ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 6, 2016

6

ಈ ಗೆಲುವು ಮತ್ತೊಂದು ಸೋಲಿಗೆ ಮುನ್ನುಡಿಯಾಗದಿರಲಿ ರಾಘವೇಶ್ವರರೇ….

‍ನಿಲುಮೆ ಮೂಲಕ

– ಕೆ ಎಸ್ ರಾಘವೇಂದ್ರ ನಾವಡ

08-1444299163-raghaveshwaraswamijiಅಂತೂ ಇಂತು ಎರಡು ವರುಷಗಳ ಹಿಂದೆ ಹೋಗಿದ್ದ ಹಿಂದೂಗಳ ಮರ್ಯಾದೆ ಮೊನ್ನೆ ವಾಪಾಸು ಬಂದಿತು. ರಾಘವೇಶ್ವರರು ಮತ್ತೊಂದು “ಅಂತರಿಕ ಯುದ್ಧ” ಗೆದ್ದಿದ್ದಾರೆ!! ಏಕೆ0ದರೆ ಬಾಹ್ಯ ವೈರಿಗಿ0ತಲೂ ಆಂತರಿಕ ವೈರಿಯನ್ನು ಗೆಲ್ಲುವುದು ಬಹಳ ಕಷ್ಟ! ಅಂದ ಮೇಲೆ ನಮ್ಮ ರಾಘವೇಶ್ವರ ಗೆಲುವೇನು ಸಾಮಾನ್ಯವೇ? ಏಕೆಂದರೆ ರಾಘವೇಶ್ವರರ ವಿರುದ್ಧ ಹಿಂದಿನ0ತೆ ಯುದ್ದ ಸಾರಿದ್ದು ಬೇರಾರು ಅಲ್ಲ! ಅವರ ಸುತ್ತು ಬಳಗದಲ್ಲಿನ ಹಿತಶತ್ರುಗಳೇ!! ಬ್ರಾಹ್ಮಣರೇ!, ಹಿಂದೂ ಸಂಘಟನೆಗಳೇ! ಇವರೊಂದಿಗೆ ಸಾರಿಗೆ ಒಗ್ಗರಣೆ ಹಾಕುವಂತೆ ಈ ಬಳಗಕ್ಕೆ ಬೇರೆಯವರ ಸಾಥ್ ಇತ್ತಷ್ಟೇ ! ಹಿಂದೂಗಳು ಹಿಂದೂಗಳ ಬೆಳವಣಿಗೆಯನ್ನು ಸಹಿಸಲಾರರು ಎಂಬುದಕ್ಕೆ ಈ ಹಗರಣ ಮತ್ತೊಂದು ಉದಾಹರಣೆಯಷ್ಟೇ!!

ಸತ್ಯ ಯಾವತ್ತಿದ್ದರೂ ನುಂಗಲು ಅರಗಿಸಿಕೊಳ್ಳಲು ಕಹಿಯೇ! ಆದರೆ ಆ ನಂಜನ್ನು ಕುಡಿದೇ ಈಶ್ವರ “ ನೀಲಕಂಠ ” ನಾಗಿದ್ದು! ಗುರುಪೀಠದಿಂದ ಕೆಳಗಿಳಿಸಲೇ ಬೇಕೆಂಬ ವಿರೋಧಿಗಳ ಹಠಕ್ಕೆ ಸೋಲಾಯಿತು! ಅವರ ಷಡ್ಯಂತ್ರ ಬಯಲಾಯಿತು.

ಈ ದಿನ ಕಾಲದ ಕನ್ನಡಿ ಈ ಮಾತನ್ನು ಏಕೆ ಹೇಳುತ್ತಿದೆ ಎಂದರೆ, ಪೂಜ್ಯ ರಾಘವೇಶ್ವರರು ಹಿಂದಿನ ಅಶ್ಲೀಲ ವಿಡಿಯೋ ಕ್ಲಿಪ್ಪಿಂಗ್ ಹಗರಣದಲ್ಲಿಯೂ ಗೆಲುವನ್ನು ಸಾಧಿಸಿದ್ದರೂ, ಪ್ರೇಮಲತಾ ಹಗರಣಕ್ಕೆ ಆ ಗೆಲುವು ದಾರಿ ಮಾಡಿಕೊಟ್ಟಿತೆಂದರೆ, ಎಲ್ಲಿಯೋ ಎಡವಟ್ಟಾಗಿದೆ ಎಂದೇ ಅರ್ಥವಲ್ಲವೇ? ಆಗಲೇ ಸ್ವಾಮೀಜಿಯವರು ಹಾಗೂ ಅವರ ಸುತ್ತು ಬಳಗ ಎಚ್ಚೆತ್ತು ಕೊಂಡಿದ್ದರೆ ಈ ಪ್ರೇಮಲತಾ ಹಗರಣ ಹುಟ್ಟುತ್ತಲೇ ಇರಲಿಲ್ಲ, ರಾಘವೇಶ್ವರರ ಹಾಗೂ ಅವರ ಸುತ್ತು ಬಳಗದ ಒಂದು ಸಣ್ಣ “ನಿದ್ರೆ” ಗೆ ಅವರೇ ಎಷ್ಟೊಂದು ದೊಡ್ಡ ಬೆಲೆ ತೆರಬೇಕಾಯಿತು!  ಆ ಹಗರಣದಿಂದಾದ ಮಾನಸಿಕ ಜರ್ಜರತೆ, ಸರ್ವಸಂಗ ಪರಿತ್ಯಾಗಿಯೊಬ್ಬ ಲೋಕಕ್ಕಾಗಿ ಹಾಗೂ ಲೋಕದ ಮುಂದೆ ತನ್ನ ಪ್ರಾಮಾಣಿಕತೆಯನ್ನು ಸಾಬೀತುಪಡಿಸುವಾಗ ಅನುಭವಿಸುವ ಹತಾಶೆ ( “ ಈ ಪ್ರಪಂಚವೇ ಸಾಕು ” ಎನ್ನುವ ಬೇಸರದ ಭಾವ),  ಇದರಿ0ದ ಕಳೆದುಹೋದ ಸ್ವ  ಹಾಗೂ ಮಠದ ಮರ್ಯಾದೆ ಎಲ್ಲವನ್ನೂ ಉಳಿಸಬಹುದಿತ್ತು! ಹಿಂದಿನ ಲೇಖನದಲ್ಲಿ ಹೇಳಿದಂತೆ, ರಾಘವೇಶ್ವರರನ್ನು ಅವರ ಸುತ್ತು ಬಳಗವೇ ದಾರಿ ತಪ್ಪಿಸಿತು. ಅವರನ್ನು ಪಾರಾಗಲಾರದ ಹಗ್ಗದ ಕುಣಿಕೆಯೊಳಗೆ ಬಂಧಿಸಿತು!

9 ಕೋಟಿ ರಾಮ ತಾರಕ ಜಪವನ್ನು ಜಪಿಸಿ, ಪೀಠದ ಮೇಲೆ ಕುಳಿತ ರಾಘವೇಶ್ವರರ ಪ್ರಾರಂಭಿಕ ನಿಲುವೇ ಹಾಗಿತ್ತು! ಮುಖದಲ್ಲಿನ ತೇಜಸ್ಸು ಹಾಗೂ ಸದಾ ಹಸನ್ಮುಖತೆ ಅವರ ವ್ಯಕ್ತಿತ್ವವನ್ನು ಮುಮ್ಮಡಿ ಪ್ರಕಾಶಗೊಳಿಸಿತ್ತು! ಆನಂತರದ ಗೋ ಸಮ್ಮೇಳನ ಪ್ರಚಂಡ ಯಶಸ್ಸು, ಅವರ ಕೆಳಗಿನ ಪೀಠ ಅಲುಗಲು ಕೊರೆಯಬಹುದಾದ  ಸುರಂಗಕ್ಕೆ ದಾರಿ ಮಾಡಿಕೊಟ್ಟಿತು. ಮುಖದಲ್ಲಿನ ಮಂದಹಾಸ ಮತ್ತೂ ಹೆಚ್ಚಿತು! ಆಗಲೇ ಮೊದಲನೇ ಮಹಾ ಯುದ್ಧ ಆರಂಭವಾಯಿತು. ಹವ್ಯಕ ಬಳಗದಿಂದಲೇ ಹೇರಲ್ಪಟ್ಟ ಹಿಂದಿನ ಕೆಲವು ಆಪಾದನೆಗಳು  ( ಸಾಗರದ ಹಾಸ್ಟೆಲ್ಗಳ ಜಗದೀಶನ ಕಾಂಡ, ಮಲ್ಲಿಕಾ ಶೆರಾವತ್ ಪ್ರಕರಣ) ಅಷ್ಟೊಂದು  ಬೀಡುಬೀಸಾಗಿ ನಗಾರಿ ಬಾರಿಸದಿದ್ದಾಗ, ಹವ್ಯಕ ಬಳಗ ಮತ್ತು ಕೆಲವೊಂದು ಹಿಂದೂ ಸಂಘಟನೆಗಳು ಮತ್ತಷ್ಟು ಹತಾಶೆಗೀಡಾಗಿ,ಅಶ್ಲೀಲ ಸಿ.ಡಿ.ಯ ಪ್ರಕರಣವನ್ನು ಗುರುಗಳ ಕುತ್ತಿಗೆಗೆ ಗಂಟು ಹಾಕಿದರು!! ಅಲ್ಲಿಯೂ ಗುರುವಿನ ನಿರ್ದೋಷಿತ್ವ ಸಾಬೀತಾಗಿದ್ದು ಅವರನ್ನು ಮತ್ತಷ್ಟು ಹುಚ್ಚರನ್ನಾಗಿ ಮಾಡಿತು!  ಪ್ರೇಮಲತಾ ಪ್ರಕರಣ ಸ್ಫೋಟಿಸಲು ತೆರೆಮರೆಯಲ್ಲಿ ಷಡ್ಯಂತ್ರ ರೂಪಿಸಿದ್ದು ಸ್ವಾಮೀಜಿಗಳಿಗೆ ಗೊತ್ತಾಗಲೇ ಇಲ್ಲ! ಏಕೆಂದರೆ ಸ್ವಾಮೀಜಿಗಳ ಆಂತರಿಕ ಬಳಗದಲ್ಲಿ ಇದ್ದವರೇ ಅವರ ವಿರೋಧೀ ಬಳಗದಲ್ಲಿದ್ದರು ಇಲ್ಲವೇ ಅವರ ಬೆಂಗಾವಲಾಗಿದ್ದರು! ಪ್ರಕರಣ ಆರಕ್ಷಕ ಠಾಣೆಯ ಮೆಟ್ಟಿಲನ್ನೇರುವ ಮೂರ್ನಾಲ್ಕು ದಿನಗಳ ಹಿಂದಷ್ಟೇ ಗುರು ಪೀಠದ ಅರಿವಿಗೆ ಬಂದಿದ್ದು! ಬಂದದ್ದು ಬರಲಿ, ಎದುರಿಸಿದರಾಯಿತೆಂಬ ಹಠಕ್ಕೆ ಬಿದ್ದರು ಗುರುಗಳು! ಪ್ರಕರಣ ಸಮಸ್ತ ಭಕ್ತಾದಿಗಳ ನಾಲಿಗೆಯ ಮೇಲೆ ನಲಿಯತೊಡಗಿದ ನಂತರವಂತೂ ತಲೆಗೊಬ್ಬರು ಒಂದೊಂದು ರೀತಿ ಮಾತಾಡ ಹತ್ತಿದರು! ಅದೂ ಅವರ ಸುತ್ತೂ ಬಳಗವೇ ಅವರನ್ನು ಸಂಶಯದಿಂದ ನೋಡತೊಡಗಿದ ಮೇಲಂತೂ ಸ್ವಾಮೀಜಿಗಳು ಮತ್ತಷ್ಟು ಹಠಕ್ಕೆ ಬಿದ್ದರು!! ಕೇವಲ ಆಪಾದನೆಯಿಂದಲೇ, ಹೋಗಬಹುದಾದ ಮರ್ಯಾದೆಯ ಹೆದರಿಕೆಯಿಂದಲೇ, ಸ್ವಾಮೀಜಿಗಳು ಪೀಠವನ್ನು ಬಿಟ್ಟು ಇಳಿಯಬಹುದೆನ್ನುವ ನಂಬಿಕೆಯಲ್ಲಿದ್ದ ಸುತ್ತು ವಿರೋಧೀ ಬಳಗಕ್ಕೆ ಸ್ವಾಮೀಜಿಗಳ  ಈ ಹಠ ಪ್ರದರ್ಶನವೇ ಮುಂದಿನ ಫಲಿತಾಂಶದ ಬಗ್ಗೆ ಒಂದು ಎಚ್ಚರಿಕೆಯ ನಿದರ್ಶನವಾಗಿತ್ತು! ಆದರೆ ಅವರ್ಯಾರೂ ಅದನ್ನು ಗಮನಕ್ಕೆ ತೆಗೆದುಕೊಳ್ಳಲೇ ಇಲ್ಲ!! “ಸರಕಾರವೂ ಸೇರಿದಂತೆ ಎಲ್ಲರೂ ನಮ್ಮ ಜೊತೆಗಿದ್ದಾರೆ” ಎಂಬ ಅತಿಯಾದ ಆತ್ಮವಿಶ್ವಾಸವೇ ಅವರನ್ನು ಮತ್ತಷ್ಟು ಪ್ರೇರೇಪಿಸಿತು.  ಹೇಗಾದರೂ ಮಾಡಿ ಪೀಠದಿಂದ ಕೆಳಗಿಳಿಸಲೇ ಬೇಕೆಂಬ ಜನ್ಮ ವಿರೋಧಿಗಳ ಹಟ ಹಾಗೂ ನೀಚ ಕೆಲಸಕ್ಕೆ ಮೊನ್ನೆ ಕರ್ನಾಟಕ ಉಚ್ಛ  ನ್ಯಾಯಾಲಯ ಮಂಗಳವನ್ನು ಹಾಡಿದೆ!

ಹೆಂಗಸರು ತಮಗೆ ಸಿಕ್ಕ ಕಾನೂನಿನ ಬಲವನ್ನು ಈ ರೀತಿ ಉಪಯೋಗಿಸಿಕೊಳ್ಳುತ್ತಿರುವುದು ದೇಶದ ದೌರ್ಭಾಗ್ಯವೇ ಸರಿ!  ಪ್ರಾರಂಭದಲ್ಲಿ ಈ ಹಗರಣ ಉಂಟು ಮಾಡಿದ್ದ ಸದ್ದಿಗೆ, ಗುರುಗಳಿಗೆ ಎದುರಾದ ವಿರೋಧಕ್ಕೆ , ಅಬ್ಬಾ! ನೀಡಿದ ಮಾನಸಿಕ ಖಿನ್ನತೆಗೆ ರಾಘವೇಶ್ವರರ ಸ್ಥಾನದಲ್ಲಿ ಬೇರೆ ಯಾರಿದ್ದರೂ ಇಷ್ಟೊತ್ತಿಗೆ ಪೀಠ ಬಿಡುವುದೊಂದೇ ಅಲ್ಲ!! ಜೀವವನ್ನೂ ಬಿಟ್ಟು ಬಿಡುತ್ತಿದ್ದರು! ಆದರೆ ಸತ್ಯವೇ ಗೆಲ್ಲುತ್ತದೆಂಬ ರಾಘವೇಶ್ವರರ ನಂಬಿಕೆ ಅವರನ್ನು ಆ ಕೃತ್ಯವೆಸಗಲು ಬಿಡದೇ, ಹೋರಾಡುವ ಮನೋಭಾವವನ್ನು ಹುಟ್ಟಿಸಿತು. ಇನ್ನಾದರೂ ಅವರು ತಮ್ಮ ಆಪ್ತ ಬಳಗದಲ್ಲಿ ಸೇರಿಸಿಕೊಳ್ಳಬಹುದಾದ ವ್ಯಕ್ತಿಯ ನಂಬಿಕೆಯನ್ನು ಒರೆಗೆ ಹಚ್ಚಿ ನೋಡಲೇಬೇಕು. ಇಲ್ಲದಿದ್ದರೆ ಮತ್ತೊಮ್ಮೆ ಇದೇ ಪರಿಸ್ತಿತಿ ಉಂಟಾಗಬಹುದು!! ಆಗಲೂ ಇದೇ ಬೆಂಬಲವಿರುತ್ತದೆ.. ಎಂದು ನೆಚ್ಚಿಕೊಳ್ಳುವ ಹಾಗಿಲ್ಲ! ಏಕೆಂದರೆ ಎರಡು ಸೋಲುಗಳನ್ನು ಕಂಡ ವೈರಿ ಮೂರನೆಯ ಸೋಲನ್ನು ಸುಲಭವಾಗಿ ಒಪ್ಪಿಕೊಳ್ಳಲಾರ!  ಏಕೆಂದರೆ ಸುತ್ತಲೂ ವಿರೋಧಿಗಳೇ ತುಂಬಿಕೊ0ಡಾಗ, ವಿರೋಧಿಗಳ ಕೈಗಳೇ ಮೇಲಾದಾಗ ಸತ್ಯವೂ ಸಹ ಭೂಗತವಾಗಲೇಬೇಕಾಗುತ್ತದೆ! ಅದಕ್ಕೆ ಅವಕಾಶವನ್ನು ಮಾಡಿಕೊಡದಿರುವ ಜಾಗ್ರತೆಯನ್ನು ರಾಘವೇಶ್ವರರು ಅವರ ನಿಜವಾದ ಆಪ್ತ ಬಳಗ ವಹಿಸಲೇಬೇಕಾಗುತ್ತದೆ!

ಶೃಂಗೇರಿ ಹಾಗೂ ಪೇಜಾವರ ಸಂಸ್ಥಾನಗಳನ್ನು ಬಿಟ್ಟರೆ ಅತ್ಯಂತ ಹೆಚ್ಚಿನ ಮಾನ್ಯತೆಯನ್ನು ಗಳಿಸಿರುವುದು ಶ್ರೀರಾಮಚಂದ್ರಾಪುರ ಮಠ ಮಾತ್ರ. ಇಂತಹದೊಂದು ಹಿನ್ನೆಲೆಯಲ್ಲಿ ಶ್ರೀಸ್ವಾಮೀಜಿಗಳು ಹಾಗೂ ಅವರ ಸುತ್ತೂ ಬಳಗ ಮತ್ತಷ್ಟು ಹೆಚ್ಚಿನ ಜಾಗ್ರತೆಯನ್ನು ವಹಿಸಬೇಕು. “ಏಕಾಂತ ಸೇವೆ”ಯನ್ನು ಮುಂದುವರೆಸುವ ಬಗ್ಗೆ ಮತ್ತೊಮ್ಮೆ ಯೋಚಿಸಬೇಕು. ಶ್ರೀಸಂಸ್ಥಾನದ ದಿವ್ಯ ಸಾನಿಧ್ಯವನ್ನು ತೀರಾ ಅಗತ್ಯವಿರುವ ಕಾರ್ಯಕ್ರಮಗಳಿಗೆ ಮಾತ್ರವೇ ನೀಡಬೇಕು. ಹೆಚ್ಚಿನ ಸಮಯವನ್ನು ಅನುಷ್ಠಾನಾದಿ ಇತರೆ ಧಾರ್ಮಿಕ ಕಾರ್ಯಕ್ರಮಗಳಿಗೆ ವಿನಿಯೋಗಿಸುತ್ತಾ, ಆಗಾಗ ಆಡಳಿತ ಮಂಡಳಿಯತ್ತ ಚುರುಕು ಕಣ್ಣಾಡಿಸುತ್ತಿರಬೇಕು.

ಪಟ್ಟಕ್ಕೆ ಬ೦ದ ಮೇಲಿ೦ದ ಸರಿ ಸುಮಾರು ನಾಲ್ಕು ಲಕ್ಷ ಜನ ಹವ್ಯಕ ಬ್ರಾಹ್ಮಣರನ್ನು ಸ೦ಘಟಿಸಿ, ಅವರನ್ನು ಒ೦ದೇ ವೇದಿಕೆಯಡಿ ಕರೆತಂದು ಆ ಸಮುದಾಯದ ಏಳ್ಗೆಗೆ ಹಗಲಿರುಳೂ ಶ್ರಮಿಸುತ್ತಿರುವ ಶ್ರೀಸ್ವಾಮೀಜಿಗಳ ಪರಿಸ್ಥಿತಿಗಾಗಿ ಹಿಂದೆಯೂ ಲೇಖನದ ಮೂಲಕ  ದುಃಖ ವ್ಯಕ್ತಪಡಿಸಿದ್ದ ನಮಗೆ, ಶ್ರೀಸ್ವಾಮೀಜಿಗಳ ಮೇಲಿನ ಆರೋಪ ಸುಳ್ಳೆಂದು ಕರ್ನಾಟಕ ಉಚ್ಛ ನ್ಯಾಯಾಲಯ ತೀರ್ಪು ಕೊಡುವ ಬಗ್ಗೆ ಯಾವುದೇ ಸಂದೇಹವಿರಲಿಲ್ಲ! ಆದರೆ ಅದಕ್ಕಾಗಿ ತೆಗೆದುಕೊ0ಡ ಅವಧಿ ಮಾತ್ರ ಹೆಚ್ಚಾಯಿತು. ಇರಲಿ.. ಪ್ರಕರಣದ ಸಮೂಲಾಗ್ರ ವಿಚಾರಣೆಯಾಗಿ, ಶ್ರೀ ಸ್ವಾಮೀಜಿಗಳ ವ್ಯಕ್ತಿತ್ವವನ್ನು ಒರೆಗೆ ಹಚ್ಚಿದಂತಾಗಿ, ಅವರು ಮತ್ತಷ್ಡು ಪ್ರಜ್ವಲಿಸುತ್ತಿದ್ದಾರೆ! ಶ್ರೀಸ್ವಾಮೀಜಿಗಳ ಪರವಾಗಿ ನ್ಯಾಯಾಲಯದಲ್ಲಿ ವಾದಿಸಿ, ಅವರು ನಿರ್ದೋಷಿಯಾಗಿ ಹೊರಬರಲು ಕಾರಣರಾದ ವಕೀಲ ಪಡೆಯೊ0ದಿಗೆ, ಸಮಸ್ತ ಭಕ್ತಜನಕೋಟಿಯನ್ನು ಈಸಂದರ್ಭದಲ್ಲಿ ಅಭಿನಂದಿಸಲೇಬೇಕು.

6 ಟಿಪ್ಪಣಿಗಳು Post a comment
 1. ಏಪ್ರಿಲ್ 6 2016

  ನಮ್ಮವರೇ ನಮ್ಮ ಶತೃಗಳು ಅನ್ನುವುದು ಖಂಡಿತವಾಗಿಯೂ ಸತ್ಯ.

  ಉತ್ತರ
 2. Manjunath Hegde
  ಏಪ್ರಿಲ್ 6 2016

  “ಕೆಲವು ವಿಚಾರಗಳನ್ನು ಹೊರತುಪಡಿಸಿ” ಒಟ್ಟಾರೆ ಇದೊಂದು ಉತ್ತಮ ವಿಮರ್ಶಾತ್ಮಕ ಲೇಖನ.

  https://drive.google.com/file/d/0B6XxUMvNzPEebC1PbTJOZF9PUE0

  ನ್ಯಾಯಾಲಯದ ಆದೇಶದ ಪ್ರತಿ ಇಲ್ಲಿದೆ

  ೧. ” ಏಕಾಂತ ಸೇವೆ ” ಅನ್ನುವ ಪದ್ಧತಿ ಅನ್ನೋದು ಮಠದಲ್ಲಿ ಇಲ್ಲ! ಶ್ರೀಗಳ ಜೊತೆ ಪರಿವಾರದ ಒಂದೆರಡು ಜನವಾದರೂ ಸದಾ ಕಾಲ ಇರುತ್ತಾರೆ. ಅದು ಆರೋಪ ಮಾಡಿದ ವ್ಯಕ್ತಿಗಳ ಕಪೋಲ ಕಲ್ಪಿತ ಕತೆ.

  ೨. ಈ ಪ್ರಕರಣವನ್ನು ಮೊದಲು ದಾಖಲಿಸಿದ್ದು ಮಠ! ದಿನಾಂಕ ೧೭-೦೮-೨೦೧೪ ರಂದು ಹೊನ್ನಾವರದಲ್ಲಿ ಪ್ರೇಮಲತಾ ದಿವಾಕರ್ ದಂಪತಿಗಳ ಮೇಲೆ ಬ್ಲಾಕ್ ಮೇಲ್ ದೂರು ಕೊಟ್ಟು, ಅವರು ಬಂಧಿತರಾಗಿ ಪಂಚನಾಮೆ ನಡೆದು ನ್ಯಾಯಾಧೀಶರ ಎದುರೇ ದಿವಾಕರ್ ಶಾಸ್ತ್ರಿ “ನಾವು ಶ್ರೀಗಳ ವಿರುದ್ಧ ಷಡ್ಯಂತ್ರ ನಡೆಸಿದ್ದು ನಿಜ” ಎಂದು ಒಪ್ಪಿ ಸಹಿ ಮಾಡಿರುತ್ತಾರೆ! ಅದಕ್ಕೆ ಸಂಬಂಧಿಸಿದ ದಾಖಲೆಗಳು “ಹೊನ್ನಾವರದ ಪಂಚನಾಮೆಯಲ್ಲಿ” ಇದೆ! ಆದರೆ ಆರೋಪಿಗಳು ದಾಖಲಿಸಿದ “ಪ್ರತಿದೂರು” ಮಾತ್ರ ಭಾರೀ ಪ್ರಚಾರ ಪಡೆಯಿತು!

  ೩. ಇಷ್ಟು ಪ್ರಖರ ಆಧಾರಗಳು ಇದ್ದರೂ ಕೂಡ ತನಿಖಾ ಸಂಸ್ಥೆ ಸುಮ್ಮನಿದೆ ಎಂದರೆ ಈ ಷಡ್ಯಂತ್ರದ ಹಿಂದಿನ ಶಕ್ತಿಗಳ ಪ್ರಭಾವ ಎಷ್ಟು ಇರಬಹುದು? ಇನ್ನಾದರೂ ಆ ದೂರಿನ ತನಿಖೆ ಸಮರ್ಪಕವಾಗಿ, ನ್ಯಾಯೋಚಿತವಾಗಿ ನಡೆಯಬೇಕು!

  ೪. ಶ್ರೀಗಳೇ ಹೇಳಿದ ಒಂದು ಮಾತು ನೆನಪಾಗುತ್ತಿದೆ… ಇಂತಹ ಒಂದು ಆಕ್ರಮಣ (ಪ್ರಭಾವ ಮತ್ತು ಪ್ರಸಿದ್ಧಿಯ ದೃಷ್ಟಿಯಿಂದ) ಒಂದು ಸಾಮಾನ್ಯ ಮಠ , ಸನ್ಯಾಸಿ ಯ ಮೇಲೆ ಆದರೆ ಅವರ ಗತಿ ಏನು?

  ಉತ್ತರ
 3. Naveen gangotri
  ಏಪ್ರಿಲ್ 6 2016

  “ಏಕಾಂತ ಸೇವೆ”ಯನ್ನು ಮುಂದುವರೆಸುವ ಬಗ್ಗೆ ಮತ್ತೊಮ್ಮೆ ಯೋಚಿಸಬೇಕು. ಶ್ರೀಸಂಸ್ಥಾನದ ದಿವ್ಯ ಸಾನಿಧ್ಯವನ್ನು ತೀರಾ ಅಗತ್ಯವಿರುವ ಕಾರ್ಯಕ್ರಮಗಳಿಗೆ ಮಾತ್ರವೇ ನೀಡಬೇಕು. ಹೆಚ್ಚಿನ ಸಮಯವನ್ನು ಅನುಷ್ಠಾನಾದಿ ಇತರೆ ಧಾರ್ಮಿಕ ಕಾರ್ಯಕ್ರಮಗಳಿಗೆ ವಿನಿಯೋಗಿಸುತ್ತಾ, ಆಗಾಗ ಆಡಳಿತ ಮಂಡಳಿಯತ್ತ ಚುರುಕು ಕಣ್ಣಾಡಿಸುತ್ತಿರಬೇಕು.”

  ಸಕಾರಾತ್ಮಕ ಸಲಹೆಗಳಿವು. ಅನುಷ್ಠಾನ ತತ್ಪರತೆ ಮತ್ತು ಜ್ಞಾನಮಾರ್ಗದಲ್ಲಿ ಶಿಷ್ಯಕೋಟಿಯನ್ನು ಮುನ್ನಡೆಸುವುದು ಶಾಂಕರ ಪೀಠಗಳ ಅದ್ಯ ಚಿಂತನೆಗಳೆಂಬುದರಲ್ಲಿ ಎರಡು ಮಾತಿಲ್ಲ.

  ಉತ್ತರ
 4. Vinay Neechadi
  ಏಪ್ರಿಲ್ 7 2016

  ಮಠದಲ್ಲಿ ‘ಏಕಾಂತ ಸೇವೆ’ ಅಂತ ಯಾವ ಸೇವೆಯೂ ಇಲ್ಲ.

  ಉತ್ತರ
 5. harerama
  ಏಪ್ರಿಲ್ 7 2016

  ಏಕಾಂತ ಸೇವೆ” ಎಂಬುದು ಕೇವಲ ಷಡ್ಯಂತ್ರಿಗಳ ಕಪೋಲ ಕಲ್ಪಿತ ಅಂತಹ ಯಾವುದೇ ಸೇವೆಗಳಿಲ್ಲ ಎಂಬುದನ್ನು ಎಲ್ಲ ಜನರೂ ಅಗತ್ಯವಾಗಿ ತಿಳಿದು ಕೊಳ್ಳಲಿ .

  ಉತ್ತರ
 6. harama
  ಏಪ್ರಿಲ್ 9 2016

  ekaanta seve khandita ide cid police tumba sakshigalanna chargesheetnalli haakiddare – this is the fact. illa andavaru eno muchiduttiddare.

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments