ವಿಷಯದ ವಿವರಗಳಿಗೆ ದಾಟಿರಿ

Archive for

30
ಡಿಸೆ

ನಿನ್ನೆಗೆ ನನ್ನ ಮಾತು – ಭಾಗ ೬

– ಮು.ಅ ಶ್ರೀರಂಗ ಬೆಂಗಳೂರು

ಕಾಲಜಿಂಕೆನಿನ್ನೆಗೆ ನನ್ನ ಮಾತು – ಭಾಗ ೧
ನಿನ್ನೆಗೆ ನನ್ನ ಮಾತು – ಭಾಗ ೨
ನಿನ್ನೆಗೆ ನನ್ನ ಮಾತು – ಭಾಗ ೩
ನಿನ್ನೆಗೆ ನನ್ನ ಮಾತು – ಭಾಗ ೪

ನಿನ್ನೆಗೆ ನನ್ನ ಮಾತು – ಭಾಗ ೫

ಒಂದು ಪೀಠಿಕೆ :- ನಿನ್ನೆಗೆ ನನ್ನ ಮಾತು ಎಂಬ ಶೀರ್ಷಿಕೆಯಲ್ಲಿ ಈ ಹಿಂದೆ ನಿಲುಮೆಯಲ್ಲಿ  ಐದು ಲೇಖನಗಳನ್ನು ಬರೆದಿದ್ದೆ. ಅದರ ಹೆಚ್ಚಿನ ಅಂಶ ನನ್ನ ಹವ್ಯಾಸಿ ಓದಿನ ಮತ್ತು ಆಗಾಗ  ದಿನ ಪತ್ರಿಕೆಗಳ ಭಾನುವಾರದ ಸಂಚಿಕೆಗಳಲ್ಲಿ/ಸಾಹಿತ್ಯಿಕ ಪತ್ರಿಕೆಗಳಲ್ಲಿ  ಬರೆದ ಲೇಖನಗಳ ಬಗ್ಗೆ ಮತ್ತು ಅದನ್ನು ಬರೆದ ನಂತರ ನಡೆದ ಕೆಲವು ವಿದ್ಯಮಾನಗಳ ಬಗ್ಗೆ  ಮಾತ್ರ ಸೀಮಿತವಾಗಿತ್ತು ಎಂದು ನನ್ನ ನೆನಪು. ಈ ಸಲ ನಾನು ಇತ್ತೀಚೆಗೆ ಓದಿದ ಕಥಾಸಂಕಲನ/ಕಾದಂಬರಿ/ಅಂಕಣ ಬರಹಗಳು ಅಥವಾ ಯಾವುದಾದರು ಒಂದು ವಿಷಯಕ್ಕೆ ಸಂಬಂಧಿಸಿದ ಲೇಖನಗಳ ಗುಚ್ಛದ ಬಗ್ಗೆ ನನ್ನ ಅಭಿಪ್ರಾಯ, ಅನಿಸಿಕೆಗಳನ್ನು ಹೇಳುವ ಪ್ರಯತ್ನ ಮಾಡುತ್ತೇನೆ.ಕಥಾ ಸಂಕಲನ/ಕಾದಂಬರಿಗಳಾದರೆ ಅವುಗಳಲ್ಲಿನ ಯಾವುದಾದಾರೂ ಪಾತ್ರಗಳ ಛಾಯೆ ಅಥವಾ ಸನ್ನಿವೇಶಗಳ ಚಿತ್ರಣ ಈವರೆಗಿನ ನನ್ನ ಜೀವನದಲ್ಲಿ ಅಲ್ಪ ಸ್ವಲ್ಪವಾದರೂ ಕಂಡು ಬಂದಿದ್ದರೆ ಅಥವಾ ನನ್ನ ಸ್ನೇಹಿತರ, ಬಂಧು ಬಾಂಧವರಲ್ಲಿ ಕಂಡಿದ್ದರೆ,ಕೇಳಿದ್ದರೆ ಅವುಗಳ ಬಗ್ಗೆ ನನ್ನ ಸಹಸ್ಪಂದನಗಳನ್ನು ಓದುಗರೊಡನೆ ಹಂಚಿಕೊಳ್ಳುವ ಆಸೆಯಿದೆ. ನಾನು ಹೊಸಗನ್ನಡ ಸಾಹಿತ್ಯದ ಒಬ್ಬ ಹವ್ಯಾಸಿ ಓದುಗ. ಆದ್ದರಿಂದ ಇಲ್ಲಿನ ನನ್ನ ಅಭಿಪ್ರಾಯಗಳಲ್ಲಿ ವಿಮರ್ಶೆಯ ಪರಿಭಾಷೆಗಳು ಇರುವುದಿಲ್ಲ.ನಾನು ಈ ಅಂಕಣದಲ್ಲಿ ಪ್ರಸ್ತಾಪಿಸುವ ಕೃತಿಗಳ ಬಗ್ಗೆ ಈ ಹಿಂದೆ ವಿಮರ್ಶೆಗಳು ಬಂದಿರಬಹುದು. ಅದನ್ನು ನಾನು ಓದಿದ್ದರೆ ಅವುಗಳ ಬಗ್ಗೆಯೂ ನನ್ನ ಅನಿಸಿಕೆಗಳನ್ನು ಹೇಳುವ ಮನಸ್ಸಿದೆ.ನೋಡೋಣ ಇವೆಲ್ಲಾ ಎಷ್ಟರಮಟ್ಟಿಗೆ ನೆರವೇರುತ್ತದೋ! ನನ್ನ ಬರವಣಿಗೆ ನನಗೇ ತೃಪ್ತಿ ಕೊಡದ ದಿನ ಈ ಲೇಖನಮಾಲೆ ಮುಗಿಯುತ್ತದೆ.

ಇಲ್ಲಿಯ ಲೇಖನಗಳನ್ನು ಯಾವ ರೀತಿ ಬರೆಯಬೇಕು ಎಂದು ಒಂದೆರೆಡು ದಿನ ಯೋಚಿಸಿದೆ. ನನಗೆ ಪತ್ರ/ಇಮೇಲ್/ಫೋನ್/ವಾಟ್ಸ್ ಅಪ್ ಮೂಲಕ  ಸಂಪರ್ಕ ಇರುವವವರ ಮತ್ತು ನಾನು ಒಂದು ಬಾರಿಯಾದರೂ ಮುಖತಃ ಭೇಟಿಯಾದವರ ಕೃತಿಗಳ ಬಗ್ಗೆ ಪತ್ರ ಬರೆಯುವ ಶೈಲಿಯಲ್ಲಿ ಬರೆಯುವುದು ಒಂದು ರೀತಿ ಆಪ್ತತೆ ತರುತ್ತದೆ.ಯಾವ ರೀತಿಯ ಸಂಪರ್ಕವಿಲ್ಲದ ಲೇಖಕರುಗಳ ಕೃತಿಗಳ ಬಗ್ಗೆ ಲೇಖನದ ರೂಪದಲ್ಲಿ ಬರೆಯುವುದು ಎಂದು ಅಂದುಕೊಂಡಿದ್ದೇನೆ. ಇದೇನೂ ಕಟ್ಟುನಿಟ್ಟಾದ ನಿಯಮವಿಲ್ಲ. ಬರೆಯುವ ವೇಳೆಗೆ ಯಾವುದು ಸೂಕ್ತವೆನಿಸುತ್ತದೋ ಆ ರೀತಿಯಲ್ಲಿ ಬರೆಯಬಹುದು. ಈ ಲೇಖನಮಾಲೆಗೆ ಅಕ್ಷರ ಅನುಸಂಧಾನ ಎಂದು ಹೆಸರಿಡುವ ಆಸೆಯಿತ್ತು. ಅಕ್ಷರವೇನೋ ಸರಿ; ಅನುಸಂಧಾನವೆಂದರೆ ಪರಿಶೀಲನೆ, ಧ್ಯಾನ ಎಂಬ ಅರ್ಥವಿದೆ. ಇನ್ನು ಪರಿಶೀಲನೆಗೆ ಸೂಕ್ಷ್ಮವಾದ ವಿಚಾರಣೆ ಎಂಬ ಅರ್ಥ ಬರುತ್ತದೆ. ಇವೆಲ್ಲಾ ಏಕೋ ಒಂದು ರೀತಿ ಜಂಭ,ನಾನೇನೋ ವಿಶೇಷವಾದದ್ದನ್ನು ಹೇಳುತ್ತಿದ್ದೇನೆ ಎಂಬ ಒಣ ಹೆಮ್ಮೆಯ ಲಾಂಛನಗಳಾಗುತ್ತವೆ ಎನಿಸಿತು.  ಒಬ್ಬ ಹವ್ಯಾಸಿ ಓದುಗನಿಗೆ ಆ ರೀತಿಯ ಜಂಭ,ಒಣ ಹೆಮ್ಮೆಗಳು ತರವಲ್ಲ. ಆದ್ದರಿಂದ ಹಿಂದಿನ ನಿನ್ನೆಗೆ ನನ್ನ ಮಾತು ಎಂಬ ಹೆಸರೇ ಸೂಕ್ತವೆಂದು ಅದನ್ನೇ ಮುಂದುವರೆಸಿದ್ದೇನೆ. ಇದು ಸುಮಾರು ಆರೇಳು ತಿಂಗಳುಗಳ ನಂತರ ನಾನು ಬರೆಯುತ್ತಿರುವ ಲೇಖನವಾದ್ದರಿಂದ ಇಷ್ಟು ದೊಡ್ಡ ಪೀಠಿಕೆ ಬರೆದಿದ್ದೇನೆ. ಮುಂದಿನ ಲೇಖನಗಳಲ್ಲಿ ಪೀಠಿಕೆಗಳು ಇರುವುದಿಲ್ಲ. ಅವಶ್ಯವಿದ್ದರೆ ನಾಲ್ಕೈದು ಸಾಲಿನಷ್ಟೇ ಇರುತ್ತದೆ. ಈ ಸಲ ಹಿರಿಯ ಕಥೆಗಾರರಾದ ಕೆ ಸತ್ಯನಾರಾಯಣ ಅವರ ಕಾಲಜಿಂಕೆ  (ಪ್ರಕಾಶಕರು- ಪ್ರಿಯದರ್ಶಿನಿ ಪ್ರಕಾಶನ  ಬೆಂಗಳೂರು–೪೦ ಪ್ರಥಮ ಮುದ್ರಣ ೨೦೦೫). ಕಾದಂಬರಿಯ ಬಗ್ಗೆ ಬರೆದಿದ್ದೇನೆ. ಈ ಕಾದಂಬರಿಯನ್ನು ನನಗೆ  ಓದಲು ಕೊಟ್ಟ ಪ್ರಿಯ ಸ್ನೇಹಿತರಾದ ಶ್ರೀ ಗಿರೀಶ್ ವಾಘ್ ಬೆಂಗಳೂರು ಅವರಿಗೆ ನಾನು ಆಭಾರಿಯಾಗಿದ್ದೇನೆ.
ಮತ್ತಷ್ಟು ಓದು »