ವಿಷಯದ ವಿವರಗಳಿಗೆ ದಾಟಿರಿ

Archive for

13
ಸೆಪ್ಟೆಂ

ಸ್ವಾತಂತ್ರ್ಯೋತ್ಸವ ವಿಶೇಷ ಸರಣಿ – ದಿನಕ್ಕೊಬ್ಬ ದೇಶಭಕ್ತರ ಸ್ಮರಣೆ

ದಿನ – 27:
‘ಮಾಸ್ಟರ್ ದಾ’ ಸೂರ್ಯ ಸೇನ್
– ರಾಮಚಂದ್ರ ಹೆಗಡೆ

surya_sen_before_1934ಬಂಗಾಳದ ಮತ್ತೊಬ್ಬ ಕ್ರಾಂತಿಕಿಡಿ, ಬ್ರಿಟಿಷರ ಎದೆ ನಡುಗಿಸಿದ ‘ಚಿತ್ತಗಾಂಗ್ ಶಸ್ತ್ರಾಗಾರ ದಾಳಿ’ ಯ ರೂವಾರಿ ಸೂರ್ಯ ಸೇನ್. ಜನರು, ಕ್ರಾಂತಿಕಾರಿ ಸಹವರ್ತಿಗಳು ಪ್ರೀತಿಯಿಂದ ಕರೆಯುತ್ತಿದ್ದ ಹೆಸರು ಮಾಸ್ಟರ್ ದಾ. ಪ್ರಸ್ತುತ ಬಾಂಗ್ಲಾದೇಶದಲ್ಲಿರುವ ಚಿತ್ತಗಾಂಗ್ ನ ಸುತ್ತಮುತ್ತಲಿನ ಪ್ರದೇಶದಲ್ಲಿ ಬ್ರಿಟಿಷರ ವಿರುದ್ಧ ದೊಡ್ಡಮಟ್ಟದ ಹೋರಾಟವನ್ನು ರೂಪಿಸುವಲ್ಲಿ ಸೂರ್ಯ ಸೇನ್ ರ ಪಾತ್ರ ಪ್ರಮುಖವಾದದ್ದು. ಬಿಎ ವಿದ್ಯಾರ್ಥಿಯಾಗಿದ್ದಾಗ ಭಾರತ ಸ್ವಾತಂತ್ರ್ಯ ಸಮರದ ಕುರಿತು ಅರಿತ ಸೇನ್, ಕ್ರಾಂತಿಕಾರಿ ಸಂಘಟನೆ ಅನುಶೀಲನ ಸಮಿತಿಯೆಡೆಗೆ ಆಕರ್ಷಿತರಾದರು. ೧೯೧೮ ರಲ್ಲಿ ಚಿತ್ತಗಾಂಗ್ ನಲ್ಲಿ ಶಿಕ್ಷಕನಾಗಿ ವೃತ್ತಿ ಆರಂಭಿಸಿದ ಸೇನ್ ಆರಂಭದಲ್ಲಿ ಗಾಂಧೀಜಿಯವರ ಅಸಹಕಾರ ಚಳುವಳಿಯ ಭಾಗವಾಗಿದ್ದರು. ಆದರೆ ಅದು ಮಧ್ಯದಲ್ಲೇ ಸ್ಥಗಿತವಾದಾಗ ಬೇಸರಗೊಂಡ ಸೇನ್ ಭಾರತದ ಸ್ವಾತಂತ್ರ್ಯಕ್ಕೆ ಕ್ರಾಂತಿಮಾರ್ಗವೇ ಸರಿ ಎಂದು ನಿಶ್ಚಯಿಸಿದರು. ಕ್ರಾಂತಿಕಾರಿ ಸಂಘಟನೆ ಯುಗಾಂತರದ ಕಾರ್ಯಕರ್ತನಾಗಿ ಕ್ರಾಂತಿಕಾರ್ಯದಲ್ಲಿ ತೊಡಗಿಸಿಕೊಂಡ ಅವರು ಚಿತ್ತಗಾಂಗ್ ಜಿಲ್ಲೆಯಾದ್ಯಂತ ಕ್ರಾಂತಿ ಚಟುವಟಿಕೆ ಪಸರಿಸುವಲ್ಲಿ ಹಾಗೂ ಕ್ರಾಂತಿಕಾರಿಗಳ ಬಹುದೊಡ್ಡ ಯುವಪಡೆಯನ್ನು ಕಟ್ಟುವಲ್ಲಿ ಅವಿರತವಾಗಿ ದುಡಿದರು. ಮತ್ತಷ್ಟು ಓದು »

13
ಸೆಪ್ಟೆಂ

ಗುರು – ಶಿಷ್ಯ

– ಗೀತಾ ಹೆಗ್ಡೆ

images-1ಅರಿವು ಅಂದರೆ ತಿಳುವಳಿಕೆ. ಇದು ನಮಗೆ ಹುಟ್ಟಿನಿಂದ ಬರಲು ಸಾಧ್ಯವಿಲ್ಲ. ಇದಕ್ಕೆ ಒಬ್ಬ ಗುರುವಿನ ಅಗತ್ಯ ಇದೆ. ಒಂಬತ್ತು ತಿಂಗಳು ಹೊತ್ತು ಹೆತ್ತು ಸಾಕಿದ ತಾಯಿ ಮೊದಲ ಗುರು. ಎಳೆ ಕಂದಮ್ಮನಿಗೆ ಹಾಲುಣಿಸುವ ತರಬೇತಿಯಿಂದ ಹಿಡಿದು ತನ್ನ ಜೀವಿತಾವಧಿಯ ಕೊನೆಯವರೆಗೂ ಒಂದಲ್ಲಾ ಒಂದು ಗಳಿಗೆಗಳ ಸಂದರ್ಭದಲ್ಲಿ ಜೊತೆಯಾಗಿ ನಿಂತು ಸಲಹುವ ಗುರು ರಕ್ಷೆ ಅವಳು. ಹಾಗಾದರೆ ತಂದೆ? ಮುದ್ದು ಮಾಡಿ ಎತ್ತಿ ಹಾರಿಸಿ ಕಂದನ ಲಾಲನೆ ಪಾಲನೆ ಕಡೆ ಕಣ್ಣಿಟ್ಟು ಬೇಕಾದ್ದೆಲ್ಲ ತನ್ನ ಶಕ್ತ್ಯಾನುಸಾರ ತಂದು ಕೊಡುವ; ತರಲಾರದ್ದಕ್ಕೆ ಸಂಕಟ ಪಡುತ್ತ ಹಪಹಪಿಸಿ ಮರೆಯಲ್ಲಿ ಕಣ್ಣೊರೆಸಿಕೊಂಡು ಜವಾಬ್ದಾರಿ ಹೊತ್ತು ಮಕ್ಕಳಿಗೆ ಶ್ರೀ ರಕ್ಷೆ ನೀಡಿ, ಬೆಳೆಯುವ ಮಕ್ಕಳ ಏಳಿಗೆಯ ನೋಡಿ ಬೀಗುವ ಕಣ್ಣಿಗೆ ಕಾಣದ ಗುರು ಎಂದರೂ ತಪ್ಪಾಗಲಾರದು. ಏಕೆಂದರೆ ಸಂಸಾರದಲ್ಲಿ ಮಕ್ಕಳಿಂದ ಏನೆ ತಪ್ಪು ಒಪ್ಪಿದ್ದರೂ ಸಾಮಾನ್ಯವಾಗಿ ತಾಯಿ ಕಲಿಸಿದ ಬುದ್ಧಿ ಹೇಳೋದೆ ಜಾಸ್ತಿ. ತಂದೆ, ತಾಯಿ ಕಲಿಸಿದ ಬುದ್ಧಿ ಹೇಳೋದು ಅಪರೂಪ. ತಂದೆ ತಾಯಿಯಾದವರೂ ಹೇಳುವುದೂ ಹಾಗೆ, ಒಳ್ಳೆದಾದರೆ ನಾ ಕಲಿಸಿದ್ದು ಅದೆ ತಪ್ಪಾದರೆ ಅವರಮ್ಮ ಕಲಿಸಿದ ಬುದ್ಧಿ. ಎಷ್ಟು ವಿಪರ್ಯಾಸ! ಮತ್ತಷ್ಟು ಓದು »

