ವಿಷಯದ ವಿವರಗಳಿಗೆ ದಾಟಿರಿ

ನವೆಂಬರ್ 30, 2015

1

2015 ರ ಆಳ್ವಾಸ್ ಪ್ರಶಸ್ತಿ ಪುರಸ್ಕೃತ ರಾಜೇಂದ್ರ ಸಿಂಗ್ ಬಾಬು ಅವರೊಂದಿಗೆ ಸಂದರ್ಶನ

‍ನಿಲುಮೆ ಮೂಲಕ

ಸಂದರ್ಶನ : ಪ್ರಕಾಶ್.ಡಿ.ರಾಂಪೂರು,ರಮೇಶ್ ಕೆ.ಆರ್,ವೀರೇಶ್
ಚಿತ್ರ : ಶ್ರೀಧರ್ ಬಳ್ಳಾರಿ

Rajendra Singಕನ್ನಡ ಚಿತ್ರ ರಂಗದಲ್ಲಿ  ಸುಮಾರು 39 ವರ್ಷಗಳ ಕಾಲ ಸಿನೆಮಾ ರಂಗದಲ್ಲಿ ನಿರ್ದೇಶಕರಾಗಿ, ನಿರ್ಮಾಪಕರಾಗಿ ತನ್ನದೇ ಆದ ಛಾಪನ್ನು ಮೂಡಿಸಿ ಕನ್ನಡ ಮಾತ್ರವಲ್ಲದೇ ಬೇರೆ ಭಾಷೆಗಳಲ್ಲಿಯೂ ತಮ್ಮ ಹೆಸರನ್ನು ಗುರುತಿಸಿಕೊಂಡಿರುವ ಪ್ರಸ್ತುತ ಕನ್ನಡ ಚಲನಚಿತ್ರೋದ್ಯಮದಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ  ರಾಜೇಂದ್ರ ಸಿಂಗ್ ಬಾಬು 2015 ರ ಆಳ್ವಾಸ್ ನುಡಿಸಿರಿಯ “ಆಳ್ವಾಸ್ ಪ್ರಶಸ್ತಿ” ಸ್ವೀಕರಿಸುವ ಮುನ್ನ ಪತ್ರಿಕೋದ್ಯಮ ವಿದ್ಯಾರ್ಥಿಗಳು ನಡೆಸಿದ ಸಂದರ್ಶನ..

ಪ್ರ: ಕನ್ನಡ ಚಿತ್ರ ರಂಗಕ್ಕೆ ಬಂದು ಮೊದಲ ಬಾರಿಗೆ ನಾಗರಹೊಳೆ ಅನ್ನೋ ಚಿತ್ರವನ್ನು ಮಾಡಿದಿರಿ. ನಿಮ್ಮ ಈ ಮೊದಲ ಚಿತ್ರ ಹಿಟ್ ಆಯಿತು ಇದರ ಬಗ್ಗೆ ನಿಮ್ಮ ಮಾತು?
ನಮ್ಮ  ತಂದೆಯವರ  ಕಾಲದಿಂದಲೂ  ನಾನು ಸಿನೆಮಾ  ಕ್ಷೇತ್ರದಲ್ಲಿದ್ದು, ಅವರನ್ನು ನೋಡಿ ಕಲಿತ ವಿಷಯಗಳನ್ನು ಸೇರಿಸಿ ಜನರಿಗೆ ಹೊಸ ರೀತಿಯ ಸಿನೆಮಾಗಳನ್ನು  ಕೊಡಬೇಕು  ಅಂತಾ  ಅಂದುಕೊಂಡಿದ್ದೆ. ಆ  ಸಂಧರ್ಭದಲ್ಲಿ ನನ್ನ ತಲೆಗೆ ಬಂದಿದ್ದು ನಾಗರಹೊಳೆ ಅನ್ನೋ ಚಿತ್ರ. ಅಲ್ಲಿಯವರೆಗೆ ಮಕ್ಕಳ ಪ್ರಧಾನ ಚಿತ್ರಗಳೇ ಇರಲಿಲ್ಲ. ಅದನ್ನು ನಾನು ಉಪಯೋಗ ಮಾಡಿಕೊಂಡೆ. ಸಿನೆಮಾ ಕೂಡ ಅದ್ಬುತ ಯಶಸ್ಸು ಖಂಡಿತು.

ಪ್ರ: ಮಕ್ಕಳನ್ನು ಹಾಕಿಕೊಂಡು ಸಿನೆಮಾವನ್ನು  ಮಾಡುವ ಸೀರಿಸ್‍ನ್ನು  ಪ್ರಾಂರಂಭ ಮಾಡಿದಿರಿ.ಆ ಸಿನೆಮಾಗಳೆಲ್ಲವೂ ಯಶಸ್ಸು ಕಂಡವು.ಎಲ್ಲಾ  ಸಿನೆಮಾಗಳು ಗೆಲ್ಲುತ್ತೆ  ಅಂತಾ ಅನ್ಸಿತ್ತಾ?
ಪ್ರತಿಯೊಬ್ಬ ನಿರ್ದೇಶಕನು ತನ್ನ ಸಿನೆಮಾ ಗೆಲ್ಲಬೇಕು ಅಂತಾನೇ ಕೆಲಸ ಮಾಡುತ್ತಾನೆ. ನಾನು ಅದನ್ನೇ ಮಾಡಿದೆ ಜನ ಒಪ್ಪಿದರು. ಆ ಸಿನೆಮಾ ಅದ್ಬುತ ಯಶಸ್ಸಿನೊಂದಿಗೆ ಆ ಸೀರಿಸ್‍ಗೆ ಅರ್ಥ ಸಿಕ್ಕಿತು.

ಪ್ರ: ಬಂಧನ, ಮುತ್ತಿನಹಾರ, ಮುಂಗಾರಿನ ಮಿಂಚು ಈ ಮೂರು ಚಿತ್ರಗಳಿಗೆ ಸಮನಾಗಿ “ರಜತ್ ಕಮಲ್” ಪ್ರಶಸ್ತಿ ಬಂದವು. ಪ್ರಶಸ್ತಿಗಳು ಸಿಗಬಹುದು ಅಂತಾ ತಾವು ಅದುಕೊಂಡಿದ್ರಾ?
ಪ್ರಶಸ್ತಿಗಾಗಿ ನಾನು ಎಂದು ಸಿನೆಮಾಗಳನ್ನು ಮಾಡಿಲ್ಲ. ಜನರಿಗೆ ಇಷ್ಟ ಆಗಿ ಅವರು ಕೊಟ್ಟ ಪ್ರೀತಿಯ ಉಡುಗೊರೆ ಅದು. ಬಂಧನ ಮತ್ತು ಅಂತ ಚಿತ್ರಗಳು ಆಗಿನ ಕಾಲಕ್ಕೆ 25 ವಾರಗಳು ಪ್ರದರ್ಶನ  ಕಂಡಿದ್ದವು. ಆ  ಮೂರು ಚಿತ್ರಗಳಿಗೆ ರಜತ ಕಮಲ್ ಪ್ರಶಸ್ತಿ ಸಿಕ್ಕಿದ್ದು ನನ್ನ ಸಿನೆಮಾ ರಂಗದ ಅದ್ಬುತ ಕ್ಷಣಗಳಲ್ಲಿ ಒಂದು.

ಪ್ರ: “ಅಂತ” ಅನ್ನೋ ಅದ್ಬುತ ಚಿತ್ರವನ್ನು ಕನ್ನಡ ಚಿತ್ರರಂಗಕ್ಕೆ ಕೊಟ್ರಿ.ಮತ್ತೆ “ಅಂತ”-2  ಮಾಡ್ತಿರಂತ  ವದಂತಿಗಳು ಕೇಳಿ ಬಂದವು ಇದರ ಬಗ್ಗೆ ಏನು ಹೇಳ್ತಿರಾ?
ಖಂಡಿತಾ ಇಲ್ಲ.ಅದೆಲ್ಲಾ ಸುಳ್ಳು.ನಾನು ಒಂದು ಹೆಸರಿನಲ್ಲಿ ಒಂದು ಸಿನೆಮಾ  ಮಾಡಿದರೆ  ಮತ್ತೆ  ಆ  ಹೆಸರಿನ ಇನ್ನೊಂದು ಸಿನೆಮಾ ಮಾಡಲ್ಲ. ಅದು ನನಗೆ ಇಷ್ಟನೂ ಆಗಲ್ಲ.

