ವಿಷಯದ ವಿವರಗಳಿಗೆ ದಾಟಿರಿ

ನವೆಂಬರ್ 28, 2015

8

ತುಘಲಕ್ ದರ್ಬಾರಿನ ಕುರಿತು ಓದಿದ್ದೆವು ಈಗ ನೋಡುತಿದ್ದೇವೆ

‍ನಿಲುಮೆ ಮೂಲಕ

– ರಾಕೇಶ್ ಶೆಟ್ಟಿ

ಸಿ(ನಿ)ದ್ರಾಮಯ್ಯ೨೦೧೩ರಲ್ಲಿ ಕೇಂದ್ರದಲ್ಲಿ ತನ್ನ ಕೊನೆಯ ದಿನಗಳನ್ನು ಎಣಿಸುತಿದ್ದ ಯುಪಿಎ ಸರ್ಕಾರ,ಶ್ರೀರಂಗಪಟ್ಟಣದಲ್ಲಿ ಟಿಪ್ಪು ವಿವಿ ಶುರು ಮಾಡುತ್ತೇವೆ ಎಂಬ ಪುಡಿ ಓಟ್ ಬ್ಯಾಕ್ ರಾಜಕೀಯ ಶುರು ಮಾಡಿತ್ತು.ಅದಕ್ಕೆ ಪ್ರಬಲವಾದ ವಿರೋಧದ ಅಲೆಯೆದ್ದಿತ್ತು.ಆ ಸಮಯದಲ್ಲಿ  “ಕರ್ನಾಟಕದಲ್ಲಿ ಅಶಾಂತಿಯ ಗಾಳಿ ಬೀಸಬೇಕೆಂದು ಕಾಂಗ್ರೆಸ್ಸ್ ನಿರ್ಧರಿಸಿದೆಯೇ?” ಎಂದು ಲೇಖನವೊಂದನ್ನು ಬರೆದಿದ್ದೆ. ೨೦೧೪ರ ಚುನಾವಣೆಯ ನಂತರ ಯುಪಿಎ ಸರ್ಕಾರದಂತೇ,ಅವರ ಸಮಾಜ ವಿಭಜನೆಯ ಯೋಜನೆಗಳೂ ಕಸದ ಬುಟ್ಟಿ ಸೇರಿದ್ದು ಇತಿಹಾಸ.

ಆಗ ಟಿಪ್ಪುವಿನ ಮೂಲಕ ಕರ್ನಾಟಕದಲ್ಲಿ ಅಶಾಂತಿಯೆಬ್ಬಿಸಲು ಕಾಂಗ್ರೆಸ್ಸಿಗೆ ಸಾಧ್ಯವಾಗಿರಲಿಲ್ಲ.ಆದರೆ ಇತ್ತೀಚೆಗೆ ಸರ್ಕಾರವೇ ಮುಂದೆ ನಿಂತು ಟಿಪ್ಪುಸುಲ್ತಾನನ ಜಯಂತಿ ಆಚರಣೆಗೆ ಮುಂದಾಗುವ ಮೂಲಕ ಸಮಾಜದ ಶಾಂತಿಗೆ ಧಕ್ಕೆ ತಂದಿತು. ಆಳುವ ಸರ್ಕಾರವೇ ಮುಂದೆ ನಿಂತು ಗಲಭೆ ಎಬ್ಬಿಸಿದ್ದು ಬಹುಷಃ ಕರ್ನಾಟಕದ ಇತಿಹಾಸದಲ್ಲಿಯೇ ಮೊದಲಿರಬೇಕು.ಈ ಹಿಂದೆ ನಾವೆಲ್ಲ ತುಘಲಕ್ ದರ್ಬಾರಿನ ಬಗ್ಗೆ ಓದಿದ್ದೆವು,ಈಗ ಕಣ್ಣಾರೆ ನೋಡುವಂತಾಗಿದೆಯಷ್ಟೇ.

ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದಾಗ ಬಹಳಷ್ಟು ನಿರೀಕ್ಷೆಗಳಿದ್ದವು.ಆ ನಿರೀಕ್ಷೆಗಳಿಗೆಲ್ಲ ಅವರು ಈ ಹಿಂದೆ ಅಧಿಕಾರದಲ್ಲಿದ್ದಾಗ ಮಾಡಿದ ಕೆಲಸಗಳು ಸಾಕ್ಷಿಯಾಗಿದ್ದವು.ಈ ಬಾರಿ ಮುಖ್ಯಮಂತ್ರಿಯಾಗುವ ಮೊದಲೇ ತಮ್ಮ ಸುತ್ತ ಪರಾವಲಂಬಿ ಸೆಕ್ಯುಲರ್ ಬುದ್ಧಿಜೀವಿಗಳ ಸಮೂಹವೊಂದನ್ನು ಕಟ್ಟಿಕೊಂಡೇ ಪಟ್ಟಕ್ಕೇರಿದರು.ಪಟ್ಟಕ್ಕೇರಿದ ದಿನವೇ ಅನ್ನಭಾಗ್ಯದ ಘೋಷಣೆ ಮಾಡಿದರು.ಆ ಯೋಜನೆಯಿಂದ ಬಡವರಿಗೇನೋ ಅನ್ನ ಸಿಕ್ಕುತ್ತಿರುವುದು ನಿಜವೇ.ಆದರೆ,ಗ್ರಾಮೀಣ ಪ್ರದೇಶದಲ್ಲಿ ಅದರಿಂದ ಆಗಿರುವ ಅನಾಹುತಗಳೇ ಹೆಚ್ಚು.ಸುಲಭವಾಗಿ ಸಿಗುವಾಗ ಕಷ್ಟವೇಕೆ ಪಡಬೇಕು ಎಂಬುದು ಜನರ ಸ್ವಾಭಾವಿಕ ನಿಲುವಾಗಿರುತ್ತದೆ. ಸ್ವಾಭಿಮಾನದ ಬದುಕು ಕಟ್ಟಿಕೊಡಬೇಕಾಗಿದ್ದ ಸರ್ಕಾರ ಜನರನ್ನು ಸರತಿ ಸಾಲಿನಲ್ಲಿ ನಿಲ್ಲಿಸಿ ಕೈಯೊಡ್ಡುವಂತೆ ಮಾಡುತ್ತಿದೆ.
ಸಿದ್ದರಾಮಯ್ಯನವರ “ಭಾಗ್ಯ” ಯೋಜನೆಗಳಿಂದಲೇ ಸರ್ಕಾರದ ಬೊಕ್ಕಸ ಹೈರಾಣಾಗಿರುವಾಗಲೇ,ಇದೀಗ “ಜಯಂತಿ” ಯೋಜನೆಗಳು ಶುರುವಾಗಿವೆ.೨೧೫ ವರ್ಷಗಳಷ್ಟು ಹಿಂದೆ ಗೋರಿ ಸೇರಿಕೊಂಡಿದ್ದ ಟಿಪ್ಪು ಸುಲ್ತಾನನ್ನು ಪುಡಿ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಮತ್ತೆ ಹೊರತೆಗೆದು ಸರ್ಕಾರದ ಬೊಕ್ಕಸದಿಂದಲೇ ಕೋಟ್ಯಾಂತರ ರೂಪಾಯಿಗಳನ್ನು ಖರ್ಚು ಮಾಡಿ ಟಿಪ್ಪು ಜಯಂತಿಯನ್ನು ಆಚರಿಸಲು ಹೊರಟರು.

ಟಿಪ್ಪು ಎಂಬುದೇ ವಿವಾದದ ಕಿಡಿ ಹೊತ್ತಿಸುವ ವಿಷಯ ಎಂಬುದರ ಅರಿವಿಲ್ಲದಷ್ಟು ಮುಗ್ಧರಲ್ಲ ಇವರು.ಕೊಡಗಿನ ಮೇಲೆ ಟಿಪ್ಪು ಎಸಗಿದ್ದ ದೌರ್ಜ್ಯನ್ಯಗಳ ಅರಿವಿದ್ದೂ ಮತ್ತು ಟಿಪ್ಪು ಜಯಂತಿಗೆ ಕೊಡಗಿನಲ್ಲಿ ಪ್ರಬಲ ವಿರೋಧವೆದ್ದಾಗಲೂ ನಮ್ಮ ಮುಖ್ಯಮಂತಿಗಳದ್ದು ಎಂದಿನ ಉಡಾಫೆಯ ಧೋರಣೆಯೇ.ಕೊಡಗಿನಲ್ಲಿ ಗಲಭೆಗಳು ಶುರುವಾಗಿ ಜೀವಹಾನಿಯಾದ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದಾಗ ಅವರು ಪ್ರತಿಕ್ರಿಯಿಸಿದ ಧಾಟಿಯಲ್ಲಿ,ಏನೂ ಆಗಿಯೇ ಇಲ್ಲ.ಇದೊಂದು ಕ್ಷುಲ್ಲಕ ವಿಚಾರವೆಂಬ ಉಡಾಫೆಯ ಭಾವ ಎದ್ದು ಕಾಣುತಿತ್ತು. ಒಟ್ಟಾರೆಯಾಗಿ ಈ ಟಿಪ್ಪು ಜಯಂತಿಯೆಂಬ ವೋಟ್ ಬ್ಯಾಂಕ್ ಪ್ರಹಸನಕ್ಕೆ ಎದ್ದ ಜನ ವಿರೋಧಕ್ಕೆ, ಜನರ ಭಾವನೆಗಳಿಗೆ ನಾನು ಕೇರ್ ಮಾಡುವುದಿಲ್ಲ,ನಾನು ನಡೆದಿದ್ದೇ ಹಾದಿ ಎಂಬ ಧೋರಣೆಯಲ್ಲಿಯೇ ಮುಖ್ಯಮಂತ್ರಿಗಳಿದ್ದರು.

ಟಿಪ್ಪು ಜಯಂತಿಯನ್ನು ಯಾವುದೋ ಸಂಘಟನೆಗಳು ಮಾಡಿಕೊಂಡಿದ್ದರೇ ಅದು ವಿವಾದವಾಗುತ್ತಿರಲಿಲ್ಲ. ಆದರೆ ವಿವಾದಿತ ವ್ಯಕ್ತಿಯೊಬ್ಬನ ಜಯಂತಿಯನ್ನು ಸರ್ಕಾರವೇಕೆ ಆಚರಿಸಬೇಕಿತ್ತು? ಜಯಂತಿ ಆಚರಿಸುವುದರಿಂದ ರಾಜ್ಯದ ಜನರ ಬವಣೆಗಳು ನೀಗುತ್ತವೆಯೇ? ನೀಗುವುದು ಪಕ್ಕಕ್ಕಿರಲಿ,ಈ ಜಯಂತಿಯಿಂದಾಗಿ ಶಾಂತವಾಗಿದ್ದ ಕರ್ನಾಟಕವೇ ಅಶಾಂತಿಗೀಡಾಯಿತು.ಇವರ ಪುಡೀ ವೋಟ್ ಬ್ಯಾಂಕ್ ರಾಜಕಾರಣದಿಂದ ತೊಂದರೆ ಅನುಭವಿಸಿದ್ದು ಅಂದಂದಿನ ಕೂಳನ್ನು ಅಂದೇ ದುಡಿದು ತಿನ್ನಬೇಕಾದ ಬಡವರು.ಬಡವರು ಬಗ್ಗೆ ಕಣ್ಣೀರು ಹರಿಯುವಂತೆ ಭಾಷಣ ಬಿಗಿಯುವ ಈ ಜನರು,ಅದೇ ಬಡವರ ಹೊಟ್ಟೆಗೆ ತಣ್ಣೀರು ಬಟ್ಟೆ ಕಟ್ಟಿಸಿದರು.

ಟಿಪ್ಪು ಮುಸ್ಲಿಂ ಎಂಬ ಕಾರಣಕ್ಕಾಗಿ ವಿರೋಧಿಸಲಾಗುತ್ತಿದೆ ಎಂಬ ಚಿಂತನೆಯನ್ನು ಕೆಲವು ಮೂರ್ಖರು  ಹರಿಯಬಿಟ್ಟರು.ಆ ಮಹಾನುಭಾವರಿಗೆ ತಿಳಿಯದಿದ್ದು,ಟಿಪ್ಪುವನ್ನು ವಿರೋಧಿಸಿದ್ದು ಆತ ತನ್ನ ರಿಲಿಜನ್ನಿಗೆ ಸೇರದ ಅನ್ಯ ಜನರ ವಿರುದ್ಧ ನಡೆಸಿದ ಅವ್ಯಾಹತ ಹಿಂಸಾಚಾರ, ದೇಗುಲಗಳನಾಶ ಮತ್ತು ಮತಾಂತರದ ಕಾರ್ಯಗಳಿಗಾಗಿ.ಮುಸ್ಲಿಂರನ್ನು ವಿರೋಧಿಸುವುದೇ ಇಲ್ಲಿನ ಬಹುಸಂಖ್ಯಾತರ ಜಾಯಮಾನವಾಗಿದ್ದರೇ, ಅಬ್ದುಲ್ ಕಲಾಂರಂತವರು ಈ ದೇಶದ ಜನಪ್ರಿಯ ರಾಷ್ಟ್ರಪತಿಗಳಾಗುತ್ತಿರಲಿಲ್ಲ ಮತ್ತು ಅವರು ನಮ್ಮನ್ನು ಅಗಲಿದ ದಿನ ಈ ದೇಶದ ಬಹುತೇಕ ಜನಸಾಮಾನ್ಯರಿಗೆ ಮನೆಯ ಹಿರಿಯಜ್ಜನನ್ನು ಕಳೆದುಕಂಡ ಸೂತಕದ ಭಾವವೂ ಬರುತ್ತಿರಲಿಲ್ಲ.ಅಂತಹ ಅಬ್ದುಲ್ ಕಲಾಂರ ಜಯಂತಿಗೋ ಅಥವಾ ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ ಅಶ್ಫಾಕ್ ಉಲ್ಲಾ ಖಾನ್,ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನೇತೃತ್ವ ವಹಿಸಿದ್ದ ಬಹದ್ದೂರ್ ಷಾ ಜಯಂತಿಗೋ ಯಾರೂ ವಿರೋಧ ವ್ಯಕ್ತಪಡಿಸುತ್ತಿರಲಿಲ್ಲ.

ಆದರೇ,ಈ ಸರ್ಕಾರಕ್ಕೇ ಟಿಪ್ಪು ಸುಲ್ತಾನನೇ ಏಕೆ ಬೇಕಿದ್ದನೆಂದರೇ,ಹಿಂದೂ೦-ಮುಸ್ಲಿಂ ಮತಗಳ ಧ್ರುವೀಕರಣಕ್ಕಾಗಿಯಷ್ಟೇ. ಓವೈಸಿ,SDPIನಂತಹ ಪಕ್ಷಗಳಿಂದಾಗಿ ಮುಸ್ಲಿಮರ ವೋಟು ಕೈ ತಪ್ಪುತ್ತಿರುವುದರಿಂದಾಗಿ ಕಳವಳಗೊಂಡಿದ್ದ ಕಾಂಗ್ರೆಸ್ಸಿಗೆ ಟಿಪ್ಪು ಅಸ್ತ್ರವಾಗಿ ಸಿಕ್ಕನಷ್ಟೇ.ಇನ್ನೂ ಸರ್ಕಾರ ಘೋಷಣೆ ಮಾಡಿದ ಕೂಡಲೇ ಕೆಲವು ಮುಸ್ಲಿಂ ಸಂಘಟನೆಗಳು ಇಸ್ಲಾಂನಲ್ಲಿ ಅವಕಾಶವಿಲ್ಲದಿದ್ದರೂ ಜಯಂತಿ ಆಚರಣೆಗೆ ಮುಂದಾದಾಗ ಅವರ ರಿಲಿಜನ್ನಿನ ಗುರುಗಳು ದನಿಯೆತ್ತಲೇ ಇಲ್ಲ.ಜಯಂತಿ ಆಚರಿಸುವುದರಿಂದ ಬಡ ಮುಸ್ಲಿಂರ ಹೊಟ್ಟೆ ತುಂಬುತ್ತದೆಯೇ? ನಿಮ್ಮನ್ನು ಕೇವಲ ವೋಟಿಂ ಮಷೀನ್ನುಗಳಂತೇ ಬಳಸಿಕೊಳ್ಳುತಿದ್ದಾರೆಯೆಂದು ಹೇಳುವ ಒಬ್ಬನೇ ಒಬ್ಬ ಪ್ರಜ್ನಾವಂತ ನಾಯಕ ಇನ್ನೂ ಆ ಸಮುದಾಯದಲ್ಲಿ ಇಲ್ಲದಿರುವುದೇ ದುರಂತ.

ಸನ್ಮಾನ್ಯ ಸಿದ್ದರಾಮಯ್ಯನವರ ಕಾಂಗ್ರೆಸ್ಸ್ ಗೆದ್ದಾಗ, ಮಾಜಿ ಪತ್ರಕರ್ತರೊಬ್ಬರು “ಜಾತಿ ಮೀರಿ ಯೋಚನೆ ಮಾಡಿದ ರಾಜ್ಯದ ಮತದಾರ (ಪ್ರಜಾವಾಣಿ-ಅನಾವರಣ ಅಂಕಣ Mon, 05/13/2013)” ಎಂದು ಬರೆದಿದ್ದರು.ಆದರೆ ಈ ಸರ್ಕಾರ ಅಸ್ತಿತ್ವಕ್ಕೆ ಬಂದ ದಿನದಿಂದ ಮಾಡುತ್ತಾ ಬಂದಿದ್ದು ಕೇವಲ ಜಾತಿ ರಾಜಕೀಯವನ್ನೇ.ಜಾತಿಗಳ ಆಧಾರದ ಮೇಲೆ ಭಾಗ್ಯ,ಜಯಂತಿ ಯೋಜನಗಳೇ ಅದಕ್ಕೆ ಸಾಕ್ಷಿ.

ಸಿದ್ದರಾಮಯ್ಯನವರ ಹಿಂಬಾಲಕರಿಗೇನೋ ಅವರಲ್ಲಿ ದೇವರಾಜು ಅರಸು ಅವರನ್ನು ಕಾಣುವ ಆಶಯವಿತ್ತು.ಹಾಗಾಗಿ ಅವರನ್ನು ಎರಡನೇ ದೇವರಾಜ್ ಅರಸು ಎಂಬಂತೆ ಪ್ರೊಜೆಕ್ಟ್ ಮಾಡುತಿದ್ದರು.ಆದರೆ ಖುದ್ದು ಸಿದ್ದರಾಮಯ್ಯನವರಿಗೆ ಎರಡನೇ ಟಿಪ್ಪು ಸುಲ್ತಾನ್ ಎಂದು ಕರೆಸಿಕೊಳ್ಳುವ ಉಮ್ಮೇದಿ ಇರುವಂತಿದೆ.ಹೋಗಲಿ ಅವರನ್ನು ಹಾಗೆಯೇ ಕರೆಯೋಣ ಎಂದುಕೊಂಡರೇ,ಬೆಂಗಳೂರಿನಲ್ಲಿ ತುಂಬಿರುವ ಕಸದ ರಾಶಿಯನ್ನು ನೋಡಿದರೇ ಅವರನ್ನು ತಿಪ್ಪೆ ಸುಲ್ತಾನ ಎಂದು ಕರೆಯುವುದು ಸೂಕ್ತವೆಂದು ಟ್ವೀಟಿಗರು ಸಲಹೆ ನೀಡಿದ್ದಾರೆ! ಹಿಂದಿನ ಎಲ್ಲಾ ಸರ್ಕಾರಗಳ ದೂರದೃಷ್ಟಿಯ ಕೊರತೆಯಿಂದ ಉಂಟಾದ ಕಸದ ಸಮಸ್ಯೆಯನ್ನು ಸಿದ್ದರಾಮಯ್ಯನವರ ಸರ್ಕಾರವೂ ಪರಿಹರಿಸಿಲ್ಲ.ಭಾಗ್ಯ-ಜಯಂತಿಗಳಲ್ಲೇ ಕಾಲ ಕಳೆಯುವ ಈ ಸರ್ಕಾರಕ್ಕೆ ಪರಿಹಾರದ ಮಾರ್ಗದ ಬಗ್ಗೆ ಯೋಚಿಸಲಾದರೂ ಸಮಯವೆಲ್ಲಿದೆ ಹೇಳಿ?

ನೆರೆಯ ರಾಜ್ಯದಲ್ಲಿ ಚಂದ್ರಬಾಬು ನಾಯ್ಡುರಂತಹ ಪಾದರಸದಂತೆ ಕೆಲಸ ಮಾಡುವ ಮುಖ್ಯಮಂತ್ರಿಯನ್ನಿಟ್ಟುಕೊಂಡು, ನಮ್ಮ ರಾಜ್ಯದ ಮುಖ್ಯಮಂತ್ರಿ ತಮ್ಮ ಆಸ್ಥಾನ ಸಾಹಿತಿಗಳ ಮಾತಿಗೆ ಜೈ ಜೈ ಎನ್ನುತ್ತ ಕರ್ನಾಟಕವನ್ನು ಶಿಲಾಯುಗಕ್ಕೆ ಕೊಂಡೊಯ್ಯುತ್ತಿರುವಂತೆ ಭಾಸವಾಗುತ್ತಿದೆ.ಇದಕ್ಕೆ ಉದಾಹರಣೆಯೆಂಬಂತೆ ಸಾಲು ಸಾಲು ಉದ್ದಿಮೆಗಳು ಇಲ್ಲಿಂದ ನೆರೆಯ ಆಂಧ್ರಕ್ಕೆ ಕಾಲ್ಕಿತ್ತವು.ಅತ್ತ ಚಂದ್ರಬಾಬು ನಾಯ್ಡು ಹೊಸ ರಾಜಧಾನಿಯನ್ನು ನಿರ್ಮಿಸುವಲ್ಲಿ ಕಾರ್ಯ ನಿರತರಾಗಿದ್ದರೇ,ಇತ್ತ ನಮ್ಮ ರಾಜಧಾನಿಯ ಗುಂಡಿಗಳಲ್ಲಿ ಊತು ಹೋಗಿರುವ ರಸ್ತೆಗಳನ್ನು ಹುಡುಕಬೇಕಾದ ಪರಿಸ್ಥಿತಿಯಿದೆ.ಬೇರೆ ರಸ್ತೆಗಳನ್ನು ಬಿಡಿ.ಯಾವ ಸಾಫ್ಟ್ವೇರ್ ಉದ್ಯಮದಿಂದಾಗಿ ಜಗತ್ತಿನಲ್ಲಿ ಇಂದು ಬೆಂಗಳೂರು ಗುರುತಿಸಿಕೊಂಡಿದೆಯೋ ಅಂತ ಸಾಫ್ಟ್ವೇರ್ ಕಂಪೆನಿಗಳಿರುವಂತಹ ಮಾರತಹಳ್ಳಿ, ಬೆಳ್ಳಂದೂರು, ಸರ್ಜಾಪುರ,ವೈಟ್-ಫೀಲ್ಡ್,ಕೆ.ಆರ್ ಪುರಂನ ಮುಖ್ಯ ರಸ್ತೆಗಳನ್ನು ನೋಡಿದರೆ ಯಾವ ಉದ್ಯಮಿ ತಾನೇ ಇಲ್ಲಿ ಬಂದು ನೆಲೆಯೂರುತ್ತಾನೇ ಹೇಳಿ? ಆದರೆ ನಮ್ಮ ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಇದರ ಪರಿವಿಲ್ಲ.ಅವರು ವಿಧಾನ ಸೌಧದಲ್ಲಿ ತಮ್ಮ ಆಸ್ಥಾನ ಸಾಹಿತಿಗಳನ್ನೆಲ್ಲಾ ಕರೆದುಕೊಂಡು ವೋಟ್ ಬ್ಯಾಂಕ್ ಜಯಂತಿ ಮಾಡಿಸುತ್ತಾ,ಆಸ್ಥಾನ ಸಾಹಿತಿಗಳಿಂದ ಶಾಂತಿ ಕದಡುವ ಹೇಳಿಕೆ ಹೊರಡುವಾಗಲೂ ನಿದ್ದೆ ಮಾಡುತ್ತಾ ಕುಳಿತಿದ್ದಾರೆ.

ಅತ್ತ ಉತ್ತರ ಕರ್ನಾಟಕದಲ್ಲಿ ಕಳಸಾ-ಬಂಡೂರಿ ಕುಡಿಯುವ ನೀರಿನ ಹೋರಾಟ ಶುರುವಾಗಿ ತಿಂಗಳುಗಳೇ ಕಳೆದಿವೆ.ಇತ್ತ ಕರಾವಳಿ -ಬಯಲು ಸೀಮೆಯ ಜಿಲ್ಲೆಗಳ ನಡುವೆ ನೇತ್ರಾವತಿ ತಿರುವು ಯೋಜನೆಯನ್ನು ತಂದಿಟ್ಟು ವಿವಾದವೆಬ್ಬಿಸಲಾಗಿದೆ. ಸಾಲು ಸಾಲು ಉದ್ದಿಮೆಗಳು ರಾಜ್ಯ ಬಿಟ್ಟು ಹೋಗುತ್ತಿವೆ,ಸಾಲು ಸಾಲಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತಿದ್ದಾರೆ.ಆದರೆ,ನಮ್ಮ ಘನ ಮುಖ್ಯಮಂತ್ರಿಗಳು “ಜಯಂತಿ” ಆಚರಣೆಯಲ್ಲಿ ನಿರತರಾಗಿದ್ದಾರೆ.ಇನ್ನೂ ಪ್ರತಿಪಕ್ಷ ಬಿಜೆಪಿ ಮತ್ತದರ ನಾಯಕರ ಬಗ್ಗೆ ಮಾತನಾಡದಿರುವುದೇ ಲೇಸು ಬಿಡಿ!  ಕಂತೆಗೆ ತಕ್ಕ ಬೊಂತೆ! ಬಿಜೆಪಿಗೆ ಕಳಸವಿಟ್ಟಂತೇ ಕೆಲಸ ಮಾಡುವ ಅದರ ಪರಿವಾರದ ಮುಖಂಡರು.ತುಘಲಕ್ ದರ್ಬಾರಿಗೆ ಈ ಜನರ ಕೊಡುಗೆಯೂ ಗಣನೀಯವಾಗಿಯೇ ಇದೆ.

ಇಂತ ನಾಯಕರನ್ನು ಇಟ್ಟುಕೊಂಡು,”ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು” ಎಂದು ಹಾಡಲಾದೀತೆ? ಇತಿಹಾಸದಲ್ಲಿ ತುಘಲಕ್ ದರ್ಬಾರಿನ ಕುರಿತು ಓದಿದ್ದೆವು ಈಗ ನೋಡುತಿದ್ದೇವೆ.

8 ಟಿಪ್ಪಣಿಗಳು Post a comment
 1. C. RAVI KUMAR
  ನವೆಂ 28 2015

  ಆಳುವ ಸರ್ಕಾರವೇ ಮುಂದೆ ನಿಂತು ಗಲಭೆ ಎಬ್ಬಿಸಿದ್ದು ಬಹುಷಃ ಕರ್ನಾಟಕದ ಇತಿಹಾಸದಲ್ಲಿಯೇ ಮೊದಲಿರಬೇಕು ಇದು ತಪ್ಪು ಅಬಿಪ್ರಾಯ. ಈ ಹಿಂದೆ ಕೂಡ ಇಂಥಹ ಗಲಭೆಗಳು ಅನೆಕ ನಡೆದಿವೆ. 90ರ ದಶಕದಲ್ಲಿ ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದಾಗ ಕ್ಲಾಸಿಕ್ ಕಂಪ್ಯೂಟರ್ ಹಗರಣದಲ್ಲಿ ಸಿಲುಕಿದ್ದರು. ಆಗ ಜನರ ಮನಸ್ಸನ್ನು ಈ ವಿಷಯದಿಂದ ಬೇರೆಡೆಗೆ ತಿರುಗಿಸಲು ಕಾವೇರಿ ಗಲಾಟೆ ಮಾಡಿಸುತ್ತಾರೆ. ಈ ವಿಷಯವನ್ನು ಪ್ರೈಜ್ ಕ್ಯಾಚ್ ವೀರಪ್ಪನ್ ಪುಸ್ತಕದಲ್ಲಿ ದಿನಕರ್ ಬರೆದಿದ್ದಾರೆ. ಅದೇ ರೀತಿ ಅವರ ನಂತರ ಮುಖ್ಯಮಂತ್ರಿಯಾದ ಮೋಯ್ಲಿ ದೂರದರ್ಶನದಲ್ಲಿ ಉರ್ಧು ವಾರ್ತೆ ಬಿತ್ತರಿಸುವ ಮೂಲಕ ಗಲಾಟೆ ಮಾಡಿಸಿದ್ದರು.

  ಉತ್ತರ
  • ಮಾಹಿತಿಗಾಗಿ ಧನ್ಯವಾದಗಳು.ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿದ್ದಾಗ,ಬಂದ್ ಗೆ ಕರೆ ನೀಡಿದ್ದನ್ನೂ ಉಲ್ಲೇಖಿಸಬಹುದು

   ಉತ್ತರ
 2. charles bricklayer
  ನವೆಂ 30 2015

  ೪ಕೇಜಿ ಅಕ್ಕಿ, ೧ಕೇಜಿ ರಾಗಿ, ೧/೪ ಕೇಜಿ ಏಣ್ಣೆ, ೧/೪ ಕೇಜಿ ಉಪ್ಪು ಇವು ಅನ್ನಭಾಗ್ಯದಡಿಯಲ್ಲಿ ಒಬ್ಬ ವ್ಯಕ್ತಿಗೆ ೧ ತಿಂಗಳಿಗೆ ಸಿಗುತ್ತಿರುವ ಆಹಾರ ಪಧಾರ್ಥಗಳು.ಕೇವಲ ಇಷ್ಟೇ ಆಹಾರ ಪಧಾರ್ಥಗಳಲ್ಲಿ ತಾವು ೧ ತಿಂಗಳು ಜೀವಿಸಿ ತೋರಿಸಿ ಆನಂತರ ಇ ಯೋಜನೆಯ ಬಗ್ಗೆ, ಅದು ಅದರ ಫಲಾನುಭವಿಗಳನ್ನು ಸೋಮಾರಿಗಳಾಗಿಸುತ್ತಿರುವ ಬಗ್ಗೆ,ಅದರ ಸಾಮಾಜಿಕ ಪರಿಣಾಮಗಳ ಬಗ್ಗೆ ಪ್ರತಿಕ್ರಯಿಸಬೇಕು ಅಲ್ಲವೇ?,ಹಾಗೆಯೇ ಜನರ ಮೂಲಭೂತ ಅವಶ್ಯಕತೆ ಮತ್ತು ಹಕ್ಕು ಆದ ಕುಡಿಯುವ ನೀರಿನ ಯೋಜನೆಯೊಂದರ ಬಗ್ಗೆ ಈ ದೇಶದ ಅತ್ಯುನ್ನತ ಅಧಿಕಾರದಲ್ಲಿರುವ ವ್ಯಕ್ತಿಯು ತನ್ನ ಜವ್ಬಾದಾರಿಕೆಯನ್ನು ನಿರ್ವಹಿಸಿರುವ ರೀತಿಯ ಬಗೆಗೂ ತಾವು ೨ಸಾಲು ಬರೆದಿದ್ದರೆ ಇದೊಂದು ಉತ್ತಮ ಲೇಖನದಿಂದ ಅತ್ಯುತ್ತಮ ಲೇಖನವಾಗುತ್ತಿತ್ತು.ಇರಲಿ ಬಿಡಿ,ಕನಿಷ್ಟ ಒಂದೆರಡು ಸಾಲಿನ ಪ್ರತಿಕ್ರಿಯೆಯನ್ನಾದರೂ ತಾವು ನೀಡಿದರೆ ಕುಡಿಯುವ ನೀರೀಗಾಗಿ ಬಾಯಿ ಬಿಡಿ ಜೀವವನ್ನೇ ಬಿಡುತ್ತಿರುವ ಅನ್ನಭಾಗ್ಯದ ಫಲಾನುಭವಿ ಹಳ್ಳಿಯ ಬಡರೈತರಹದುಪಕಾರವಾಗುತ್ತದೆ.

  ಉತ್ತರ
  • charles bricklayer
   ನವೆಂ 30 2015

   ಬಡರೈತರಿಗೆ ಮಹದುಪಕಾರವಾಗುತ್ತದೆ

   ಉತ್ತರ
   • ನೀವು ಯಾವ ನೀರಾವರಿ ಯೋಜನೆಯ ಬಗ್ಗೆ ಮಾತನಾಡುತಿದ್ದೀರಿ ಎಂದು ತಿಳಿಸಿದರೆ ಚರ್ಚಿಸಲು ಸುಲಭವಾಗುತ್ತದೆ

    ಉತ್ತರ
 3. Tirumalesha
  ಡಿಸೆ 1 2015

  Thukhalak darbhar odiddu maretu hogittu, neevu matte nenapisiddiri..thanks Rakeshanna:)

  ಉತ್ತರ
 4. Devu Hanehalli
  ಡಿಸೆ 1 2015

  A government should not rule the state sitting in an ambulance. No one opposes giving food to the starved. At the same time, you can not uplift the poor by distributing food packets – DAILY. Disaster Management should not become a routine. That is nothing but political disaster. Has any one objected to air-dropping of food packets during floods? How can you expect the same everyday? That can happen only during POLITICAL CYCLONE!!! For the last 70 years we are accustomed to be treated as beggars. A government that treats its own citizens as beggars and tacit supporters of its machinations, welcomes nothing but disaster. That is the reason why we couldn’t push poverty an inch backward in the last 70 years. Poverty is the biggest capital we invested in the electoral industry. A great value `Anna Dana’ has become such a cheap tool in the hands of our political masters and temple goons!!

  ಉತ್ತರ
 5. Ckvmurthy
  ನವೆಂ 3 2016

  Sidu’s achievements. ………………

  .1).Abolishon of Lokaykta. 2).He bolt watch. . ……. 3)Steel bridge in Bangalore. 4) Tippu jayanthi. .. .. .. .. ..5)Failure in solving Kaveri and Mahadayi river problem. ……………………… …..6)Award for K.S.Bhagavan. .. 7) Cast census. ………………………………… 8) Partition of Bangalore built by Nadaprabhu Kempegowda.. . 9)Garbage contact.in Bangalore BBMP. 10)Bringing his son to politics in Mysore.

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments