ವಿಷಯದ ವಿವರಗಳಿಗೆ ದಾಟಿರಿ

Archive for

4
ಆಗಸ್ಟ್

“ಪೂರ್ವಾಗ್ರಹ” ಕುರಿತ ಪೂರ್ವಗ್ರಹ

– ಡಾ. ಶ್ರೀಪಾದ ಭಟ್,ಸಹಾಯಕ ಪ್ರಾಧ್ಯಾಪಕ
ಡಾ. ಡಿ ವಿ ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರ, ತುಮಕೂರು ವಿವಿ

ಪೂರ್ವಗ್ರಹಆಗಸ್ಟ್ ೨ ರಂದು ಬಿಡುಗಡೆಯಾದ ‘ಕೊಟ್ಟ ಕುದುರೆಯನೇರಲರಿಯದೆ…'(ವಚನಗಳ ಅಧ್ಯಯನದಲ್ಲಿ ಆಧುನಿಕರ ಪೂರ್ವಗ್ರಹಗಳು ಮತ್ತು ಅವುಗಳಾಚೆಗೆ) ಕೃತಿಯ ಶೀರ್ಷಿಕೆಯಡಿಯ ವಿವರಣ ವಾಕ್ಯ ಸಾಲಿನಲ್ಲಿ ಕಾಣಿಸಿದ “ಪೂರ್ವಗ್ರಹ” ಎಂಬ ಪದವನ್ನು ಕುರಿತು ಪೂರ್ವಾಗ್ರಹ ಪದ ಪರಿಚಯವಿರುವ ಬಹಳಷ್ಟು ಜನ ಇಲ್ಲೊಂದು ದೋಷವಾಗಿದೆ ಎಂದು ಹೇಳುತ್ತಿದ್ದಾರೆ.

ಇಲ್ಲ. ಪೂರ್ವಗ್ರಹ ಎಂಬುದೇ ವ್ಯಾಕರಣಾತ್ಮಕವಾಗಿ ಸರಿ.

ಇದು ಪೂರ್ವ+ಗ್ರಹಿಕೆ ಎಂಬುದರ ಸಂಕ್ಷಿಪ್ತ ರೂಪ. ಪೂರ್ವ ಮತ್ತು ಉತ್ತರ ಪದಗಳೆರಡೂ ಮುಖ್ಯವಾಗಿ ಮೂರನೆಯದನ್ನು ಹೇಳುವ ಕರ್ಮಧಾರಯ ಸಮಾಸದ ಪದ. ವ್ಯಕ್ತಿ, ವಿಷಯ ಇತ್ಯಾದಿಗಳನ್ನು ಕುರಿತು ಮೊದಲೇ ಒಂದು ಅಭಿಪ್ರಾಯ, ನಿರ್ಧಾರಕ್ಕೆ ಬರುವುದು ಎಂಬುದು ಇದರ ಅರ್ಥ. ಎಲ್ಲರೂ ಸಾಮಾನ್ಯವಾಗಿ ಭಾವಿಸಿದಂತೆ “ಪೂರ್ವ+ಆಗ್ರಹ” ಕೂಡಿ ಆದುದಲ್ಲ. ಅಷ್ಟಕ್ಕೂ “ಆಗ್ರಹಿಸುವ” ಅರ್ಥ ಈ ಪದ ಪ್ರಯೋಗದಲ್ಲಿ ಬರುವ ಪ್ರಶ್ನೆಯೇ ಇಲ್ಲ.
ಮತ್ತಷ್ಟು ಓದು »

4
ಆಗಸ್ಟ್

“ಕೊಟ್ಟಕುದುರೆಯನೇರಲರಿಯದೆ…” ಪುಸ್ತಕ ದೊರೆಯುವ ಮಾಹಿತಿ

ಕೊಟ್ಟ ಕುದುರೆಯನೇರಲರಿಯದೆ೨೦೧೩ರಲ್ಲಿ ನಡೆದ “ವಚನ ಸಾಹಿತ್ಯ ಮತ್ತು ಜಾತಿ ವ್ಯವಸ್ಥೆ”ಯ ಚರ್ಚೆ,ರಾಜ್ಯದ ಪ್ರಗತಿಪರರ ನಿದ್ದೆಗೆಡಿಸಿದ್ದು ಸುಳ್ಳಲ್ಲ.ಮೊದಲಿಗೆ ಈ ಜನರು ಪತ್ರಿಕೆಯಲ್ಲಿ ಚರ್ಚೆಯೇ ಆಗದಂತೆ ತಡೆಯಲು ಪ್ರಯತ್ನಿಸಿದರು.ಅದೂ ಸಫಲವಾಗದಿದ್ದಾಗ,ಯಾವ CSLC ಎಂಬ ಸಂಶೋಧನಾ ಕೇಂದ್ರದಿಂದಾಗಿ ಈ ಚರ್ಚೆ ಶುರುವಾಯಿತೋ,ಆ ಕೇಂದ್ರವನ್ನೇ ಮುಚ್ಚಿಸುವ ಮೂಲಕ ಗೆದ್ದೆವೆಂದು ಬೀಗಿದರು ಈ ಬುದ್ಧಿಜೀವಿಗಳು. ಪಾಪ! ಸೂರ್ಯನಿಗೆ ಅಡ್ಡಲಾಗಿ ಕೊಡೆಹಿಡಿದು ಭೂಮಿಗೆ ಬೆಳಕು ಬರದಂತೆ ತಡೆದೆವು ಎಂಬ “ಬುದ್ಧಿಜೀವಿಗಳ ಮೌಢ್ಯ”! ಸಂಶೋಧನಾ ಕೇಂದ್ರ ಮುಚ್ಚಿಸಿದರೂ,ಚಿಂತನೆಯನ್ನು ನಿಲ್ಲಿಸಲು ಸಾಧ್ಯವಿಲ್ಲವೆಂದು ಅವರಿಗೆ ಅರಿವಾಗಲೇ ಇಲ್ಲ.ಅರಿವಾಗಿದ್ದರೆ ಅವರು ನಿಲುಮೆಯ ಮೇಲೆ ಮುಗಿಬೀಳುತ್ತಲಿರಲಿಲ್ಲ.

ಈ ಜನರು ಅಷ್ಟೆಲ್ಲಾ ಹರಸಾಹಸ ಪಟ್ಟು ನಿಲ್ಲಿಸಿದ್ದ ಆ ಚರ್ಚೆ ಮತ್ತು ವಚನ ಸಾಹಿತ್ಯಗಳು ನಿಜವಾಗಿ ಏನು ಹೇಳುತ್ತವೆ ಎಂಬುದರ ಕುರಿತ ನಿಲುಮೆ ಪ್ರಕಾಶನದ ಪುಸ್ತಕವೇ “ಕೊಟ್ಟ ಕುದುರೆಯನೇರಲರಿಯದೆ…”

ವಚನಸಾಹಿತ್ಯಗಳ ಕುರಿತು ನಮ್ಮ ಗೌರವವನ್ನು ಇನ್ನಷ್ಟು ಹೆಚ್ಚಿಸುವ,ವಚನಗಳ ಹಿರಿಮೆಯನ್ನು ಜಗತ್ತಿಗೆ ಸಾರುವ ಪುಸ್ತಕ.

mybookadda.in ನಲ್ಲಿ ಪುಸ್ತಕ ಆನ್ಲ್ಲೈನಲ್ಲಿ ಲಭ್ಯವಿದೆ.ಕೊಂಡು ಓದಿ

http://mybookadda.in/products/kottakudureyaneralariyade

4
ಆಗಸ್ಟ್

“ಬೌದ್ಧಿಕ ದಾಸ್ಯದಲ್ಲಿ ಭಾರತ” ಪುಸ್ತಕದ ಕುರಿತ ಓದುಗರ ಅಭಿಪ್ರಾಯಗಳು

– ವಿನಾಯಕ್ ಹಂಪಿಹೊಳಿ

ಬೌದ್ಧಿಕ ದಾಸ್ಯದಲ್ಲಿ ಭಾರತಬೌದ್ಧಿಕ ದಾಸ್ಯದಲ್ಲಿ ಭಾರತವನ್ನು ಬಹಳ ಮುಂಚೆಯೇ ಖರೀದಿಸಿದ್ದೆನಾದರೂ ಅದನ್ನು ಮರುದಿನವೇ ಮನೆಯಲ್ಲಿ ಇಟ್ಟು ಬರಬೇಕಾಯಿತು. ಹೀಗಾಗಿ ಸರಿಯಾಗಿ ಓದಲು ಆಗಿರಲಿಲ್ಲ. ಹೀಗಾಗಿ ನಿನ್ನೆ ಇನ್ನೊಂದು ಪ್ರತಿಯನ್ನು ಖರೀದಿಸಿ ಇವತ್ತು ಅದನ್ನು heathen in his blindness ಮತ್ತು ಸ್ಮೃತಿ ವಿಸ್ಮೃತಿ: ಭಾರತೀಯ ಸಂಸ್ಕೃತಿ ಪುಸ್ತಕಗಳ ಪಿಡಿಎಫ಼್ ಪ್ರತಿಗಳೊಂದಿಗೆ ತಾಳೆ ಮಾಡಿ ಸರಿಯಾಗಿ ಓದಿದೆ. ಪುಸ್ತಕ ಚೆನ್ನಾಗಿ ಮೂಡಿ ಬಂದಿದೆ. ಪುಸ್ತಕದ ಶೀರ್ಷಿಕೆ ಅಕ್ಷರಶಃ ಸಿದ್ಧವಾಗುತ್ತದೆ.

ಮೊದಲನೇಯದಾಗಿ ಸ್ಥಳೀಯ ಸಂಸ್ಕೃತಿಗಳ ಅಧ್ಯಯನ ಕೇಂದ್ರವನ್ನು ಬುದ್ಧಿಜೀವಿಗಳು ಏಕೆ ಮುಚ್ಚಿಸಿದ್ದಾರೆ ಎಂಬುದು ಈಗ ತಿಳಿಯಿತು. ಏಕೆಂದರೆ ಹಿಂದೂ-ಸಂಪ್ರದಾಯಗಳನ್ನು ರಿಲಿಜನ್ನಿನ ಅಡಿಯಲ್ಲಿ ತಂದರಷ್ಟೇ ಅಲ್ಲವೇ, ಅದರಲ್ಲಿನ ಗ್ರಂಥಗಳ ಆಧಾರವಿಲ್ಲದ ಸಂಪ್ರದಾಯಗಳನ್ನು ತೆಗಳಿ, ಪ್ರಗತಿಪರರೆಂದೆನಿಸಿಕೊಂಡು ಇವರು “ಬುದ್ಧಿಜೀವಿ”ಗಳಾಗುವದು? ರಿಲಿಜನ್ನೇ ಇಲ್ಲದ ಸಮಾಜದಲ್ಲಿ ಬುದ್ಧಿಜೀವಿಗೇನು ಕೆಲಸ?

ನನಗೆ ತುಂಬ ಮೆಚ್ಚಿಗೆಯಾದ ಅಂಶ ಕ್ರಿಯೆಯಿಂದ ಜ್ಞಾನವನ್ನು ಪಡೆಯುವದು ಭಾರತೀಯ ಪದ್ಧತಿ ಎಂಬ ಅಂಶವನ್ನು ಇದು ತೋರಿಸಿರುವದು. ನನ್ನ+ಅಣ್ಣ=ನನ್ನಣ್ಣ ಆಗುವದರಿಂದ ಕನ್ನಡದಲ್ಲಿ ಲೋಪಸಂಧಿ ಹುಟ್ಟಿಕೊಂಡಿದೆಯೋ ಅಥವಾ ಲೋಪಸಂಧಿ ಇರುವದರಿಂದ ನನ್ನ+ಅಣ್ಣ=ನನ್ನಣ್ಣ ಎಂದು ಮಾಡಲು ಭಾಷೆ ಅನುಮತಿ ನೀಡುತ್ತದೆಯೋ ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿತ್ತು. ಮೊದಲು ಪ್ರಯೋಗ, ನಂತರ ವ್ಯಾಕರಣ ಎಂಬುದು ಅನುಭವಕ್ಕೆ ಸರಿಹೊಂದುತ್ತಿದ್ದರೂ ಅದಕ್ಕೆ ಸರಿಯಾದ ವಾದ ಇಲ್ಲಿ ಸಿಕ್ಕಿತು.
ಮತ್ತಷ್ಟು ಓದು »