ವಿಷಯದ ವಿವರಗಳಿಗೆ ದಾಟಿರಿ

Archive for

1
ಡಿಸೆ

ಅಸಹಿಷ್ಣುತೆ

– ಎಸ್.ಎನ್ ತಾರನಾಥ

ಅಸಹಿಷ್ಣುತೆಈ ಮೇಲಿನ ವಾಕ್ಯಗಳನ್ನು ಎಲ್ಲ ಪತ್ರಿಕೆಗಳಲ್ಲಿ ಓದಿರುತ್ತಿರಿ.ಟಿವಿ ಚಾನೆಲ್ ಗಳಲ್ಲಿ ನೋಡಿರುತ್ತಿರಿ.ಇದನ್ನು ಬಿಟ್ಟು ಎಲ್ಲಿ? ನಾ ಕಾಣೆ. ಹಾಗಾದರೆ ಕೆಲವು ಬುದ್ದಿಜೀವಿಗಳು ಪ್ರಗತಿಪರ ಸಾಹಿತಿಗಳು ಎಲ್ಲ ಮಹಾನ್ ಗಳು ನಿದ್ದೆಯಲ್ಲೂ ಬಡಬಡಿಸುವ ಈ ಪದದ,ವಿಷಯದ ಸೃಷ್ಟಿಕರ್ತ ಯಾರು? ಯಾವಾಗ ಭಾರತದ ಮಹಾನ್ ಸಾಹಿತಿಗಳು ತಮ್ಮ ತಮ್ಮ ಪ್ರಶಸ್ತಿ ಗಳನ್ನೂ ಸರ್ಕಾರಕ್ಕೆ ವಾಪಸ್ಸು ಮಾಡಿ ಮುಖ್ಯವಾಹಿನಿಗೆ (ಟಿ.ವಿ ವಾಹಿನಿ) ಬಂದರೋ, ಅಂದು ಸಾಮಾನ್ಯ ನಾಗರಿಕರಿಗೆ ಗೊತ್ತಾಯಿತು.  “ನಮ್ಮ ದೇಶದೊಳಗೆ ಏನೋ ಇದೆ. ಅದನ್ನು ನಮ್ಮ ಸಂಶೋಧಕರು ಹುಡುಕಿದ್ದಾರೆ “.  ಕಲ್ಬುರ್ಗಿ ಸೇರಿದಂತೆ ಕೆಲವು ವಿಚಾರವಾದಿಗಳ ಹತ್ಯೆ ಹಾಗೂ ಕೆಲವು ಸ್ಥಳೀಯ ಘಟನೆಗಳ ನಂತರ ಶುರುವಾದ ಈ  ವರಾತ ಇನ್ನು ನಿಂತಿಲ್ಲ. ಈ ಘಟನೆಗಳಿಗೆ ಅಲ್ಲಿನ ಸರ್ಕಾರಗಳನ್ನು ಹೊಣೆ ಮಾಡುವುದು ಬಿಟ್ಟು ಕೇಂದ್ರ ಸರ್ಕಾರವನ್ನು ದೂಷಿಸಲು ಶುರು ಹಚ್ಚಿಕೊಂಡರು. ಅವರು ರಾಜ್ಯಸರ್ಕಾರಗಳ  ಬೆನ್ನುಬೀಳಲಿಲ್ಲ ಏಕೆ ಎನ್ನುವುದು ಬಯಲ ಸತ್ಯ. ಅಲ್ಲಿರುವುದು ಅವರ ಕೃಪಪೋಷಿತ ಸರ್ಕಾರಗಳು  ಹಾಗು ಅಲ್ಲಿ ಹೋರಾಟ ಮಾಡಿದರೆ ಮೈಲೇಜ್ (ಜನಪ್ರಿಯತೆ) ಸಿಗುವುದಿಲ್ಲ. ಇಲ್ಲಿಂದ ನಂತರ ಇದು ವಿಪರೀತಕ್ಕೆ ಹೋಗಿ ಈ ಪದಕ್ಕೆ ತಮ್ಮ-ತಮ್ಮ ಮನಸ್ಸಿಗೆ ಸರಿ ಹೊಂದುವಂಥಹ ಹೇಳಿಕೆ ನೀಡಲು ಆರಂಭಿಸಿದರು.

ಹಿಂದು ಮತ್ತು ಇಂದು ಜಗತ್ತಿಗೆ ಭಾರತವೆಂದರೆ ಮೊದಲು ಕಾಣುವುದು ವಿವಿಧತೆಯಲ್ಲಿ ಏಕತೆ. ಜಗತ್ತಿಗೆ “ವಸುದೈವ ಕುಟುಂಬಕಂ” ಎಂದು ಹೇಳಿಕೊಟ್ಟ ಹಾಗು ಅದನ್ನು ಪಾಲಿಸಿದ ದೇಶ. ಕ್ರಿಸ್ತಶಕಕ್ಕೆ ಮೊದಲೇ ನನ್ನ ದೇಶ ಜಗತ್ತಿಗೆ ವಿಶ್ವಗುರು ಆಗಿತ್ತು. ಅತ್ಯುತ್ತಮ ಹಾಗು ಪ್ರಾಚೀನ  ನಾಗರಿಕತೆ ಹೊಂದಿತು. ಈ ದೇಶದ  ಹೆಮ್ಮೆ  ಎಂದರೆ ಜ್ಞಾನ ಪ್ರಸಾರ ಮತ್ತು ಶಾಂತಿ.ನಳಂದ,ತಕ್ಷಶಿಲೆ ಮೊದಲಾದ ವಿದ್ಯಾಲಯಗಳನ್ನೂ ಹೊಂದಿದ ದೇಶ.ಕತ್ತಿ ಹಿಡಿದು ಬಂದ ಅಲೆಕ್ಸಾಂಡರನಿಗೆ ಅದರಲ್ಲೇ ಉತ್ತರ ಕೊಟ್ಟಿತು.ಆಶ್ರಯ ಬೇಡಿ ಬಂದ ಪಾರ್ಸಿಗಳಿಗೆ ಆಶ್ರಯ ನೀಡಿತು. ಬೌದ್ದ  ಜೈನ ಧರ್ಮಗಳಿಗೆ ಜನ್ಮ ನೀಡಿದ ದೇಶ.ಜಗತ್ತಲ್ಲಿ ಶಾಂತಿಯಿಂದ ಧರ್ಮ ಪ್ರಸಾರ ಮಾಡಿದ ದೇಶ.ಸಾವಿರ ವರ್ಷಗಳ ಪರಕೀಯರ ಅಕ್ರಮಣ ಎದುರಿಸಿ ನಿಂತ ದೇಶ.  ಕತ್ತಿ-ತಕ್ಕಡಿ ಹಿಡಿದು ಬಂದವರು ಹಾಲಲ್ಲಿ ಸಕ್ಕರೆಯಂತೆ ಬೆರೆತು ಬಾಳುವ ದೇಶ . ಈ ದೇಶದ ಮೂಲಮಂತ್ರವೇ ಅತಿಥಿ ದೇವೋಭವ.  ಇಂದಿಗೂ ವಿವಿಧ ಧರ್ಮಗಳ ನಡುವೆ ಸಂಘರ್ಷ ನಡೆಯುತ್ತಿರುವ ಸೊಮಾಲಿಯ ಮೊದಲಾದ ದೇಶಗಳು, ವರ್ಣಭೇದದಿಂದ ನಲುಗಿರುವ ಪಾಶ್ಚಿಮಾತ್ಯ ದೇಶಗಳು ಮತ್ತು ಸ್ವಧರ್ಮಿಯರ ನಡುವೆಯೇ ಕದನ ನಡೆಯುತ್ತಿರುವ ಅರಬ್ ರಾಷ್ಟ್ರಗಳ ನಡುವೆ ಇಂಥದೊಂದು ದೇಶವಿದೆಯೆಂದರೆ ಅದು ವಿಶ್ವಗುರು ಭಾರತ ಹಾಗೂ ಅದರ ಸಹಿಷ್ಣುತಾ ಮನೋಭಾವ.
ಮತ್ತಷ್ಟು ಓದು »