ವಿಷಯದ ವಿವರಗಳಿಗೆ ದಾಟಿರಿ

Archive for

14
ಜುಲೈ

“ಎಲ್ಲರ” ಕಲ್ಪನೆಗೆ ಎಟುಕದ ಕನ್ನಡ ಭಾಷೆಯ ಆಯಾಮಗಳು

– ವಿನಾಯಕ ಹಂಪಿಹೊಳಿ

ಶಂಕರ ಬಟ್ಭಾಷೆಗಳನ್ನು ಆರ್ಯ ಭಾಷೆ, ದ್ರಾವಿಡ ಭಾಷೆ ಎಂದು ವಿಂಗಡಿಸುವದು ತಪ್ಪೇ. ಯಾಕೆಂದರೆ ಆರ್ಯ ಮತ್ತು ದ್ರಾವಿಡ ಎಂಬ ಕಲ್ಪನೆಯೇ ತಪ್ಪು. ಇರಲಿ. ಬೇಕಾದರೆ ಉತ್ತರದ ಭಾಷೆಗಳು, ದಕ್ಷಿಣದ ಭಾಷೆಗಳು ಎಂದು ಬೇಕಾದರೆ ವಿಂಗಡಿಸಿಕೊಳ್ಳಬಹುದು. ಕನ್ನಡ ವಿಕಾಸ ೫-೬ ನೇ ಶತಮಾನಗಳ ನಂತರ ಅತಿ ಶೀಘ್ರವಾಗಿ ಆಯಿತು. ೧೫ನೇ ಶತಮಾನದ ಹೊತ್ತಿಗೆ ಕನ್ನಡ ಎಂಬ ಭಾಷೆ ಒಂದು ಪ್ರಾಂತ್ಯದ ಭಾಷೆಯಾಗಿ ರೂಪುಗೊಂಡಿತು. ಇದಿಷ್ಟು “ಎಲ್ಲರ” ಬಳಿ ಇರುವ ಮಾಹಿತಿ. ಆದರೆ ಕನ್ನಡ ಭಾಷೆ ಯಾವ ರಾಜಕೀಯ ಮತ್ತು ಇತಿಹಾಸಗಳ ಅಡಿಯಲ್ಲಿ ಬೆಳೆಯಿತು, ಯಾವ ಕಲ್ಪನೆಯೊಂದಿಗೆ ಅದು ವಿಕಾಸವಾಯಿತು, ಬೇರೆ ಭಾಷೆಗಳಲ್ಲಿ ಕಂಡು ಬರದ ಹೊಸ ಪ್ರಯೋಗಗಳು ಕನ್ನಡ ವ್ಯಾಕರಣಗಳಲ್ಲಿ ಯಾಕಾಯಿತು, ಅದರ ಹಿಂದಿನ ಉದ್ದೇಶವೇನು ಎಂಬುದನ್ನು ಅರಿತುಕೊಳ್ಳಬೇಕು.

ಯಾವ ರೀತಿ ಹಿಂದೂ ಎಂಬುದು ಧರ್ಮವಾದರೂ ಕೂಡ, ಉಳಿದ ಧರ್ಮಗಳನ್ನು ಒಳಗೊಳ್ಳುವ ತಾತ್ವಿಕವಾಗಿ ಎಲ್ಲ ಮತಗಳನ್ನು ಮೀರಿ ನಿಲ್ಲುವ ವ್ಯವಸ್ಥೆಯೋ, ಅಂತೆಯೇ ಕನ್ನಡ ಕೂಡ ಭಾಷೆಯಷ್ಟೇ ಅಲ್ಲ, ಉಳಿದ ಭಾಷೆಗಳ ಅಂಶಗಳನ್ನು ಒಳಗೊಳ್ಳುವ, ಕಟ್ಟುಪಾಡುಗಳನ್ನು ಮೀರಿ ನಿಲ್ಲುವ ಸಾಮಾಜಿಕ ಭಾಷೆ ಎನ್ನುವದು ನನ್ನ ಮತ. ಕನ್ನಡ ಭಾಷೆಯ ಮೂಲ ಉದ್ದೇಶ ಉತ್ತರ ಹಾಗೂ ದಕ್ಷಿಣದ ಜನಗಳ ನಡುವೆ ಸಂವಹನವಾಹಿನಿಯಾಗಿ ನಿಂತು ಒಂದು ರಾಷ್ಟ್ರವನ್ನು ಕಟ್ಟುವದು ಎಂದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ. ಇದಕ್ಕೆ ಕಾರಣಗಳನ್ನೂ ಕೊಡುತ್ತೇನೆ.

ಉದಾಹರಣೆಗೆ ವ್ಯಾಕರಣದಲ್ಲಿ ಬರುವ ಪ್ರತ್ಯಯಗಳನ್ನೇ ತೆಗೆದುಕೊಳ್ಳಿ. ಕನ್ನಡ ಸಂಸ್ಕೃತದ ಪ್ರತ್ಯಗಳನ್ನು ಮತ್ತು ದಕ್ಷಿಣ ಭಾಷೆಗಳ ಪ್ರತ್ಯಯಗಳನ್ನು ಬೇರೆ ಬೇರೆ ಶಬ್ದಗಳೊಂದಿಗೆ ಸರಾಗವಾಗಿ ಸೇರಿಸಿಕೊಳ್ಳಬಲ್ಲದು. -ಇಸು ಪ್ರತ್ಯಯ ಕನ್ನಡದ್ದು ಆದರೆ ಇದರ ವ್ಯಾಪ್ತಿ ಕನ್ನಡ ಶಬ್ದಗಳನ್ನು ಮೀರಿ ಹೋಗಬಲ್ಲದು, ಕುಣಿ, ನಡೆ ಮುಂತಾದ ಕನ್ನಡ ಶಬ್ದಗಳೊಂದಿಗೆ ಸೇರಿ ಕುಣಿಸು, ನಡೆಸು ಎಂದಾಗುವದು. ಅಂತೆಯೇ ಸಂಸ್ಕೃತ ಶಬ್ದಗಳೊಡನೆಯೋ ಬೆರೆಯಬಹುದು. ನಟ್+ಇಸು=ನಟಿಸು, ವರ್ಣ್+ಇಸು=ವರ್ಣಿಸು ಇತ್ಯಾದಿ. ಇತ್ತೀಚೆಗೆ ಇಂಗ್ಲೀಷ ಕೂಡ ಸೇರಿಕೊಂಡಿದೆ, ಕ್ಲಿಕ್ಕಿಸು, ಗೂಗಲಿಸು ಇತ್ಯಾದಿ. ಹಾಗೆಯೇ ಸಂಸ್ಕೃತದ ಪ್ರತ್ಯಯಗಳನ್ನು ಕನ್ನಡದ ಶಬ್ದಗಳೊಂದಿಗೂ ಬೆರೆಸಿಕೊಳ್ಳಬಹುದು. ಉದಾ -ತನ, ಮತ್ತು -ವಂತ ಗಳು ಸಂಸ್ಕೃತದ್ದು ಬುದ್ಧಿವಂತ, ಕಪಟತನ ಇತ್ಯಾದಿ. ಕನ್ನಡ ಶಬ್ದಗಳು ಇವುಗಳ ಜೊತೆಗೂ ಬೆರೆಯಬಲ್ಲದು. ಗೆಳೆತನ, ಬಡತನ, ಹಣವಂತ ಇತ್ಯಾದಿ. ಇಲ್ಲಿ ಗೆಳೆ, ಬಡ, ಹಣ ಗಳು ಇಲ್ಲಿಯ ಶಬ್ದಗಳು.

ಮತ್ತಷ್ಟು ಓದು »

10
ಜುಲೈ

ನಿಮ್ಮ ಬಳಿಯಿರುವ ಎರಡು ದನಗಳು ಹಾಗೂ ’ಇಸಂ’ಗಳು …

– ರಾಘವೇಂದ್ರ ಸುಬ್ರಹ್ಮಣ್ಯ

ಹಸುಗಳುಸೋಶಿಯಲಿಸಂ: ನಿಮ್ಮ ಬಳಿ ಎರಡು ದನಗಳಿವೆ. ಸರ್ಕಾರ ಅದರಲ್ಲಿ ಒಂದನ್ನು ತೆಗೆದುಕೊಂಡು ನಿಮ್ಮ ನೆರೆಯವನಿಗೆ ಕೊಡುತ್ತದೆ.

ಕಮ್ಯೂನಿಸಂ: ನಿಮ್ಮ ಬಳಿ ಎರಡು ದನಗಳಿವೆ. ಅವನ್ನು ನೀವು ಸರ್ಕಾರಕ್ಕೆ ಕೊಡುತ್ತೀರ. ಪ್ರತಿಯಾಗಿ ಸರ್ಕಾರ ನಿಮಗೆ ಸ್ವಲ್ಪ ಹಾಲನ್ನು ಕೊಡುತ್ತದೆ.

ಫ್ಯಾಸಿಸಂ: ನಿಮ್ಮ ಬಳಿ ಎರಡು ದನಗಳಿವೆ. ಅವನ್ನು ನೀವು ಸರ್ಕಾರಕ್ಕೆ ಕೊಡುತ್ತೀರ. ಪ್ರತಿಯಾಗಿ ಸರ್ಕಾರ ನಿಮಗೆ ಸ್ವಲ್ಪ ಹಾಲನ್ನು ಮಾರುತ್ತದೆ.

ಕ್ಯಾಪಿಟಲಿಸಂ: ನಿಮ್ಮ ಬಳಿ ಎರಡು ದನಗಳಿವೆ. ಅದರಲ್ಲಿ ನೀವು ಒಂದನ್ನು ಮಾರಿ, ಒಂದು ಎತ್ತನ್ನು ಖರೀದಿಸುತ್ತಿರಿ.

ನಾಝೀಯಿಸಂ: ನಿಮ್ಮ ಬಳಿ ಎರಡು ದನಗಳಿವೆ. ಸರ್ಕಾರ ಅವೆರಡನ್ನೂ ಕಸಿದುಕೊಂಡು ನಿಮ್ಮನ್ನು ಗುಂಡಿಕ್ಕಿ ಕೊಲ್ಲುತ್ತದೆ.

ಬ್ಯೂರೋಕ್ರಾಟಿಸಂ (ಅಧಿಕಾರಶಾಹಿ): ನಿಮ್ಮ ಬಳಿ ಎರಡು ದನಗಳಿವೆ. ಸರ್ಕಾರ ಅವೆರಡನ್ನೂ ಕಸಿದುಕೊಂಡು, ಒಂದು ದನಕ್ಕೆ ಗುಂಡಿಕ್ಕೆ, ಇನ್ನೊಂದು ದನದ ಹಾಲು ಹಿಂಡಿ, ಆಮೇಲೆ ಆ ಹಾಲನ್ನು ಚೆಲ್ಲುತ್ತದೆ.

ಸಾಂಪ್ರದಾಯಿಕ ಬಂಡವಾಳಶಾಹಿ (Traditional Capitalism): ನಿಮ್ಮ ಬಳಿ ಎರಡು ದನಗಳಿವೆ. ಅದರಲ್ಲಿ ನೀವು ಒಂದನ್ನು ಮಾರಿ, ಒಂದು ಎತ್ತನ್ನು ಖರೀದಿಸುತ್ತಿರಿ. ನಿಮ್ಮ ದನದ ಹಿಂಡು ದೊಡ್ಡದಾಗುತ್ತದೆ ಹಾಗೂ ಆರ್ಥಿಕಸ್ಥಿತಿ ಉತ್ತಮಗೊಳ್ಳುತ್ತದೆ. ನೀವು ನಿಮ್ಮ ದನದ ಹಿಂಡನ್ನು ಮಾರಿ ವ್ಯವಹಾರದಿಂದ ಸ್ವಯಂನಿವೃತ್ತಿ ಪಡೆದು, ಬರುವ ಸಂಪಾದನೆಯಿಂದ ನಿವೃತ್ತಿ ಜೀವನ ನಡೆಸುತ್ತೀರಿ.

ಮತ್ತಷ್ಟು ಓದು »

9
ಜುಲೈ

ಸಾಹಿತ್ಯ ಕ್ಷೇತ್ರದ ಒಳಹೊರಗು – 5

– ಡಾ. ಶ್ರೀಪಾದ ಭಟ್, ಸಹಾಯಕ ಪ್ರಾಧ್ಯಾಪಕ,ತುಮಕೂರು ವಿಶ್ವವಿದ್ಯಾನಿಲಯ

ಕನ್ನಡ ಸಾಹಿತ್ಯಸಾಹಿತ್ಯ ಕ್ಷೇತ್ರದ ಒಳಹೊರಗು – 1
ಸಾಹಿತ್ಯ ಕ್ಷೇತ್ರದ ಒಳಹೊರಗು – 2
ಸಾಹಿತ್ಯ ಕ್ಷೇತ್ರದ ಒಳಹೊರಗು – 3
ಸಾಹಿತ್ಯ ಕ್ಷೇತ್ರದ ಒಳಹೊರಗು – 4

ಏನ ಬಂದಿರಿ, ಹದುಳವಿದ್ದಿರೆ ಎಂದೊಡೆ ನಿಮ್ಮ ಮೈಸಿರಿ ಹಾರಿ ಹೋಹುದೆ? ಎಂದು ಬಸವಣ್ಣನವರು ಅಂದೇ ಕೇಳಿದ್ದರು. ನಮ್ಮ ಜನರ ವರ್ತನೆಯನ್ನು ಅವರು ಚೆನ್ನಾಗಿ ಬಲ್ಲವರಾಗಿದ್ದರು ಎನಿಸುತ್ತದೆ. ಮನೆಗೆ ಬಂದವರನ್ನು ಉಪಚರಿಸುವ ಸಂದರ್ಭದಲ್ಲಿ ಅವರು ಹೇಳಿದ ಜನರ ಸಣ್ಣತನದ ವರ್ತನೆ ಕುರಿತ ಈ ಮಾತಿನ ಆಶಯವನ್ನು ಬೇರೆ ಬೇರೆ ಕಡೆಗಳಲ್ಲೂ ಅನ್ವಯಿಸಬಹುದು. ಸಾಹಿತ್ಯ ಕ್ಷೇತ್ರದಲ್ಲಂತೂ ಇದಕ್ಕೆ ಮತ್ತೆ ಮತ್ತೆ ನಿದರ್ಶನಗಳು ದೊರೆಯುತ್ತವೆ. ಒಂದು ಘಟನೆ. ಸಮ್ಮೇಳನವೊಂದರಲ್ಲಿ ಹೊಸಬರೊಬ್ಬರು ಪ್ರಬಂಧ ಮಂಡಿಸಿದ್ದರು. ಉತ್ತಮ ಪ್ರಬಂಧವೆಂದು ಆ ಗೋಷ್ಠಿಯ ಅಧ್ಯಕ್ಷರೊಬ್ಬರು ಸಕಾರಣವಾಗಿ ವಿಶ್ಲೇಷಿಸಿ, ಅಭಿನಂದಿಸಿದರು. ಅದೇ ಪ್ರಬಂಧಕಾರರೊಂದಿಗೆ ಮತ್ತೆ ಮೂವರು ಪ್ರಬಂಧ ಮಂಡಿಸಿದ್ದರು. ಅವುಗಳಲ್ಲಿ ಒಂದು ಪ್ರಬಂಧ ನೀಡಲಾದ ವಿಷಯಕ್ಕೆ ಸಂಬಂಧವೇ ಇಲ್ಲದಂತಿದ್ದರೆ, ಮತ್ತೊಬ್ಬರು ಏನನ್ನೂ ಬರೆದುಕೊಂಡು ಬಂದಿರದೇ ಆಶುಕವಿತ್ವದಂತೆ ಅಲ್ಲೇ ತೋಚಿದ್ದನ್ನು ಒಂದಿಷ್ಟು ಹೇಳಿದ್ದರು. ಇನ್ನೊಬ್ಬರು ತಕ್ಕಮಟ್ಟಿಗೆ ವಿಷಯಕ್ಕೆ ನ್ಯಾಯ ಒದಗಿಸಿದ್ದರೆಂದು ಅಧ್ಯಕ್ಷತೆ ವಹಿಸಿದ್ದ ಹಿರಿಯರು ಹೇಳಿ ಅಂಥ ಗಂಭೀರ ಸಮ್ಮೇಳನಗಳಲ್ಲಿ ವಿಷಯ ಮಂಡನೆ ಹೇಗಿರಬೇಕೆಂದೂ ತಿಳಿಸಿದರು. ವೇದಿಕೆಯಿಂದ ಇಳಿದ ಮೇಲೆ ಉಳಿದ ಪ್ರಬಂಧಕಾರರು ಉತ್ತಮ ಪ್ರಬಂಧ ಮಂಡಿಸಿದ್ದ ವ್ಯಕ್ತಿಯನ್ನು ಅಭಿನಂದಿಸುವುದಿರಲಿ, ಸೌಜನ್ಯಕ್ಕೂ ಮಾತನಾಡಿಸದೇ ಆಜನ್ಮ ವೈರಿಯಂತೆ ಕಂಡು ಮುಖ ತಿರುಗಿಸಿಕೊಂಡು ಹೊರಟೇಹೋದರಂತೆ. ಅಧ್ಯಕ್ಷತೆ ವಹಿಸಿದ್ದವರಿಗೂ ಉತ್ತಮ ಪ್ರಬಂಧ ಮಂಡಿಸಿದ್ದವರಿಗೂ ಉಳಿದ ಪ್ರಬಂಧಕಾರರಿಗೂ ಮೊದಲು ಪರಿಚಯವೇ ಇರಲಿಲ್ಲ. ವೇದಿಕೆಯಲ್ಲೇ ಅವರೆಲ್ಲ ಮೊದಲಬಾರಿ ಮುಖ ನೋಡಿಕೊಂಡಿದ್ದು. ವಸ್ತುನಿಷ್ಠವಾಗಿ ಅಧ್ಯಕ್ಷರು ಹೇಳಿದ್ದರು ಅಷ್ಟೆ. ಆದರೆ ಅನಂತರ ಹೊರಗೆ ಖಾಸಗಿಯಾಗಿ ಉಳಿದ ಪ್ರಬಂಧಕಾರರು ಮಾತನಾಡುತ್ತ ಆ ಪ್ರಬಂಧ ಚೆನ್ನಾಗಿತ್ತು ಕಣ್ರೀ, ಅಲ್ಲೇ ಅವರಿಗೆ ಹೇಳಿದ್ದರೆ ಸುಮ್ಮನೇ ಅವರಿಗೆ ಸ್ಕೋಪು ಕೊಟ್ಟಂತಾಗುತ್ತದೆ ಎಂದು ಹೇಳಿಲ್ಲ ಅಷ್ಟೆ ಅಂದರಂತೆ! ಅದೇನೇ ಇರಲಿ. ಅಧ್ಯಕ್ಷತೆ ವಹಿಸಿದವರು ಹೇಳಿದ ಮಾತಿನಲ್ಲಿ ಹುರುಳಿರಲಿಲ್ಲ, ಅದೊಂದು ಕೆಟ್ಟ ಪ್ರಬಂಧವಾಗಿತ್ತು ಎಂದಾದರೆ ಅದರ ಚರ್ಚೆಗೆ ಅವಕಾಶವಿತ್ತು. ಆ ಕುರಿತು ಪ್ರಶ್ನೆಯೇ ಇರದಿದ್ದರೆ ಉತ್ತಮ ಪ್ರಬಂಧ ಮಂಡಿಸಿದವರನ್ನು ಅಭಿನಂದಿಸುವ ಔದಾರ್ಯವಾದರೂ ಬೇಡವೇ ಎಂಬುದು ಇಲ್ಲಿರುವ ಪ್ರಶ್ನೆ.

ಮತ್ತಷ್ಟು ಓದು »

7
ಜುಲೈ

ಅ೦ಗವೈಕಲ್ಯ ಕೊಟ್ಟ ದೇವರಿಗೆ ಧನ್ಯವಾದ ಅರ್ಪಿಸುವವನ ಕತೆಯಿದು…!!!

 – ಗುರುರಾಜ್ ಕೊಡ್ಕಣಿ,ಯಲ್ಲಾಪುರ

ನಿಕ್ ವುಯಿಶಿಶ್“ಸರಿಸುಮಾರು ಮೂವತ್ತು ವರ್ಷಗಳ ಹಿ೦ದೆ ಆಸ್ಟ್ರೇಲಿಯಾದಲ್ಲಿ ನನ್ನ ಜನನವಾಯಿತು.ಹುಟ್ಟಿನಿ೦ದಲೇ ನಾನು ಹೆಳವ.ನನಗೆ ಕೈಗಳಾಗಲಿ ,ಕಾಲುಗಳಾಗಲಿ ಇರಲಿಲ್ಲ.ನಾನೇಕೆ ಹಾಗೆ ಹುಟ್ಟಿದೆ ಎನ್ನುವುದಕ್ಕೆ ವೈದ್ಯರ ಬಳಿ ಸರಿಯಾದ ಉತ್ತರವೂ ಇರಲಿಲ್ಲ.ಆರ೦ಭದಲ್ಲಿ ನನ್ನ ತ೦ದೆ ತಾಯಿಗೆ ತಮ್ಮ ಮಗನ ದುಸ್ಥಿತಿಯನ್ನು ಕ೦ಡು ಆಘಾತವಾಯಿತಾದರೂ ಎ೦ದಿಗೂ ನನ್ನೆದುರು ಅವರು ತಮ್ಮ ದುಖವನ್ನು ತೋರಗೊಡಲಿಲ್ಲ.ಅ೦ಗವಿಕಲತೆ ಮಾನಸಿಕವಾಗಿ ನನ್ನನ್ನು ಬಾಧಿಸದ೦ತೆ ಅವರು ಎಲ್ಲ ರೀತಿಯ ಸೌಕರ್ಯಗಳನ್ನು,ಎಲ್ಲ ಬಗೆಯ ಸವಲತ್ತುಗಳನ್ನು ನೀಡಿ ನನಗೆ ಯಾವ ಕೊರತೆಯೂ ಉ೦ಟಾಗದ೦ತೆ ನೋಡಿಕೊ೦ಡರು.ಆದರೆ ಅವರ ಅಗಾಧ ಪ್ರೀತಿಯ ಹೊರತಾಗಿಯೂ ನನ್ನ ಎ೦ಟನೆಯ ವಯಸ್ಸಿನಲ್ಲಿ ನಾನು ಮಾನಸಿಕ ಕ್ಷೋಭೆಗೊಳಗಾಗಿದ್ದೆ.ನನ್ನ ಜೀವನವೇ ವ್ಯರ್ಥವೆ೦ಬ ಭಾವ ನನ್ನನ್ನು ಕಾಡತೊಡಗಿತ್ತು.ಹತ್ತನೆಯ ವಯಸ್ಸಿಗೆ ತೀರ ಖಿನ್ನತೆಗೊಳಗಾಗಿದ್ದ ನಾನು ಬಾತ್ ಟಬ್ಬಿನೊಳಗೆ ಮುಳುಗಿ ಸಾಯುವ ಪ್ರಯತ್ನವನ್ನೂ ಮಾಡಿದ್ದೆ.ಆದರೆ ನಾನು ಮಾಡಿದ ಅನೇಕ ಆತ್ಮಹತ್ಯಾ ಪ್ರಯತ್ನಗಳು ಒ೦ದಲ್ಲ ಒ೦ದು ಕಾರಣಕ್ಕೆ ವಿಫಲವಾದವು.ಬಹುಶ: ನಾನು ಸಾಯುವುದು ಭಗವ೦ತನಿಗೆ ಇಷ್ಟವಿಲ್ಲವೆ೦ದು ನನಗನ್ನಿಸಿ ಆತ್ಮಹತ್ಯೆಯ ಪ್ರಯತ್ನವನ್ನು ನಾನು ಕೈಬಿಟ್ಟೆ.

ಎಲ್ಲರೂ ಎಣಿಸುವ೦ತೆ ನನ್ನ ಬಾಲ್ಯ ತು೦ಬ ಕಠಿಣವಾಗಿಯೇನೂ ಇರಲಿಲ್ಲ.ಆದರೆ ಬಾಲ್ಯದ ತು೦ಬ ಏರಿಳಿತಗಳಿದ್ದವು.ನನ್ನ ಹದಿಮೂರನೆಯ ವಯಸ್ಸಿನಲ್ಲಿ ನನ್ನ ಮೋಟುಕಾಲಿಗೆ ದೊಡ್ಡದೊ೦ದು ಗಾಯವಾಗಿತ್ತು.ನಾನು ಬರವಣಿಗೆ,ಈಜು,ಟೈಪಿ೦ಗ್ ಮತ್ತೀತರ ದೈನ೦ದಿನ ಚಟುವಟಿಕೆಗಳಿಗೆ ಅದೇ ಕಾಲಿನ ಮೇಲೆ ಸ೦ಪೂರ್ಣವಾಗಿ ಅವಲ೦ಬಿತನಾಗಿದ್ದೆ.ಆಗಿರುವ ಗಾಯದಿ೦ದಾಗಿ ಅನೇಕ ದಿನಗಳ ಕಾಲ ನಾನು ನನ್ನ ದಿನನಿತ್ಯದ ಕಾರ್ಯಗಳಿಗೆ ನೋವುಭರಿತ ಅಡಚಣೆ ಅನುಭವಿಸುವ೦ತಾಯಿತು.ಹಾಗೆ ಪರೋಕ್ಷವಾಗಿ ನನಗೆ ನನ್ನ ಮೋಟುಕಾಲಿನ ಸಾಮರ್ಥ್ಯದ ಅರಿವಾಯಿತು.ಜೀವನದಲ್ಲಿ ನಮ್ಮ ವೈಕಲ್ಯಗಳ ಬಗ್ಗೆ ದು:ಖಿಸುವುದಕ್ಕಿ೦ತ ನಮ್ಮ ತಾಕತ್ತುಗಳ ಬಗ್ಗೆ ಸ೦ತೋಷಿಸಬೇಕೆನ್ನುವುದನ್ನು ನಾನು ಈ ಘಟನೆಯಿ೦ದ ತಿಳಿದುಕೊ೦ಡೆ.

ನನ್ನ ಹುಮ್ಮಸ್ಸು ,ಜೀವನೋತ್ಸಾಹವನ್ನು ಗಮನಿಸಿದ ನನ್ನ ಹೈಸ್ಕೂಲಿನ ಗುಮಾಸ್ತನೊಬ್ಬ,ನನ್ನ ಜೀವನದ ಬಗ್ಗೆ,ಅ೦ಗವೈಕಲ್ಯವನ್ನು ನಾನು ಜಯಿಸಿದ ರೀತಿಯ ಬಗ್ಗೆ ಸಾರ್ವಜನಿಕವಾಗಿ ಮಾತನಾಡುವ೦ತೆ ನನ್ನನ್ನು ಹುರಿದು೦ಬಿಸಿದ.ಅವನ ಮಾತಿಗೊಪ್ಪಿದ ನಾನು ಮೊದಲೆರಡು ವರ್ಷಗಳ ಕಾಲ ಕೆಲವು ಸಣ್ಣಪುಟ್ಟ ಸಭೆಗಳನ್ನುದ್ದೇಶಿಸಿ ಮಾತನಾಡಿದ್ದೆ.ಕೆಲವು ದಿನಗಳ ನ೦ತರ ನಾನು ಮೊದಲ ಬಾರಿಗೆ ದೊಡ್ಡ ಸಭೆಯೊ೦ದನ್ನು ಉದ್ದೇಶಿಸಿ ಮಾತನಾಡಬೇಕಾದ ಸ೦ದರ್ಭವೊದಗಿ ಬ೦ದಿತು.ಸುಮಾರು ಮುನ್ನೂರು ಜನರಷ್ಟು ಯುವಕ,ಯುವತಿಯರು ಸೇರಿದ್ದ ಬೃಹತ್ ಸಭೆಯದು.ಅ೦ಥದ್ದೊ೦ದು ಅಗಾಧ ಜನಸ್ತೋಮವನ್ನುದೇಶಿಸಿ ಮಾತನಾಡಿ ರೂಢಿಯಿರದ ನನಗೆ ಮಾತಿಗೆ ಮೊದಲು ಚಿಕ್ಕದೊ೦ದು ಕ೦ಪನ.ನನ್ನ ಮೋಟುತೊಡೆಯಲ್ಲೂ ಸಣ್ಣದೊ೦ದು ನಡುಕ.ಧೈರ್ಯ ತ೦ದುಕೊ೦ಡು ನಾನು ಮಾತಿಗಾರ೦ಭಿಸಿದ ಕೆಲವು ನಿಮಿಷಗಳಲ್ಲೇ ನೆರೆದಿದ್ದ ಹುಡುಗಿಯರ ಕಣ್ಣಲ್ಲಿ ಅಶ್ರುಧಾರೆ.ಮಾತು ಕೇಳುತ್ತ ನಿ೦ತಿದ್ದ ಯುವಕರೂ ಸಹ ಉಕ್ಕಿ ಬರುತ್ತಿದ್ದ ತಮ್ಮ ಭಾವನೆಗಳನ್ನು ತಡೆಹಿಡಿಯಲು ಕಷ್ಟ ಪಡುತ್ತಿದ್ದುದು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಒಬ್ಬ ಯುವತಿಯ೦ತೂ ತನ್ನ ಭಾವನೆಗಳನ್ನು ಹತ್ತಿಕ್ಕಲಾರದೇ ಬಿಕ್ಕಿಬಿಕ್ಕಿ ಅಳುತ್ತಿದ್ದಳು.ನನ್ನ ಮಾತಿನ ಮಧ್ಯದಲ್ಲಿಯೇ ಏನನ್ನೋ ಕೇಳಬೇಕೆನ್ನುವ೦ತೆ ಕೈಯನ್ನು ಮೇಲಕ್ಕೆತ್ತಿದ ಆಕೆ ’ನಿಮ್ಮನ್ನು ಭಾಷಣದ ಮಧ್ಯೆಯೇ ತಡೆದಿದ್ದಕ್ಕೆ ಕ್ಷಮೆಯಿರಲಿ.ಆದರೆ ನಾನು ನಿಮ್ಮನ್ನು ಗಟ್ಟಿಯಾಗಿ ಒಮ್ಮೆ ತಬ್ಬಿಕೊಳ್ಳಬಹುದಾ,ಪ್ಲೀಸ್’ ಎ೦ದು ಬಿಕ್ಕುತ್ತಲೇ ಕೇಳಿದಳು .ನಾನು ಮುಗುಳ್ನಗೆಯೊ೦ದಿಗೆ ಆಕೆಗೆ ಸಮ್ಮತಿಸಿದೆ.ಎಲ್ಲರೆದುರೇ ಓಡಿ ಬ೦ದು ಬಿಗಿದಪ್ಪಿದ ಆಕೆ ಪುನ: ಬಿಕ್ಕಿ ಬಿಕ್ಕಿ ಅಳಲಾರ೦ಭಿಸಿದಳು.’ನಿನಗೆ ಸಾವಿರ ಸಾವಿರ ಧನ್ಯವಾದಗಳು ಗೆಳೆಯಾ,ನಾನು ಕುರೂಪಿ,ಕೈಲಾಗದವಳು ಎನ್ನುವ ಕೀಳರಿಮೆ ನನ್ನನ್ನು ಬಹುದಿನಗಳಿ೦ದಲೂ ಕಾಡುತ್ತಿತ್ತು.ನೀನು ನನ್ನಲ್ಲಿನ ನಿಜವಾದ ಸೌ೦ದರ್ಯವನ್ನು ನನಗೆ ಪರಿಚಯಿಸಿದೆ.ನಿನ್ನನ್ನು ಕ೦ಡ ನ೦ತರ ನನಗೆ ಹೊಸದೊ೦ದು ಉತ್ಸಾಹ ಮೂಡಿದೆ.ನೀನೇ ನನ್ನ ನಿಜವಾದ ಸ್ನೇಹಿತ ಎ೦ದೆನಿಸಿದೆ’ ಎ೦ದಳವಳು ಅದೇ ನಡುಗುವ ದನಿಯಲ್ಲಿ.’ಥ್ಯಾ೦ಕ್ಯೂ’ ಎನ್ನುವ ಹೊತ್ತಿಗೆ ನನ್ನ ಕ೦ಠವೂ ಗದ್ಗದ”
ಮತ್ತಷ್ಟು ಓದು »

3
ಜುಲೈ

’ಪಟ್ಟು’ ಬಿಡದೆ ಗೆದ್ದವನು

– ಶೈಲೇಶ್ ಕುಲ್ಕರ್ಣಿ

ಮಾರ್ವನ್ ಅಟಪಟ್ಟುದೇಶೀಯ ಕ್ರಿಕೆಟ್ನಲ್ಲಿ ಭರವಸೆಯ ಆಟಗಾರನಾಗಿ ಅದಾಗಲೇ ಆತ ಒಳ್ಳೆ ಹೆಸರು ಸಂಪಾದಿಸಿದ್ದ.ಅಂತರ್-ರಾಷ್ಟ್ರೀಯ ಸ್ತರದಲ್ಲಿ ತನ್ನ ಹೆಸರಿನ ಭೇರಿಭಾರಿಸುವ ಭರಪೂರ ಉತ್ಸಾಹದಿಂದ ರಾಷ್ಟ್ರೀಯತಂಡಕ್ಕೆ ಪದಾರ್ಪಣೆ ಮಾಡಿದ.

ತನ್ನ ಟೆಸ್ಟ್ ಜೀವನದ ಮೊಟ್ಟಮೊದಲ ಪಂದ್ಯದ ಮೊದಲ ಇನ್ನಿಂಗ್ಸ್ ಆಡಲಿಳಿದಾಗ ಅವಗಳಿಸಿದ್ದು ಬರೋಬ್ಬರಿ “0”.
ಹೊಸಹುರುಪಿಂದ ಎರಡನೇ ಇನ್ನಿಂಗಿನಲ್ಲಿ ಕಣಕ್ಕೆ ಬಂದಾಗ ಮತ್ತೆಬಾರಿಸಿದ್ದು “0”.
ಸ್ವಾಭಾವಿಕವಾಗಿ ಆತನನ್ನ ತಂಡದಿಂದ ಕೈಬಿಟ್ರು .

೨೨ ತಿಂಗಳ ಕಠಿಣ ಪರಿಶ್ರಮ ನಡೆಸಿದ  ನಂತರ ತಂಡಕ್ಕೆ ಮರು ಆಯ್ಕೆ ಆದ .
ತನ್ನ ದ್ವಿತೀಯ ಟೆಸ್ಟಿನ ಪ್ರಥಮ ಇನ್ನಿಂಗ್ಸ್ನಲ್ಲಿ ಆತನ ಶೂನ್ಯಪ್ರೇಮ ಮರುಕಳಿಸಿತ್ತು. ಸ್ಕೋರ್ಬೋರ್ಡ್ ನಲ್ಲಿ ಆತನ ಹೆಸರಿನೆದುರಿಗೆ ನೇತಿದ್ದು ಮತ್ತದೇ “0”.
ಎರಡನೇ ಇನ್ನಿಂಗ್ಸ್ ನಲ್ಲಿ ತನ್ನಪಾಲಿಗೆ ಬೇತಾಳನಂತೆ ಬೆನ್ನಟ್ಟಿದ್ದ ಶೂನ್ಯ ಸಂಪಾದನೆಯ ಈ ಭಾರವನ್ನ ಹೇಗೋ ಕಳೆದುಕೊಂಡು ಬಿಡಬೇಕು ಅಂದುಕೊಂಡಿದ್ದವ ಗಳಿಸಿದ್ದು “೧” ರನ್ ಮಾತ್ರ.
ಪರಿಣಾಮ …ಪುನಃ ತಂಡದಿಂದ ಅರ್ಧಚಂದ್ರ ಪ್ರಯೋಗ.

ಆತ ಮೈದಾನಕ್ಕೆ ಮರಳಿ ಮತ್ತೆ ಅಭ್ಯಾಸಕ್ಕಿಳಿದ ಮತ್ತು ಈ ಬಾರಿ ತಂಡದಿಂದ ಪುನರಾಯ್ಕೆಯ ಕರೆಬಂದಾಗ ಆತನ ಕ್ರೀಡಾಜೀವನದ ೧೭ ತಿಂಗಳು ಉರುಳಿಹೋಗಿತ್ತು .
ಆತನ ಟೆಸ್ಟ್ ಕರಿಯರ್ನ ತೃತೀಯ ಟೆಸ್ಟ್.. ಭರವಸೆಯ ಆಣೆಕಟ್ಟು ಹೊತ್ತು ಬಂದವನಿಂದ ಪಂದ್ಯದ ಎರಡೂ ಇನ್ನಿಂಗ್ಸ್ನಲ್ಲಿ ಅಮೋಘ “ಶೂನ್ಯ” ಸಂಪಾದನೆ .
ನಿಸ್ಸಂಕೋಚವಾಗಿ ಆತನನ್ನು ತಂಡದಿಂದ ಹೊರದಬ್ಬಿದ್ರು.
ಮತ್ತಷ್ಟು ಓದು »

2
ಜುಲೈ

ಸೂಪರ್ ನ್ಯೂಮರರಿ ಕೋಟಾ: ಪ್ರಾಮಾಣಿಕತೆಗೆ ಟಾಟಾ?

– ತುರುವೇಕೆರೆ ಪ್ರಸಾದ್

studentsಎಐಸಿಟಿಯು 2011-12ನೇ ಸಾಲಿನಲ್ಲಿ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣ ಕೋರ್ಸ್‍ಗಳಿಗೆ ಪ್ರವೇಶ ಕಲ್ಪಿಸುವ ನಿಟ್ಟಿನಲ್ಲಿ ರೂ.2.5ಲಕ್ಷ ಕಡಿಮೆ ಆದಾಯ ಇರುವ ಪೋಷಕರ ಮಕ್ಕಳಿಗೆ ಪ್ರತಿ ಕೋರ್ಸ್‍ಗಳ ಒಟ್ಟು ಪ್ರವೇಶಾತಿಯ ಮೇಲೆ ಶೇ.5ರಷ್ಟು ಸಂಖ್ಯಾಧಿಕ ಸೀಟುಗಳನ್ನು  ಬೋಧನಶುಲ್ಕ ವಿನಾಯಿತಿ ಯೋಜನೆಯಡಿ(ಸೂಪರ್ ನ್ಯೂಮರರಿ ಕೋಟಾ) ಹಂಚಿಕೆ ಮಾಡುವ ಯೋಜನೆಯನ್ನು ಜಾರಿಗೆ ತಂದಿತ್ತು. 2013-14ನೇ ಸಾಲಿಗೆ ಈ ಯೋಜನೆಯಡಿ ಆದಾಯ ಮಿತಿಯನ್ನು ರೂ.4.5ಲಕ್ಷಕ್ಕೆ ಏರಿಸಲಾಗಿತ್ತು. ಸದರಿ ವಾರ್ಷಿಕ ಆದಾಯವನ್ನು ಎಐಸಿಟಿಯು ರೂ.6 ಲಕ್ಷಕ್ಕ ಏರಿಸಿದ್ದು ರೂ.6 ಲಕ್ಷ ಆದಾಯದಡಿ ಹೆಚ್ಚಿನ ವಿದ್ಯಾರ್ಥಿಗಳು ಇರುವುದರಿಂದ ವಾರ್ಷಿಕ ಆದಾಯ ರೂ.2.5 ಲಕ್ಷ ಆದಾಯ ಮಿತಿಯೊಳಗಿನ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸೀಟು ಸಿಗುವ ಸಂಭವ ಕಡಿಮೆ ಎಂಬುದನ್ನು ಪೋಷಕರು, ವಿದ್ಯಾರ್ಥಿಗಳು ಸರ್ಕಾರದ ಗಮನಕ್ಕೆ ತಂದಿದ್ದರು.

ಈ ಹಿನ್ನಲೆಯಲ್ಲಿ  ಕರ್ನಾಟಕ ಸರ್ಕಾರ 2014-15ನೇ ಸಾಲಿನಲ್ಲಿ ತಾಂತ್ರಿಕ ಶಿಕ್ಷಣ ಪಡೆಯುವ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಫೆ.26ರಂದು ನಡೆದ ಪರೀಕ್ಷಾ ಪ್ರಾಧಿಕಾರದ ಆಢಳಿತ ಮಂಡಳಿಯ ಸಭೆಯಲ್ಲಿ ಬೋಧನಾ ಶುಲ್ಕದ ವಿನಾಯಿತಿ ನೀಡಲು ಕೇಂದ್ರ ಸರ್ಕಾರದ ಸೂಪರ್ ನ್ಯೂಮರರಿ ಕೋಟಾ ಅಡಿ ಕೆಲವು ಬದಲಾವಣೆಗಳನ್ನು ಮಾಡಿದೆ. ಪೋಷಕರ ಆದಾಯ ಮಿತಿಯನ್ನು ಪರಿಷ್ಕರಿಸಿ 5 ವರ್ಗಗಳಾಗಿ (ರೂ.1-2ಲಕ್ಷ, 2-3 ಲಕ್ಷ, 3-4 ಲಕ್ಷ, 4-5 ಲಕ್ಷ, 5-6ಲಕ್ಷ) ವಿಂಗಡಿಸಲಾಗಿದೆ. ಒಟ್ಟಾರೆ ಲಭ್ಯವಿರುವ ತಾಂತ್ರಿಕ ಕಾಲೇಜು ಸೀಟುಗಳ ಶೇ.5ರಷ್ಟು ಸೀಟುಗಳಲ್ಲಿ ಈ ಯೋಜನೆಯಡಿ ಮೊದಲು 1-2 ಲಕ್ಷ ಆದಾಯ ಮಿತಿ ಇರುವ ವಿದ್ಯಾರ್ಥಿಗಳಿಗೆ  ಆದ್ಯತೆಯ ಮೇಲೆ ಸೀಟು ಹಂಚಿಕೆ ಮಾಡಿ ಉಳಿದ ಸೀಟುಗಳನ್ನು ಹಂಚಲು ಇದೇ ಕ್ರಮವನ್ನು ಇತರೆ 4 ವರ್ಗಗಳಿಗೆ ಅನುಸರಿಸಲಾಗುತ್ತದೆ. ಇದು ಎಲ್ಲಾ ಸರ್ಕಾರಿ, ವಿಶ್ವವಿದ್ಯಾಲಯ, ಅನುದಾನಿತ, ಖಾಸಗಿ ಅನುದಾನರಹಿತ( ಅಲ್ಪಸಂಖ್ಯಾತ ಮತ್ತು ಅಲ್ಪಸಂಖ್ಯಾತವಲ್ಲದ)ಶಿಕ್ಷಣ ಸಂಸ್ಥೆಗಳಿಗೆ ಅನ್ವಯವಾಗುತ್ತದೆ ಎಂದು ಆದೇಶದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.

ಈ ಆದೇಶದ ಹಿನ್ನಲೆಯಲ್ಲಿ ರಾಜ್ಯದ ಎಲ್ಲಾ ತಾಂತ್ರಿಕ ಶಿಕ್ಷಣ ನೀಡುವ ಕಾಲೇಜುಗಳಲ್ಲಿ ಲಭ್ಯವಿರುವ ಸುಮಾರು 90 ಸಾವಿರ ಎಂಜಿನಿಯರಿಂಗ್ ಸೀಟುಗಳಲ್ಲಿ ಪ್ರತಿ ಕೋರ್ಸ್‍ನ ಶೇ.5 ಅಂದರೆ ಸುಮಾರು 4500 ಸೀಟುಗಳು ಸೂಪರ್ ನ್ಯೂಮರರಿ ಯೋಜನೆಯಡಿ ವಿದ್ಯಾರ್ಥಿಗಳಿಗೆ ಲಭ್ಯವಾಗುತ್ತದೆ. ಇದಕ್ಕಾಗಿ ವಿದ್ಯಾರ್ಥಿಗಳು ತಮ್ಮ ಪೋಷಕರ ಆದಾಯವನ್ನು  ಪ್ರಮಾಣೀಕರಿಸುವ ಸಂಬಂಧಿಸಿದ ಪ್ರಾಧಿಕಾರ ( ತಹಸೀಲ್ದಾರ್, ನಗರಪಾಲಿಗೆ ಅಧಿಕಾರಿ) ನೀಡಿದ ಅಧಿಕೃತ ಆದಾಯ ಪ್ರಮಾಣಪತ್ರವನ್ನು ಸಲ್ಲಿಸಬೇಕು.

ಮತ್ತಷ್ಟು ಓದು »

1
ಜುಲೈ

ಕನ್ನಡದ ಅಳಿವು–ಉಳಿವು ಮತ್ತು ಭಾಷಾ ಮಾಧ್ಯಮ: ಕೆಲವು ಟಿಪ್ಪಣಿಗಳು

– ಎಂ.ಎಸ್. ಚೈತ್ರ, ನಿರ್ದೇಶಕರು, “ಆರೋಹಿ” ಸಂಶೋಧನಾ ಸಂಸ್ಥೆ, ಬೆಂಗಳೂರು

ಕನ್ನಡ ಕಲಿಕಳೆದ ಒಂದು ತಿಂಗಳಿನಿಂದ ಭಾರತದ ಸುಪ್ರೀಂ ಕೋರ್ಟ್‍ನ ತೀರ್ಪೊಂದು ಕರ್ನಾಟಕದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ, ಶಾಲೆಗಳಲ್ಲಿ ಕನ್ನಡ ಮಾಧ್ಯಮ ಕುರಿತು ನೀಡಿದ ತೀರ್ಪಿನ ಕಾರಣಕ್ಕಾಗಿ ಎಲ್ಲ ಹುಟ್ಟು ಹೋರಾಟಗಾರರು, ಸಾಹಿತಿಗಳು, ಬುದ್ಧಿ ಜೀವಿಗಳು ದಿಢೀರನೇ ರಾಜ್ಯದಲ್ಲಿ ಕನ್ನಡದ ಡಿಂಡಿಮ ಬಾರಿಸಲು ಪ್ರಾರಂಭಿಸಿದ್ದಾರೆ. ಈ ಚರ್ಚೆಯ ಸಂದರ್ಭದಲ್ಲಿ ಕನ್ನಡದ ಕೆಲವು ಚಿಂತಕರು ಆವೇಶ ಪೂರಿತ ಹೋರಾಟದ ಹಾದಿಯನ್ನು ಬಿಟ್ಟು, ಸುಪ್ರೀಂ ಕೋರ್ಟಿನ ತೀರ್ಪನ್ನು ಗೌರವಿಸಿ, ಕನ್ನಡದ ಬಗ್ಗೆ ಗಂಭೀರವಾಗಿ ಯೋಚಿಸಲು ಇದು ಸರಿಯಾದ ಸಮಯವೆಂದು ವಾದಿಸುತ್ತಿದ್ದಾರೆ. ನಮ್ಮ ಹಿರಿಯರ-ಹೋರಾಟಗಾರರ ಆದೇಶ-ಅಬ್ಬರಗಳಿಗೆ ಮಣಿದ ಕೆಲವರು ಸುಮ್ಮನಾದರೆ, ಮತ್ತೆ ಕೆಲವರ ಪಿಸು ಮಾತುಗಳು ಯಾರಿಗೂ ಕೇಳಿಸುತ್ತಿಲ್ಲ. ಈ ಎಲ್ಲ ಹಿನ್ನಲೆಯಲ್ಲಿ ಸ್ವಲ್ಪ ಕ್ರಮಬದ್ಧವಾಗಿ, ಈಗಿರುವ ನ್ಯಾಯಾಲಯದ ತೀರ್ಪು ಮತ್ತು ಅದಕ್ಕೂ  ಕನ್ನಡದ ಉಳಿವಿಗೂ ಇರುವ ಸಂಬಂಧದ ಕುರಿತು ಯೋಚಿಸುವ ಒಂದು ಸಣ್ಣ ಪ್ರಯತ್ನವನ್ನು ಮಾಡುತ್ತೇನೆ.

ಮೇಲೆ ತಿಳಿಸಿದ ಯೋಚನೆ ಮಾಡಲು ನಾನು ಕೆಲವು ಪ್ರಮುಖ ವಿಷಯಗಳನ್ನು ಪ್ರಾರಂಭದಲ್ಲೇ ಪಟ್ಟಿ ಮಾಡಿ, ಅದೇ ಕ್ರಮದಲ್ಲಿ ಚರ್ಚೆಯನ್ನು ಕಟ್ಟುವ ಸಣ್ಣ ಪ್ರಯತ್ನವನ್ನು ಮಾಡುತ್ತೇನೆ. ಒಟ್ಟಾರೆಯಾಗಿ ಹೇಳುವುದಾದರೆ ಕನ್ನಡ ಭಾಷೆಯ ಉಳಿವಿನ ಕುರಿತು ನಾವು ಚಿಂತಿಸುವ ಮುನ್ನ ನಮಗೆ ತಿಳಿಯ ಬೇಕಿರುವ ಸಂಗತಿಗಳು ಯಾವವು ಮತ್ತು ಆ ರೀತಿಯ ಚಿಂತನೆಯ ಪ್ರಯತ್ನವನ್ನು ಮಾಡುವುದೇ ಆದಲ್ಲಿ, ಆಗ ನಮ್ಮ ಮುಂದೆ ಏಳುವ ಸವಾಲುಗಳು ಯಾವ ರೀತಿಯಲ್ಲಿರುತ್ತವೆ ಎಂಬುದನ್ನು ಹುಡುಕುವುದೇ ಈ ಲೇಖನದ ಮೂಲ ಆಶಯ.

ಈ ಆಶಯಗಳ ಹಿನ್ನೆಲೆಯಲ್ಲಿ, ಈ ಲೇಖನವು ತೆಗೆದುಕೊಳ್ಳಬಹುದಾದ ವಿಷಯಗಳನ್ನು ಪಟ್ಟಿಮಾಡುವ ಪ್ರಯತ್ನ ಆರಂಭಿಸುತ್ತೇನೆ.
1.    ಅಸಲಿಗೆ ಸುಪ್ರೀಂ ಕೋರ್ಟಿನ ತೀರ್ಪಿನ ವಿಷಯದ ಕೇಂದ್ರವೇನು? ಅದರಿಂದ ನಮ್ಮ ಕನ್ನಡದ ಹೋರಾಟಗಾರರು ಗುರುತಿಸುತ್ತಿರುವ ಸಮಸ್ಯೆ ಯಾವುದು ಮತ್ತು ಆ ಕುರಿತು ನಮ್ಮ ಬುದ್ಧಿ ಜೀವಿಗಳು ಸರಿಯಾದ ಪ್ರಶ್ನೆಗಳನ್ನು ಕೇಳಿದ್ದಾರೆಯೇ? ಎನ್ನುವುದು.
2.    ನಮ್ಮ ಹೋರಾಟಗಾರರು ವಾದಿಸುವಂತೆ, ಕನ್ನಡ ಮಾಧ್ಯಮದ ಶಿಕ್ಷಣಕ್ಕೂ ಮತ್ತು ಕನ್ನಡ ಭಾಷೆಯ ಅಳಿವು-ಉಳಿವಿಗೂ ಏನಾದರೂ ಸಂಬಂಧವಿದೆಯೇ? ಮತ್ತು ಹೇಗೆ ಕನ್ನಡ ಮಾಧ್ಯಮ ಶಾಲೆಗಳು ಕನ್ನಡವನ್ನು ಉಳಿಸಬಲ್ಲವು? ಎಂಬುದು.
3.    ಅಂತಿಮವಾಗಿ ಈ ಎಲ್ಲ ವಾದಗಳ ಗುಣ ದೋಷಗಳನ್ನು ಗುರುತಿಸಿ, ಕನ್ನಡವನ್ನು ಕುರಿತಂತೆ ಒಂದು ಗಂಭೀರ ಯೋಚನೆಯನ್ನು ಹುಟ್ಟುಹಾಕಲು ಸಾಧ್ಯವಾದರೆ, ಆ ಮಾರ್ಗದ ಸಾಧ್ಯತೆಯನ್ನು ಹುಡುಕುವುದು.

ಮತ್ತಷ್ಟು ಓದು »