನಂಬಿಕೆ ಚಂಚಲ, ಶ್ರದ್ಧೆ ಅಚಲ, ನಂಬಿಕೆಗೆ ಘಾಸಿಯಾಗುತ್ತದೆ, ಶ್ರದ್ಧೆಗೆ ಎಂದೂ ಘಾಸಿಯಾಗುವುದಿಲ್ಲ ಎಂಬಲ್ಲಿಗೆ ಬಂದು ನಿಲ್ಲುತ್ತದೆ. ಕ್ರಿಯೆ ಮಾಡಿಸುವ ತಂದೆಯ ಸ್ನೇಹಿತ ಶ್ರೀಕಂಠ ಜೋಯಿಸರು ಮತ್ತು ಕಥಾ ನಾಯಕನ ಸಂಭಾಷಣೆಯ ಒಂದು ಪ್ರಸಂಗ ಹೀಗಿದೆ.

“ಇವೆಲ್ಲಾ ನಿಜಾನಾ?’’ ಅಳುಕಿನಿಂದಲೇ ಸುರೇಂದ್ರ ಪ್ರಶ್ನಿಸಿದ. ಭಟ್ಟರು ಹಿಂದಿರುಗಿ ನೋಡುವ ಹೊತ್ತಿಗೆ ಇವನ ಕಂಠ ಕುಸಿದು ಹೋಯಿತು. ಅಲ್ಲೇ ಅಡಕೆ ಮರಕ್ಕೆ ಹಬ್ಬಿಸಿದ್ದ ಏಲಕ್ಕಿ ಗಿಡವನ್ನು ಪರೀಕ್ಷಿಸುತ್ತಾ ನಿಂತ. “ತೋಟ ಮಾರ್ತಾ ಇದೀನಿ ತಗೋತ್ಯಾ ಮಾರಾಯಾ?’’ ಗಿಡವನ್ನು ಮೂಸುತ್ತಿದ್ದ ಸುರೇಂದ್ರ “ನನಗ್ಯಾಕೆ ಭಟ್ಟರೇ?’’ ಎಂದ. “ಈಗ ಅದೇ ಹೊಸ ವಿಚಾರ ಈ ವಾಣಿ ಗಂಡ ಎಲ್ಲಾ  ಮುಂಡುಮೋಚಿ ಈಗ ಇಲ್ಲಿ ತೋಟ ಗೀಟ ಮಾಡ್ಕೊಂಡು ಅದನ್ನೇ ಕಂಪೆನಿ ಮಾಡಿ ದುಡ್ಡು ಮಾಡ್ತಾ ಇದಾನೆ ಅವನು ನಿನ್ನ ಥರಾನೆ ಯಾವುದೋ ಇಂಜಿನಿಯರ್ ನನಗೆ ಸರಿ ಗೊತ್ತಿಲ್ಲ’’ ಭರತನ ಮೇಲಿನ ಉರಿಗೆ ಗಿಡದ ಎಲೆಯನ್ನು ಚಿವುಟಿದ. “ಎಲೆ ಎಂತ ಮಾಡ್ತೋ ನಿಂಗೆ? ಅದೇನೋ ವಿಷಯ ಅಂದ್ಯಲ್ಲ ಏನು?’’ ಆಗಲೇ ಕೇಳಿದೆನೆಲ್ಲ ಅದೇ ಎಂದು ಸುರೇಂದ್ರ ಉತ್ತರಿಸಿದ. “ನಿಜವಾ ಅಂತ ಕೇಳಿದೆ. ಏನು ನಿಜ. ನಾನು ಇರೋದ, ನೀ ಇರೋದ ಅಥವಾ ನಾ ಮನುಷ್ಯಾನ ಏನು? ಸ್ವಷ್ಟ ಕೇಳು, ಈ ಮೈಗಳ್ಳ ಮುಂಡೇವು ಇದಾವಲ್ಲ ಇವರಿಂದ ಅಡಕೆ ಇಳಿಸಕ್ಕೆ ಆಗಿಲ್ಲ. ದುಡ್ಡು ಕೊಟ್ರೂ ಜನ ಬರಲ್ಲ. ದಿನದ ಗಂಜಿ ನಂಬಿದೋರಿಗೆ ಒಂದು ರೂಪಾಯಿ ಅಕ್ಕಿ ಕೊಟ್ರೆ ಇನ್ನೇನ್ ಆಗತ್ತೆ ಹೊಲದ ಕೆಲಸ ತೋಟದ ಕೆಲಸಕ್ಕೆ ಆಳುಗಳೇ ಇಲ್ಲ. ವಯಸ್ಸಲ್ಲಿ ನಾನೇ ಇಳಿಸ್ತಿದ್ದೆ.

ಈಗ ಆಗಲ್ಲ ಮಾರಾಯ. ಆ ಏನು ನಿಜ ಕೇಳು’’ ತೋಟದಲ್ಲಿ ಸಿಕ್ಕ ಸಣ್ಣ ಕೊಂಬೆಯನ್ನು ಕೈಯಲ್ಲಿ ಆಡಿಸುತ್ತಾ ಸುರೇಂದ್ರ “ಅದೇ ಈ ತಿಥಿ, ಗರುಡಪುರಾಣ, ಇವೆಲ್ಲಾ ನಿಜಾನ ಅಥವಾ ಬ್ರಾಹ್ಮಣರು ಹೊಟ್ಟೆ ಪಾಡಿಗೆ ಮಾಡಿಕೊಂಡಿದ್ದ?’’ ವೆಂಕಟೇಶ ಭಟ್ಟರು ಶಲ್ಯವನ್ನು ಹೆಗಲಿನಿಂದ ತೆಗೆದರು. ಸುರೇಂದ್ರ ಧೈರ್ಯ ತಂದುಕೊಂಡು ಭಟ್ಟರನ್ನು ದಿಟ್ಟಿಸಿದ. “ಮೊದಲನೇ ಪ್ರಶ್ನೆಗೆ ನಿಜ ಅಂತೀನಿ, ಎರಡನೇ ಪ್ರಶ್ನೆಗೂ ನಿಜ ಅಂತೀನಿ’’ ಸುರೇಂದ್ರ ಗೊಂದಲದಲ್ಲಿ ಸಿಲುಕಿದ. ಭಟ್ಟರು ಮಂಡಿಯೂರಿ ಅನಾನಸ್ ಗಿಡದಲ್ಲಿದ್ದ ಅನಾನಸ್ ಹುಡುಕಿ ತೆಗೆಯಲು ಕೂತರು. “ನನಗೆ ಇದರಲ್ಲಿ ನಂಬಿಕೆ ಇಲ್ಲ’’ ಸುರೇಂದ್ರನ ಈ ಮಾತಿಗೆ ಮಂಡಿಯೂರಿ ಕುಳಿತಿದ್ದ ಭಟ್ಟರು ತಿರುಗಿ “ನಿನ್ನ ನಂಬಿಕೆ ಯಾವ ಮುಂಡೇಮಗನಿಗೆ ಬೇಕೋ?’’ ಮತ್ತೆ ಕತ್ತಾಳೆ ಗಿಡದ ಸಣ್ಣ ಪೆÇದೆಯಂತಿದ್ದ ಅನಾನಸ್ ಗಿಡವನ್ನು ಕೆದಕುತ್ತಾ ಭಟ್ಟರು ಉಸಿರನ್ನು ಹತೋಟಿಗೆ ತೆಗೆದುಕೊಂಡರು “ಸಮಸ್ಯೆ ಹೇಳ್‍ಕೊಳ್ತಾ ಇದೀನಿ ಭಟ್ರೇ ನಂಬಿಕೆ ಇಲ್ಲದೀರ ಯಾವುದನ್ನು ಮಾಡಬಾರದು ಅಲ್ಲವೇ? ಇವಕ್ಕೆಲ್ಲಾ ಏನಾದರೂ ಸೈಂಟಿಫಿಕ್ ರೀಸನ್ಸ್ ಇದೀಯಾ?’’ ಕೆದಕುವುದನ್ನು ನಿಲ್ಲಿಸಿ ಭಟ್ಟರು ಮೇಲೆದ್ದರು “ಅದು ಯಾಕೆ ಎಂದು ಗೊತ್ತಿಲ್ಲ ಈಗಿನ ಜನ ಎಲ್ಲವನ್ನೂ ವೈಜ್ಞಾನಿಕ ತಳಹದಿ ಮೇಲೆ ನಿರ್ಧಾರ ತೆಗೆದು ಕೊಳ್ತಾರೆ, ಸಾಮಾಜಿಕ ವ್ಯವಸ್ಥೆ ಮೊದಲು ಬಂತ? ಅಥವಾ ವಿಜ್ಞಾನ ಮೊದಲು ಬಂತ? ಜೀವನದಲ್ಲಿ ಶ್ರದ್ಧಾ ಭಾಗ ಬೇರೆ ಪ್ರಯೋಗ ಭಾಗ ಬೇರೆ ಎಲ್ಲಕ್ಕೂ ವಿಜ್ಞಾನ ಪ್ಯಾರಾಮೀಟರ್ ಆಗಬೇಕಾಗಿಲ್ಲ. ಈ ಗೊಂದಲ ಬಂದಿದ್ದಕ್ಕೆ ಕ್ರೈಸ್ತರು ಫೇತ್ ಬೇರೆ ಸೈನ್ಸ್ ಬೇರೆ ಅಂದುಬಿಟ್ರು. ನಮ್ಮ ಜನ ಒಬ್ರೇ ಎಲ್ಲವನ್ನೂ ವಿಜ್ಞಾನದ ಪ್ಯಾರಾ ಮೀಟರ್‍ನಲ್ಲಿ ನೋಡಿ ನಮನ್ನ ನಾವು ಗೇಲಿ ಮಾಡಿಕೊಳ್ತಾ ಇರೋರು’’ ಕ್ಷಣಕ್ಕೆ ಸುರೇಂದ್ರ ಮಾತನಾಡಲಿಲ್ಲ.

ನಂತರ “ನನ್ನ ಪ್ರಶ್ನೆಗೆ ಉತ್ತರ ಇದಲ್ಲ’’ ಎಂದ. “ಐನ್‍ಸ್ಟೀನನ ಒಂದು ಸಿದ್ಧಾಂತದ ಪ್ರಕಾರ ಯಾವುದೇ ವಸ್ತು ಬೆಳಕಿನ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ವ್ಯೋಮದಲ್ಲಿ ಹೋದರೆ ತಿರುಗಿ ವಿರುದ್ಧ ದಿಕ್ಕಿನಲ್ಲಿ ಸಂಚರಿಸಿಬಿಡುತ್ತದೆ ಎಂದು. ಅವನು ಹಾಳೆ ಮೇಲೆ ಇದನ್ನು ಸಾಧಿಸಿ ತೋರಿಸಿದ್ದಾನೆ. ಅದು ಸರಿ ಎಂದು ಹೇಳಬೇಕು ಎಂದರೆ ವಾಸ್ತವವಾಗಿ ಬೆಳಕಿನ ವೇಗಕ್ಕಿಂತ ವೇಗವಾಗಿ ಕಣವನ್ನು ಕಳಿಸಬೇಕು.ಬೆಳಕಿನ ವೇಗಕ್ಕಿಂತ ಯಾವುದನ್ನೂ ವೇಗವಾಗಿ ಕಳಿಸಲು ಸಾಧ್ಯವಿಲ್ಲ ಆದ್ದರಿಂದ ಸಿದ್ಧಾಂತವನ್ನು ಸರಿ ಎನ್ನಲೂ ವಾಸ್ತವ ಪ್ರಯೋಗ ಸಾಧ್ಯವಿಲ್ಲ ತಪ್ಪು ಎನ್ನಲೂ ಸಾಕ್ಷ್ಯವಿಲ್ಲ. ನೀನು ನಂಬಿಕೆ ಬಗ್ಗೆ ಮಾತಾಡ್ದೆ, ನೋಡು ಇಲ್ಲಿ ಇದು ಅನಾನಸ್, “ಇದು ಇಲ್ಲಿದೆ ಎಂದು ನಾನು ನಂಬುತ್ತೇನೆ” ಅಂತ ನೀನು ಹೇಳ್ತೀಯಾ? ಇಲ್ಲ, ನೀನು ಸ್ಪಷ್ಟವಾಗಿ ಹೇಳ್ತೀಯಾ “ಅನಾನಸ್ ಇಲ್ಲಿದೆ” ಅಂತ, ಏಕೆಂದರೆ ನಿನಗೆ ಅದು ಕಾಣಸಿಗುತ್ತಿದೆ. ನಂಬಿಕೆ ಪದಕ್ಕೆ ಅರ್ಥವೇ ಇಲ್ಲ. ಏನು ನಿನಗೆ ಕಾಣಿಸಿವುದಿಲ್ಲವೋ ಯಾವುದು ನಿನಗೆ ನಿಲುಕದ್ದೋ ಅದನ್ನು ನೀನು ನಂಬಿಕೆ ಪದದಿಂದ ಹೇಳುತ್ತೀಯಾ. ನಿನ್ನ ವಿಚಾರಕ್ಕೆ ಬರೋಣ ಲಿವಿಂಗ್ ಟುಗೆದರ್‍ನಲ್ಲಿದ್ದು ನಂತರ ಯಾಕೆ ಮದುವೆಯಾದೆ. ಜೀವನ ಪೂರ್ತಿ ನಿನ್ನ ಜೊತೆ ನಿನ್ನವಳು ಇರುತ್ತಾಳೆ ಎಂದು ನೀನು ನಂಬಲಿಲ್ಲ.

ಇಂದೂ ಕೂಡ ಅವಳು ಜೀವನ ಪೂರ್ತಿ ನಿನ್ನೊಡನೆ ಇರುತ್ತಾಳೆ ಎಂಬ ನಂಬಿಕೆ ಇಲ್ಲ. ಇಲ್ಲದ್ದನ್ನು ಇದೇ ಅಂದುಕೊಳ್ಳೋದೆ ನಂಬಿಕೆ. ನಮ್ಮ ಸಮಾಜ ಸಿದ್ಧಾಂತಗಳನ್ನು ನಂಬಲಿಲ್ಲ. ತರ್ಕ ಮಾಡಿತು. ವಿಶ್ಲೇಷಿಸಿತು. ನಮ್ಮದು ನಂಬಿಕೆಯ ಸಮಾಜವಲ್ಲ ಶ್ರದ್ಧೆಯ ಸಮಾಜ, ದೇವರು, ಕ್ರಿಯೆ ಆಚರಣೆ ಎಲ್ಲವೂ ನಿಂತಿರೋದು ನಂಬಿಕೆಯ ಮೇಲಲ್ಲ ಶ್ರದ್ಧೆಯ ಮೇಲೆ ಶ್ರದ್ಧೆಗೂ ನಂಬಿಕೆಗೂ ಬಹಳ ವ್ಯತ್ಯಾಸವಿದೆ ನಮ್ಮವರಿಗೂ ಇನ್ನು ಇದು ತಿಳಿದಿಲ್ಲ. ನಿನ್ನ ಹೆಂಡತಿ ನಿನ್ನೊಬ್ಬನನ್ನೇ ಗಂಡ ಎಂದುಕೊಳ್ಳುತ್ತಾಳೆ ಎಂಬುದು ನಿನ್ನ ನಂಬಿಕೆ. ಆದರೆ ಅವಳನ್ನು ಹೆಂಡತಿಯಂತೆ ನಡೆಸುಕೊಂಡು ಹೋಗುತ್ತೇನೆ ಎಂಬುದು ಶ್ರದ್ಧೆ’’ ಎಷ್ಟು ಕೆದಕಿಕೊಂಡರೂ ಭಟ್ಟರ ಕೊನೆಯ ಮಾತುಗಳು ಸುರೇಂದ್ರನಿಗೆ ಅರಿವಾಗಲಿಲ್ಲ. ಪ್ರತಿ ಮಾತಿಗೂ ನೇಹಾಳ ಉದಾಹರಣೆ ನೀಡಿದ್ದನ್ನು ನೋಡಿ ಇವರಿಗೆ ನಾ ಕೇಳಬೇಕೆಂದಿದ್ದ ವಿಚಾರ ಹೇಗೆ ತಿಳಿಯಿತು ಎಂಬ ಗೊಂದಲ ಅವನಿಗಾಯಿತು. ಗೊಂದಲದಲ್ಲೇ ನಿಂತಿದ್ದ ಭಟ್ಟರು ಎರಡು ಅನಾನಸ್ ಕತ್ತರಿಸಿ ಕೈಯಲ್ಲಿಡಿದು ಮುಂದೆ ನಡೆದರು. ಸುರೇಂದ್ರ, ಭಟ್ಟರೇ ಎಂದು ಕೂಗಿದ. ಭಟ್ಟರು ಹಿಂತಿರುಗಿದರು. ಸುರೇಂದ್ರನಿಗೆ ಪ್ರಶ್ನೆ ಹೊಳೆಯಲಿಲ್ಲ. ಗೊಂದಲ ಸರಿಪಡಿಸಿ ಎಂದು ಕೇಳಬೇಕು ಎಂಬುದೂ ಹೊಳೆಯಲಿಲ್ಲ. ವಯಸ್ಸಾದವರು ಎನೋ ಹೋಲಿಕೆಯಿಲ್ಲದೆ ಮಾತನಾಡಿದಂತೆ ಸುರೇಂದ್ರನಿಗೆ ಭಾಸವಾಯಿತು. ನಿಮ್ಮ ಮಾತಿಗೆ ಅರ್ಥವೇ ಇಲ್ಲ ಎಂಬಂತೆ ದಿಟ್ಟಿಸಿದ. ಭಟ್ಟರು ಇವನನ್ನು ಗಮನಿಸಿ “ಬೇರೆಯವರ ಮೇಲಿನ ನಿನ್ನ ಅವಲಂಬನೆ ನಂಬಿಕೆ, ನಿನ್ನ ಮೇಲಿನ ನಿನ್ನ ಅವಲಂಬನೆ ಶ್ರದ್ಧೆ ಇದೇ ಶ್ರದ್ಧೆಗೂ ನಂಬಿಕೆಗೂ ಇರುವ ವ್ಯತ್ಯಾಸ’’ ಕೈಯ್ಯಲ್ಲಿದ್ದ ಕೊಂಬೆಯನ್ನು ಸುರೇಂದ್ರ ಬಿಸಾಡಿದ. “ಈಗ ನನಗೆ ತರ್ಕ ಮಾಡೋ ಸಮಯ ಇಲ್ಲ. ಇನ್ನರ್ಧ ಗಂಟೇಲಿ ಹೊರಡೋಣ ಐದನೇ ದಿನದ್ದು ಇವತ್ತು ಆಗಬೇಕು ನೆನಪಿರಲಿ’’ ತೋಟದಿಂದ ಮನೆಯ ಬಾಗಿಲು ತಲುಪಿದಾಗ ಭಟ್ಟರು ಗಡಸಾಗಿ ಹೇಳಿದರು.

ಮಲೆನಾಡಿನ ವಾತಾವರಣ ಮತ್ತು ನಗರ ಜೀವನದ ಬೆತ್ತಲೆ ದರ್ಶನ ಕಾದಂಬರಿಯಲ್ಲಿದೆ. ಧಾರ್ಮಿಕತೆ, ಆಚರಣೆ ಮತ್ತು ಶ್ರದ್ಧೆ ಎಲ್ಲವೂ ಬೇರೆ ಎಂಬ ತರ್ಕವಿದೆ. ಮಾನವ ಸಹಜ ತುಮುಲ, ಉದ್ರೇಕಗಳಿಗೆ ಬಲಿಯಾಗಿ ಮನಸ್ಥಿತಿಯ ವಿನಾಶಕ್ಕೆ ಬಲಿಯಾಗುವ ಸಾಧ್ಯತೆಗಳ ನಿರೂಪಣೆಯಿದೆ. ಯು ಆರ್ ಅನಂತ ಮೂರ್ತಿಯವರ ಸಂಸ್ಕಾರ, ಎಸ್ ಎಲ್ ಭೈರಪ್ಪರ ನೆಲೆ ಈ ಕಾದಂಬರಿಗಳು ಕೂಡ ಇದೇ ಹಾದಿಯಲ್ಲಿದ್ದರೂ ಸಹ ಅವತ್ತಿನ ಕಾಲಕ್ಕೆ ಸರಿದೂಗಿದೆ. ಪ್ರಸ್ತುತೆಯ ಆಧಾರದಲ್ಲಿ ಕರ್ಮ ಮತ್ತು ಕ್ರಿಯೆಗಳ ಪೂರ್ಣ ತಾಂತ್ರಿಕ ವಿಶ್ಲೇಷಣೆ ಮತ್ತು ವಾಸ್ತವಿಕ ಪ್ರಜ್ಞೆಯನ್ನು ಸವಿವರವಾಗಿ ಕಾದಂಬರಿ ಚಿತ್ರಿಸಿಕೊಟ್ಟಿದೆ. ಸದ್ಯ ಸಂದರ್ಭದಲ್ಲಿ ಈ ರೀತಿಯ ಅವ್ಯಕ್ತ ವಿಚಾರಗಳ ಆಳವನ್ನು ಮುಟ್ಟಿರುವ ಕಾದಂಬರಿ ಕರ್ಮ ಎನ್ನಬಹುದು. ಕನ್ನಡದ ಓದುಗರಿಗೆ ಇದು ಹೊಸ ಅನುಭೂತಿಯನ್ನು ನೀಡುತ್ತದೆ ಎಂಬ ವಿಶ್ವಾಸವಿದೆ.

ಭೈರಪ್ಪ ಹೊಗಳಿದ ‘ಕರ್ಮ’ ಕೃತಿ ವಿಶ್ವದೆಲ್ಲೆಡೆ ಲಭ್ಯ

49 ಟಿಪ್ಪಣಿಗಳು Post a comment
  1. Universal's avatar
    Universal
    ಏಪ್ರಿಲ್ 29 2014

    ಯಾವುದನ್ನೇ ಆಗಲೀ, ಆಧಾರವಿಲ್ಲದೇ ನಂಬಲಾಗದು.

    ಉತ್ತರ
  2. SSNK's avatar
    ಏಪ್ರಿಲ್ 29 2014

    [[ಯಾವುದನ್ನೇ ಆಗಲೀ, ಆಧಾರವಿಲ್ಲದೇ ನಂಬಲಾಗದು.]]

    ಇದೇ ಲೇಖನದಲ್ಲಿ, ಉಲ್ಲೇಖವಾಗಿರುವ ಈ ಸಾಲುಗಳನ್ನೊಮ್ಮೆ ಓದಿಕೊಳ್ಳಿ:
    “ಐನ್‍ಸ್ಟೀನನ ಒಂದು ಸಿದ್ಧಾಂತದ ಪ್ರಕಾರ…..ಬೆಳಕಿನ ವೇಗಕ್ಕಿಂತ ಯಾವುದನ್ನೂ ವೇಗವಾಗಿ ಕಳಿಸಲು ಸಾಧ್ಯವಿಲ್ಲ ಆದ್ದರಿಂದ ಸಿದ್ಧಾಂತವನ್ನು ಸರಿ ಎನ್ನಲೂ ವಾಸ್ತವ ಪ್ರಯೋಗ ಸಾಧ್ಯವಿಲ್ಲ ತಪ್ಪು ಎನ್ನಲೂ ಸಾಕ್ಷ್ಯವಿಲ್ಲ.”

    ಬೆಳಕಿನ ವೇಗಕ್ಕಿಂತ ಹೆಚ್ಚಿನ ವೇಗವನ್ನು ಸಾಧಿಸಲು ಸಾಧ್ಯವಿಲ್ಲದಿರುವಾಗ, ಐನ್‍ಸ್ಟೀನನ ಸಿದ್ಧಾಂತಕ್ಕೆ ಏನು ಆಧಾರ?
    ಆಧಾರವಿಲ್ಲದ ಐನ್‍ಸ್ಟೀನನ ಸಿದ್ಧಾಂತವನ್ನು ಜಗತ್ತಿನ ಇಡೀ ವಿಜ್ಞಾನ ಸಮುದಾಯ ನಂಬಿಕೊಂಡಿದೆಯಲ್ಲಾ!?
    ಹಾಗಿದ್ದರೆ, ವಿಜ್ಞಾನಿಗಳದ್ದು ಮೂಢನಂಬಿಕೆಯೇ!? ಐನ್‍ಸ್ಟೀನ್ ಮೂಢನಂಬಿಕೆ ಹೊಂದಿದ್ದರು ಎಂದು ನಂಬಬೇಕೇ!?

    ಉತ್ತರ
    • ಹೇಮಾಪತಿ's avatar
      ಹೇಮಾಪತಿ
      ಏಪ್ರಿಲ್ 29 2014

      ಯಾರದ್ದೋ ಸಿದ್ದಾಂತವನ್ನು ಎಲ್ಲರೂ ನಂಬಬೇಕೆಂದೇನೂ ಇಲ್ಲ. ಜಗತ್ತಿನ ಸಮುದಾಯ ನಂಬಿಕೊಂಡಿದೆ ಎಂಬ ನಿಮ್ಮ ಅಭಿಪ್ರಾಯಕ್ಕೂ ಆಧಾರವಿಲ್ಲ. ಕಣ್ಣಿಗೆ ಕಾಣದ, ನಿರುಪಯೋಗೀ ದೇವರು/ದೆವರುಗಳನ್ನೂ, ಇಲ್ಲದ ದೆವ್ವ, ಭೂತಗಳನ್ನೂ ಕೂಡ ನಂಬುವವರಿದ್ದಾರೆ. ಅದು ಅವರವರ ವಿವೇಕ, ಅವಿವೇಕಕ್ಕೆ ಸಂಬಂಧಿಸಿದ್ದು. ಅವಕ್ಕೆಲ್ಲ ಪರಿಹಾರವಿಲ್ಲ. ನಾನು ಸರಿಯಾದ ಆಧಾರವಿಲ್ಲದ ಯಾವುದನ್ನೂ ನಂಬುವುದಿಲ್ಲ. ಅಷ್ಟೆ. ಈ ಲೋಕದ ತುಂಬಾ ವಿದ್ಯಾವಂತ ಮೂರ್ಖರುಗಳೂ, ಅವಿದ್ಯಾವಂತ ಮುಠ್ಠಾಳರುಗಳೂ [Educated brutes and illiterate fools] ಇರುವುದರಿಂದ ಅವರುಗಳನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ. ಅವರಿವರ ನಂಬಿಕೆ, ರೀತಿ, ನೀತಿಗಳ ಬಗ್ಗೆ ಮಾತಾಡುವುದೂ ಕೂಡ ಅವಿವೇಕವಾಗುವುದೆಂದು ನಾನು ಹೇಳಲು ಇಚ್ಛಿಸುತ್ತೇನೆ

      ಉತ್ತರ
      • SSNK's avatar
        ಏಪ್ರಿಲ್ 29 2014

        [[ನಾನು ಸರಿಯಾದ ಆಧಾರವಿಲ್ಲದ ಯಾವುದನ್ನೂ ನಂಬುವುದಿಲ್ಲ. ಅಷ್ಟೆ.]]
        ಹಾಗೆ ಹೇಳುವುದು ಸುಲಭ. ಆದರೆ, ನಿತ್ಯ ಜೀವನದಲ್ಲಿ ಅದು ಅನೇಕ ಬಾರಿ ಸಾಧ್ಯವಿರುವುದಿಲ್ಲ.
        ಉದಾಹರಣೆಗೆ, ನಿಮ್ಮ ತಂದೆ ಮತ್ತು ತಾಯಿಯರನ್ನು, ಅವರೇ ತಂದೆ ಮತ್ತು ತಾಯಿ ಎಂದು ನಿರೂಪಿಸಿಕೊಂಡಿದ್ದೀರೋ?
        ಶಾಲೆಯ/ಕಾಲೇಜಿನಲ್ಲಿ ವಿಜ್ಞಾನದ ಪಾಠ ಕಲಿಯುವಾಗ, ನೀರು ಎಂದರೆ H2O ಎಂದು ಬರೆದಿರುವಿರೋ?

        [[ದೇವರು/ದೆವರುಗಳನ್ನೂ, ಇಲ್ಲದ ದೆವ್ವ, ಭೂತಗಳನ್ನೂ ಕೂಡ ನಂಬುವವರಿದ್ದಾರೆ.]]
        ಇದೆ ಎಂದು ನಂಬಲು ಆಧಾರ ಬೇಕೆಂದು ನೀವು ಹೇಳುತ್ತೀರಿ. ಆದರೆ, ಇಲ್ಲವೆನ್ನಲೂ ಆಧಾರ ಬೇಡವೇನು?

        ಉತ್ತರ
        • ಹೇಮಾಪತಿ's avatar
          ಹೇಮಾಪತಿ
          ಏಪ್ರಿಲ್ 29 2014

          ನನ್ನ ತಂದೆ ತಾಯಿಗಳನ್ನು ನಾನು ನಿರೂಪಿಸಿಕೊಂಡಿದ್ದಲ್ಲ. ಅವರೇ ನಿರೂಪಿಸಿಕೊಂಡಿರೋದು. ನನಗೆ ಬೇಡದ ಜನ್ಮವನ್ನು ಯಾರು ಕೊಟ್ಟರೋ ತಿಳಿಯದು. ಅವರೇ ತಂದೆ ತಾಯಿಗಳು ಎಂದು ನಿರ್ಧರಿಸಲು ಡಿ.ಎನ್.ಎ. ಪರೀಕ್ಷೆ ಮಾಡುತ್ತಾರೆ. ಅದು ನಿರ್ಧಾರವಾಗಿದೆ. ನಿಮಗೆ ಬೇಕಿದ್ದನ್ನು ನೀವು ನಂಬಿಕೊಳ್ಳಿ. ನನಗೆ ಸರಿಯಾದದ್ದನ್ನು ನಾನು ನಂಬುತ್ತೇನೆ ಇಲ್ಲವೋ ಬಿಡುತ್ತೇನೆ. ನಿಮ್ಮ ವಿತ್ತಂಡ ವಾದ ಹೆಚ್ಚಾಯಿತು. ನನಗೆ ನಿಮ್ಮಿಂದ ಹೆಚ್ಚಿನ ತಿಳಿವಳಿಕೆ ಬೇಕಿಲ್ಲ. ನಿಮಗೆ ಸರಿಕಂಡಿದ್ದನ್ನು ನೀವು ನಂಬಿಕೊಳ್ಳಿ. ಇಲ್ಲಿಗೆ ಮುಗಿಸಿ.

          ಉತ್ತರ
          • SSNK's avatar
            ಏಪ್ರಿಲ್ 29 2014

            [[ನಿಮ್ಮ ವಿತ್ತಂಡ ವಾದ ಹೆಚ್ಚಾಯಿತು. ನನಗೆ ನಿಮ್ಮಿಂದ ಹೆಚ್ಚಿನ ತಿಳಿವಳಿಕೆ ಬೇಕಿಲ್ಲ.]]
            ಕೋಪಿಸಿಕೊಳ್ಳುವ ಅಗತ್ಯವಿಲ್ಲ.
            ವೈಚಾರಿಕ ಚರ್ಚೆಯಲ್ಲಿ ಇಷ್ಟು ಸುಲಭವಾಗಿ ಕೋಪಿಸಿಕೊಂಡುಬಿಟ್ಟರೆ ಹೇಗೆ!?
            ನಾನು ಹೇಳಹೊರಟಿದ್ದು, ಅನೇಕ ವಿಷಯಗಳನ್ನು ನಂಬಿಕೊಂಡಿರುತ್ತೇವೆಯೇ ಹೊರತು, ಆಧಾರ ತಿಳಿಯಲು ಹೋಗುವುದಿಲ್ಲ.

            [[ಅವರೇ ತಂದೆ ತಾಯಿಗಳು ಎಂದು ನಿರ್ಧರಿಸಲು ಡಿ.ಎನ್.ಎ. ಪರೀಕ್ಷೆ ಮಾಡುತ್ತಾರೆ. ಅದು ನಿರ್ಧಾರವಾಗಿದೆ.]]
            ಹೌದು, ಡಿ.ಎನ್.ಎ ಪರೀಕ್ಷೆಯಿಂದ ತಂದೆ-ತಾಯಿ ಯಾರೆಂದು ನಿರ್ಧರಿಸಬಹುದು.
            ಆದರೆ, ನೀವದನ್ನು ಮಾಡಿಸಿಯೇ ನಿಮ್ಮ ತಂದೆ-ತಾಯಿಯರು ನಿಜವಾದ ತಂದೆ-ತಾಯಿಯರೆಂದು ನಂಬಿಲ್ಲ ಅಲ್ಲವೇ?

            ನಾನೇನೂ ವಿತ್ತಂಡ ವಾದ ಮಾಡಲು ಹೊರಟಿಲ್ಲ. ಅನೇಕ ಸಂಗತಿಗಳನ್ನು ‘ನಂಬಿಕೆ’ಯ ಮೇಲೇ ಒಪ್ಪಿಕೊಂಡಿದ್ದೇವೆ ಎಂದು ಹೇಳುತ್ತಿದ್ದೇನಷ್ಟೇ!
            ಶಾಲೆ/ಕಾಲೇಜಿನ ಪಠ್ಯಪುಸ್ತಕದಲ್ಲಿ ನೀರು ಎಂದರೆ H2O ಎಂದು ತಿಳಿಸಿರುವುದನ್ನೇ ಎಲ್ಲರೂ “ನಂಬಿಕೊಂಡಿಲ್ಲವೇ”?
            ನೀವು ಎಂದಾದರೂ, ನೀರಿನಲ್ಲಿ ಎರಡು ಜಲಜನಕ ಮತ್ತು ಒಂದು ಆಮ್ಲಜನಕದ ಕಣಗಳು ನೀರಿನಲ್ಲಿವೆಯೇ ಎಂದು ಪ್ರಯೋಗದ ಮೂಲಕ ನಿರೂಪಿಸಿಕೊಂಡಿರುವಿರೋ?
            ವಾದಕ್ಕಾಗಿ ‘ಹೌದು’ ಎಂದು ಹೇಳಬೇಡಿ. 😉
            ನೀವು ನೀರನ್ನು H2O ಎಂದು ನಂಬಿಕೊಂಡಿರುವುದು ನಿರಾಧಾರ ಅಲ್ಲವೇ!?
            ಇಲ್ಲಿ ಶಾಲಾ ಮಾಸ್ತರರ ಮೇಲಿನ “ನಂಬಿಕೆ” ಅಥವಾ ಪಠ್ಯಪುಸ್ತಕದಲ್ಲಿ ಮುದ್ರಣಗೊಂಡದ್ದು ನಿಜವಿರಲೇಬೇಕೆಂಬ “ನಂಬಿಕೆ” ಕೆಲಸ ಮಾಡಿತಲ್ಲವೇ!?

            ಉತ್ತರ
            • ಹೇಮಾಪತಿ's avatar
              ಹೇಮಾಪತಿ
              ಏಪ್ರಿಲ್ 29 2014

              ಬೇಡ ಬಿಡಿ. ನೀವು ಯಾವ ಸಿದ್ಧಾಂತವನ್ನು ನಂಬದೆಯೇ ವೇದಾಂತವನ್ನೇ ನಂಬಿ ಜೀವನ ನಡೆಸಿ ಸ್ವಾಮಿ. ನನ್ನದೇನೂ ಅಭ್ಯಂತರವಿಲ್ಲ. ಕಾದಂಬರಿಗಳಲ್ಲಿ ಮುಕ್ಕಾಲು ಮೂರುವೀಸೆ ಪಾಲು ಊಹಾಪೋಹಗಳೇ ಹೆಚ್ಚು. ತಮಗನಿಸಿದ್ದನ್ನು ಬೇರೆಯವರ ಮೇಲೆ ಹೇರಲು ಹೋಗುವ ಹುಚ್ಚಿರಬಹುದು. ನಾನು ಶ್ರಾದ್ಧ ಮಾಡದೆಯೇ ನನ್ನ ಹಿರಿಯರನ್ನು ನೆನೆಸಿಕೊಳ್ಳುತ್ತೇನೆ. ಕಾಲವಾಗಿ ಹೋದ ಹಿರಿಯರನ್ನು ಪ್ರೀತಿ ಪಾತ್ರರಾದವರನ್ನು ವರ್ಷಕ್ಕೊಮ್ಮೆ ನೆನೆಸಿಕೊಳ್ಳುವುದನ್ನು ನಾನು ಒಪ್ಪುವುದಿಲ್ಲ. ಅವರು ಸದಾಕಾಲವೂ ಸ್ಮರಣೀಯರಾಗಿರುತ್ತಾರೆ. ನೀವು ಊಹೆಯ ಮೇಲೆ ಬದುಕಲು ಇಚ್ಛಿಸುವಿರಾದಲ್ಲಿ, ಹಾಗೆಯೇ ಬದುಕಿ. ಅದು ನಿಮ್ಮ ಇಷ್ಟ. ನಾನು ಜಾತಿ ಮತಗಳ ಕಡು ವಿರೋಧಿ. ದೇವರು ದೆವ್ವಗಳನ್ನು ನಾನು ನಂಬುವುದಿಲ್ಲ.

              ಉತ್ತರ
          • Nagshetty Shetkar's avatar
            Nagshetty Shetkar
            ಏಪ್ರಿಲ್ 29 2014

            ಹೇಮಾಪತಿ ಯಾರು ಎಂದು ನನಗೆ ಗೊತ್ತಿಲ್ಲ. ಆದರೆ ಇವರ ಪ್ರತಿಕ್ರಿಯೆಗಳ ವಿಚಾರಪೂರ್ಣತೆ ಹಾಗೂ ಪ್ರಖರತೆ ನೋಡಿ ಬೆರಗಾದೆ!

            ಉತ್ತರ
    • ravi's avatar
      ravi
      ಏಪ್ರಿಲ್ 30 2014

      “ಬೆಳಕಿನ ವೇಗಕ್ಕಿಂತ ಹೆಚ್ಚಿನ ವೇಗವನ್ನು ಸಾಧಿಸಲು ಸಾಧ್ಯವಿಲ್ಲದಿರುವಾಗ, ಐನ್‍ಸ್ಟೀನನ ಸಿದ್ಧಾಂತಕ್ಕೆ ಏನು ಆಧಾರ?”

      ಮಹರಾಯರೇ, “…ಸಾಧ್ಯವಿಲ್ಲದ್ದು ನಿಜ” ಅನ್ನೋದನ್ನ ವಾಕ್ಯದ ಮೊದಲ ಭಾಗದಲ್ಲಿ ಒಪ್ಪುತ್ತೀರ; ಅದಕ್ಕೆ ಆಧಾರವೇನು ಅಂತ ಅದೇ ವಾಕ್ಯದ ಕೊನೆಗೆ ಮತ್ತೆಕೇಳುತ್ತೀರ. ಅದೇನು ಗೊಂದಲವಪ್ಪಾ ನಿಮ್ಮದು?

      ಉತ್ತರ
    • ravi's avatar
      ravi
      ಏಪ್ರಿಲ್ 30 2014

      “ಬೆಳಕಿನ ವೇಗಕ್ಕಿಂತ ಕಡಿಮೆ ವೇಗದಲ್ಲಿ (ಯಾವ ಜಡಭೌತಿಕ ಚೌಕಟ್ಟಿನಲ್ಲ್ಲಿಯಾದರು) ಒಂದು ವಸ್ತು ಚಲಿಸುತ್ತಿದ್ದದ್ದು ಹೌದಾದರೆ ಅದಕ್ಕೆ ಯಾವತ್ತಿಗೂ ಬೆಳಕಿನ ವೇಗವನ್ನು ಹೊಂದಲು ಮತ್ತು ಮೀರಲು ಸಾಧ್ಯವಿಲ್ಲ” ಅನ್ನೋದೇ ಐನ್ಸ್ಟೀನ್ ಸಾಪೇಕ್ಷತಾ ಸಿದ್ಧಾಂತ.
      ಅದು ತಪ್ಪಾಗಿದ್ದರೆ ಜಿ.ಪಿ.ಎಸ್. ತಂತ್ರಜ್ನಾನ ಸಾಧ್ಯವಾಗುತ್ತಿರಲಿಲ್ಲ ಅನ್ನುವುದೂ ಕೂಡಾ ಅದಕ್ಕೆ ಒಂದು ರೀತಿಯ ಆಧಾರ.

      ಮಿಕ್ಕಂತೆ ಐನ್ಸ್ತೀನರೇ ಹೀಗೆ ಅಭಿಪ್ರಾಯ ಪಡುತ್ತಾರೆ : “ಯಾವುದೇ ಒಂದು ಪ್ರಯೋಗದಿಂದ ಒಂದು ಇತ್ಯಾತ್ಮಕ ಸಿದ್ಧಾಂತದ ಕುರಿತು ಹೆಚ್ಚೆಂದರೆ ‘ಇರಬಹುದು’ ಅಂತ ಮಾತ್ರಾ ತೀರ್ಮಾನಿಸಬಹುದೇ ಹೊರತೂ ‘ಅದೇ ಅಂತಿಮ ಸತ್ಯ’ ಅಂತ ಸಾಧಿಸಲು ಆಗದು (ಆ ಥರದ ತೀರ್ಮಾನಗಳು ತಾರ್ಕಿಕವಾಗಿ ಅಸಿಂಧುವಾಗುತ್ತೆ). ಅದೇ ಆ ‘ಒಂದು ಇತ್ಯಾತ್ಮಕ ಸಿದ್ಧಾಂತ’ ತಪ್ಪಾಗಿದ್ದ ಪಕ್ಷದಲ್ಲಿ ಮಾತ್ರಾ ಅದನ್ನ ಪ್ರಯೊಗದಿಂದ ‘ಖಡಾಕಂಡಿತವಾಗಿ ತಪ್ಪು’ ಅಂತ ಸಾಧಿಸಿ ತೀರ್ಮಾನಿಸುವುದಕ್ಕೆ (ತಾರ್ಕಿಕವಾಗಿ) ಏನೂ ತೊಡಕಿಲ್ಲ.”

      ಉತ್ತರ
    • ravi's avatar
      ravi
      ಏಪ್ರಿಲ್ 30 2014

      “ಇಲ್ಲದಿರುವೆಕೆಗೂ ಪುರಾವೆ ಬೇಕಾ?” ಅನ್ನೋದು ಎಂದಿಗೂ ವಿವಾದಾತ್ಮಕ. ಅದಕ್ಕಿಂತಲೂ ಪ್ರಸ್ತುತವಾದ ಪ್ರಶ್ನೆ ಅಂದರೆ ‘ಇದೂವರೆಗೂ ಪರಿಗ್ರಹಣಕ್ಕೆ ಸಿಗುತ್ತ ಇರೋದನ್ನ’ (ಅಂದರೆ observed ವಿದ್ಯಮಾನಗಳನ್ನ) ವಿವರಿಸಲಿಕ್ಕೆ ಇದೂವರೆಗೂ ‘ಈವರೆಗೂ ಪರಿಗ್ರಹಣಕ್ಕೆ ನಿಲುಕದೇ ಇರೋ’ ಅಂಥವುಗಳ ಮೊರೆಹೋಗುವ ‘ಅಗತ್ಯ’ ಇದೆಯಾ ಅಂತ. ಲೋಕದಲ್ಲಿ ಕಂಡದ್ದನ್ನ (ಎಲ್ಲಿಯವರೆಗೂ ಸಾಧ್ಯವೋ ಅಲ್ಲಿಯವರೆಗೂ) ಲೌಕಿಕವಾದ ಸಂಗತಿ-ಸಿದ್ಧಾಂತಗಳನ್ನ ಮಾತ್ರ ಬಳಸಿ ವಿವರಿಸಬೇಕು ಅನ್ನುವುದು ವಿಜ್ನಾನದ ಆಶಯ.

      ರಾಜನು (ನೆಪೊಲಿಯನ್ ಇರಬೇಕು) “ಎಲ್ಲಾ ಹೇಳಿದೆ, ಇದನ್ನೆಲ್ಲಾ ಸೃಷ್ಟಿಸಿ ನಡೆಸುವ ದೇವರು ಎಂಬಾತನ ಬಗ್ಗೆ ಏನೂ ಹೇಳಲಿಲ್ಲವಲ್ಲ!” ಅಂತ ಕೇಳಿದಾಗ ಆಸ್ಥಾನ ವಿಜ್ನಾನಿಯು (ಲಾಪ್ಲಾಸ್ ಇರಬೇಕು) “ನನಗೆ ಆ ಊಹಾಸಿದ್ಧಾಂತದ(hypothesis) ಅವಶ್ಯಕತೆಯಿಲ್ಲ ಸನ್ಮಾನ್ಯರೇ” ಅಂತ ಉತ್ತರಿಸಿದನ್ನ ಇಲ್ಲಿ ನೆನಪಿಸಿಕೊಳ್ಳಬಹುದು.

      ಉತ್ತರ
  3. M.A.Sriranga's avatar
    M.A.Sriranga
    ಏಪ್ರಿಲ್ 29 2014

    ಹೇಮಾಪತಿ ಅವರಿಗೆ –>>>>ಯಾರದ್ದೋ ಸಿದ್ಧಾಂತವನ್ನು ಎಲ್ಲರೂ ನಂಬಬೇಕೆಂದೇನೂ ಇಲ್ಲ >>>> ತಾವು ಈ ಕಾದಂಬರಿಯಲ್ಲಿನ ಒಂದು ಸಂಭಾಷಣೆಯ ಬಗ್ಗೆ ಆ context ಬಿಟ್ಟು ಪ್ರತಿಕ್ರಿಯಿಸುತ್ತಿದ್ದೀರಿ. ಸತ್ತ ಮೇಲೆ ಹಿರಿಯರಿಗೆ ಮಾಡುವ ಕರ್ಮದ (ಶ್ರಾದ್ಧ ಇತ್ಯಾದಿಗಳು) ವಿಚಾರ ಬಿಡಿ. ನಾವು,ನೀವು ಮತ್ತು ಇತರರೆಲ್ಲರೂ ದಿನನಿತ್ಯ ಉಪಯೋಗಿಸುವ ಮೊಬೈಲು,ಕಂಪ್ಯೂಟರ್ ,ಟಿ ವಿ ಇವುಗಳ ತಾಂತ್ರಿಕತೆಯನ್ನೆಲ್ಲಾ ಪರೀಕ್ಷಿಸಿಯೇ ಒಪ್ಪಿಕೊಂಡಿದ್ದೇವೆಯೇ? ಯಾರದ್ದೋ ಸಂಶೋಧನೆ ,ಮತ್ಯಾರದ್ದೋ ತಂತ್ರಜ್ಞಾನದ ಫಲಗಳನ್ನು ನಮ್ಮದನ್ನಾಗಿಸಿಕೊಂಡಿದ್ದೇವೆ. ಇದನ್ನು ನೀವು ವಿತಂಡವಾದ ಎಂದು ತಿರಸ್ಕರಿಸಿದರೆ ಅದು ತಮ್ಮ ಅಸಹನೆಯನ್ನು ತೋರಿಸುತ್ತದೆಯೇ ಹೊರತು ಬೇರೇನನ್ನೂ ಅಲ್ಲ. ನಮ್ಮ ಗತಿಸಿದ ಹಿರಿಯರ ಶ್ರಾದ್ಧವನ್ನು ಮಾಡಲೇಬೇಕು ಎಂದು ಯಾರಾದರೂ ಬಲವಂತ ಮಾಡಿದ್ದಾರೆಯೇ? ಇಷ್ಟವಿದ್ದರೆ ಮಾಡಬಹುದು; ಇಲ್ಲವಾದರೆ ಬಿಡಬಹುದು. ಶ್ರಾದ್ಧದ ದಿನ ಇಡುವ ಪಿಂಡವನ್ನು (ಅನ್ನದ ಉಂಡೆ) ಗತಿಸಿದ ಹಿರಿಯರು ಕಾಗೆಯ ರೂಪದಲ್ಲಿ ಬಂದು ತಿನ್ನುತ್ತಾರೆ ಎನ್ನುವುದನ್ನು ಯಾವುದೇ ಪ್ರಯೋಗಶಾಲೆಯ ಪರೀಕ್ಷೆಯ ಮೂಲಕ ಸಾಬೀತು ಪಡಿಸಲು ಆಗುವುದಿಲ್ಲ. ಇದು ಈಗಿನ ಕಾಲದ ನಮಗೆ ಗೊತ್ತು. ಆದರೆ ಶ್ರಾದ್ಧ ಎನ್ನುವುದು ನಮಗೆ ಜನ್ಮ ಕೊಟ್ಟವರನ್ನು at least ವರ್ಷಕ್ಕೊಂದು ಸಾರಿಯಾದರೂ ನೆನಪಿಸಿಕೊಳ್ಳುವ ಕ್ರಿಯೆ. ನಮ್ಮ ಮಕ್ಕಳಿಗೆ ತಾತನ/ಹಿರಿಯರ ಹೆಸರಿಡುವುದರ ಹಿಂದೆ ಸಹ ಇದೇ ನಂಬುಗೆ ಇದೆ. ಮಕ್ಕಳನ್ನು ಕರೆದಾಗ ಹಿರಿಯರ ನೆನಪಾಗುತ್ತದೆ ಎಂಬ ಭಾವನಾತ್ಮಕ ನಂಟು. ಈಗ ಈ ಪದ್ಧತಿ ಇಲ್ಲವಾಗಿರಬಹುದು. ಅದರ ಬಗ್ಗೆ ನಮ್ಮ ತಕರಾರೇನಿಲ್ಲ. ಒಂದು ಕಾದಂಬರಿಯಲ್ಲಿ ವಿಜ್ಞಾನದ ಅರಿವಿಗೆ ದಕ್ಕಲಾರದ ವಿಷಯಗಳು ಬರಲೇಬಾರದೇ?

    ಉತ್ತರ
  4. ಹೇಮಾಪತಿ's avatar
    ಹೇಮಾಪತಿ
    ಏಪ್ರಿಲ್ 29 2014

    ಮೊಬೈಲ್, ಕಂಪ್ಯೂಟರ್, ಟಿ.ವಿ. ಇವುಗಳು ನಿಮ್ಮ ಕಣ್ಣ ಮುಂದೆಯೇ ಕೆಲಸ ಮಾಡುತ್ತಿವೆ. ಅವುಗಳು ಕೆಲಸ ಮಾಡದಿದ್ದರೆ ಅವುಗಳನ್ನು ಯಾರೂ ಉಪಯೋಗಿಸುತ್ತಿರಲೇ ಇಲ್ಲ. ಇನ್ನು ಅವುಗಳನ್ನು ಪರೀಕ್ಷಿಸುವುದೇನು ಬಂತು?

    ಉತ್ತರ
  5. ಹೇಮಾಪತಿ's avatar
    ಹೇಮಾಪತಿ
    ಏಪ್ರಿಲ್ 29 2014

    ಶ್ರಾದ್ಧ, ಪಿಂಡ ಇವುಗಳು ಕೆಲಸಕ್ಕೆ ಬಾರದ ಮೂಢ ನಂಬಿಕೆಗಳು.

    ಉತ್ತರ
    • M.A.Sriranga's avatar
      M.A.Sriranga
      ಏಪ್ರಿಲ್ 29 2014

      ಹೇಮಾಪತಿ ಅವರಿಗೆ — >>>ಮೊಬೈಲು,ಟಿ ವಿ , ಕಂಪ್ಯೂಟರ್ ನಿಮ್ಮ ಕಣ್ಣ ಮುಂದೆಯೇ ಕೆಲಸ ಮಾಡುತ್ತಿರುತ್ತವೆ …….. >>>>. ಹೌದು. ಇಲ್ಲವೆಂದು ನಾನೆಲ್ಲಿ ಹೇಳಿದ್ದೇನೆ? ತಮಗೆ ಸಾಹಿತ್ಯದ ಬಗ್ಗೆ ಬಹುಶಃ ಆಸಕ್ತಿ ಇಲ್ಲದೇ ಇರಬಹುದು. ಪರವಾಗಿಲ್ಲ. ಆದರೆ ಸಾಹಿತ್ಯ ನಮ್ಮ ಜೀವನದ ಬಗ್ಗೆ ನೀಡುವ ಒಳನೋಟಗಳನ್ನು ಕೇವಲ ಒಣ ವೈಜ್ಞಾನಿಕ,ವೈಚಾರಿಕ ಎಂಬ ಅರೆಬೆಂದ ವಿಚಾರಗಳಿಂದ ವಿವರಿಸಲು ಆಗುವುದಿಲ್ಲ.

      ಉತ್ತರ
      • Hemanth.M's avatar
        Hemanth.M
        ಏಪ್ರಿಲ್ 29 2014

        ನ೦ಬಿಕೆ ಅಪನ೦ಬಿಕೆಗಳು ಭಾವನೆಯನ್ನು ಅವರಿಸಿದವೆ……..ಉದಾ-ತ೦ದೆ ಮಗುವನ್ನ ಮೆಲಕ್ಕೆ ಎಸದಾಗ ಮಗು ಕಿಲ-ಕಿಲನೆ ನಗಲು ಕಾರಣ…ನನ್ನ ತ೦ದೆ ನನ್ನನ್ನು ಮತ್ತೆ ಹಿಡಿಯುತಾನೆ ಎ೦ಬ ನಂಬಿಕೆಯೆ ಹೊರತು ನನ್ನ ತ೦ದೆ ಹಿಡಿಯುತಾನೋ? ಇಲ್ಲವೋ? ಎ೦ಬುದಕ್ಕೆ ವಿಜ್ಙಾನದ ಮುಲಕ ಉತ್ತರ ಕ೦ಡುಕೊಳ್ಳುವುದಲ್ಲ? ಪ್ರತಿಯೊ೦ದನ್ನು ಮೂಡನಂಬಿಕೆ ಮೂಲಕ ನೊಡಲು ಕಾರಣ ಆಧುನಿಕತೆಯ ಸಡಗರ, ಕಾದ೦ಬರಿಯಲ್ಲಿ ನೇಹಳ ಪಾತ್ರವು ಆಧುನಿಕತೆಯನ್ನು ಬಿ೦ಬಿಸಿದೆ….ನೇಹಳ ಕುಡಿತ, ಧೂಮಪಾನದ, ಹಾದರದ ವಾಸ್ತವತೆಯನ್ನು……ಶಾರದಮ್ಮನವರ ಕಾಣದ “ಶ್ರಾದ್ದ”ದ ರೀತಿಯನ್ನು ತುಲನೆ ಮಾಡಿ ನೋಡಿ…..ನ೦ಬಿಕೆ ಎನೆ೦ಬುದು ತಿಲಿಯಬಹುದು…..

        ಉತ್ತರ
        • Nagshetty Shetkar's avatar
          Nagshetty Shetkar
          ಏಪ್ರಿಲ್ 29 2014

          “ತ೦ದೆ ಮಗುವನ್ನ ಮೆಲಕ್ಕೆ ಎಸದಾಗ ಮಗು ಕಿಲ-ಕಿಲನೆ ನಗಲು ಕಾರಣ…ನನ್ನ ತ೦ದೆ ನನ್ನನ್ನು ಮತ್ತೆ ಹಿಡಿಯುತಾನೆ ಎ೦ಬ ನಂಬಿಕೆ”

          ನಾನು ವಿಜ್ಞಾನದ ವಿದ್ಯಾರ್ಥಿಯಲ್ಲ. ಆದರೆ ಮಗು ಕಿಲ ಕಿಲ ನಗಲು ನೀವು ಕೊಟ್ಟ ಕಾರಣ ನಿಜವಲ್ಲ. ವಿಜ್ಞಾನಿಗಳನ್ನು ಕೇಳಿದರೆ ಸರಿಯಾದ ಕಾರಣ ಕೊಡುತ್ತಾರೆ. ನಮ್ಮ ನಡುವಿನ ಮಹಾ ‘ಜ್ಞಾನಿ’ ಬಾಳು ಭಟ್ ಅವರಿಗೆ ತಿಳಿದಿದ್ದರೆ ಅವರು ಹೇಳುತಾರೆ ಎಂಬ ನಂಬಿಕೆ ನನ್ನದು.

          ಉತ್ತರ
          • Hemanth.M's avatar
            Hemanth.M
            ಏಪ್ರಿಲ್ 30 2014

            ಹೌದೇ..!ಹಾಗದರೆ ನೀವು ಮನೆಯಿ೦ದ ಹೋರಟಾಗ ಮತ್ತೆ ಹಿ೦ದಿರುಗೆತೇನೆ ಎ೦ಬ ನ೦ಬಿಕೆ ಮೇಲೆ ಹೊರಡುತೀರೊ? ಇಲ್ಲ ಅದಕ್ಕೆ ವಿಜ್ಞಾನದ ಮೂಲಕ ಕಾರಣ ಉತ್ತರ ಹುಡುಕುತಿರೋ?

            ಉತ್ತರ
            • ಹೇಮಾಪತಿ's avatar
              ಹೇಮಾಪತಿ
              ಏಪ್ರಿಲ್ 30 2014

              ನೀವು ಯಾವಾಗ ಸಾಯುತ್ತೀರಿ ಎಂಬುದನ್ನು ಮೊದಲು ನೀವು ತಿಳಿದುಕೊಳ್ಳಿ. ನಂತರ ನನಗೆ ಕೇಳುವಿರಂತೆ. ಎಲ್ಲರೂ ಒಂದು ದಿನ ಸಾಯುತ್ತಾರೆ. ಹೇಗೆ ಸಾಯುತ್ತಾರೆಂಬುದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಹೆಲ್ಮೆಟ್ ಹಾಕಿಕೊಂಡಿದ್ದರೂ ಸ್ಪಾಟ್ ಡೆತ್ ಆಗಿರೋದನ್ನ ನೋಡಿದ್ದೀನಿ. ನೀವು ಹೇಗೆ ಸಾಯುತ್ತೀರೆಂಬುದು ನಿಮಗೆ ಗೊತ್ತೆ? ಅದನ್ನು ಮೊದಲು ತಿಳಿದುಕೊಳ್ಳಿ. ಏನೋ ಹುಡುಕುತ್ತಾರಂತೆ? ಸಾವನ್ನು ಹುಡುಕಿಕೊಂಡು ಹೋಗಬೇಕಿಲ್ಲ. ಅದೇ ಬಂದು ವಕ್ರಿಸಿಕೊಳ್ಳುತ್ತೆ.

              ಉತ್ತರ
            • ಹೇಮಾಪತಿ's avatar
              ಹೇಮಾಪತಿ
              ಏಪ್ರಿಲ್ 30 2014

              ವಿಜ್ಙಾನವನ್ನು ನಂಬದ ನಿಮ್ಮ ಅಜ್ಞಾನ ಅತಿಯಾಯಿತು.

              ಉತ್ತರ
              • Hemanth.M's avatar
                Hemanth.M
                ಏಪ್ರಿಲ್ 30 2014

                ಮೊದಲಿಗೆ ನಿಮಗೆ ನನ್ನ ಅಭಿಪ್ರಾಯ ಏನೆ೦ಬುದು ತಿಳದಿಲ್ಲ…ಎರಡನೆಯದಾಗಿ ನಾನು ನಿಮ್ಮ ವಿರೋದಿ ಅಲ್ವೆ ಅಲ್ಲ…ತಿಥಿ ಇವೆಲ್ಲವನ್ನು ನಾನು ನ೦ಬುವುದಿಲ್ಲ…ಕೆಲವ್ವೊಮ್ಮೆ ಕಾದ೦ಬರಿಯಲ್ಲಿ ಯವುದನ್ನು ಬಲವ೦ತವಾಗಿ ಹೇರಿಲ್ಲ….ಅಭಿಪ್ರಾಯ ವ್ಯಕ್ತವಾಗಿದೆ…ಹೇಮಾವತಿ ಅವರೇ ದಯವಿಟ್ಟು ಕಾದ೦ಬರಿಯನ್ನು ವಿವೇಚಾನತ್ಮಕವಾಗಿ ಓದಿ…ಒ೦ದು ಮಾತು ನಿಜ ಯಾವುದೇ ಮೂಡನ೦ಬಿಕೆಯನ್ನು, ಅರ್ಥಹೀನವಾದವನ್ನು ಬಲವ೦ತವಾಗಿ ಹೇರಿದ್ಡೆ ಆದಲ್ಲಿ, ನನ್ನ ವಿರೊಧವಿದೆ ನಾನು “ಕೋಮುವಾದಿ” ಅಲ್ಲ…ವಿಜ್ಙಾನವು ಪೊಳ್ಳೆ೦ದು ನಾನು ಹೇಳುದ್ನ….ನ೦ಬಿಕೆ ರಹಿತ ಜೀವನ ಅಸ್ಪಷ್ಟ….ತಿಳಿಯಿತೆ ಹಾಗೆಂದು ದೇವರನ್ನು ನ೦ಬಿ ಎ೦ದು ಹೇಳುತಿಲ್ಲ…..! ಮತ್ತೆ ತಪ್ಪುಗ್ರಹಿಕೆ ಬೇಡ…ಆದುನಿಕತೆ ಮತ್ತು ಅದರಿ೦ದ ಹೊರಗುಳಿದವರ ಜಿವನ ಶೈಲಿ ತೋರಿಸಿದ್ದು ತಪ್ಪೆ? ಹಾಗದರೆ ನೀವು ಪುಸ್ತಕ ಓದಿದ್ದರೆ ನೇಹಳ ಪಾತ್ರವನ್ನು ಹೇಗೆ ಸಮರ್ಥಿಸಿಕೋಳ್ಳುವಿರಿ?

                ಉತ್ತರ
                • Hemanth.M's avatar
                  Hemanth.M
                  ಏಪ್ರಿಲ್ 30 2014

                  ನಾನು ದೇವರನ್ನು ನ೦ಬುವುದಿಲ್ಲ….ಹಾಗ೦ತ ನ೦ಬಿಕೆ ಕಳೆದುಕೊ೦ಡು ಜಿವನ ನಡೆಸುತಿಲ್ಲ…ವಾದಕ್ಕಾಗಿ ಮತಾಡಬೇಡಿ ನಿಜ ಹೇಳಿ ಮನೆಯಿ೦ದ ಹೊರಟಗ ನಿವೆ೦ದು ವಾಪಸ್ಸು ಬರಬಲ್ಲೆ ಎ೦ಬ ನ೦ಬಿಕೆ ಮೇಲೆ ಹೋರಟಿಲ್ಲವೆ?

                  ಉತ್ತರ
                • ಹೇಮಾಪತಿ's avatar
                  ಹೇಮಾಪತಿ
                  ಮೇ 1 2014

                  ಪ್ರಿಯ ಹೇಮಂತ್ ರವರೇ, ನಿಮ್ಮ ಬಗ್ಗೆ ನನಗೇನೂ ತಿಳಿಯದು. ಆದರೆ ನಾಗಶೆಟ್ಟಿ ಶೇಟ್ಕರ್ ಅನ್ನೋ ಮಹಾನುಭಾವ ಬಹಳ ಕೀಳಾಗಿ ಬರೆಯಲು ಹೊರಟಿದ್ದಾರೆ. ಹೆಚ್ಚಿನ ಉತ್ತರವೆಲ್ಲ ಅವರನ್ನು ಉದ್ದೇಶಿಸಿ ನಾನು ಬರೆದಿದ್ದು. ಹೊರಗೆ ಹೊರಟವರೆಲ್ಲಾ ಸಾವಿನ ಬಗ್ಗೆ ಚಿಂತಿಸುವುದಿಲ್ಲ. ಹಣ ಸಂಪಾದಿಸುವ ನೌಕರಿಯ ಬಗ್ಗೆ, ಮೂರು ಹೊತ್ತು ಊಟದ ಬಗ್ಗೆ, ಹೆಂಡತಿ ಮಕ್ಕಳನ್ನು ಸಾಕಲು ಬೇಕಾದ ಹಣದ ಬಗ್ಗೆ, ತಲೆಯ ಮೇಲಿನ ಸೂರಿನ ಬಗ್ಗೆ ಯೋಚಿಸುತ್ತಾರೆ. ಸಾವು ಬಂದೇ ಬರತ್ತೆ. ಅದು ಎಲ್ಲಿ ಹೇಗೆ ಬರತ್ತೆ ಯಾರಿಗೂ ಬೇಕಿಲ್ಲ. ಬಂದಾಗ ಸಾಯುತ್ತಾರೆ ಅಷ್ಟೆ. ಸಾವು ಬರುವವರೆಗೂ ಹೋರಾಟ. ಬಂದ ನಂತರ ಎಲ್ಲವೂ ಚರಿತ್ರೆ. ಆಧುನಿಕತೆಯಿಂದ ಹೊರಗುಳಿದವರ ಬಗ್ಗೆ ನನಗೂ ಅನುಕಂಪವಿದೆ. ಆದರೆ ಈ ಪ್ರಪಂಚದಲ್ಲಿ ‘ವಿದ್ಯಾವಂತ ಕ್ರೂರಿಗಳು, ಅವಿದ್ಯಾವಂತ ಮುಠ್ಠಾಳರೆ’ ಹೆಚ್ಚಿರುವಾಗ ನೀವೇನು ತಾನೇ ಮಾಡಲಾದೀತು. ಅಂತಹವರುಗಳನ್ನು ಯಾರೂ ಬದಲಾಯಿಸಲಾಗದು. ಅವರು ಬದಲಾಗಲು ಸಿದ್ದರೂ ಇಲ್ಲ. ತಮಗೆ ನನ್ನ ಅಭಿಪ್ರಾಯದಿಂದ ಬೇಸರವಾಗಿದ್ದರೆ ಕ್ಷಮೆಯಿರಲಿ.

                  ಉತ್ತರ
                  • Nagshetty Shetkar's avatar
                    Nagshetty Shetkar
                    ಮೇ 1 2014

                    “ನಾಗಶೆಟ್ಟಿ ಶೇಟ್ಕರ್ ಅನ್ನೋ ಮಹಾನುಭಾವ ಬಹಳ ಕೀಳಾಗಿ ಬರೆಯಲು ಹೊರಟಿದ್ದಾರೆ. ”

                    ಅಯ್ಯೋ! ನಾನು ನಿಮ್ಮನ್ನು ಮೆಚ್ಚಿ ಬರೆದುದ್ದಕ್ಕೆ ನನಗೆ ಹರೀಶ್ಚಂದ್ರ ಘಾಟಿಗೆ ಹೋಗಿ ಅಂತ ಹೇಳಿದ್ದಲ್ಲದೆ ಈಗ ಅಲ್ಲ ಸಲ್ಲದ ಆಪಾದನೆಗಳನ್ನು ಮಾಡಿದ್ದೀರಲ್ಲ! ನಿಮ್ಮ ನಾಲಿಗೆ ಹಾವೋ ಚೇಳೋ??

                    ನೀವು ಖಂಡಿತ ಶರಣರಲ್ಲ! ನೀವು ವೈದಿಕ ವೈರಸುಗಳ ಇನ್ನೂ ಅಪಾಯಕಾರಿ mutation ಅಂತ ಕಾಣುತ್ತದೆ!!!

                    ಉತ್ತರ
                    • ಹೇಮಾಪತಿ's avatar
                      ಹೇಮಾಪತಿ
                      ಮೇ 1 2014

                      ಇರ್ಲೀ ಬಿಡಿ ಶೆಟ್ಕರ್. ಯಾಕೆ ಅಷ್ಟೊಂದು ಬೇಜಾರು ಮಾಡ್ಕೊತಿದ್ದೀರಿ. ಎಲ್ಲರೂ ಅವರವರದೇ ಆದ ಶೈಲಿ ಹೊಂದಿರುತ್ತಾರೆ. ಒಬ್ಬರಿಗೆ ಹಿಡಿಸಿದ್ದು ಇನ್ನೊಬ್ಬರಿಗೆ ಹಿಡಿಸಬೇಕೆಂದೇನೂ ಇಲ್ಲ. ನಾನು ಸಾಮಾನ್ಯ ಸಂಸಾರೀ ಮನುಷ್ಯ. ಶರಣ ಎಂದು ನಾನೆಲ್ಲೂ ಹೇಳಿಲ್ಲವಲ್ಲ. ಎಲ್ಲರೂ ಶರಣರಾಗಲು ಸಾಧ್ಯವಿಲ್ಲ. ಅದು ಪ್ರಕೃತಿ ನೀತಿಗೆ ವಿರೋಧವಾಗತ್ತೆ ಕೂಡ. ನೀವೇ ಊಹಿಸಿಕೊಂಡರೆ ನಾನೇನು ಮಾಡಲಿ. ನಮ್ಮ ನಿಮ್ಮ ಅವಿವೇಕದ ಅಭಿಪ್ರಾಯಗಳು ಇಲ್ಲಿಗೇ ನಿಲ್ಲಲಿ. ವಿಷಯ ಬದಲಾಯಿಸಿ. ನೀವು ಸಂಸಾರಿಗಳೋ, ಬ್ರಹ್ಮಚಾರಿಗಳೋ ಅಂತ ಹೇಳಿದರೆ. ನಿಮ್ಮನ್ನು ಅರ್ಥ ಮಾಡಿಕೊಳ್ಳುವುದು ಸುಲಭವಾಗತ್ತೆ.

                    • Nagshetty Shetkar's avatar
                      Nagshetty Shetkar
                      ಮೇ 1 2014

                      “ಯಾಕೆ ಅಷ್ಟೊಂದು ಬೇಜಾರು ಮಾಡ್ಕೊತಿದ್ದೀರಿ.”

                      ಚೇಳಿನ ತರಹ ಕುಟುಕುತ್ತೀರಿ ಆಮೇಲೆ ಬೇಜಾರು ಯಾಕೆ ಅಂತ ಕೇಳ್ತೀರಿ! ನೀವೇನು ಮನುಷ್ಯತ್ವ ಇರುವವರೋ ಅಥವಾ ನರಸತ್ತ ಸೈಬರ್ ಗೂಂಡಾನೋ?

                  • Hemanth.M's avatar
                    Hemanth.M
                    ಮೇ 1 2014

                    ||ಪ್ರಿಯ ಹೇಮಂತ್ ರವರೇ, ನಿಮ್ಮ ಬಗ್ಗೆ ನನಗೇನೂ ತಿಳಿಯದು.|| ಹೇಮಾಪತಿ ಅವರೇ…. ಅಭಿವ್ಯ್ಜಕ್ತಿ ಸ್ವಾತ೦ತ್ರ ಪ್ರತಿಯೊಬ್ಬರ ಹಕ್ಕು..ನಿಮ್ಮ ಆನಿಸಿಕೆ ತಿಲಿಸಲು ಯಾರ ಅಪ್ಪಣೆಯು ಬೇಡ…ಕ್ಷಮೆ ಕೇಳುವ ಅವಶ್ಯಕತೆ ಇಲ್ಲ….

                    ಉತ್ತರ
                    • ಹೇಮಾಪತಿ's avatar
                      ಹೇಮಾಪತಿ
                      ಮೇ 1 2014

                      ಧನ್ಯವಾದಗಳು. ನಿಮ್ಮ ಅಭಿಪ್ರಾಯ ಸರಿ.

  6. Karanam Pavan Prasad's avatar
    ಏಪ್ರಿಲ್ 29 2014

    ಕಾದಂಬರಿಯನ್ನು ಓದಿದ ನಂತರ ವಿಚಾರದ ಪೂರ್ಣತೆ ಅರಿವಾಗುತ್ತದೆ.
    ಎರಡು ಪುಟಗಳು ಕಾದಂಬರಿಯ ಅರ್ಥ ಗ್ರಾಹಿತ್ವವವನ್ನು ನಿರೂಪಿಸಲು ಸಾಧ್ಯವಿಲ್ಲ.
    ಹಾಗೂ ಚರ್ಚೆಯಲ್ಲಿ ಬಲು ವಿಷಯಾಂತರವಾಗಿದೆ. ವಾಸ್ತವತೆಯ ಆಧಾರದಲ್ಲಿ ಹೇಮಾಪತಿಯವರು ತಮ್ಮ ವಿಚಾರ ಮುಂದಿಟ್ಟಿದ್ದಾರೆ.
    ಇನ್ನೊಬ್ಬರು (ssnk) ತಾತ್ವಿಕ ನೆಲೆಗಟ್ಟಿನಲ್ಲಿ ಅಲೌಕಿಕತೆಯನ್ನು ವ್ಯಕ್ತ ಪಡಿಸಿದ್ದಾರೆ.
    ಕರ್ಮ ಕಾದಂಬರಿಯನ್ನು ಓದಿದ ನಂತರ ಇವೆರೆಡನ್ನೂ ಮೀರಿದ ಅನೂಹ್ಯ ಹೊಳಹು ದೊರಕುತ್ತದೆ ಎಂಬುದು ನನ್ನ ಬಲವಾದ ನಂಬಿಕೆ

    ಉತ್ತರ
    • Nagshetty Shetkar's avatar
      Nagshetty Shetkar
      ಏಪ್ರಿಲ್ 29 2014

      “ಕರ್ಮ ಕಾದಂಬರಿಯನ್ನು ಓದಿದ ನಂತರ ಇವೆರೆಡನ್ನೂ ಮೀರಿದ ಅನೂಹ್ಯ ಹೊಳಹು ದೊರಕುತ್ತದೆ”

      ಮಾನ್ಯರೇ, ಈ ಮಾತನ್ನು ನಿಮ್ಮ ಕಾದಂಬರಿ ಓದಿದ ಹಿರಿಯರು ಹೇಳಿದರೆ ಅದಕ್ಕೊಂದು ಅರ್ಥ. ನೀವೇ ನಿಮ್ಮ ಕೃತಿಯ ಬಗ್ಗೆ ಹೀಗೆ ಹೇಳುವುದು ಸರಿಯಲ್ಲ.

      ಉತ್ತರ
      • ravi's avatar
        ravi
        ಏಪ್ರಿಲ್ 30 2014

        “ಕರ್ಮ ಕಾದಂಬರಿಯನ್ನು ಓದಿದ ನಂತರ ಇವೆರೆಡನ್ನೂ ಮೀರಿದ ಅನೂಹ್ಯ ಹೊಳಹು ದೊರಕುತ್ತದೆ” ಅಂತ ಲೇಖಕರು ಅಪ್ಪಣೆಯನ್ನ ಏನೂ ಹೊರಡಿಸಿಲ್ಲವಲ್ಲ. ಅವರು “ಹಾಗಂತ ತಾನು ನಂಬಿಕೊಂಡಿದ್ದೇನೆ” ಅಂತ ಮಾತ್ರಾ ಹೇಳಿರುವುದು ಕಣ್ಣಿಗೆ ರಾಚುವಂತೆ ಎದುರಿಗಿದೆ. ಹಾಗೆ ನಂಬಿಕೊಳ್ಳುವ ಹಾಗು ‘ನನ್ನ ನಂಬಿಕೆ ಇದು’ ಅಂತ ಇತರರಿಗೆ ಹೇಳುವ ಎಲ್ಲ ಹಕ್ಕು ಅವರಿಗೆ ಖಂಡಿತ ಇದೆ. ಆದರೂ ಅವರ ಹೇಳಿಕೆಯನ್ನ ತಮಗೆ ಬೇಕಾಂದಂತೆ ತುಂಡರಿಸಿ ತಮ್ಮ ಪೂರ್ವಾಗ್ರಹ ಪೀಡಿತ ಉಪದೇಶಾಮೃತ ಸುರಿಸುತ್ತಾರೆ ಈ ಶೆಟ್ಕರ್ ಎಂಬ ಮಹಾಶಯರು!

        ಶೆಟ್ಕರ್ ಅಂತ ಇಲ್ಲಿ ಹೆಸರಿಟ್ಟುಕೊಂಡಿರುವವರೇ, ಇಲ್ಲಿ ನೀವು ‘out of context’ ಎತ್ತಿಕೊಂಡು ತುಂಡರಿಸಿ ಅರಧಂಬರ್ಧ ವಾಕ್ಯವನ್ನ ಉದ್ಧರಿಸಿ ನಿಮ್ಮ ಬೇಳೆ ಬೇಯಿಸಲು ಹೊರಟಿದ್ದೀರಿ. ಇದು ನಿಮ್ಮ ಇದುವರೆಗಿನ ಕಮೆಂಟುಗಳ ರೀತಿನೀತಿಗೆ ಒಂದು ಸಾಮಾನ್ಯ ಉದಾಹರಣೆ ಅಷ್ಟೇ. ಯಾಕೆ ಯಾವಾಗಲೂ ಹೀಗೆ ಚರ್ಚೆಯ ದಿಕ್ಕು ತಪ್ಪಿಸಿ ಕಾಲಹರಣ ಮಾಡ್ತೀರಿ?

        ಉತ್ತರ
        • ಹೇಮಾಪತಿ's avatar
          ಹೇಮಾಪತಿ
          ಮೇ 1 2014

          ಸರಿಯಾಗಿ ಹೇಳಿದ್ರಿ.

          ಉತ್ತರ
        • Nagshetty Shetkar's avatar
          Nagshetty Shetkar
          ಮೇ 1 2014

          “ಕರ್ಮ ಕಾದಂಬರಿಯನ್ನು ಓದಿದ ನಂತರ ಇವೆರೆಡನ್ನೂ ಮೀರಿದ ಅನೂಹ್ಯ ಹೊಳಹು ದೊರಕುತ್ತದೆ” ಎಂಬುದು ಲೇಖಕರ ನಂಬಿಕೆಯಾಗಿದ್ದರೆ ಅದನ್ನು ಜೋಪಾನವಾಗಿ ಅವರೊಳಗೇ ಇಟ್ಟುಕೊಳ್ಳಬೇಕಿತ್ತು. ಅದು ಬಿಟ್ಟು ನಿಲುಮೆಯ ಓದುಗರ ಮೇಲೆ ಹೇರಲು ಹೊರಟಿದ್ದೇತಕ್ಕೆ?!!

          ಉತ್ತರ
          • keshavakoushikkoushik's avatar
            ಮೇ 5 2014

            ತಾವು ತಮ್ಮ ಶರಣತ್ವದ ಪುಂಗಿಯನ್ನು ಸದಾಕಾಲ ಊದುತ್ತಾ.. ಅದನ್ನು ಎಲ್ಲರು ಕೇಳಲೇಬೇಕು.. ಕೇಳದಿದ್ದವರು ವೈರಸ್ಸು ಅಂತ ಬಡಬಡಿಸಬಹುದು.. ಬೇರೆಯವರು ತಮ್ಮ ನಂಬಿಕೆ ಅಭಿಪ್ರಾಯ ಹೇಳಬಾರದು.. ಯಾಕೆ ಈ ಇಬ್ಬಂದಿತನ.. ??

            ಉತ್ತರ
            • Nagshetty Shetkar's avatar
              Nagshetty Shetkar
              ಮೇ 5 2014

              ಶರಣರನ್ನು ಪುಂಗಿ ಓದುವವರು ಎಂದು ಕರೆದು ನೀವು ಇಡೀ ಶರಣ ಪರಂಪರೆಗೇ ಅವಮಾನ ಮಾಡಿದ್ದೀರಿ. ಶರಣರು ಪುಂಗಿ ಓದುವವರಲ್ಲ. ಸತ್ಯ ಸಮಾನತೆ ಹಾಗೂ ಕಾರುಣ್ಯದ ಹರಿಕಾರರು ಶರಣರು. ನಿಮ್ಮ ತಪ್ಪು ತಿಳುವಳಿಕೆಯನ್ನು ತಿದ್ದಿಕೊಳ್ಳಿ.

              ಉತ್ತರ
              • ಕೌಶಿಕ್'s avatar
                ಮೇ 5 2014

                ಅದು ಕೇವಲ ನಿಮ್ಮ ನಂಬಿಕೆ .. ಅದು ನಿಮಗೇ ಇರಲಿ… ನಿಮ್ಮ ವಾದದಂತೆಯೇ ಬಂದರೆ ಈ ಮಾತನ್ನು ಸ್ವಘೋಶಿತ ಶರಣರನ್ನು ಬಿಟ್ಟು ಬೇರೆ ಯಾರಾದರು ಹೇಳಿದರೆ ಅದರಬಗ್ಗೆ ಯೋಚಿಸಬಹುದು

                ಉತ್ತರ
  7. Hemanth.M's avatar
    Hemanth.M
    ಏಪ್ರಿಲ್ 29 2014

    ನ೦ಬಿಕೆ ಅಪನ೦ಬಿಕೆಗಳು ಭಾವನೆಯನ್ನು ಅವರಿಸಿದವೆ……..ಉದಾ-ತ೦ದೆ ಮಗುವನ್ನ ಮೆಲಕ್ಕೆ ಎಸದಾಗ ಮಗು ಕಿಲ-ಕಿಲನೆ ನಗಲು ಕಾರಣ…ನನ್ನ ತ೦ದೆ ನನ್ನನ್ನು ಮತ್ತೆ ಹಿಡಿಯುತಾನೆ ಎ೦ಬ ನಂಬಿಕೆಯೆ ಹೊರತು ನನ್ನ ತ೦ದೆ ಹಿಡಿಯುತಾನೋ? ಇಲ್ಲವೋ? ಎ೦ಬುದಕ್ಕೆ ವಿಜ್ಙಾನದ ಮುಲಕ ಉತ್ತರ ಕ೦ಡುಕೊಳ್ಳುವುದಲ್ಲ? ಪ್ರತಿಯೊ೦ದನ್ನು ಮೂಡನಂಬಿಕೆ ಮೂಲಕ ನೊಡಲು ಕಾರಣ ಆಧುನಿಕತೆಯ ಸಡಗರ, ಕಾದ೦ಬರಿಯಲ್ಲಿ ನೇಹಳ ಪಾತ್ರವು ಆಧುನಿಕತೆಯನ್ನು ಬಿ೦ಬಿಸಿದೆ….ನೇಹಳ ಕುಡಿತ, ಧೂಮಪಾನದ, ಹಾದರದ ವಾಸ್ತವತೆಯನ್ನು……ಶಾರದಮ್ಮನವರ ಕಾಣದ “ಶ್ರಾದ್ದ”ದ ರೀತಿಯನ್ನು ತುಲನೆ ಮಾಡಿ ನೋಡಿ…..ನ೦ಬಿಕೆ ಎನೆ೦ಬುದು ತಿಲಿಯಬಹುದು…..

    ಉತ್ತರ
  8. Hemanth.M's avatar
    Hemanth.M
    ಏಪ್ರಿಲ್ 29 2014

    ಕಾದ೦ಬರಿಯು ಯಾವುದನ್ನು ಬಲವಂತವಗಿ ಹೇರಹೊರಟಿಲ್ಲ…ಆನಿಸಿಕೆ ವ್ಯಕ್ತವಾಗಿದೆ ವೆ೦ಕಟೇಶ ಭಟ್ಟರ ಮೂಲಕ….ನನ್ನ ತ೦ದೆಯು ನಿಧಾರದಾಗಿನಿ೦ದ ದಿನ ನೆನೆಯುತೇನೆ ಅದು ನನ್ನ “ದರ್ಮ” “ಕರ್ಮ” ಕೂಡ…..ವರ್ಷದಲ್ಲಿ ಒಮ್ಮೆ ನಂಬಿಕೆಯ ಮೂಲಕ ಒಟ್ಟಾರೆ ನನ್ನ ಕುಟು೦ಬದೊ೦ದಿಗೆ ನೆನೆಯುವ ಕ್ರಿಯೆ ತ್ರುಪ್ತಿಗಾಗಿ….ಇದನ್ನು ಅರ್ಥಹಿನ ಎ೦ಬ ಹೇಳಿಕೆ…..ಅರ್ಥಹೀನವೇ ಸರಿ……

    ಉತ್ತರ
    • ಹೇಮಾಪತಿ's avatar
      ಹೇಮಾಪತಿ
      ಏಪ್ರಿಲ್ 29 2014

      ವಾದವು ಒಂದು ಕೆಟ್ಟ ಸಂಭಾಷಣೆ. ಹಾಗಾಗಿ ಅದನ್ನು ನಾನು ಇಲ್ಲಿಗೇ ನಿಲ್ಲಿಸುತ್ತೇನೆ. ನನಗೇನು ಸರಿಯೆನ್ನಿಸಿದೆಯೋ ಅದನ್ನು ನಾನು ಹೇಳಿದ್ದೇನೆ. ನನ್ನ ಅನಿಸಿಕೆಯನ್ನು ಅರ್ಥಹೀನವೆಂದು ಹೇಳಲು ನಿಮಗೆ ಅಧಿಕಾರವಿಲ್ಲ. ನಿಮ್ಮ ಹೇಳಿಕೆಯನ್ನು ನೀವು ಹೇಗೆ ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದ್ದೀರೋ, ಅದನ್ನೇ ನಾನೂ ಮಾಡಿದ್ದೇನೆ.

      ಉತ್ತರ
      • Nagshetty Shetkar's avatar
        Nagshetty Shetkar
        ಏಪ್ರಿಲ್ 29 2014

        ಬಲಪಂಥೀಯರೇ ಹೀಗೆ ಹೇಮಾಪತಿಯವರೇ! ವಿತ್ತಂಡ ವಾದ ಮಾಡಿ ಸತ್ಯವನ್ನು ಮರೆಮಾಚುವ ಎಲ್ಲಾ ಪ್ರಯತ್ನಗಳನ್ನೂ ಮಾಡುತ್ತಾರೆ. ಅವಧಿಯಲ್ಲಿ ನಡೆದ ವಚನಗಳ ಚರ್ಚೆಯಲ್ಲೂ ಹೀಗೇ ಆಯಿತು. ದರ್ಗಾ ಸರ್ ಅವರು ತತ್ವಬದ್ಧರಾಗಿ ವಸ್ತುನಿಷ್ಠ ವಾದ ಮಾಡುತ್ತಿದ್ದರೆ ಬಲಪಂಥೀಯರು ಅವಹೇಳನ ಲೇವಡಿ ವೈಯಕ್ತಿಕ ಟೀಕೆ ನಿಂದನೆ ವಿಷಯಾಂತರ ಇತ್ಯಾದಿ ಮಾಡಿ ಚರ್ಚೆಯ ಹಳಿ ತಪ್ಪಿಸುತ್ತಿದ್ದರು. ಪ್ರಾಮಾಣಿಕತೆಯ ಕೊರತೆ ಇರುವ ಜನರು ಇವರು. ತಮ್ಮ ವಾದದ ಟೊಳ್ಳುತನವನ್ನು ಒಪ್ಪದೇ ಭಂಡತನ ಮಾಡುತ್ತಾರೆ. ಆದರೆ ನೀವು ಧೃತಿಗೆಡದೆ ನಿಮ್ಮ ವಿಚಾರಗಳನ್ನು ಮಂಡಿಸಿ. ಅಂತಿಮವಾಗಿ ಸತ್ಯವೇ ಗೆಲ್ಲುತ್ತದೆ. ಅಲ್ಲವೇ?

        ಉತ್ತರ
        • ಹೇಮಾಪತಿ's avatar
          ಹೇಮಾಪತಿ
          ಏಪ್ರಿಲ್ 30 2014

          ನಾನು ಯಾವ ಪಂಥಕ್ಕೂ ಸೇರಿಲ್ಲ. ನಿಮ್ಮ ಪಂಥ ನನಗೆ ಬೇಕಿಲ್ಲ. ನನಗೆ ಸರಿಯೆನ್ನಿಸಿದ್ದನ್ನು ಹೇಳಲು ಯಾವ ಪಂಥಕ್ಕೂ ಸೇರಬೇಕಾಗಿಲ್ಲ. ನಿಮಗನ್ನಿಸಿದ್ದನ್ನು ಹೇಳಿಕೊಳ್ಳಿ. ಬೇರೆಯವರಿಗೆ ಅನ್ನಿಸಿದ್ದನ್ನು ಅವರು ಹೇಳಿಕೊಳ್ಳಲು ಬಿಡಿ. ಈ ಲೋಕದಲ್ಲಿ ಸತ್ಯ ಗೆಲ್ಲುತ್ತದೋ, ಸುಳ್ಳು ಗೆಲ್ಲುತ್ತದೋ ಅದನ್ನು ಕಾಲ ನಿರ್ಧರಿಸುತ್ತೆ. ಯೋಚಿಸಬೇಡಿ.

          ಉತ್ತರ
          • Nagshetty Shetkar's avatar
            Nagshetty Shetkar
            ಏಪ್ರಿಲ್ 30 2014

            “ನಿಮಗನ್ನಿಸಿದ್ದನ್ನು ಹೇಳಿಕೊಳ್ಳಿ. ಬೇರೆಯವರಿಗೆ ಅನ್ನಿಸಿದ್ದನ್ನು ಅವರು ಹೇಳಿಕೊಳ್ಳಲು ಬಿಡಿ.”

            ಎಷ್ಟು ಜನ ಬಲಪಂಥೀಯರು ಈ ರೀತಿಯ ಉದಾರ ಧೋರಣೆ ಉಳ್ಳವರಾಗಿದ್ದಾರೆ? ಮೋದಿಯನ್ನು ಇಷ್ಟಪದವರು ಪಾಕಿಸ್ತಾನಕ್ಕೆ ಹೋಗಿ ಅಂತ ಹೇಳುವವರೇ ಹೆಚ್ಚು.

            ಉತ್ತರ
            • ಹೇಮಾಪತಿ's avatar
              ಹೇಮಾಪತಿ
              ಏಪ್ರಿಲ್ 30 2014

              ನೀವು ಪಾಕಿಸ್ತಾನಕ್ಕಾದರೂ ಹೋಗಿ, ಹರಿಶ್ಚಂದ್ರಘಾಟ್ ಗಾದರೂ ಹೋಗಿ. ನನಗೇನೂ ಆಗಬೇಕಾದ್ದಿಲ್ಲ.

              ಉತ್ತರ
              • Nagshetty Shetkar's avatar
                Nagshetty Shetkar
                ಏಪ್ರಿಲ್ 30 2014

                ಹರಿಶ್ಚಂದ್ರಘಾಟ್ ಗೆ ಮೊದಲು ತಮ್ಮನ್ನೇ ಕಳುಹಿಸೋಣ ಆಮೇಲೆ ಪಾಕಿಸ್ತಾನಕ್ಕೆ ಯಾರು ಹೋಗುತ್ತಾರೆ ಅಂತ ಯೋಚನೆ ಮಾಡಿದರಾಯಿತು.

                ಉತ್ತರ
                • ಹೇಮಾಪತಿ's avatar
                  ಹೇಮಾಪತಿ
                  ಮೇ 1 2014

                  ಹರಿಶ್ಚಂದ್ರ ಘಾಟ್ ಗೆ ಮೊದಲು ನೀವು ಹೋಗಿ ಆಮೇಲೆ ಏನಾದರೂ ಉಳಿದಿದ್ದರೆ ಯೋಚನೆ ಮಾಡುವಿರಂತೆ.

                  ಉತ್ತರ
                  • Namo's avatar
                    Namo
                    ಆಕ್ಟೋ 5 2021

                    From which mental hospital have you been released ?

                    ಉತ್ತರ
  9. Balachandra Bhat's avatar
    ಮೇ 1 2014

    ಇಲ್ಲಿನ ವಾದ ವಿವಾದಗಳು ತೀರ ಅನಗತ್ಯ. ಕಥೆ ಕಾದಂಬರಿಗಳು ಯಾವುದನ್ನೂ ಪ್ರೂವ್ ಮಾಡುವದಕ್ಕೆ ಇರುವದಲ್ಲ. ಹಾಗಿದ್ದಾಗ ವಿಜ್ನಾನ ಮೇಲೊ ಹಾಗೂ ದೈವದ ಬಗ್ಗೆ ನಂಬಿಕೆ ಮೇಲೊ ಎನ್ನುವ ವಾದ ಯಾಕೆ?
    ಪುಸ್ತಕದ ಬರಹಗಾರರೆ ಹೇಳಿದಂತೆ ಒಂದೆರಡು ಪುಟಗಳ ಮೂಲಕ ಈ ಕಾದಂಬರಿ ಇಂತಹುದನ್ನೆ ಹೇಳುತ್ತದೆ ಎಂದು ಅಂದುಕೊಳ್ಳುವದು ತೀರ ಅನಗತ್ಯ.
    ಕಾದಂಬರಿಯ ಸಂಭಾಷಣೆಯನ್ನು ನೋಡಿದಾಗ ನನಗನಿಸಿದ್ದೆನೆಂದರೆ ಬಳಸಿದ ಭಾಷೆ ಮಲೆನಾಡಿನ ಭಾಷೆಯನ್ನು ಹೋಲುವದಿಲ್ಲ ಎಂದು. ಕಥೆಯಲ್ಲಿ ಭಾಷೆಯ ನೈಜ್ಯತೆ ಎಷ್ಟರ ಮಟ್ಟಿಗೆ ಮುಖ್ಯವೊ ಗೊತ್ತಿಲ್ಲ, ಆದರೆ ಅರೆ ಬರೆ ಮಲೆನಾಡಿನ ಭಾಷೆಯನ್ನು ಬಳಸಿ, ಇನ್ನರ್ಧ ಮಲೆನಾಡಿನದಲ್ಲದ ಭಾಷೆಯನ್ನು ಮಿಕ್ಸ್ ಮಾಡಿ ಬರೆದ ಬರಹನ ಓದೋದು ನಮಗೊಂತರ ಮೊಸರಲ್ಲಿ ಕಲ್ಲು ಸಿಕ್ಕಿದ ಹಾಗೆ.

    ಉತ್ತರ
  10. kpbolumbu's avatar
    ಮೇ 3 2014

    ಸಂಪಾದಕರಿಗೆ, ದಯವಿಟ್ಟು ಲೇಖಕರ ಹೆಸರು ನಮೂದಿಸಿರಿ.

    ಉತ್ತರ
  11. ಡಾ. ಮಲ್ಲಿನಾಥ ಶಿ. ತಳವಾರ's avatar
    ಡಾ. ಮಲ್ಲಿನಾಥ ಶಿ. ತಳವಾರ
    ಮಾರ್ಚ್ 19 2018

    ಭಾರತೀಯ ಸಂಸ್ಕೃತಿಯ ನೆಲೆಯಲ್ಲಿ ವಿದೇಶಿ ಸಂಸ್ಕೃತಿಯ ಸ್ವೇಚ್ಛಾಚಾರ ಮತ್ತು ಭೋಗ ಪ್ರವೃತ್ತಿಯು ಆಳವಾಗಿ ತನ್ನ ನೆಲೆಯನ್ನು ಕಂಡುಕೊಳ್ಳುತ್ತಿರುವುದು ದುರಂತವಾದರೂ ಸತ್ಯ! !

    ಉತ್ತರ

Leave a reply to Nagshetty Shetkar ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments