ಬುದ್ಧಿಜೀವಿಗಳ ಬ್ರಾಹ್ಮಣ ಥಿಯರಿಗಳು ಬರುತ್ತಿರುವುದೆಲ್ಲಿಂದ? – ಭಾಗ ೨
– ರೋಹಿತ್ ಚಕ್ರತೀರ್ಥ
ಬುದ್ಧಿಜೀವಿಗಳ ಬ್ರಾಹ್ಮಣ ಥಿಯರಿಗಳು ಬರುತ್ತಿರುವುದೆಲ್ಲಿಂದ? – ಭಾಗ ೧
ಎಲ್ಲ ವಿಷಯಗಳಲ್ಲೂ, ಇಪ್ಪತ್ತೊಂದನೆ ಶತಮಾನದ ಸಂದರ್ಭವನ್ನು ನೋಡಿ ಎನ್ನುವ ನಾವು ಬ್ರಾಹ್ಮಣ ಮತ್ತು ಉಳಿದ ಜಾತಿಗಳ ನಡುವಿನ ಸಂಬಂಧಗಳ ವಿಷಯ ಬಂದಾಗ ಮಾತ್ರ ಇತಿಹಾಸಕ್ಕೆ ಹಾರುವುದು ಯಾಕೆ ಎನ್ನುವುದು ಸದ್ಯದ ಯುಗದಲ್ಲಿ ಬದುಕುತ್ತಿರುವ ನನ್ನಂಥವರಿಗೆ ಬಿಡಿಸಲಾರದ ಒಗಟಾಗಿದೆ. ಇಪ್ಪತ್ತೊಂದನೆ ಶತಮಾನದ ಬ್ರಾಹ್ಮಣ, ಉಳಿದ ಜಾತಿ-ಪಂಥದ ಜನರಿಗಿಂತ ಯಾವ ವಿಷಯದಲ್ಲೂ ಹೆಚ್ಚಿನ ಸವಲತ್ತುಗಳನ್ನು ಪಡೆದು ಹುಟ್ಟಿಬಂದ ಸೂಪರ್‍ಮ್ಯಾನ್ ಅಲ್ಲ. ನಿಜಕ್ಕಾದರೆ, ಅವನು ನೂರಾರು ಹರಿತಖಡ್ಗಗಳನ್ನು “ಬ್ರಾಹ್ಮಣ”ನೆಂಬ ತನ್ನ ಮೊಂಡುಗತ್ತಿಯಿಂದ ಎದುರಿಸಬೇಕಾಗಿದೆ. ತನ್ನ ಬಾಲ್ಯ, ಶಾಲೆ, ಕಾಲೇಜುಗಳಲ್ಲಿ ಒಂದು ದಿನವೂ ಜಾತೀಯತೆ ಆಚರಿಸದ ಬ್ರಾಹ್ಮಣನಿಗೆ ಕೂಡ ಅಂಥದೊಂದು ವಿಷಸರ್ಪದ ಮೊದಲ ಕಡಿತದ ಅನುಭವವಾಗುವುದು, ಕಾಲೇಜಿನ ಫೀಸ್ ಕಟ್ಟುವಾಗ. ಪ್ರವಾಸಿಸ್ಥಳಗಳಲ್ಲಿ, “ಭಾರತೀಯರಿಗೆ 5 ರುಪಾಯಿ ಟಿಕೇಟು; ವಿದೇಶಿಯರಿಗೆ 50 ರುಪಾಯಿ” ಎಂದು ಬೋರ್ಡ್ ಬರೆದಿರುವಂತೆ, ಬೇರೆ ಜಾತಿಯವನು ಕಟ್ಟಿದ ಫೀಸಿಗೆ ಎರಡೋ ಮೂರೋ ಸೊನ್ನೆ ಸೇರಿಸಿ ವಿಧಿಸುವ ದೊಡ್ಡಮೊತ್ತವನ್ನು ತಾನು ಕಟ್ಟಬೇಕಾಗಿ ಬಂದಾಗ, ಅವನಿಗೆ ಜಾತೀಯತೆಯ ಮೊದಲ ಮುಖದರ್ಶನವಾಗುತ್ತದೆ. ಆದರೆ, ಈ ಸರಕಾರೀ ಜಾತೀಯತೆಯ ಬಗ್ಗೆ ಎಲ್ಲಾದರೂ ಆತ ಪ್ರತಿಭಟಿಸಲು ಅವಕಾಶ ಇದೆಯೆ?
ಭಾರತೀಯ ವಿಜ್ಞಾನ ಸಂಸ್ಥೆಯಂತಹ ಸರಕಾರೀ ಸಂಸ್ಥೆಗಳಲ್ಲಿ, ಪದವಿ/ಪಿಎಚ್‍ಡಿ ಕೋರ್ಸುಗಳ ಸಂದರ್ಶನಕ್ಕೆ ಆಯ್ಕೆಯಾದ ಕೆಲವೊಂದು ಜಾತಿಯ ವಿದ್ಯಾರ್ಥಿಗಳು ಸಂದರ್ಶನಕ್ಕೆ ಎರಡು ದಿನ ಮೊದಲು ಸಂಸ್ಥೆಗೆ ಬಂದು, “ತರಬೇತಿ” ಪಡೆಯುವ ಅವಕಾಶ ಇದೆ. ಪ್ರತಿಭೆಯೊಂದೇ ಮಾನದಂಡವೆಂದು ಪರಿಗಣಿಸಬೇಕಿದ್ದ ಇಂತಹ ಉನ್ನತ ಸಂಸ್ಥೆಗಳಲ್ಲಿ ಕಾಣಸಿಗುವ ಈ ಜಾತೀಯತೆಯನ್ನು ಬ್ರಾಹ್ಮಣವಟು ಎಂದಾದರೂ ಪ್ರಶ್ನೆ ಮಾಡಿದ್ದಿದೆಯೆ? ಇನ್ನು ಉದ್ಯೋಗದ ವಿಷಯಕ್ಕೆ ಬಂದಾಗ ನಮ್ಮ ದೇಶದಲ್ಲಿ ನಡೆಯುವ “ಸರಕಾರೀ ಜಾತೀಯತೆ”ಯ ಅಂದಾಜು ಮಾಡುವುದು ಯಾವ ಬ್ರಹ್ಮನಿಗೂ ಸಾಧ್ಯವಿಲ್ಲದ ಮಾತು. ಮೀಸಲಾತಿ, ವಿಶೇಷ ಸವಲತ್ತು, ಸಬಲೀಕರಣಗಳ ಹೆಸರಿನಲ್ಲಿ ಹುಟ್ಟುಹಾಕಿದ ಈ ಯಾವ ವ್ಯವಸ್ಥೆಯನ್ನೂ ನಾವು ಜಾತೀಯತೆ ಎಂದು ಪರಿಗಣಿಸದೇ ಇರುವಾಗ, ಶತಶತಮಾನಗಳ ಹಿಂದೆ ಬ್ರಾಹ್ಮಣ ಮಾಡಿದ್ದಾನೆನ್ನಲಾದ ತಾರತಮ್ಯ ಮಾತ್ರ “ಜಾತೀಯತೆ” ಆಗುವುದು ಹೇಗೆ? ನನಗಂತೂ ಗೊತ್ತಿಲ್ಲದ ರಹಸ್ಯ ಇದು!
ಮತ್ತಷ್ಟು ಓದು