ವಿಷಯದ ವಿವರಗಳಿಗೆ ದಾಟಿರಿ

Archive for

18
ಡಿಸೆ

ಪ್ರಗತಿಪರರ ಪಾಲಿನ ಬಿಸಿತುಪ್ಪ ‘ಪ್ರೊ.ಬಾಲು’

– ರಾಕೇಶ್ ಶೆಟ್ಟಿ

ಪ್ರೊ.ಬಾಲಗಂಗಾಧರಜಿ.ಎನ್ ನಾಗರಾಜ್ ಅವರು ಪ್ರೊ.ಬಾಲಗಂಗಾಧರರು ಡೈಲಿಯೋ ಎಂಬ ವೆಬ್ ತಾಣದಲ್ಲಿ ಬರೆದ ಲೇಖನದಿಂದ ತಮಗೆ ಬೇಕಾದ ಸಾಲುಗಳನ್ನು ಹೆಕ್ಕಿಕೊಂಡು,ತಮಗೆ ಬೇಕದಾಂತೆ ಅದನ್ನು ಅನುವಾದಿಸಿಕೊಂಡು ತಮ್ಮ ಫೇಸ್ಬುಕ್ ವಾಲಿನಲ್ಲಿ ಹಾಕಿಕೊಂಡಿದ್ದನ್ನು ಗೆಳೆಯರು ಗಮನಕ್ಕೆ ತಂದರು.ಕಮ್ಯುನಿಸ್ಟ್ ಇತಿಹಾಸಕಾರರು ಈ ದೇಶದ ಇತಿಹಾಸಕ್ಕೆ ಎಸಗಿರುವ ಅಪಚಾರವನ್ನು ಅರುಣ್ ಶೌರಿಯವರ ಎಮಿನೆಂಟ್ ಹಿಸ್ಟಾರಿಯನ್ಸ್ ಕೃತಿಯಲ್ಲಿ ಓದಿ ತಿಳಿದಿದ್ದೆ. ಈಗ ಕಣ್ಣ ಮುಂದಿರುವ ಲೇಖನವೊಂದನ್ನು ಕಮ್ಯುನಿಸ್ಟ್ ಮನಸ್ಸೊಂದು ಹೇಗೆ ತಿರುಚಿ ಜನರ ಮುಂದಿಟ್ಟು ಪ್ರಚೋದಿಸಬಲ್ಲದು ಎಂಬುದಕ್ಕೊಂದು ಉದಾಹರಣೆ ಸಿಕ್ಕಿತು.

“ಭಾರತದಲ್ಲಿ ಜಾತಿಯೇ ಇಲ್ಲವೆಂಬ ಸಂಶೋಧಕ” ಎಂದು ಬಾಲು ಅವರನ್ನು ಕರೆಯುವ ಮೂಲಕ ಒಂದು ಸುಳ್ಳಿನಿಂದಲೇ ಲೇಖನವನ್ನು ಹೇಗೆ ಶುರು ಮಾಡಬೇಕು ಎಂಬುದನ್ನು ಮಾನ್ಯ ನಾಗರಾಜ್ ಅವರು ತೋರಿಸಿಕೊಟ್ಟಿದ್ದಾರೆ.ಬಾಲು ಅವರ ವೇಷ ಕಳಚಿ ತಮ್ಮ ನಿಜ ಕುರೂಪದಲ್ಲಿ ಕಾಣಿಸಿಕೊಂಡಿದ್ದಾರಂತೆ.ಸ್ವಾಮಿ ನಾಗರಾಜ್ ಅವರೇ ಬಾಲು ಅವರು ಮಾತುಗಳನ್ನು ಎರಡು ವರ್ಷಗಳಿಂದಲೂ ಕೇಳುತಿದ್ದೇನೆ ಅದು ಮೊದಲಿನಂತೆಯೇ ಇದೆ.ತಾವು ಕಂಡುಕೊಂಡ ಸತ್ಯವನ್ನು ಹಿಂದೆ ಮುಂದೆ ನೋಡದೇ ಹೇಳುವಷ್ಟು ಎದೆಗಾರಿಕೆ ಮತ್ತು ಪ್ರಾಮಾಣಿಕತೆ ಅವರಲ್ಲಿದೆ. ಅದಿಲ್ಲದಿದ್ದರೇ, ಮೋದಿಯವರ ಬೆಂಬಲಿಗರ ನಡುವೆ ನಿಂತು ಸ್ವಚ್ಚ ಭಾರತ ಅಭಿಯಾನವನ್ನು ಅವರು ಟೀಕಿಸುತ್ತಿರಲಿಲ್ಲ.ಹಿಂದೂ-ಬೌದ್ಧ ಧಾರ್ಮಿಕ ಸಮಾವೇಶದಲ್ಲಿ ನಿಂತು ಅಲ್ಲಿನ ಸಭಿಕರನ್ನು ಮತ್ತು ಸಹಭಾಷಣಕಾರರನ್ನು ನೇರವಾಗಿಯೇ ನೀವು ಕ್ರಿಶ್ಚಿಯನ್ನರಂತೆಯೇ ಯೋಚಿಸುತ್ತೀರಿ ಅಂತ ಹೇಳುವ ಧೈರ್ಯ ಮಾಡುತ್ತಿರಲಿಲ್ಲ.ಸುಳ್ಳನ್ನು ಸಕ್ಕರೆ ಪಾಕದಲ್ಲಿ ಅದ್ದಿ ಜನರನ್ನು ಯಾಮಾರಿಸುವ ಸೆಕ್ಯುಲರ್ರುಗಳಿಗೆ,ಹಿಪೋಕ್ರೈಟುಗಳಿಗೆ ಬಾಲು ಅವರ ನೇರ ಮಾತುಗಳು ಭರ್ಜಿಯಂತೆ ಇರಿಯುವುದು ಸಹಜವೇ.

Read more »

18
ಡಿಸೆ

ಭಾರತದಲ್ಲಿ ಯಾವ ರೀತಿಯ ಅಸಹಿಷ್ಣುತೆ ಬೆಳೆಯುತ್ತಿದೆ?

ಮೂಲ: ಪ್ರೊ. ಎಸ್.ಎನ್ ಬಾಲಗಂಗಾಧರ
ಕನ್ನಡಕ್ಕೆ : ಇಂಚರ

ಪ್ರೊ.ಬಾಲಗಂಗಾಧರಇತ್ತೀಚೆಗೆ ಭಾರತದ ಸಾಮಾಜಿಕ ವಾತಾವರಣದಲ್ಲಿ ಅಸಹಿಷ್ಣುತೆ ಹೆಚ್ಚಿದೆ ಎಂಬ ಧ್ವನಿ ಭಾರತದ ಹಲವು ಕಡೆಗಳಿಂದ ಜೋರಾಗಿ ಕೇಳಿಬರುತ್ತಿವೆ. ಪಾಶ್ಚಾತ್ಯ ಮಾಧ್ಯಮಗಳು ಈ ಕೀರಲು ಕೂಗುಗಳನ್ನೇ ಹಿಗ್ಗಿಸಿ, ಬೂದುಗಾಜಿನಿಂದ ನೋಡುತ್ತಿರುವುದೂ ಅಲ್ಲದೆ, ಪ್ರಧಾನಿ ಮೋದಿಯವರ ಬ್ರಿಟನ್ ಭೇಟಿಯ ವಿಚಾರವನ್ನು ಕೂಡ ಇದೇ ನೆಲೆಗಟ್ಟಿನಲ್ಲಿ ವ್ಯಂಗ್ಯ ಮಾಡಲು ಬಳಸುತ್ತಿವೆ. ಭಾರತೀಯರ ಈ ಅಸಹಿಷ್ಣುತೆಯ ಮಂತ್ರವನ್ನು ಒಂದು ಪಕ್ಷ ಅರ್ಥ ಮಾಡಿಕೊಂಡರೂ, ಯುರೋಪಿಯನ್ನರು ಏಕೆ ಇದೇ ಮಂತ್ರವನ್ನು ಪುನರುಚ್ಛರಿಸುತ್ತಿದ್ದಾರೆ? ಎಂಬದನ್ನು ಯೋಚಿಸಬೇಕು. ಈ ಘಟನೆಯನ್ನು ಅವಲೋಕಿಸಿದಾಗ, ಇಲ್ಲಿ ಕಾಡುತ್ತಿರುವ ಅಸಹಿಷ್ಣುತೆಯ ಕುರಿತು ಇರುವ ಅಸ್ಪಷ್ಟತೆ! ಇವೆಲ್ಲವೂ ಒಂದು ಒಗಟಿನ ಹಾಗೆಯೇ ಕಾಣುತ್ತದೆ.

ಬಹುಶಃ ಇಲ್ಲಿ ನಡೆದಿರುವ ಕೆಲವಾರು ಕೊಲೆಗಳ ಕುರಿತು ಪ್ರತಿಭಟಿಸಲು ಅಸಹಿಷ್ಣುತೆಯ ಕೂಗನ್ನು ಒಂದಷ್ಟು ಜನರು ಎಬ್ಬಿಸಿರಬಹುದು. ಹಾಗೆಯೇ ಒಂದಷ್ಟು ಜನರ ಕೊಲೆಗಳಾಗಲು, ಆ ವ್ಯಕ್ತಿಗಳು ಒಂದಷ್ಟು ಜನರ ಅಸಹಿಷ್ಣುತೆಗೆ ಗುರಿಯಾಗಿದ್ದದು ಕೂಡ ಕಾರಣವಿರಬಹುದು. ಆದರೆ ಜನರು ಮಾತ್ರ ಭಾರತದಲ್ಲಿ ಹೆಚ್ಚುತ್ತಿರುವ ಅಪರಾಧಗಳ ಕುರಿತು ಪ್ರತಿಭಟಿಸುತ್ತಿಲ್ಲವೆಂಬುದು ಹಾಗೂ ಭಾರತ ಇಂತಹ ಅಪರಾಧಗಳಲ್ಲಿ ಪ್ರಪಂಚದಲ್ಲಿ ಮುಂಚೂಣಿಯಲ್ಲಿಲ್ಲ ಎಂಬುದು ಕೂಡ ಅಷ್ಟೇ ಸತ್ಯ ಸಂಗತಿ.

ನಿರ್ದಿಷ್ಟ ವ್ಯಕ್ತಿಗಳ ಕೊಲೆಗಳಾದಾಗ ಮಾತ್ರ ದೇಶದಲ್ಲಿ ಅಸಹಿಷ್ಟುತೆ ಹೆಚ್ಚುತ್ತಿದೆ ಎಂಬ ಕೂಗು ಕೇಳಿ ಬರುತ್ತಿದೆ. ಉದಾ: ಕಲ್ಬುರ್ಗಿ ಅವರ ಕೊಲೆ ಈ ಅಸಹಿಷ್ಟುತೆಯ ಕೂಗನ್ನು ಹುಟ್ಟುಹಾಕಿತು. ಆದರೆ ಕಲ್ಬುರ್ಗಿಯವರು ಕೂಡ ಅನೇಕ ವಿಷಯಗಳಲ್ಲಿ ಅಸಹಿಷ್ಣುತೆ ಹೊಂದಿದ್ದವರು. ಸೆಮೆಟಿಕ್ ಥಿಯಾಲಜಿ ಪ್ರಕಾರ ಮೂರ್ತಿ ಪೂಜೆ ಎಂಬ ಪದದ ಅರ್ಥವನ್ನು ತಿಳಿದುಕೊಳ್ಳದೆ ಅಥವಾ ಅದು ಪಾಪ ಹೇಗೆ? ಎಂಬುದನ್ನುಅರ್ಥ ಮಾಡಿಕೊಳ್ಳದೆಯೇ ಮೂರ್ತಿ ಪೂಜೆಯ ವಿರುದ್ಧ ಭಾರತದ ಅನೇಕ ಬುದ್ಧಿಜೀವಿಗಳಿಗಿರುವ ಅಸಹಿಷ್ಣುತೆ / ಪೂರ್ವಗ್ರಹ ಕಲ್ಬುರ್ಗಿಯವರಿಗೂ ಇತ್ತು. ಅವರ ಸಿದ್ದಾಂತಗಳಿಗಿಂತ ಭಿನ್ನವಾದ ಸಿದ್ದಾಂತಗಳನ್ನು ಒಪ್ಪದಿರುವಷ್ಟು ಅಸಹಿಷ್ಣುತೆ / ಅಸಹನೆ ಅವರಲ್ಲಿತ್ತು. ಅವರಂತಹುದೇ ಮನಸ್ಥಿತಿಯುಳ್ಳ ಒಂದಷ್ಟು ಜನರನ್ನೊಳಗೊಂಡ ತಂಡದ ಮುಂದಾಳತ್ವ ವಹಿಸಿ ಕಲ್ಬುರ್ಗಿಯವರು, ಕನ್ನಡ ದಿನಪತ್ರಿಕೆಯ ಮಾಲೀಕರನ್ನು ಭೇಟಿ ಮಾಡಿ ಅದರಲ್ಲಿ ಬರುತ್ತಿದ್ದ ಅಂಕಣವನ್ನು ನಿಲ್ಲಿಸಿದ್ದರು!

Read more »