ಸ್ವಾತಂತ್ರ್ಯೋತ್ಸವ ವಿಶೇಷ ಸರಣಿ – ದಿನಕ್ಕೊಬ್ಬ ದೇಶಭಕ್ತರ ಸ್ಮರಣೆ
ದಿನ – 19:
ಸುಬ್ರಮಣ್ಯ ಭಾರತಿ
– ರಾಮಚಂದ್ರ ಹೆಗಡೆ
ಮಹಾಕವಿ ಭಾರತಿಯಾರ್ ಎಂದೇ ಪ್ರಸಿದ್ಧರಾದ, ಭಾರತದ ಅತ್ಯುತ್ತಮ ಕವಿಗಳಲ್ಲಿ ಒಬ್ಬರು ಎಂಬ ಖ್ಯಾತಿಗೆ ಪಾತ್ರರಾದ ತಮಿಳುನಾಡಿನ ಕವಿ, ಸ್ವಾತಂತ್ರ್ಯ ಹೋರಾಟಗಾರ, ಸಮಾಜ ಸುಧಾರಕರು ಶ್ರೀ ಸುಬ್ರಮಣ್ಯ ಭಾರತಿ. ತಮ್ಮ ರಾಷ್ಟ್ರೀಯವಾದಿ ಸಾಹಿತ್ಯದ ಮೂಲಕ ಭಾರತೀಯ ಸ್ವಾತಂತ್ರ್ಯ ಸಂಗ್ರಾಮಕ್ಕೆ ದಕ್ಷಿಣ ಭಾರತದಲ್ಲಿ ಜನಸಮೂಹವನ್ನು ಸಂಘಟಿಸುವಲ್ಲಿ ಸುಬ್ರಮಣ್ಯ ಭಾರತಿಯವರ ಪಾತ್ರ ಬಲು ದೊಡ್ಡದು. ಆವರ ಹಲವಾರು ಕೃತಿಗಳು ಭಾರತೀಯ ಸ್ವಾತಂತ್ಯ ಆಂದೋಲನದ ಕಾಲದಲ್ಲಿ ದೇಶಭಕ್ತಿ ಮತ್ತು ರಾಷ್ಟ್ರೀಯತೆಯ ಜ್ವಾಲೆಯನ್ನು ಪ್ರಖರಗೊಳಿಸುವಲ್ಲಿ ನೆರವಾದವು ಹಾಗೂ ದೇಶಪ್ರೇಮವನ್ನು ಬಡಿದೆಬ್ಬಿಸಿದವು. 1882ರಲ್ಲಿ ತಮಿಳುನಾಡಿನ ಎತ್ತಯಾಪುರಂ ಎಂಬ ಗ್ರಾಮದಲ್ಲಿ ಜನಿಸಿದ ಸುಬ್ರಮಣ್ಯ ಭಾರತಿ ತಿರುನಲ್ವೇಲಿಯಲ್ಲಿ ಆರಂಭಿಕ ಶಿಕ್ಷಣ ನಂತರ ವಾರಣಾಸಿ ಯಲ್ಲಿ ಪ್ರೌಢ ಹಾಗೂ ಪದವಿ ಶಿಕ್ಷಣ ಪಡೆದರು. ಬಾಲ್ಯದಿಂದಲೇ ಅತ್ಯಂತ ಪ್ರತಿಭಾಶಾಲಿ ಕವಿಯಾಗಿದ್ದ ಭಾರತಿ ತಮ್ಮ 11ನೇ ವಯಸ್ಸಿನಲ್ಲೆ ಎತ್ತಯಾಪುರಂನ ಆಸ್ಥಾನ ಕವಿಗಳು ಹಾಗು ಸಂಗೀತಗಾರರ ಸಮ್ಮೇಳನಕ್ಕೆ ಆಹ್ವಾನಿತರಾಗಿದ್ದರು. ವಾರಣಾಸಿ ಯಲ್ಲಿ ನೆಲಸಿದ್ದ ಅವಧಿಯಲ್ಲಿ ಭಾರತಿಯವರು ಹಿಂದೂ ಆಧ್ಯಾತ್ಮಿಕತೆ ಹಾಗು ರಾಷ್ಟ್ರೀಯತೆಯ ಪ್ರಭಾವಕ್ಕೆ ಒಳಗಾದರು. ಜೊತೆಗೆ ಅವರು ಸಂಸ್ಕೃತ, ಹಿಂದಿ ಹಾಗು ಆಂಗ್ಲ ಭಾಷೆಗಳಲ್ಲಿ ಪರಿಣತಿಯನ್ನು ಹೊಂದಿದರು. ಡಿಸೆಂಬರ್ 1905ರಲ್ಲಿ, ಬನಾರಸ್ ನಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದಲ್ಲಿ ಭಾರತಿ ಪಾಲ್ಗೊಂಡರು. ನಂತರ ಅವರು ವಿವೇಕಾನಂದರ ಮಾನಸ ಪುತ್ರಿ ಸೋದರಿ ನಿವೇದಿತಾರನ್ನು ಸಂಧಿಸಿದರು. ಮತ್ತಷ್ಟು ಓದು 
ಇಂಡೋನೇಷ್ಯದ ನೋಟಿನಲ್ಲೂ ಈತನದೊಂದು ಫೋಟೋ ಇದೆ!
– ರೋಹಿತ್ ಚಕ್ರತೀರ್ಥ
ಗಿರೀಶ ಕಾರ್ನಾಡರ ಹಯವದನ ನಾಟಕ ಗೊತ್ತಲ್ಲ? ಪದ್ಮಿನಿ ಎಂಬ ಸುರಸುಂದರ ಹೆಣ್ಣನ್ನು ಮೋಹಿಸಿ ತಲೆ ಕಡಿದುಕೊಳ್ಳುವ ಮತ್ತು ಇದ್ದ (ಮತ್ತು ಬಿದ್ದ) ತಲೆಯ ಬದಲಾಗಿನ್ನೊಂದು ತಲೆ ಅಂಟಿಸಿಕೊಂಡು ಪೇಚಾಡುವ ಇಬ್ಬರು ಜೀವದ ಗೆಳೆಯರ ಕತೆ ಅದು. ಆ ನಾಟಕದ ಪ್ರಾರಂಭದಲ್ಲಿ ಭಾಗವತ ಹೇಳುತ್ತಾನೆ: “ಸರ್ವ ವಿಘ್ನಗಳನ್ನೂ ನಿರ್ಮೂಲನಗೊಳಿಸಿ ಸಕಲ ಈಪ್ಸಿತಗಳಲ್ಲಿ ಸಿದ್ಧಿಯನ್ನು ನೀಡುವ ಆ ವಿಘ್ನೇಶ್ವರನೇ ಇಂದಿನ ನಮ್ಮ ನಾಟಕಕ್ಕೆ ಯಶಸ್ಸನ್ನು ನೀಡಲಿ. ಆತನ ಮಹಾತ್ಮ್ಯವನ್ನಾದರೂ ವರ್ಣಿಸುವುದು ಹೇಗೆ? ಆನೆಯ ಮುಖ, ಮನುಷ್ಯನ ದೇಹ, ಮುಖದಲ್ಲಿ ಮುರುಕು ದಂತ, ದೇಹದಲ್ಲಿ ಬಿರುಕು ಬಿಟ್ಟ ಉದರ – ಹೇಗೆ ನೋಡಿದರೂ ಅಪೂರ್ಣತೆಗೇ ಸಾಕ್ಷಿಯಾಗಿರುವಂತೆ ಕಾಣುವ ಈ ವಕ್ರತುಂಡನೇ ವಿಘ್ನಹರ್ತನೂ ಆಗಿರಬೇಕು ಎಂಬುದರ ರಹಸ್ಯವನ್ನಾದರೂ ಹೇಗೆ ಬಿಡಿಸೋಣ? ಬಹುಶಃ ದೇವರ ಪೂರ್ಣತ್ವ ಮನುಷ್ಯ ಕಲ್ಪನೆಗೇ ಒಗ್ಗಲಾರದಂಥಾದ್ದು ಎಂಬುದನ್ನೇ ಈ ಮಂಗಳಮೂರ್ತಿಯ ರೂಪ ಸಂಕೇತಿಸುತ್ತಿರಬಹುದು” ಮತ್ತಷ್ಟು ಓದು 
ಸ್ವಾತಂತ್ರ್ಯೋತ್ಸವ ವಿಶೇಷ ಸರಣಿ – ದಿನಕ್ಕೊಬ್ಬ ದೇಶಭಕ್ತರ ಸ್ಮರಣೆ
ದಿನ – 18:
ದುರ್ಗಾ ದೇವಿ ವೋಹ್ರಾ (ದುರ್ಗಾ ಬಾಭಿ) :
– ರಾಮಚಂದ್ರ ಹೆಗಡೆ
ನೀವು ‘ಲೆಜೆಂಡ್ ಆ ಭಗತ್ ಸಿಂಗ್’ ಸಿನೆಮಾ ನೋಡಿದ್ದರೆ ಅದರಲ್ಲಿ ಬ್ರಿಟಿಷ್ ಅಧಿಕಾರಿ ಸೌಂಡರ್ಸ್ ಹತ್ಯೆಯ ನಂತರ ಭಗತ್ ಸಿಂಗ್ ಲಾಹೋರ್ ನಿಂದ ಕಲ್ಕತ್ತಾ ಗೆ ತಪ್ಪಿಸಿಕೊಂಡು ಹೋಗುವ ದೃಶ್ಯ ನೋಡಿರುತ್ತೀರಿ. ಬ್ರಿಟಿಷರು ಭಗತ್ ಸಿಂಗ್ ಗಾಗಿ ದೇಶಾದ್ಯಂತ ಕಟ್ಟೆಚ್ಚರದ ಹುಡುಕಾಟ ನಡೆಸಿದ್ದಾಗ ಅಲ್ಲಿಂದ ಕಲ್ಕತ್ತಾ ಗೆ ತಪ್ಪಿಸಿಕೊಂಡು ಹೋಗುವ ಐಡಿಯಾ ಕೊಟ್ಟು ಹಾಗೆ ತಪ್ಪಿಸಿಕೊಂಡು ಹೋಗಲು ಭಗತ್ ಸಿಂಗ್ ನ ಪತ್ನಿಯಂತೆ ವೇಷ ಧರಿಸಿ ಅವನಿಗೆ ಕಲ್ಕತ್ತಾ ತಲುಪಲು ನೆರವಾದವಳು ಈ ದುರ್ಗಾ ಬಾಭಿ. ಮತ್ತಷ್ಟು ಓದು 
ಅಂಬೇಡ್ಕರ್, ಮಾರ್ಕ್ಸ್ ಮತ್ತು ಬುದ್ಧ…..
– ಗುರುರಾಜ ಕೋಡ್ಕಣಿ. ಯಲ್ಲಾಪುರ
“ಅದೊಮ್ಮೆ ಬುದ್ಧನ ಅಗ್ರಗಣ್ಯ ಶಿಷ್ಯರಲ್ಲಿ ಒಬ್ಬನಾದ ಅನಾಥಪಿಂಡಿಕನು ಬುದ್ದನಿರುವಲ್ಲಿಗೆ ಆಗಮಿಸುತ್ತಾನೆ. ಹಾಗೆ ಬಂದವನೇ ಬುದ್ಧನಿಗೆ ವಂದಿಸಿ, ಪಕ್ಕದಲ್ಲಿದ್ದ ಆಸನದಲ್ಲಿ ಕುಳಿತುಕೊಳ್ಳುತ್ತ ‘ಹೇ ಮಹಾಜ್ಞಾನಿಯೇ, ಗೃಹಸ್ತನೆನಿಸಿಕೊಂಡವನಿಗೆ ತುಂಬ ಆಸಕ್ತಿದಾಯವೆನ್ನಿಸುವ ಹಿತನೀಡುವ, ಆದರೆ ಅಷ್ಟೇ ಕಷ್ಟವೆನಿಸುವ ಕಾರ್ಯ ಯಾವುದೆಂದು ನಿನಗನ್ನಿಸುತ್ತದೆ .’? ಎಂದು ಪ್ರಶ್ನಿಸುತ್ತಾನೆ. ಹೀಗೊಂದು ಪ್ರಶ್ನೆಯನ್ನು ಕೇಳಿ ಮುಗುಳ್ನಕ್ಕ ಗೌತಮ, ‘ಅಂತಹ ಹಲವಾರು ಕೆಲಸಗಳಿವೆ ಶಿಷ್ಯೋತ್ತಮನೇ. ನ್ಯಾಯಬದ್ಧವಾಗಿ ಸಂಪತ್ತನ್ನು ಗಳಿಸುವುದು ಅಂಥದ್ದೊಂದು ಬಹುಮುಖ್ಯ ಕಾರ್ಯ. ಮೊದಲು ವ್ಯಕ್ತಿ ತಾನು ಧರ್ಮಯುತವಾಗಿ ಸಂಪತ್ತನ್ನು ಗಳಿಸಿಕೊಳ್ಳಬೇಕು. ನಂತರ ತನ್ನ ಹತ್ತಿರದ ಬಂಧುಗಳೂ ಸಹ ನ್ಯಾಯಸಮ್ಮತವಾಗಿಯೇ ಸಂಪತ್ತಿನ ಗಳಿಕೆ ಮಾಡುವಂತೆ ನೋಡಿಕೊಳ್ಳಬೇಕು. ಮೂರನೆಯದ್ದಾಗಿ ವ್ಯಕ್ತಿಯೊಬ್ಬ ತುಂಬ ಕಾಲ ಬದುಕಿ ದೀರ್ಘಾಯುಷಿಯೆನ್ನಿಸಿಕೊಳ್ಳಬೇಕು. ಇವೆಲ್ಲವೂ ಮನುಷ್ಯನಿಗೆ ಇಷ್ಟವಾಗುವ, ಹಿತವೆನಿಸುವ ಕಾರ್ಯಗಳೇ. ಆದರೆ ಅವುಗಳ ಸಾಧನೆ ಸುಲಭಸಾಧ್ಯವಲ್ಲ. ಇಂಥಹ ಐಹಿಕ ಭೋಗಗಳ ಗಳಿಕೆಗೂ ನಂಬಿಕೆ, ಸಚ್ಚಾರಿತ್ರ್ಯ, ಉದಾರತೆ ಮತ್ತು ವಿವೇಕವೆನ್ನುವ ನಾಲ್ಕು ಮೌಲ್ಯಗಳ ಆಶೀರ್ವಾದ ಬೇಕು. ಸಚ್ಚಾರಿತ್ರ್ಯವೆನ್ನುವುದು ಮನುಷ್ಯನ ಮನಸ್ಸು ಚಂಚಲವಾಗದೇ ಕುಡಿತ, ಕಳ್ಳತನ ಕೊಲೆಗಳಂತಹ ಕೆಟ್ಟ ಕಾರ್ಯಗಳನ್ನು ಮಾಡದಂತೆ ಆತನನ್ನು ತಡೆಯುತ್ತದೆ. ಉದಾರತೆಯ ಭಾವವು ಮನುಷ್ಯನನ್ನು ದುರಾಸೆಯಂತಹ ದುರ್ಗುಣಗಳಿಂದ ಮುಕ್ತವಾಗಿಸಿ ತೆರೆದ ಮನಸ್ಸಿನಿಂದ ದಾನಧರ್ಮಗಳನ್ನು ಮಾಡುವಂತೆ ಪ್ರೋತ್ಸಾಹಿಸುತ್ತದೆ. ವಿವೇಕವೆನ್ನುವುದು ಮನುಷ್ಯನನ್ನು ವಿಮೋಚನೆಯತ್ತ ಕರೆದೊಯ್ಯುವ ಮಾರ್ಗ. ವಿವೇಕವೆನ್ನುವ ಹಾರೈಕೆ, ಮನುಷ್ಯನನ್ನು ಜಡತ್ವ, ಕುಯುಕ್ತಿ, ಆಲಸ್ಯ ಅನುಮಾನದಂತಹ ಅವಗುಣಗಳಿಂದ ದೂರವಿರಿಸುತ್ತದೆ. ಹಾಗಾಗಿ ನೈತಿಕತೆಯಿಂದ, ನ್ಯಾಯಸಮ್ಮತ ದುಡಿಮೆಯಿಂದ ಬೆವರು ಸುರಿಸಿ ಗಳಿಸಿದ ಆಸ್ತಿಯೂ ಸಾಮಾನ್ಯ ಮನುಷ್ಯನಿಗೆ ಒಂದು ವರದಾನವಿದ್ದಂತೆಯೇ ಸರಿ. ಹೀಗೆ ಸಿರಿವಂತನಾಗುವ ಗೃಹಸ್ತ, ಬದುಕಿನುದ್ದಕ್ಕೂ ತಾನು ಸಂತಸವಾಗಿರುವುದಲ್ಲದೇ, ಸದಾಕಾಲ ತನ್ನ ಹೆತ್ತವರು, ಮಡದಿ ಮಕ್ಕಳು ಮತ್ತು ಸ್ನೇಹಿತರನ್ನೂ ಸಹ ಸಂತೋಷವಾಗಿರಸಬಲ್ಲ. ಸಂತಸವೇ ಸಾಮಾನ್ಯನೊಬ್ಬನ ಬದುಕಿನ ಸಾರ್ಥಕತೆ ‘ಎನ್ನುತ್ತ ಉತ್ತರಿಸುತ್ತಾನೆ’ ಎಂದು ಬರೆಯುತ್ತಾರೆ, ಸಂವಿಧಾನ ಶಿಲ್ಪಿ ಡಾ.ಭೀಮರಾವ್ ಅಂಬೇಡ್ಕರ್ ತಮ್ಮ ‘Buddha Or Karl Marx’ಎನ್ನುವ ಕೃತಿಯಲ್ಲಿ. ಮತ್ತಷ್ಟು ಓದು 
ಸ್ವಾತಂತ್ರ್ಯೋತ್ಸವ ವಿಶೇಷ ಸರಣಿ – ದಿನಕ್ಕೊಬ್ಬ ದೇಶಭಕ್ತರ ಸ್ಮರಣೆ
ದಿನ – 17:
ಧೋಂಡಿಯ ವಾಘ್
– ರಾಮಚಂದ್ರ ಹೆಗಡೆ
ಮಲೆನಾಡು ಪ್ರದೇಶದಲ್ಲಿ ಬ್ರಿಟಿಷರ ನಿದ್ದೆಗೆಡಿಸಿ ಸಹ್ಯಾದ್ರಿಯ ಹುಲಿ ಎಂಬ ಖ್ಯಾತಿಗೆ ಪಾತ್ರನಾದ ವೀರ ಧೋಂಡಿಯ ವಾಘ್. ಹುಟ್ಟಿನಿಂದ ಮರಾಠಾ ಆಗಿದ್ದ ದೋಂಡಿಯಾ ವಾಘ್ ಶಿವಮೊಗ್ಗ ಜಿಲ್ಲೆಯ ಚನ್ನಗಿರಿ ತಾಲೂಕಿನಿಂದ ಬಂದ ಒಬ್ಬ ಕೂಲಿ ಸೈನಿಕ. ಮೊದಲು ಕೊಲ್ಹಾಪುರ, ಧಾರವಾಡ ಮುಂತಾದ ಕಡೆ ಸಂಸ್ಥಾನಗಳಲ್ಲಿ ದುಡಿದು ನಂತರ ಹೈದರಾಲಿ ಸೈನ್ಯದಲ್ಲಿ ಸೇರಿಕೊಂಡಿದ್ದ. ನಂತರ ಸೈನ್ಯದಿಂದ ಓಡಿಹೋದ ವಾಘ್ ತನಗೆ ಬೇಕಾದ ಜನರ ಒಂದು ತಂಡವನ್ನು ಖಾಸಗಿ ಸೈನ್ಯವಾಗಿ ಕಟ್ಟಿದ. ಕೆಲಕಾಲ ಸೆರೆಯಲ್ಲಿದ್ದ ವಾಘ್ ಬ್ರಿಟಿಷ್ ಸಾಮ್ರಾಜ್ಯಕ್ಕೆ ಸವಾಲೆಸೆಯುವ ತೀರ್ಮಾನ ಕೈಗೊಂಡ. ಅಲ್ಲಿಂದ ಬಿಡುಗಡೆಯಾಗಿ ಬ್ರಿಟಿಷರ ವಿರೋಧಿಯಾಗಿ ಬೆಳೆದ. ಮೈಸೂರು ಸಂಸ್ಥಾನವು ಬ್ರಿಟಿಷರಿಗೆ ವಾರ್ಷಿಕ ಕಾಣಿಕೆಯನ್ನು ಒಪ್ಪಿಸುವ ಸಲುವಾಗಿ ರೈತರ ಮೇಲೆ ಕರ ಹೇರಿದಾಗ ವಾಘ್ ಅದರ ವಿರುದ್ಧ ದನಿಯೆತ್ತಿದ. ರೈತರು ದೋಂಡಿಯಾ ವಾಘನನ್ನು ಬೆಂಬಲಿಸಿದರು. ಆರಂಭದಲ್ಲಿ ಅವನ ಸಂಘಟನೆ ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿದ್ದು, ಬ್ರಿಟಿಷರು ಬಿನ್ನುಹತ್ತಿದಾಗ ಹೈದರಾಬಾದ್ ಕರ್ನಾಟಕ ಪ್ರಾಂತಕ್ಕೆ ಬಂದು ಸೇರಿದ. ಮತ್ತಷ್ಟು ಓದು 
ವೀಡಿಯೋ ಗೇಮ್ ಸಾಧಕ – ಬಾಧಕಗಳ ಒಂದು ವಿಶ್ಲೇಷಣೆ
– ಶೈಲೇಶ್ ಕುಲ್ಕರ್ಣಿ
ವೀಡಿಯೊಗೇಮ್ ಗಳು ನಿಜಕ್ಕೂ ವ್ಯಕ್ತಿಯ ದೈಹಿಕ ಅಥವಾ ಮಾನಸಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಲ್ಲಷ್ಟು ಪ್ರಭಾವಶಾಲಿಯೇ ಎಂಬ ಪ್ರಶ್ನೆಯನ್ನಿಟ್ಟುಕೊಂಡೇ ಪರ-ವಿರೋಧದ ಚರ್ಚೆ ಕಳೆದ ೩೦ವರ್ಷಗಳಿಂದಲೂ ವಿಶ್ವದಾದ್ಯಂತ ನಡೆದಿದೆ. ಸಿನೆಮಾ, ಕುಣಿತಗಳಿಂದ ತೊಡಗಿ ದೂರದರ್ಶನ, ಅಂತರ್ಜಾಲ, ಕಾದಂಬರಿಗಳಾದಿಯಾಗಿ ಬಹುಶಃ ಮನುಷ್ಯನ ಗಮನವನ್ನೆಲ್ಲಾ ತನ್ನಲ್ಲಿ ಹಿಡಿದಿಡಬಲ್ಲ ಸಾಧ್ಯತೆಯುಳ್ಳ ಎಲ್ಲಾ ಚಟುವಟಿಕೆಗಳೂ ಒಂದಲ್ಲ ಒಂದು ಸಾರಿ ಈ ರೀತಿಯ ಟೀಕೆಯನ್ನ ಎದುರಿಸಿಯೇ ಬಂದಿವೆ. ಮತ್ತಷ್ಟು ಓದು 
ಸ್ವಾತಂತ್ರ್ಯೋತ್ಸವ ವಿಶೇಷ ಸರಣಿ – ದಿನಕ್ಕೊಬ್ಬ ದೇಶಭಕ್ತರ ಸ್ಮರಣೆ
ದಿನ– 16:
ಚಾಪೇಕರ್ ಸಹೋದರರು
– ರಾಮಚಂದ್ರ ಹೆಗಡೆ
ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಮೈಲಾರ ಮಹಾದೇವರ ಕುಟುಂಬ ಸೆರೆವಾಸ ಅನುಭವಿಸಿದರೆ ವಿವೇಕಾನಂದರ ಕುಟುಂಬ ರಾಷ್ಟ್ರಜಾಗೃತಿಯಲ್ಲಿ ತೊಡಗಿಕೊಂಡ ಸ್ಫೂರ್ತಿದಾಯಕ ಕಥೆಯನ್ನು ಇದೇ ಸರಣಿಯಲ್ಲಿ ಹಿಂದೆ ಓದಿದ್ದೇವೆ. ಪುಣೆಯ ಚಾಪೇಕರ್ ಕುಟುಂಬ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಬಲಿದಾನಗೈದು ಭಾರತಮಾತೆಯ ದಾಸ್ಯ ವಿಮುಕ್ತಿ ಆಂದೋಲನದಲ್ಲಿ ಸಂಪೂರ್ಣವಾಗಿ ತನ್ನನ್ನು ಸಮರ್ಪಿಸಿಕೊಂಡ ಕಥೆ ರೋಮಾಂಚನಕಾರಿ. ಒಂದೇ ತಾಯಿಯ ಮಡಿಲಲ್ಲಿ ಜನಿಸಿದ ಮೂವರು ದಾಮೋದರ ಚಾಪೇಕರ್, ಬಾಲಕೃಷ್ಣ ಚಾಪೇಕರ್ ಮತ್ತು ವಾಸುದೇವ್ ಚಾಪೇಕರ್ ತಮ್ಮ ಅಪ್ರತಿಮ ಶೌರ್ಯ ಹಾಗೂ ದೇಶಭಕ್ತಿಯಿಂದಾಗಿ ಕ್ರಾಂತಿಯ ಕಹಳೆ ಮೊಳಗಿಸಿ ಬಲಿದಾನಗೈದ ಕಥೆ ಇತಿಹಾಸದಲ್ಲಿ ಅಪರೂಪದ ಸಂಗತಿ. ದೇಶದ ಇತರ ಕ್ರಾಂತಿಕಾರಿಗಳ ಹೋರಾಟದ ಯಶೋಗಾಥೆಯನ್ನು, ಬಲಿದಾನದ ಸಾಹಸ ಕಥೆಯನ್ನು ಕೇಳುತ್ತಲೇ ಬೆಳೆದ ಚಾಪೇಕರ್ ಸಹೋದರರಿಗೆ ತಾವೂ ದೇಶದ ದಾಸ್ಯ ವಿಮುಕ್ತಿಗೆ ಹೋರಾಡಬೇಕೆಂಬ ಕನಸು ಹುಟ್ಟಿತು. ಇಂಗ್ಲಿಷರ ದರ್ಪ ದಬ್ಬಾಳಿಕೆಯ ವಿರುದ್ಧ ಹೋರಾಡಲು ಶರೀರಬಲ ಬೇಕು, ಸಂಘಟನೆ ಬೇಕು ಎಂದು ನಿರ್ಧರಿಸಿದ ಚಾಪೇಕರ್ ಸಹೋದರರು ದಿನನಿತ್ಯ ಕಠಿಣ ವ್ಯಾಯಾಮ ಯೋಗಾಭ್ಯಾಸದಲ್ಲಿ ನಿರತರಾದರು. ಮದುವೆಯಾಗಿ ಮಕ್ಕಳಾಗಿ ಹೊಸ ಜವಾಬ್ದಾರಿಗಳು ಬಂದರೂ ಅವರ ಸ್ವಾತಂತ್ರ್ಯದ ಕನಸು ದೂರಾಗಲಿಲ್ಲ. ಮತ್ತಷ್ಟು ಓದು 