12
ಸೆಪ್ಟೆಂ

ಸ್ವಾತಂತ್ರ್ಯೋತ್ಸವ ವಿಶೇಷ ಸರಣಿ – ದಿನಕ್ಕೊಬ್ಬ ದೇಶಭಕ್ತರ ಸ್ಮರಣೆ

ದಿನ – 26:
ಸರ್ದಾರ್ ಅಜಿತ್ ಸಿಂಗ್
– ರಾಮಚಂದ್ರ ಹೆಗಡೆ

ajitsinghಪಂಜಾಬ್ ಪ್ರಾಂತ್ಯದಲ್ಲಿ ಬ್ರಿಟಿಷ್ ಸರ್ಕಾರದ ದೌರ್ಜನ್ಯದ ವಿರುದ್ಧ ದನಿಯೆತ್ತಿದ, ಜನರನ್ನು ಸಂಘಟಿಸಿದ ಅಗ್ರಶ್ರೇಣಿಯ ಕ್ರಾಂತಿಕಾರಿ ಸರ್ದಾರ್ ಅಜಿತ್ ಸಿಂಗ್. ಇವರು ಕ್ರಾಂತಿಸಿಂಹ ಸರ್ದಾರ್ ಭಗತ್ ಸಿಂಗ್ ರ ಚಿಕ್ಕಪ್ಪ. 1947 ರ ಆಗಸ್ಟ್ 15 ರಂದು ಭಾರತ ಸ್ವತಂತ್ರವಾದಾಗ ‘ಥ್ಯಾಂಕ್ ಗಾಡ್, ನಮ್ಮ ಕೆಲಸ, ಹೋರಾಟ ಯಶಸ್ವಿಯಾಯಿತು’ ಎಂದು ಖುಷಿಯಿಂದ, ಸಂಭ್ರಮದಿಂದ ಆ ಕ್ಷಣಗಳನ್ನು ಕಂಡು ಅಂದೇ ‘ಧನ್ಯತೆಯ ಸಾವು’ ಕಂಡವರು ಅಜಿತ್ ಸಿಂಗರು. ಸ್ವತಂತ್ರ ಭಾರತದ ಕನಸು ಕಂಡು ಅದಕ್ಕಾಗಿ ತಮ್ಮ ಬದುಕನ್ನೇ ಸಮರ್ಪಿಸಿ ಆ ಕನಸು ನನಸಾಗುವ ಮುನ್ನವೇ ಮರೆಯಾದವರು ಕೋಟ್ಯಾಂತರ ಮಂದಿ. ಹಾಗೆ ಕನಸು ನನಸಾದ ಕ್ಷಣವನ್ನು ಕಣ್ತುಂಬಿಕೊಳ್ಳುವ ಭಾಗ್ಯ ಅನೇಕರಿಗೆ ಸಿಗಲೇ ಇಲ್ಲ. ಸರ್ದಾರ್ ಅಜಿತ್ ಸಿಂಗರು ಆ ವಿಷಯದಲ್ಲಿ ಅದೃಷ್ಟವಂತರು. ಹಾಗಾಗಿ ಅವರದು ಧನ್ಯತೆಯ ಸಾವು. ಮತ್ತಷ್ಟು ಓದು »

12
ಸೆಪ್ಟೆಂ

ಭವಿಷ್ಯದ ಅರಮನೆಯ ಕನಸೇನೋ ಚಂದ, ಆದರೆ….

– ಗುರುರಾಜ ಕೋಡ್ಕಣಿ. ಯಲ್ಲಾಪುರ

images‘ಕಂಗ್ರಾಟ್ಸ್ ಅನಿತಾ.. ನೀನು ಸಾಧಿಸಿಬಿಟ್ಟೆ ಮಗಳೇ, ನೀನು ಸಾಧಿಸಿ ಬಿಟ್ಟೆ. ನಿನಗೀಗ ಕ್ಯಾಂಪಸ್ ಸಂದರ್ಶನದಲ್ಲಿ ಕೆಲಸ ಸಿಕ್ಕಿರುವ ಕಂಪನಿ ಎಂಥಹ ಅದ್ಭುತ ಸಂಸ್ಥೆ ಗೊತ್ತೆ..?? ಈ ಒಂದು ವರ್ಷದ ಅವಧಿಯಲ್ಲೇ ಅದು ಸಾವಿರಾರು ಕೋಟಿಗಳಷ್ಟು ಲಾಭ ಪಡೆದುಕೊಂಡಿದೆ. ನಿನ್ನ ಶ್ರಮ ಸಾರ್ಥಕವಾಯಿತು ಮಗು. ದೀಪಾ, ಎಲ್ಲರಿಗೂ ಐಸ್ ಕ್ರೀಮ್ ತರಿಸು, ನಮ್ಮ ಮಗಳ ಈ ಯಶಸ್ಸನ್ನು ಖುಷಿಯಾಗಿ ಆಚರಿಸೋಣ’ ಎಂದು ಕೈಯಲ್ಲಿದ್ದ ಪತ್ರವನ್ನು ಅಪ್ಪ ಸಂತಸದಿಂದ ಓದುತ್ತಿದ್ದಾಗ ಅನಿತಾಳದ್ದು ನಿರ್ವಿಕಾರ ಮುಖಭಾವ. ಪದವಿ ಮುಗಿಯುವ ಮುನ್ನವೇ ಆಕೆಯ ಪ್ರತಿಭೆಯನ್ನು ಗಮನಿಸಿದ್ದ ಪ್ರತಿಷ್ಟಿತ ಕಂಪನಿಯೊಂದು ಆಕೆಗೆ ಉದ್ಯೋಗವನ್ನು ನೀಡಿತ್ತು. ಉದ್ಯೋಗ ಖಾತ್ರಿಯ ಪತ್ರವನ್ನೋದುತ್ತಿದ್ದ ಅಪ್ಪನಿಗೆ ಹೆಮ್ಮೆಯಿಂದ ಕೊರಳುಬ್ಬಿದ ಅನುಭವ. ಸಂತಸದ ಹಿಂದೆಯೇ ಅಮ್ಮನದ್ದೊಂದು ಸಣ್ಣ ಎಚ್ಚರಿಕೆ,’ಈಗ ಕೇವಲ ಐಸ್ ಕ್ರೀಮ್ ತಿಂದು ಸಂಭ್ರಮಿಸೋಣ ಮಗಳೇ, ನೀನು ಇನ್ನಷ್ಟು ಶ್ರಮಪಡು. ಹೆಚ್ಚು ಹೆಚ್ಚು ಏಕಾಗ್ರತೆಯಿಂದ ಓದು. ಕಡಿಮೆಯೆಂದರೂ ತೊಂಬತ್ತೈದು ಪ್ರತಿಶತ ಅಂಕಗಳನ್ನು ನೀನು ಗಳಿಸಬೇಕು. ನಿನ್ನ ಅಂಕಗಳನ್ನು, ಪ್ರತಿಭೆಯನ್ನು ನೋಡಿ ಕಂಪನಿ ನಿನಗೆ ಒಂದೇ ವರ್ಷದಲ್ಲಿ ಡಬ್ಬಲ್ ಪ್ರಮೋಷನ್ ಕೊಟ್ಟು ಬಿಡಬೇಕು. ಹಾಗೆ ಅಭ್ಯಾಸದಲ್ಲಿ ನಿನ್ನನ್ನು ನೀನು ತೊಡಗಿಸಿಕೊ ಮಗಳೇ, ಓದುವುದೊಂದೇ ನಿನ್ನ ಗುರಿಯಾಗಬೇಕು ಈಗ. ಇದು ಕಷ್ಟಪಡುವ ಕಾಲ. ಮುಂದೆ ಭವಿಷ್ಯದಲ್ಲಿ ನೀನು ಸಾಧನೆಯ ಶಿಖರದೆತ್ತರಕ್ಕೆ ನಿಂತಾಗ ಈಗ ಪಟ್ಟ ಶ್ರಮವೂ ನಿನಗೆ ಸಿಹಿಯಾದ ಅನುಭವವಾಗಿ ಭಾಸವಾಗುತ್ತದೆ ಮಗು. ಈಗ ಕೇವಲ ಓದುವುದೊಂದೇ ನಿನ್ನ ಗಮ್ಯ, ಶ್ರಮಪಡು ಅಷ್ಟೇ’ ಎನ್ನುವ ಅಮ್ಮನ ಮಾತುಗಳನ್ನು ಕೇಳಿದ ಅನಿತಾಳ ಮುಖದಲ್ಲಿ ಭಾವಹೀನ ಶುಷ್ಕನಗೆಯೊಂದು ಮೂಡಿದ್ದನ್ನು ಆಕೆಯ ಸಾಧನೆಯನ್ನು ಆಸ್ವಾಧಿಸುವ ಸಂಭ್ರಮದಲ್ಲಿದ್ದ ಪೋಷಕರು ಗಮನಿಸಲೇ ಇಲ್ಲ. ಮತ್ತಷ್ಟು ಓದು »

11
ಸೆಪ್ಟೆಂ

ಸ್ವಾತಂತ್ರ್ಯೋತ್ಸವ ವಿಶೇಷ ಸರಣಿ – ದಿನಕ್ಕೊಬ್ಬ ದೇಶಭಕ್ತರ ಸ್ಮರಣೆ

ದಿನ – 25:
ಪ್ರೀತಿಲತಾ ವಡ್ಡೆದಾರ್
– ರಾಮಚಂದ್ರ ಹೆಗಡೆ

downloadಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ಸಿಡಿದೆದ್ದು ಕ್ರಾಂತಿ ಚಟುವಟಿಕೆ ನಡೆಸಿ ಆತ್ಮಾರ್ಪಣೆಗೈದ ಬಂಗಾಳದ ಮೊದಲ ಮಹಿಳಾ ಬಲಿದಾನಿ ಪ್ರೀತಿಲತಾ ವಡ್ಡೆದಾರ್. ಚಿತ್ತಗಾಂಗ್ ನ ಪಹರ್ತಳಿಯ ಯೂರೋಪಿಯನ್ ಕ್ಲಬ್ ನಲ್ಲಿ ಹಾಕಲಾಗಿದ್ದ ‘ನಾಯಿಗಳಿಗೆ ಮತ್ತು ಭಾರತೀಯರಿಗೆ ಇಲ್ಲಿ ಪ್ರವೇಶವಿಲ್ಲ’ ಎಂಬ ಅವಮಾನಕರ ಬೋರ್ಡ್ ಕಂಡು ಸಿಡಿದುಬಿದ್ದ ಈ ಬೆಂಕಿಚೆಂಡಿನಂತ ಹೆಣ್ಣುಮಗಳು ಕ್ರಾಂತಿಕಾರಿಗಳ ದಂಡಿನೊಂದಿಗೆ ಕ್ಲಬ್ ಗೆ ನುಗ್ಗಿ ಬ್ರಿಟಿಷರ ಎದೆನಡುಗಿಸಿ ಪ್ರತ್ಯುತ್ತರ ನೀಡಿದವಳು. ಪ್ರಸ್ತುತ ಬಾಂಗ್ಲಾದೇಶ ದಲ್ಲಿರುವ ಚಿತ್ತಗಾಂಗ್ ನಲ್ಲಿ ಹುಟ್ಟಿದ ಪ್ರೀತಿಲತಾ ಎಳವೆಯಿಂದಲೇ ದೇಶಭಕ್ತರ ಕುರಿತು ಕೇಳುತ್ತಾ ಬೆಳೆದವಳು. ಝಾನ್ಸಿ ರಾಣಿ ಲಕ್ಷ್ಮಿಬಾಯಿಯ ಕುರಿತು ಓದುತ್ತಾ ಅವಳ ಜೀವನ ಮತ್ತು ಹೋರಾಟದಿಂದ ಪ್ರಭಾವಿತಳಾದ ಪ್ರೀತಿಲತಾ ತಾನೂ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡು ಬ್ರಿಟಿಷರನ್ನು ಭಾರತದಿಂದ ಓಡಿಸುವ ಕನಸು ಕಂಡಿದ್ದಳು. ಪ್ರೀತಿಲತಾ ತತ್ತ್ವಶಾಸ್ತ್ರ ದಲ್ಲಿ ಸ್ನಾತಕೋತ್ತರ ಪದವಿ ಪಡೆದರೂ ಕಲ್ಕತ್ತಾ ವಿಶ್ವವಿದ್ಯಾಲಯದ ಬ್ರಿಟಿಷ್ ಆಡಳಿತ ಅವಳ ಪದವಿಯನ್ನು ತಡೆಹಿಡಿಯಿತು. ಮತ್ತಷ್ಟು ಓದು »

11
ಸೆಪ್ಟೆಂ

ಸಿದ್ಧಾಂತಗಳ ಚರಿತ್ರೆ – 1 (ಕಾರ್ಲ್ ಮಾರ್ಕ್ಸ್ ಕಟ್ಟಿಕೊಟ್ಟ ಕಲ್ಪನೆಯ ಸ್ವರ್ಗ)

– ರೋಹಿತ್ ಚಕ್ರತೀರ್ಥ

karl-marx-wikimedia-commonsಹತ್ತೊಂಬತ್ತು ಮತ್ತು ಇಪ್ಪತ್ತನೇ ಶತಮಾನದ ಪ್ರಪಂಚವನ್ನು ಹೆಚ್ಚು ಪ್ರಭಾವಿಸಿದ, ಬದಲಾಯಿಸಿದ ಸಿದ್ಧಾಂತಗಳಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುವುದು ಕಮ್ಯುನಿಸಂ. ಇಪ್ಪತ್ತನೇ ಶತಮಾನದಲ್ಲಿ ನಡೆದ ಹಲವು ಮಹತ್ವದ ರಾಜಕೀಯ ಚಳುವಳಿಗೆ ಕಮ್ಯುನಿಸಂ ಮೂಲದ್ರವ್ಯವಾಗಿ ಒದಗಿಬಂತು. ಕಮ್ಯುನಿಸಂ ಎಂದರೇನು, ಅದು ಜಗತ್ತನ್ನು ಪ್ರಭಾವಿಸಿದ ಬಗೆ ಹೇಗೆ, 1970ರ ನಂತರ ಅದು ಅವನತಿಯತ್ತ ಸಾಗಲು ಕಾರಣವಾದ ಸನ್ನಿವೇಶಗಳೇನು, ಇಂದಿನ ಯುಗಕ್ಕೆ ಕಮ್ಯುನಿಸಂ ಪ್ರಸ್ತುತವೇ ಎಂಬ ವಿಚಾರಗಳನ್ನು ತಿಳಿದುಕೊಳ್ಳಲು, ಮೊದಲಿಗೆ ನಾವು ಅದರ ಹುಟ್ಟಿನ ದಿನಗಳ ಅವಲೋಕನ ಮಾಡಬೇಕಾಗುತ್ತದೆ. ಮತ್ತಷ್ಟು ಓದು »

10
ಸೆಪ್ಟೆಂ

ಸ್ವಾತಂತ್ರ್ಯೋತ್ಸವ ವಿಶೇಷ ಸರಣಿ – ದಿನಕ್ಕೊಬ್ಬ ದೇಶಭಕ್ತರ ಸ್ಮರಣೆ

ದಿನ – 24:
ವಿದುರಾಶ್ವತ್ಥದ ಬಲಿದಾನಿಗಳು
– ರಾಮಚಂದ್ರ ಹೆಗಡೆ

image012ಸ್ವಾತಂತ್ರ್ಯ ಸಮರದಲ್ಲಿ ಕರ್ನಾಟಕದಲ್ಲಿ ನಡೆದ ಅತೀ ಭೀಕರ ಹತ್ಯಾಕಾಂಡಗಳಲ್ಲಿ ಒಂದಾದ ‘ವಿದುರಾಶ್ವತ್ಥದ ಬಲಿದಾನ’ ಕರ್ನಾಟಕದ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡ ಎಂದೂ ಹೆಸರಾಗಿದೆ. ಒಬ್ಬ ಗರ್ಭಿಣಿಯೂ ಸೇರಿದಂತೆ 32 ಜನ ದೇಶಭಕ್ತರು ಬ್ರಿಟಿಷರ ಗುಂಡಿಗೆ ಬಲಿಯಾಗಿ ಪ್ರಾಣಾರ್ಪಣೆ ಮಾಡಿದ್ದು, ಈ ನೆಲದ ಜನರ ಅಪ್ರತಿಮ ದೇಶಭಕ್ತಿಗೆ ಹಾಗೂ ಬ್ರಿಟಿಷ್ ಆಡಳಿತದ ಬರ್ಬರತೆಗೆ ಸಾಕ್ಷಿಯಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಇತಿಹಾಸ ಪ್ರಸಿದ್ಧ ಕ್ಷೇತ್ರ ‘ವಿದುರಾಶ್ವತ್ಥ’ ದೇಶದ ಸ್ವಾತಂತ್ರ್ಯ ಹೋರಾಟಗಾರರ ಚಳುವಳಿಯ ಕೇಂದ್ರವಾಗಿತ್ತೆಂಬುದು ಗಮನಾರ್ಹ ಸಂಗತಿ. ಮಹಾಭಾರತ ಕಾಲದಲ್ಲಿ ವಿದುರ ನೆಟ್ಟಿದ್ದನೆಂದು ನಂಬಲಾಗುವ ಅಶ್ವತ್ಥ ವೃಕ್ಷ ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಬ್ರಿಟಿಷರ ಪೈಶಾಚಿಕ ದೌರ್ಜನ್ಯಕ್ಕೂ ಸಾಕ್ಷಿಯಾಗಿದ್ದು ದುರಂತದ ಸಂಗತಿ. ಮತ್ತಷ್ಟು ಓದು »

10
ಸೆಪ್ಟೆಂ

ಜಮ್ಮು-ಕಾಶ್ಮೀರ (ಐತಿಹಾಸಿಕ ಸತ್ಯಗಳು ಮತ್ತು ವರ್ತಮಾನದ ತಲ್ಲಣಗಳು)

ನಿಲುಮೆ ತಂಡ ನಡೆಸಿದ ಕಾಶ್ಮೀರದ ಕುರಿತು ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಪ್ರೊ.ಪ್ರೇಮಶೇಖರವರ ಮಾತುಗಳನ್ನು ಶೋಭ ರಾವ್ ರವರು ಅಕ್ಷರ ರೂಪಕ್ಕಿಳಿಸಿದ್ದಾರೆ. ಅಂದಿನ ಕಾರ್ಯಕ್ರಮದ ವಿಚಾರಗಳು ಈಗ ನಿಲುಮೆಯ ಓದುಗರ ಮುಂದೆ..

14088692_10154596775090649_5386569408904041755_nಕಾಶ್ಮೀರದ ಬಗ್ಗೆ ಇಂದು ಹಲವಾರು ಜನ ತಮ್ಮ ಅಲ್ಪಜ್ಞಾನದಿಂದ ಹಲವಾರು ತರಹ ಮಾತಾಡುತ್ತಾರೆ. ಜನರಲ್ಲಿ ತಪ್ಪು ಅಭಿಪ್ರಾಯ ಮೂಡಿಸುತ್ತಿದ್ದಾರೆ. ದುರಂತವೆಂದರೆ ಅದನ್ನು ಕೇಳಲು ಕೂಡ ಬಹಳಷ್ಟು ಜನರಿದ್ದಾರೆ. ನಾವು ಅವರ ಬಳಿ ಹೋಗಿ ಬೀದಿ ಜಗಳ ಮಾಡಬೇಕಿಲ್ಲ. ವಸ್ತುನಿಷ್ಠ ಚರ್ಚೆಯನ್ನು ಏರ್ಪಡಿಸಿ ನಿಜಸಂಗತಿಗಳನ್ನ ತಿಳಿಸಿದರೆ ಸಾಕು. ಕಾಶ್ಮೀರ ನಮ್ಮದೂ ಎಂದು ಭಾರತವೂ ಹೇಳುತ್ತೆ, ಪಾಕಿಸ್ತಾನವೂ ಹೇಳುತ್ತೆ. ನಾವು ಇವೆರೆಡಕ್ಕೂ ಸೇರಿಲ್ಲ ಎಂದು ಮತ್ತೊಂದು ಗುಂಪು ಕೂಡ ಹೇಳುತ್ತೆ. ಇದೇ ಕಾಶ್ಮೀರದ ನಿಜವಾದ ಸಮಸ್ಯೆ. ಮತ್ತಷ್ಟು ಓದು »

10
ಸೆಪ್ಟೆಂ

ಅಂತ್ಯದ ಬೆನ್ನೇರಿ…!

-ವಿನಾಯಕ ಪೈ ಬಿ
mudra-e1446143388978ಒಂದು ಸುಸಂಸ್ಕೃತ ಸಮಾಜ ಎಂದರೆ ವ್ಯಕ್ತಿಗತ ಚಿಂತನೆಗಳ, ಸಾಮಾಜಿಕ ಸ್ಥಿತ್ಯಂತರಗಳ, ಧಾರ್ಮಿಕ ಆಚರಣೆ, ಆಧ್ಯಾತ್ಮಿಕ ನಂಬಿಕೆಗಳ ಮತ್ತು ಅದರ ಕಾಲಾಂತರ್ಗತ ಪರಿಷ್ಕರಣೆಗಳ ಸಮ್ಮಿಲನವೇ ಆಗಿದೆ. ಈ ಸಮ್ಮಿಲನದಲ್ಲಿ ಯಾವುದಾದರು ಒಂದನ್ನು ನಿರ್ಲಕ್ಷಿಸಿದರು, ಸುಜ್ಞಾನದ ಕೊರತೆ ಸಮಾಜದ ಬೆಳವಣಿಗೆಯ ಮೇಲೆ ತೀವ್ರವಾಗಿ ಪ್ರತಿಫಲಿಸುತ್ತದೆ. ಮಾನವೀಯ ಮೌಲ್ಯಗಳು, ಸದ್ವಿಚಾರಗಳ ಸಾಂಗತ್ಯವೇ ನಮ್ಮ ಸಮೂಹದ ಅಂತಃಸತ್ವ. ಧಾರ್ಮಿಕ ಮತ್ತು ಆಧ್ಯಾತ್ಮಿಕ  ಚಿಂತನೆಗಳೇ ಸಮಾಜಕ್ಕೆ ಭದ್ರಬುನಾಧಿಯನ್ನು ಒದಗಿಸಿ, ಸಾಮಾಜಿಕ ಚಿಂತನೆಗಳು ಸದ್ಭಾವನೆಯ ಮೆಟ್ಟಿಲುಗಳಾಗಿ, ಮನುಕುಲವನ್ನು ಏಳಿಗೆಯತ್ತ ಕೊಂಡೊಯ್ಯುತ್ತದೆ . ಮತ್ತಷ್ಟು ಓದು »

9
ಸೆಪ್ಟೆಂ

ಸ್ವಾತಂತ್ರ್ಯೋತ್ಸವ ವಿಶೇಷ ಸರಣಿ – ದಿನಕ್ಕೊಬ್ಬ ದೇಶಭಕ್ತರ ಸ್ಮರಣೆ

ದಿನ – 23:
ಮದನ್ ಲಾಲ್ ಧಿಂಗ್ರಾ
– ರಾಮಚಂದ್ರ ಹೆಗಡೆ

madan_lal_dhingraಪರದೇಶಿ ಬ್ರಿಟಿಷರು ಭಾರತದ ನೆಲಕ್ಕೆ ಬಂದು ದಬ್ಬಾಳಿಕೆ ನಡೆಸುತ್ತಿದ್ದ ಕಾಲದಲ್ಲಿ ಅವರ ನೆಲಕ್ಕೇ ಹೋಗಿ ಇಂಗ್ಲೆಂಡಿನಲ್ಲೇ ಕ್ರಾಂತಿ ಚಟುವಟಿಕೆ ನಡೆಸಿ ಬ್ರಿಟಿಷರನ್ನೇ ಬೆಚ್ಚಿಬೀಳಿಸಿದ, ವಿದೇಶಿ ನೆಲದಲ್ಲಿ ಭಾರತಕ್ಕಾಗಿ ಮೊದಲ ಬಲಿದಾನ ಮಾಡಿದ ಕೆಚ್ಚೆದೆಯ ವೀರ ಮದನ್ ಲಾಲ್ ಧಿಂಗ್ರಾ. ಪಂಜಾಬಿನ ಅಮೃತಸರದ ಶ್ರೀಮಂತ ಕುಟುಂಬದ ಮದನ್ ಲಾಲ್ ಇಂಜಿನೀಯರಿಂಗ್ ಓದಲಿಕ್ಕೆಂದು ಲಂಡನ್ ಗೆ ಹೋಗಿದ್ದವನು. ಸ್ವಭಾವತಃ ಶೋಕಿಲಾಲ. ಮನೆಯವರೆಲ್ಲ ಬ್ರಿಟಿಷರ ಪರಮ ಭಕ್ತರು. ಇಂಗ್ಲೆಂಡ್ ನ ವಿಲಾಸೀ ಸಂಸ್ಕೃತಿಗೆ ಮಾರುಹೋದ ಮದನ್ ಬೆಲೆಬಾಳುವ ಸೂಟು ಬೂಟುಗಳನ್ನು ಹಾಕಿಕೊಂಡು ಶೋಕಿಲಾಲನಾಗಿ ಇಂಗ್ಲೆಂಡಿನ ರಸ್ತೆಗಳಲ್ಲಿ ಹಾಡುತ್ತಾ, ಕುಣಿಯುತ್ತಾ ಯುವತಿಯರೊಂದಿಗೆ ಚಕ್ಕಂದವಾಡುತ್ತ ಕಾಲಕಳೆಯುತೊಡಗಿದ್ದ. ಮತ್ತಷ್ಟು ಓದು »