ಪ್ರ: ನಿಮ್ಮ  “ಅಂತ”  ಚಿತ್ರದ ಹೆಸರನ್ನು ಇಟ್ಟುಕೊಂಡು ಅಂತ-2 ಚಿತ್ರವನ್ನು ಮಾಡಬೇಕೆಂದು ಕನ್ನಡದ ಪ್ರಮುಖ ನಾಯಕರು ಪ್ರಯತ್ನ ಮಾಡುತ್ತಿದ್ದಾರೆ. ಆ ಹೆಸರನ್ನು ಇಟ್ಟುಕೊಂಡು ಚಿತ್ರವನ್ನು ಮಾಡಿದರೆ ನಿಮ್ಮದು ಏನಾದರೂ ಆಕ್ಷೇಪಣೆಗಳು ಏನಾದರೂ ಇದೆಯೇ?
ಖಂಡಿತಾ ಇಲ್ಲ. ಯಾರು ಯಾವ ಶಿರ್ಷಿಕೆಯಾದರೂ ಇಟ್ಟುಕೊಳ್ಳಬಹುದು.ಇದರಿಂದ ನನಗೆ ಖುಷಿನೇ ಹೆಚ್ಚಾಗುತ್ತೆ. ಕೆಲ ದಿನಗಳ ಹಿಂದೆ ಸುದೀಪ್ ಅವರು “ಕನ್ವರ್‍ಲಾಲ್” ಅನ್ನೋ ಶಿರ್ಷಿಕೆಯನ್ನು ಇಟ್ಟುಕೊಂಡು ಚಿತ್ರವನ್ನು ಮಾಡುತ್ತೆನೆ ಅಂದ್ರು ಅದಕ್ಕೆ ನಾನು ದಾರಾಳವಾಗಿ ಒಪ್ಪಿಕೊಂಡೆ.

ಪ್ರ: ಕೇವಲ ಹಿರೋಗಳನ್ನೇ ಹಾಕಿಕೊಂಡು ಚಿತ್ರಗಳನ್ನು ಗೆಲ್ಲಬಹುದು ಅನ್ನೋ ಮಾತನ್ನು ಸುಳ್ಳು ಮಾಡಿ, ಮಲ್ಟಿ ಸ್ಟಾರ್ಸ್‍ನ  ಹಾಕಿಕೊಂಡು ಚಿತ್ರವನ್ನು ಗೆದ್ದು ತೋರಿಸಿದ್ರಿ ಇದರ ಬಗ್ಗೆ ನಿಮ್ಮ ಅಭಿಪ್ರಾಯ?
ನಾನು ಪ್ರತಿಯೊಂದು ಚಿತ್ರವನ್ನು ಹೊಸದಾಗಿ, ವಿಭಿನ್ನವಾಗಿ  ಕೋಡಬೇಕು  ಅಂತಾ  ಅಂದುಕೊಂಡು ಚಿತ್ರವನ್ನು ಮಾಡಿದೆ ಜನರು ಅದನ್ನು ಮುಕ್ತ ಮನಸ್ಸಿನಿಂದ ಸ್ವಿಕರಿದರು.

ಪ್ರ: ಮತ್ತೆ ಕಾಮಿಡಿ ಚಿತ್ರಗಳ ಸೀರಿಸ್‍ನ್ನು  ಪ್ರಾರಂಭ ಮಾಡಿದಿರಿ. ಅಂತಹ ಸಿನೆಮಾಗಳು ಸಹ ಜನರಿಗೆ ಹಿಡಿಸಿ, ರಾಜ್ಯ ಪ್ರಶಸ್ತಿಗಳನ್ನು ಸಹಾ ಬಾಚಿಕೊಂಡವು ಅದರ ಬಗ್ಗೆ ಏನು ಹೇಳುವಿರಿ ಸರ್?
ನನ್ನ ಸಿನೆಮಾ ರಂಗ ಪಯಣದಲ್ಲಿ ನಾನು ಯುದ್ದ ಸಿನೆಮಾಗಳನ್ನು ಮಾಡಿದೆ, ಸಾಹಸ  ಸಿನೆಮಾಗಳನ್ನು ಮಾಡಿದೆ, ಪತ್ತೆದಾರಿ ಸಿನೆಮಾಗಳನ್ನು ಸಹಾ ಮಾಡಿದೆ ಎಲ್ಲಾ ರೀತಿಯ ಸಿನೆಮಾಗಳನ್ನು ಮಾಡಿದ ನನಗೆ ಹಾಸ್ಯದ ಬಗ್ಗೆ ಸಿನೆಮಾಗಳನ್ನು ಯಾಕೆ ಚಿತ್ರಗಳನ್ನು ಮಾಡಬಾರದು ಅನಿಸಿತು  ಮತ್ತು ಆ ಸಿನೆಮಾಗಳು ಬರುವುದಕ್ಕಿಂತ ಮೊದಲು ಹಾಸ್ಯವನ್ನು ಕೀಳಾಗಿ ಅಸಹ್ಯವಾಗಿ ಹಾಸ್ಯವನ್ನು ಮಾಡುವಂತಹ ಒಂದು ಪದ್ದತಿ ಇತ್ತು. ಅದಕ್ಕಾಗಿ ನಾನು  ಹಾಸ್ಯವನ್ನು ಜನರಿಗೆ  ಹೆಚ್ಚು ಕೊಡುವುದರ ಜೊತೆಗೆ ಸಾಂಸಾರಿಕ ಜೀವನದ ಸಂದೇಶಗಳನ್ನು ಕೋಡುವ ಹಾಸ್ಯ ಚಿತ್ರಗಳನ್ನು ಮಾಡಿದೆ. ನಾನು ಮಾಡಿದ ಆ ಮೂರು ಚಿತ್ರಗಳನ್ನು ಎಲ್ಲಾ ವರ್ಗದವರು ಕುಳಿತು ಯಾವುದೇ ಮುಜುಗರವಿಲ್ಲದೇ ನೋಡುವಂತಹ ಚಿತ್ರಗಳು ಅವಾಗಿದ್ದವು. ಅಂತಹ ಚಿತ್ರಗಳಿಗೆ ರಾಜ್ಯ ಪ್ರಶಸ್ತಿಗಳು ಸಹಾ ಸಿಕ್ಕವು.

ಪ್ರ: ಮುತ್ತಿನ ಹಾರ ಸಿನೆಮಾವನ್ನು ಆಗಿನ ಕಾಲದಲ್ಲಿ ಮರಳು ಭೂಮಿಯಲ್ಲಿ ಸಿನೆಮಾ ಮಾಡಿದಿರಿ ಆ ಸಂದರ್ಭದಲ್ಲಿ ಚಿತ್ರದ  ನಾಯಕಿ ಸುಹಾಸಿನಿ ಅವರು ನಿಮಗೆ ಬಹಳ ತೊಂದರೆ ಕೊಟ್ಟಿದ್ದರು ಅಂತ ಹೇಳ್ತಾರೆ ಇದು ನಿಜಾನಾ?
ಸಿನೆಮಾ ಮಡುವುದು ಸವಾಲಿನ ಕೆಲಸ ಆದರೆ ನೊಡುವುದು ಸುಲಭ. ಆ ಸಂದರ್ಭದಲ್ಲಿ ನಾವು ಕಾಶ್ಮೀರದಿಂದ 2 ಕಿಲೋ ಮೀಟರ್ ನೆಡೆದುಕೊಂಡು ಹೋದರೆ ಆ ನಂತರ ಸಿಗುವುದು ಮರಳು ಭೂಮಿ. ಕುಡಿಯಲು ನೀರು ಸಿಗದ ಆ ಜಾಗದಲ್ಲಿ  ನಾವು  ಚಿತ್ರೀಕರಣ  ಮಾಡುವುದು ಎಂದರೆ ಸುಲಭದ ಮಾತಾಗಿರಲಿಲ್ಲ. ಮೈನಸ್ 6 ಡಿಗ್ರಿ ಸಿಲ್ಸಿಯಸ್ ಚಳಿಯಿತ್ತು. ಬಿಸಿಲು ಕೂಡ ಅಷ್ಟೇ ಭಯಂಕರವಾಗಿತ್ತು ಅಂತಹ ಸಂದರ್ಭದಲ್ಲಿ ಸುಹಾಸಿನಿಯವರಿಗೆ ಸ್ವಲ್ಪ ತೊಂದರೆ ಆಯಿತು. ಆದರೆ ಆ ನಂತರ ಅವರೇ ಹೆಚ್ಚು ಕಾಳಜಿಯಿಂದ ಸಿನೆಮಾ ಮಾಡಿ ಮುಗಿಸಿದರು.

ಪ್ರ: ಬಂಧನ ಚಿತ್ರವನ್ನು ಅಂಬರೀಶ್ ಅವರು ಮಾಡಬೇಕು ಅಂತ ಬಯಸಿದ್ದರು. ಆದರೆ ವಿಷ್ಣುವರ್ದನ್ ಅವರು ಮಾಡಿದರು.ಅಂತ ಸಿನೆಮಾವನ್ನು ವಿಷ್ಣುವರ್ದನ್ ಮಾಡಲು ಬಯಸಿದ್ದರು ಆದರೆ ಅಂಬರಿಶ್ ಮಾಡಿದರು. ಯಾಕೆ ಹೀಗಾಯಿತು?
ನಾವು ಅಂದುಕೊಂಡಾಗೆ ಏನು ಆಗಲ್ಲ. ಯಾರು ಏನು ಮಾಡಬೇಕು ಅಂತ ಯಾವುದೋ ಕಾಣದ ಶಕ್ತಿ ಮೊದಲೇ ತೀರ್ಮಾನ ಮಾಡಿರುತ್ತೆ. ಮತ್ತು ಪ್ರತಿಯೊಂದಕ್ಕೂ ಋಣಾನುಬಂಧ ಇರಬೇಕು. ಕಾಲ ಕೂಡಿಬರಬೇಕು ಬಹುಶಃ ಆ ಸಂದರ್ಭದಲ್ಲಿ ಈ ರೀತಿ ಅಗಬೇಕು ಅಂತ ಇತ್ತೇನೋ ಗೊತ್ತಿಲ್ಲ ಅದು ಹಾಗೇ ಆಯಿತು.

ಪ್ರ:ಇಡೀ ಕುಟುಂಬ ಸುಮಾರು 75 ವರ್ಷಗಳಿಂದ ಸಿನೆಮಾ ರಂಗಕ್ಕಾಗಿ ದುಡಿಯುತ್ತಿದ್ದೀರ ಯಾವತ್ತೂ ಸಿನೆಮಾ ಸಾಕು ಅಂತ  ಅನ್ಸಿಲ್ವಾ?
ಇಲ್ಲಾ ಖಂಡಿತಾ ಇಲ್ಲ ಸಿನೆಮಾ ನಮ್ಮ ಕುಟುಂಬದಿಂದ ಬಂದಿದ್ದು. ನಾವು ಅದನ್ನು ಇಂದಿಗೂ ಹಾಗೆಯೇ ಕಾಪಾಡಿಕೊಂಡು ಬಂದ್ದಿದೇವೆ. ಮುಂದೆನೂ ನಾವು ಸಿನೆಮಾಗಾಗಿ ದುಡಿಯುತ್ತೇವೆ.

ಪ್ರ: ಸಿನೆಮಾ ರಂಗಕ್ಕೆ ಬಂದು ಸುವರ್ಣ ಮಹೊತ್ಸವನ್ನು ಆಚರಿಸಿದ್ದೀರಿ, ಈ ದೀರ್ಘ  ಪಯಣದ ಬಗ್ಗೆ ನಿಮ್ಮ ಮನದ ಮಾತು?
ಪ್ರತಿಯೊಂದು ಕ್ಷೇತ್ರದಲ್ಲೂ  ಏರು ಪೇರುಗಳು, ತಿರುಳುಗಳು, ದಿಕ್ಕುಗಳು, ಸಹಜವಾಗಿರುತ್ತದೆ. ಅದರ ಬಗ್ಗೆ ನಾವು ತಲೆ ಕೆಡಿಸಿಕೊಳ್ಳಬಾರದು. ಅದರಲ್ಲೂ ಸಿನೆಮಾ ರಂಗದಲ್ಲಿರುವ ನಾವು ಅದರ ಯೋಚನೆ ಕೂಡ ಮಾಡಬಾರದು.

ಪ್ರ: ನಿಮ್ಮ ಮುಂದಿನ ಸಿನೆಮಾ ಯಾವುದು? ಚಿತ್ರದ ನಾಯಕನಾಗಿ ನಟಿಸಲು ಯಾರಿಗೇ ಅವಕಾಶ ಕೊಟ್ಟಿದಿರಾ?
ಕತೆಗಳನ್ನು ಸಿದ್ದ ಮಡುತ್ತಾ ಇದ್ದೀನಿ. ಒಂದು “ಮೈಗ್ರೇಷನ್” ಗೆ ಸಂಬಂಧಪಟ್ಟ ಹಾಗೆ, ಇನ್ನೊಂದು ಫ್ಯಾಮಿಲಿ ಕುರಿತಾದದ್ದು.ಇನ್ನು ನಾಯಕರ  ಆಯ್ಕೆ  ಅಂತಿಮವಾಗಿಲ್ಲ. ಕತೆ  ಪೂರ್ಣ ಸಿದ್ದವಾದರೆ ಕತೆಗೆ ತಕ್ಕಂತೆ ನಾಯಕರ ಆಯ್ಕೆಯನ್ನು ಮಾಡುತ್ತೆನೆ.

ಪ್ರ: ನಿಮ್ಮ ಸಾಧನೆಯನ್ನು ಗುರ್ತಿಸಿ “ಆಳ್ವಾಸ್ ನುಡಿಸಿರಿ” ಪ್ರಶಸ್ತಿಯನ್ನು ನೀಡುತ್ತಿರುವ ಆಳ್ವಾಸ್ ಶಿಕ್ಷಣ ಸಂಸ್ಥೆಯ ಬಗ್ಗೆ ನಿಮ್ಮ ಅಭಿಪ್ರಾಯ?
ಒಂದು ಕ್ಷೇತ್ರದಲ್ಲಿ  ಸಾಧನೆ  ಮಾಡಿದವರನ್ನು  ಗುರ್ತಿಸಿ ಈ ಆಳ್ವಾಸ್ ಶಿಕ್ಷಣ ಸಂಸ್ಥೆ  ನೀಡುತ್ತಿರುವ  ಪ್ರಶಸ್ತಿಯನ್ನು ಪಡೆಯುವುದಕ್ಕೆ   ತುಂಬಾ ಸಂತೋಷವಾಗುತ್ತಿದೆ. ಮತ್ತು ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿ ಇನ್ನೂ ಉತ್ತಮ ಸಿನೆಮಾಗಳನ್ನು ಮಾಡಲು ಪ್ರೇರಣೆ ನೀಡುತ್ತವೆ.

ಪ್ರ: ಕನ್ನಡ ನಾಡು, ನುಡಿ, ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನದ ಬಗ್ಗೆ ನಿಮ್ಮ ಮನದ ಮಾತು?
ಸ್ನೇಹಿತರಾದ ಆಳ್ವರು ಮಾಡುತ್ತಿರುವ ಈ ಕೆಲಸ ನಿಜಕ್ಕೂ ಶ್ಲಾಘನೀಯ. ಎಲ್ಲಾ  ಕನ್ನಡಿಗರ ಸಮೂಹವನ್ನು ಒಂದೆಡೆ ಸೇರಿಸಿ ನೆಲ, ಜಲ, ಸಾಹಿತ್ಯದ ಬಗ್ಗೆ ಅಭಿಮಾನವನ್ನು ಮೂಡಿಸಿ ಕನ್ನಡದ ಕಿಚ್ಚನ್ನು ಸಾರಿ ಹೇಳುವ ಈ ಕಾರ್ಯ ತುಂಬಾ  ಖುಷಿಕೊಡುವ ವಿಷಯ.ಎಲ್ಲಾ ಕಡೆ ಇಂತಹ ಸಮ್ಮೇಳನ ನೆಡೆಯುತ್ತವೆ ಆದರೆ ಇದು ತುಂಬಾ ವಿಭಿನ್ನವಾದದ್ದು.

1 ಟಿಪ್ಪಣಿ Post a comment
  1. sonali
    ಡಿಸೆ 1 2015

    Modulu Kannada spashta mathadi ya type maadi..thu full vyakarana dosha

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments