ವಿಶ್ವರೂಪಂ,ಶಾರುಕ್ ಖಾನ್ ಮತ್ತು ಪಾಕಿಸ್ತಾನ
– ರಾಜಕುಮಾರ.ವ್ಹಿ.ಕುಲಕರ್ಣಿ, ಬಾಗಲಕೋಟ
(ಮುಸ್ಲಿಂ ಸಮುದಾಯದ ಕುರಿತು ಭಾರತದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ಎಂದು ಭಾಷಣ ಬಿಗಿಯುವ ಬುದ್ದಿಜೀವಿಗಳಿಗೆ 2013 ರಲ್ಲಿ ಬರೆದ ನನ್ನ ಈ ಲೇಖನ ಒಂದು ಪ್ರತಿಕ್ರಿಯೆಯಾಗಿ)
ಕಳೆದ ತಿಂಗಳು ಕಮಲ್ ಹಾಸನ್ ಚಿತ್ರ ಬದುಕಿನ ಮಹತ್ವಾಕಾಂಕ್ಷೆ ಸಿನಿಮಾ ‘ವಿಶ್ವ ರೂಪಂ’ ದೇಶದಾದ್ಯಂತ ಬಿಡುಗಡೆಯಾಗಬೇಕಿತ್ತು. ಪ್ರೇಕ್ಷಕರೂ ಸಹ ಸಿನಿಮಾ ವೀಕ್ಷಣೆಗಾಗಿ ಕಾತುರದಿಂದಲೇ ಕಾಯುತ್ತಿದ್ದರು. ಸಿನಿಮಾ ಏನೋ ಬಿಡುಗಡೆಯಾಯಿತು ಆದರೆ ಅದು ಕಮಲ್ ಹಾಸನ್ ತವರು ರಾಜ್ಯ ತಮಿಳುನಾಡೊಂದನ್ನು ಹೊರತುಪಡಿಸಿ. ಕಮಲ್ ಹಾಸನ್‍ಗೆ ಅತಿ ಹೆಚ್ಚಿನ ಅಭಿಮಾನಿಗಳಿರುವುದು ಮತ್ತು ಆತ ಅತ್ಯಂತ ಜನಪ್ರಿಯತೆ ಪಡೆದಿರುವುದು ತಮಿಳುನಾಡಿನಲ್ಲೇ. ಜೊತೆಗೆ ತನ್ನ ಈ ಮಹತ್ವಾಕಾಂಕ್ಷೆಯ ಚಿತ್ರಕ್ಕಾಗಿ ಆತ ತನ್ನ ಸಿನಿಮಾ ಬದುಕಿನುದ್ದಕ್ಕೂ ದುಡಿದು ಗಳಿಸಿರುವುದನ್ನೆಲ್ಲ ಖರ್ಚು ಮಾಡಿರುವನು. ಆದ್ದರಿಂದ ಆತ ‘ವಿಶ್ವ ರೂಪಂ’ ನಿಂದ ಅತಿ ಹೆಚ್ಚಿನ ಲಾಭವನ್ನು ನಿರೀಕ್ಷಿಸಿದ್ದು ಈ ತಮಿಳುನಾಡು ರಾಜ್ಯದಿಂದಲೇ. ಏಕಾಏಕಿ ಹೀಗೆ ‘ವಿಶ್ವ ರೂಪಂ’ ಸಿನಿಮಾ ಬಿಡುಗಡೆಗೆ ಆ ರಾಜ್ಯದಲ್ಲಿ ನಿಷೇಧ ಹೇರಿದಾಗ ಸಹಜವಾಗಿಯೇ ಕೋಟ್ಯಾಂತರ ರೂಪಾಯಿಗಳ ಬಂಡವಾಳ ಹೂಡಿದ ನಟ, ನಿರ್ಮಾಪಕ ಮತ್ತು ನಿರ್ದೇಶಕ ಕಮಲ್ ಹಾಸನ್ ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂಥ ಪರಿಸ್ಥಿತಿ ಎದುರಾಯಿತು. ಈ ಚಿತ್ರದ ನಿರ್ಮಾಣದಿಂದಾದ ಸಾಲ ತೀರಿಸಲು ತನ್ನ ಮನೆಯನ್ನೇ ಕಳೆದುಕೊಳ್ಳಬೇಕಾಯಿತು ಎಂದು ಹೇಳಿಕೊಂಡ ಆ ಹಿರಿಯ ನಟ ಒಂದು ಹಂತದಲ್ಲಿ ದೇಶವನ್ನೇ ಬಿಟ್ಟು ಹೋಗುವುದಾಗಿ ನುಡಿದ. ಇದು ಆ ಕ್ಷಣಕ್ಕೆ ನುಡಿದ ಆಕ್ರೋಶದ ಮಾತು ಎಂದೆನಿಸಿದರೂ ಒಂದು ಸೃಜನಶೀಲ ಮನಸ್ಸು ಸರ್ಕಾರದ ಮತ್ತು ಒಂದು ಧರ್ಮದ ಪಿತೂರಿಗೆ ಘಾಸಿಗೊಂಡು ವ್ಯಕ್ತಪಡಿಸಿದ ಸಾತ್ವಿಕ ಸಿಟ್ಟು ಅದಾಗಿತ್ತು.
ಮತ್ತಷ್ಟು ಓದು
ಹೆಚ್ಚುತ್ತಿರುವುದು ಅಸಹಿಷ್ಣುತೆಯೋ?ಗೊಡ್ಡು ವಿಚಾರವಾದಿಗಳ ಹತಾಶೆಯೋ?
– ಶ್ರೀವತ್ಸ ಭಟ್
2014ರ ಲೋಕಸಭಾ ಚುನಾವಣೆಗೂ ಮುಂಚಿನ ಭಾರತವನ್ನು,ಅಂದರೆ ಸ್ವಾತಂತ್ರ್ಯೋತ್ತರದ ಆರು ದಶಕಗಳ ವೈಚಾರಿಕ ಭಾರತವನ್ನು ಓಮ್ಮೆ ಅವಲೋಕಿಸಿ ನೋಡಿ.ನಿಜವಾದ ವಿಚಾರವಾದಿಗೆ ಸ್ಥಾನವಿತ್ತೆ?ಹತ್ತೊಂಬತ್ತನೇ ಶತಮಾನದ ಉತ್ತರಾರ್ಧ,ಇಪ್ಪತ್ತನೇ ಶತಮಾನದ ಪೂರ್ವಾರ್ಧದಲ್ಲಿ ರಾಮಕೃಷ್ಣ ಪರಮಹಂಸರು, ಸ್ವಾಮಿ ವಿವೇಕಾನಂದರು,ರಾಜಾರಾಮ ಮೋಹನರಾಯರು,ವಿದ್ಯಾಸಾಗರರಂತಹ ಅಪ್ರತಿಮ ಮೇಧಾವಿಗಳನ್ನೂ,ಮಹಾನ್ ವಿಚಾರವಾದಿಗಳನ್ನು ಕಂಡಿದ್ದ ಭಾರತರಾಷ್ಟ್ರ ಕೇವಲ ಕೆಲವು ದಶಕಗಳಲ್ಲಿ ಎಂತಹ ಜಾಢ್ಯತೆಯ ಕೂಪಕ್ಕೆ ಜಾರಿಹೋಗಿದೆಯಲ್ಲವೇ? 1947ರಲ್ಲಿ ಅನ್ಯರ ದಾಸ್ಯದಿಂದ ಮುಕ್ತರಾದೆವು ನಿಜ.ಆದರೆ ಸ್ವಾತಂತ್ರ್ಯ ಪೂರ್ವದಲ್ಲಿದ್ದ, ಆ ಮಹೋನ್ನತ ವಿಚಾರವಾದವು, ನಮ್ಮಯಾವ ವಿಚಾರಗಳಿಂದ ಪರಂಗಿಗಳು ನಮಗೆ ಹೆದರಿದ್ದರೋ, ಅದೇ ವಿಚಾರಶಕ್ತಿಯು ಅತಿ ಕಡಿಮೆ ಕಾಲದಲ್ಲಿ ಕ್ಷುದ್ರಗತಿಗೆ ಜಾರಿದ್ದು ನಮ್ಮ ದುರ್ದೈವವಲ್ಲವೇ?
2014 ಹೂಸ ಯುಗದ ಆರಂಭ, ವೋಟ್ ಬ್ಯಾಂಕ್ ರಾಜಕಾರಣದಿಂದ ಅಭಿವೃದ್ದಿ ರಾಜಕೀಯದೆಡೆಗೆ ಹೆಜ್ಜೆಯಿಡಲಾರಂಭಿಸಿದ ದಿನಗಳು. ತುಕ್ಕುಹಿಡಿದ ಆಲೋಚನೆಗಳಿಂದ, ನವನವೀನವಾದ, ಅಷ್ಟೇ ಶ್ರೇಷ್ಠವಾದ,ಸಮೃದ್ದ ಭಾರತದ ನಿರ್ಮಾಣಕ್ಕೆ ಪೂರಕವಾದ,ವಿದ್ಯುತ್ ಪ್ರವಾಹದಂತಹ ಶಕ್ತಿಯುತ ಆಲೋಚನಾ ಕ್ರಮಕ್ಕೆ ಹೊರಳಿದ ಸಂಧಿಕಾಲ. ಈ ಬದಲಾವಣೆಯೆಂಬ ಉತ್ಕರ್ಷದ ಚಾಟಿಯ ಏಟು ಮೂದಲು ಬಿದ್ದಿದ್ದು ಗೊಡ್ಡು ವಿಚಾರವಾದದ ಮೇಲೆ. ಪರಿಣಾಮ! ಅಂಗಡಿಯಲ್ಲಿ ದುಡ್ಡುಕೊಟ್ಟು ಹೊಸ ಬಟ್ಟೆ ಖರೀದಿಸಿ ತೊಟ್ಟುಕೊಂಡು ಖುಷಿಪಡುವ ಹಾಗೆ,ಅಧಿಕಾರಿಗಳಿಗೆ ಲಂಚನೀಡೀಯೋ…ಇಲ್ಲವೇ ರಾಜಕೀಯದ ಪ್ರಭಾವ ಬಳಸಿಯೋ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದವರಿಗೂ,ಬುದ್ಧಿಜೀವಿಗಳ ಸೋಗು ಹಾಕಿಕೊಂಡು ಮೆರೆಯುತ್ತಿದ್ದ ಅರ್ಧಂಬದ್ದ ಓದಿಕೊಂಡಿದ್ದವರಿಗೂ,ಬುಡಕ್ಕೆ ಬೆಂಕಿಯಿಟ್ಟಂತಾಯಿತು.ಏನೂ ಮಾಡಲಾಗದೆ ಹತಾಶರಾದರು…ಎಷ್ಟಾದರೂ ಸತ್ಯ ಕಹಿಯಲ್ಲವೇ?